ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ (Dharmasthala Case) ಸಂಬಂಧ ಎಸ್‌ಐಟಿ (SIT) ತನಿಖೆ ಚುರುಕುಗೊಂಡಿದೆ. ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ (Pranav Mohanty) ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಾರೆ.
ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ದಯಾಮ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ಮುಂದಿನ ತನಿಖೆಯ ಎಸ್‌ಐಟಿ ತಂಡ ಬ್ಲೂಪ್ರಿಂಟ್ ರೆಡಿ ಮಾಡಲಿದ್ದಾರೆ. ಈಗಾಗಲೇ ಎಸ್‌ಐಟಿ ತನಿಖೆ ಕುತೂಹಲ ಘಟ್ಟಕ್ಕೆ ತಲುಪಿದೆ. ಬುರುಡೆ ಹಿಂದೆ ಬಿದ್ದು ಎಸ್‌ಐಟಿ ಪೊಲೀಸರು ಕಳೆದ 55 ದಿನಗಳಿಂದ ಹೇಳಿಕೆಗಳ ದಾಖಲು, ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಬಂಗ್ಲೆಗುಡ್ಡೆ ಕಾಡಿನಿಂದ ಬುರುಡೆ ತಂದಿದ್ದ ವಿಠಲಗೌಡ, ಬುರುಡೆ ಬಂದ ನಂತರ ಗಿರೀಶ್ ಮಟ್ಟಣ್ಣ ಮಾಸ್ಟರ್ ಪ್ಲಾನ್, ಜಯಂತ್, ಯೂಟ್ಯೂಬರ್‌ಗಳಾದ ಅಭಿಷೇಕ್, ಕೇರಳದ ಮನಾಫ್ ವಿಚಾರಣೆ ಹೀಗೆ ಕಳೆದ ಹತ್ತು ದಿನಗಳಿಂದ ವಿಚಾರಣೆ ನಡೆಸಿರುವ ಎಸ್‌ಐಟಿ ತಂಡ ಎಲ್ಲರ ಹೇಳಿಕೆಗಳು ತಾಳೆಹಾಕಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಇದನ್ನೂ ಓದಿ: ಅಪ್ಪ-ಅಮ್ಮನ ಜಗಳಕ್ಕೆ ಮಕ್ಕಳು ಬಲಿ; ತಂದೆ ನೇಣಿಗೆ ಶರಣು, ಪ್ರಾಣಪಾಯದಿಂದ ತಾಯಿ ಪಾರು
ತನಿಖೆಯ ಅಂತಿಮ ವರದಿಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿದ್ದು, ತನಿಖೆಯ ವೇಗ ಹೆಚ್ಚಿಸಿ, ಎಲ್ಲಾ ಆಯಾಮದ ತನಿಖೆಯನ್ನೂ ಶೀಘ್ರದಲ್ಲೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಮೊಹಾಂತಿ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಥಾಯ್ಲೆಂಡ್‌ನಲ್ಲಿ ಝೂ ಸಿಬ್ಬಂದಿಯನ್ನೇ ಕೊಂದು ತಿಂದ ಸಿಂಹಪಡೆ
ಎಸ್‌ಐಟಿ ಎಸ್ಪಿ ಸಿ.ಎ.ಸೈಮನ್ ಅವರ ನೇತೃತ್ವದಲ್ಲಿ ದೂರುದಾರನನ್ನು ಅಧಿಕಾರಿಗಳು ಸ್ಥಳಕ್ಕೆ ಕರೆತಂದಿದ್ದು, ಪೊಲೀಸ್ ಬಿಗಿ ಭದ್ರತೆಯಲ್ಲಿ ಸ್ಥಳ ಮಹಜರು ಕಾರ್ಯ ಆರಂಭವಾಗಿದೆ. ಎಸ್‌ಐಟಿ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಮತ್ತು ಎಸ್ಪಿ ಸಿ.ಎ.ಸೈಮನ್, ಅರಣ್ಯ ಇಲಾಖೆಯ ರೇಂಜರ್ ತ್ಯಾಗರಾಜ್ ಸೇರಿ ಇನ್ನಿತರರ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಯುತ್ತಿದೆ.
