ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಒಬ್ಬೊಬ್ಬರೇ ಕಲಾವಿದರು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಸರದಿ ‘ಮಿಲನ’ (Milana) ಸೀರಿಯಲ್ ನ ಹೀರೋ ಪ್ರಶಾಂತ್ ಭಾರದ್ವಾಜ್ (Prashant) ಅವರದ್ದು. ಈ ನಟ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ವೈಷ್ಣವಿ (Vaishnavi) ಜೊತೆ ಪ್ರಶಾಂತ್ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹ್ಯಾಪಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾಗಿದ್ದಾರೆ.
ಪ್ರಶಾಂತ್ ಭಾರದ್ವಾಜ್ ಅವರು ವೈಷ್ಣವಿ ಮಧುಸೂದನ್ ಅವರ ಜೊತೆ ನಿಶ್ಚಿತಾರ್ಥ (Engaged) ಮಾಡಿಕೊಂಡಿದ್ದು, ವೈಷ್ಣವಿ ಯಾರು ಎಂಬುದು ರಿವೀಲ್ ಆಗಬೇಕಿದೆ. ಅಷ್ಟೇ ಅಲ್ಲದೆ ಇದು ಅರೇಂಜ್ ಮ್ಯಾರೇಜ್? ಅಥವಾ ಲವ್ ಎನ್ನುವ ಬಗ್ಗೆ ಕೂಡ ಮಾಹಿತಿ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಗೆ ಎಲ್ಲರೂ ಶುಭಕೋರುತ್ತಿದ್ದಾರೆ. ಪ್ರಶಾಂತ್ ಜೊತೆ ಮದುವೆ ಆಗುತ್ತಿರುವ ಹುಡುಗಿಯ ಪರಿಚಯವನ್ನು ಕೇಳಿದ್ದಾರೆ. ಇದನ್ನೂ ಓದಿ:Bigg Boss Kannada 10 ಆರಂಭ- ಈ 3 ಸೀರಿಯಲ್‌ಗೆ ಗೇಟ್ ಪಾಸ್
ಒಲವೇ ಜೀವನ ಸಾಕ್ಷಾತ್ಕಾರ’, ‘ಆತ್ಮ ಬಂಧನ’, ‘ಯಜಮಾನಿ’ ಧಾರಾವಾಹಿ ಸೇರಿದಂತೆ ಸಾಕಷ್ಟು ಟಿವಿ ಕಾರ್ಯಕ್ರಮಗಳಲ್ಲೂ ಪ್ರಶಾಂತ್ ಕಾಣಿಸಿಕೊಂಡಿದ್ದಾರೆ. ತಮ್ಮದೇ ಆದ ಅಭಿಮಾನಿ ವರ್ಗವನ್ನೂ ಅವರು ಹೊಂದಿದ್ದಾರೆ. ಪ್ರಶಾಂತ್ ಅವರಿಗೆ ಈಗ ಪರಭಾಷೆಯಲ್ಲಿ ಕೂಡ ಬೇಡಿಕೆ ಇದ್ದು, ಅಲ್ಲೂ ಆ್ಯಕ್ಟಿವ್ ಆಗಿದ್ದಾರೆ.
ಮಿಲನ ಸೀರಿಯಲ್ ಮೂಲ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟ ಇದೀಗ ಹೊಸ ಬಾಳಿಗೆ ಕಾಲಿಡಲು ತಯಾರಿ ನಡೆಸಿದ್ದಾರೆ. ಸದ್ಯಕ್ಕೆ ನಿಶ್ಚಿತಾರ್ಥ ನೆರವೇರಿದ್ದು, ಸದ್ಯದಲ್ಲೇ ಮದುವೆ ಬಗ್ಗೆ ಅಪ್ ಡೇಟ್ ಹಂಚಿಕೊಳ್ಳಲಿದ್ದಾರೆ. ನೆಚ್ಚಿನ ನಟನೆ ಹೊಸ ಬದುಕಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಈಗಿನ ಕಾಲದ ಯುವಕ, ಯುವತಿಯರು ಪ್ರೀತಿಗಾಗಿ ಏನೆಲ್ಲ ಸಾಹಸಗಳನ್ನು ಮಾಡಬಹುದು ಎಂದು ಈಗಾಗಲೇ ಸಾಕಷ್ಟು ಚಲನಚಿತ್ರಗಳ ಮೂಲಕ ನಿರ್ದೇಶಕರು ಹೇಳಿದ್ದಾರೆ. ಅದೆಲ್ಲಕ್ಕಿಂತ ವಿಭಿನ್ನವಾದ, ಹೊಸ ತರಹದ ಕಥೆಯೊಂದನ್ನು ಯುವ ನಿರ್ದೇಶಕ ಸಾಗರ್ ಅವರು ಸೂರ್ಯ ಚಿತ್ರದ ಮೂಲಕ ಹೇಳುತಿದ್ದಾರೆ. ಖ್ಯಾತ ನಿರ್ದೇಶಕ ಬಿ.