Tag: Prashant Neal

  • ಕೆಜಿಎಫ್-2 ಡಿಜಾಸ್ಟರ್ ಸಿನಿಮಾ ಎಂದು ‘ಥೂ… ಥೂ..’ ಉಗಿಸಿಕೊಂಡ ಬಾಲಿವುಡ್ ನಟ

    ಕೆಜಿಎಫ್-2 ಡಿಜಾಸ್ಟರ್ ಸಿನಿಮಾ ಎಂದು ‘ಥೂ… ಥೂ..’ ಉಗಿಸಿಕೊಂಡ ಬಾಲಿವುಡ್ ನಟ

    ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ. ಬಿಡುಗಡೆಯಾದ ಒಂದೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಕೇವಲ ಗಲ್ಲಾಪೆಟ್ಟಿಗೆ ಮಾತ್ರವಲ್ಲ, ವಿಮರ್ಶಕರು ಕೂಡ ಸಿನಿಮಾವನ್ನು ಕೊಂಡಾಡಿದ್ದಾರೆ. ಆದರೆ, ಬಾಲಿವುಡ್ ನಟ ಮಾತ್ರ ಈ ಚಿತ್ರಕ್ಕೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆ. ಇದನ್ನೂ ಓದಿ : ಕನ್ನಡದಲ್ಲೇ ಕೆಜಿಎಫ್ ನೋಡಿ ಫಿದಾ ಆದ ತಲೈವಾ

    ಕನ್ನಡದ ಸಿನಿಮಾವೊಂದು ವಿಶ್ವ ಮಟ್ಟದಲ್ಲಿ ಎದೆಸೆಟೆದು ನಿಂತಾಗ, ಕೆಲವರಿಗೆ ಅದನ್ನು ತಡೆಯುವುದಕ್ಕೆ ಆಗುತ್ತಿಲ್ಲ. ಬಿಟೌನ್‍ನ ಅದೆಷ್ಟೋ ಕಲಾವಿದರು ಮತ್ತು ತಂತ್ರಜ್ಞರು ಕೆಜಿಎಫ್ ಸಿನಿಮಾದ ಮುಂದೆ ಮಂಡಿಯೂರಿ ಕೂತಿದ್ದಾರೆ. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಒಂದರ ಮೇಲೊಂದು ಟ್ವಿಟ್ ಮಾಡಿ ಚಿತ್ರವನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ ಬಾಲಿವುಡ್ ನಟ ಮಾತ್ರ ‘ಕೆಜಿಎಫ್ 2 ಡಿಜಾಸ್ಟರ್ ಸಿನಿಮಾ’ ಎಂದು ಟ್ವೀಟ್ ಮಾಡಿದ್ದಾನೆ. ಇದನ್ನೂ ಓದಿ: ಕೆಜಿಎಫ್ 2 : ಯಾವ ರಾಜ್ಯದಲ್ಲಿ ಎಷ್ಟು ಕಲೆಕ್ಷನ್? ಪಕ್ಕಾ ಲೆಕ್ಕ

    ಈ ನಟ ಹೀಗೆ ಬರೆಯುವುದು ಮೊದಲೇನೂ ಅಲ್ಲ. ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಚಿತ್ರಕ್ಕೂ ಕೂಡ ನೆಗೆಟಿವ್ ಕಾಮೆಂಟ್ ಮಾಡಿದ್ದ. ಇದೊಂದು ಕಳಪೆ ಚಿತ್ರ ಎಂದು ಹೇಳಿದ್ದು, ನಟರ ಬಗ್ಗೆಯೂ ಲೇವಡಿ ಮಾಡಿದ್ದ. ಈಗ ಕೆಜಿಎಫ್ ಸಿನಿಮಾದ ಬಗ್ಗೆಯೂ ಹಾಗೆಯೇ ಕಳಪೆಯಾಗಿಯೇ ಬರೆದಿದ್ದಾನೆ. ‘ಕೆಜಿಎಫ್ 2 ಸಿನಿಮಾ ಮೂರು ಗಂಟೆಯ ಟಾರ್ಚರ್’ ಎಂದು ಕಾಮೆಂಟ್ ಬರೆದಿದ್ದಾನೆ. ಈ ನಡೆಗೆ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಆ ನಟನಿಗೆ ‘ಥುಪಕ್’ ಅಂತ ಉಗಿದಿದ್ದಾರೆ. ಇದನ್ನೂ ಓದಿ: `ಕೆಜಿಎಫ್ 2’ಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ಅಭಿಮಾನಿ!

    ಅಷ್ಟಕ್ಕೂ ಕಾಮೆಂಟ್ ಮಾಡಿದ ನಟ ಬೇರೆ ಯಾರೂ ಇಲ್ಲ. ಈ ಹಿಂದೆ ‘ದೇಶದ್ರೋಹಿ’ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿ, ನಟಿಸಿದ ಮಹಾನುಭಾವ ಕಮಲ್ ಆರ್.ಖಾನ್. ಇವನೊಬ್ಬ ಸ್ವಯಂ ಘೋಷಿತ ವಿಮರ್ಶಕ. ಬಾಯಿಗೆ ಬಂದಂತೆ ಬರೆದು, ಕೊನೆಗೆ ಜನರ ಕಡೆಯಿಂದ ಉಗಿಸಿಕೊಳ್ಳುವ ಮಹಾನ್ ನಟ. ನೆಗೆಟಿವ್ ಆಗಿ ಪೋಸ್ಟ್ ಮಾಡುವುದು, ಆ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವುದೇ ಇವನ ಉದ್ಯೋಗವಾಗಿದೆ. ಯಾರೂ ಸೀರಿಯಸ್ ಆಗಿ ತಗೆದುಕೊಳ್ಳದೇ ಇರುವ ಕಾರಣಕ್ಕಾಗಿ ಸಿನಿಮಾಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ ಹೀಗೆ ತಲೆಕೆಟ್ಟವರಂತೆ ಬರೆಯುತ್ತಲೇ ಇರುತ್ತಾನೆ. ಇದನ್ನೂ ಓದಿ : ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಮದುವೆ ಆದ್ರಾ? ಹುಡುಗ ಯಾರು?

