Tag: prasada

  • ಸತ್ಯನಾರಾಯಣ ದೇವರ ಪ್ರಸಾದದಿಂದ ನಾನು ಜನಿಸಿದ್ದೆ ಎಂದಿದ್ದ ಸರೋಜಾದೇವಿ

    ಸತ್ಯನಾರಾಯಣ ದೇವರ ಪ್ರಸಾದದಿಂದ ನಾನು ಜನಿಸಿದ್ದೆ ಎಂದಿದ್ದ ಸರೋಜಾದೇವಿ

    ನಾನು ಸತ್ಯನಾರಾಯಣ (Satyanarayan Puja) ದೇವರ ಪ್ರಸಾದದಿಂದ (Prasada) ಜನಿಸಿದ್ದೆ. ಈ ಕಾರಣಕ್ಕೆ ನನ್ನ ತಾಯಿಗೆ ನಾನು ಅಂದರೆ ಬಹಳ ಪ್ರೀತಿ ಎಂದು ಬಿ ಸರೋಜಾದೇವಿ(87) ಹೇಳಿದ್ದರು.

    ಹೌದು. ಬಹುಭಾಷಾ ನಟಿಯಾಗಿರುವ ಸರೋಜಾದೇವಿ (B Saroja Devi ) ಅವರು ಇಂದು ವಿಧಿವಶರಾಗಿದ್ದಾರೆ. 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದ ಇವರು ಕನ್ನಡ ಚಿತ್ರರಂಗದಲ್ಲಿ ʼಅಭಿನಯ ಸರಸ್ವತಿʼ ಎಂದೇ ಹೆಸರು ಪಡೆದಿದ್ದರು.

    ಸರೋಜಾದೇವಿ ಅವರ ಬಗ್ಗೆ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಸಾಕ್ಷ್ಯಚಿತ್ರವನ್ನು ತಯಾರಿಸಿತ್ತು. ಈ ಸಾಕ್ಷ್ಯಚಿತ್ರದಲ್ಲಿ ಅವರು ತಮ್ಮ ಜೀವನದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ:1 ಲಕ್ಷ ಹಣ, ಉಂಗುರ ನೀಡಿ ಕಲಾವಿದರನ್ನು ಸನ್ಮಾನಿಸಿ ಪ್ರಚಾರದಿಂದ ದೂರ ಇರುತ್ತಿದ್ರು : ಗಿರಿಜಾ ಲೋಕೇಶ್

    ಸರೋಜಾದೇವಿ ಹೇಳಿದ್ದೇನು?
    ನನ್ನ ತಾಯಿ ರುದ್ರಮ್ಮ ನಾಲ್ಕನೇಯ ಬಾರಿ ಗರ್ಭವತಿಯಾಗಿದ್ದರು. ಡೆಲಿವರಿ ಸಮಯ ಹತ್ತಿರ ಬಂದಾಗ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಆ ಸಂದರ್ಭದಲ್ಲಿ ನಮ್ಮ ಮನೆಯ ಹತ್ತಿರದಲ್ಲಿ ಸತ್ಯನಾರಾಯಣ ಪೂಜೆ ನಡೆಯುತ್ತಿತ್ತು.

    ನನ್ನ ತಾಯಿ ಹೊಟ್ಟೆನೋವಿನಿಂದ ಬಳಲುವುದನ್ನು ನೋಡಿ ನೆರೆ ಮನೆಯವರು ದೊನ್ನೆಯಲ್ಲಿ ಸತ್ಯನಾರಾಯಣ ದೇವರ ಸಜ್ಜಿಗೆ ಪ್ರಸಾದವನ್ನು ನೀಡಿದರು. ಸಜ್ಜಿಗೆ ಪ್ರಸಾದವನ್ನು ತಾಯಿ ಸೇವಿಸಿದ ಕೆಲ ಸಮಯದಲ್ಲಿ ಹೆಣ್ಣು ಮಗುವಿಗೆ ಜನನ ನೀಡಿದರು. ಇದನ್ನೂ ಓದಿ: ಕೆಲಸಕ್ಕೆ ಬಾರದವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ನಟಿಯೆಂದು ಹೇಳ್ಕೊತಾರೆ, ಇವ್ರು ಇದನ್ನೆಲ್ಲ ಮಾಡ್ಲೇ ಇಲ್ಲ ರಾಜೇಂದ್ರ ಸಿಂಗ್ ಬಾಬು

    ಮೊದಲ ಮೂರು ಹೆಣ್ಣು ಮಕ್ಕಳೇ  ಆಗಿದ್ದರಿಂದ ಸಂಬಂಧಿಕರು ನಾಲ್ಕನೇಯ ಹೆಣ್ಣು ಮಗುವನ್ನು ಯಾರಿಗಾದರೂ ಕೊಡು ಎಂದು ತಾಯಿಗೆ ಹೇಳಿದ್ದರು. ಆದರೆ ತಾಯಿ ನನ್ನನ್ನು ಯಾರಿಗೆ ಕೊಡಲಿಲ್ಲ. ನನ್ನ ಬಹಳ ಪ್ರೀತಿಯಿಂದ ಸಾಕಿದ್ದರು. ಅಂದು ನನಗೆ ಬಹಳ ಪ್ರೋತ್ಸಾಹ ನೀಡಿದ್ದರಿಂದ ನಾನು ಕಲಾವಿದೆಯಾದೆ ಎಂದು ಹೇಳಿದ್ದರು.

