Tag: Pranayam

  • ರಾಜವರ್ಧನ್ ನಟನೆಯ ‘ಪ್ರಣಯಂ’ ಚಿತ್ರದ ಟ್ರೈಲರ್ ರಿಲೀಸ್

    ರಾಜವರ್ಧನ್ ನಟನೆಯ ‘ಪ್ರಣಯಂ’ ಚಿತ್ರದ ಟ್ರೈಲರ್ ರಿಲೀಸ್

    ಲ್ಲಕ್ಕಿ, ಗಣಪ, ಪಾರಿಜಾತದಂಥ ಅದ್ಭುತ  ಚಿತ್ರಗಳನ್ನು ನೀಡಿದ  ಪರಮೇಶ್ ಅವರೀಗ ಮತ್ತೊಂದು ಇನ್ ಟೆನ್ಸ್ ಲವ್ ಸ್ಟೋರಿಯನ್ನು ಪ್ರಣಯಂ ಚಿತ್ರದ ಮೂಲಕ ಪ್ರೇಕ್ಷಕರಿಗೆ ನೀಡಲಿದ್ದಾರೆ.  ಮನಸ್ವಿ ವೆಂಚರ್ಸ್ ಹಾಗೂ ಪಿಟು ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಪರಮೇಶ್ ಅವರೇ ಕಥೆ ಬರೆದು ನಿರ್ಮಿಸಿರುವ  ಈ ಚಿತ್ರಕ್ಕೆ ಎಸ್. ದತ್ತಾತ್ರೇಯ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಬಿಚ್ಚುಗತ್ತಿ ಖ್ಯಾತಿಯ  ನಟ ರಾಜವರ್ಧನ್, ನೈನಾ ಗಂಗೂಲಿ ಚಿತ್ರದ  ನಾಯಕ, ನಾಯಕಿಯಾಗಿ ಅಭಿನಯಿಸಿದ್ದಾರೆ.  ಈ ಚಿತ್ರದ ಟ್ರೈಲರ್  ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮಾಜಿ ಉಪ ಮೇಯರ್ ಮೋಹನ್ ರಾಜು ಟ್ರೈಲರ್ ರಿಲೀಸ್ ಮಾಡಿ  ಈ ಟೈಟಲ್  ಕನ್ನಡದ ಜೊತೆ ತೆಲುಗು ಭಾಷೆಗೂ ಹತ್ತಿರವಾಗುವಂತಿದೆ. ಹಾಡು, ಕಾನ್ಸೆಪ್ಟ್ ಎರಡೂ ಚೆನ್ನಾಗಿದೆ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.  ಈ ಚಿತ್ರದಲ್ಲಿ  ಜಯಂತ್ ಕಾಯ್ಕಿಣಿ ಅವರು 3 ಹಾಡುಗಳನ್ನು ಬರೆದಿದ್ದು, ಮನೋಮೂರ್ತಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ವಿ.ನಾಗೇಶ್ ಆಚಾರ್ಯ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಮನೋಮೂರ್ತಿ ಚಿತ್ರದಲ್ಲಿ 5 ಹಾಡಿದ್ದು, ಕ್ಯಾಮೆರಾ ವರ್ಕ್ ಅದ್ಭುತವಾಗಿ ಮೂಡಿಬಂದಿದೆ. ಪ್ರಣಯಂ ಅಂದ್ರೆ ಲವ್, ಅದನ್ನಿಲ್ಲಿ  ಢಿಫರೆಂಟಾಗಿ ಹೇಳಿದ್ದಾರೆ. ಖಂಡಿತ ಈ ವರ್ಷದ ಮೊದಲ ಹಿಟ್ ಸಿನಿಮಾ ಆಗುತ್ತೆ ಎಂದರು. ನಂತರ ಜಯಂತ್ ಕಾಯ್ಕಿಣಿ ಮಾತನಾಡಿ ಪರಮೇಶ್ ತುಂಬಾ ಜೋಷ್ ಇರುವಂಥ ಪ್ರೊಡ್ಯೂಸರ್ ಸಿನಿಮಾಗಾಗಿ ತುಂಬಾ ಕಷ್ಟಪಡುತ್ತಾರೆ. ಮನೋಮೂರ್ತಿ ಹಾಗೂ ನಮ್ಮ ದಾಂಪತ್ಯಕ್ಕೆ 17 ವರ್ಷ ಆಯ್ತು. ಆಗಿದ್ದ ಕುತೂಹಲ, ಚಡಪಡಿಕೆ ಈಗಲೂ ಇದೆ. ಹಿಂದೆ ಪರಮೇಶ್ ಅವರ ಕರಿಯ, ಗಣಪ, ಪಾರಿಜಾತ ಚಿತ್ರಗಳಿಗೂ ನಾನೇ ಸಾಂಗ್ ಬರೆದಿದ್ದೆ. ಇದರಲ್ಲಿ 3 ಹಾಡನ್ನು ಬರೆದಿದ್ದೇನೆ ಎಂದು ಹೇಳಿದರು.  ನಿರ್ದೇಶಕ ದತ್ತಾತ್ರೇಯ ಮಾತನಾಡುತ್ತ ನಾನು ಈ ಸ್ಕ್ರಿಪ್ಟ್ ಮಾಡಿಕೊಂಡು ಬಂದಾಗ ನಿರ್ಮಾಪಕರು  ತುಂಬಾ ಚೆನ್ನಾಗಿ ಬಂದಿದೆ ಎಂದು ಖುಷಿಯಿಂದ ಹಗ್ ಮಾಡಿದರು.  ಸುಮಾರು ಲೊಕೇಶನ್ ಗಳನ್ನು ನೋಡಿ ಕೊನೆಗೆ ಮಡಿಕೇರಿಯಲ್ಲಿ ನಮಗೆ ಬೇಕಾದ  ಲೊಕೇಶನ್ ಸಿಕ್ತು.  ಎಲ್ಲಾ ಲೆಜೆಂಡರಿಗಳ ಸಹಕಾರದಿಂದ ಸಿನಿಮಾ ಅದ್ಭುತವಾಗಿ ಬಂದಿದೆ. ನಾಗೇಶ್ ನನಗೆ ಇನ್ನೊಂದು ಕಣ್ಣಿದ್ದ ಹಾಗೆ. ತುಂಬಾ ಚೆನ್ನಾಗಿ ಶೂಟ್ ಮಾಡಿಕೊಟ್ಟಿದ್ದಾರೆ. ಎಲ್ಲರೂ ಸೇರಿ ಒಳ್ಳೆಯ ಸಿನಿಮಾ ಕೊಟ್ಟಿದ್ದೇವೆ. ಜನ  ಇಷ್ಟಪಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.

