Tag: Pranita Subhash

  • ಮದುವೆಯ ಸಿಹಿ ಕ್ಷಣಗಳನ್ನು ನೆನಪಿಸಿಕೊಂಡ ಪ್ರಣಿತಾ

    ಮದುವೆಯ ಸಿಹಿ ಕ್ಷಣಗಳನ್ನು ನೆನಪಿಸಿಕೊಂಡ ಪ್ರಣಿತಾ

    ಸ್ಯಾಂಡಲ್‍ವುಡ್ ನಟಿ ಪ್ರಣಿತಾ ಸುಭಾಷ್ ಅವರು ತಮ್ಮ ವಿವಾಹದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಕಳೆದ ವರ್ಷ ಮೇ ತಿಂಗಳಿನಲ್ಲಿ ಕೊರೊನಾ ಲಾಕ್‍ಡೌನ್ ವೇಳೆ ನಿತಿನ್ ರಾಜು ಅವರ ಜೊತೆ ಪ್ರಣಿತಾ ಅವರು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಕಾರ್ಯಕ್ರಮಕ್ಕೆ ಕೇವಲ ವಧು, ವರರ ಕುಟುಂಬಸ್ಥರನ್ನು ಮಾತ್ರ ಆಹ್ವಾನಿಸಲಾಗಿತ್ತು. ಸದ್ಯ ಮದುವೆಯಾಗಿ 9 ತಿಂಗಳ ಬಳಿಕ ಇದೀಗ ಪ್ರಣಿತಾ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪತಿ ಜೊತೆ ಸಪ್ತಪದಿ ತುಳಿಯುತ್ತಿರುವ ಮತ್ತು ಮಂಟಪಕ್ಕೆ ಆಗಮಿಸುತ್ತಿರುವ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರಣಿತಾ ಸುಭಾಷ್- ನಿತಿನ್ ರಾಜ್ ಯಾರು..?

    ಈ ಫೋಟೋಗಳ ಜೊತೆಗೆ ಕ್ಯಾಪ್ಷನ್‍ನಲ್ಲಿ ಕೋವಿಡ್ ಲಾಕ್‍ಡೌನ್ ವೇಳೆ ನಡೆದ ಮದುವೆ. ಕೊನೆಯ ನಿಮಿಷದಲ್ಲಿ ಆದ ಕೆಲವು ಬದಲಾವಣೆಗಳು. ಅತಿಥಿಗಳ ಲಿಸ್ಟ್ ಕಡಿಮೆಗೊಳಿಸಿದ್ದು, ಕೊನೆಯ ನಿಮಿಷದಲ್ಲಿ ಆಭರಣಗಳನ್ನು ಧರಿಸಲು ಸಹಾಯ ಮಾಡಿದ್ದು, ಫೋಟೋಗ್ರಾಫರ್ಸ್ ಟೀಂ ಮತ್ತು ಕೆಳಗೆ ಇಳಿಯಲು ಸಾಧ್ಯವಾಗದಂತಹ ಹೋಸ್ಟ್‍ಗಳು, ಲಾಜಿಸ್ಟಿಕ್ ಸಮಸ್ಯೆಗಳು. ಆದರೂ ಈ ಎಲ್ಲ ಸಮಸ್ಯೆಗಳ ಮಧ್ಯೆ ನಮ್ಮ ಮದುವೆಯ ವೀಡಿಯೋವನ್ನು ಹಿಂತಿರುಗಿ ನೋಡಿದಾಗ ಮದುವೆಯಲ್ಲಿನ ಸರಳತೆಯನ್ನು ಇಬ್ಬರು ಪ್ರೀತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿವೆ ಮಾದಕ ನಟಿ ಸನ್ನಿ ಲಿಯೋನ್ ಅಭಿಮಾನಿ ಸಂಘ: ತಮಾಷೆಯಲ್ಲ, ನಿಜ

    ಮೂಲತಃ ಬೆಂಗಳೂರು ನಿವಾಸಿಯಾಗಿರುವ ಪ್ರಣಿತಾ ಪತಿ ನಿತಿನ್, ಮಾಲ್‍ವೊಂದರ ಓನರ್ ಆಗಿದ್ದಾರೆ. ಪ್ರಣಿತಾ ಅವರು ಕನ್ನಡದಲ್ಲಿ ಪೋರ್ಕಿ, ಜರಾಸಂಧ, ಸ್ನೇಹಿತರು, ಅಂಗಾರಕ, ಮಾಸ್ ಲೀಡರ್, ಸೆಕೆಂಡ್ ಹ್ಯಾಂಡ್ ಲವರ್ ಹೀಗೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

