Tag: Prashant Neil

  • ಸಲಾರ್ ಟೀಸರ್: 100 ಮಿಲಿಯನ್ ವೀವ್ಸ್, ಆಗಸ್ಟ್‌ನಲ್ಲಿ ಟ್ರೈಲರ್ ರಿಲೀಸ್

    ಸಲಾರ್ ಟೀಸರ್: 100 ಮಿಲಿಯನ್ ವೀವ್ಸ್, ಆಗಸ್ಟ್‌ನಲ್ಲಿ ಟ್ರೈಲರ್ ರಿಲೀಸ್

    ಹೊಂಬಾಳೆ ಫಿಲಂಸ್ ನಡಿ ವಿಜಯ್ ಕಿರಗಂದೂರು ನಿರ್ಮಿಸಿರುವ, ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿರುವಂತಹ ಪ್ಯಾನ್ ಚಿತ್ರವಾದ ‘ಸಲಾರ್ ಪಾರ್ಟ್ 1: ಸೀಸ್ ಫೈರ್ (Salaar)  ಟೀಸರ್ ಮೊನ್ನೆ  ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲೇ 12 ಮಿಲಿಯನ್ ವೀಕ್ಷಣೆಯಾಗಿತ್ತು. ಇದೀಗ ನೂರು ಮಿಲಿಯನ್ ವೀವ್ಸ್ ಆಗಿದ್ದು, ಆಗಸ್ಟ್ ನಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡುವುದಾಗಿ ತಿಳಿದು ಬಂದಿದೆ.

    ‘ಬಾಹುಬಲಿ’ ಖ್ಯಾತಿಯ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅಭಿನಯದಲ್ಲಿ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ (Prashant Neel) ನಿರ್ದೇಶಿಸಿರುವ ‘ಸಲಾರ್’ ಚಿತ್ರವು ಆರಂಭದಿಂದಲೂ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಭರ್ಜರಿ ಆಕ್ಷನ್ ದೃಶ್ಯಗಳು ಮತ್ತು ಪವರ್ ಫುಲ್ ಸಂಭಾಷಣೆಗಳಿಂದ ಕೂಡಿರುವ ಈ ಟೀಸರ್, ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುವುದರ ಜೊತೆಗೆ, ಹೊಸ ದಾಖಲೆಯನ್ನು ಬರೆಯುವ ಎಲ್ಲಾ ಮುನ್ಸೂಚನೆಯನ್ನು ನೀಡಿದೆ.

    ‘ಕೆಜಿಎಫ್’ ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಪ್ರಶಾಂತ್ ನೀಲ್, ಈ ಬಾರಿ ‘ಸಲಾರ್’ ಮೂಲಕ ಇನ್ನೊಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ.  ಭಾರತೀಯ ಚಿತ್ರರಂಗದಲ್ಲಿ ಇದುವರೆಗೂ ಕಂಡುಕೇಳರಿಯದ ಪ್ರಮಾಣದಲ್ಲಿ ಈ ಚಿತ್ರವು ನಿರ್ಮಾಣವಾಗುತ್ತಿದ್ದು, ಹೈದರಾಬಾದ್‌ ನ ರಾಮೋಜಿ ಫಿಲಂ ಸಿಟಿ ಬಳಿ 14 ಅದ್ಭುತ ಸೆಟ್ ಗಳನ್ನು ಈ ಚಿತ್ರಕ್ಕಾಗಿ ನಿರ್ಮಿಸಿ, ಅಲ್ಲಿ ಚಿತ್ರೀಕರಣ ಮಾಡಲಾಗಿದೆ.

    ಈ ಚಿತ್ರದ ಕುರಿತು ಮಾತನಾಡುವ ನಿರ್ಮಾಪಕ ವಿಜಯ್ ಕಿರಗಂದೂರು, ‘ಈ ಚಿತ್ರ ಪ್ರಾರಂಭವಾದಾಗಲೇ ನಾವು ಇದು ಯಾವುದೋ ಒಂದು ಭಾಷೆಯ ಅಥವಾ ಪ್ಯಾನ್ ಇಂಡಿಯಾ ಸಿನಿಮಾವಲ್ಲ ಎಂದು ಹೇಳಿದ್ದೆವು. ಇದು ಎಲ್ಲ ಕಡೆ ಸಲ್ಲುವ ಭಾರತೀಯ ಚಿತ್ರವಾಗಬೇಕು ಎಂಬುದು ನಮ್ಮ ಆಸೆ. ಅದರಂತೆ ಈ ಚಿತ್ರ ಮೂಡಿಬಂದಿದ್ದು, ಬರೀ ಭಾರತದಲ್ಲಷ್ಟೇ ಅಲ್ಲ, ಹೊರದೇಶಗಳಲ್ಲೂ ಭಾರತೀಯ ಚಿತ್ರವಾಗಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡದ ನಿರ್ಮಾಣ ಸಂಸ್ಥೆಯೊಂದು, ಪ್ಯಾನ್ ಇಂಡಿಯಾ ಸ್ಟಾರ್ ಒಬ್ಬರ ಚಿತ್ರವೊಂದನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಾಡುತ್ತಿರುವುದು ಹೆಮ್ಮೆಯ ವಿಷಯ. ಕನ್ನಡದ ನಿರ್ಮಾಣ ಸಂಸ್ಥೆ, ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರು, ತೆಲುಗಿನ ಸ್ಟಾರ್ ನಟ ಪ್ರಭಾಸ್, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್, ತಮಿಳಿನ ಶ್ರುತಿ ಹಾಸನ್ ಹೀಗೆ  ಎಲ್ಲ ಭಾಷೆಯ ಕಲಾವಿದರು ಮತ್ತು ತಂತ್ರಜ್ಞರು ಇಲ್ಲಿದ್ದಾರೆ. ಎಲ್ಲರನ್ನೂ ಸೇರಿಸಿ ಭಾರತೀಯ ಸಿನಿಮಾ ಮಾಡಿದ್ದೇವೆ. ಇವತ್ತು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರ ಸೆಪ್ಟೆಂಬರ್ 28ಕ್ಕೆ ಜಗತ್ತಿನಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎನ್ನುತ್ತಾರೆ.

    ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ‘ಸಲಾರ್’ ಚಿತ್ರವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗಿದೆ. ವಿದೇಶಗಳಲ್ಲೂ ಚಿತ್ರದ ವಿಎಫ್ಎಕ್ಸ್ ಕೆಲಸ ನಡೆದಿದ್ದು, ಆಕ್ಷನ್ ದೃಶ್ಯಗಳಲ್ಲಿ ಬೇರೆ ದೇಶಗಳಿಂದ ಬಂದ ಹಲವು ನುರಿತ ಸಾಹಸ ಕಲಾವಿದರು ಕೆಲಸ ಮಾಡಿರುವುದು ಈ ಚಿತ್ರದ ವಿಶೇಷತೆಗಳಲ್ಲೊಂದು.

     

    ದೊಡ್ಡ ಕ್ಯಾನ್ವಾಸ್ ಅಷ್ಟೇ ಅಲ್ಲ, ದೊಡ್ಡ ತಾರಾಗಣವೂ ಇರುವ ಈ ಚಿತ್ರದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಶ್ರುತಿ ಹಾಸನ್ (Shruti Haasan) ನಟಿಸಿದ್ದು, ಮಿಕ್ಕಂತೆ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದವರು ನಟಿಸಿದ್ದಾರೆ.  ‘ಕೆಜಿಎಫ್’ ಚಿತ್ರಗಳಿಗೆ ಕೆಲಸ ಮಾಡಿದ ತಾಂತ್ರಿಕ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡಿದ್ದು, ರವಿ ಬಸ್ರೂರು ಅವರ ಸಂಗೀತ, ಭುವನ್ ಗೌಡ ಛಾಯಾಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ‘ಸಲಾರ್ ಪಾರ್ಟ್ 1: ಸೀಸ್ ಫೈರ್ ಚಿತ್ರವು ಸೆಪ್ಟೆಂಬರ್ 28ರಂದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಜಗತ್ತಿನಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಭಾಸ್ ಅಭಿಮಾನಿಗಳ ನಿದ್ದೆಗೆಡಿಸಿದ ಪ್ರಶಾಂತ್ ನೀಲ್: ನಾಳೆ ಟೀಸರ್ ರಿಲೀಸ್

    ಪ್ರಭಾಸ್ ಅಭಿಮಾನಿಗಳ ನಿದ್ದೆಗೆಡಿಸಿದ ಪ್ರಶಾಂತ್ ನೀಲ್: ನಾಳೆ ಟೀಸರ್ ರಿಲೀಸ್

    ನಾಳೆ ಬೆಳಗ್ಗೆ 5.12ಕ್ಕೆ ಪ್ರಭಾಸ್ ನಟನೆಯ ‘ಸಲಾರ್’ (Salaar)  ಸಿನಿಮಾದ ಟೀಸರ್ ರಿಲೀಸ್ ಮಾಡುತ್ತಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ನಾಳೆ ಈ ಸಮಯವನ್ನು ಯಾಕೆ ನಿಗದಿ ಮಾಡಿದರೋ ಗೊತ್ತಿಲ್ಲ. ಆದರೆ, ಪ್ರಭಾಸ್ ಅಭಿಮಾನಿಗಳ ಮಾತ್ರ ನಿದ್ದೆ ಬಿಟ್ಟು ಟೀಸರ್ (Teaser) ಗಾಗಿ ಕಾಯುತ್ತಿದ್ದಾರೆ. ಬೆಳ್ಳಂಬೆಳಗ್ಗೆ ಎದ್ದು ಟೀಸರ್ ನೋಡುವುದಕ್ಕಾಗಿ ಅಭಿಮಾನಿಗಳು ಸಿದ್ದತೆ ಕೂಡ ಮಾಡಿಕೊಂಡಿದ್ದಾರೆ.

    ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಲು ಸಾಮಾನ್ಯವಾಗಿ ಸಾಯಂಕಾಲದ ಸಮಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಥವಾ ಬೆಳಗ್ಗೆ ಹತ್ತು ಗಂಟೆಯ ನಂತರ ಫಿಕ್ಸ್ ಮಾಡುತ್ತಾರೆ. ಆದರೆ, ಸಲಾರ್ ಟೀಮ್ ಕೋಳಿ ಕೂಗುವ ಮುನ್ನ ವೇಳೆ ಆಯ್ಕೆ ಮಾಡಿಕೊಂಡಿದೆ. ಇದಕ್ಕೆ ಕಾರಣ ಏನು ಎನ್ನುವುದನ್ನು ಅದು ತಿಳಿಸಿಲ್ಲ. ಹಾಗಾಗಿ ಪ್ರಭಾಸ್ (Prabhas) ಅಭಿಮಾನಿಗಳು ವೇಳೆಯ ಕುರಿತಾಗಿ ಪ್ರಶ್ನೆ ಮಾಡಿದ್ದಾರೆ.

    ಸಲಾರ್ ಚಿತ್ರ ಸೆಪ್ಟೆಂಬರ್ 28ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರ ಹೇಗೆ ಮೂಡಿಬಂದಿರಬಹುದು ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದು, ಆ ಎಲ್ಲಾ ಕುತೂಹಲಗಳಿಗೆ ಜುಲೈ 6ರ ಗುರುವಾರ ತೆರೆಬೀಳಲಿದೆ.

    ಕಳೆದ ವರ್ಷ ಭಾರತೀಯ ಚಿತ್ರರಂಗಕ್ಕೆ ‘ಕೆಜಿಎಫ್ 2’ ಮತ್ತು ‘ಕಾಂತಾರ’ ಎಂಬ ಎರಡು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದಂತಹ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ (Hombale Films), ‘ಸಲಾರ್’ ಚಿತ್ರವನ್ನು ನಿರ್ಮಿಸಿದೆ. ಕೆಜಿಎಫ್ ನಂತರ ಪ್ರಶಾಂತ್ ನೀಲ್ (Prashant Neel) ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

     

    ಕಳೆದ ಎರಡು ವರ್ಷಗಳಿಂದ ಚಿತ್ರತಂಡದವರು ಚಿತ್ರೀಕರಣ ಮಾಡುತ್ತಿದ್ದರೂ, ಚಿತ್ರದ ಬಗ್ಗೆ ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಹಾಗಾಗಿ, ಚಿತ್ರದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.  ‘ಸಲಾರ್’ ಚಿತ್ರದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಪ್ರಮೋದ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಕನ್ನಡದ ಭುವನ್ ಗೌಡ ಅವರ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತವಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆಲುಗು ಸಿನಿಮಾ ರಂಗದಲ್ಲೇ ಇನ್ನೂ ಹತ್ತು ವರ್ಷ  ಪ್ರಶಾಂತ್ ನೀಲ್ ಲಾಕ್?

