Tag: Prank video

  • ನಮ್ಮ ಮೆಟ್ರೋದಲ್ಲಿ ಯೂಟ್ಯೂಬರ್‌ ಹುಚ್ಚಾಟ – ಮೂರ್ಛೆ ಬಂದವನಂತೆ ಪ್ರ್ಯಾಂಕ್‌ ಮಾಡಿ ಪ್ರಯಾಣಿಕರಿಗೆ ಶಾಕ್‌

    ನಮ್ಮ ಮೆಟ್ರೋದಲ್ಲಿ ಯೂಟ್ಯೂಬರ್‌ ಹುಚ್ಚಾಟ – ಮೂರ್ಛೆ ಬಂದವನಂತೆ ಪ್ರ್ಯಾಂಕ್‌ ಮಾಡಿ ಪ್ರಯಾಣಿಕರಿಗೆ ಶಾಕ್‌

    ಬೆಂಗಳೂರು: ಮೆಟ್ರೋಗಳಲ್ಲಿ (Namma Metro) ಕೆಲವರು ಹುಚ್ಚಾಟವಾಡಿ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತದೆ. ಬೆಂಗಳೂರಿನ (Bengaluru) ಮೆಟ್ರೋದಲ್ಲಿ ಅಂತಹದ್ದೇ ಒಂದು ಪ್ರಕರಣ ಜರುಗಿದೆ. ಯೂಟ್ಯೂಬರ್‌ ಒಬ್ಬನ ಹುಚ್ಚಾಟಕ್ಕೆ ಪ್ರಯಾಣಿಕರು ಗಾಬರಿಗೊಂಡ ಘಟನೆ ನಗರದಲ್ಲಿ ನಡೆದಿದೆ.

    ವಿಜಯನಗರದಿಂದ ಮೆಜೆಸ್ಟಿಕ್‌ಗೆ ಬರುವ ಪರ್ಪಲ್ ಲೈನ್‌ ಮೆಟ್ರೋದಲ್ಲಿ ಯೂಟ್ಯೂಬರ್‌ ಹುಚ್ಚಾಟ ಮಾಡಿದ್ದಾನೆ. ಎಸ್ಕಲೇಟರ್ ಮೇಲೆ ಯೂಟ್ಯೂಬರ್ ಪ್ರ್ಯಾಂಕ್‌ ವೀಡಿಯೋ ಮಾಡಿ ಪ್ರಯಾಣಿಕರನ್ನು ಗಾಬರಿಗೊಳಿಸಿದ್ದ. ಇದನ್ನೂ ಓದಿ: ಮೆಟ್ರೋದಲ್ಲಿ ಗೋಬಿ ತಿಂದವನಿಗೆ ಬಿತ್ತು 500 ರೂ. ದಂಡ!

    ಅಲ್ಲದೇ ಚಲಿಸುತ್ತಿದ್ದ ಮೆಟ್ರೋದಲ್ಲಿ ಮೂರ್ಛೆ ಬಂದವನಂತೆ ಪ್ರ್ಯಾಂಕ್‌ ಮಾಡಿದ್ದ. ಮತ್ತೊಂದು ವೀಡಿಯೋದಲ್ಲಿ ಎಸ್ಕಲೇಟರ್‌ನಲ್ಲಿ ಬರುವಾಗ ವಯಸ್ಸಾದ ವೃದ್ಧೆಯ ಮುಂದೆ ಪ್ರ್ಯಾಂಕ್‌ ಮಾಡಿದ್ದ. ಈ ವೇಳೆ ಸಹಪ್ರಯಾಣಿಕರು ಗಾಬರಿಗೊಂಡಿದ್ದರು.