ಕಳೆದ ಎರಡು ದಿನಗಳಿಂದ ಎಸ್‌ಐಟಿ ತಂಡ ದೂರುದಾರನ ವಿಚಾರಣೆ ನಡೆಸಿದ್ದು, ಸುಮಾರು 14 ಗಂಟೆಗಳ ಕಾಲ ವಿಚಾರಣೆ ನಡೆಸಿ ಹಲವು ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಇಂದಿನಿಂದ ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಯಿಂದ ಕಾರ್ಯಾಚರಣೆ ನಡೆಸಲಿದ್ದು. ದೂರುದಾರನ ಹೇಳಿಕೆ ಆಧಾರದ ಮೇಲೆ ಪ್ರಣವ್ ಮೊಹಂತಿ ತಂಡ ತನಿಖೆ ಚುರುಕುಗೊಳಿಸಲಿದ್ದಾರೆ.
ಮಂಗಳೂರು: ಧರ್ಮಸ್ಥಳ (Dharmasthala) ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ದೂರು ನೀಡಿದ್ದ ಅನಾಮಿಕ ವ್ಯಕ್ತಿಯ ವಿಚಾರಣೆ ಎರಡನೇ ದಿನವೂ ಮುಂದುವರೆದಿದೆ.
ಎರಡನೇ ದಿನವಾದ ಇಂದು ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥ ಪ್ರಣವ್ ಮೊಹಾಂತಿ (Pranav Mohanty) ಅವರೇ ಸ್ವತಃ ವಿಚಾರಣೆ ನಡೆಸಿದ್ದಾರೆ. ಶನಿವಾರ ಮಂಗಳೂರಿನ (Mangaluru) ಮಲ್ಲಿಕಟ್ಟೆಯಲ್ಲಿರುವ ಐಬಿಯಲ್ಲಿರುವ ಎಸ್ ಐಟಿ ಕಚೇರಿಯಲ್ಲಿ ಎಸ್‌ಐಟಿ ಅಧಿಕಾರಿ ಡಿಐಜಿ ಅನುಚೇತ್ ನೇತೃತ್ವದಲ್ಲಿ ಎಂಟು ಗಂಟೆಗಳ ಕಾಲ ನಿರಂತರ ವಿಚಾರಣೆ ನಡೆಸಲಾಗಿತ್ತು.
ಈವರೆಗೆ ನಡೆದ ವಿಚಾರಣೆಯ ಮಾಹಿತಿ ಪಡೆದ ಬಳಿಕ ಸಾಕಷ್ಟು ವಿಚಾರಗಳನ್ನ ಆತನಿಂದ ಕೆದಕಿರುವ ಮೊಹಾಂತಿ ಆತನಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಅನಾಮಿಕ ವ್ಯಕ್ತಿಯ ವೈಯಕ್ತಿಕ ವಿಚಾರ,ಆತನ ಕುಟುಂಬದ ಬಾಲಕಿಗೆ ನಡೆದಿದೆ ಎಂದು ಹೇಳಿದ್ದ ಲೈಂಗಿಕ ಕಿರುಕುಳದ ಬಗ್ಗೆಯೂ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಧಾರವಾಡ | ಬಿಜೆಪಿ ಮಹಿಳಾ ಮೋರ್ಚಾ ಮುಖಂಡೆಯ ಪತಿ ನೇಣಿಗೆ ಶರಣು
ನ್ಯಾಯಾಲಯಕ್ಕೆ ಹಾಜರುಪಡಿಸಿದ ತಲೆ ಬರುಡೆಯ ಕಾನೂನುಬಾಹಿರವಾಗಿ ಹೊರ ತೆಗೆದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಎರಡನೇ ದಿನವೂ ಎಸ್ ಐಟಿ ದೂರುದಾರನನ್ನು ಫುಲ್ ಡ್ರಿಲ್ ಮಾಡಿದ್ದು ಮುಂದೆ ಎಸ್ ಐಟಿ ನಡೆ ಏನು ಎನ್ನುವುದೇ ಕುತೂಹಲ ಹುಟ್ಟಿಸಿದೆ.