    ತೆಲುಗು ಸಿನಿಮಾ ರಂಗದಲ್ಲೇ ಇನ್ನೂ ಹತ್ತು ವರ್ಷ ಪ್ರಶಾಂತ್ ನೀಲ್ ಲಾಕ್?

    ನ್ನಡದ ಹೆಮ್ಮೆಯ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ (Prashant Neel) ಇನ್ನೂ ಹತ್ತು ವರ್ಷ ಕನ್ನಡದ ಸಿನಿಮಾಗಳನ್ನೇ ಮಾಡಲ್ಲವಾ? ಇಂಥದ್ದೊಂದು ಚರ್ಚೆ ಗಾಂಧಿನಗರದಲ್ಲಿ ಶುರುವಾಗಿದೆ. ಸದ್ಯ ಅವರು ಒಪ್ಪಿಕೊಂಡಿರುವ ಸಿನಿಮಾಗಳ ಪ್ರಕಾರ ಯಾವುದೇ ಕಾರಣಕ್ಕೂ ಹತ್ತು ವರ್ಷ ಸ್ಯಾಂಡಲ್ ವುಡ್ ನತ್ತ ಅವರು ಮುಖ ನೋಡುವುದಿಲ್ಲ ಎಂದು ಹೇಳಲಾಗುತ್ತಿದೆ.

    ಈಗಾಗಲೇ ಸಲಾರ್ (Salar) ಸಿನಿಮಾದಲ್ಲಿ ಅವರು ಬ್ಯುಸಿಯಾಗಿದ್ದಾರೆ. ನಂತರ ಜ್ಯೂನಿಯರ್ ಎನ್.ಟಿ.ಆರ್ (Jr.NTR) ಸಿನಿಮಾವನ್ನು ನಿರ್ದೇಶನ ಮಾಡಬೇಕು. ಅಲ್ಲಿಂದ ಮತ್ತೆ ಸಲಾರ್ 2 ಚಿತ್ರ ಮಾಡುತ್ತಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಈ ನಡುವೆ ದಿಲ್ ರಾಜುಗಾಗಿ ಮತ್ತೊಂದು ಸಿನಿಮಾವನ್ನು ಪ್ರಶಾಂತ್ ತಯಾರಿಸಿ ಕೊಡಬೇಕಿದೆ. ಇವೆಲ್ಲವೂ ಮುಗಿಯುವುದಕ್ಕೆ ಕನಿಷ್ಠ ಹತ್ತು ವರ್ಷವಾದರೂ ಬೇಕು ಎನ್ನುತ್ತಾರೆ ಸಿನಿ ಪಂಡಿತರು. ಇದನ್ನೂ ಓದಿ:ಸೂರ್ಯನಿಗೆ ನಾಯಕಿಯಾದ ಬಾಲಿವುಡ್ ನಟಿ ದಿಶಾ ಪಟಾನಿ

    ಈವರೆಗೂ ಒಂದೇ ವರ್ಷದಲ್ಲಿ ಯಾವ ಸಿನಿಮಾವನ್ನೂ ಪ್ರಶಾಂತ್ ಮುಗಿಸಿಲ್ಲ. ಕನಿಷ್ಠ ಒಂದೂವರೆ ಎರಡು ವರ್ಷಗಳ ಕಾಲ ತಗೆದುಕೊಂಡಿದ್ದಾರೆ ಈ ಲೆಕ್ಕದಲ್ಲಿ ಅವರ ಕೈಯಲ್ಲಿ ಸಲಾರ್, ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾ, ಸಲಾರ್ 2, ದಿಲ್ ರಾಜು (Dil Raju) ನಿರ್ಮಾಣದ ಚಿತ್ರಗಳಿವೆ.  ಹಾಗಾಗಿ ಅವರು ತೆಲುಗು ಚಿತ್ರೋದ್ಯಮದಲ್ಲೇ ಅಷ್ಟು ವರ್ಷಗಳ ಕಾಲ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಪ್ರಶಾಂತ್ ನೀಲ್ ಯಾವುದೇ ಸಿನಿಮಾ ಮಾಡಿದರೂ, ಅದು ಪ್ಯಾನ್ ಇಂಡಿಯಾ ಮಟ್ಟದಲ್ಲೇ ಇರುತ್ತದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಿಗೆ ಡಬ್ ಆಗಲಿದೆ. ಹಾಗಾಗಿ ಒಂದೇ ಭಾಷೆಗೆ ಅವರನ್ನು ಸೀಮಿತ ಮಾಡುವುದು ಬೇಡ ಎನ್ನುವ ಮಾತುಗಳನ್ನೂ ಕೆಲವರು ಆಡುತ್ತಿದ್ದಾರೆ. ಅಷ್ಟಕ್ಕೂ ಕನ್ನಡದಲ್ಲೂ ಪ್ರಶಾಂತ್ ನೀಲ್ ನೇರವಾಗಿ ಒಂದು ಸಿನಿಮಾ ಮಾಡಬೇಕಿತ್ತು. ಅದು ಶ್ರೀಮುರಳಿಗೆ ಎಂದೂ ಫಿಕ್ಸ್ ಆಗಿತ್ತು. ಆ ಸಿನಿಮಾ ಯಾವಾಗ ಶುರುವಾಗತ್ತೋ ಕಾದು ನೋಡಬೇಕಿದೆ.

  • ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾದಲ್ಲಿ ಮಧು ಗುರುಸ್ವಾಮಿ

    ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾದಲ್ಲಿ ಮಧು ಗುರುಸ್ವಾಮಿ

    ಪ್ರತಿ ಸಿನಿಮಾದಲ್ಲೊಂದು ಹೊಸಬಗೆಯ ಪಾತ್ರದ ಮೂಲಕ ಸಮಸ್ತ ಚಿತ್ರಪ್ರೇಮಿಗಳನ್ನು ರಂಜಿಸುತ್ತಿರುವ ಕನ್ನಡದ ಖ್ಯಾತ ಖಳನಟ ಮಧು ಗುರುಸ್ವಾಮಿ (Madhu Guruswamy) ಕಾಲಿವುಡ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಕನ್ನಡದ ಸೂಪರ್ ಹಿಟ್ ಸಿನಿಮಾ ಮಫ್ತಿ, ಪತ್ತುತಲಾ (Patuthala) ಎಂಬ ಟೈಟಲ್ ನಡಿ ತಮಿಳಿಗೆ ರಿಮೇಕ್ ಆಗಿದ್ದು, ಇದೇ 30ಕ್ಕೆ ಚಿತ್ರ ತೆರೆಗೆ ಬರ್ತಿದೆ. ಕನ್ನಡದಲ್ಲಿ ಸಿಂಗ ಪಾತ್ರ ನಿರ್ವಹಿಸಿದ್ದ ಮಧು ಗುರುಸ್ವಾಮಿ ಅದೇ ಪಾತ್ರವನ್ನು ತಮಿಳಿನಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