    ಪ್ರಕರಣವನ್ನು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರ್ಯಾಂಕ್‌ ಮಾಡಿ ಪ್ರಯಾಣಿಕರನ್ನು ಗಾಬರಿಗೊಳಿಸಿದ ಯುವಕನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತನ ಹೆಸರು ಪ್ರ್ಯಾಂಕ್‌ ಪ್ರಜ್ಜು ಎಂದು ತಿಳಿದುಬಂದಿದೆ. ತನ್ನದೇ ಇನ್ಸ್ಟಾಂಗ್ರಾಮ್‌ನಲ್ಲಿ ವೀಡಿಯೋ ಅಪ್ಲೋಡ್ ಮಾಡಿದ್ದ. ಆತನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ಹಂಪಿಯಲ್ಲಿ ರೀಲ್ಸ್‌ ಹುಚ್ಚಾಟ – ಸ್ಮಾರಕಗಳಿಗೆ ರಕ್ಷಣೆ ಕೊಡಿ ಎಂದ ಗ್ರಾಮಸ್ಥರು

    ಮೆಟ್ರೋಗಳಲ್ಲಿ ಪ್ರ್ಯಾಂಕ್‌ ಮಾಡಿ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವುದು ಸಾಮಾನ್ಯ ಎನ್ನುವಂತಾಗಿದೆ. ಮುಂಬೈ, ನವದೆಹಲಿ ಮೆಟ್ರೋಗಳಲ್ಲೂ ಇಂತಹ ಅನೇಕ ಪ್ರಕರಣಗಳು ವರದಿಯಾಗಿವೆ. ಇದು ಈಗ ಬೆಂಗಳೂರಿಗೂ ಕಾಲಿಟ್ಟಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಲಿಕಾನ್ ಸಿಟಿಯಲ್ಲಿ ದೆವ್ವಗಳ ಕಾಟ – ಸಾರ್ವಜನಿಕರಿಂದ ದೂರು

    ಸಿಲಿಕಾನ್ ಸಿಟಿಯಲ್ಲಿ ದೆವ್ವಗಳ ಕಾಟ – ಸಾರ್ವಜನಿಕರಿಂದ ದೂರು

    ಬೆಂಗಳೂರು: ಬೆಂಗಳೂರಲ್ಲಿ ರಾತ್ರೋರಾತ್ರಿ ದೆವ್ವಗಳು ಕಾಣಿಸಲಾರಂಭಿಸಿದ್ದು, ಮಧ್ಯರಾತ್ರಿ ದೆವ್ವಗಳ ಹಾವಳಿಗೆ ನಗರದ ಜನತೆ ಭಯಭೀತರಾಗಿದ್ದು, ದಾರಿಯುದ್ದಕ್ಕೂ ಬೆನ್ನು ಹತ್ತುತ್ತಿವೆ.

    ಜನರನ್ನು ಬೆದರಿಸಲು ಈ ದೆವ್ವಗಳ ಗ್ಯಾಂಗ್ ಹುಟ್ಟಿಕೊಂಡಿದ್ದು, ದೆವ್ವದ ರೀತಿ ಮುಖವಾಡ ಹಾಕಿಕೊಂಡು ರಾತ್ರಿ ಓಡಾಡುತಿತ್ತು. ಇವುಗಳ ಕಾಟದಿಂದ ಬೇಸತ್ತ ಜನ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೆವ್ವಗಳ ಬೆನ್ನು ಹತ್ತಿದ ಪೊಲೀಸರಿಗೆ ಶಾಕ್ ಆಗಿದ್ದು, ಈ ಮಾನವ ದೆವ್ವಗಳು ಸಿಕ್ಕಿಬಿದ್ದಿದ್ದು ಪೊಲೀಸರ ಅತಿಥಿಯಾಗಿವೆ.

    ನಿಜವಾಗಿ ನಡೆದಿದ್ದು ಏನು?
    ಯಶವಂತಪುರದಲ್ಲಿ ಕೆಲ ಯುವಕರು ಪ್ರಾಂಕ್ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಭಾನುವಾರ ತಡರಾತ್ರಿ ದೆವ್ವದ ರೀತಿ ಮುಖವಾಡ ಹಾಕಿ ಈ ಯುವಕರು ಜನರನ್ನು ಹೆದರಿಸುತ್ತಿದ್ದರು. ಇದರಿಂದ ಭಯಭೀತರಾದ ಜನ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅಸಲಿ ಸತ್ಯ ಬಾಯ್ಬಿಟ್ಟಿದ್ದು, ಪ್ರಾಂಕ್ ವೀಡಿಯೊ ಮಾಡಿ ಯು ಟ್ಯೂಬ್, ಟಿಕ್ ಟಾಕ್‍ಗೆ ಅಪ್ ಲೋಡ್ ಮಾಡುವ ಪ್ಲಾನ್ ಹೊಂದಿದ್ದರು ಎಂದು ತಿಳಿದು ಬಂದಿದೆ.