  • ಪ್ರಣೀತಾ ಮಾಲ್ಡಿವ್ಸ್ ಡೇಸ್- ಮೊದಲ ಬಾರಿಗೆ ಸಮುದ್ರ ಆಳದಲ್ಲಿ ಈಜಿದ ನಟಿ

    ಪ್ರಣೀತಾ ಮಾಲ್ಡಿವ್ಸ್ ಡೇಸ್- ಮೊದಲ ಬಾರಿಗೆ ಸಮುದ್ರ ಆಳದಲ್ಲಿ ಈಜಿದ ನಟಿ

    ಬೆಂಗಳೂರು: ನಟಿ ಪ್ರಣೀತಾ ಸುಭಾಷ್ ಸಖತ್ ಬ್ಯುಸಿಯಾಗಿದ್ದು, ಬಹುಭಾಷಾ ನಟಿಯಾಗಿ ಬೆಳೆದಿದ್ದಾರೆ. ಸ್ಯಾಂಡಲ್‍ವುಡ್‍ನಿಂದ ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಸಹ ಮಿಂಚುತ್ತಿದ್ದಾರೆ. ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಬಿಡುವು ಮಾಡಿಕೊಂಡು ಮಾಲ್ಡಿವ್ಸ್ ಪ್ರವಾಸಕ್ಕೆ ತೆರಳಿದ್ದು ಎಂಜಾಯ್ ಮಾಡುತ್ತಿದ್ದಾರೆ.

    ಲಾಕ್‍ಡೌನ್ ಬಳಿಕ ಪ್ರಣಿತಾ ಶೂಟಿಂಗ್‍ನಲ್ಲಿ ಭಾಗವಹಿಸಿದ್ದರು. ಬಾಲಿವುಡ್ ಸಿನಿಮಾ ಹಂಗಾಮಾ-2 ಚಿತ್ರೀಕರಣದ ಬಳಿ ಬ್ರೇಕ್ ಪಡೆದಿರುವ ಅವರು ಮಾಲ್ಡಿವ್ಸ್ ಪ್ರವಾಸ ಕೈಗೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ತಮ್ಮ ಮಾಲ್ಡಿವ್ಸ್ ಡೇಸ್ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದು, ಡೈವಿಂಗ್ ವಿಡಿಯೋಗಳನ್ನು ಸಹ ಶೇರ್ ಮಾಡುತ್ತಿದ್ದಾರೆ. ಅವರ ಅಭಿಮಾನಿಗಳು ಸಹ ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಲಾಕ್‍ಡೌನ್ ದಿನಗಳಲ್ಲಿ ಬಡವರಿಗೆ ಸಹಾಯ ಮಾಡುವುದರಲ್ಲೇ ಕಾಲ ಕಳೆದಿದ್ದ ಪ್ರಣಿತಾ, ಮನೆಯಲ್ಲಿ ಸಖತ್ ಬೋರ್ ಎನ್ನುತ್ತಿದ್ದರು. ಇದೀಗ ವಿದೇಶ ಪ್ರವಾಸ ಕೈಗೊಂಡು ಎಂಜಾಯ್ ಮಾಡುತ್ತಿದ್ದಾರೆ. ರೆಸ್ಟೋರೆಂಟ್ ಬಳಿ ಸೈಕ್ಲಿಂಗ್ ಮಾಡಿರುವುದು, ಡೈವಿಂಗ್ ಮಾಡುತ್ತಿರುವುದು ಸೇರಿದಂತೆ ವಿವಿಧ ಬಗೆ ವಿಡಿಯೋ ಹಾಗೂ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಫೇಸ್ಬುಕ್‍ನಲ್ಲಿ ಸ್ಕೂಬಾ ಸ್ಕೂಟರ್ ಡೈವಿಂಗ್ ವಿಡಿಯೋ ಪೋಸ್ಟ್ ಮಾಡಿದ್ದು, ಮೊದಲ ಬಾರಿ ಸೀ ಬಿಓಬಿ ಮಾಡಿದ್ದೇನೆ, ನಿಮಗೆ ಏನನ್ನಿಸಿತು? ಸಮುದ್ರದಲ್ಲಿ ನಿಂತ ವಿಮಾನ ಹಾಗೂ ಮೇಲೆ ತೇಲುವ ಕಪ್ಪು ಮೋಡಗಳು ಭಾವನೆಯನ್ನು ಹೆಚ್ಚಿಸುತ್ತವೆ ಎಂದು ಬರೆದಿದ್ದಾರೆ.

