Tag: Pranitha Subhash

  • ಮುತ್ತಿನಿಂದಲೇ ರವಿಕೆ ಮಾಡಿಸಿಕೊಂಡ ಬ್ಯೂಟಿ ಪ್ರಣೀತಾ

    ಮುತ್ತಿನಿಂದಲೇ ರವಿಕೆ ಮಾಡಿಸಿಕೊಂಡ ಬ್ಯೂಟಿ ಪ್ರಣೀತಾ

    ಸಿನಿಮಾದಿಂದ ಕೊಂಚ ಬ್ರೇಕ್ ಪಡೆದುಕೊಂಡಿರುವ ನಟಿ ಪ್ರಣೀತಾ ಸುಭಾಷ್ (Pranitha Subhash) ಇದೀಗ ಎರಡು ಮಕ್ಕಳ ತಾಯಿ. ಮಕ್ಕಳ ಲಾಲನೆ ಪಾಲನೆ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟೀವ್ ಇರುವ ನಟಿ. ಇಬ್ಬರು ಮಕ್ಕಳ ತಾಯಿಯಾದ ಬಳಿಕವೂ ಗ್ಲ್ಯಾಮರ್‌ ಕಾಪಾಡಿಕೊಂಡಿರುವ ನಟಿ ಪ್ರಣೀತಾ ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಹಲ್‌ಚಲ್ ಸೃಷ್ಟಿಸುವ ಫೋಟೋ ಪೋಸ್ಟ್ ಮಾಡಿದ್ದಾರೆ.

    ವಿನೂತನ ಡಿಸೈನ್ ಫೋಟೋ ಪೋಸ್ಟ್ ಮಾಡಿರುವ ಪ್ರಣೀತಾ ಮುತ್ತಿನಿಂದಲೇ (Pearls) ಪೋಣಿಸಿರುವ ರವಿಕೆ ಧರಿಸಿದ್ದಾರೆ. ಮುತ್ತಿನ ರವಿಕೆ ಡಿಸೈನ್ ಆಕರ್ಷಕವಾಗಿ ಕಾಣುತ್ತಿದ್ದು ಅತ್ಯಂತ ಮೋಹಕವಾಗಿದೆ. ಇದೇ ಉಡುಗೆಯಲ್ಲಿ ಪ್ರಣೀತಾ ವಿಧವಿಧದ ಪೋಸ್ ಕೊಟ್ಟಿದ್ದಾರೆ.  ಇದನ್ನೂ ಓದಿ: ‘ನನಗೆ ಫಾರಿನ್ ಟ್ರಿಪ್ ಮಾಡೋಕೆ ದುಡ್ಡು ಯಾರ್ ಕೊಡ್ತಾರೆ ಗೊತ್ತಾ?’ – ನಿವಿ ಸೀಕ್ರೆಟ್ ರಿವೀಲ್

     

    View this post on Instagram

     

    A post shared by Pranita Subhash (@pranitha.insta)


    ಫ್ಯಾಶನ್ ಮಾಡೆಲ್ ಆಗಿರುವ ಪ್ರಣೀತಾ ಇತ್ತೀಚೆಗೆ ಸಿನಿಮಾಗಳಿಂದ ದೂರ ಉಳಿದಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಫುಲ್ ಆ್ಯಕ್ಟೀವ್. ಇತ್ತೀಚೆಗೆ ಕೇನ್ ಫಿಲ್ಮ್ ಫೆಸ್ಟಿವಲ್‌ನಲ್ಲೂ ಭಾಗವಹಿಸಿದ್ದರು. ಅಂದಹಾಗೆ ಇನ್‌ಸ್ಟಾದಲ್ಲಿ ಸುಮಾರು 60 ಲಕ್ಷದಷ್ಟು ಫಾಲೋವರ್ಸ್ ಹೊಂದಿದ್ದಾರೆ. ಹೀಗೆ ಚೆಂದದ ಫೋಟೋಗಳನ್ನ ಪೋಸ್ಟ್ ಮಾಡುವ ಮೂಲಕ ತೆಲುಗು ಹಾಗೂ ಕನ್ನಡ ಅಭಿಮಾನಿಗಳ ಜೊತೆ ಎಂಗೇಜ್ ಆಗಿರುತ್ತಾರೆ. ಇದನ್ನೂ ಓದಿ: ಎರಡನೇ ಮದುವೆ ಬಗ್ಗೆ ಮೌನ ಮುರಿದ ನಿವೇದಿತಾ ಗೌಡ

  • ಬೆಟ್ಟಿಂಗ್‌ ಆ್ಯಪ್ ಹಗರಣ ಪ್ರಕರಣ; ಪ್ರಣೀತಾ, ಪ್ರಕಾಶ್‌ ರಾಜ್‌, ದೇವರಕೊಂಡ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ED ಕೇಸ್‌

    ಬೆಟ್ಟಿಂಗ್‌ ಆ್ಯಪ್ ಹಗರಣ ಪ್ರಕರಣ; ಪ್ರಣೀತಾ, ಪ್ರಕಾಶ್‌ ರಾಜ್‌, ದೇವರಕೊಂಡ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ED ಕೇಸ್‌

    ಹೈದರಾಬಾದ್: ಬೆಟ್ಟಿಂಗ್ ಆ್ಯಪ್ ಹಗರಣ (Betting App Scam) ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕನ್ನಡ ನಟಿ ಪ್ರಣೀತಾ ಸುಭಾಷ್‌, ಬಹುಭಾಷಾ ನಟ ಪ್ರಕಾಶ್‌ ರಾಜ್‌, ತೆಲುಗು ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ಜಾರಿ ನಿರ್ದೇಶನಾಲಯ (ED) ಪ್ರಕರಣ ದಾಖಲಿಸಿದೆ.

    ನಟ, ನಟಿಯರ ಜೊತೆಗೆ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯನ್ಸರ್, ಯುಟ್ಯೂಬರ್‌ಗಳ ವಿರುದ್ಧವೂ ಇಡಿ ಗುರುವಾರ ಪ್ರಕರಣ ದಾಖಲಿಸಿದೆ.

