Tag: Prana Pratishtha

  • ರಾಮಮಂದಿರದ ಮಂಡಲೋತ್ಸವ ಪೂಜೆಗೆ ರಾಯಚೂರಿನ ವೈದಿಕರಿಬ್ಬರು ಆಯ್ಕೆ

    ರಾಮಮಂದಿರದ ಮಂಡಲೋತ್ಸವ ಪೂಜೆಗೆ ರಾಯಚೂರಿನ ವೈದಿಕರಿಬ್ಬರು ಆಯ್ಕೆ

    ರಾಯಚೂರು: ಇಡೀ ವಿಶ್ವವೇ ಎದುರು ನೋಡುತ್ತಿರುವ ಅಯೋಧ್ಯೆ (Ayodhya) ರಾಮಮಂದಿರದ (Ram Mandir) ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ (Prana Pratishtha) ಜ.22ರಂದು ನಡೆಸಲು ಸಕಲ ಸಿದ್ಧತೆಗಳಾಗಿವೆ. ಪ್ರತಿಷ್ಠಾಪನೆ ಬಳಿಕ 48 ದಿನಗಳ ಕಾಲ ವೀರಶೈವಾಗಮನ ಪದ್ಧತಿಯಲ್ಲಿ ಮಂಡಲೋತ್ಸವ ನಡೆಯಲಿದೆ. ಮಂಡಲೋತ್ಸವ ಪೂಜೆಗೆ ರಾಜ್ಯದ ಹಲವು ವೈದಿಕ ಪಂಡಿತರು ಆಯ್ಕೆಯಾಗಿದ್ದು ರಾಯಚೂರಿನಿಂದ (Raichur) ಇಬ್ಬರು ಯುವ ಅರ್ಚಕರು ಆಯ್ಕೆಯಾಗಿದ್ದಾರೆ.

    ಕೊಪ್ಪಳದ ಕಾರಟಗಿಯಲ್ಲಿ ಅರ್ಚಕರಾಗಿರುವ ಲಿಂಗಸುಗೂರು ತಾಲೂಕಿನ ಗುರಗುಂಟದ ವೇದಮೂರ್ತಿ ಆದಯ್ಯ ಸ್ವಾಮಿ ಸಾಲಿಮಠ ಹಾಗೂ ಮಸ್ಕಿ ತಾಲೂಕಿನ ಹಸಮಕಲ್‍ನ ವೇದಮೂರ್ತಿ ಶ್ರೀಧರ ಸ್ವಾಮಿ ಹಿರೇಮಠ ಅವರು, ಮಂಡಲೋತ್ಸವ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ಮಹಾಪೂಜೆಗೆ ಆಯ್ಕೆಯಾಗಿರುವುದಕ್ಕೆ ವೈದಿಕ ಪಂಡಿತರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಾಭೈರಬ್ ದೇವಾಲಯದ ಸ್ವಚ್ಛತಾ ಅಭಿಯಾನದಲ್ಲಿ ಅಮಿತ್ ಶಾ ಭಾಗಿ

    ಆನ್ ಲೈನ್ ಮೂಲಕ ವೈದಿಕ ಸೇವೆಗಾಗಿ ರಾಮ ಜನ್ಮಭೂಮಿ ಟ್ರಸ್ಟ್ ಋಗ್ವೇದ, ವೇದಾಧ್ಯಯನ, ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ ಪಡೆದವರಿಗಾಗಿ ಅರ್ಜಿ ಕರೆದಿತ್ತು. ಸಂದರ್ಶನದಲ್ಲಿ ಆಯ್ಕೆಯಾಗಿರುವ ಜಿಲ್ಲೆಯ ವೈದಿಕ ಪಂಡಿತರು ಶ್ರೀರಾಮನ ಸಿಂಹಾಸನಾರೋಹಣಕ್ಕಾಗಿ ಯಾಗದ ವಿಧಿಗಳನ್ನು ನಡೆಸುವ ಹಾಗೂ ಮಂಡಲ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  ಇದನ್ನೂ ಓದಿ: ಸಾಮಾಜಿಕ ಮಾಧ್ಯಮದಲ್ಲಿ ರಾಮಲಲ್ಲಾ ‘ದಿವ್ಯ ದರ್ಶನ’; ವಿಗ್ರಹದ ಫೋಟೋಗಳು ವೈರಲ್‌ – ಜೈ ಶ್ರೀರಾಮ್‌ ಘೋಷಣೆ