ಏನೇನು ಪ್ರಶ್ನೆಗಳನ್ನು ಕೇಳಿದ್ದಾರೆ?
ನೂರಾರು ಶವ ಹೂತು ಹಾಕಿದ್ದ ವೇಳೆ ನಿನ್ನ ಜೊತೆ ಇದ್ದವರು ಯಾರು?
ಮೃತದೇಹ ಹೂತುಹಾಕಲು ಬಲವಂತಪಡಿಸಿದ ಮೇಲ್ವಿಚಾರಕರ ಹೆಸರೇನು?
ಅವರು ಇನ್ನೂ ಜೀವಂತವಾಗಿ ಇದ್ದಾರೆ ಅನ್ನೋ ಮಾಹಿತಿ ಇದ್ಯಾ?
ನ್ಯಾಯಾಲಯಕ್ಕೆ ಹಾಜರುಪಡಿಸಿದ ತಲೆ ಬುರುಡೆ ತಂದದ್ದು ಎಲ್ಲಿಂದ,ಆ ವೇಳೆ ನಿನ್ನ ಜೊತೆ ಯಾರಿದ್ದರು?
ತಲೆ ಬುರುಡೆ ಯಾರದ್ದು ಎನ್ನುವ ಬಗ್ಗೆ ಖಚಿತತೆ ಇದ್ಯಾ?
ನೀವು ಹೂತು ಹಾಕಿದ್ದ ಮೃತದೇಹಗಳ ಪೈಕಿ ನಿಮಗೆ ಪರಿಚಿತ ವ್ಯಕ್ತಿಗಳದ್ದು ಮೃತದೇಹ ಇತ್ತಾ?
ತಲೆಬುರುಡೆಯನ್ನು ಹೊರ ತೆಗೆಯುವ ವೇಳೆ ನೀವು ಒಬ್ಬರೇ ಇದ್ದರಾ?
ಮಣ್ಣಿನಡಿಯಲ್ಲಿದ್ದ ತಲೆ ಬುರುಡೆ ಹೊರ ತೆಗೆಯಲು ನಿಮ್ಮಿಂದ ಓರ್ವರಿಂದಲೇ ಹೇಗೆ ಸಾಧ್ಯ?
ನಿಮಗೆ ಸಹಕರಿಸಿದರು ಯಾರು,ಎಷ್ಟು ಮಂದಿ ಇದ್ದರು?
ತಲೆ ಬುರುಡೆ ತೆಗೆಯೋ ವೇಳೆ ಮೊಬೈಲ್ ವೀಡಿಯೋ ಮಾಡಿದ್ದು ಯಾರು?
ದೂರುದಾರ ಬಳಿ ಕೇವಲ ಆತನ ದೂರಿಗೆ ಸಂಬಂಧಪಟ್ಟಂತೆ ಮಾತ್ರ ಪ್ರಶ್ನೆ ಕೇಳಿದ್ದಲ್ಲ. ಬದಲಾಗಿ ವೈಯಕ್ತಿಕ ವಿಚಾರವನ್ನೂ ಆತನ ಬಳಿ ಕೇಳಿದ್ದಾರೆ. 2014ರಲ್ಲಿ ಮೇಲ್ವಿಚಾರಕರ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನಿಂದ ನನ್ನ ಕುಟುಂಬದ ಬಾಲಕಿಗೆ ಲೈಂಗಿಕ ಕಿರುಕುಳ ಆಗಿತ್ತು. ಡಿಸೆಂಬರ್ 2014ರಲ್ಲಿ ನಾನು ನನ್ನ ಕುಟುಂಬದೊಂದಿಗೆ ಧರ್ಮಸ್ಥಳದಿಂದ ಓಡಿ ಹೋದೆ ಎಂದು ಶನಿವಾರ ಅನಾಮಿಕ ವ್ಯಕ್ತಿ ವಿಚಾರಣೆ ವೇಳೆ ಎಸ್ ಐಟಿ ಅಧಿಕಾರಿಗಳ ಮುಂದೆ ಹೇಳಿದ್ದ. ಹೀಗಾಗಿ ಈ ಪ್ರಕರಣದ ಬಗ್ಗೆಯೂ ಡಿಜಿಪಿ ಪ್ರಣವ್ ಮೊಹಾಂತಿ ಪ್ರಶ್ನಿಸಿದ್ದಾರ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: 162 ಬಾರಿ ಫಾರಿನ್ ಟ್ರಿಪ್, 300 ಕೋಟಿ ಹಗರಣ – ನಕಲಿ ರಾಯಭಾರ ಕಚೇರಿ ರಹಸ್ಯ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು
ಯಾವೆಲ್ಲ ಪ್ರಶ್ನೆ ಕೇಳಲಾಗಿದೆ?