    ಬಹಳ ದೈವ ಭಕ್ತೆಯಾಗಿದ್ದ ಸರೋಜಾದೇವಿ ಅವರು ಪ್ರತಿನಿತ್ಯ ಬೆಳಗ್ಗೆ ಎದ್ದು ಪೇಪರ್‌ ಓದುತ್ತಿದ್ದರು. ನಂತರ ಸ್ನಾನ ಮಾಡಿ ಪೂಜೆ ಮಾಡಿ ತಿಂಡಿ ತಿನ್ನುತ್ತಿದ್ದರು. ಇಂದು ಸ್ನಾನ ಮಾಡಿ ಪೂಜೆ ಮಾಡಿದ ಬಳಿಕ ಬೆಳಗ್ಗೆ 9 ಗಂಟೆಯ ವೇಳೆಗೆ ಟಿವಿ ಆನ್‌ ಮಾಡಿದ್ದರು. ಈ ವೇಳೆ ಅವರು ತುಂಬಾ ಸುಸ್ತಾಗಿದ್ದರು. ಅರೆಪ್ರಜ್ಞಾವಸ್ಥೆ ಸ್ಥಿತಿಗೆ ಹೋದ ಕೂಡಲೇ ಅವರನ್ನು ಮಲ್ಲೇಶ್ವರದಲ್ಲಿರುವ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಅವರು ಮೃತಪಟ್ಟಿದ್ದರು.

  • ದೇವಾಲಯಗಳ ಪ್ರಸಾದ ಡೋರ್ ಡೆಲಿವರಿ ಸ್ಕೀಂ ಜಾರಿಗೆ ಮುಂದಾದ ಮುಜರಾಯಿ ಇಲಾಖೆ

    ದೇವಾಲಯಗಳ ಪ್ರಸಾದ ಡೋರ್ ಡೆಲಿವರಿ ಸ್ಕೀಂ ಜಾರಿಗೆ ಮುಂದಾದ ಮುಜರಾಯಿ ಇಲಾಖೆ

    ಬೆಂಗಳೂರು: ರಾಜ್ಯದ ಪ್ರತಿ ದೇವಸ್ಥಾನದ (Temple) ಪ್ರಸಾದವನ್ನು (Prasada) ಭಕ್ತರ ಮನೆ ಬಾಗಿಲಿಗೆ ತಲುಪಿಸಲು ಮುಜರಾಯಿ ಇಲಾಖೆ (Muzrai Department) ಮುಂದಾಗಿದೆ.

    ಮುಜರಾಯಿ ಇಲಾಖೆ ಹೊಸ ತಂತ್ರಜ್ಞಾನವನ್ನ ಅಳವಡಿಸಿಕೊಂಡು ರಾಜ್ಯದ ಜನರಿಗೆ ಸೇವೆ ನೀಡಲು ಯೋಜನೆ ರೂಪಿಸಿದೆ. ಈಗಾಗಲೇ ಆನ್‍ಲೈನ್ ಸೇವೆ, ಬುಕ್ಕಿಂಗ್ ಸೇವೆ ಜಾರಿಯಾಗಿದೆ. ಇನ್ನೂ ದೇವಾಲಯಗಳ ಪ್ರಸಾದವನ್ನು ಡೋರ್ ಡೆಲಿವರಿ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಆನ್‍ಲೈನ್‍ನಲ್ಲಿ ಕರ್ನಾಟಕ ರಾಜ್ಯವ್ಯಾಪಿ ಇರುವ ಯಾವುದೇ ದೇವಸ್ಥಾನ ಪ್ರಸಾದವನ್ನು ಆನ್‍ಲೈನಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ ಪ್ರಸಾದ ತಂದು ಕೊಡುವ ಯೋಜನೆ ಶೀಘ್ರದಲ್ಲೇ ಜಾರಿಗೆ ತರಲು ಯೋಜನೆ ರೂಪಿಸಲಾಗುತ್ತಿದೆ.

    ಪ್ರಸಾದ ನೀಡುವ ಯೋಜನೆ ಜಾರಿಗೆ ಅಂಚೆ ಇಲಾಖೆ ಜೊತೆ ಮಾತುಕತೆ ಮಾಡಲಾಗಿದೆ. ಖಾಸಗಿ ಕಂಪನಿಗಳ ಜೊತೆ ಮಾತುಕತೆ ನಡೆಯುತ್ತಿದೆ. ಪ್ರಸಾದದ ದರ ಹಾಗೂ ಅದರ ಜೊತೆಗೆ ಡೆಲಿವರಿ ದರ ಸೇರಿಸಿ ಮನೆ ಬಾಗಿಲಿಗೆ ಪ್ರಸಾದ ನೀಡುವ ದರ ಫಿಕ್ಸ್ ಮಾಡಲು ಇಲಾಖೆ ಮುಂದಾಗಿದೆ. ಅಧಿಕಾರಿಗಳು ಸಚಿವರ ಜೊತೆ ಚರ್ಚೆ ಮಾಡಿ ಶೀಘ್ರದಲ್ಲೇ ಜಾರಿ ಮಾಡಲಿದ್ದಾರೆ.

    ಮನೆ ಬಾಗಿಲಿಗೆ ದೇವಾಲಯಗಳ ಪ್ರಸಾದ ಯೋಜನೆ ಜಾರಿ ಆದರೆ ಜನ ಮನೆಯಲ್ಲೆ ಕುಳಿತು ತಮ್ಮ ನೆಚ್ಚಿನ ದೇವರ ಪ್ರಸಾದವನ್ನ ಸ್ವೀಕರಿಸಬಹುದು. ಈ ಯೋಜನೆಯ ಮಾನದಂಡಗಳು ಏನಾಗಿರಲಿದೆ ಎಂಬುದನ್ನ ಕಾದು ನೋಡಬೇಕಿದೆ.