    ನಾಯಕ ರಾಜವರ್ಧನ್ ಮಾತನಾಡುತ್ತ ಬಿಚ್ಚುಗತ್ತಿಗೂ ಮುಂಚೆಯೇ ಪರಮೇಶ್ ಈ ಕಥೆಯನ್ನು ಹೇಳಿದರು .ಇವತ್ತಿನ ಫ್ಯಾಮಿಲಿಗಳಲ್ಲಿ ಈ ಥರದ ಘಟನೆಗಳು ನಡೆಯುತ್ತಲೇ ಇವೆ. ಅಂಥಾ ಒಂದು ಸ್ಟ್ರಾಂಗ್ ಕಂಟೆಂಟ್ ಇಟ್ಟುಕೊಂಡು ನಾವೀ ಸಿನಿಮಾ ಮಾಡಿದ್ದೇವೆ. ಬಿ.ಸಿ. ಸೆಂಟರ್ ಆಡಿಯನ್ಸ್ ಗಳಿಗೆ ಬೇಕಾದ ಕಾನ್ಸೆಪ್ಟ್  ಚಿತ್ರದಲ್ಲಿದೆ. ಆಗಿನ್ನೂ ವಿದೇಶದಿಂದ ಬರುವ ಗೌತಂ ಎಂಬ  ಪಾತ್ರ ಮಾಡಿದ್ದೇನೆ. ಆತ 5-10 ದಿನದಲ್ಲಿ  ಸ್ವಂತ ರಿಲೇಶನ್ ನಲ್ಲೇ ಹುಡುಗಿಯೊಬ್ಬಳನ್ನು ಮದುವೆಯಾಗ್ತಾನೆ. ಆನಂತರ  15-20 ದಿನಗಳಲ್ಲಿ ನಡೆಯುವ ಕಥೆ, ನನ್ನದು ತುಂಬಾ ಇನ್ ಟೆನ್ಸಿವ್ ಆಗಿರುವ ಪಾತ್ರ. ಮನೋಮೂರ್ತಿ, ಜಯಂತ್ ಕಾಯ್ಕಿಣಿ ಅವರಂಥ ಲೆಜೆಂಡರಿಗಳ‌ ಜೊತೆ ಕೆಲಸ ಮಾಡಿದ್ದು ನನ್ನ ಅದೃಷ್ಟ ಎಂದರು.