    ಸಿಲಂಬರಸನ್ ನಾಯಕನಾಗಿ ಅಭಿನಯಿಸಿರುವ ಪತ್ತುತಲಾ ಸಿನಿಮಾಗೆ ಖ್ಯಾತ ನಿರ್ದೇಶಕ ಒಬಿಲ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದು, ಸ್ಟುಡಿಯೋ ಗ್ರೀನ್ ಸಂಸ್ಥೆ ನಿರ್ಮಾಪಕ ಜ್ಞಾನವೆಲ ರಾಜ ಬಂಡವಾಳ ಹೂಡಿದ್ದಾರೆ. ಸಿಂಗ ಪಾತ್ರವನ್ನು ಜ್ಞಾನವೆಲ ಮೆಚ್ಚಿ ತಮಗೆ ಅವಕಾಶ ನೀಡಿರುವುದಕ್ಕೆ ಮಫ್ತಿ ಸಾರಥಿ ನರ್ತನ್ ಬಹುಮುಖ್ಯ ಕಾರಣ ಎನ್ನುತ್ತಾರೆ ಮಧು ಗುರುಸ್ವಾಮಿ. ಇದನ್ನೂ ಓದಿ:ತೆಲಂಗಾಣಕ್ಕೆ ತೆರಳಿ ಪತ್ನಿಗೆ ವಸಿಷ್ಠ ಸಿಂಹ ಸರ್ಪ್ರೈಸ್

    ಅಭಿನಯ ತರಂಗ ಶಾಲೆಯಲ್ಲಿ ಎರಡು ವರ್ಷಗಳ ಕಾಲ ನಟನೆ ತರಬೇತಿ ಪಡೆದು ಡೆಡ್ಲಿ-2 ಸಿನಿಮಾ ಮೂಲಕ ನಟನಾಗಿ ಹಾಗೂ ಸಹಾಯಕ ನಿರ್ದೇಶಕನಾಗಿ ಅದೃಷ್ಟ ಪರೀಕ್ಷೆಗಿಳಿದ ಮಧು ಗುರುಸ್ವಾಮಿ, ಚಿಂಗಾರಿ ಚಿತ್ರದಲ್ಲಿ ವಿನೀಶ್ ಮಲ್ಹೋತ್ರ ಪಾತ್ರದಲ್ಲಿ, ಯಶ್ ಅಭಿನಯದ ಜಾನು ಸಿನಿಮಾದಲ್ಲಿ ಸಂಗಮೇಶ್ ಎಂಬ ಪಾತ್ರದಲ್ಲಿ, ಶಿವಣ್ಣನ ಹೈವೋಲ್ಟೇಜ್ ಕಥೆ ಭಜರಂಗಿಯಲ್ಲಿ ಮಂತ್ರವಾದಿಯಾಗಿ, ಶರಣ್ ನಟನೆಯ ಜೈ ಮಾರುತಿ 800 ಚಿತ್ರದಲ್ಲಿ ಹಾಸ್ಯನಟನಾಗಿ ಹೀಗೆ ತರಹೇವಾರಿ ಪಾತ್ರ ಮಾಡಿದ್ದರು.

    ಅನೇಕ ಸಿನಿಮಾಗಳ  ಮೂಲಕ ಕನ್ನಡದಲ್ಲಿ ಖ್ಯಾತಿ ಪಡೆದು ಬಳಿಕ ಸಾಕ್ಷ್ಯಂ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಮಧು, ಪ್ರಶಾಂತ್ ನೀಲ್ (Prashant Neil) ನಿರ್ದೇಶನದ ಡಾರ್ಲಿಂಗ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ ಸಲಾರ್ ನಲ್ಲಿ (Salar) ಪ್ರಮುಖದಲ್ಲಿ ಅಭಿನಯಿಸಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಎದುರು ಹಾಜರಾಗುವ ಮಧು ಗುರುಸ್ವಾಮಿ ಸದ್ಯ ಬಹುಬೇಡಿಕೆ ನಟ.

  • ಪ್ರಶಾಂತ್ ನೀಲ್ ಜೊತೆ ಆರ್.ಚಂದ್ರು ಹೋಲಿಕೆ : ಚಿತ್ರರಂಗದಲ್ಲಿ ‘ಕಬ್ಜ’ ಸಂಚಲನ

    ಪ್ರಶಾಂತ್ ನೀಲ್ ಜೊತೆ ಆರ್.ಚಂದ್ರು ಹೋಲಿಕೆ : ಚಿತ್ರರಂಗದಲ್ಲಿ ‘ಕಬ್ಜ’ ಸಂಚಲನ

    ಕೆಜಿಎಫ್ (KGF) ಸಿನಿಮಾ ಮೂಲಕ ಭಾರತೀಯ ಸಿನಿಮಾ ರಂಗವನ್ನೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದವರು ನಿರ್ದೇಶಕ ಪ್ರಶಾಂತ್ ನೀಲ್ (Prashant Neil). ಈ ಸಿನಿಮಾದ ಮೂಲಕ ಪ್ರಶಾಂತ್ ಕೇವಲ ಕನ್ನಡದ ನಿರ್ದೇಶಕರನ್ನಾಗಿ ಗುರುತಿಸುತ್ತಿಲ್ಲ, ಭಾರತೀಯ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲಿ ಅವರು ಕೂಡ ಒಬ್ಬರಾಗಿದ್ದಾರೆ. ಇವರ ಚಿತ್ರಗಳ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಬರುತ್ತಿವೆ. ಕಬ್ಜ (Kabzaa) ಸಿನಿಮಾದ ನಂತರ ಅಂಥದ್ದೊಂದು ಸ್ಥಾನ ನಿರ್ದೇಶಕ ಆರ್.ಚಂದ್ರು ಅವರ ಪಾಲಾಗಿದೆ. ಪ್ರಶಾಂತ್ ನೀಲ್ ಜೊತೆ ಆರ್.ಚಂದ್ರು (R. Chandru) ಅವರನ್ನೂ ಹೋಲಿಕೆ ಮಾಡಲಾಗುತ್ತಿದೆ.