  • ಜಾತ್ರೆಯ ಪ್ರಸಾದ ಸೇವಿಸಿ 46 ಮಂದಿ ಅಸ್ವಸ್ಥ, ಐವರ ಸ್ಥಿತಿ ಗಂಭೀರ!

    ಜಾತ್ರೆಯ ಪ್ರಸಾದ ಸೇವಿಸಿ 46 ಮಂದಿ ಅಸ್ವಸ್ಥ, ಐವರ ಸ್ಥಿತಿ ಗಂಭೀರ!

    ಬೆಳಗಾವಿ: ಪ್ರಸಾದ ಸೇವಿಸಿ 46 ಮಂದಿ ಅಸ್ವಸ್ಥರಾಗಿದ್ದು, ಐವರ ಸ್ಥಿತಿ ಗಂಭೀರವಾದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿ ಭೀರೇಶ್ವರ ಮತ್ತು ಕರೆಮ್ಮ ಜಾತ್ರೆ ನಡೆದಿತ್ತು. ಈ ಜಾತ್ರೆಯಲ್ಲಿ ಗ್ರಾಮದ ಜನ ಅನ್ನ ಪ್ರಸಾದ ಮತ್ತು ಮನೆಯಲ್ಲಿ ಮಾವಿನ ಹಣ್ಣಿನ ಶಿಖರಣಿ ಸೇವಿಸಿದ್ದರು. ಆದರೆ ಪ್ರಸಾದ ಸೇವಿಸಿದವರಲ್ಲಿ ಇಂದು ಏಕಾಏಕಿ ವಾಂತಿ-ಭೇದಿ ಆರಂಭವಾಗಿದೆ. ಕೂಡಲೇ ಅಸ್ವಸ್ಥಗೊಂಡವರಿಗೆ ಸ್ಥಳೀಯ ಆಸ್ಪತ್ರೆ, ಸವದತ್ತಿ ಸಾರ್ವಜನಿಕ ಆಸ್ಪತ್ರೆ ಹಾಗೂ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ತೀವ್ರ ಅಸ್ವಸ್ಥಗೊಂಡ ಐವರನ್ನ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದಾರೆ. ಇನ್ನು ಅಹಿತಕರ ಘಟನೆ ಆಗದಂತೆ ತಾಲೂಕಾಧಿಕಾರಿಗಳು ಗ್ರಾಮದಲ್ಲಿ ಕ್ಯಾಂಪ್ ತೆರೆದು ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಈವರೆಗೂ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪಬ್ಲಿಕ್ ಟಿವಿಗೆ ಡಿಎಚ್‍ಓ ಮಾಹಿತಿ ನೀಡಿದ್ದಾರೆ.

    ಪ್ರಸಾದ ಸೇವಿಸಿದವರಲ್ಲಿ ವಾಂತಿ-ಭೇದಿ ಕಂಡುಬಂದ ತಕ್ಷಣವೇ ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗಿದೆ. ಪ್ರತಿಗಂಟೆಗೂ ರೋಗಿಗಳ ಮಾನಿಟರ್ ಮಾಡಲಾಗುತ್ತಿದೆ. ಯಾವುದೇ ರೀತಿಯ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದ ಡಿಎಚ್‍ಓ ಡಾ.ಮಹೇಶ ಕೋಣಿ ತಿಳಿಸಿದ್ದಾರೆ.

  • ಪ್ರಸಾದ ಸೇವಿಸಿ ಅಸ್ವಸ್ಥಗೊಂಡ 300 ಮಂದಿಗೆ ರಸ್ತೆಯಲ್ಲೇ ಡ್ರಿಪ್ಸ್!

    ಪ್ರಸಾದ ಸೇವಿಸಿ ಅಸ್ವಸ್ಥಗೊಂಡ 300 ಮಂದಿಗೆ ರಸ್ತೆಯಲ್ಲೇ ಡ್ರಿಪ್ಸ್!

    ಮುಂಬೈ: ಪ್ರಸಾದ ಸೇವಿಸಿ ಅಸ್ವಸ್ಥಗೊಂಡ 300 ಮಂದಿಯನ್ನು ರಸ್ತೆಯಲ್ಲೇ ಸಾಲಾಗಿ ಮಲಗಿಸಿ ಡ್ರಿಪ್ಸ್‌ ಹಾಕಿರುವ ಘಟನೆ ಮಹಾರಾಷ್ಟ್ರದಲ್ಲಿ (Maharastra) ನಡೆದಿದೆ.

    ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಲೋನಾರ್‌ನ ಸೋಮಥಾನ ಗ್ರಾಮದಲ್ಲಿ ಒಂದು ವಾರದಿಂದ ʼಹರಿಣಂ ಸಪ್ತಾಹʼ ಎಂಬ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಅಂತೆಯೇ ಕಾರ್ಯಕ್ರಮದ ಕೊನೆಯ ದಿನವಾದ ಮಂಗಳವಾರ ರಾತ್ರಿ ಪ್ರಸಾದ ವಿತರಣೆ ಮಾಡಲಾಗಿತ್ತು. ಹೀಗೆ ಪ್ರಸಾದ ಸೇವಿಸಿದ ಬಳಿಕ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 300 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡರು.