    ನಿರ್ಮಾಪಕ ಪರಮೇಶ್ ಮಾತನಾಡುತ್ತಾ, ನಾನು ಈವರೆಗೆ 9 ಸಿನಿಮಾ ಮಾಡಿದ್ದೇನೆ. ಆದರೂ ಗಾಂಧಿನಗರದಲ್ಲಿ ಪ್ರೊಡ್ಯೂಸರ್ ಗೆ ನೆಲೆಯೆ ಇಲ್ಲದಾಗಿದೆ. ನಮ್ಮದು ತುಂಬಾ ಕ್ರಿಟಿಕಲ್ ಫೀಲ್ಡ್. ಈಗ ಸಿನಿಮಾ ಹೇಗೋ ಮಾಡಿಬಿಡಬಹುದು. ರಿಲೀಸ್ ಮಾಡೋದು ತುಂಬಾ ಕಷ್ಟ. ರಿಲೀಸ್ ಡೇಟ್ ಅನೌನ್ಸ್ ಮಾಡಲಿಕ್ಕೇ ಭಯವಾಗುತ್ತೆ. ಬಿಡುಗಡೆಗೇ 2ಕೋಟಿ ಬೇಕಾಗುತ್ತೆ, ಎಲ್ಲಿಂದ ತರೋದು. ಹಾಗೂ, ರಿಲೀಸ್ ಮಾಡಲು ಮೂರು ಸಲ ಟ್ರೈ ಮಾಡಿದೆ. ಆಗಲಿಲ್ಲ. ಈಗ ಧೈರ್ಯ ಮಾಡಿದ್ದೇನೆ. ಇಂಡಸ್ಟ್ರಿಗೆ ಒಂದೊಳ್ಳೆ ಸಿನಿಮಾ ಕೊಟ್ಟಿದ್ದೇನೆ. ಜನ ಕೈ ಹಿಡಿಯುತ್ತಾರೆಂಬ ನಂಬಿಕೆಯಿದೆ ಎಂದರು.

     

    ಚಿಕ್ಕಮಗಳೂರು, ಮಡಿಕೇರಿಯಂಥ ಸುಂದರ ಲೊಕೇಶನ್ ಗಳಲ್ಲಿ  ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಝಂಕಾರ್ ಮ್ಯೂಸಿಕ್ ಈ ಚಿತ್ರದ ಹಾಡುಗಳನ್ನು ಹೊರತಂದಿದೆ. ಕುನಾಲ್ ಗಾಂಜಾವಾಲ, ಶ್ರೇಯಾ ಘೋಷಾಲ್ ಇತರರು ದನಿಯಾಗಿದ್ದಾರೆ. ಚಿತ್ರದಲ್ಲಿ ಗೋವಿಂದೇಗೌಡ,  ಮಂಥನ, ಪ್ರಶಾಂತ್, ಸಮೀಕ್ಷಾ, ಪ್ರಿಯಾ ತರುಣ್ ಉಳಿದ ಪಾತ್ರಗಳಲ್ಲಿ  ನಟಿಸಿದ್ದಾರೆ. ಮನೋಮೂರ್ತಿ ಅವರ  ಸಂಗೀತ ನಿರ್ದೇಶನ, ವಿ. ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣ. ಮದನ್ ಹರಿಣಿ ಅವರ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಮಾಸ್ ಮಾದ ಅವರ ಸಾಹಸ ನಿರ್ದೇಶನ ಪ್ರಣಯಂ ಚಿತ್ರಕ್ಕಿದೆ.