    ಹಿಂದಿ, ತಮಿಳು, ತೆಲುಗು ಚಿತ್ರರಂಗದಲ್ಲಿ ‘ಕಬ್ಜ’ ಸಿನಿಮಾದ ಟ್ರೈಲರ್, ಟೀಸರ್ ಮತ್ತು ಹಾಡುಗಳು ಹವಾ ಕ್ರಿಯೇಟ್ ಮಾಡುತ್ತಿದ್ದಂತೆಯೇ ಕೆಜಿಎಫ್ ಮತ್ತು ಕಬ್ಜ ಸಿನಿಮಾವನ್ನು ಹೋಲಿಕೆ ಮಾಡಿ ಮಾತನಾಡಲಾಗುತ್ತಿದೆ. ಚಿತ್ರದ ಗುಣಮಟ್ಟ, ಮೇಕಿಂಗ್, ಬಜೆಟ್, ತಾರಾಗಣ, ಸೆಟ್ ಹೀಗೆ ನಾನಾ ಕಾರಣಗಳನ್ನಿಟ್ಟುಕೊಂಡು ಚರ್ಚೆ ಮಾಡಲಾಗುತ್ತಿದೆ. ಈ ಕಾರಣದಿಂದಾಗಿಯೇ ನಿರ್ದೇಶಕ ಆರ್.ಚಂದ್ರು ಇದೀಗ ಭಾರತೀಯ ಸಿನಿಮಾ ರಂಗದ ಮತ್ತೊಬ್ಬ ಪ್ರಮುಖ ನಿರ್ದೇಶಕರ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಮಗಳ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಕೆಜಿಎಫ್ ಸಿನಿಮಾ ಕೂಡ ಕನ್ನಡದಲ್ಲಿ ನಿರ್ಮಾಣವಾಗಿ ಆನಂತರ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿತ್ತು. ಹಿಂದಿಯಲ್ಲಿ ಭಾರೀ ಬೇಡಿಕೆ ಕ್ರಿಯೇಟ್ ಆಗಿತ್ತು. ಕಬ್ಜ ಸಿನಿಮಾ ಕೂಡ ಮೂಲ ಕನ್ನಡದಲ್ಲಿ ನಿರ್ಮಾಣವಾಗಿ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿದೆ. ಬಾಲಿವುಡ್ ನಲ್ಲಿ ಕಬ್ಜ ಚಿತ್ರಕ್ಕೆ ಸಾಕಷ್ಟು ಬೇಡಿಕೆ ಬಂದಿದೆ. ಪ್ರತಿಷ್ಠಿತ ವಿತರಣಾ ಸಂಸ್ಥೆಯು ಈ ಸಿನಿಮಾವನ್ನು ಹಂಚಿಕೆ ಮಾಡುತ್ತಿದೆ. ಅಲ್ಲದೇ, ಬೇರೆ ಬೇರೆ ಭಾಷೆಗಳು ಸೇರಿದಂತೆ ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಹೀಗಾಗಿ ಹೋಲಿಕೆ ಹೆಚ್ಚಾಗಿದೆ.

    ಪ್ರಶಾಂತ್ ನೀಲ್ ಮೊದಲ ಚಿತ್ರದಲ್ಲೇ ಗೆಲುವು ಕಂಡವರು. ಆರ್.ಚಂದ್ರು ನಿರ್ದೇಶನದ ಮೊದಲ ಚಿತ್ರ ‘ತಾಜ್ ಮಹಲ್’ ಕೂಡ ಬಾಕ್ಸ್ ಆಫೀಸ್ ಭರ್ತಿ ಮಾಡಿತ್ತು. ನಂತರದ ಪ್ರೇಮ್ ಕಹಾನಿ, ಮೈಲಾರಿ, ಚಾರ್ ಮಿನಾರ್, ಐ ಲವ್ ಯೂ ಸಾಲು ಸಾಲು ಚಿತ್ರಗಳು ಕೂಡ ದಾಖಲೆ ರೀತಿಯಲ್ಲಿ ಪ್ರದರ್ಶನ ಕಂಡವು. ಹೀಗಾಗಿ ಕನ್ನಡದ ಇಬ್ಬರು ನಿರ್ದೇಶಕರ ಬಗ್ಗೆ ಇದೀಗ ಇಡೀ ಭಾರತೀಯ ಚಿತ್ರರಂಗವೇ ಮಾತನಾಡುತ್ತಿದೆ.

  • Breaking- ಮಾರ್ಚ್ 5 ರಿಂದ ಯುರೋಪ್ ನಲ್ಲಿ ಸಲಾರ್ ಶೂಟಿಂಗ್

    Breaking- ಮಾರ್ಚ್ 5 ರಿಂದ ಯುರೋಪ್ ನಲ್ಲಿ ಸಲಾರ್ ಶೂಟಿಂಗ್

    ಪ್ರಶಾಂತ್ ನೀಲ್ (Prashant Neil) ಮತ್ತು ಪ್ರಭಾಸ್ (Prabhas) ಕಾಂಬಿನೇಷನ್ ನ ‘ಸಲಾರ್’ (Salar) ಸಿನಿಮಾದ ಚಿತ್ರೀಕರಣದ ಹೊಸ ಅಪ್ ಡೇಟ್ ಸಿಕ್ಕಿದೆ. ಮಾರ್ಚ್ 3 ರಿಂದ ಇಡೀ ಚಿತ್ರತಂಡ ಯುರೋಪ್ (Europe) ನತ್ತ ಪ್ರಯಾಣ ಬೆಳೆಸಲಿದೆ. ಹಲವು ದಿನಗಳ ಕಾಲ ಯುರೋಪ್ ನಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಹೈದರಾಬಾದ್ ಸೇರಿದಂತೆ ಹಲವು ಕಡೆ ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಯುರೋಪ್ ನಲ್ಲಿ ಮಹತ್ವದ ದೃಶ್ಯಗಳನ್ನು ಸೆರೆ ಹಿಡಿಯಲಿದೆ.

    ನಿನ್ನೆಯಷ್ಟೇ ಚಿತ್ರದ ನಾಯಕಿ ಶ್ರುತಿ ಹಾಸನ್ (Shruti Haasan) ಫೋಟೋವೊಂದನ್ನು ಶೇರ್ ಮಾಡಿ, ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿರುವುದಾಗಿ ಬರೆದುಕೊಂಡಿದ್ದಾರೆ. ಶೂಟಿಂಗ್ ಅನುಭವವನ್ನೂ ಅವರು ಹಂಚಿಕೊಂಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಸಿನಿಮಾಟೋಗ್ರಾಫರ್ ಭುವನ್ ಗೌಡ ಜೊತೆಗಿನ ಫೋಟೋವನ್ನೂ ಅವರು ಹಾಕಿಕೊಂಡಿದ್ದಾರೆ. ಇಡೀ ತಂಡಕ್ಕೆ ಧನ್ಯವಾದಗಳನ್ನೂ ತಿಳಿಸಿದ್ದಾರೆ.