ಸುರೇಶ ಅವರ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಸಾಗರ್, ಮಾಸ್ ಲವ್‌ಸ್ಟೋರಿ ಇಟ್ಟುಕೊಂಡು ಸೂರ್ಯ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರೀಕರಣದ ಕೊನೆಯಹಂತ ತಲುಪಿರುವ ಈ ಸಿನಿಮಾದಲ್ಲಿ ಯುವನಟ ಪ್ರಶಾಂತ್ ನಾಯಕನಾಗಿ ನಟಿಸಿದ್ದು, ಹರ್ಷಿತಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂದಿ ಸಿನಿಮಾಸ್ ಮೂಲಕ ಬಸವರಾಜ್ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಸೂರ್ಯ ಚಿತ್ರದ ಟೀಸರ್ ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು. ನಿರ್ದೇಶಕ ಬಹದ್ದೂರ್ ಚೇತನ್ ಅವರು ಟೀಸರ್ ಬಿಡುಗಡೆಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಸಾಗರ್, ಸೂರ್ಯ ನಾಯಕನ ಹೆಸರು. ಆತ ತನ್ನ ಪ್ರೀತಿಗೋಸ್ಕರ ಯುದ್ದದ ರೀತಿಯಲ್ಲಿ ಸಮರ ಸಾರಿ ಅದನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಕಾನ್ಸೆಪ್ಟ್. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಲೇ ನಾನೊಂದು ಕಥೆ ಮಾಡಿಕೊಂಡಿದ್ದೆ, ಆ ಕಥೆಯನ್ನು ಇಷ್ಟಪಟ್ಟ ನನ್ನ ಸ್ನೇಹಿತ, ಈ ನಿರ್ಮಾಪಕರ ಬಳಿ ಮಾತನಾಡಿ ಅವರನ್ನು ಒಪ್ಪಿಸಿದರು. ಬೆಂಗಳೂರು ಸುತ್ತಮುತ್ತ ಹಾಗೂ ಪೂನಾದಲ್ಲಿ ಮಾತಿನ ಭಾಗದ ಚಿತ್ರೀಕರಣ ನಡೆಸಿದ್ದೇವೆ, ಈಗಾಗಲೇ 3 ಹಾಡುಗಳನ್ನು ಚಿತ್ರೀಕರಿಸಿದ್ದು, ಉಳಿದ 2 ಸೆಟ್ ಸಾಂಗ್ ಹಾಗೂ ಹೆಚ್‌ಎಂಟಿಯಲ್ಲಿ ಮಾಡಬೇಕೆಂದಿರುವ ಸಾಹಸ ದೃಶ್ಯದ ಚಿತ್ರೀಕರಣವಷ್ಟೇ ಬಾಕಿಯಿದೆ. ಆರ್ಮುಗಂ ರವಿಶಂಕರ್ ಅವರನ್ನು ಈವರೆಗೆ ನೋಡಿರದಂಥ ಪಾತ್ರದಲ್ಲಿ ಕಾಣಬಹುದು. ಅಲ್ಲದೆ ನಟಿ ಶ್ರುತಿ ಅವರು ಒಬ್ಬ ಡಾಕ್ಟರ್ ಜೊತೆಗೆ ಈಗಿನ ಕಾಲದ ಅಮ್ಮನಾಗೂ ಕಾಣಿಸಿಕೊಂಡಿದ್ದಾರೆ, ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿ ಅವರಿಲ್ಲಿ ಉತ್ತರ ಕರ್ನಾಟಕ ಭಾಗದ ವಿಲನ್ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ 5 ಹಾಡುಗಳಿಗೆ ಶ್ರೀಶಾಸ್ತ ಸಂಗೀತ ಸಂಯೋಜನೆ ಮಾಡಿದ್ದು, ಬಹದ್ದೂರ್ ಚೇತನ್, ಯೋಗರಾಜ ಭಟ್ ಸಾಹಿತ್ಯ ರಚಿಸಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ:ನಟಿ ಮಹಾಲಕ್ಷ್ಮಿ ಪತಿ ರವೀಂದ್ರ ಬಂಧನ
ನಾಯಕ ಪ್ರಶಾಂತ್ ಮಾತನಾಡುತ್ತ ಪೂನಾ ಫಿಲಂ ಇನ್ ಸ್ಟಿಟ್ಯೂಟ್‌ನಲ್ಲಿ ಅಭಿನಯ ಕಲಿತ ನಂತರ ಸೀರಿಯಲ್‌ಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿಕೊಂಡಿದ್ದೆ. ಸಾಗರ್ ಅವರು ಕರೆದು ನನಗೀ ಅವಕಾಶ ಕೊಟ್ಟಿದ್ದಾರೆ. ಈ ಚಿತ್ರದ ಮೂಲಕ ಮೊದಲಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದೇನೆ. ಒಬ್ಬ ಮಿಡಲ್ ಕ್ಲಾಸ್ ಹುಡುಗ, ಲವರ್ ಬಾಯ್, ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಆತ ಹೇಗೆಲ್ಲ ಹೋರಾಡುತ್ತಾನೆಂದು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ ಎಂದು ಹೇಳಿದರು. ನಾಯಕಿ ಹರ್ಷಿತಾ ಮಾತನಾಡಿ ನನ್ನದು ತುಂಬಾ ವೇರಿಯೇಶನ್ಸ್ ಇರುವ ಪಾತ್ರ, ಪ್ರೀತಿಯ ವಿಷಯದಲ್ಲಿ ಆಕೆ ಯಾವ ನಿರ್ಧಾರ ತಗೋತಾಳೆ ಅನ್ನುವುದೇ ಈ ಚಿತ್ರದ ಕಥೆ ಎಂದು ವಿವರಿಸಿದರು.