  • ಬಾಲರಾಮನ ಪ್ರಾಣಪ್ರತಿಷ್ಠೆಗೆ ಆಗಮಿಸುವ ಗಣ್ಯರಿಗೆ ಕ್ಯೂಆರ್ ಕೋಡ್ ಪಾಸ್ ಕಡ್ಡಾಯ- ಸ್ಕ್ಯಾನ್ ಆದ ಬಳಿಕವಷ್ಟೇ ಪ್ರವೇಶ

    ಬಾಲರಾಮನ ಪ್ರಾಣಪ್ರತಿಷ್ಠೆಗೆ ಆಗಮಿಸುವ ಗಣ್ಯರಿಗೆ ಕ್ಯೂಆರ್ ಕೋಡ್ ಪಾಸ್ ಕಡ್ಡಾಯ- ಸ್ಕ್ಯಾನ್ ಆದ ಬಳಿಕವಷ್ಟೇ ಪ್ರವೇಶ

    ಅಯೋಧ್ಯೆ: ರಾಮಮಂದಿರದಲ್ಲಿ (Ram Mandir) ಬಾಲರಾಮನ ಪ್ರಾಣ ಪ್ರತಿಷ್ಠಾ (Prana Pratishtha) ಕಾರ್ಯಕ್ರಮ ಸಮಿಪಿಸುತ್ತಿದ್ದಂತೆ, ಇಂದು (ಶುಕ್ರವಾರ) ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಹ್ವಾನಿತ ಗಣ್ಯರಿಗಾಗಿ ಪ್ರವೇಶ ಪತ್ರದ ಮಾದರಿಯನ್ನು ಬಿಡುಗಡೆ ಮಾಡಿದೆ. ಪ್ರವೇಶ ಪತ್ರದಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ ದೇವಾಲಯಕ್ಕೆ ಪ್ರವೇಶ ಸಿಗಲಿದೆ ಎಂದು ಸ್ಪಷ್ಟಪಡಿಸಿದೆ.

    ಅಯೋಧ್ಯೆ (Ayodhya) ರಾಮಮಂದಿರದ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ 3,000 ವಿವಿಐಪಿಗಳು ಸೇರಿ 7,000 ಕ್ಕೂ ಹೆಚ್ಚು ಗಣ್ಯ ಅತಿಥಿಗಳಿಗೆ ಆಮಂತ್ರಣ ಪತ್ರಿಕೆ ಮತ್ತು ಪ್ರವೇಶ ಪತ್ರಗಳನ್ನು ಕಳುಹಿಸಿದೆ. ಕ್ಯೂಆರ್ ಕೋಡ್ ಹೊಂದಿದ್ದು, ಅದನ್ನು ಸ್ಕ್ಯಾನ್ ಮಾಡಿದ ಬಳಿಕ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶ ಸಿಗಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಅಯೋಧ್ಯೆಯ ಬಾಲರಾಮನ ವಿಗ್ರಹದ ವಿಶೇಷತೆ ಏನು..?

    ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಎಕ್ಸ್‍ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಬಾಲರಾಮನ ಪ್ರಾಣಪ್ರತಿಷ್ಠಾ ಉತ್ಸವಕ್ಕೆ ಪ್ರವೇಶ ಪಡೆಯಬೇಕಾದರೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನೀಡಿದ ಪ್ರವೇಶ ಪತ್ರದಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಆಮಂತ್ರಣ ಪತ್ರಿಕೆ ಮಾತ್ರ ಹಿಡಿದು ಬಂದರೆ ಉತ್ಸವಕ್ಕೆ ಪ್ರವೇಶ ನೀಡುವುದು ಸಾಧ್ಯವಿಲ್ಲ. ಪ್ರವೇಶ ಪತ್ರದ ಮಾದರಿ ಪ್ರತಿಯನ್ನು ಇಲ್ಲಿ ಲಗತ್ತಿಸಲಾಗಿದೆ ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ.

    ಪುರೋಹಿತರು, ದಾನಿಗಳು ಮತ್ತು ಗಣ್ಯ ರಾಜಕಾರಣಿಗಳನ್ನು ಒಳಗೊಂಡು 3,000 ವಿವಿಐಪಿಗಳು ಸೇರಿ 7,000 ಕ್ಕೂ ಹೆಚ್ಚು ಗಣ್ಯ ಅತಿಥಿಗಳಿಗೆ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ಆಮಂತ್ರಣ ಪತ್ರಿಕೆಯನ್ನು ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ನೀಡಿದೆ.