    ಈ ಸಿನಿಮಾ ಹಲವು ವಿಶೇಷಗಳನ್ನು ಹೊಂದಿದೆ ಎಂದು ಸ್ವತಃ ತಾರಾಗಣವೇ ಆಗಾಗ್ಗೆ ಹೇಳಿಕೊಂಡಿದೆ. ಪ್ರಭಾಸ್ ಜೊತೆ ಕನ್ನಡದ ಮತ್ತೋರ್ವ ನಾಯಕ ಪ್ರಮೋದ್ ಕೂಡ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ಅಲ್ಲದೇ, ಯಶ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಯಾವುದೇ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ. ಇದನ್ನೂ ಓದಿ:ಸೀರೆಯುಟ್ಟು ಮಿಂಚಿದ `ವಜ್ರಕಾಯ’ ನಟಿ ನಭಾ ನಟೇಶ್

    ಬಹುಕೋಟಿಯಲ್ಲಿ ತಯಾರಾಗುತ್ತಿರುವ ಸಿನಿಮಾ ಇದಾಗಿದ್ದು, ಈ ವರ್ಷದ ಮಧ್ಯದಲ್ಲಿ ಸಿನಿಮಾವನ್ನು ರಿಲೀಸ್ ಮಾಡುವ ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಪ್ರಭಾಸ್ ಕಾರಣದಿಂದಾಗಿ ಚಿತ್ರೀಕರಣ ತಡವಾಗಿತ್ತು. ಹಾಗಾಗಿ ಇನ್ನು ಕೆಲವೇ ಹಂತಗಳ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಬೇಕಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಸಲಾರ್ ನಟ ಪ್ರಭಾಸ್ : ಶೂಟಿಂಗ್ ಕ್ಯಾನ್ಸಲ್

    ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಸಲಾರ್ ನಟ ಪ್ರಭಾಸ್ : ಶೂಟಿಂಗ್ ಕ್ಯಾನ್ಸಲ್

    ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿರುವ ಪ್ರಭಾಸ್ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಅವರ ಎಲ್ಲ ಶೂಟಿಂಗ್ ಕ್ಯಾನ್ಸಲ್ ಮಾಡಿಕೊಂಡು ವಿಶ್ರಾಂತಿ ತಗೆದುಕೊಳ್ಳುತ್ತಿದ್ದಾರಂತೆ. ಜ್ವರ ಕಡಿಮೆ ಆಗುತ್ತಿದ್ದು, ಆತಂಕ ಪಡಬೇಕಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಶೂಟಿಂಗ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ ನಿಜ. ಆದರೆ, ಇದು ಜ್ವರದ ಕಾರಣಕ್ಕೋ ಅಥವಾ ಅವರು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಆ ಕಾರಣಕ್ಕೋ ಎನ್ನುವುದು ಗೊತ್ತಾಗಿಲ್ಲ.

    ವಿದೇಶಿ ಸೆನ್ಸಾರ್ ಮಂಡಳಿಯ ಸದಸ್ಯ ಎಂದು ಹೇಳಿಕೊಳ್ಳುವ ಬಾಲಿವುಡ್ ಸಿನಿಮಾಗಳ ವಿಮರ್ಶೆಕ ಉಮೈರ್ ಸಂಧು ಬ್ರೇಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ. ಸದ್ಯದಲ್ಲೇ ಬಾಹುಬಲಿ ಖ್ಯಾತಿಯ ಪ್ರಭಾಸ್ ಮತ್ತು ಬಾಲಿವುಡ್ ನಟಿ ಕೃತಿ ಸನೋನ್ ಮಾಲ್ಡೀವ್ಸ್‍ ನಲ್ಲಿ ನಿರ್ಶಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಎಂಗೇಜ್ ಮೆಂಟ್ ನಂತರ ಬಹುಬೇಗ ಅವರು ವೈವಾಹಿಕ ಜೀವನಕ್ಕೂ ಕಾಲಿಡಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಾಖಿ ಸಾವಂತ್ ಪತಿ, ಮೈಸೂರು ಹುಡುಗ ಆದಿಲ್ ಪೊಲೀಸ್ ವಶಕ್ಕೆ

    ಈ ಜೋಡಿ ಡೇಟಿಂಗ್ ಮಾಡುತ್ತಿದೆ ಎಂದು ಈ ಹಿಂದೆಯೇ ರಿಯಾಲಿಟಿ ಶೋ ವೊಂದರಲ್ಲಿ ವರುಣ್ ಧವನ್ ಸುಳಿವು ನೀಡಿದ್ದರು. ಇವರ ನಡುವೆ ರಿಲೇಷನ್ ಶಿಪ್ ಇದೆ ಎಂದು ನೇರವಾಗಿಯೇ ವರುಣ್ ಮಾತನಾಡಿದ್ದರು. ಆದರೆ, ಈ ವಿಷಯವನ್ನು ಕೃತಿ ತಳ್ಳಿಹಾಕಿದ್ದರು. ತಾವಿಬ್ಬರೂ ಸ್ನೇಹಿತರು ಎಂದಷ್ಟೇ ಹೇಳಿಕೆ ಕೊಟ್ಟಿದ್ದರು. ಇದೀಗ ಅವರ ನಿಶ್ಚಿತಾರ್ಥದ ವಿಷಯವನ್ನು ಬಹಿರಂಗ ಪಡಿಸಿದ್ದಾರೆ ಉಮೈರ್.