    ಕಮಲ್ ಈವರೆಗೂ ಏನೆಲ್ಲ ಬರೆದಿದ್ದಾನೋ ಅದನ್ನು ಓದಿಕೊಂಡು ಜನರು ಸುಮ್ಮನಿದ್ದರು. ಕೆಜಿಎಫ್ 2 ತಂಟೆಗೆ ಬರುತ್ತಿದ್ದಂತೆಯೇ ಹಿಗ್ಗಾಮುಗ್ಗ ಜಾಡಿಸಿದ್ದಾರೆ ಸಿನಿ ಪ್ರಿಯರು. ಕಮಲ್‍ ಮತ್ತೆ ಕಾಮೆಂಟ್ ಮಾಡದಂತೆ ಅವನನ್ನು ತರಾಟೆಗೆ ತಗೆದುಕೊಂಡಿದ್ದಾರೆ.

  • ಕೆಜಿಎಫ್ 2 : ಯಾವ ರಾಜ್ಯದಲ್ಲಿ ಎಷ್ಟು ಕಲೆಕ್ಷನ್? ಪಕ್ಕಾ ಲೆಕ್ಕ

    ಕೆಜಿಎಫ್ 2 : ಯಾವ ರಾಜ್ಯದಲ್ಲಿ ಎಷ್ಟು ಕಲೆಕ್ಷನ್? ಪಕ್ಕಾ ಲೆಕ್ಕ

    ಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ಈ ಹಿಂದೆ ರಿಲೀಸ್ ಆಗಿರುವ ಆರ್.ಆರ್.ಆರ್ ಸಿನಿಮಾದ ಜೊತೆ ತುಲನೆ ಮಾಡಲಾಗುತ್ತಿದೆ. ಜತೆಗೆ ಕೆಜಿಎಫ್ 2 ಸಿನಿಮಾಗೂ ಒಂದು ದಿನ ಮುಂಚೆ ಬಿಡುಗಡೆಯಾದ ಬೀಸ್ಟ್ ಸಿನಿಮಾದ ಜೊತೆಯೂ ಬಾಕ್ಸ್ ಆಫೀಸ್ ಲೆಕ್ಕಾಚಾರವನ್ನು ಹೋಲಿಕೆ ಮಾಡಲಾಗುತ್ತಿದೆ. ಇದನ್ನೂ ಓದಿ : ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕ್ರೇಜ್

    kgf 2

    ಕೆಜಿಎಫ್ 2 ಮೊದಲ ದಿನದ ಗಳಿಕೆಯು ವಿಶ್ವದಾದ್ಯಂತ ಸೇರಿ 145 ಕೋಟಿ ಎಂದು ವಿತರಕ ವಲಯ ಅಂದಾಜಿಸಲಾಗಿದೆ. ಇನ್ನೂ ಅಚ್ಚರಿಯ ಸಂಗತಿ ಎಂದರೆ, ಕರ್ನಾಟಕಕ್ಕಿಂತಲೂ ಬಾಲಿವುಡ್ ನಲ್ಲೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಅಚ್ಚರಿಗೆ ಕೆಜಿಎಫ್ 2 ಕಾರಣವಾಗಿದೆ. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್

    ದೇಶಾದ್ಯಂತ ಬಹುತೇಕ ಕಡೆ ಮೊದಲ ದಿನ ಎಲ್ಲ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಂಡಿವೆ. ಅದರಲ್ಲೂ ಕರ್ನಾಟಕದಲ್ಲಿ ಐನೂರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಕೆಜಿಎಫ್ 2 ರಿಲೀಸ್ ಆಗಿತ್ತು. ಅಷ್ಟೂ ಚಿತ್ರಮಂದಿರಗಳಲ್ಲೂ ಕಲೆಕ್ಷನ್ ಉತ್ತಮವಾಗಿಯೇ ಬಂದಿದೆ. ಹೀಗಾಗಿ ಕರ್ನಾಟಕದಲ್ಲಿ ಕೆಜಿಎಫ್ 2 ಗಳಿಕೆ ಅಂದಾಜು 40 ಕೋಟಿ ಎನ್ನಲಾಗುತ್ತಿದೆ. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಹೀಗೆ ಐದು ಭಾಷೆಗಳಲ್ಲಿ ಸಿನಿಮಾ ಏಕಕಾಲಕ್ಕೆ ಬಿಡುಗಡೆ ಆಗಿದೆ. ತಮಿಳು ಹೊರತಾಗಿ ಬಹುತೇಕ ಕಡೆ ಸಿನಿಮಾದ ಕ್ರೇಜ್ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿತ್ತು. ಅದರಲ್ಲೂ ದಕ್ಷಿಣದಲ್ಲಿ ಕನ್ನಡಕ್ಕಿಂತಲೂ ತೆಲುಗಿನಲ್ಲೇ ಅತೀ ಹೆಚ್ಚು ಹಣ ಹರಿದು ಬರಲಿದೆ ಎಂದು ವಿತರಕರ ವಲಯ ಹೇಳಿತ್ತು. ಒಟ್ಟಾರೆ ಭಾರತದಲ್ಲಿ ಹಿಂದಿಯಲ್ಲಿ ಹೆಚ್ಚು ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿತ್ತು. ಹಿಂದಿಯಲ್ಲಿ ಅಂದುಕೊಂಡಂತೆ ಹೆಚ್ಚಿನ ಮೊತ್ತವೇ ನಿರ್ಮಾಪಕರ ಜೇಬು ಸೇರಿದೆ. ಇದನ್ನೂ ಓದಿ:ಬೀಸ್ಟ್ ಸಿನಿಮಾಕ್ಕೆ ಸೆಡ್ಡು ಹೊಡೆದ ಕೆಜಿಎಫ್-2 – ಕೇರಳ, ತಮಿಳುನಾಡಿನಲ್ಲೂ ರಾಕಿಭಾಯ್ ಹವಾ

    ಕರ್ನಾಟಕದಲ್ಲಿ ಅಂದಾಜು 40 ಕೋಟಿ ಕಲೆಕ್ಷನ್ ಆಗಿದ್ದರೆ, ಕೇರಳದಲ್ಲಿ ಅಂದಾಜು 5 ಕೋಟಿ, ಆಂಧ್ರ ಮತ್ತು ತೆಲಂಗಾಣದಲ್ಲಿ ಅಂದಾಜು 25 ಕೋಟಿ, ತಮಿಳು ನಾಡಿನಲ್ಲಿ ಅಂದಾಜು 8 ಕೋಟಿ, ಹಿಂದಿಯಲ್ಲಿ ಅಂದಾಜು 45 ಕೋಟಿ ಹಾಗೂ ವಿದೇಶಗಳಿಂದ 30 ಕೋಟಿ ಹಣ ಹರಿದು ಬಂದಿದೆ ಎನ್ನುವ ಲೆಕ್ಕಾಚಾರ ಸಿಗುತ್ತಿದೆ. ಈ ಮೂಲಕ ಮೊದಲ ದಿನವೇ ಕೆಜಿಎಫ್ 2 ನೂರು ಕೋಟಿ ಕ್ಲಬ್ ಸೇರುವ ಮೂಲಕ ದಾಖಲೆ ಬರೆದಿದೆ.