    ಈಗಾಗಲೇ ಪ್ರಾಣಪ್ರತಿಷ್ಠಾಪನೆಗೆ ರಾಮಮಂದಿರದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಗತ್ಯ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿವೆ. ಜ.22 ರಂದು ಬಾಲರಾಮನ ಪ್ರಾಣಪ್ರತಿಷ್ಠಾಪನೆ ಬಳಿಕ, ಜ.23ರಿಂದ ಬಾಲರಾಮನ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ. ಇದನ್ನೂ ಓದಿ: Ram Mandir: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ವಿಗ್ರಹ ಹೇಗಿದೆ ನೋಡಿ – Photos

  • ಅಯೋಧ್ಯೆಗೆ ಹೋಗುವ ಯಾರಿಗೂ ತೊಂದರೆ ಆಗಬಾರದು: ಪರಮೇಶ್ವರ್

    ಅಯೋಧ್ಯೆಗೆ ಹೋಗುವ ಯಾರಿಗೂ ತೊಂದರೆ ಆಗಬಾರದು: ಪರಮೇಶ್ವರ್

    ಬೆಂಗಳೂರು: ಅಯೋಧ್ಯೆಯಲ್ಲಿ (Ayodhya) ರಾಮನ ಪ್ರಾಣಪ್ರತಿಷ್ಠಾಪನೆಗೆ (Prana Pratishtha) ರಾಜ್ಯದಿಂದ ಹೋಗುವ ಜನರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಬೇಕು. ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಗೃಹಸಚಿವ ಜಿ. ಪರಮೇಶ್ವರ್ (G. Parameshwar) ಎಲ್ಲಾ ಎಸ್‍ಪಿಗಳಿಗೂ ಸೂಚನೆ ನೀಡಿದ್ದಾರೆ.

    ರಾಜ್ಯದಿಂದ ಜನವರಿ 22 ರಂದು ಅಯೋಧ್ಯೆಯ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಾಜ್ಯದಿಂದ ಸಾಕಷ್ಟು ಜನ ಹೋಗುತ್ತಾರೆ. ರಾಮ ಭಕ್ತರಿಗೆ ಯಾವುದೇ ತೊಂದರೆಯಾಗಬಾರದು. ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಹೀಗಾಗಿ ಕಟ್ಟೆಚ್ಚರ ವಹಿಸುವಂತೆ ಎಲ್ಲಾ ಎಸ್‍ಪಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ- ಹುಬ್ಬಳ್ಳಿಯ ಕರಸೇವಕರ ಸಂಭ್ರಮ

    ರಾಮಭಕ್ತರು ಅಯೋಧ್ಯೆಗೆ ಹೋಗುವ ವೇಳೆ ಹಾಗೂ ಈ ಕಾರ್ಯಕ್ರಮದ ಸಂದರ್ಭದಲ್ಲಿ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಿ. ಎಲ್ಲರೂ ಅಲರ್ಟ್ ಆಗಿ ಇರಬೇಕು ಎಂದು ಅವರು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಅನ್ನೋದು ನಾಯಕರ ಕೆಲಸವಲ್ಲ: ಮೋದಿ ವಿರುದ್ಧ ದೀದಿ ವಾಗ್ದಾಳಿ

  • ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ- ಹುಬ್ಬಳ್ಳಿಯ ಕರಸೇವಕರ ಸಂಭ್ರಮ

    ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ- ಹುಬ್ಬಳ್ಳಿಯ ಕರಸೇವಕರ ಸಂಭ್ರಮ

    ಹುಬ್ಬಳ್ಳಿ: ಅಯೋಧ್ಯೆಯ (Ayodhya) ರಾಮಮಂದಿರದಲ್ಲಿ (RamMandir) ಪ್ರಾಣಪ್ರತಿಷ್ಠೆ (Prana Pratishtha) ಸಮೀಪಿಸುತ್ತಿದ್ದಂತೆ ದೇಶದೆಲ್ಲೆಡೆ ಕೋಟ್ಯಂತರ ಹಿಂದೂಗಳ ಮನೆ-ಮನದಲ್ಲಿ ಸಂಭ್ರಮ ಮನೆಮಾಡಿದೆ. ಈ 500 ವರ್ಷಗಳ ಕನಸು ನನಸಾಗುವ ಹೊತ್ತಿನಲ್ಲಿ, ಈ ಹಿಂದೆ ಮಂದಿರಕ್ಕಾಗಿ ಹೋರಾಟ ನಡೆಸಿದ್ದ ಹುಬ್ಬಳ್ಳಿಯ ಕರಸೇವಕರು (Karasevak) ಸಂಭ್ರಮ ಆಚರಿಸಿದ್ದಾರೆ.