  • ‘ಪ್ರಣಯಂ’ ಚಿತ್ರದ ಲಿರಿಕಲ್ ಹಾಡು ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

    ‘ಪ್ರಣಯಂ’ ಚಿತ್ರದ ಲಿರಿಕಲ್ ಹಾಡು ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

    ವ ಯುವ ಜೋಡಿಗಳ ಪ್ರಣಯದ ಕಥಾಹಂದರ ಒಳಗೊಂಡ ಚಿತ್ರ ಪ್ರಣಯಂ (Pranayam). ಪಲ್ಲಕ್ಕಿ, ಗಣಪ, ಪಾರಿಜಾತ ಚಿತ್ರಗಳನ್ನು ನೀಡಿದ  ಪರಮೇಶ್ ಅವರೀಗ ಅದ್ಭುತವಾದ ಪ್ರೇಮಕಥೆಯೊಂದನ್ನು ತಂದಿದ್ದಾರೆ. ಮನಸ್ವಿ ವೆಂಚರ್ಸ್ ಹಾಗೂ ಪಿಟು ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಪರಮೇಶ್ (Paramesh) ಅವರೇ ಕಥೆ ಬರೆದು ನಿರ್ಮಾಣ ಮಾಡಿರುವ  ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಈಗ ಈ ಚಿತ್ರಕ್ಕಾಗಿ ಜಯಂತ್ ಕಾಯ್ಕಿಣಿ ಅವರ ಲೇಖನಿಯಲ್ಲಿ ಮೂಡಿಬಂದ  ‘ಮಳೆಗಾಲ ಬಂತು ಸನಿಹ’ ಎಂಬ  ಹಾಡಿನ (Song) ಲಿರಿಕಲ್ ವೀಡಿಯೋವನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಅವರು ಬಿಡುಗಡೆ ಮಾಡಿದರು.

    ಎಸ್. ದತ್ತಾತ್ರೇಯ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ  ಚಿತ್ರದಲ್ಲಿ  ಎಂಗೇಜ್ ಮೆಂಟ್ ಆದನಂತರ  ಯುವಜೋಡಿಗಳ ನಡುವೆ ನಡೆಯೋ ಪ್ರೀತಿ ಪ್ರೇಮದ ಕಥೆಯನ್ನು ಹೇಳಿದ್ದಾರೆ, ಯುವ ನಟ ರಾಜವರ್ಧನ್, ನೈನಾ ಗಂಗೂಲಿ ಚಿತ್ರದ  ನಾಯಕ, ನಾಯಕಿಯಾಗಿ ಅಭಿನಯಿಸಿದ್ದಾರೆ.  ಈಗಾಗಲೇ ಚಿತ್ರದ  ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಯ  ಹಂತಕ್ಕೆ ಬಂದಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಜಯಂತ್ ಕಾಯ್ಕಿಣಿ ಪರಮೇಶ್ ನನಗೂ ದಶಕದ ಹಿಂದಿನ ನಂಟು. ಅವರ  ಕರಿಯ, ಗಣಪ, ಪಾರಿಜಾತ ಚಿತ್ರಗಳಿಗೆ ಹಾಡು ಬರೆದಿದ್ದೆ.  ಮಳೆಗಾಲದಲ್ಲಿ ಪ್ರೇಮಿಗಳಿಬ್ಬರು ತಮ್ಮ ಭಾವನೆಗಳನ್ನು ಈ  ಹಾಡಿನ ಮೂಲಕ ವ್ಯಕ್ತಪಡಿಸುತ್ತಾರೆ. ಸಮಾಜವನ್ನು ಬೆಸೆಯುವ ಒಂದೇ ಮಾಧ್ಯಮ ಎಂದರೆ ಅದು ಸಿನಿಮಾ ಎಂದು ಹೇಳಿದರು. ಇದನ್ನೂ ಓದಿ:`ಸಾಮಿ ಸಾಮಿ’ ಹಾಡಿಗೆ ಸ್ಟೆಪ್ ಹಾಕಿ ಎಂದ ಅಭಿಮಾನಿಗೆ ನೋ ಎಂದ ರಶ್ಮಿಕಾ ಮಂದಣ್ಣ