    ಇದು ಕೇವಲ ವಿತರಕರಿಂದ ಪಡೆದ ಮಾಹಿತಿಯಾಗಿದ್ದು ಒಟ್ಟಾರೆ ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರವನ್ನು ಈವರೆಗೂ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ನೀಡಿಲ್ಲವಾದರೂ, ನಿರ್ಮಾಣ ಸಂಸ್ಥೆ ಹೇಳಿದ ನಂತರವೇ ಅಧಿಕೃತಗೊಳ್ಳಲಿದೆ.

  • ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ವರೆಗೂ ಯಶ್ ಅವರನ್ನು ಅಭಿಮಾನಿಗಳು ‘ರಾಕಿಂಗ್ ಸ್ಟಾರ್’ ಎಂದು ಕರೆಯುತ್ತಿದ್ದರು. ಕೆಜಿಎಫ್ ಸಿನಿಮಾ ಬಂದ ಮೇಲೆ ‘ರಾಕಿ ಭಾಯ್’ ಕೂಡ ಆದರು. ಇದೀಗ ಯಶ್ ಅವರನ್ನು ಅಭಿಮಾನಿಗಳು ‘ಬಾಸ್’ ಎಂದು ಕರೆಯುವುದಕ್ಕೆ ಶುರು ಮಾಡಿದ್ದಾರೆ. ಅಭಿಮಾನದಿಂದಲೇ ‘ಯಶ್ ಬಾಸ್’ ಎಂದು ಕರೆಯುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ‘ಬಾಸ್’ ಪದವನ್ನು ಯಶ್ ಕೂಡ ಎಂಜಾಯ್ ಮಾಡುತ್ತಾರೆ. ಅವರ ಕಾರಿನ ಸಂಖ್ಯೆ ‘8055’ ಇದನ್ನು ಸ್ಟೈಲ್ ಆಗಿ ಇಂಗ್ಲಿಷ್ ನಲ್ಲಿ ‘ಬಾಸ್’ ಎಂದು ಕಾಣುವಂತೆ ಬರೆಸಲಾಗಿದೆ. ಅಲ್ಲದೇ, ಇದೀಗ ಅವರ ಕನಸು ಕೂಡ ನನಸಾಗಿದೆ. ಅಭಿಮಾನಿಗಳು ನೆಚ್ಚಿನ ನಟನ ‘ಬಾಸ್’ ಎಂದು ಕರೆಯುವ ಮೂಲಕ ಹೊಸ ಖುಷಿಗೆ ಕಾರಣರಾಗಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

    ಕೆಜಿಎಫ್ 2 ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ‘ಯಶ್ ಬಾಸ್’ ಟ್ವಿಟರ್ ನಲ್ಲಿ ಭಾರೀ ಟ್ರೆಂಡಿಂಗ್ ಆಗಿದೆ. ಯಶ್ ಅಭಿಮಾನಿಗಳು ಏನೇ ಪೋಸ್ಟ್ ಮಾಡಿದರೂ, ಹ್ಯಾಶ್ ಟ್ಯಾಗ್ ಅನ್ನು ಯಶ್ ಬಾಸ್ ಎಂದೇ ಬರೆಯುತ್ತಿದ್ದಾರೆ. ಹಾಗಾಗಿ ಟ್ರೆಂಡಿಂಗ್ ನಲ್ಲಿ ಯಶ್ ಮೊದಲ ಸ್ಥಾನದಲ್ಲಿದ್ದಾರೆ.

  • ಕೆಜಿಎಫ್ 2 ಚಿತ್ರಕ್ಕೆ ಪೈರಸಿ ಶಾಕ್

    ಕೆಜಿಎಫ್ 2 ಚಿತ್ರಕ್ಕೆ ಪೈರಸಿ ಶಾಕ್

    ನಿನ್ನೆಯಷ್ಟೇ ‘ಕೆಜಿಎಫ್ 2’ ಚಿತ್ರತಂಡವು ಪೈರಸಿ ಬಗ್ಗೆ ಮಾತನಾಡಿತ್ತು. ಪೈರಸಿ ಕಂಡು ಬಂದರೆ, ಈ ವಿಳಾಸಕ್ಕೆ ಮತ್ತು ಫೋನ್ ನಂಬರ್ ಗೆ ಸಂಪರ್ಕಿಸಿ ಎಂದು ಪೋಸ್ಟರ್ ರಿಲೀಸ್ ಮಾಡಿತ್ತು. ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲೇ ದುರುಳರು ಕೆಜಿಎಫ್ 2 ಸಿನಿಮಾವನ್ನು ಪೈರಸಿ ಮಾಡಿದ್ದಾರೆ. ಇಡೀ ಸಿನಿಮಾ ಆನ್ ಲೈನ್ ನಲ್ಲಿ ಲಭ್ಯವಿದೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ನಿರ್ದೇಶಕ ಪ್ರಶಾಂತ್ ನೀಲ್ ನಿನ್ನೆ ಮಾತನಾಡುತ್ತಾ, ‘ಯಾರೂ ಮೊಬೈಲ್ ನಲ್ಲಿ ದೃಶ್ಯಗಳನ್ನು ಸೆರೆ ಹಿಡಿಯಬೇಡಿ. ಚಿತ್ರದ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬೇಡಿ. ಪೈರಸಿ ಮಾಡಿದ್ದಾರೆ ಎಂದು ಕಂಡು ಬಂದರೆ ,ಕೂಡಲೇ ದೂರು ನೀಡಿ. ಕೋಟಿ ಕೋಟಿ ಬಂಡವಾಳ ಸುರಿದು ಮಾಡಿರುವ ಸಿನಿಮಾವನ್ನು ಥಿಯೇಟರ್ ನಲ್ಲೇ ಬಂದು ನೋಡಿ’ ಎಂದು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

    ಪೈರಸಿ ಕಾಟ ನಿನ್ನೆ, ಮೊನ್ನೆಯದ್ದೇನೂ ಅಲ್ಲ. ಭಾರೀ ಬಜೆಟ್ ಚಿತ್ರಗಳು ರಿಲೀಸ್ ಆದಾಗ ಪೈರಸಿ ಸಾಮಾನ್ಯ ಅನ್ನುವಂತಾಗಿದೆ. ಪೈರಸಿ ಮಾಡಿದವರಿಗೆ ಕಠಿಣ ಕಾನೂನು ಕ್ರಮ ಇದ್ದರೂ, ಅದು ಹಲ್ಲು ಕಿತ್ತ ಹಾವಿನಂತಿದೆ. ಅಲ್ಲದೇ, ಪೈರಸಿ ಮಾಡುವ ಕಳ್ಳರು ಹೊರದೇಶದಿಂದ ಈ ಕೃತ್ಯವನ್ನು ಮಾಡುವುದರಿಂದ ಸುಲಭವಾಗಿ ಅವರನ್ನು ಗುರುತಿಸುವುದು ಕಷ್ಟವಾಗಿದೆ. ಈ ಕಾರಣದಿಂದಾಗಿ ಧೈರ್ಯದಿಂದ ಚಿತ್ರಗಳನ್ನು ಪೈರಸಿ ಮಾಡಲಾಗುತ್ತಿದೆ.