    ಇಡೀ ದೇಶವೇ ಶ್ರೀರಾಮಮಯವಾಗಿದೆ. ನೂರಾರು ಕೋಟಿ ಹಿಂದೂಗಳ ಶತಮಾನಗಳ ಕನಸು ಸಾಕಾರಗೊಳುವ ಸಮಯ ಸಮೀಪಿಸುತ್ತಿದೆ. ಈ ಮಂದಿರ ಲಕ್ಷಾಂತರ ಮಂದಿ ಕರಸೇವಕರ ತ್ಯಾಗ ಹಾಗೂ ಹೋರಾಟದ ಫಲವಾಗಿದೆ. ಅದರಲ್ಲಿ ರಾಮಮಂದಿರಕ್ಕೆ ಅಡಿಪಾಯ ಹಾಕಲು ಅಂದು ತೆರಳಿದ್ದ ಹುಬ್ಬಳ್ಳಿಯ ಕರಸೇವಕರ ಪಾತ್ರವೂ ಪ್ರಮುಖವಾಗಿದೆ. ಇದನ್ನೂ ಓದಿ: ಬಾಲರಾಮನಿಗೆ ಅರ್ಪಿಸಲು ಹಲ್ವಾ ತಯಾರಿಸುವ ಕಡಾಯಿ ರೆಡಿ- ಏನಿದರ ವಿಶೇಷ?

    ಹುಬ್ಬಳ್ಳಿ ಗುರುಸಿದ್ದಪ್ಪ ಎಂಬ ಕರಸೇವಕರು ತಮ್ಮ 27ನೇ ವಯಸ್ಸಿನಲ್ಲಿ ಅಯೋಧ್ಯೆಗೆ ತೆರಳಿ ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇದೀಗ ಕರಸೇವೆ ಮಾಡಿ ತಾವು ಜೀವಂತವಾಗಿರುವಾಗಲೇ ಮಂದಿರ ನಿರ್ಮಾಣವಾಗುವುದನ್ನು ಕಣ್ತುಂಬಿಕೊಳ್ಳಲು ತಮ್ಮ ಇಳಿವಯಸ್ಸಿನಲ್ಲಿ ಕಾದು ಕುಳಿತಿದ್ದಾರೆ.

    ರೇಣುಕಾ ನಗರದ ಪ್ರಸನ್ನವೆಂಕಟ ಕಟ್ಟಿಯವರು ಸಹ ಒಬ್ಬರು. ಅವರು ಯುವಕರಾಗಿದ್ದಾಗ ಬಾಗಲಕೋಟೆಯಿಂದ ಅಯೋಧ್ಯೆಗೆ ತೆರಳಿದ್ದರು. ಅಲ್ಲದೇ ಅಂದು ಹಮ್ಮಿಕೊಂಡಿದ್ದ ರಾಮಪಾದುಕೆ ಅಭಿಯಾನದ ಪ್ರಮುಖ ರೂವಾರಿ ಸಹ ಆಗಿದ್ದರು. ಕಳೆದ ಮೂವತ್ತು ವರ್ಷಗಳ ಹಿಂದೆ ಅಯೋಧ್ಯೆಯಿಂದ ಪೂಜೆ ಮಾಡಿಸಿ ತಂದ ರಾಮನ ಪಾದುಕೆಗೆ ಇಂದಿಗೂ ಅವರು ನಿತ್ಯ ಪೂಜೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಭಕ್ತರು ಚಳಿಯಿಂದ ರಕ್ಷಿಸಿಕೊಳ್ಳಲು ಅಯೋಧ್ಯೆಯಲ್ಲಿ ಮಾಡಲಾಗಿದೆ ವಿಶೇಷ ವ್ಯವಸ್ಥೆ