    ಸೋಮಠಾಣಾ ಮತ್ತು ಖಾಪರಖೇಡ್ ಗ್ರಾಮಗಳ ಭಕ್ತರು ರಾತ್ರಿ 10 ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಪ್ರಸಾದವನ್ನು ಸೇವಿಸಿದ ನಂತರ ಅವರು ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿ ಆರಂಭವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ರಸ್ತೆಯಲ್ಲೇ ಚಿಕಿತ್ಸೆ ಯಾಕೆ..?: ಅಸ್ವಸ್ಥರಾದವರನ್ನು ಬೀಬಿ ಗ್ರಾಮದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಬೆಡ್‌ಗಳ ಕೊರತೆಯಿಂದಾಗಿ ಬಹುತೇಕ ರೋಗಿಗಳು ಆಸ್ಪತ್ರೆಯ ಹೊರಭಾಗದ ರಸ್ತೆಯಲ್ಲೇ ಚಿಕಿತ್ಸೆ ಪಡೆಯಬೇಕಾಯಿತು. ಮರಗಳಿಗೆ ಕೊಕ್ಕೆ ಹಾಕಿದ್ದ ಹಗ್ಗಗಳ ಮೇಲೆ ಡ್ರಿಪ್ಸ್‌ ಬಾಟ್ಲಿಗಳನ್ನು ಅಳವಡಿಸಲಾಗಿತ್ತು. ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

    ಈ ಸಂಬಂಧ ಸ್ಥಳೀಯರು ಪ್ರತಿಕ್ರಿಯಿಸಿ, ಸೋಮಠಾಣಾದಲ್ಲಿ ಧಾರ್ಮಿಕ ಕಾರ್ಯಕ್ರಮದ ಆರನೇ ದಿನವಾಗಿತ್ತು. 400 ರಿಂದ 500 ಮಂದಿಗೆ ಹನ್ನೊಂದನೇ ದಿನಂದು ಪ್ರಸಾದ ವಿತರಿಸಲಾಯಿತು. ಆ ಬಳಿಕ ಅನೇಕರು ಅಸ್ವಸ್ಥಗೊಂಡರು. ಸದ್ಯ ಅವರೆಲ್ಲ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದರ್ಶನ್ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಕೊಟ್ಟ ದಿನಸಿ ಸಾಮಾಗ್ರಿ ಪೌರಕಾರ್ಮಿಕರಿಗೆ ವಿತರಣೆ

    ಇತ್ತ ಎಲ್ಲ ರೋಗಿಗಳ ಆರೋಗ್ಯ ಸ್ಥಿರವಾಗಿದ್ದು, ಬಹುತೇಕರು ಇಂದು ಡಿಸ್ಚಾರ್ಜ್ ಆಗಿದ್ದಾರೆ. ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದರೆ ಅಂಬುಲೆನ್ಸ್ ಮತ್ತು ಇತರ ಅಗತ್ಯ ಉಪಕರಣಗಳೊಂದಿಗೆ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ. ಪ್ರಸಾದದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಪಾಟೀಲ್ ತಿಳಿಸಿದ್ದಾರೆ.

  • ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥ – 18 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

    ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥ – 18 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

    ದಿಸ್ಪುರ್: ಅಸ್ಸಾಂನ ಮಜುಲಿ ಜಿಲ್ಲೆಯ ಗರ್ಮುರ್ ಬಳಿಯ ಮಹರಿಚುಕ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪ್ರಸಾದ ಸೇವಿಸಿದ ನಂತರ 18 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ.

    ಈ ಕುರಿತು ಜಿಲ್ಲಾಧಿಕಾರಿ ಪುಲಕ್ ಮಹಾಂತ್ ಮಾತನಾಡಿದ್ದು, ಸುಮಾರು 18ಕ್ಕೂ ಹೆಚ್ಚು ಜನರು ದೇವಾಯದ ಪ್ರಸಾದ ಸೇವಿಸಿ ಅಸ್ವಸ್ಥರಾಗಿದ್ದರು. ಸಂತ್ರಸ್ತ ಜನರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವರು ಸುಧಾರಿಸಿದ್ದಾರೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಸ್ಪಾ ಮ್ಯಾನೇಜರ್, ಗ್ರಾಹಕರು ಸೇರಿ ಯುವತಿ ಮೇಲೆ ಅತ್ಯಾಚಾರ – ಪೊಲೀಸರಿಗೆ ನೋಟಿಸ್

    20 fall ill after consuming prasad at religious function in Assam - India News

    ವೈದ್ಯರು ಈ ಕುರಿತು ಮಾಹಿತಿ ಕೊಟ್ಟಿದ್ದು, ಕಳೆದ ರಾತ್ರಿ ಹೊಟ್ಟೆ ನೋವು ಮತ್ತು ವಾಂತಿ ಎಂದು 12 ಜನರು ಆಸ್ಪತ್ರೆಗೆ ಬಂದಿದ್ದರು. ಇಂದು ಬೆಳಗ್ಗೆ ಮತ್ತೆ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ಅವರ ಸ್ಥಿತಿ ಈಗ ಸುಧಾರಿಸಿದೆ. ಇವರು ತಿಂದಿರುವ ಆಹಾರ ವಿಷಪೂರಿತವಾಗಿರಬಹುದು ಎಂದು ನಾವು ಶಂಕಿಸುತ್ತೇವೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

    ಸ್ಥಳೀಯರ ಪ್ರಕಾರ, ಗ್ರಾಮಸ್ಥರೆಲ್ಲ ಶುಕ್ರವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆವು. ಪ್ರಸಾದವನ್ನು ಸೇವಿಸಿದ ಕೂಡಲೇ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡಿದೆ. ಮೂವರು ಮಕ್ಕಳು ಸೇರಿದಂತೆ 18 ಜನರನ್ನು ತಕ್ಷಣ ಶ್ರೀ ಶ್ರೀ ಪಿತಾಂಬರ ದೇವ್ ಗೋಸ್ವಾಮಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಐವರ ಪ್ರಾಣ ಉಳಿಸಿದೆ ಅಂಗಾಂಗ ದಾನ – ಮಗನ ಸಾವಿನಲ್ಲಿ ಸಾರ್ಥಕತೆ ಕಂಡ ಕುಟುಂಬ

    Live Tv
    [brid partner=56869869 player=32851 video=960834 autoplay=true]

  • ಲಡ್ಡು ಜೊತೆಗೆ 2.19 ಲಕ್ಷ ರೂ. ಬಂದಿದ್ದ ಹಣ ವಾಪಸ್ ನೀಡಿದ ಭಕ್ತ!