ನಿರ್ಮಾಪಕ ಬಸವರಾಜ್ ಬೆಣ್ಣೆ ಮಾತನಾಡಿ ರವಿಬೆಣ್ಣೆ ಹಾಗೂ ನಾನು ಇಬ್ಬರೂ ಸಹೋದರರು. ಬೆಳಗಾವಿಯ ರೈತ ಕುಟುಂಬದಿಂದ ಬಂದವರು. ಪೂನಾದಲ್ಲಿ ಇಂಡಸ್ಟ್ರಿ ನಡೆಸುತ್ತಿದ್ದೇವೆ. ಸಾಗರ್ ನಮ್ಮನ್ನು ಭೇಟಿಯಾಗಿ ಈ ಕಥೆ ಹೇಳಿದರು. ಹೊಸಬರಿಗೆ ಅವಕಾಶ ಕೊಡಬೇಕೆಂದು ಈ ಸಿನಿಮಾ ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು. ವಿಲನ್ ರೋಲ್ ಮಾಡಿರುವ ಪ್ರಶಾಂತ್ ಶೆಟ್ಟಿ ಮಾತನಾಡಿ ನನ್ನ ಪಾತ್ರ ರವಿಶಂಕರ್ ಅವರಜೊತೆ ಬರುತ್ತದೆ ಎಂದರು. ಛಾಯಾಗ್ರಾಹಕ ಮನುರಾಜ್ ಮಾತನಾಡಿ ಈ ಹಿಂದೆ ಮೆಲೋಡಿ ಡ್ರಾಮಾ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದೆ, ಇದು ಎರಡನೇ ಚಿತ್ರ. ಬೆಂಗಳೂರು ಸುತ್ತಮುತ್ತ ಈವರೆಗೆ 35 ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಸಿದ್ದೇವೆ ಎಂದರು. ಟಿ.ಎಸ್. ನಾಗಾಭರಣ, ಬಲ ರಾಜವಾಡಿ, ಪ್ರಸನ್ನ ಉಳಿದ ಪಾತ್ರ ವರ್ಗದಲ್ಲಿದ್ದಾರೆ
ಬಿ.ಸುರೇಶ್ ಅವರ ಬಹುತೇಕ ಚಿತ್ರಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಸಾಗರ್ ಈಗ ನಿರ್ದೇಶಕರಾಗಿದ್ದಾರೆ. ವಿಭಿನ್ನವಾದ ಮಾಸ್ ಲವ್ ಸ್ಟೋರಿ ಒಳಗೊಂಡ “ಸೂರ್ಯ” ಎಂಬ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಬ ಕಳೆದ ಸೋಮವಾರ ಮಹಾಲಕ್ಷ್ಮಿ ಲೇಔಟ್ ನ ಶ್ರೀ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಹೊಸ ಪ್ರತಿಭೆ ಪ್ರಶಾಂತ್ ಈ ಚಿತ್ರದ ನಾಯಕನಾಗಿದ್ದು, ಹರ್ಷಿತಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮುಹೂರ್ತದ ನಂತರ ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಸಾಗರ್, ಸೂರ್ಯ ನಮ್ಮ ಚಿತ್ರದ ನಾಯಕನ ಹೆಸರು. ನಾಯಕ ಪ್ರೀತಿಗೋಸ್ಕರ ಯುದ್ದವನ್ನೇ ಮಾಡಿ ಹೇಗೆ ತನ್ನ ಪ್ರೀತಿಯನ್ನು ಉಳಿಸಿಕೊಳ್ಳುತ್ತಾನೆ ಎನ್ನುವುದೇ ಸೂರ್ಯ ಚಿತ್ರದ ಕಾನ್ಸೆಪ್ಟ್. ಬೆಂಗಳೂರು ಸುತ್ತಮುತ್ತ ಮಾತಿನ ಭಾಗದ ಚಿತ್ರೀಕರಣ ನಡೆಸಿ ಹಾಡುಗಳಿಗೆ ಮಡಿಕೇರಿ, ಮೈಸೂರು, ಪೂನಾಗೆ ಹೋಗುವ ಯೋಜನೆಯಿದೆ. ಇದನ್ನೂ ಓದಿ:ಏಕಾಂಗಿಯಾಗಿ ಹನಿಮೂನ್ ಸ್ಪಾಟ್, ಬಾಲಿಗೆ ಹಾರಿದ ನಿವೇದಿತಾ ಗೌಡ
ಆರ್ಮುಗಂ ರವಿಶಂಕರ್ ಅವರನ್ನು ಈವರೆಗೆ ನೋಡಿರದಂಥ ಪಾತ್ರದಲ್ಲಿ ನೋಡಬಹುದು. ಅಲ್ಲದೆ ಶೃತಿ ಅವರು ಒಬ್ಬ ಡಾಕ್ಟರ್ ಅಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಈಗಿನ ಕಾಲದ ಅಮ್ಮನೂ ಹೌದು ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿ ಅವರು ಉತ್ತರ ಕರ್ನಾಟಕ ಶೈಲಿಯ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಮ್ಮ ಚಿತ್ರದಲ್ಲಿ ೫ ಹಾಡುಗಳಿದ್ದು ಶ್ರೀಶಾಸ್ತ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಬಹದ್ದೂರ್ ಚೇತನ್, ನಾನು ಯೋಗರಾಜ ಭಟ್ ಸಾಹಿತ್ಯ ರಚಿಸಿದ್ದೇವೆ. ಮುಂದಿನ ವಾರದಿಂದ ಶೂಟಿಂಗ್ ಹೊರಡಲಿದ್ದೇವೆ ಎಂದು ಹೇಳಿದರು. ನಂದಿ ಸಿನಿಮಾಸ್ ಮೂಲಕ ಬಸವರಾಜ್ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮನುರಾಜ್ ಈ ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ದೇಶಕ, ನಟ ಬಿ.ಸುರೇಶ ಬಳಿ ಕೆಲಸ ಮಾಡಿದ ಸಾಗರ್ (Sagar), ಇದೀಗ ಸಿನಿಮಾ ರಂಗಕ್ಕೆ ನಿರ್ದೇಶಕರಾಗಿ ಪ್ರವೇಶ ಮಾಡುತ್ತಿದ್ದಾರೆ. ಇವರ ನಿರ್ದೇಶನದಲ್ಲಿ ಬರುತ್ತಿರುವ ಚಿತ್ರಕ್ಕೆ ‘ಸೂರ್ಯ’ (Surya) ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಮತ್ತೋರ್ವ ನಾಯಕ ನಟನ ಎಂಟ್ರಿ ಆಗುತ್ತಿದ್ದು, ಸೂರ್ಯ ಚಿತ್ರದ ಮೂಲಕ ಪ್ರಶಾಂತ್ (Prashant) ಚಿತ್ರ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಇಂದು ಪ್ರಶಾಂತ್ ಅವರ ಹುಟ್ಟು ಹಬ್ಬವಾಗಿದ್ದು, ಈ ದಿನದಂದು ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಡಾಲಿ ಧನಂಜಯ್ (Dhananjay) ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ತಂಡಕ್ಕೆ ಸಾಥ್ ನೀಡಿದ್ದಾರೆ.