    ಯಶವಂತಪುರದ ಶರೀಫ್ ನಗರದಲ್ಲಿ ಕೆಲ ಹುಡುಗರು ದೆವ್ವದ ವೇಷ ಹಾಕಿ ಹೆದರಿಸುತ್ತಿದ್ದಾರೆ ಎಂದು ನಿನ್ನೆ ರಾತ್ರಿ 2-30ರ ಸುಮಾರಿಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಮ್ಮ ಕ್ರೈಂ ಸಿಬ್ಬಂದಿ ಹೋದಾಗ ಪ್ರಾಂಕ್ ಮಾಡುತ್ತಿದ್ದರು. ಆಟೋದವರನ್ನು ಮತ್ತು ದ್ವಿಚಕ್ರ ವಾಹನ ಸವಾರರನ್ನು ಅಡ್ಡ ಹಾಕಿ ಹೆದರಿಸುತ್ತಿದ್ದರು. ದೆವ್ವದ ವೇಷ ಹಾಕಿದ್ದರಿಂದ ಜನ ಹೆದರುತ್ತಿದ್ದರು. ಅಲ್ಲದೆ ಒಬ್ಬ ಸತ್ತಂತೆ ನಟಿಸುತ್ತಿದ್ದ. ನಮ್ಮ ಕ್ರೈಂ ಸಿಬ್ಬಂದಿಯನ್ನು ಹೆದರಿಸುವ ಪ್ರಯತ್ನ ಮಾಡಿದ್ದರು ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.

    ನಿನ್ನೆ ತುಂಬಾ ಸೂಕ್ಷ್ಮ ದಿನವಾಗಿತ್ತು. ಈದ್ ಮಿಲಾದ್ ಇತ್ತು, ಟಿಪ್ಪು ಜಯಂತಿ, ಅಲ್ಲದೆ ಅಯೋಧ್ಯೆ ತೀರ್ಪು ಬೇರೆ ಬಂದಿತ್ತು. ಇಂತಹ ಸಂದರ್ಭಲ್ಲಿ ಮಧ್ಯರಾತ್ರಿ ಪ್ರಾಂಕ್ ಮಾಡುವುದು ಸರಿಯಲ್ಲ. ಸಡನ್ ಆಗಿ ದೆವ್ವದ ರೀತಿ ಅಡ್ಡ ಬಂದರೆ ಮೃದು ಹೃದಯ ಹೊಂದಿದವರಿಗೆ ಏನಾದರೂ ಅಪಾಯ ಆಗಬಹುದು. ಇದಕ್ಕಾಗಿ ಅನುಮತಿ ತೆಗೆದುಕೊಂಡು ಮಾಡಬಹುದಿತ್ತು. ಆದರೆ ಯುವಕರು ಯಾವುದೇ ಅನುಮತಿ ಪಡೆದಿರಲಿಲ್ಲ ಎಂದರು.

    ಏಳು ಜನರನ್ನು ಬಂಧನಕ್ಕೆ ಒಳಪಡಿಸಿ ವಿಚಾರಣೆ ಒಳಪಡಿಸಿದಾಗ ಅವರೆಲ್ಲ ವಿದ್ಯಾರ್ಥಿಗಳಾಗಿದ್ದು ನಗರದ ವಿವಿಧ ಕಾಲೇಜುಗಳಲ್ಲಿ ಓದುತ್ತಿರುವುದಾಗಿ ಹೇಳಿದ್ದಾರೆ. ಇನ್ನು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಕೊಟ್ಟು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಶಶಿಕುಮಾರ್ ತಿಳಿಸಿದರು.