    ಲಡ್ಡು ಜೊತೆಗೆ 2.19 ಲಕ್ಷ ರೂ. ಬಂದಿದ್ದ ಹಣ ವಾಪಸ್ ನೀಡಿದ ಭಕ್ತ!

    ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಿಬ್ಬಂದಿ ಕಣ್ತಪ್ಪಿನಿಂದ ಪ್ರಸಾದದ ಜೊತೆ ಬಂದಿದ್ದ ಹಣವನ್ನು ಭಕ್ತ ಹಿಂದುರುಗಿಸಿದ್ದಾರೆ.

    ಬೆಂಗಳೂರು ಜಿಲ್ಲೆ ಯಶವಂತಪುರ ತಾಲೂಕು ಮೇದರಹಳ್ಳಿಯ ನರಸಿಂಹಮೂರ್ತಿ ಹಣ ಹಿಂದಿರುಗಿಸಿದ ಭಕ್ತ. ಪೊಲೀಸರ ಸಮ್ಮುಖದಲ್ಲಿ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜುಗೆ ಹಣ ಹಿಂದಿರುಗಿಸಿದ್ದಾರೆ.

    ಈ ಸಂಬಂಧ ಮಾತನಾಡಿದ ನರಸಿಂಹಮೂರ್ತಿ, ಮನೆಯಲ್ಲಿ ಪ್ರಸಾದದ ಜೊತೆ ಹಣವಿರುವುದನ್ನು ನೋಡಿ ಗಾಬರಿಗೊಂಡಿದ್ದೆ. ತಕ್ಷಣ ದೇವಸ್ಥಾನದ ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದೆ ಎಂದರು.

    ನರಸಿಂಹ ಮೂರ್ತಿ ಅವರು ಜುಲೈ 29ರಂದು ಅಭಿಷೇಕದ ಪ್ರಸಾದದ ಟಿಕೆಟ್ ಪಡೆದಿದ್ದರು. ಪ್ರಸಾದದ ಚೀಲಗಳನ್ನು ನೀಡುವಾಗ ಹಣವಿದ್ದ ಚೀಲವೊಂದನ್ನು ಸಹ ಆಕಸ್ಮಿಕವಾಗಿ ನೌಕರ ನಾಗಭೂಷಣ ಕೊಟ್ಟಿದ್ದರು. ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿತ್ತು.

    ಈ ಸಂಬಂಧ ಮಲೆ ಮಹದೇಶ್ವರಬೆಟ್ಟದ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇದೀಗ ಭಕ್ತ ಹಣ ವಾಪಸ್ ನೀಡುವ ಮೂಲಕ ಪ್ರಕರಣ ಸುಖಾಂತ್ಯಗೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ತಿರುಪತಿ ತಿರುಮಲ ದೇವಸ್ಥಾನದ ಜಿಲೇಬಿ ಪ್ರಸಾದದ ಬೆಲೆ ಏರಿಕೆ

    ತಿರುಪತಿ ತಿರುಮಲ ದೇವಸ್ಥಾನದ ಜಿಲೇಬಿ ಪ್ರಸಾದದ ಬೆಲೆ ಏರಿಕೆ

    ಅಮರಾವತಿ: ತಿರುಪತಿ ತಿರುಮಲ ದೇವಸ್ಥಾನದಲ್ಲಿ ನೀಡಿತ್ತಿರುವ ಜಿಲೇಬಿ ಪ್ರಸಾದದ ಬೆಲೆಯನ್ನು 100 ರಿಂದ 500 ರೂ.ಗೆ ಏರಿಕೆ ಮಾಡಲಾಗಿದೆ. ದೇವಸ್ಥಾನದಲ್ಲಿ ಆರ್ಜಿತ ಸೇವೆ ಸಂದರ್ಭದಲ್ಲಿ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

    ಈ ಗುರುವಾರ ವಿಶೇಷ ಪ್ರಸಾದವನ್ನು ತೆರೆದ ಕೌಂಟರ್‌ಗಳಿಂದ ಭಕ್ತರಿಗೆ ವಿತರಿಸಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಪ್ರಸಾದವನ್ನು ತಯಾರಿಸುವ ಸ್ಥಳವನ್ನು ತಿರುಮಲ ದೇವಾಲಯದ ಒಳಗಿನ ಪಾಡಿ ಪೋಟುನಿಂದ ದೇವಾಲಯದ ಹೊರಗೆ ಹೊಸದಾಗಿ ನಿರ್ಮಿಸಲಾದ ಬೂಂದಿ ಕಿಚನ್‍ಗೆ ಬದಲಾಯಿಸಲಾಗುತ್ತದೆ ಎಂದು ದೇವಸ್ಥಾನ ಟ್ರಸ್ಟ್ ಹೇಳಿದೆ.