ನಿರ್ದೇಶಕ ಸಾಗರ್ ಈ ಹಿಂದೆ ಕಿರುತೆರೆ ಜಗತ್ತಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಇದೀಗ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಮೊದಲ ಸಿನಿಮಾದಲ್ಲೇ ಲವ್ ಸ್ಟೋರಿ ಜೊತೆಗೆ ಸಾಹಸ ಪ್ರಧಾನ ಅಂಶಗಳನ್ನು ಬೆರೆಸಿ, ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರಶಾಂತ್ ಅವರನ್ನು ಪರಿಚಯಿಸುತ್ತಿದ್ದು, ಪ್ರಶಾಂತ್ ಕೂಡ ಪಾತ್ರಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದಾರೆ. ಇದನ್ನೂ ಓದಿ:ಸೋಮಣ್ಣ – ಗುರೂಜಿ ಗೆಲುವು ನೋಡಿ, ಗಳಗಳನೆ ಅತ್ತ ಸಾನ್ಯ ಅಯ್ಯರ್
ಪಕ್ಕಾ ತಯಾರಿಯೊಂದಿಗೆ ಸಿನಿಮಾ ಶುರು ಮಾಡಿರುವ ತಂಡ, ಈ ತಿಂಗಳು ಚಿತ್ರಕ್ಕೆ ಮುಹೂರ್ತ ಸಮಾರಂಭ ನಡೆಯುತ್ತಿದ್ದು, ಅಕ್ಟೋಬರ್ ನಿಂದ ಚಿತ್ರೀಕರಣ ಆರಂಭಿಸಲಿದೆ. ಚಿತ್ರದ ಟ್ಯಾಗ್ ಲೈನ್ ‘ದಿ ಪವರ್ ಆಫ್ ಲವ್’ ಹೇಳುವಂತೆ, ಅದ್ಭುತವಾದ ಲವ್ ಸ್ಟೋರಿಯನ್ನು ಈ ಸಿನಿಮಾದಲ್ಲಿ ಹೇಳಲಿದ್ದಾರಂತೆ ನಿರ್ದೇಶಕರು. ರವಿಶಂಕರ್ (Ravi Shankar), ಶ್ರುತಿ, ಪ್ರಮೋದ್ ಶೆಟ್ಟಿ ಸೇರಿದಂತೆ ಪ್ರತಿಭಾವಂತ ಕಲಾವಿದರ ತಂಡವೇ ಸಿನಿಮಾದಲ್ಲಿದೆ.
ತಾಂತ್ರಿಕ ವರ್ಗವೂ ಇದಕ್ಕೆ ಹೊರತಾಗಿಲ್ಲ. ಕೆಜಿಎಫ್ ಸಿನಿಮಾದ ಸಿನಿಮಾಟೋಗ್ರಾಫರ್ ಭುವನ್ ಜೊತೆ ಕೆಲಸ ಮಾಡಿರುವ ಮನುರಾಜ್ ಕ್ಯಾಮೆರಾಮೆನ್ ಆಗಿದ್ದು, ಖ್ಯಾತ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ್ ಬಳಿ ಕೆಲಸ ಮಾಡಿರುವ ಶ್ರೀಸಸ್ತ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿರಲಿದೆ. ನಂದಿ ಸಿನಿಮಾಸ್ ಬ್ಯಾನರ್ ಅಡಿ ಬಸವರಾಜ್ ಬೆಣ್ಣಿ (Basavaraj Benni) ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಹಾಸನ: ನಗರಸಭೆ ಸದಸ್ಯ ಪ್ರಶಾಂತ್ ಕೊಲೆಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ನೇರವಾಗಿ ಆರೋಪಿಸಿದ್ದಾರೆ.
ನಗರಸಭೆ ಸದಸ್ಯ ಪ್ರಶಾಂತ್ ಕೊಲೆ ಹಿನ್ನೆಲೆ ಸಂಸದರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಲ್ ಇನ್ಸ್‌ಪೆಕ್ಟರ್ ರೇಣುಕಾ ಪ್ರಸಾದ್ ಮೂರು ಕೋಟಿ ಮನೆ ಕಟ್ಟಿದ್ದಾರೆ ಅಂತಾರೆ. ಅವರಿಗೆ ಹಣ ಎಲ್ಲಿಂದ ಬಂತು? ರೌಡಿಗಳ ಹೆಗಲ ಮೇಲೆ ಕೈಹಾಕಿ ಫೋಸ್ ಕೊಡುತ್ತಾರೆ. ಒಂದು ಲಾರಿಗೆ ತಿಂಗಳಿಗೆ 40 ಸಾವಿರದಂತೆ ಕಮಿಷನ್ ತೆಗೆದುಕೊಳ್ಳುತ್ತಾರೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುವ ನಂಬಿಕೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾತ್ರಿ ಅರಸೀಕೆರೆ ಸರ್ಕಲ್ ಇನ್ಸ್‌ಪೆಕ್ಟರ್‌ನನ್ನು ವಿಚಾರಣಾ ಆಫೀಸರ್ ಆಗಿ ನೇಮಕ ಮಾಡುತ್ತಾರೆ. ಅವರೇ ಹೋಗಿ ಸ್ಟೇಟ್ ಮೆಂಟ್ ಮಾಡಿಸಿಕೊಂಡು ಬರುತ್ತಾರೆ. ಈ ಗಿರಾಕಿ ಉದಯ ಭಾಸ್ಕರ್ ಹಿಂಗೇ ಬರೆದು ಕೊಡಿ ಅಂತಾರೆ. ಅವರದ್ದೇ ಸರ್ಕಲ್ ಇನ್ಸ್‌ಪೆಕ್ಟರ್, ಅವರು ಹೇಗೆ ಬರೆಸಿಕೊಂಡಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಾಸನ ಕಟ್ಟಿನಕೆರೆ ಮಾರುಕಟ್ಟೆ ಬಂದ್ – 500ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್