    5 ರಾಜ್ಯಗಳ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್ ಆಧರಿಸಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ. ಇದರಲ್ಲಿ ಆರೋಪಿತರು ಬೆಟ್ಟಿಂಗ್ ಮತ್ತಿತರ ಜೂಜುಗಳ ಮೂಲಕ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ರಾಮಾಯಣದಲ್ಲಿ ಯಶ್ ಪಾತ್ರ ಬರೀ 15 ನಿಮಿಷ?

    ಎಫ್‌ಐಆರ್‌ ದಾಖಲಾದ ಸೆಲಬ್ರಿಟಿಗಳ ಪಟ್ಟಿ
    ED ದಾಖಲಿಸಿಕೊಂಡಿರುವ ದೂರಿನಲ್ಲಿ ಮೂವರು ಸ್ಟಾರ್‌ ನಟರೊಂದಿಗೆ 29 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ, ಪ್ರಣಿತಾ ಸುಭಾಷ್, ನಿಧಿ ಅಗರ್ವಾಲ್, ಅನನ್ಯ ನಾಗಲ್ಲ, ಸಿರಿ ಹನುಮಂತ್, ಶ್ರೀಮುಖಿ, ವರ್ಷಿಣಿ ಸೌಂದರರಾಜನ್, ವಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಅಮೃತಾ ಚೌಧರಿ, ನಯನಿ ಪಾವನಿ, ನೇಹಾ ಪಠಾಣ್, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣು ಪ್ರಿಯಾ, ಹರ್ಷ ಸಾಯಿ, ಭಯ್ಯಾ ಸನ್ನಿ ಯಾದವ್, ಶ್ಯಾಮಲಾ, ಟೇಸ್ಟಿ ತೇಜಾ, ರೀತು ಚೌಧರಿ, ಬಂದಾರು ಶೇಷಾಯನಿ ಸುಪ್ರೀತ, ಬೆಟ್ಟಿಂಗ್ ವೇದಿಕೆಗಳ ನಿರ್ವಾಹಕರು, ಕಿರಣ್ ಗೌಡ್, ಸೋಷಿಯಲ್‌ ಮೀಡಿಯಾ ಸ್ಟಾರ್‌ ಅಜಯ್, ಸನ್ನಿ ಮತ್ತು ಸುಧೀರ್‌ ಹಾಗೂ ‘ಲೋಕಲ್ ಬಾಯ್ ನಾನಿ’ ಯೂಟ್ಯೂಬ್ ಚಾನೆಲ್‌ ವಿರುದ್ಧ ಕೇಸ್‌ ದಾಖಲಾಗಿದೆ.

    ಈ ಸೆಲೆಬ್ರಿಟಿಗಳು ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳಾದ ಜಂಗಲ್ ರಮ್ಮಿ, ಜೀತ್‌ವಿನ್, ಲೋಟಸ್‌-365 ಸೇರಿದಂತೆ ಹಲವು ಆ್ಯಪ್‌ಗಳ ಪರ ಪ್ರಚಾರ ನಡೆಸಿದ್ದರು. ಇದಕ್ಕಾಗಿ ಹಣ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಹೊಂಬಾಳೆ ಫಿಲಂಸ್ ಪ್ರಸ್ತುತಿ: ಮಹಾವತಾರ್ ನರಸಿಂಹ ಟ್ರೈಲರ್ ರಿಲೀಸ್

    ಈ ಪ್ರಕರಣ ಕುರಿತು ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಇನ್ನೂ ಕೆಲ ಎಫ್‌ಐಆರ್‌ಗಳನ್ನು ED ಕಲೆಹಾಕುತ್ತಿದ್ದು, ಶೀಘ್ರದಲ್ಲಿ ಇವರ ಹೇಳಿಕೆಗಳನ್ನ ದಾಖಲಿಸಿಕೊಳ್ಳಲಿದೆ. ತನಿಖೆ ಪ್ರಗತಿಯಲ್ಲಿದ್ದು, ಈ ಆ್ಯಪ್‌ಗಳು ಅಕ್ರಮವಾಗಿ ಸಂಗ್ರಹಿಸಿದ ಮೊತ್ತವನ್ನು ಕಲೆ ಹಾಕಲಾಗುತ್ತಿದೆ ಎಂದು ಇಡಿ ತಿಳಿಸಿರುವುದಾಗಿ ವರದಿಗಳು ಹೇಳಿವೆ.  ಇದನ್ನೂ ಓದಿ: ಹೊಸ ಗೆಟಪ್‌ನಲ್ಲಿ ಶಿವಣ್ಣನ ಫಸ್ಟ್ ಲುಕ್ ರಿಲೀಸ್

  • ಕಾನ್ ಚಿತ್ರೋತ್ಸವದಲ್ಲಿ ಪ್ರಣಿತಾ ಧರಿಸಿದ್ದ ವಾಚ್ ಬೆಲೆ ಕೇಳಿ ಫ್ಯಾನ್ಸ್ ಶಾಕ್!

    ಕಾನ್ ಚಿತ್ರೋತ್ಸವದಲ್ಲಿ ಪ್ರಣಿತಾ ಧರಿಸಿದ್ದ ವಾಚ್ ಬೆಲೆ ಕೇಳಿ ಫ್ಯಾನ್ಸ್ ಶಾಕ್!

    ಹುಭಾಷಾ ನಟಿ ಪ್ರಣಿತಾ ಸುಭಾಷ್ (Pranitha Subhash) ಅವರು ಕಾನ್ ಫಿಲ್ಮ್ ಫೆಸ್ಟಿವಲ್‌ನ (78th Cannes Film Festival) ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ನಟಿಯ ಸುಂದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಈ ಸಿನಿಮಾ ಹಬ್ಬದಲ್ಲಿ ಕನ್ನಡದ ನಟಿ ಪ್ರಣಿತಾ ಸುಭಾಷ್ ಕೂಡ ಭಾಗಿಯಾಗಿದ್ದಾರೆ. ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಕಾನ್ ಚಲನಚಿತ್ರೋತ್ಸವದಲ್ಲಿ ಮೂರು ಬಗೆಯ ಡಿಫರೆಂಟ್ ಧಿರಿಸಿನಲ್ಲಿ ಮಿಂಚಿದ್ದಾರೆ. ಬೇಬಿ ಪಿಂಕ್ ಡ್ರೆಸ್, ರೆಡ್ ಕಲರ್ ಡ್ರೆಸ್ ಮತ್ತು ಸೀರೆಯಲ್ಲಿ ಅವರು ಕಂಗೊಳಿಸಿದ್ದಾರೆ.