    ಟಿಟಿಡಿ ವಿಶ್ವದ ಅತ್ಯಂತ ಗೌರವಾನ್ವಿತ ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ಸಬ್ಸಿಡಿ ದರದಲ್ಲಿ ಅಥವಾ ಕನಿಷ್ಠ ವೆಚ್ಚದ ಆಧಾರದ ಮೇಲೆ ಪ್ರಸಾದವನ್ನು ನೀಡಬೇಕು. ಆದರೆ ಇಲ್ಲಿ ಜಿಲೇಬಿಯನ್ನು ಮಾರಾಟ ಮಾಡುವ ಮೂಲಕ ಶೇ.239 ಲಾಭ ಗಳಿಸಲು ಪ್ರಯತ್ನಿಸುತ್ತಿದೆ. ಪ್ರಸಾದವು ಅದರ ತಯಾರಿಕೆಯ ವೆಚ್ಚಕ್ಕಿಂತ ಹೆಚ್ಚು, ಇದು ಅತ್ಯಂತ ಆಕ್ಷೇಪಾರ್ಹವಾಗಿದೆ ಎಂದು ಟಿಡಿಪಿ ಶಾಸಕ ತಿಳಿಸಿದ್ದಾರೆ. ಇದನ್ನೂ ಓದಿ:  ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆ- ವೆಲ್ಲೂರಿನಲ್ಲಿ ತೃತೀಯಲಿಂಗಿಗೆ ಗೆಲುವು

    ಮಧ್ಯವರ್ತಿಗಳು ಕಾಳ ದಂಧೆಯಲ್ಲಿ ಒಂದು ಸೆಟ್‍ಗೆ 2,000 ರೂ.ನಂತೆ ಮಾರುವುದನ್ನು ತಡೆಯಲು ಜೂನ್ 2021 ರಲ್ಲಿ, ಟಿಟಿಡಿ ಆಡಳಿತದ ಉನ್ನತಾಧಿಕಾರಿಗಳು ಟ್ರಸ್ಟ್ ಬೋರ್ಡ್‍ಗೆ ಪ್ರಸ್ತುತ 100 ಕ್ಕೆ ಮಾರಾಟವಾಗುತ್ತಿರುವ ಜಿಲೇಬಿ ಮತ್ತು ಥೆಂಥೋಲ ಸೆಟ್ ಅನ್ನು 2,000ಕ್ಕೆ ಮಾರುವಂತೆ ಪ್ರಸ್ತಾಪವಿರಿಸಿದ್ದರು. ಜಿಲೇಬಿ ಮತ್ತು ಥೆಂಥೋಲ ಸೆಟ್ ತಯಾರಿಸಲು ಟಿಟಿಡಿ ಮಾಡುವ ವೆಚ್ಚ 147.50 ಆಗಿದೆ. ಇದನ್ನೂ ಓದಿ: ಮೆಲಾನಿಯಾ ಟ್ರಂಪ್, ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬೇಕೆಂದಿದ್ದರು: ದೆಹಲಿ ಸಿಎಂ

    ಟ್ರಸ್ಟ್ ಬೋರ್ಡ್ ಈ ಸಂಬಂಧ ವಿವರವಾದ ಚರ್ಚೆಯನ್ನು ನಡೆಸಿದೆ. ಬೆಲೆಯನ್ನು 500 ರೂ.ಗೆ ಹೆಚ್ಚಿಸಲು ನಿರ್ಧರಿಸಿತು. ಬೆಲೆ ಏರಿಕೆಯಿಂದಾಗಿ ಟಿಟಿಡಿ ಶೇ.239 ರಷ್ಟು ಹೆಚ್ಚುವರಿ ಲಾಭವನ್ನು ಪಡೆಯುತ್ತದೆ. ಟಿಟಿಡಿ ಟ್ರಸ್ಟ್ ಬೋರ್ಡ್ ಕಾಳದಂಧೆ ನಿಲ್ಲಿಸುವ ಉದ್ದೇಶದಿಂದ ಐದು ಪಟ್ಟು ಹೆಚ್ಚಿಸಿದ್ದಾರೆ ಎಂದು ಆಂಧ್ರಪ್ರದೇಶದ ಸಾರ್ವಜನಿಕ ಖಾತೆಗಳ ಸಮಿತಿಯ ಅಧ್ಯಕ್ಷ ಪಯ್ಯವುಲ ಕೇಶವ್ ಹೇಳಿದ್ದಾರೆ.

    ಟಿಟಿಡಿ ಟ್ರಸ್ಟ್‍ನ ಮಾಜಿ ಸದಸ್ಯ ಜಿ.ಭಾನುಪ್ರಕಾಶ್ ರೆಡ್ಡಿ ಕೂಡ ಬೆಲೆ ಏರಿಕೆ ತಪ್ಪು ಎಂದಿದ್ದಾರೆ. ಭಕ್ತರಿಗೆ ಸಬ್ಸಿಡಿ ದರದಲ್ಲಿ ಪ್ರಸಾದವನ್ನು ಯಾವಾಗಲೂ ನೀಡಬೇಕು. ಆದರೆ ಇಲ್ಲಿ ಟಿಟಿಡಿ ಹೆಚ್ಚಿನ ಬೇಡಿಕೆ ಇದೆ ಎಂಬ ಕಾರಣಕ್ಕೆ ಭಕ್ತರನ್ನು ಸುಲಿಗೆ ಮಾಡುತ್ತಿದೆ. ಇದು ಆಕ್ಷೇಪಾರ್ಹವಾಗಿದೆ ಎಂದು ವಿರೋಧಿಸಿದ್ದಾರೆ.

  • ದೇವಾಲಯದ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ

    ದೇವಾಲಯದ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ

    ಕೋಲಾರ: ದೇವಾಲಯದಲ್ಲಿ ವಿತರಿಸಿದ ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬೀಗರಾಯನಹಳ್ಳಿಯಲ್ಲಿ ನಡೆದಿದೆ.