    ಇದಕ್ಕೂ ಮುನ್ನ ರೆಸಾರ್ಟ್‍ವೊಂದರ ಬಳಿ ಸೈಕಲ್ ಓಡಿಸುತ್ತಿರುವ ಫೋಟೋ ಹಂಚಿಕೊಂಡಿದ್ದ ಪ್ರಣಿತಾ ದಿ ರೆಸಾರ್ಟ್ ಲೈಫ್ ಎಂದು ಬರೆದಿದ್ದರು. ಅಲ್ಲದೆ ಸ್ವಿಮ್ಮಿಂಗ್ ಮಾಡುವ ವಿಡಿಯೋ ಸಹ ಪೋಸ್ಟ್ ಮಾಡಿದ್ದರು. ಹೀಗೆ ಮಾಲ್ಡಿವ್ಸ್‍ನಲ್ಲಿ ಎಂಜಾಯ್ ಮಾಡುತ್ತಿರುವ ಕುರಿತು ಪ್ರಣಿತಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಅವರ ಅಭಿಮಾನಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದಾರೆ.

    ಲಾಕ್‍ಡೌನ್ ಸಡಿಲಗೊಳಿಸಿದ ಬಳಿಕ ಹೇರ್ ಕಟಿಂಗ್ ಮಾಡಿಸಿ ಶೂಟಿಂಗ್‍ಗೆ ತಯಾರಾಗುತ್ತಿರುವ ಕುರಿತು ತಿಳಿಸಿದ್ದರು. ಹೇರ್ ಕಟಿಂಗ್ ಬಳಿಕ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಚಿತ್ರೀಕರಣವನ್ನೂ ಮುಗಿಸಿ ಕೆಲ ದಿನಗಳ ಬಿಡುವು ಮಾಡಿಕೊಂಡು ಪ್ರವಾಸ ಹೋಗಿದ್ದಾರೆ.

    ಸದ್ಯ ಕನ್ನಡದಲ್ಲಿ ಒಂದು, ಹಿಂದಿಯ ಎರಡು ಸಿನಿಮಾಗಳಲ್ಲಿ ಪ್ರಣೀತಾ ಬ್ಯುಸಿಯಾಗಿದ್ದು, ಸ್ಯಾಂಡಲ್‍ವುಡ್‍ನಲ್ಲಿ ರಾಮನ ಅವತಾರ, ಬಾಲಿವುಡ್‍ನಲ್ಲಿ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಹಾಗೂ ಹಂಗಾಮಾ-2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  • ಹೊಸ ಲುಕ್‍ನಲ್ಲಿ ಕಾಣಿಸಿಕೊಂಡ ಪ್ರಣೀತಾ

    ಹೊಸ ಲುಕ್‍ನಲ್ಲಿ ಕಾಣಿಸಿಕೊಂಡ ಪ್ರಣೀತಾ

    ಬೆಂಗಳೂರು: ಸ್ಯಾಂಡಲ್‍ವುಡ್‍ನಿಂದ ಬಾಲಿವುಡ್‍ಗೆ ಕಾಲಿಟ್ಟಿರುವ ಕನ್ನಡದ ಬೆಡಗಿ ಪ್ರಣೀತಾ ಸುಭಾಷ್ ತೆಲುಗು, ತಮಿಳಿನಲ್ಲೂ ಸಿನಿಮಾಗಳನ್ನು ಮಾಡಿದ್ದು, ಈ ಮೂಲಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಪ್ರಣೀತಾ, ಇದೀಗ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಶೂಟಿಂಗ್‍ಗೆ ಸಿದ್ಧವಾಗುತ್ತಿದ್ದಾರಾ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.