    ಜೈಂಕಾರ್ ಮ್ಯೂಸಿಕ್ ನ ಭರತ್ ಜೈನ್ ಮಾತನಾಡಿ, ಜೈಂಕಾರ್, ಪರಮೇಶ್ ನಡುವಿನ ಸಂಬಂಧ ತುಂಬಾ ಹಳೆಯದ್ದು. ಈ ಚಿತ್ರದಲ್ಲಿ  ಮನೋಮೂರ್ತಿ ಅವರು ಆರು ಮೆಲೋಡಿ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಕುನಾಲ್ ಗಾಂಜಾವಾಲ, ಶ್ರೇಯಾ ಘೋಷಾಲ್ ಇತರರು ಹಾಡಿದ್ದಾರೆ, ನಮ್ಮ ಸಂಬಂಧ ಹೀಗೇ ಬೆಳೆಯಲಿ ಎಂದರು. ನಿರ್ಮಾಪಕ ಪರಮೇಶ್ ಮಾತನಾಡಿ ಮುಂಗಾರು ಮಳೆಯ ಒಂದು ಹಾಡು ಆಗಲೇ 25-30 ಕೋಟೆ ಮಾಡಿತ್ತು. ಈಥರದ ಶಕ್ತಿ ಇರುವುದು ಮೆಲೋಡಿ ಸಾಂಗ್ ಗೆ ಮಾತ್ರ.  ಮುಂಗಾರುಮಳೆ ಥರದ ಒಂದು ಮ್ಯೂಸಿಕಲ್  ಹಿಟ್ ಕೊಡಬೇಕೆಂದು, ತುಂಬಾ ಟ್ಯೂನ್ ಹುಡುಕಿ ಇದನ್ನು ಫೈನಲ್ ಮಾಡಿದ್ದೇನೆ. ಭರತ್ ಅವರ ಕಂಪನಿಗೆ ದೊಡ್ಡ ಹೆಸರು ಬರಬೇಕು. ಹಾಡು ಆ ಲೆವೆಲ್ ಗೆ ರೀಚ್ ಆಗುತ್ತೆ ಎಂಬ ನಂಬಿಕೆಯಿದೆ.   ಪ್ರಯಣಂ ನಿಶ್ಚಿತಾರ್ಥದಿಂದ ಮದುವೆ ಆಗುವವರೆಗೆ  ನಡೆಯುವ ಕಥೆ.  ಮುಂದಿನ ತಿಂಗಳು  ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ. ಎಲ್ಲ ಕಲಾವಿದರು ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದರು,

    ನಿರ್ದೇಶಕ ದತ್ತಾತ್ರೇಯ ಮಾತನಾಡುತ್ತ ಈ ಚಿತ್ರದಲ್ಲಿ ನಾನೊಂದು ಫೀಲ್  ಇಟ್ಟುಕೊಂಡಿದ್ದೆ.  ಅದಕ್ಕೆ ತಕ್ಕಂತೆ ಎಲ್ಲರೂ ಸೇರಿ ಒಳ್ಳೆಯ ಸಿನಿಮಾ ಕೊಟ್ಟಿದ್ದೇವೆ. ಜನ ಚಿತ್ರವನ್ನು ಇಷ್ಟಪಡುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಡಿಸಿದ್ದಾರೆ.  ಚಿಕ್ಕಮಗಳೂರು, ಮಡಿಕೇರಿಯಂಥ ಸುಂದರ ಲೊಕೇಶನ್ ಗಳಲ್ಲಿ  ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ನಾಯಕ ರಾಜವರ್ಧನ್ ಈ ಚಿತ್ರದಲ್ಲಿ ಒಬ್ಬ ಲವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಚಿತ್ರದಲ್ಲಿ ಗೋವಿಂದೇಗೌಡ,  ಮಂಥನ, ಪ್ರಶಾಂತ್, ಸಮೀಕ್ಷಾ, ಪ್ರಿಯಾ ತರುಣ್ ಮುಂತಾದವರು ನಟಿಸಿದ್ದಾರೆ. ಮನೋಮೂರ್ತಿಅವರ  ಸಂಗೀತ ನಿರ್ದೇಧನ, ವಿ. ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣ. ಮದನ್ ಹರಿಣಿ ಅವರ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಮಾಸ್ ಮಾದ ಅವರ ಸಾಹಸ ನಿರ್ದೇಶನ ಪ್ರಣಯಂ ಚಿತ್ರಕ್ಕಿದೆ.