    ಈ ಹಿಂದೆ ಕನ್ನಡದ ಅನೇಕ ಸ್ಟಾರ್ ನಟರ ಚಿತ್ರಗಳು ಪೈರಸಿ ಆಗಿದ್ದವು. ದೂರು ಕೂಡ ನೀಡಲಾಗಿತ್ತು. ಆದರೆ, ಈವರೆಗೂ ಪೈರಸಿ ಮಾಡಿದವರ ಮೇಲೆ ಕ್ರಮ ತಗೆದುಕೊಂಡಿದ್ದು ತೀರಾ ಕಡಿಮೆ. ಕಾನೂನು ಭಯವಿಲ್ಲದ ಕಾರಣಕ್ಕಾಗಿ ಪದೇ ಪದೇ ಪೈರಸಿ ಮಾಡಲಾಗುತ್ತಿದೆ ಎನ್ನುವುದು ಸತ್ಯ. ಇದೀಗ ಕೆಜಿಎಫ್ 2 ಚಿತ್ರ ಕೂಡ ಪೈರಸಿ ದಾಳಿಗೆ ತುತ್ತಾಗಿದ್ದು, ಪೈರಸಿ ಲಿಂಕ್ ಗಳನ್ನು ತಗೆಸುವ ಪ್ರಯತ್ನಕ್ಕೆ ಮುಂದಾಗಿದೆ ಚಿತ್ರತಂಡ. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

    ಸಾಮಾಜಿಕ ಜಾಲತಾಣಗಳ ಜತೆಗೆ ಕೆಲವು ಆಪ್ ಗಳಲ್ಲೂ ಕೆಜಿಎಫ್ 2 ಸಿನಿಮಾದ ಪೈರಸಿ ಕಾಪಿ ಸಿಗುತ್ತಿದ್ದು, ಅವುಗಳಿಂದ ಲಿಂಕ್ ತಗೆಸುವುದು ಸವಾಲಿನ ಕೆಲಸವೇ ಆಗಿದೆ. ಹೀಗಾಗಿ ಹೊಂಬಾಳೆ ಫಿಲ್ಮ್ಸ್ ಪೈರಸಿಯನ್ನು ತಡೆಗಟ್ಟಲು ಒಂದು ತಂಡವನ್ನೇ ಸಿದ್ಧಮಾಡಿದೆ.

  • ಕೆಜಿಎಫ್ 2 : ಈ ಎಲ್ಲ ಸೆಲೆಬ್ರಿಟಿಗಳು ಮಧ್ಯೆ ರಾತ್ರಿಯೇ ಸಿನಿಮಾ ನೋಡಿದ್ರು

    ಕೆಜಿಎಫ್ 2 : ಈ ಎಲ್ಲ ಸೆಲೆಬ್ರಿಟಿಗಳು ಮಧ್ಯೆ ರಾತ್ರಿಯೇ ಸಿನಿಮಾ ನೋಡಿದ್ರು

    ವಿಶ್ವದಾದ್ಯಂತ ಯಶ್ ನಟನೆಯ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿದೆ. ಬಹುತೇಕ ಕಡೆ ಮಧ್ಯೆರಾತ್ರಿಯಿಂದಲೇ ಸಿನಿಮಾ ಪ್ರದರ್ಶನವಾಗಿದೆ. ಯಶ್ ಅಭಿಮಾನಿಗಳೇನೋ ಮಧ್ಯೆರಾತ್ರಿಯಿಂದಲೇ ಸಿನಿಮಾ ವೀಕ್ಷಿಸುತ್ತಿದ್ದಾರೆ. ಅವರ ಜತೆ ಕನ್ನಡದ ಅನೇಕ ಸೆಲೆಬ್ರಿಟಿಗಳು ಚಿತ್ರ ವೀಕ್ಷಣೆಗೆ ಬಂದಿರುವುದು ವಿಶೇಷ.

    ಡಾ.ರಾಜ್ ಮೊಮ್ಮಕ್ಕಳಾದ ಯುವ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ನಿರ್ದೇಶಕರಾದ ಸುನಿ, ಪವನ್ ಒಡೆಯರ್, ನಟಿ ಆಶಾ ಭಟ್, ಕೆಜಿಎಫ್ ಚಿತ್ರದಲ್ಲಿ ನಟಿಸಿರುವ ಶ್ರೀನಿಧಿ ಶೆಟ್ಟಿ, ಹರೀಶ್ ರೈ, ಅರ್ಚನಾ, ಅಯ್ಯಪ್ಪ, ಅವಿನಾಶ್, ಗರುಡ ಹೀಗೆ ಸಾಕಷ್ಟು ಕಲಾವಿದರು ಊರ್ವಶಿ ಚಿತ್ರಮಂದಿರಕ್ಕೆ ಬಂದು ಮೊದಲ ಶೋ ವೀಕ್ಷಿಸಿದ್ದಾರೆ.

    ಅಲ್ಲದೇ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ 72 ವರ್ಷದ ಕೃಷ್ಣಾಜಿರಾವ್ ಕೂಡ ತಮ್ಮ ಕುಟುಂಬ ಸಮೇತ ಸಿನಿಮಾ ವೀಕ್ಷಿಸಲು ತ್ರಿವೇಣಿ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಮೊದಲ ಭಾಗದಲ್ಲಿ ಇವರು ರಾಕಿ ರಕ್ಷಣೆಯಲ್ಲಿ ಗರುಡನ ಆಳುಗಳಿಂದ ಬಚಾವ್ ಆಗಿ ಬರುವ ಪಾತ್ರದಲ್ಲಿ ಅಭಿನಯಿಸಿದ್ದರು. ಅದು ಗಣಿಯಲ್ಲಿ ಕೆಲಸ ಮಾಡುವ ವೃದ್ಧನ ಪಾತ್ರವಾಗಿತ್ತು.