  • 13 ಸಾವಿರ ಅಡಿ ಎತ್ತರದಲ್ಲಿ ಹಾರಾಡಿದ ರಾಮಮಂದಿರದ ಬ್ಯಾನರ್

    13 ಸಾವಿರ ಅಡಿ ಎತ್ತರದಲ್ಲಿ ಹಾರಾಡಿದ ರಾಮಮಂದಿರದ ಬ್ಯಾನರ್

    – ಸ್ಕೈ ಡೈವಿಂಗ್‍ನಲ್ಲಿ ಮೊಳಗಿತು ಜೈ ಶ್ರೀರಾಮ್

    ವಿಜಯಪುರ: ಅಯೋಧ್ಯೆಯ ರಾಮಮಂದಿರದಲ್ಲಿ (Ram Mandir) ಬಾಲರಾಮನ ಪ್ರಾಣಪ್ರತಿಷ್ಠೆಗೆ (Prana Pratishtha) ದಿನಗಣನೆ ಆರಂಭವಾಗಿದೆ. ಈ ಸಮಯದಲ್ಲಿ ಕೋಟ್ಯಂತರ ಶ್ರೀರಾಮನ ಭಕ್ತರು ದೇಶ ವಿದೇಶಗಳ ನೆಲದಲ್ಲಿ ನಾನಾ ರೀತಿಯಲ್ಲಿ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಬ್ಯಾಂಕಾಕ್‍ನ (Bangkok) ಖೋಯಾಯ್ ಎಂಬಲ್ಲಿ ನಗರದ ವ್ಯಕ್ತಿಯೊಬ್ಬರು ಸೇರಿದಂತೆ ನಾಲ್ವರ ತಂಡ, 13 ಸಾವಿರ ಅಡಿ ಎತ್ತರದಿಂದ ಸ್ಕೈಡೈವಿಂಗ್ (Skydiving) ಮಾಡುವಾಗ ರಾಮಮಂದಿರ, ಜೈ ಶ್ರೀರಾಮ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬ್ಯಾನರ್ ಹಿಡಿದು, ಜೈಶ್ರೀರಾಮ್ ಘೋಷಣೆ ಕೂಗಿ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.

    ನಮೋ ಸ್ಕೈಡೈವರ್ಸ್ ಎಂಬ ಈ ನಾಲ್ವರ ತಂಡ ಈ ಸಾಹಸ ಮಾಡಿದ್ದಾರೆ. ನಗರದ ರಾಮನ ಪರಮ ಭಕ್ತರಾದ ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠ ಈ ಸಾಹಸ ಮೆರೆದಿದ್ದು, ಇವರ ಜೊತೆ ಇವರ ಸ್ನೇಹಿತರಾದ ಬೆಂಗಳೂರಿನ ರಾಹುಲ್ ಡಾಕ್ರೆ, ಅನುಭವ ಅಗರವಾಲ್ ಹಾಗೂ ಮಹಾರಾಷ್ಟ್ರದ ಹಿಮಾನಶೂ ಸಾಬಳೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠೆ ದಿನ ಶಾಸಕ ಅಭಯ ಪಾಟೀಲ್‌ ಕಡೆಯಿಂದ 5 ಲಕ್ಷ ಲಾಡು ವಿತರಣೆ

    ರಾಮ ಭಕ್ತರ 500 ವರ್ಷಗಳ ಕನಸು ನನಸಾಗುತ್ತಿರುವ ಈ ಸಮಯದಲ್ಲಿ, ದೇಶದೆಲ್ಲೆಡೆ ರಾಮನ ಭಕ್ತರು ನಾನಾ ರೀತಿಯಲ್ಲಿ ಭಕ್ತಿ ಪ್ರದರ್ಶಿಸುತ್ತಿದ್ದಾರೆ. ಬೆಂಗಳೂರಿನ ಮಾಲ್‍ಗಳಲ್ಲಿ ರಾಮನ ರಂಗೋಲಿ ಬಿಡಿಸಿದ್ದು ಸುದ್ದಿಯಾಗಿತ್ತು. ಅದೇ ರೀತಿ ನಮೋ ಸ್ಕೈಡೈವರ್ಸ್ ತಂಡ ಕೂಡ ವಿಶೇಷ ಸಾಧನೆ ಮಾಡಿ ರಾಮನ ಭಕ್ತರ ಮನಸ್ಸನ್ನು ಗೆದ್ದಿದ್ದಾರೆ.

    ರಾಮನಿಗೆ, ರಾಮ ಭಕ್ತಿಗೆ ವ್ಯಾಪ್ತಿಯ ಮಿತಿಯಿಲ್ಲ. ಹಾಗಾಗಿ ಆಗಸದಲ್ಲೂ ಶ್ರೀ ರಾಮನ ಹೆಸರು ಹಾರಬೇಕು ಎಂದು ವಿಭಿನ್ನ ಪ್ರಯತ್ನವನ್ನು ನಮೋ ಸ್ಕೈ ಡೈವರ್ಸ್ ತಂಡ ಮಾಡಿದೆ. ಇದನ್ನೂ ಓದಿ: Ayodhya Ram Mandir: ರಾಮನೂರಿನಲ್ಲಿ ತಲೆಎತ್ತಲಿದೆ ದೇಶದ ಮೊದಲ 7 ಸ್ಟಾರ್‌ ಸಸ್ಯಹಾರಿ ಹೋಟೆಲ್‌