ಹಾಸನ ನಗರ ಹಾಗೂ ಗ್ರಾಮೀಣ ಎರಡೂ ಠಾಣೆ ಇವೆರಡು ರೌಡಿ ಎಲಿಮೆಂಟ್ಸ್ ಇದ್ದಂಗೆ. ಬೆಳಗ್ಗೆ ಎದ್ದರೆ ಊಟ-ತಿಂಡಿ, ದಿನಕ್ಕೆ ಒಂದರಿಂದ ಎರಡು ಲಕ್ಷ ಕಲೆಕ್ಟ್ ಮಾಡುತ್ತಾರೆ. ಮರಳು ದಂಧೆ ಇತರೆ ದಂಧೆಗಳಿಂದ ಹಣ ವಸೂಲಿ ಮಾಡುತ್ತಾರೆ. ಯಾವುದಾದರೂ ಖಾಲಿ ಸೈಟ್‍ಗೆ ಬೇಲಿ ಹಾಕಿಸುವುದು ನಂತರ ಅವರನ್ನು ರಾಜಿಗೆ ಕರೆಸುವುದು. ಒಂದೆರಡು ಲಕ್ಷ ಪಡೆದು ಇಬ್ಬರು ಹಂಚಿ ಕೊಳ್ಳುವುದು ಮಾಡುತ್ತಾರೆ ಎಂದು ಹಾಸನ ಡಿವೈಎಸ್‍ಪಿ ಹಾಗೂ ಪಿಐ ರೇಣುಕಾ ಪ್ರಸಾದ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಮುಖಂಡನ ಭೀಕರ ಹತ್ಯೆ – ಹಾಸನದಲ್ಲಿ ಪೊಲೀಸ್ ಸರ್ಪಗಾವಲು
ಹಾಸನದ ಎರಡು ಠಾಣೆಗಳು ದಂಧೆ ಕೋರರ ಕೈಗೆ ಸೇರಿದೆ. ಅವರು ಇಲ್ಲಿಗೆ ಪೋಸ್ಟಿಂಗ್ ಬರುವಾಗಲೇ ಹೇಗೆ ಬಂದಿದ್ದಾರೆ ಎನ್ನುವುದಕ್ಕೆ ಆಡಿಯೋ ಇದೆ. ಓರ್ವ ಪೊಲೀಸ್ ಅಧಿಕಾರಿಯಾಗಿ 18 ಕೇಸ್ ಮುಚ್ಚಿಹಾಕಿದ್ದೇನೆ ಇಂತದೇ ಪೋಸ್ಟಿಂಗ್ ಕೊಡಿ ಎಂದು ಮಾತನಾಡಿದ್ದಾರೆ. ರೇಣುಕಾ ಪ್ರಸಾದ್ ನಾಲ್ಕು ಕೋಟಿ ಮನೆ ಕಟ್ಟಿದ್ದಾರೆ ಅಷ್ಟು ಹಣ ಎಲ್ಲಿಂದ ಬರುತ್ತದೆ? ಇವರಿಬ್ಬರೂ ಕೂಡ ನಾಲ್ಕು ಐದು ಕೋಟಿ ಹಣ ಖರ್ಚುಮಾಡಿ ಮನೆ ಕಟ್ಟಿದ್ದಾರೆ. ಇದು ಹಾಸನ ಜಿಲ್ಲೆಯ ಜನರ ದುಡ್ಡು, ಮರಳಿನ ಹಾಗೂ ಮಟ್ಕ ದುಡ್ಡು ಎಂದು ಕಿಡಿಕಾರಿದ್ದಾರೆ.
ಪಿಐ ಅರೋಕಿಯಪ್ಪ, ಪಿಐ ರೇಣುಕಾ ಪ್ರಸಾದ್, ಡಿವೈಎಸ್ಪಿ ಉದಯ ಭಾಸ್ಕರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿರುವುದಾಗಿ ಎಸ್‍ಪಿ ಹೇಳಿದ್ದಾರೆ. ಈ ಸಂಬಂಧ ಏನು ಕ್ರಮ ಕೈಗೊಳ್ಳುತ್ತಾರೆ ನೋಡುತ್ತೇವೆ. ನಂತರ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಹಾಸನ: ಜೆಡಿಎಸ್ ಮುಖಂಡ ಪ್ರಶಾಂತ್ ಹತ್ಯೆಯ ಬಳಿಕ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಭದ್ರತೆಗಾಗಿ ನಗರದಲ್ಲಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರಸ್ತುತ ಪ್ರಶಾಂತ್ ಮೃತದೇಹ ಹಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿದೆ. ಈ ಹಿನ್ನೆಲೆ ಆಸ್ಪತ್ರೆ ಮತ್ತು ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಆಸ್ಪತ್ರೆ ಬಳಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುವುದು.
ಸೂಕ್ತ ಬಂದೋಬಸ್ತ್‌ಗೆ ಹೊರ ಜಿಲ್ಲೆಯಿಂದಲೂ ಪೊಲೀಸರು ಆಗಮಿಸಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ. ಈಗಾಗಲೇ ಆರೋಪಿಗಳಿಗಾಗಿ ಚುರುಕಿನಿಂದ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚಿನ್ನಿದಾಂಡು ಆಟದಿಂದ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ
ಪ್ರಶಾಂತ್ ಅವರು ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರಿಯಾಗಿದ್ದರು. ಈ ಹಿನ್ನೆಲೆ ಪ್ರಶಾಂತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಹಾಸನ ಕಟ್ಟಿನಕೆರೆ ಮಾರುಕಟ್ಟೆ ಬಂದ್ ಮಾಡಲಾಗಿದೆ.