    ಈಗಾಗಲೇ ಎಲ್ಲ ಕಡೆಗಳಲ್ಲೂ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹತ್ತು ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್ ಗಳಲ್ಲಿ ಚಿತ್ರ ಬಿಡುಗಡೆ ಆಗಿದೆ. 70 ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಆಗಿ ದಾಖಲೆ ಬರೆದಿದೆ. ಯಶ್ ನಟನೆಯನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಇಂಥದ್ದೊಂದು ಕನ್ನಡ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ದಕ್ಕೆ ಕನ್ನಡ ಸಿನಿಮಾ ರಂಗದ ಬಗ್ಗೆ ಮತ್ತಷ್ಟು ಅಭಿಮಾನ ಮೂಡಿದೆ.

  • ಕೆಜಿಎಫ್ 2: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ರವೀನಾ ಟಂಡನ್?

    ಕೆಜಿಎಫ್ 2: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ರವೀನಾ ಟಂಡನ್?

    ಲವು ವರ್ಷಗಳ ನಂತರ ಕನ್ನಡ ಸಿನಿಮಾ ರಂಗಕ್ಕೆ ಬಾಲಿವುಡ್ ತಾರೆ ರವೀನಾ ಟಂಡನ್ ಅವರನ್ನು ಕರೆತಂದಿದ್ದರು ನಿರ್ದೇಶಕ ಪ್ರಶಾಂತ್ ನೀಲ್. ಕೆಜಿಎಫ್ 2 ಸಿನಿಮಾದಲ್ಲಿ ರವೀನಾ ಅವರದ್ದು ಪ್ರಮುಖ ಪಾತ್ರ ಎಂದು ಹೇಳಲಾಗಿತ್ತು. ಆದರೆ, ಆ ಪಾತ್ರ ಯಾವುದು ಎಂದು ಈವರೆಗೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಈಗ ಸಿನಿಮಾ ರಿಲೀಸ್ ಆಗಿದೆ. ರವೀನಾ ಪಾತ್ರದ ಬಗ್ಗೆ ಹಲವು ರೀತಿಯಲ್ಲಿ ಚರ್ಚೆ ನಡೆದಿವೆ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

    ಕೆಜಿಎಫ್ 2 ಸಿನಿಮಾದಲ್ಲಿ ರವೀನಾ ಟಂಡನ್ ಅವರು ರೀಮಾ ಸೇನಾ ಹೆಸರಿನ ಪಾತ್ರ ಮಾಡಿದ್ದಾರೆ. ಸಿನಿಮಾದ ಟೀಸರ್ ಬಿಟ್ಟಾಗ ಆ ಪಾತ್ರದ ಬಗ್ಗೆ ಹಲವು ರೀತಿಯಲ್ಲಿ ಕುತೂಹಲ ಮೂಡಿತ್ತು. ಅವಳು ಶಾಸಕಿಯಾ? ಮಂತ್ರಿಯಾ? ಮುಖ್ಯಮಂತ್ರಿಯಾ? ಪ್ರಧಾನಿಯಾ? ಯಾವ ವ್ಯಕ್ತಿಯನ್ನು ಆ ಪಾತ್ರ ಹೋಲುತ್ತದೆ ಹೀಗೆ ಇತ್ಯಾದಿ ಪ್ರಶ್ನೆಗಳು ಎದ್ದಿದ್ದವು. ಇದೀಗ ಎಲ್ಲ ಪ್ರಶ್ನೆಗೂ ಸಿನಿಮಾ ಉತ್ತರ ನೀಡಿದೆ. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

    ರವೀನಾ ಟಂಡನ್ ಈ ಸಿನಿಮಾದಲ್ಲಿ ಪ್ರಧಾನ ಮಂತ್ರಿಯಾಗಿ ನಟಿಸಿದ್ದಾರೆ. ಥೇಟ್ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯನ್ನು ಹೋಲುವಂತೆಯೇ ಅವರು ಪಾತ್ರವನ್ನು ಪೋಷಿಸಿದ್ದಾರೆ. ರವೀನಾ ಆಡುವ ಮಾತಿನ ಶೈಲಿ, ಅವರ ಉಡುಗೆ ತೊಡುಗೆ, ಅವರ ಹಾವ ಭಾವ ಹೀಗೆ ಎಲ್ಲವೂ ಇಂದಿರಾ ಗಾಂಧಿಯಂತೆಯೇ ಹೋಲುತ್ತದೆ. ಹಾಗಾಗಿ ಅದು ಇಂದಿರಾ ಗಾಂಧಿ ಅವರನ್ನು ಪ್ರತಿನಿಧಿಸುವ ಪಾತ್ರ ಎಂದು ಹೇಳಲಾಗುತ್ತದೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಹಾಗಂತ ಸಿನಿಮಾ ತಂಡವಾಗಲಿ ಅಥವಾ ಸ್ವತಃ ರವೀನಾ ಟಂಡನ್ ಆಗಲಿ ಈ ಕುರಿತು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಸಿನಿಮಾ ನೋಡಿದವರು ಮತ್ತು ಇಂದಿರಾ ಗಾಂಧಿ ಅವರ ಬಗ್ಗೆ ಅರಿತವರು ಈ ಪಾತ್ರವನ್ನು ಹೋಲಿಕೆ ಮಾಡುತ್ತಿದ್ದಾರೆ. ಸಿನಿಮಾ ರಿಲೀಸ್ ಆಗಿದೆ. ರವೀನಾ ಪಾತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡೂ ಆಗಿದೆ.