    ಪ್ರಭಾಸ್ ಮತ್ತು ಕೃತಿ ‘ಆದಿಪುರಷ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ರಾಮ-ಸೀತೆಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಈ ವೇಳೆಯಲ್ಲೇ ಇಬ್ಬರೂ ಆತ್ಮೀಯರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವು ಪಾರ್ಟಿಗಳಲ್ಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡು ಅಚ್ಚರಿ ಕೂಡ ಮೂಡಿಸಿತ್ತು. ಈ ಎಲ್ಲದರ ಫಲಿತಾಂಶ ಎನ್ನುವಂತೆ ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಅವರೇ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಬೇಕಷ್ಟೇ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರಶಾಂತ್ ನೀಲ್ ಸಿನಿಮಾದಲ್ಲಿ ಆಮೀರ್ ಖಾನ್: ಗಾಂಧಿನಗರ ಗುಸು ಗುಸು

    ಪ್ರಶಾಂತ್ ನೀಲ್ ಸಿನಿಮಾದಲ್ಲಿ ಆಮೀರ್ ಖಾನ್: ಗಾಂಧಿನಗರ ಗುಸು ಗುಸು

    ಕೆಜಿಎಫ್ ಸಿನಿಮಾದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ನಿರ್ದೇಶಕ ಪ್ರಶಾಂತ್ ನೀಲ್ ಬಗ್ಗೆ ಗಾಂಧಿನಗರದಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ. ಪ್ರಶಾಂತ್ ನೀಲ್ ಅವರ ಮುಂದಿನ ಸಿನಿಮಾದಲ್ಲಿ ಆಮೀರ್ ಖಾನ್ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಈ ಚಿತ್ರಕ್ಕಾಗಿ ಪ್ರಶಾಂತ್, ಬಾಲಿವುಡ್ ನಟನನ್ನು ತೆಲುಗು ಸಿನಿಮಾ ರಂಗಕ್ಕೆ ಕರೆತರುತ್ತಿದ್ದಾರೆ ಎನ್ನುವುದು ವರ್ತಮಾನ.

    ಸದ್ಯ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾದ ಚಿತ್ರೀಕರಣದಲ್ಲಿ ಪ್ರಶಾಂತ್ ನೀಲ್ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಮುಗಿಸಿ, ತೆರೆಗೆ ಕಳುಹಿಸುತ್ತಿದ್ದಂತೆಯೇ ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾವನ್ನು ಅವರು ಕೈಗೆತ್ತಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಆಮೀರ್ ಖಾನ್ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಸೆಟ್ಟೇರಲು ಇನ್ನೂ ಒಂದು ವರ್ಷವೇ ಬೇಕಾಗಬಹುದು. ಆದರೂ, ಸುದ್ದಿ ಈಗಲೇ ಹುಟ್ಟಿಕೊಂಡಿದೆ. ಇದನ್ನೂ ಓದಿ: ಜನವರಿ 8ಕ್ಕೆ ಯಶ್ ಅಭಿಮಾನಿಗಳಿಗೆ ಕಾದಿದೆ ಗುಡ್ ನ್ಯೂಸ್

    ಈ ಕುರಿತು ಪ್ರಶಾಂತ್ ನೀಲ್ ಮಾತನಾಡದೇ ಇದ್ದರೂ, ಅವರದ್ದೇ ಪಡಸಾಲೆಯಿಂದ ಈ ವಿಷಯ ಬಹಿರಂಗವಾಗಿ ಎಂದು ಹೇಳಲಾಗುತ್ತಿದೆ. ಜ್ಯೂನಿಯರ್ ಎನ್.ಟಿ.ಆರ್ ಜೊತೆ ಆಮೀರ್ ಖಾನ್ ನಟಿಸುತ್ತಾರಾ? ಅಥವಾ ಪ್ರಶಾಂತ್ ಈಗಾಗಲೇ ಒಂದು ಹಂತದಲ್ಲಿ ಮಾತುಕತೆ ಏನಾದರೂ ನಡೆಸಿದ್ದಾರೆ. ಈ ಯಾವುದಕ್ಕೂ ಸ್ಪಷ್ಟ ಉತ್ತರವಿಲ್ಲ. ಆದರು ಈ ವಿಷಯ ದೊಟ್ಟಮಟ್ಟದಲ್ಲೇ ಸದ್ದು ಮಾಡುತ್ತಿರುವುದಂತು ಸತ್ಯ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ಕೆಜಿಎಫ್ ಹೋಟೆಲ್, ಮಂಗಳೂರಿನಲ್ಲಿ ಕಾಂತಾರ

    ಬೆಂಗಳೂರಿನಲ್ಲಿ ಕೆಜಿಎಫ್ ಹೋಟೆಲ್, ಮಂಗಳೂರಿನಲ್ಲಿ ಕಾಂತಾರ

    ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾದ ಎರಡು ಚಿತ್ರಗಳು ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಸುದ್ದಿ ಮಾಡಿದ ವಿಚಾರ ಹಳೆಯದು. ಪ್ರಶಾಂತ್ ನೀಲ್ ನಿರ್ದೇಶನ ಮಾಡಿ, ಯಶ್ ನಟಿಸಿರುವ ‘ಕೆಜಿಎಫ್’ ಸಿನಿಮಾ ದಾಖಲೆ ರೀತಿಯಲ್ಲಿ ಪ್ರದರ್ಶನ ಕಂಡಿತು. ಸಾವಿರಾರು ಕೋಟಿ ಹಣವನ್ನು ಮಾಡಿತು. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ ಕಾಂತಾರ ಚಿತ್ರ ಕೂಡ ಕೆಜಿಎಫ್ ಮಾಡಿದ ಹಲವು ದಾಖಲೆಗಳನ್ನು ಪುಡಿ ಪುಡಿ ಮಾಡಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

    ಈ ಎರಡೂ ಚಿತ್ರಗಳು ಮಾಡಿರುವ ಕ್ರೇಜ್ ಅಷ್ಟಿಷ್ಟಲ್ಲ. ಕೆಜಿಎಫ್ ಸಿನಿಮಾದಲ್ಲಿ ಬಳಕೆಯಾದ ಹಲವು ವಸ್ತುಗಳು ಹರಾಜಾದವು. ಕೆಜಿಎಫ್ ನಲ್ಲಿ ಯಶ್ ಬಳಸಿದ್ದ ಬೈಕ್ ಟ್ರೆಂಡ್ ಆಯಿತು. ಅವರ ಹೇರ್ ಸ್ಟೈಲ್ ಅನ್ನು ಕೂಡ ಹಲವರು ಕಾಪಿ ಮಾಡಿದರು. ರಿಷಬ್ ಶೆಟ್ಟಿಯ ಕಾಂತಾರ ಬಂದ ಮೇಲೂ ಕಾಂತಾರ  ಅನುಕರಣೆಯನ್ನು ಮಾಡಿದವರು ಇದ್ದಾರೆ. ಈ ಸಿನಿಮಾದ ಕೆಲವು ಡೈಲಾಗ್ ಕೂಡ ಟ್ರೋಲ್ ಆದವು. ಇದೀಗ ಈ ಎರಡೂ ಸಿನಿಮಾಗಳ ಹೆಸರಿನಲ್ಲಿ ಹೋಟೆಲ್ ಶುರುವಾಗುತ್ತಿವೆ. ಇದನ್ನೂ ಓದಿ:ಕೇಕ್‌ ಕತ್ತರಿಸಿ ಸಕ್ಸಸ್ ಆಚರಿಸಿದ ‌ʻಗಂಧದ ಗುಡಿʼ ಟೀಮ್