    ಅದರಲ್ಲೂ ಕಾನ್‌ನಲ್ಲಿ ಪಿಂಕ್ ಡ್ರೆಸ್ ಜೊತೆ ನಟಿ ಧರಿಸಿದ್ದ ದುಬಾರಿ ವಾಚ್ ಎಲ್ಲರ ಗಮನ ಸಳೆದಿದೆ. ಆ ವಾಚ್ ಬೆಲೆ 75 ಸಾವಿರದಿಂದ 1 ಲಕ್ಷ ರೂ. ಎನ್ನಲಾಗಿದೆ. ಈ ವಾಚ್ ಬೆಲೆ ಕೇಳಿ ಫ್ಯಾನ್ಸ್ ದಂಗಾಗಿದ್ದಾರೆ. ಇದನ್ನೂ ಓದಿ:ಬಿಗ್ ಆಫರ್ ಗಿಟ್ಟಿಸಿಕೊಂಡ ಕನ್ನಡತಿ- ಪ್ರಭಾಸ್‌ಗೆ ರುಕ್ಮಿಣಿ ವಸಂತ್ ನಾಯಕಿ?

    ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ಬಗ್ಗೆ ನಟಿ ಮಾತನಾಡಿ, ಕಾನ್ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂದು ಚಿಕ್ಕ ವಯಸ್ಸಿನಲ್ಲಿ ಕಾಣುತ್ತಿದ್ದ ಕನಸು ಈಗ ನನಸಾಗಿದೆ. ಆ ಮಟ್ಟಕ್ಕೆ ಭಾರತೀಯ ಸಿನಿಮಾಗಳು ಮನ್ನಣೆ ಗಳಿಸಿವೆ ಎಂದಿದ್ದಾರೆ. ಇದನ್ನೂ ಓದಿ:ಎಲ್ಲಾ ಸಂದರ್ಭಕ್ಕೂ ನಗುವೇ ಒಳ್ಳೆಯ ಉತ್ತರ – ದರ್ಶನ್ ಭೇಟಿ ಬಳಿಕ ಪವಿತ್ರಾ ಪೋಸ್ಟ್!

    78ನೇ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 13ರಿಂದ ಆರಂಭಗೊಂಡಿದ್ದು, 24ರ ವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ದೇಶ ವಿದೇಶದ ಕಲಾವಿದರಿಗೆ ಆಹ್ವಾನಿಸುತ್ತಾರೆ. ಈ ಕಾರ್ಯಕ್ರಮಕ್ಕೆ ನಟಿ ಪ್ರಣಿತಾ ಕೂಡ ಭಾಗಿಯಾಗಿದ್ದಾರೆ.

     

    View this post on Instagram

     

    A post shared by Pranita Subhash (@pranitha.insta)

    ಈ ಸಿನಿಮಾ ಹಬ್ಬದಲ್ಲಿ ಐಶ್ವರ್ಯಾ ರೈ (Aishwarya Rai), ಜಾನ್ವಿ ಕಪೂರ್, ಆದಿತಿ ರಾವ್ ಹೈದರಿ, ಕನ್ನಡದ ನಟಿ ದಿಶಾ ಮದನ್ (Disha Madan) ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

  • ಪ್ರಣಿತಾ ಮಗನ ನಾಮಕರಣದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಪ್ರಣಿತಾ ಮಗನ ನಾಮಕರಣದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್ (Pranitha Subhash) ಮಗನ ನಾಮಕರಣ ಏ.20ರಂದು ಅದ್ಧೂರಿಯಾಗಿ ಜರುಗಿದೆ. ಈ ಸಮಾರಂಭಕ್ಕೆ ಮೋಹಕತಾರೆ ರಮ್ಯಾ (Ramya) ಸೇರಿದಂತೆ ಅನೇಕ ಕನ್ನಡದ ನಟ-ನಟಿಯರು ಭಾಗಿಯಾಗಿದ್ದಾರೆ.

    ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ನಟಿಯ ಮಗನ ನಾಮಕರಣ (Naming Ceremony) ನಡೆದಿದೆ. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ನಟ, ನಟಿಯರಿಗೆ ಆಹ್ವಾನ ನೀಡಲಾಗಿತ್ತು. ಅದರಂತೆ ರಮ್ಯಾ ಕೂಡ ನಾಮಕರಣ ಫಂಕ್ಷನ್‌ಗೆ ಆಗಮಿಸಿ ಪ್ರಣಿತಾ ಮಗನಿಗೆ ಶುಭಕೋರಿದರು. ಈ ಸಮಾರಂಭದಲ್ಲಿ ರಮ್ಯಾ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.

    ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಅವರು ನಟಿಯ ಮಗನ ನಾಮಕರಣಕ್ಕೆ ಆಗಮಿಸಿದ್ದರು. ಇದನ್ನೂ ಓದಿ:ಚಂದನ್ ಶೆಟ್ಟಿ, ಸುಪ್ರೀತಾ ಸತ್ಯನಾರಾಯಣ್ ಎಂಗೇಜ್‌ಮೆಂಟ್ ಫೋಟೋಸ್

    ಡಾಲಿ ಧನಂಜಯ, ಯೋಗರಾಜ್ ಭಟ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ಪ್ರಣಿತಾ ಪುತ್ರನಿಗೆ ಶುಭಹಾರೈಸಿದರು. ಇದನ್ನೂ ಓದಿ:ನಾನು ಚಿಕ್ಕಂದಿನಿಂದ ಶಿವನ ಭಕ್ತ: ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲದಲ್ಲಿ ಯಶ್

    ‘ಮಾಕ್ಸ್’ ಚಿತ್ರದ ನಟಿ ಸಂಯುಕ್ತಾ ಹೊರನಾಡ್, ಮಾಳವಿಕಾ ಅವಿನಾಶ್, ಹಿರಿಯ ನಟಿ ಶ್ರುತಿ ಕೃಷ್ಣ, ಕೆ. ಸುಧಾಕರ್, ನಟಿ ಅಮೂಲ್ಯ, ಧನ್ಯ ರಾಮ್‌ಕುಮಾರ್ ಅನೇಕರು ಭಾಗಿಯಾಗಿದ್ದರು.