ಕಳೆದ ವಾರ ಕಿಚ್ಚ ಸುದೀಪ್ ಅರವಿಂದ್‍ಗೆ ದಿವ್ಯಾ ಉರುಡುಗ ಹೇರ್ ಕಟ್ ಮಾಡುವಂತೆ ಟಾಸ್ಕ್ ನೀಡಿದ್ದರು. ಅದರಂತೆ ಅರವಿಂದ್ ದಿವ್ಯಾ ಉರುಡುಗಗೆ ಹೇರ್ ಕಟ್ ಮಾಡಿದ್ದಾರೆ.
ದಿವ್ಯಾ ಉರುಡುಗಗೆ ಹೇರ್ ಕಟ್ ಮಾಡಲು ಬೇಕಾದ ಸಾಮಾಗ್ರಿಗಳನ್ನು ಬಿಗ್‍ಬಾಸ್ ಅರವಿಂದ್‍ಗೆ ಕಳುಹಿಸಿಕೊಟ್ಟಿದ್ದಾರೆ. ಈ ವೇಳೆ ದಿವ್ಯಾ ಉರುಡುಗ ಬಿಗ್‍ಬಾಸ್ ಎಂದು ಗೋಳಾಡುತ್ತಾ ಬಾತ್ ರೂಂ ಏರಿಯಾಗೆ ಹೋಗುತ್ತಾರೆ. ನಂತರ ಅರವಿಂದ್ ಡಿಯುಗೆ ಕ್ರಾಫ್ ತೆಗೆದು ತಲೆ ಬಾಚಲು ಶುರು ಮಾಡುತ್ತಾರೆ. ಈ ಮಧ್ಯೆ ದಿವ್ಯಾ ಉರುಡುಗ ನನಗೆ ಯಾವ ಭಯ ಕೂಡ ಇಲ್ಲ. ನೀವು ಚೆನ್ನಾಗಿ ಹೇರ್ ಕಟ್ ಮಾಡುತ್ತೀರಾ ಎಂಬ ನಂಬಿಕೆ ಇದೆ ಎಂದು ಧೈರ್ಯ ತುಂಬುತ್ತಾರೆ.
ಈ ನಡುವೆ ಹೇರ್ ಕಟ್ ಮಾಡುವ ವೇಳೆ ಜೊತೆಗಿದ್ದು, ರೇಗಿಸುತ್ತಿದ್ದರೆ ಮಜಾವಾಗಿರುತ್ತಿತ್ತು ಎಂದು ಮಂಜು ಪ್ರಶಾಂತ್ ಬಳಿ ಮಾತನಾಡುತ್ತಿರುವಾಗವಾಗ, ನಾನು ಸಹಜವಾಗಿ ನಾವೆಲ್ಲರೂ ಜೊತೆಯಾಗಿದ್ದರೆ, ಡಿಸ್ಟರ್ಬ್ ಆಗಿ ಬಿಡುತ್ತೀರಾ ಎಂದು ಹೇಳಿದೆ. ಅದನ್ನೇ ಅವರು ಗಂಭೀರವಾಗಿ ತೆಗೆದುಕೊಂಡು ನಾವಿಬ್ಬರೇ ಹೇರ್ ಕಟ್ ಮಾಡಿಕೊಂಡು ಬರುತ್ತೇವೆ ಯಾರು ಇರಬೇಡಿ ಅಂತ ಹೇಳಿದ್ರು ಎಂದು ಹೇಳಿದ್ದಾರೆ.
ಬಳಿಕ ಅರವಿಂದ್‍ಗೆ ಕೂದಲನ್ನು ಹೇಗೆ ಕ್ರಾಫ್ ತೆಗೆದು, ಹೇಗೆ ಕಟ್ ಮಾಡಬೇಕು ಎಂದು ದಿವ್ಯಾ ಉರುಡುಗ ಗೈಡ್ ಮಾಡುತ್ತಾ ಹೋಗುತ್ತಾರೆ, ಅದರಂತೆ ಅರವಿಂದ್ ಮಿರರ್ ಮುಂದೆ ಹೇರ್ ಕಟ್ ಮಾಡಲು ಆರಂಭಿಸುತ್ತಾರೆ. ಈ ವೇಳೆ ಕೂದಲು ಕಟ್ ಮಾಡುವ ಎಕ್ಸ್ ಪಿರಿಯನ್ಸ್ ಹೇಗಿದೆ ಎಂಬ ದಿವ್ಯಾ ಪ್ರಶ್ನೆಗೆ ಅರವಿಂದ್ ಒಂದು ರೀತಿ ಭಯ ಆಗುತ್ತಿದೆ. ನಮ್ಮದಾದರೆ ಹೆಚ್ಚು ಕಡಿಮೆಯಾದರೆ ಒಂದೇ ಬಾರಿ ಎಲ್ಲಾ ಹೇರ್‍ನನ್ನು ಸುಲಭವಾಗಿ ಕಟ್ ಮಾಡಿಬಿಡಬಹುದು. ಆದರೆ ನಿಮ್ಮದು ಆ ರೀತಿಯಲ್ಲ ಎಂದು ಫ್ರಂಟ್ ಕಟ್ ಹಾಗೂ ವೀ ಶೆಪ್ ಹೇರ್ ಕಟ್ ಮಾಡಿದ್ದಾರೆ.
ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಈ ವಾರ ಸೋತ ತಂಡದ ಸದಸ್ಯರಿಗೆ ಬಿಗ್‍ಬಾಸ್ ಡಿಫರೆಂಟ್ ಶಿಕ್ಷೆಯನ್ನು ನೀಡುತ್ತಿದ್ದಾರೆ. ಸದ್ಯ ಏಳು ಬೀಳು ಟಾಸ್ಕ್‌ನಲ್ಲಿ ಸೋತ ವಿಜಯಯಾತ್ರೆ ತಂಡದ ಇಬ್ಬರು ಸದಸ್ಯರು ನಿಂಗೈತೆ ಇರು ತಂಡದ ಎಲ್ಲಾ ಸದಸ್ಯರಿಗೆ ಊಟ ಮಾಡಿಸಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದಾರೆ.
