Tag: Pramod Sharma

  • ನಟಿ ಸೋನಾಕ್ಷಿ ಟೀಮ್ ವಿರುದ್ಧ ಜಾಮೀನು ರಹಿತ ವಾರೆಂಟ್

    ನಟಿ ಸೋನಾಕ್ಷಿ ಟೀಮ್ ವಿರುದ್ಧ ಜಾಮೀನು ರಹಿತ ವಾರೆಂಟ್

    ಣ ಪಡೆದು ಕಾರ್ಯಕ್ರಮವೊಂದರಲ್ಲಿ ಭಾಗಿ ಆಗದೇ ಇರುವ ಕಾರಣಕ್ಕಾಗಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ (Sonakshi Sinha) ಅವರ ಟೀಮ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಸೋನಾಕ್ಷಿ ಅವರ ಮ್ಯಾನೇಜರ್ ಮತ್ತು ಟೀಮ್ ಗೆ ಬಂಧನದ ಭೀತಿ ಎದುರಾಗಿದೆ.

    ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಲು ಸೋನಾಕ್ಷಿ ಹಣ ಪಡೆದಿದ್ದರು. ಹಣ ಪಡೆದುಕೊಂಡೂ ಅವರು ಕಾರ್ಯಕ್ರಮದಲ್ಲಿ ಭಾಗಿ ಆಗದೇ ಇರುವ ಕಾರಣಕ್ಕಾಗಿ ಆಯೋಜಕರಿಗೆ ಭಾರೀ ನಷ್ಟವಾಗಿತ್ತು ಎಂದು ದೂರು ದಾಖಲಾಗಿತ್ತು. ಈ ದೂರಿಗೆ ಸಂಬಂಧಿಸಿದಂತೆ ಮುರಾದಾಬಾದ್ (Muradabad) ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

     

    2018ರಲ್ಲಿ ಸೋನಾಕ್ಷಿ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದರು. ಆಯೋಜಕ ಪ್ರಮೋದ್ ಶರ್ಮಾ (Pramod Sharma) ಬಳಿ ಹಣ ಪಡೆದಿದ್ದರು. ಕಾರ್ಯಕ್ರಮಕ್ಕೆ ಬಾರದೇ ಇರುವ ಕಾರಣಕ್ಕಾಗಿ 2019ರಂದು ಮುರಾದಾಬಾದ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿರುದ್ಧ ಸೋನಾಕ್ಷಿ ಟೀಮ್ ಕೂಡ ದೂರು ನೀಡಿದ್ದರು.

  • ಸೋನಾಕ್ಷಿ ಸಿನ್ಹಾ ಮೋಸ ಮಾಡಿದ್ರಾ? ಅಸಲಿ ಕಥೆ ಏನು?

    ಸೋನಾಕ್ಷಿ ಸಿನ್ಹಾ ಮೋಸ ಮಾಡಿದ್ರಾ? ಅಸಲಿ ಕಥೆ ಏನು?

    ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ತಮಗೆ ಮೋಸ ಮಾಡಿದ್ದಾರೆಂದು ಪ್ರಮೋದ್ ಶರ್ಮಾ ಎನ್ನುವವರು ದೆಹಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಹೀಗಾಗಿ ಸೋನಾಕ್ಷಿಗೆ ಜಾಮೀನು ರಹಿತ್ ಅರೆಸ್ಟ್ ವಾರೆಂಟ್ ಜಾರಿಯಾಗಿದೆ ಎಂದು ಹೇಳಲಾಗಿತ್ತು. ಈ ಕುರಿತು ಸೋನಾಕ್ಷಿ ಸಿನ್ಹಾ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ: ಐದು ಕಾಂಟ್ರವರ್ಸಿಗಳು

    ಕಾರ್ಯಕ್ರಮವೊಂದಕ್ಕೆ ಹಾಜರಾಗಲು ಆಯೋಜಕರಿಗೆ ಸೋನಾಕ್ಷಿ 37 ಲಕ್ಷ ರೂಪಾಯಿ ಪಡೆದೂ, ಹಾಜರಾಗದೇ ಕೈ ಕೊಟ್ಟಿದ್ದಾರೆ ಎಂದು ಆಯೋಜಕರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಅದು ನಂತರ ನಾನಾ ರೂಪ ಪಡೆದುಕೊಂಡಿತ್ತು. ಅನೇಕ ಮಾಧ್ಯಮಗಳು ಸೋನಾಕ್ಷಿಗೆ ಅರೆಸ್ಟ್ ವಾರೆಂಟ್ ಎಂದೂ ಸುದ್ದಿ ಮಾಡಿದ್ದವು. ಅದಕ್ಕವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದನ್ನೂ ಓದಿ : ಅಂತಾರಾಷ್ಟ್ರೀಯ ಮಹಿಳಾ ದಿನ: ನಟಿಯ ವರ್ಕೌಟ್ ವಿಡಿಯೋ ಗಿಫ್ಟ್ ಕೊಡ್ತಾರಂತೆ ರಾಮ್ ಗೋಪಾಲ್ ವರ್ಮಾ

    “ನಾನು ಯಾವ ಕಾರ್ಯಕ್ರಮವನ್ನೂ ಒಪ್ಪಿಕೊಂಡಿಲ್ಲ. ಅಂತಹ ಯಾವುದೇ ವ್ಯವಹಾರ ಕೂಡ ಆಗಿಲ್ಲ. ನನ್ನ ಮೇಲೆ ದೂರು ನೀಡಿದರೆ, ಪ್ರಚಾರ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಆ ವ್ಯಕ್ತಿ ಹಾಗೆ ಮಾಡಿದ್ದಾರೆ. ನನಗೆ ಯಾವುದೇ ಅರೆಸ್ಟ್ ವಾರೆಂಟ್ ಬಂದಿಲ್ಲ. ಎಲ್ಲವೂ ಸುಳ್ಳು ಸುದ್ದಿ’ ಎಂದು ಹೇಳುವ ಮೂಲಕ ಘಟನೆಗೆ ಪ್ರತಿಕ್ರಯಿಸಿದ್ದಾರೆ. ಇದನ್ನೂ ಓದಿ : ಜೈಲಿನಲ್ಲಿರೋದು ವಾಸಿ ಅಂತಿದ್ದಾಳೆ ಪೂನಂ ಪಾಂಡೆ

    ಅಲ್ಲದೇ, ತಮ್ಮ ವಿರುದ್ಧ ಸಲ್ಲದ ಆರೋಪ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ವಿವರ ಪಡೆದಿರುವ ಅವರು, ತಮ್ಮ ವಕೀಲರ ಮೂಲಕ ಅವರಿಗೆ ಸರಿಯಾದ ಉತ್ತರ ಕೊಡುವುದಾಗಿ ಹೇಳಿಕೊಂಡಿದ್ದಾರೆ.