    ಈ ಸಂದರ್ಭ ಲೈಟ್ ಪಿಂಕ್ ಬಣ್ಣದ ಸೀರೆಯಲ್ಲಿ ಪತಿಯೊಂದಿಗೆ ನಿಂತು ಪ್ರಣಿತಾ ಪೋಸ್ ನೀಡಿದ್ದಾರೆ. ಟ್ರೆಡಿಷನಲ್ ಲುಕ್‌ನಲ್ಲಿ ನಟಿ ಮಿಂಚಿದ್ದಾರೆ.

    ಅಂದಹಾಗೆ, ಎರಡನೇ ಮಗು ಇಂದು (ಏ.20) ಜಯ್ ಕೃಷ್ಣ ನಿತಿನ್ ರಾಜ್ ಅನ್ನೋ ಹೆಸರಿಟ್ಟಿದ್ದಾರೆ ಪ್ರಣಿತಾ ದಂಪತಿ.

     

    View this post on Instagram

     

    A post shared by Pranita Subhash (@pranitha.insta)

    2021ರಲ್ಲಿ ನಿತಿನ್ ರಾಜ್ ಜೊತೆ ಪ್ರಣಿತಾ ಸುಭಾಷ್ ಮದುವೆಯಾದರು. ಈ ಜೋಡಿಗೆ ಇಬ್ಬರೂ ಮುದ್ದಾದ ಮಕ್ಕಳಿದ್ದಾರೆ. 2 ವರ್ಷದ ಮುದ್ದು ಮಗಳಿಗೆ ಆರ್ನಾ ಎಂದು ಹೆಸರಿಟ್ಟಿದ್ದಾರೆ.

  • ಪ್ಯಾರಿಸ್ ಬೀದಿಯಲ್ಲಿ ಪ್ರಣಿತಾ ಸುಭಾಷ್ ಹಾಟ್ ಪೋಸ್

    ಪ್ಯಾರಿಸ್ ಬೀದಿಯಲ್ಲಿ ಪ್ರಣಿತಾ ಸುಭಾಷ್ ಹಾಟ್ ಪೋಸ್

    ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್ (Pranitha Subhash) ಪ್ಯಾರಿಸ್ (Paris) ಬೀದಿಯಲ್ಲಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಎರಡು ಮಕ್ಕಳ ತಾಯಿಯಾಗಿರೋ ನಟಿಯ ಬೋಲ್ಡ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ದರ್ಶನ್‌, ಮದರ್‌ ಇಂಡಿಯಾ ನಡುವೆ ಬಿರುಕು?- ನಿಮ್ಮನ್ನು ಅರ್ಥ ಮಾಡಿಕೊಳ್ಳುವವರ ಜೊತೆಯಿರಿ ಎಂದ ನಟಿ

    ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಗಮನ ಸೆಳೆಯೋ ಪ್ರಣಿತಾ ಇದೀಗ ಪ್ಯಾರಿಸ್‌ನಲ್ಲಿ ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಲೈಟ್ ಅರೇಂಜ್ ಧಿರಿಸಿನಲ್ಲಿ ಕಂಗೊಳಿಸಿದ್ದಾರೆ. ನಟಿಯ ಮುಖದಲ್ಲಿ ಗ್ಲೋ ಎದ್ದು ಕಾಣುತ್ತಿದೆ. ಇದನ್ನೂ ಓದಿ:ಅನುಪಮಾ ಪರಮೇಶ್ವರನ್ ಸಿನಿಮಾಗೆ ಸಮಂತಾ ಸಾಥ್

    ಮತ್ತೊಂದು ಪೋಸ್ಟ್‌ನಲ್ಲಿ ಒಳಉಡುಪು ಧರಿಸಿ, ಅದರ ಮೇಲೆ ಕೋಟ್ ಹಾಗೂ ಪ್ಯಾಂಟ್ ಧರಿಸಿದ್ದಾರೆ. ವಿವಿಧ ಭಂಗಿಯಲ್ಲಿ ಪ್ರಣಿತಾ ಪೋಸ್ ನೀಡಿದ್ದಾರೆ. ನಟಿಯ ಬೋಲ್ಡ್ ಅವತಾರಕ್ಕೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

    ಪ್ರಣಿತಾ ಸುಭಾಷ್ ತಾಯಿಯಾದ್ಮೇಲೆ ನಿಮ್ಮ ಅಂದ ಹೆಚ್ಚಾಯ್ತಾ? ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ನಟಿಯ ಫ್ಯಾಷನ್ ಸೆನ್ಸ್‌ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಸಂತೂರ್‌ ಮಮ್ಮಿ ಎಂದು ಹಾಡಿ ಹೊಗಳಿದ್ದಾರೆ.

    ಅಂದಹಾಗೆ, ಉದ್ಯಮಿ ನಿತಿನ್ ಜೊತೆ 2021ರಲ್ಲಿ ಹಸೆಮಣೆ ಏರಿದರು. ಅವರ ಸುಂದರ ದ್ಯಾಂಪತ್ಯಕ್ಕೆ ಇಬ್ಬರೂ ಮಕ್ಕಳು ಸಾಕ್ಷಿಯಾಗಿದ್ದಾರೆ.