  • ರಾಜವರ್ಧನ್ ನಟನೆಯ ‘ಪ್ರಣಯಂ’  ಫಸ್ಟ್ ಲುಕ್ ಟೀಸರ್ ರಿಲೀಸ್

    ರಾಜವರ್ಧನ್ ನಟನೆಯ ‘ಪ್ರಣಯಂ’ ಫಸ್ಟ್ ಲುಕ್ ಟೀಸರ್ ರಿಲೀಸ್

    ಲ್ಲಕ್ಕಿ, ಗಣಪ, ಕರಿಯಾ 2, ಪಾರಿಜಾತದಂಥ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ ಪರಮೇಶ್ ಬಹಳ ದಿನಗಳ ನಂತರ ಮತ್ತೊಂದು ಲವ್ ಸ್ಟೋರಿಯೊಂದಿಗೆ ಬಂದಿದ್ದಾರೆ. “ಪ್ರಣಯಂ” (Pranayam) ಹೆಸರಿನ ಆ ಚಿತ್ರಕ್ಕೆ ದತ್ತಾತ್ರೇಯ ಆಕ್ಷನ್ ಕಟ್ ಹೇಳಿದ್ದಾರೆ.  ನಿಶ್ಚಿತಾರ್ಥವಾದ ನವಜೋಡಿಗಳ ನಡುವಿನ ಪ್ರೀತಿ ಪ್ರೇಮದ ಕಥೆಯಿದಾಗಿದ್ದು, ಯುವ ನಟ ರಾಜವರ್ಧನ್ (Rajavardhan), ನೈನಾ ಗಂಗೂಲಿ ಚಿತ್ರದ  ನಾಯಕ, ನಾಯಕಿಯಾಗಿ ಅಭಿನಯಿಸಿದ್ದಾರೆ.  ಈಗಾಗಲೇ ಚಿತ್ರದ  ಚಿತ್ರೀಕರಣ ಪೂರ್ಣಗೊಂಡಿದ್ದು,  ಬಿಡುಗಡೆಯ  ಹಂತಕ್ಕೆ ಬಂದಿದೆ. ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗೆ ನೆರವೇರಿತು.

    ನಿರ್ಮಾಪಕ ಪರಮೇಶ್ ಮಾತನಾಡಿ, ಈ ಕಥೆಯನ್ನು ಬಹಳ ದಿನಗಳಿಂದ ಇಟ್ಟುಕೊಂಡಿದ್ದೆ. ದತ್ತಾತ್ರೇಯ ಸಿಕ್ಕನಂತರ ಇದರ ಸ್ಕ್ರಿಪ್ಟ್ ಮಾಡಿಕೊಂಡು ಬಂದದ್ದು. ನಾನು ಈವರೆಗೂ ಹೊಸಬರನ್ನೇ ಇಟ್ಟುಕೊಂಡು ಸಿನಿಮಾ ಮಾಡಿಕೊಂಡು ಬಂದವನು. ಈ ಸಿನಿಮಾದಲ್ಲೂ ಬಹುತೇಕ ಹೊಸಬರಿದ್ದಾರೆ. ಚಿತ್ರಕ್ಕೆ ನಾಯಕಿಯರಾಗಿ ರಚಿತಾರಾಮ್, ಆಶಿಕಾ ರಂಗನಾಥ್ ಹೀಗೆ ಬಹಳಷ್ಟು ಜನರನ್ನು ಕೇಳಿದ್ದೆವು. ಕೊನೆಗೆ ನಯನಾ ಗಂಗೂಲಿ ಬಂದರು. ಅವರು ತುಂಬಾ ಚೆನ್ನಾಗಿ  ಪರ್ಫಾಮೆನ್ಸ್, ಮಾಡಿದ್ದಾರೆ. ಪ್ರಯಣಂ, ನಿಶ್ಚಿತಾರ್ಥದಿಂದ ಮದುವೆ ಆಗುವವರೆಗೆ  ನಡೆಯುವ ಕಥೆ. ಏಪ್ರಿಲ್‍ನಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ. ತೆಲುಗು, ತಮಿಳು, ಮಲಯಾಳಂನಲ್ಲಿ ಕೆಲವರ ಜೊತೆ ಡಬ್ಬಿಂಗ್ ಕುರಿತು ಮಾತಾಡಿದ್ದೇನೆ. ಎಲ್ಲ ಕಲಾವಿದರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದರು. ಇದನ್ನೂ ಓದಿ: ಪವನ್ ಕಲ್ಯಾಣ್ ಚಿತ್ರದಲ್ಲಿ ಸೊಂಟ ಬಳುಕಿಸಲು ಸಜ್ಜಾದ ನಟಿ ಶ್ರೀಲೀಲಾ