  • ಕೆಜಿಎಫ್ 2 ಬದಲು ಕೆಜಿಎಫ್ 1 ಪ್ರದರ್ಶನ, ಆಕ್ರೋಶಗೊಂಡ ಅಭಿಮಾನಿಗಳು

    ಕೆಜಿಎಫ್ 2 ಬದಲು ಕೆಜಿಎಫ್ 1 ಪ್ರದರ್ಶನ, ಆಕ್ರೋಶಗೊಂಡ ಅಭಿಮಾನಿಗಳು

    ಇಂದು ವಿಶ್ವದಾದ್ಯಂತ ‘ಕೆಜಿಎಫ್ ಚಾಪ್ಟರ್ 2’ ರಿಲೀಸ್ ಆಗಿದೆ. ಮಧ್ಯರಾತ್ರಿ 12 ಗಂಟೆಯಿಂದಲೇ ಅಭಿಮಾನಿಗಳು ಸಿನಿಮಾ ವೀಕ್ಷಿಸುತ್ತಿದ್ದಾರೆ. ಆದರೆ, ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಥಿಯೇಟರ್ ನಲ್ಲಿ ಅಚಾತುರ್ಯವೊಂದು ನಡೆದು ಹೋಗಿದೆ. ಅದಕ್ಕಾಗಿ ಅಭಿಮಾನಿಗಳು ಕೂಡ ಆಕ್ರೋಶಗೊಂಡಿದ್ದಾರೆ.  ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

    ವೀರೇಶ್ ಚಿತ್ರಮಂದಿರದಲ್ಲಿ ಬೆಳಗಿನ ಜಾವ 5 ಗಂಟೆಗೆ ಎರಡು ಸ್ಕ್ರೀನ್ ಗಳಲ್ಲಿ ಕೆಜಿಎಫ್ 2 ಸಿನಿಮಾ ಪ್ರದರ್ಶನವಾಗಬೇಕಿತ್ತು. ಈ ಚಿತ್ರಮಂದಿರದಲ್ಲಿ ಎರಡು ಸ್ಕ್ರೀನ್ ಗಳದ್ದು, ಅಭಿಮಾನಿಗಳು ಒತ್ತಾಯದ ಮೇರೆಗೆ ಮತ್ತು ಒಂದು ಸ್ಕ್ರೀನ್ ನಲ್ಲಿ ಟಿಕೆಟ್ ಸೋಲ್ಡೌಟ್ ಆಗಿದ್ದರಿಂದ ಮತ್ತೊಂದು ಸ್ಕ್ರೀನ್ ನಲ್ಲೂ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಹೀಗಾಗಿ ಎರಡೂ ಸ್ಕ್ರೀನ್ ನಲ್ಲೂ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಬೇಕಿತ್ತು.  ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

    ಬೆಳಗ್ಗೆ ಅಭಿಮಾನಿಗಳು 5 ಗಂಟೆಗೆ ಎರಡೂ ಸ್ಕ್ರೀನ್ ಮುಂದೆ ಜಮಾಯಿಸಿದ್ದರು. ತಮ್ಮ ತಮ್ಮ ಸೀಟ್‍ ನಲ್ಲಿ ಕುಳಿತುಕೊಂಡು ಕೆಜಿಎಫ್ ಚಾಪ್ಟರ್ 2 ಕಣ್ತುಂಬಿಕೊಳ್ಳಬೇಕು ಎನ್ನುವಷ್ಟರಲ್ಲಿ ಕೆಜಿಎಫ್ 1 ಸಿನಿಮಾ ತೆರೆಯ ಮೇಲಿತ್ತು. ಬರೋಬ್ಬರಿ ಇಪ್ಪತ್ತು ನಿಮಿಷಗಳ ಕಾಲ ಕೆಜಿಎಫ್ 1 ಪ್ರದರ್ಶನವಾಗಿದೆ. ಮೊದ ಮೊದಲು ಪ್ರೇಕ್ಷಕರು ಹೀಗೆಕೆ ಆಗುತ್ತಿದೆ ಎಂದು ಗೊಂದಲಕ್ಕೊಳಗಾದರು. ಸ್ವಲ್ಪ ಹೊತ್ತು ಮೊದಲ ಭಾಗ ತೋರಿಸಿ, ಆನಂತರ ಎರಡನೇ ಭಾಗಕ್ಕೆ ಶಿಫ್ಟ್ ಆಗುತ್ತಾರೆ ಎಂದುಕೊಂಡವರು ಅದೇ ಸಿನಿಮಾ ಮುಂದುವರೆದಿದ್ದರಿಂದ ಅಭಿಮಾನಿಗಳು ಆಕ್ರೋಶಗೊಂಡರು. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಈ ಸುದ್ದಿ ಥಿಯೇಟರ್ ಮುಖ್ಯಸ್ಥರಿಗೆ ತಿಳಿಯುತ್ತಿದ್ದಂತೆಯೇ ಇದೊಂದು ಅಚಾತುರ್ಯದಿಂದ ಆದ ಕೆಲಸ. ಸರಿ ಮಾಡಿಕೊಳ್ಳುತ್ತೇವೆ ಎಂದು ವಿನಂತಿಸಿಕೊಂಡು, ಚಾಪ್ಟರ್ 2 ರ ಪ್ರದರ್ಶನ ಮಾಡಿದರು. ಆನಂತರ ಅಭಿಮಾನಿಗಳು ಸಮಾಧಾನಗೊಂಡು ಚಿತ್ರ ವೀಕ್ಷಿಸಿದ್ದಾರೆ.

  • ಚಿಕ್ಕಮಗಳೂರಿನಲ್ಲಿ ಕೆಜಿಎಫ್ 2 ರಿಲೀಸ್ ಇಲ್ಲ: ಅಭಿಮಾನಿಗಳ ಪ್ರತಿಭಟನೆ, ಸಿ.ಟಿ ರವಿ ಭರವಸೆ

    ಚಿಕ್ಕಮಗಳೂರಿನಲ್ಲಿ ಕೆಜಿಎಫ್ 2 ರಿಲೀಸ್ ಇಲ್ಲ: ಅಭಿಮಾನಿಗಳ ಪ್ರತಿಭಟನೆ, ಸಿ.ಟಿ ರವಿ ಭರವಸೆ

    ಇಂದು ರಾತ್ರಿಯಿಂದಲೇ ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ 900ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಆದರೆ, ಚಿಕ್ಕ ಮಗಳೂರಿನಲ್ಲಿ ಮಾತ್ರ ಈ ಸಿನಿಮಾ ಪ್ರದರ್ಶನ ಕಾಣುತ್ತಿಲ್ಲ. ಹೀಗಾಗಿ ಯಶ್ ಅಭಿಮಾನಿಗಳು ನಗರದ ನಾಗಲಕ್ಷ್ಮೀ ಥಿಯೇಟರ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

    ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದ್ದರೂ, ಚಿಕ್ಕಮಗಳೂರಿನಲ್ಲಿ ಮಾತ್ರ ಯಾಕೆ ಪ್ರದರ್ಶನ ಕಾಣುತ್ತಿಲ್ಲವೆಂದು ಆಕ್ರೋಶ ವ್ಯಕ್ತ ಪಡಿಸಿದ ಯಶ್ ಅಭಿಮಾನಿಗಳು ನಾಗಲಕ್ಷ್ಮೀ ಥಿಯೇಟರ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಕೆಲ ಕಾಲ ಥಿಯೇಟ್ ಮಾಲೀಕರ ಮತ್ತು ಅಭಿಮಾನಿಗಳ ಮಾತಿನ ಸಮರವೇ ನಡೆದಿದೆ. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