ಅದರಂತೆ ವೈಷ್ಣವಿ ಹಾಗೂ ಪ್ರಶಾಂತ್ ಸಂಬರಗಿ ನಿಂಗೈತೆ ಇರು ತಂಡದ ಎಲ್ಲಾ ಸದಸ್ಯರಿಗೂ ಊಟಮಾಡಿಸಿದ್ದಾರೆ. ಆದರೆ ಈ ಎಲ್ಲಾ ಸದಸ್ಯರಲ್ಲಿ ಮಂಜುಗೆ ಊಟ ಮಾಡಿಸಲು ವೈಷ್ಣವಿ ಹಾಗೂ ಪ್ರಶಾಂತ್ ಸಿಕ್ಕಾಪಟ್ಟೆ ಸರ್ಕಸ್ ಮಾಡಿದ್ದಾರೆ.
ತಮ್ಮ ಚೇಷ್ಟೆ, ತಮಾಷೆ ಹಾಗೂ ತುಂಟತನದಿಂದಲೇ ಬಿಗ್ ಮನೆಯ ಸ್ಪರ್ಧಿಗಳಿಗೆ ಮನರಂಜನೆ ನೀಡುವ ಮಂಜುಗೆ, ವೈಷ್ಣವಿ ಊಟ ಮಾಡಿಸುವ ವೇಳೆ ನನಗೆ ಇನ್ನು ಸ್ವಲ್ಪ ಉಪ್ಪು ಬೇಕಿತ್ತು ಎಂದು ಸತಾಯಿಸುತ್ತಾರೆ. ಆಗ ವೈಷ್ಣವಿ ಕೊಡುವುದಿಲ್ಲ ಎಂದು ಸ್ವಲ್ಪ, ಸ್ವಲ್ಪವೇ ಅನ್ನ ತಿನ್ನಿಸುತ್ತಾರೆ. ಆಗ ಮಂಜು ಬೆಳಗ್ಗೆ ತನಕ ನಿಧಾನವಾಗಿ ತಿನ್ನಿಸುತ್ತಾ ಎಂದು ಅಣುಕಿಸಿದ್ದಾರೆ. ನಂತರ ಮತ್ತೊಂದು ತುತ್ತು ಊಟ ತಿನ್ನಿಸಲು ಬಂದ ವೈಷ್ಣವಿಗೆ ಇರು ಇನ್ನೂ ಅಗೀತಾ ಇದ್ದೀನಿ, ಗ್ರೈಂಡ್ ಆಗಬೇಕು ಎಂದು ಕಾಯಿಸುತ್ತಾರೆ. ನನ್ನ ಜಾತಕದಲ್ಲಿತ್ತು ನೀನು ಒಂದು ದೊಡ್ಡ ಟಾಲ್ ಹೀರೋಯಿನ್ ಕೈನಲ್ಲಿ ಊಟ ಮಾಡಿಸಿಕೊಳ್ಳುತ್ತೀಯಾ ಎಂದು ಹೇಳಿದ್ದರು. ಮೊನ್ನೆ ಒಬ್ಬರಿಗೆ ಬಟ್ಟೆ ಬಿಚ್ಚಿಸಿ ಕುಣಿಸಿದ್ದೆ, ಇವತ್ತು ಅದೇ ವ್ಯಕ್ತಿ ನನಗೆ ಊಟ ಕೂಡ ಮಾಡಿಸುತ್ತಿದ್ದಾರೆ ಎಂದು ರೇಗಿಸಿದ್ದಾರೆ.
ನಂತರ ಪ್ರಶಾಂತ್ ಮಂಜುಗೆ ಊಟ ಮಾಡಿಸಲು ಬಂದಾಗ, ಇಲ್ಲಿ ಕುರೋಣ್ವಾ ಅಥವಾ ಗಾರ್ಡನ್ ಏರಿಯಾದಲ್ಲಿ ಕುರೋಣ್ವಾ ಎಂದಾಗ ಪ್ರಶಾಂತ್ ನೀನು ಎಲ್ಲಿ ಹೇಳುತ್ತಿಯಾ ಅಲ್ಲಿ, ಮಗುಗೆ ಹೊಟ್ಟೆ ತುಂಬಬೇಕು ಅಷ್ಟೇ ಎಂದು ಊಟ ಮಾಡಿಸುತ್ತಾರೆ. ಈ ವೇಳೆ ಪ್ರಶಾಂತ್ ಒಂದು ಊರಿನಲ್ಲಿ ಮಂಜು ಎಂಬ ಹುಡುಗ ಇದ್ನಂತೆ. ಅವನು ತುಂಬಾ ತುಂಟ ಅಂತೆ, ಅವನ ತುಂಟತನಕ್ಕೆ ಮನೆ ಮಂದಿಯೆಲ್ಲಾ ಕಣ್ಣೀರು ಹಾಕುತ್ತಿದ್ರಂತೆ ಎಂದು ಕಥೆ ಹೇಳಲು ಆರಂಭಿಸುತ್ತಾರೆ. ಆಗ ಮಂಜು ನನಗೆ ನನ್ನ ದೊಡ್ಡಪ್ಪನೇ ನೆನಪಾಗುತ್ತಿದ್ದಾರೆ, ನನಗೆ ಸಾಕು ಎಂದು ರೇಗಿಸುತ್ತಾ, ವೈಷ್ಣವಿ ಹಾಗೂ ಪ್ರಶಾಂತ್‍ಗೆ ಮನೆಯೆಲ್ಲಾ ಓಡಾಡಿಸುತ್ತಾ, ಸೋಫಾ ಮೇಲೆ ಉರುಳಾಡುತ್ತಾ ಆಟ ಆಡಿಸಿದ್ದಾರೆ. ಇದನ್ನೂ ಓದಿ:ಎಲ್ಲರೆದುರು ಸಿಟ್ಟಿನಿಂದ ಬೈಯ್ಯೋದು ಎಷ್ಟು ಸರಿ – ಮಂಜು ವಿರುದ್ಧ ದಿವ್ಯಾ ಅಸಮಾಧಾನ
ಬಿಗ್‍ಬಾಸ್ ಮನೆಯಲ್ಲಿ ಕುಚುಕು ಗೆಳೆಯರಾಗಿದ್ದ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಮಧ್ಯೆ ಈ ವಾರ ಬೆಂಕಿಯಂತೆ ಕಾದಾಟ ನಡೆದಿದ್ದು, ಈ ಕುರಿತಂತೆ ಸುದೀಪ್‍ರವರು ಚಕ್ರವರ್ತಿ ಹಾಗೂ ಪ್ರಶಾಂತ್‍ರವರಿಗೆ ವಾರ್ನ್ ಮಾಡಿದ್ದಾರೆ.