    ಹಳ್ಳಿಯ ಗಂಗಮ್ಮ ದೇವಾಲಯದಲ್ಲಿ ಶನಿವಾರ ಹೊಸ ವರ್ಷಾಚರಣೆಯ ಅಂಗವಾಗಿ ವಿಶೇಷ ಪೂಜೆ ನಡೆದಿತ್ತು. ನಂತರದಲ್ಲಿ ದೇವಾಲಯದ ಆಡಳಿತ ಮಂಡಳಿ ಮಾಡಿಸಿದ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಗಿದೆ.

    ಪ್ರಸಾದದ ರೂಪದಲ್ಲಿ ಚಿತ್ರಾನ್ನ ಹಾಗೂ ಕೇಸರಿಬಾತ್ ಸೇವಿಸಿದ ಭಕ್ತರು ಅಸ್ವಸ್ಥಗೊಂಡಿದ್ದಾರೆ. 50ಕ್ಕೂ ಹೆಚ್ಚು ಜನರನ್ನು ಶ್ರೀನಿವಾಸಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 10 ರೂಪಾಯಿ ಕೋಳಿ ಮರಿಗೆ 52 ರೂ. ಟಿಕೆಟ್!

    ಅಸ್ವಸ್ಥತರ ಪೈಕಿ 12 ಜನ ಮಕ್ಕಳು, 30 ಕ್ಕೂ ಹೆಚ್ಚು ಜನ ಪುರುಷರು ಹಾಗೂ ಮಹಿಳೆಯರು ಇದ್ದಾರೆ. ಈಗಾಗಲೇ ಭಕ್ತರು ಗುಣಮುಖರಾಗಿ ಮನೆಗಳತ್ತ ತೆರಳುತ್ತಿದ್ದಾರೆ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮೂರು ತಿಂಗಳ ಬಳಿಕ ಸಾವಿರ ಸೋಂಕು – ಬೆಂಗ್ಳೂರಲ್ಲಿ 810 ಕೇಸ್

  • ಬ್ರಹ್ಮ ರಸಾಯಣ, ಅಶ್ವ ಗಂಧಿ ಲೇಹಂ – ದೇವರ ಪ್ರಸಾದದ ಹೆಸರಲ್ಲಿ ಡ್ರಗ್ಸ್ ದಂಧೆ

    ಬ್ರಹ್ಮ ರಸಾಯಣ, ಅಶ್ವ ಗಂಧಿ ಲೇಹಂ – ದೇವರ ಪ್ರಸಾದದ ಹೆಸರಲ್ಲಿ ಡ್ರಗ್ಸ್ ದಂಧೆ

    ಬೆಂಗಳೂರು: ಮಾದಕ ವಸ್ತು ನಿಯಂತ್ರಣ ಘಟಕ (NCB) ಅಧಿಕಾರಿಗಳ ಮತ್ತೊಂದು ಮೆಗಾ ಕಾರ್ಯಾಚರಣೆ ನಡೆದಿದ್ದು, ದೇವರ ಪ್ರಸಾದದ ಹೆಸರಿನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿರುವುದು ಬಯಲಾಗಿದೆ.

    ಡ್ರಗ್ಸ್ ಸಾಗಾಟದಲ್ಲಿ ತೊಡಗಿದ್ದ ಬಹ್ರೇನ್ ಮಾಜಿ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ. ಈತ ಬ್ರಹ್ಮ ರಸಾಯಣ, ನರಸಿಂಹ ರಸಾಯಣ, ಅಶ್ವ ಗಂಧಿ ಲೇಹಂ, ಚಾಯಾ ವಧನ ಲೇಹ ಹೆಸರಲ್ಲಿ ಕೇರಳದಿಂದ ಬೆಂಗಳೂರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದನು. ಆರೋಪಿಯಿಂದ 3.5 ಕೆ.ಜಿ. ಹಶೀಷ್ ಆಯಿಲ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ಡ್ರಗ್ಸ್, ಸಿಗರೇಟ್, ಸೆಕ್ಸ್‌ಗೆ ಮಗನಿಗೆ ಓಕೆ ಅಂದಿದ್ದೇನೆ: ಶಾರೂಖ್ ವೀಡಿಯೋ ವೈರಲ್

    ಮತ್ತೊಂದು ಕಾರ್ಯಾಚರಣೆ:
    ಆಸ್ಟ್ರೇಲಿಯಾಗೆ 19 ಕೆಜಿ ಸೆಡೋಪೆಡ್ರಿನ್ ಸಾಗಾಟ ಮಾಡಲು ಯತ್ನಿಸಿದ ಪ್ರಕರಣ ಎನ್ ಸಿಬಿ ಕಾರ್ಯಾಚರಣೆಯ ವೇಳೆ ಬೆಳಕಿಗೆ ಬಂದಿದೆ. ಬೆಂಗಳೂರಿಗೆ ಸಾಗಿಸುತ್ತಿದ್ದ ಆರೋಪಿಯನ್ನು ಎನ್‍ಸಿಬಿ ಅಧಿಕಾರಿಗಳು ಕಾಸರಗೋಡಿನಲ್ಲಿ ಬಂಧಿಸಿದ್ದಾರೆ. ಕರೈಕಾಲ್ ಎಂಬ ಕೊರಿಯರ್ ಕಂಪನಿ ಮೂಲಕ ಸಾಗಾಟ ಮಾಡಲು ಯತ್ನಿಸಲಾಗಿತ್ತು. ಇದನ್ನೂ ಓದಿ: ಬಂಧನದ ಬಳಿಕ ಪುತ್ರನ ಜೊತೆ 2 ನಿಮಿಷ ಮಾತಾಡಿದ ನಟ ಶಾರೂಖ್!