    ಯಶ್ ಅಭಿಮಾನಿಗಳ ಹೋರಾಟದ ಕುರಿತು ತಿಳಿದುಕೊಂಡ ಶಾಸಕ ಸಿ.ಟಿ.ರವಿ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಥಿಯೇಟರ್ ಮಾಲೀಕರು ಮತ್ತು ವಿತರಕ ಬಳಿ ಮಾತನಾಡಿ, ನಾಳೆ ಸಿನಿಮಾ ರಿಲೀಸ್ ಆಗುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಯಶ್ ಮತ್ತು ವಿತರಕರ ಬಳಿ ಶಾಸಕ ಸಿ.ಟಿ. ರವಿ ಮಾತನಾಡಿದ್ದಾರೆ ಎನ್ನಲಾಗುತ್ತಿದ್ದು, ನಾಳೆ ಚಿಕ್ಕಮಗಳೂರಿನ ಎನ್.ಎಮ್.ಸಿ ಸರ್ಕಲ್ ಬಳಿ ಇರುವ ನಾಗಲಕ್ಷ್ಮೀ ಚಿತ್ರಮಂದಿರದಲ್ಲಿ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಲಿದೆ ಎನ್ನುತ್ತಿವೆ ಮೂಲಗಳು.

  • ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ ಕೆಜಿಎಫ್ 2 ‘ಸುಲ್ತಾನ್’ ಸಾಂಗ್

    ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ ಕೆಜಿಎಫ್ 2 ‘ಸುಲ್ತಾನ್’ ಸಾಂಗ್

    ನ್ನಡ ಚಿತ್ರರಂಗದ ಪ್ರೈಡ್ ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಚಿತ್ರ ರಿಲೀಸ್‍ಗೆ ಕೆಲವೇ ಗಂಟೆಗಳು ಬಾಕಿ. ಈಗಾಗಲೇ ರಾಕಿಭಾಯ್ ಎಂಟ್ರಿಗೆ ಕೌಂಟ್‍ಡೌನ್ ಶುರುವಾಗಿದೆ. `ಕೆಜಿಎಫ್ 2′ ಸಿನಿಮಾದ ಎರಡು ಸಾಂಗ್‍ಗಳು ರಿಲೀಸ್ ಆಗಿ ಧೂಳೆಬ್ಬಿಸಿವೆ. ‘ತೂಫಾನ್’ ಎಬ್ಬಿಸಿದ ಮೇಲೆ ‘ಗಗನ ನೀ’ ಅಂತಾ ಎಮೋಷನ್ ಹಾಡಿನಿಂದ ಸಿನಿರಸಿಕರ ಗಮನ ಸೆಳೆದಿತ್ತು. ಚಿತ್ರದ ಮತ್ತೊಂದು ಪವರ್‍ಫುಲ್ ಸಾಂಗ್ ರಿಲೀಸ್ ಆಗಿದೆ. ಈ ಹಾಡಿನ ಬೀಟು ಅಭಿಮಾನಿಗಳ ಎದೆಯಲ್ಲಿ ತಮ್ಮಟೆ ಬಾರಿಸುತ್ತಿದೆ. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

    ಮಾಸ್ಟರ್‍ಮೈಂಡ್ ಪ್ರಶಾಂತ್ ನೀಲ್ ನಿರ್ದೇಶನದ `ಕೆಜಿಎಫ್ 2′ ಚಿತ್ರದ 3ನೇ ಲಿರಿಕಲ್ ಸಾಂಗ್ ‘ಸುಲ್ತಾನ್’ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡ್ತಿದೆ. ರಣಧೀರನ ಖಡಕ್ ಎಂಟ್ರಿ ಮೈನವಿರೆಳಿಸುತ್ತಿದೆ. ಜೊತೆ ರವಿ ಬಸ್ರೂರ್ ಅವರ ಪವರ್‍ಫುಲ್ ಸಾಹಿತ್ಯ ಸಿನಿಪ್ರಿಯರನ್ನು ಇಂಪ್ರೈಸ್ ಮಾಡಿದೆ. ಯಶ್ ಗತ್ತು ಸುಲ್ತಾನ್ ಎಂಟ್ರಿಯಲ್ಲಿ ರಾರಾಜಿಸುತ್ತಿದೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ರಾಕಿಭಾಯ್ ಖಡಕ್ ಎಂಟ್ರಿ, ಪವರ್‍ಫುಲ್ ಸಾಹಿತ್ಯ, ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ. ಚಿತ್ರದ ಸುಲ್ತಾನ್ ಸಾಂಗ್ ಐದು ಭಾಷೆಯಲ್ಲಿ ರಿಲೀಸ್ ಆಗಿ ಭಾರೀ ಸೌಂಡ್. ಕೆಜಿಎಫ್ 2 ಚಿತ್ರ ಇದೇ ಎಪ್ರಿಲ್ 14ಕ್ಕೆ ತೆರೆಗೆ ಅಬ್ಬರಿಸುತ್ತಿದೆ. ಚಿತ್ರದಲ್ಲಿ ಯಶ್‍ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದು, ಪ್ರಮುಖ ಪಾತ್ರದಲ್ಲಿ ಅರ್ಚನಾ ಜೋಯಿಸ್. ರವೀನಾ ಟಂಡನ್, ಸಂಜಯ್ ದತ್, ವಸಿಷ್ಠ ಸಿಂಹ, ಪ್ರಕಾಶ್ ರಾಜ್ ಮಾಳವಿಕಾ ನಟಿಸಿದ್ದಾರೆ. ತೂಫಾನ್ ನಂತರ ಸುಲ್ತಾನ್ ಸಾಂಗ್ ಕೇಳಿನ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ರಾಕಿಭಾಯ್‍ನ ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ.