ಶನಿವಾರದ ಪಂಚಾಯತಿಕಟ್ಟೆಯಲ್ಲಿ ವೇದಿಕೆ ಮೇಲೆ ಮನೆಯ ಸ್ಪರ್ಧಿಗಳ ತಪ್ಪುಗಳನ್ನು ತಿಳಿಸಿ ಬುದ್ಧಿ ಹೇಳಿದ ಸುದೀಪ್, ಪ್ರಶಾಂತ್ ಹಾಗೂ ಚಕ್ರವರ್ತಿ ಇಬ್ಬರು ಕೋವಿಡ್ ಸಮಯದಲ್ಲಿ ಮಾತುಗಳಿಗೂ ಸ್ಯಾನಿಟೈಸರ್ ಬಳಸುವುದು ನನ್ನ ಅನಿಸಿಕೆ. ಮಾತನಾಡುವುದು, ಜಗಳ ಮಾಡುವುದು, ಧ್ವನಿ ಎತ್ತುವುದು ತಪ್ಪಲ್ಲ. ಅಭಿಪ್ರಾಯವನ್ನು ಯಾವ ರೀತಿ ವ್ಯಕ್ತಪಡಿಸುತ್ತೇವೆ ಅದು ಎಲ್ಲರ ವ್ಯಕ್ತಿತ್ವವನ್ನು ತಿಳಿಸುತ್ತದೆ. ನೀವು ಬಳಸುವ ಪದಗಳನ್ನು ಕಟ್ ಮಾಡಿ ಹಾಕಲು ಆಗುವುದಿಲ್ಲ. ಏನು ಬರುತ್ತದೆ ಅದನ್ನು ತೋರಿಸಬೇಕಾಗುತ್ತದೆ. ಆದರೆ ಬೀಪ್, ಬೀಪ್ ಎಂದು ಹಾಕಿದರೆ ಟಿವಿಯಲ್ಲಿ ಹೇಗೆ ಕಾಣಿಸಬಹುದು. ನಾವು ಬೀಪ್ ಯಾಕೆ ಹಾಕಿರಬಹುದು ಎಂದು ಯೋಚಿಸಿ ಎಂದು ತಿಳಿ ಹೇಳಿದ್ದಾರೆ.
ಪ್ರಶಾಂತ್ ಹಾಗೂ ಕೆ.ಪಿ ಅರವಿಂದ್‍ರವರ ನಡುವೆ ಅಡುಗೆ ಮನೆಯಲ್ಲಿ ನಡೆದ ವಾದ-ವಿವಾದ ಬಗ್ಗೆ ಮಾತನಾಡಿದ ಸುದೀಪ್‍ರವರು, ನಿಮ್ಮಿಬ್ಬರ ನಡುವೆ ಕೋಪ-ತಾಪ ಇತ್ತು, ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ನನ್ನ ಪ್ರಕಾರ ನಿಮ್ಮಿಬ್ಬರ ನಡುವೆ ಜಗಳ ನಡೆಯುವ ಅವಶ್ಯಕತೆ ಇರಲಿಲ್ಲ. ಬಿಗ್‍ಬಾಸ್ ಮನೆಯಲ್ಲಿ ವೈಯಕ್ತಿಕ ವಿಚಾರಗಳು ಬೇಡ. ಪ್ರಶಾಂತ್ ಈ ವೇಳೆ ಕಿರುಚಾಡುವ ಅವಶ್ಯಕತೆ ಇತ್ತ? ನೀವು ನಡೆದುಕೊಂಡಿದ್ದು ನೋಡಿ ನಿಮಗೆ ಏನಾದರೂ ಹೆಚ್ಚು-ಕಡಿಮೆಯಾಗುತ್ತದೆಯೋ ಎಂದು ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳು ನೋಡಿ ಭಯಪಟ್ಟಿದ್ದರು. ನಿಮ್ಮನ್ನು ಈ ಮನೆಯಲ್ಲಿ ಹೀಗೆ ನೋಡುತ್ತಿರಲು ಕಾರಣವನ್ನು ಬಹಳ ಸರಳವಾಗಿ ಹೇಳುತ್ತೇನೆ. ಉದಾಹರಣೆ ತೋಳ ಬಂತು ತೋಳ ಎಂಬ ಕಥೆಯನ್ನು ನೆನಪಿಸಿದ್ದಾರೆ. ಇದನ್ನೂ ಓದಿ: ಎಷ್ಟು ಸಲ ಬೀಪ್ ಮಾಡುವುದು?- ಚಕ್ರವರ್ತಿಗೆ ಕಿಚ್ಚ ಸುದೀಪ್ ಕ್ಲಾಸ್