    ಮದುವೆಯಾದ್ಮೇಲೆಯೂ ಸಿನಿಮಾಗಳಲ್ಲಿ ಪ್ರಣಿತಾ ಆ್ಯಕ್ಟೀವ್ ಆಗಿದ್ದಾರೆ. ಕಳೆದ ವರ್ಷದ ಅಂತ್ಯದಲ್ಲಿ ಮಲಯಾಳಂ ಸಿನಿಮಾದಲ್ಲಿ ನಟಿ ಅಭಿನಯಿಸಿದ್ದರು. ದಿಲೀಪ್‌ಗೆ ನಾಯಕಿಯಾಗಿ ನಟಿಸಿದರು.

    ‘ಪೋರ್ಕಿ’ ಸಿನಿಮಾದ ಮೂಲಕ ದರ್ಶನ್‌ಗೆ (Darshan) ನಾಯಕಿಯಾಗಿ ನಟಿಸಿದ್ದರು. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಸ್ಟಾರ್ ನಟನರ ಜೊತೆ ನಟಿಸಿದ್ದಾರೆ. ಜ್ಯೂ.ಎನ್‌ಟಿಆರ್, ರಾಮ್ ಪೋತಿನೇನಿ ಸೇರಿದಂತೆ ಅನೇಕರ ಜೊತೆ ತೆರೆಹಂಚಿಕೊಂಡಿದ್ದಾರೆ.

  • ಮಗನ ಫೋಟೋ ರಿವೀಲ್ ಮಾಡಿದ ಪ್ರಣೀತಾ ಸುಭಾಷ್- ಫ್ಯಾನ್ಸ್ ಕಣ್ಣು ನಟಿಯ ಮೇಲೆ

    ಮಗನ ಫೋಟೋ ರಿವೀಲ್ ಮಾಡಿದ ಪ್ರಣೀತಾ ಸುಭಾಷ್- ಫ್ಯಾನ್ಸ್ ಕಣ್ಣು ನಟಿಯ ಮೇಲೆ

    ಸ್ಯಾಂಡಲ್‌ವುಡ್‌ ನಟಿ ಪ್ರಣೀತಾ ಸುಭಾಷ್ (Pranitha Subhash) ತಮ್ಮ ಮಗಳ ಜೊತೆಗೆ ಮಗನ ಫೋಟೋವನ್ನು ಸಹ ರಿವೀಲ್ ಮಾಡಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ನಟಿಯ ಅಂದವನ್ನು ಹೊಗಳೋದರಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಪವಿತ್ರಾಗೌಡ ಬರ್ತ್‌ಡೇಗೆ ವೀಡಿಯೋ ಹಂಚಿಕೊಂಡು ವಿಶ್ ಮಾಡಿದ ಮಗಳು ಖುಷಿ ಗೌಡ

    ಪ್ರಣೀತಾ 2021 ರಲ್ಲಿ ಉದ್ಯಮಿ, ವೆಗಾ ಸಿಟಿ ಮಾಲ್‌ ಮಾಲೀಕ ನಿತಿನ್ ರಾಜು (Nithin Raju) ರನ್ನು ವಿವಾಹವಾದರು. ವಿವಾಹದ ಬಳಿಕ ಸಿನಿಮಾದಲ್ಲಿ ಪ್ರಣೀತಾ ಕಾಣಿಸಿಕೊಂಡಿದ್ದು ಕಡಿಮೆಯೇ. ಈ ವರ್ಷ ಪ್ರಣೀತಾ ನಟನೆಯ ಮಲಯಾಳಂ ಸಿನಿಮಾ ‘ತಂಗಮಣಿ’ ಸಿನಿಮಾ ಹಾಗೂ ಕನ್ನಡದಲ್ಲಿ ‘ರಾಮನ ಅವತಾರ’ ಸಿನಿಮಾ ಬಿಡುಗಡೆಯಾಗಿತ್ತು.

    ಪ್ರಣೀತಾ 2022ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅವರು 2024ರಲ್ಲಿ ಮತ್ತೊಂದು ಮಗುವಿಗೆ ಜನ್ಮ ನೀಡಿದರು. ಜುಲೈನಲ್ಲಿ ಎರಡನೇ ಪ್ರೆಗ್ನೆನ್ಸಿ ಬಗ್ಗೆ ಘೋಷಿಸಿದ ಪ್ರಣೀತಾ, ಸೆಪ್ಟೆಂಬರ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇತ್ತೀಚೆಗೆ ತಮ್ಮ 2ನೇ ಮಗುವಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನಟಿ  ಮತ್ತು ಅವರ ಪತಿ ನಿತಿನ್ ರಾಜು ತಮ್ಮ 2ನೇ ಮಗುವಿನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ತಮ್ಮ ಅಭಿಮಾನಿಗಳಿಗೂ ಮಗುವಿನ ಪರಿಚಯ ಮಾಡಿಕೊಟ್ಟಿದ್ದಾರೆ.

    ಪ್ರಣೀತಾ ತಮ್ಮ ಮಗಳಿಗೆ ಅರ್ನಾ ಎಂದು ಹೆಸರಿಟ್ಟಿದ್ದು, ಮಗನಿಗೆ ಇನ್ನೂ ಹೆಸರಿಟ್ಟಿಲ್ಲ. ತಮ್ಮನ ಆಗಮನದಿಂದ ಮಗಳು ಖುಷಿಯಾಗಿದ್ದಾಳೆ ಎಂದಿದ್ದಾರೆ.  ಇಬ್ಬರೂ ಮುದ್ದಾದ ಮಕ್ಕಳ ಜೊತೆಗಿನ ಫೋಟೋ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ಎರಡು ಮಕ್ಕಳಾದರೂ ಅದೇ ಚಾರ್ಮ್ ಉಳಿಸಿಕೊಂಡಿರುವ ಪ್ರಣೀತಾರ ಬ್ಯೂಟಿಯನ್ನು ಹಾಡಿ ಹೊಗಳಿದ್ದಾರೆ ಫ್ಯಾನ್ಸ್.