    ನಿರ್ದೇಶಕ ದತ್ತಾತ್ರೇಯ ಮಾತನಾಡುತ್ತ ಕಳೆದ 15 ವರ್ಷದಿಂದ ಭಗವಾನ್, ರಾಮನಾಥ ಋಗ್ವೇದಿ ಇತರರ ಜೊತೆ ವರ್ಕ್ ಮಾಡಿದ್ದೇನೆ. ಚಿಕ್ಕಮಗಳೂರು, ಮಡಿಕೇರಿಯಂಥ ಸುಂದರ ಲೊಕೇಶನ್ ಗಳಲ್ಲಿ  ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಎಲ್ಲರೂ ಚಿತ್ರವನ್ನು ಇಷ್ಟ ಪಡುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಡಿಸಿದರು. ಕಲಾವಿದರಾದ ಗೋವಿಂದೇಗೌಡ,  ಮಂಥನ, ಪ್ರಶಾಂತ್, ಸಮೀಕ್ಷಾ, ಪ್ರಿಯಾ ತರುಣ್, ನೃತ್ಯ ನಿರ್ದೇಶಕರಾದ ಮದನ್ ಹರಿಣಿ ಸೇರಿದಂತೆ ಅನೇಕರಿಗೆ ನಿರ್ಮಾಪಕ ಪರಮೇಶ್ ಚಿತ್ರ ಆರಂಭಕ್ಕೂ ಮುನ್ನವೇ ಸಂಭಾವನೆಯನ್ನು ಚೆಕ್ ಮೂಲಕ ನೀಡಿದ್ದರು. ಇದು ಖುಷಿ ಪಡುವ ಸಂಗತಿ. ಇದರ ಜೊತೆಗೆ ಚಿತ್ರದ ಸಣ್ಣ ಸಣ್ಣ ವಿಷಯಗಳ ಬಗ್ಗೆ ಕಾಳಜಿ ವಹಿಸುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ನಾಯಕ ರಾಜವರ್ಧನ್ ಮಾತನಾಡಿ,  ಇದುವರೆಗೂ ಆಕ್ಷನ್ ಚಿತ್ರಗಳನ್ನೇ ಮಾಡುತ್ತಿದ್ದೆ. ಈ ಚಿತ್ರದಲ್ಲಿ ಒಬ್ಬ ಲವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾತ್ರ ಹೊಸತನದಿಂದ ಕೂಡಿದೆ. ಚಿತ್ರ ನೋಡಿದ ಎಲ್ಲರಿಗೂ ಇಷ್ಟವಾಗಲಿದೆ ಎಂದು ಮಾಹಿತಿ ನೀಡಿದರು.  ಮನೋಮೂರ್ತಿ ಅವರ  ಸಂಗೀತ ನಿರ್ದೇಶನ, ವಿ. ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣ. ಮದನ್ ಹರಿಣಿ ಅವರ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಮಾಸ್ ಮಾದ ಅವರ ಸಾಹಸ ನಿರ್ದೇಶನ ಪ್ರಣಯಂ  ಚಿತ್ರಕ್ಕಿದೆ.