    ಇತ್ತ ಚೆನ್ನೈ, ಎರ್ನಾಕುಲಂ ಏರ್ ಪೋರ್ಟ್ ನಲ್ಲಿಯೂ ಡ್ರಗ್ಸ್ ಸೀಜ್ ಮಾಡಲಾಗಿದೆ. ಹೀಗೆ ಒಂದೇ ವಾರದಲ್ಲಿ ಮೂರು ಕಡೆ ಎನ್‍ಸಿಬಿ ಭರ್ಜರಿ ಕಾರ್ಯಾಚರಣೆಯ ಮೂಲಕ ಡ್ರಗ್ಸ್ ಸೀಜ್ ಮಾಡಿದೆ. ಇದನ್ನೂ ಓದಿ: ಶಾರೂಖ್‌ ಪುತ್ರನ ಲೆನ್ಸ್‌ ಬಾಕ್ಸ್, ಇನ್ನೊಬ್ಬಳು ಯುವತಿಯ ಬ್ಯಾಗಲ್ಲಿದ್ದ ಸ್ಯಾನಿಟರಿ ಪ್ಯಾಡಲ್ಲಿತ್ತು ಮಾದಕ ವಸ್ತು!

  • ಮಾದಪ್ಪನ ಪ್ರಸಾದ ಲಾಡುಗೆ FSSAIನಿಂದ ಗುಣಮಟ್ಟದ ಸರ್ಟಿಫಿಕೇಟ್

    ಮಾದಪ್ಪನ ಪ್ರಸಾದ ಲಾಡುಗೆ FSSAIನಿಂದ ಗುಣಮಟ್ಟದ ಸರ್ಟಿಫಿಕೇಟ್

    ಚಾಮರಾಜನಗರ: ಜಿಲ್ಲೆಯ ಮಾದಪ್ಪನ ಬೆಟ್ಟದ ದಾಸೋಹ, ಲಾಡುಗೆ ಈಗ ಅಧಿಕೃತ ಮುದ್ರೆ ದೊರೆತಿದ್ದು, ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‍ಎಸ್‍ಎಸ್‍ಎಐ) ಗುಣಮಟ್ಟದ ಸರ್ಟಿಫಿಕೇಟ್ ನೀಡಿದೆ.

    ಲೈಸೆನ್ಸ್ ಗಾಗಿ ದೇಗುಲದ ಪ್ರಾಧಿಕಾರ ಕಳೆದ 6 ತಿಂಗಳ ಹಿಂದೆ ಅರ್ಜಿ ಸಲ್ಲಿಸಿ, ಆಹಾರದ ವಿಚಾರದಲ್ಲಿ ತೆಗೆದುಕೊಂಡ ಸುರಕ್ಷತಾ ಕ್ರಮಗಳ ಬಗ್ಗೆ ಲಿಖಿತ ರೂಪದಲ್ಲಿ ತಿಳಿಸಿತ್ತು. ಇದನ್ನು ಆಧರಿಸಿ ಎಫ್‍ಎಸ್‍ಎಸ್‍ಎಐ ಲೈಸೆನ್ಸ್ ನೀಡಿದೆ. ತಿರುಪತಿ ಲಾಡು ಪ್ರಸಾದ, ಧರ್ಮಸ್ಥಳದ ಅನ್ನ ದಾಸೋಹದಷ್ಟೇ ಪ್ರಸಿದ್ಧಿಯಾಗಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ದೇಗುಲಕ್ಕೆ ಎಫ್‍ಎಸ್‍ಎಸ್‍ಎಐ ಪರವಾನಗಿ ದೊರೆತಿದೆ.

    ಆಹಾರದ ಗುಣಮಟ್ಟದ ಖಾತ್ರಿಗಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧೀನಕ್ಕೊಳಪಟ್ಟ ಸಂಸ್ಥೆಯಾಗಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮಾನದಂಡಗಳಿಗೆ ಅನುಗುಣವಾಗಿ ಕ್ಷೇತ್ರದಲ್ಲಿ ದಾಸೋಹ ಮತ್ತು ಲಾಡು ಪ್ರಸಾದ ತಯಾರಿಕೆ, ಹಂಚಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಲೈಸೆನ್ಸ್ ದೊರೆತಿದ್ದು, ಪ್ರತಿ ವರ್ಷವೂ ನವೀಕರಿಸಿಕೊಳ್ಳಬೇಕಿದೆ.

    ಲೈಸೆನ್ಸ್ ಗಾಗಿ ದೇಗುಲದ ಪ್ರಾಧಿಕಾರ ಕಳೆದ 6 ತಿಂಗಳ ಹಿಂದೆ ಅರ್ಜಿ ಸಲ್ಲಿಸಿ ಸುರಕ್ಷತಾ ಕ್ರಮಗಳ ಬಗ್ಗೆ ಲಿಖಿತ ರೂಪದಲ್ಲಿ ವಿವರಿಸಿತ್ತು. ಅದಾದ ಬಳಿಕ ಎಫ್‍ಎಸ್‍ಎಸ್‍ಎಐ ಅಧಿಕಾರಿಯೊಬ್ಬರು ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸುರಕ್ಷತೆ, ಶುದ್ಧತೆಯನ್ನು ಪರೀಕ್ಷಿಸಿದ ಬಳಿಕ ಈ ಪರವಾನಗಿ ನೀಡಲಾಗಿದೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸಹ ಗುಣಮಟ್ಟದ ಸರ್ಟಿಫಿಕೇಟ್ ನೀಡಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

    ಪುಣ್ಯ ಕ್ಷೇತ್ರ ಮಲೆ ಮಹದೇಶ್ವರಸ್ವಾಮಿ ಬೆಟ್ಟದ ಕುರಿತು ಈ ಹರುಷದ…

    Posted by Suresh Kumar S on Sunday, November 8, 2020