     

    View this post on Instagram

     

    A post shared by Pranita Subhash (@pranitha.insta)

    ‘ಪೊರ್ಕಿ’ ಸಿನಿಮಾದಲ್ಲಿ ದರ್ಶನ್ ತೂಗುದೀಪಗೆ ನಾಯಕಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬ್ಯೂಟಿ ಪ್ರಣೀತಾ ಸುಭಾಷ್ (Pranitha Subhash) ನಂತರ ತೆಲುಗು, ತಮಿಳು, ಹಿಂದಿ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.

    ಕನ್ನಡಲ್ಲಿ ದರ್ಶನ್, ಗಣೇಶ್, ದುನಿಯಾ ವಿಜಯ್, ಚಿರಂಜೀವಿ ಸರ್ಜಾ, ಉಪೇಂದ್ರರಂತಹ ದಿಗ್ಗಜರೊಂದಿಗೆ ನಟಿಸಿರುವ ಪ್ರಣೀತಾ, ತೆಲುಗಿನಲ್ಲಿ ಸಿದ್ಧಾರ್ಥ್, ಮಹೇಶ್ ಬಾಬು, ಎನ್‌ಟಿಆರ್, ಪವನ್ ಕಲ್ಯಾಣ್, ರಾಮ್ ಜೊತೆಯೂ ನಟಿಸಿದ್ದಾರೆ.

  • ಡೆಲಿವರಿ ಬಳಿಕ ಮಗನ ಜೊತೆಗಿನ ಫೋಟೋ ಹಂಚಿಕೊಂಡ ಪ್ರಣೀತಾ ಸುಭಾಷ್

    ಡೆಲಿವರಿ ಬಳಿಕ ಮಗನ ಜೊತೆಗಿನ ಫೋಟೋ ಹಂಚಿಕೊಂಡ ಪ್ರಣೀತಾ ಸುಭಾಷ್

    ಹುಭಾಷಾ ನಟಿ ಪ್ರಣೀತಾ ಸುಭಾಷ್ (Pranitha Subhash) ಅವರು ಮಗನ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಡೆಲಿವರಿ ಬಳಿಕ ಮೊದಲ ಬಾರಿಗೆ ಮಗನ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:BBK 11: ದೊಡ್ಮನೆಯ 4ನೇ ಸ್ಪರ್ಧಿಯಾಗಿ ಗೋಲ್ಡ್‌ ಸುರೇಶ್‌

    ಇತ್ತೀಚೆಗೆ ನಟಿ ಪ್ರಣೀತಾ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಮಗನ ಪಾಲನೆಯಲ್ಲಿ ಬ್ಯುಸಿಯಿದ್ದ ನಟಿ ಮಗುವಿನ ಜೊತೆಗಿನ ಫೋಟೋ ಶೇರ್ ಮಾಡಿ 40 ದಿನಗಳ ಕಾಲ ಹೆಕ್‌ಟಿಕ್ ಆಗಿತ್ತು. ಆದರೂ ಯೋಗ್ಯವಾಗಿತ್ತು ಎಂದು ನಟಿ ಬರೆದುಕೊಂಡಿದ್ದಾರೆ. ಮಗನನ್ನು ತಬ್ಬಿ ಮುದ್ದಾಡುತ್ತಿರುವ ನಟಿಯ ಫೋಟೋ ನೋಡುಗರ ಗಮನ ಸೆಳೆದಿದೆ.

     

    View this post on Instagram

     

    A post shared by Pranita Subhash (@pranitha.insta)

    ಅಂದಹಾಗೆ, ಲಾಕ್‌ಡೌನ್ ವೇಳೆ 2021ರಲ್ಲಿ ಉದ್ಯಮಿ ನಿತಿನ್ ಜೊತೆ ಪ್ರಣೀತಾ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. 2022ರಲ್ಲಿ 2ನೇ ಮಗುವಿನ ಜನ್ಮ ನೀಡಿದರು. ಆ ಮಗುವಿಗೆ ಆರ್ನಾ ಎಂದು ಹೆಸರನಿಟ್ಟಿದ್ದಾರೆ. 2 ವರ್ಷಗಳ ನಂತರ ಈಗ 2ನೇ ಮಗುವಿನ ಆಗಮನವಾಗಿದೆ.

    ಪ್ರಣೀತಾ ಅವರು ಕನ್ನಡ, ಮಲಯಾಳಂ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಮದುವೆಯಾದ್ಮೇಲೆಯೂ ನಟಿ ಆ್ಯಕ್ಟೀವ್ ಆಗಿದ್ದಾರೆ.

  • ಗಂಡು ಮಗುವಿಗೆ ಜನ್ಮ ನೀಡಿದ ಪ್ರಣೀತಾ ಸುಭಾಷ್

    ಗಂಡು ಮಗುವಿಗೆ ಜನ್ಮ ನೀಡಿದ ಪ್ರಣೀತಾ ಸುಭಾಷ್

    ಸ್ಯಾಂಡಲ್‌ವುಡ್ ನಟಿ ಪ್ರಣೀತಾ ಸುಭಾಷ್ (Pranitha Subhash) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಎರಡನೇ ಮಗುವನ್ನು ಬರಮಾಡಿಕೊಂಡಿರುವ ಖುಷಿಯಲ್ಲಿದ್ದಾರೆ ಪ್ರಣೀತಾ ಸುಭಾಷ್‌ ದಂಪತಿ.

    ತುಂಬಾ ಖುಷಿಯಾಗುತ್ತಿದೆ, ಪುಟ್ಟ ಮಗುವನ್ನು ನೋಡಿ ಮಗಳು ಆರ್ನಾ ಆಕಾಶದಲ್ಲಿ ತೇಲುತ್ತಿದ್ದಾಳೆ. ಆಕೆ ತಮ್ಮನನ್ನು ಬೇಬಿ ಎಂದು ಕರೆಯುತ್ತಿದ್ದಾಳೆ ಎಂದು ಪ್ರಣೀತಾ ಸಂತಸ ವ್ಯಕ್ತಪಡಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್

    ಅಂದಹಾಗೆ, 2021ರಲ್ಲಿ ಉದ್ಯಮಿ ನಿತಿನ್ ರಾಜು ಅವರನ್ನು ಪ್ರಣಿತಾ ಮದುವೆಯಾದರು. 2022ರಲ್ಲಿ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದರು. ಆ ಮಗುವಿಗೆ ಆರ್ನಾ ಎಂಬ ಮುದ್ದಾದ ಹೆಸರಿಟ್ಟಿದ್ದಾರೆ. ಈಗ ಮಗಳಿಗೆ 2 ವರ್ಷ ತುಂಬಿದೆ.

  • ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಕಂಗೊಳಿಸಿದ ಪ್ರಣೀತಾ ಸುಭಾಷ್

    ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಕಂಗೊಳಿಸಿದ ಪ್ರಣೀತಾ ಸುಭಾಷ್

    ಹುಭಾಷಾ ನಟಿ ಪ್ರಣೀತಾ ಸುಭಾಷ್ (Pranitha Subhash) 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಬೇಬಿ ಬಂಪ್ (Baby Bump) ಫೋಟೋಶೂಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಮತ್ತೆ ತಾಯಿಯಾಗ್ತಿರುವ ನಟಿ, ಸಖತ್ ಗ್ಲ್ಯಾಮರಸ್‌ ಆಗಿ ಕಾಣಿಸಿಕೊಂಡಿರೋದು ಅಭಿಮಾನಿಗಳ ಗಮನ ಸೆಳೆದಿದೆ.

    ಲೈಟ್ ಬಣ್ಣದ ಸ್ಲಿವ್‌ಲೆಸ್ ಗೌನ್‌ನಲ್ಲಿ ಪ್ರಣೀತಾ ಕಂಗೊಳಿಸಿದ್ದಾರೆ. ಮುಖದ ಗ್ಲೋ ಮತ್ತು ನಟಿಯ ಹಾಟ್‌ & ಗ್ಲ್ಯಾಮರಸ್‌ ಲುಕ್ ನೋಡಿ ನೆಟ್ಟಿಗರು ಸಂತೂರ್ ಮಮ್ಮಿ ಎಂದು ಹಾಡಿಹೊಗಳಿದ್ದಾರೆ. ಇದನ್ನೂ ಓದಿ:ತಮಿಳು ಸೂಪರ್ ಸ್ಟಾರ್ ಸಿನಿಮಾದಲ್ಲಿ ಕನ್ನಡದ ಸೂಪರ್ ಸ್ಟಾರ್ ಫಿಕ್ಸ್

     

    View this post on Instagram

     

    A post shared by Pranita Subhash (@pranitha.insta)

    ಅಂದಹಾಗೆ, ತುಂಬು ಗರ್ಭಿಣಿ ಪ್ರಣಿತಾ ಇತ್ತೀಚೆಗೆ ನಗರದ ಪ್ರತಿಷ್ಟಿತ ರೆಸಾರ್ಟ್‌ನಲ್ಲಿ ಬೇಬಿ ಶಾವರ್ ಪಾರ್ಟಿ ಆಯೋಜಿಸಿದ್ದು, ಅದರ ಫೋಟೋಗಳನ್ನ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಪಕ್ಕಾ ವೆಸ್ಟರ್ನ್ ಸ್ಟೈಲ್ ಬೇಬಿ ಶವರ್ ಪಾರ್ಟಿಯಾಗಿದ್ದು ಪ್ರಣಿತಾ ಕುಟುಂಬ ವೈಟ್ ಅಂಡ್ ವೈಟ್ ಥೀಮ್ ಉಡುಗೆಯಲ್ಲಿ ಮಿಂಚಿದೆ. ಪತಿ, ನಾಲ್ಕು ವರ್ಷದ ಮಗಳು ಆರ್ನಾ ಡ್ರೆಸ್ ಕೋಡ್‌ನಲ್ಲಿ ಕಂಗೊಳಿಸಿದ್ದಾರೆ. ಕೇಕ್ ಕಟ್ ಮಾಡಿ ಖುಷಿಪಟ್ಟಿದ್ದಾರೆ.

    ಸಾಮಾನ್ಯವಾಗಿ ಪ್ರಣಿತಾ ಹಿಂದೂ ಸಂಪ್ರದಾಯದಲ್ಲಿ ಬರುವ ಎಲ್ಲಾ ಪೂಜೆ ಪುನಸ್ಕಾರ ಆಚರಣೆಯನ್ನ ಪಾಲಿಸುತ್ತಾ ಬಂದವರು, ಹಿಂದೆ ಚೊಚ್ಚಲ ಗರ್ಭಿಣಿ ಇದ್ದಾಗ ಸಾಂಪ್ರದಾಯಿಕ ಶೈಲಿಯಲ್ಲೇ ಸೀಮಂತ ಮಾಡಿಕೊಂಡಿದ್ದರು. ಇದೀಗ ಎರಡನೇ ಮಗು ಆಗಮನದ ಖುಷಿಯಲ್ಲಿ ಬದಲಾವಣೆಗೆಂದು ವೆಸ್ಟರ್ನ್ ಸ್ಟೈಲ್ ಪಾಲಿಸಿದಂತೆ ಕಾಣುತ್ತೆ, ಬಹುಶಃ ಪ್ರಣಿತಾಗೆ ಮುಂದೆ ಸಾಂಪ್ರದಾಯಿಕ ಸೀಮಂತ ಮಾಡಿಕೊಳ್ಳುವ ಸೂಚನೆಯೂ ಇದೆ. ಇನ್ನು ವಿದೇಶದಲ್ಲಿ ಹಲವೆಡೆ ಬೇಬಿ ಶಾವರ್ ದಿನದಲ್ಲಿ ಜೆಂಡರ್ ರಿವೀಲ್ ಕೂಡ ನಡೆಯುತ್ತೆ, ಆದರೆ ಭಾರತದಲ್ಲಿ ಇದು ಅಪರಾಧ. ಇನ್ನು ವಿದೇಶಗಳಲ್ಲಿ ಹುಟ್ಟೋ ಮಗು ಹೆಣ್ಣೋ ಗಂಡೋ ಎಂಬ ಥೀಮ್‌ನಲ್ಲಿ ಬೇಬಿ ಶಾವರ್ ಪಾರ್ಟಿ ಅಲಂಕಾರ ಮಾಡಲಾಗುವುದು ವಿಶೇಷ.