  • ಕೆಜಿಎಫ್ 2 : ಐದೂ ಭಾಷೆಯಲ್ಲೂ ಡಬ್ ಮಾಡಿದ ಏಕೈಕ ಕಲಾವಿದ ಪ್ರಕಾಶ್ ರೈ

    ಕೆಜಿಎಫ್ 2 : ಐದೂ ಭಾಷೆಯಲ್ಲೂ ಡಬ್ ಮಾಡಿದ ಏಕೈಕ ಕಲಾವಿದ ಪ್ರಕಾಶ್ ರೈ

    ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾದಲ್ಲಿ ಪ್ರಕಾಶ್ ರೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕಥೆಯು ಸಾಗುವುದೇ ಈ ಪಾತ್ರದ ಮೂಲಕ. ಈ ಪಾತ್ರದ ಬಗ್ಗೆ ಈ ಹಿಂದೆ ನಾನಾ ರೀತಿಯಲ್ಲಿ ಚರ್ಚೆಗಳು ನಡೆದವು. ಅನಂತ್ ನಾಗ್ ಅವರು ನಿರ್ವಹಿಸಿದ್ದ ಪಾತ್ರವನ್ನು ಪ್ರಕಾಶ್ ರೈ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಅನಂತ್ ನಾಗ್ ಬದಲಾಗಿ ಪ್ರಕಾಶ್ ರೈ ಅವರಿಗೆ ಈ ಪಾತ್ರವನ್ನು ಕೊಡಲಾಗಿದೆ ಎಂದೂ ಹೇಳಲಾಗಿತ್ತು. ಆದರೆ, ಈವರೆಗೂ ಸಿನಿಮಾ ತಂಡದಿಂದ ಇದಕ್ಕೆ ಉತ್ತರ ಸಿಕ್ಕಿಲ್ಲ. ಇದನ್ನು ಓದಿ: ‘ಅಣ್ಣಾವ್ರ ನಾಡು’: ಡಾ.ರಾಜ್ ಕುಮಾರ್ ನೆನೆದ ರಾಕಿಂಗ್ ಸ್ಟಾರ್ ಯಶ್

    ಈಗಾಗಲೇ ಬಿಡುಗಡೆಗೊಂಡಿರುವ ‘ಕೆಜಿಎಫ್ 2’ ಸಿನಿಮಾದ ಟೀಸರ್ ನೋಡಿದಾಗ, ಪ್ರಕಾಶ್ ರೈ ಪಾತ್ರದ ಬಗ್ಗೆ ಕೆಲವು ಅನುಮಾನಗಳು ಮತ್ತು ಕುತೂಹಲ ಮೂಡುವುದು ಸಹಜ. ಆದರೆ, ಈ ಕುತೂಹಲಕ್ಕೆ ಏಪ್ರಿಲ್ 14 ರಂದೇ ತೆರೆ ಬೀಳುತ್ತದೆ. ಆವಾಗ ಪ್ರಕಾಶ್ ರೈ ಮಾಡಿದ್ದು ಯಾವ ಪಾತ್ರ ಎನ್ನುವುದು ಗೊತ್ತಾಗಲಿದೆ. ಈ ಕುರಿತು ಸಂದರ್ಶನವೊಂದರಲ್ಲಿ ಯಶ್ ಮಾತನಾಡುತ್ತಾ, ‘ಅನಂತ್ ನಾಗ್ ಸರ್ ಲೆಜೆಂಡರಿ ನಟರು. ಅವರು ಕೆಜಿಎಫ್ ಚಿತ್ರಕ್ಕೆ ಒಂದು ಘನತೆ ತಂದುಕೊಟ್ಟಿದ್ದಾರೆ. ಹಾಗಾಗಿ ಅವರ ಕುರಿತು ನಾನು ಏನೂ ಹೇಳಲಾರೆ. ಸಿನಿಮಾ ರಿಲೀಸ್ ಆದ ಮೇಲೆ ಪ್ರಕಾಶ್ ರೈ ಅವರ ಪಾತ್ರದ ಹಿನ್ನೆಲೆ ಗೊತ್ತಾಗುತ್ತದೆ’ ಎಂದು ಹೇಳಿದ್ದಾರೆ.  ಈ ಮೂಲಕ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದ್ದಾರೆ. ಇದನ್ನೂ ಓದಿ : ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ಕಾಣಿಸಿಕೊಂಡ ಮೇಘಾ ಶೆಟ್ಟಿ

    ಈಗಾಗಲೇ ಸಿನಿಮಾ ತಂಡವೇ ಹೇಳಿರುವಂತೆ ‘ಕೆಜಿಎಫ್ 2’ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ. ಅಷ್ಟೂ ಭಾಷೆಯಲ್ಲೂ ಮೂಡಿ ಬಂದ ಚಿತ್ರಕ್ಕೆ ಕೆಲವರು ಒಂದೇ ಭಾಷೆಗೆ ತಮ್ಮ ಪಾತ್ರಕ್ಕೆ ಡಬ್ ಮಾಡಿದರೆ, ಇನ್ನೂ ಕೆಲವರು ಎರಡ್ಮೂರು ಭಾಷೆಯಲ್ಲಿ ಡಬ್ ಮಾಡಿದ್ದಾರೆ. ರಾವ್ ರಮೇಶ್ ನಾಲ್ಕು ಭಾಷೆಯಲ್ಲಿ ಡಬ್ ಮಾಡಿದರೆ, ಅತೀ ಹೆಚ್ಚು ಭಾಷೆಯಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದು ಪ್ರಕಾಶ್ ರೈ. ಅಷ್ಟೂ ಭಾಷೆಗೂ ಪ್ರಕಾಶ್ ರೈ ಅವರದ್ದೇ ಧ್ವನಿ ಇರಲಿದೆ ಎನ್ನುವುದು ವಿಶೇಷ. ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ರಾಕಿಂಗ್ ಸ್ಟಾರ್ ಯಶ್ ಭೇಟಿ

    ವಿಶ್ವದಾದ್ಯಂತ ಕೆಜಿಎಫ್ 2 ಸಿನಿಮಾ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಈಗಾಗಲೇ ವಾರಕ್ಕೂ ಮೊದಲೇ ಹಲವು ಕಡೆ ಟಿಕೆಟ್ ಸೋಲ್ಡ್‌ಔಟ್‌ ಆಗಿವೆ. ತಮಿಳು ಮತ್ತು ತೆಲುಗಿನಲ್ಲಿ ಬೆಳಗ್ಗೆ 4 ಗಂಟೆಯಿಂದಲೇ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕನ್ನಡದಲ್ಲೂ ಇಂದಿನಿಂದ ಮುಂಗಡ ಟಿಕೆಟ್‌ಗೆ ವ್ಯವಸ್ಥೆ ಮಾಡಿದ್ದು, ಇಲ್ಲಿಯೂ ದಾಖಲೆ ರೀತಿಯಲ್ಲಿ ಟಿಕೆಟ್ ಮಾರಾಟವಾಗುತ್ತಿವೆ.