2014ರಲ್ಲಿ ನೀವು ಅನುಭವಿಸಿದ್ದ ಮಾನಸಿಕ ಹಿಂಸೆ ಯಾವ ರೀತಿ ತೀವ್ರವಾಗಿತ್ತು?
ಈ ಮಾನಸಿಕ ಹಿಂಸೆ ಯಾವುದಾದರೂ ವ್ಯಕ್ತಿಯಿಂದ ನಿರ್ದಿಷ್ಟವಾಗಿ ಆಗಿತ್ತಾ? ಅವರು ಯಾರ ಸಂಪರ್ಕದಲ್ಲಿದ್ದರು?
ಲೈಂಗಿಕ ಕಿರುಕುಳವಾದ ಕುಟುಂಬದ ಬಾಲಕಿ ಅಂದ್ರೆ ನಿಮಗೆ ಸಂಬಂಧ ಏನು?
ಆ ಸಂದರ್ಭದಲ್ಲಿ ಆ ಬಾಲಕಿ ಯಾವ ವಯಸ್ಸಿನವಳಿದ್ದಳು?
ಲೈಂಗಿಕ ಕಿರುಕುಳ ಮಾಡಿದ ವ್ಯಕ್ತಿ ಯಾರು? ಅವರು ಹೇಗೆ ನಿಮ್ಮ ಕುಟುಂಬದ ಸಂಪರ್ಕಕ್ಕೆ ಬಂದರು?
ಡಿಸೆಂಬರ್ 2014ರಲ್ಲಿ ನೀವು ಯಾವ ದಿನಾಂಕ ಅಥವಾ ದಿನಗಳಲ್ಲಿ ಧರ್ಮಸ್ಥಳದಿಂದ ಹೊರಗೆ ಹೋದ್ರಿ?
ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ಎಲ್ಲರು ಸೇರಿ ಹೊರ ಹೋದ್ರಾ? ಯಾರು ಯಾರು ಇದ್ದರು?
ನೀವು ತಕ್ಷಣವೇ ಆಗ ಪೋಲಿಸರನ್ನ ಯಾಕೆ ಸಂಪರ್ಕ ಮಾಡಿಲ್ಲ?
ನೆರೆ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದೀರಿ ಅಂದ್ರೆ ನೀವು ಯಾವ ರಾಜ್ಯಕ್ಕೆ ಹೋದಿರಿ?
ತಲೆ ಮರೆಸಿಕೊಂಡು ಬದುಕಿದ ಸಮಯದಲ್ಲಿ ನಿಮ್ಮ ಕುಟುಂಬದವರು ಸುರಕ್ಷಿತವಾಗಿದ್ದಾರಾ?
ಈ ಸಮಯದಲ್ಲಿ ನಿಮ್ಮನ್ನ ಯಾರಾದರೂ ಹುಡುಕಾಟ ನಡೆಸಿದರಾ ಅಥವಾ ಬೆದರಿಕೆ ಹಾಕಿದ್ದಾರಾ
ನೀವು ಈ ಕಿರುಕುಳ ಅಥವಾ ಹಿಂಸೆ ನಡೆಸಿದ ವ್ಯಕ್ತಿಗಳನ್ನು ಗುರುತಿಸಲು ಸಹಕರಿಸುತ್ತೀರಾ?
ನೀವು ಈ ಹೇಳಿಕೆ ನೀಡುವ ಮುನ್ನ ನಿಮ್ಮ ಕುಟುಂಬದ ಇತರ ಸದಸ್ಯರ ಸಹಮತವನ್ನು ಪಡೆದುಕೊಂಡಿದ್ದೀರಾ?