    ಈಗಾಗಲೇ ಕೆಜಿಎಫ್ ಹೆಸರಿನಲ್ಲಿ ಬೆಂಗಳೂರಿನ ಸಹಕಾರ ನಗರದ ಕೊಡಿಗೆಹಳ್ಳಿ ಗೇಟ್ ಬಳಿ ಹೋಟೆಲ್ ವೊಂದು ಶುರುವಾಗಿದೆ. ಇದರ ಬೆನ್ನಲ್ಲೆ ಮಂಗಳೂರಿನಲ್ಲೂ ಕಾಂತಾರ ಹೋಟೆಲ್ ಅತೀ ಶೀಘ್ರದಲ್ಲೇ ಪ್ರಾರಂಭ ಮಾಡುವುದಾಗಿ ಸುದ್ದಿಯಾಗಿದೆ. ಕಾಂತಾರ ಹೆಸರಿನಲ್ಲಿ ಶುರುವಾಗಲಿರುವ ಹೋಟೆಲ್ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈಗಾಗಲೇ ಕೆಜಿಎಫ್ ನಲ್ಲಿ ಊಟ ಸವಿದವರು, ಆ ಸಿನಿಮಾವನ್ನು ನೆನಪಿಸುವಂತಹ ಸ್ಥಳಗಳಲ್ಲಿ ಕೂತು ಎಂಜಾಯ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಸಲಾರ್’ ಸಿನಿಮಾ ಶೂಟಿಂಗ್ ನಲ್ಲಿ ಮೊಬೈಲ್ ನಿಷೇಧಿಸಿದ ಪ್ರಶಾಂತ್ ನೀಲ್

    ‘ಸಲಾರ್’ ಸಿನಿಮಾ ಶೂಟಿಂಗ್ ನಲ್ಲಿ ಮೊಬೈಲ್ ನಿಷೇಧಿಸಿದ ಪ್ರಶಾಂತ್ ನೀಲ್

    ಮೊಬೈಲ್ ಗಳು (Mobile) ಸಿನಿಮಾ ತಂಡಕ್ಕೆ ಕೊಡಬಾರದ ಕಷ್ಟ ಕೊಡುತ್ತಿವೆ. ಕೈಯಲ್ಲಿ ಮೊಬೈಲ್ ಇದೆ ಅನ್ನುವ ಕಾರಣಕ್ಕಾಗಿ ಸಿಕ್ಕ ಸಿಕ್ಕ ಫೋಟೋ ಮತ್ತು ವಿಡಿಯೋಗಳನ್ನು ತಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿರುವ ಕಾರಣದಿಂದಾಗಿ ಸಿನಿಮಾದ ಸಿಕ್ರೇಟ್ಸ್ ಬಯಲಾಗುತ್ತಿದೆ. ಇಂತಹ ತಲೆನೋವು ತಪ್ಪಿಸಲೆಂದೇ ಪ್ರಶಾಂತ್ ನೀಲ್ (Prashant Neil) ಕಠಿಣ ಕ್ರಮ ತಗೆದುಕೊಂಡಿದ್ದಾರೆ. ಶೂಟಿಂಗ್ (Shooting) ಸೆಟ್ ಗೆ ಯಾರೇ ಬಂದರೂ, ಮೊಬೈಲ್ ತರದಂತೆ ನಿರ್ಬಂಧ ಹೇರಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ಸಲಾರ್ (Salar) ಸಿನಿಮಾದ ಪ್ರಮುಖ ದೃಶ್ಯವೊಂದರ ಫೋಟೋ ಲೀಕ್ ಆಗಿ, ಭಾರೀ ವೈರಲ್ ಆಗಿತ್ತು. ಅಲ್ಲದೇ, ಶೂಟಿಂಗ್ ಗೆ ಹಲವು ದೃಶ್ಯಗಳನ್ನು ವಿಡಿಯೋ ಮಾಡಿಯೂ ಹರಿ ಬಿಡಲಾಗಿತ್ತು. ಇದರಿಂದಾಗಿ ಸಿನಿಮಾದ ಗುಟ್ಟುಗಳು ರಟ್ಟಾಗಿದ್ದವು. ಇದನ್ನರಿತ ಪ್ರಶಾಂತ್ ನೀಲ್, ಯಾರೂ ಮೊಬೈಲ್ ತರಬಾರದು ಎಂದು ತಿಳಿಸಿದ್ದಾರೆ. ಇದು ನಟರನಿಗೂ ಅನ್ವಯ ಆಗಲಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ:`ಕಮಲಿ’ ಖ್ಯಾತಿಯ ಅಮೂಲ್ಯಗೌಡರ ಹಾಟ್ ಫೋಟೋ ವೈರಲ್

    ಕಲಾವಿದರು ಶೂಟಿಂಗ್ ಸ್ಪಾಟ್ ನಲ್ಲಿ ಮೊಬೈಲ್ ಬಳಸದಂತೆ ಮನವೊಲಿಸಿದ್ದು, ಶೂಟಿಂಗ್ ಗೆ ಬರುವಾಗ ತಮ್ಮ ಮೊಬೈಲ್ ಗಳನ್ನು ಕ್ಯಾರವಾನ್ ಗಳಲ್ಲೇ ಬಿಟ್ಟು ಬರುವಂತೆ ಹೇಳಿದ್ದಾರೆ. ಹಾಗಾಗಿ ಪ್ರಭಾಸ್ (Prabhas) ಸೇರಿದಂತೆ ಎಲ್ಲರೂ ಈ ನಿಯಮವನ್ನು ಚಾಚೂ ತಪ್ಪದೇ ಪಾಲಿಸಬೇಕಾಗಿದೆ. ಅದರಲ್ಲೂ ತಂತ್ರಜ್ಞರು ಮತ್ತು ಇತರ ಕೆಲಸಗಾರರು ಕೂಡ ಕಟ್ಟು ನಿಟ್ಟಾಗಿ ಈ ನಿಯಮವನ್ನು ಪಾಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಲವು ಶೂಟಿಂಗ್ ಸೆಟ್ ಗಳು ಕೂಡ ಇದನ್ನು ಪಾಲಿಸಿಕೊಂಡು ಬರುತ್ತಿವೆ.

    Live Tv
    [brid partner=56869869 player=32851 video=960834 autoplay=true]