     

    View this post on Instagram

     

    A post shared by Pranitha Subhash ???? (@pranitha.insta) on

    ಪ್ರಣೀತಾ ಕೈಯ್ಯಲ್ಲಿ ಈಗಾಗಲೇ ಹಲವು ಸಿನಿಮಾಗಳಿದ್ದು, ಆ್ಯಕ್ಟಿಂಗ್‍ನಲ್ಲಿ ಫುಲ್ ಬ್ಯುಸಿಯಾಗಿದ್ದರು. ಇದೇ ಸಂದರ್ಭದಲ್ಲಿ ಲಾಕ್‍ಡೌನ್ ಘೋಷಣೆಯಾಯಿತು. ಹೀಗಾಗಿ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿ ಸಹ ತೊಡಗಿಕೊಂಡಿದ್ದು, ಲಾಕ್‍ಡೌನ್‍ನಿಂದಾಗಿ ಸಂಕಷ್ಟ ಎದುರಿಸುತ್ತಿದ್ದ ವಲಸೆ ಕಾರ್ಮಿಕರು ಹಾಗೂ ನಿರ್ಗತಿಕರಿಗೆ ಸಹಾಯ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಇದೀಗ ಲಾಕ್‍ಡೌನ್ ಸಡಿಲಗೊಳಿಸಲಾಗಿದೆ, ಮನರಂಜನೆ ಹೊರತುಪಡಿಸಿ ಉಳಿದೆಲ್ಲ ವಲಯಗಳು ಮತ್ತೆ ಕಾರ್ಯಾರಂಭಿಸಿವೆ. ಸಿನಿಮಾ ಚಿತ್ರೀಕರಣಕ್ಕೂ ಇನ್ನೇನು ಅನುಮತಿ ಸಿಗಬೇಕಿದೆ. ಹೀಗಾಗಿ ಪ್ರಣೀತಾ ಸಿದ್ಧತೆ ನಡೆಸುತ್ತಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಪ್ರಣೀತಾ ಸಲೂನ್‍ಗೆ ಹೋಗಿ ಮೇಕ್‍ಒವರ್ ಮಾಡಿಸಿಕೊಂಡಿದ್ದಾರೆ. ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಲ್ಲಿ ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.

    ಹೇರ್ ಕಟಿಂಗ್ ಸಹ ಮಾಡಿಸಿಕೊಂಡಿರುವ ಪ್ರಣೀತಾ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಶೂಟಿಂಗ್ ಪ್ರಾರಂಭವಾದರೆ ಹಾಜರಾಗಲು ತಯಾರಿದ್ದೇನೆ ಎಂಬ ಮುನ್ಸೂಚನೆ ನೀಡಿದ್ದಾರೆ. ಬಹುತೇಕ ಎಲ್ಲ ವಲಯಗಳು ತರೆದಿದ್ದು, ಧಾರಾವಾಹಿ ಚಿತ್ರೀಕರಣಕ್ಕೂ ಅವಕಾಶ ಕಲ್ಪಿಸಲಾಗಿದೆ. ಆದರೆ ಸಿನಿಮಾ ಶೂಟಿಂಗ್‍ಗೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣಕ್ಕೂ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ.

     

    View this post on Instagram

     

    Post Covid world salon experience was nothing less than embarking on a space mission!

    A post shared by Pranitha Subhash ???? (@pranitha.insta) on

    ಪ್ರಣೀತಾ ಸದ್ಯ ಸ್ಯಾಂಡಲ್‍ವುಡ್‍ನ ರಾಮನ ಅವತಾರ ಹಾಗೂ ಬಾಲಿವುಡ್‍ನ ಭುಜ್: ದಿ ಪ್ರೈಡ್ ಆಫ್ ಇಂಡಿಯಾ, ಹಂಗಾಮಾ 2 ಚಿತ್ರಗಳಲ್ಲಿ ಬ್ಯಸಿಯಾಗಿದ್ದಾರೆ. ಹೀಗಾಗಿ ಮತ್ತೆ ಶೂಟಿಂಗ್‍ಗೆ ತೆರಳಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಾ ಎಂಬ ಪ್ರಶ್ನೆ ಇದೀಗ ಮೂಡಿದೆ.