    ಪ್ರಣೀತಾ ಬೇಬಿ ಶಾವರ್ ಪಾರ್ಟಿಯಲ್ಲಿ ಬಿಳಿ-ನೀಲಿ-ಪಿಂಕ್ ಮಿಶ್ರಿತ ಬಣ್ಣದ ಬಲೂನ್‌ಗಳನ್ನ ಕಟ್ಟಿ ಸಿಂಗರಿಸಲಾಗಿದೆ. ಕಾರ್ಯಕ್ರಮದಲ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುವ ಪ್ರಣೀತಾ ಥೀಮ್‌ಗೆ ತಕ್ಕಂತೆ ವೆಸ್ಟರ್ನ್ ಸ್ಟೈಲ್ ಗೌನ್ ಧರಿಸಿ ಸರಳ ಲುಕ್‌ನಲ್ಲೇ ಆಕರ್ಷಕವಾಗಿ ಕಾಣುತ್ತಾರೆ. ಮುಂದಿನ ತಿಂಗಳೇ ಎರಡನೇ ಮಗುವಿಗೆ ತಾಯಿಯಾಗುವ ನಿರೀಕ್ಷೆಯಲ್ಲಿದ್ದಾರೆ ಪ್ರಣೀತಾ. ಮೊದಲ ಮಗು ಜನಿಸಿದ ಕೆಲವೇ ತಿಂಗಳಲ್ಲಿ ಮತ್ತೆ ಸಿನಿಮಾ/ಮಾಡೆಲಿಂಗ್/ಜಾಹೀರಾತುಗಳಲ್ಲಿ ಪ್ರಣೀತಾ ಸಕ್ರಿಯರಾಗಿದ್ದರು. ಇದೀಗ ಎರಡನೇ ಮಗು ಜನಿಸಿದ ಬಳಿಕವೂ ಅದೇ ಧ್ಯೇಯ ಹೊಂದಿದ್ದಾರೆ ಎನ್ನಲಾಗ್ತಿದೆ. ಒಟ್ನಲ್ಲಿ ಪ್ರಣೀತಾ ಸದಾ ಸುದ್ದಿಯಲ್ಲಿರ್ತಾರೆ.

    ಅಂದಹಾಗೆ, 2021ರಲ್ಲಿ ಉದ್ಯಮಿ ನಿತಿನ್ ರಾಜು ಅವರನ್ನು ಪ್ರಣಿತಾ ಮದುವೆಯಾದರು. 2022ರಲ್ಲಿ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದರು. ಆ ಮಗುವಿಗೆ ಆರ್ನಾ ಎಂಬ ಮುದ್ದಾದ ಹೆಸರಿಟ್ಟಿದ್ದಾರೆ. ಈಗ ಮಗಳಿಗೆ 2 ವರ್ಷ ತುಂಬಿದೆ.

  • ಬೇಬಿ ಶವರ್ ಫೋಟೋ ಹಂಚಿಕೊಂಡ ಪ್ರಣಿತಾ ಸುಭಾಷ್

    ಬೇಬಿ ಶವರ್ ಫೋಟೋ ಹಂಚಿಕೊಂಡ ಪ್ರಣಿತಾ ಸುಭಾಷ್

    ಹುಭಾಷಾ ನಟಿ ಪ್ರಣಿತಾ ಸುಭಾಷ್ (Pranitha Subhash) ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೇಬಿ ಶವರ್ ಕಾರ್ಯಕ್ರಮದ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕೊಡಗಿನಲ್ಲಿ ಅದ್ಧೂರಿಯಾಗಿ ನಡೆಯಿತು ಕಿರಣ್ ಅಬ್ಬಾವರಂ ಡೆಸ್ಟಿನೇಷನ್ ವೆಡ್ಡಿಂಗ್

    ತುಂಬು ಗರ್ಭಿಣಿ ಆಗಿರುವ ಪ್ರಣಿತಾ ಅವರ ಬೇಬಿ ಶವರ್ ಕಾರ್ಯಕ್ರಮ ಇತ್ತೀಚೆಗಷ್ಟೇ ಐಷಾರಾಮಿ ಹೋಟೆಲ್‌ನಲ್ಲಿ ಜರುಗಿದೆ. ಈ ವೇಳೆ, ಲೈಟ್ ಬಣ್ಣದ ಧಿರಿಸಿನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಮಗಳು ಆರ್ನಾ ಕೈ ಹಿಡಿದು ಹೋಟಲ್ ಆಗಮಿಸುತ್ತಿರುವ ಫೋಟೋ ಸೇರಿದಂತೆ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Pranita Subhash (@pranitha.insta)

    ಐಷಾರಾಮಿ ಹೋಟೆಲ್‌ನಲ್ಲಿ ನಡೆದ ನಟಿಯ ಬೇಬಿ ಶವರ್ ಕಾರ್ಯಕ್ರಮಕ್ಕೆ ಕುಟುಂಬಸ್ಥರು, ಆಪ್ತರಷ್ಟೇ ಆಹ್ವಾನ ನೀಡಲಾಗಿತ್ತು. ಮತ್ತೆ ತಾಯಿಯಾಗುತ್ತಿರುವ ನಟಿಗೆ ಅಭಿಮಾನಿಗಳು ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ಶುಭಕೋರುತ್ತಿದ್ದಾರೆ.

    ಅಂದಹಾಗೆ, 2021ರಲ್ಲಿ ಉದ್ಯಮಿ ನಿತಿನ್ ರಾಜು ಅವರನ್ನು ಪ್ರಣಿತಾ ಮದುವೆಯಾದರು. 2022ರಲ್ಲಿ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದರು. ಆ ಮಗುವಿಗೆ ಆರ್ನಾ ಎಂಬ ಮುದ್ದಾದ ಹೆಸರಿಟ್ಟಿದ್ದಾರೆ. ಈಗ ಮಗಳಿಗೆ 2 ವರ್ಷ ತುಂಬಿದೆ.