Tag: Pramod Mutalik

  • ನಾನು ಸಹ ನಗರ ನಕ್ಸಲ್ ಬೋರ್ಡ್ ಪ್ರದರ್ಶಿಸಿದ್ದ ಕಾರ್ನಾಡ್ ವಿರುದ್ಧ ದೂರು

    ನಾನು ಸಹ ನಗರ ನಕ್ಸಲ್ ಬೋರ್ಡ್ ಪ್ರದರ್ಶಿಸಿದ್ದ ಕಾರ್ನಾಡ್ ವಿರುದ್ಧ ದೂರು

    ಬೆಂಗಳೂರು: ಗೌರಿ ಸಂಸ್ಮರಣಾ ದಿನದ ಆಚರಣೆ ವೇಳೆ ಸಾಹಿತಿ ಗಿರೀಶ್ ಕಾರ್ನಾಡ್ ಅವರು ನಾನು ಸಹ ನಗರ ನಕ್ಸಲ್ ಎಂಬ ಅಡಿಬರಹವಿದ್ದ ಬೋರ್ಡನ್ನು ಹಾಕಿಕೊಂಡು ಪರೋಕ್ಷವಾಗಿ ನಕ್ಸಲ್ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಗಿರೀಶ್ ಕಾರ್ನಾಡ್ ಸಾಹಿತಿಯಾಗಿದ್ದುಕೊಂಡು ಹಿಂಸೆಗೆ ಪರೋಕ್ಷವಾಗಿ ಪ್ರಚೋದನೆ ನೀಡುತ್ತಿದ್ದಾರೆ. ಈ ರೀತಿ ಮಾಡುವ ಮೂಲಕ ಅವರು ಉಗ್ರವಾದಿ ವ್ಯಕ್ತಿಗೆ ಸಮನಾಗಿದ್ದಾರೆ. ನಾನು ಒಬ್ಬ ನಕ್ಸಲ್ ಎನ್ನುವ ಹೇಳುವ ಮೂಲಕ ನಕ್ಸಲರಿಗೆ ಪ್ರಚೋದನೆ ನೀಡುತ್ತಿದ್ದಾರೆ. ಒಂದು ವೇಳೆ ಹಿಂದೂ ಸಂಘಟನೆಗಳು ಇಂತಹ ಹೇಳಿಕೆಗಳನ್ನು ನೀಡಿದ್ದರೆ, ಕೂಡಲೇ ಸ್ವಯಂಪ್ರೇರಿತ ಕೇಸ್ ದಾಖಲಿಸುತ್ತಿದ್ದರು ಎಂದು ಕಿಡಿಕಾರಿದರು.

    ಪ್ರಚೋದನೆಗೆ ಹೇಳಿಕೆ ನೀಡುವ ಹೇಳಿಕೆಗಳನ್ನು ನೀಡುತ್ತಿದ್ದರೂ, ಗಿರೀಶ್ ಕಾರ್ನಾಡ್ ವಿರುದ್ಧ ಸುಮೋಟೋ ಕೇಸ್ ಹಾಕಿಲ್ಲ. ನಮಗೊಂದು ಕಾನೂನು, ಅವರಿಗೊಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು. ಅಲ್ಲದೇ ಶೀಘ್ರವೇ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಕಾರ್ನಾಡ್ ಅವರ ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

    ಕಳೆದ ಬುಧವಾರ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಂಭಾಗಣದಲ್ಲಿ ಗೌರಿ ಡೇ ಆಚರಣೆಯ ಕಾರ್ಯಕ್ರಮದಲ್ಲಿ ಗಿರೀಶ್ ಕಾರ್ನಾಡ್‍ರವರು `ನಾನು ಒಬ್ಬ ನಗರ ನಕ್ಸಲ್’ ಎನ್ನುವ ಬೋರ್ಡ್ ಹಾಕಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿಯದ್ದು ಡೋಂಗಿ ಹಿಂದುತ್ವ- ಕಾಂಗ್ರೆಸ್‍ಗೆ ಈಗ ಹಿಂದೂಗಳು ಕಾಣಿಸ್ತಿದ್ದಾರೆ: ಪ್ರಮೋದ್ ಮುತಾಲಿಕ್

    ಬಿಜೆಪಿಯದ್ದು ಡೋಂಗಿ ಹಿಂದುತ್ವ- ಕಾಂಗ್ರೆಸ್‍ಗೆ ಈಗ ಹಿಂದೂಗಳು ಕಾಣಿಸ್ತಿದ್ದಾರೆ: ಪ್ರಮೋದ್ ಮುತಾಲಿಕ್

    ಉಡುಪಿ: ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಹಿಂದುತ್ವದ ಮೇಲೆ ಸವಾರಿ ಮಾಡಿ ಅಧಿಕಾರ ಗಿಟ್ಟಿಸುವ ಗುರಿ ಹೊಂದಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಆರೋಪ ಮಾಡಿದ್ದಾರೆ.

    ಇಂದು ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೋಹತ್ಯೆಯನ್ನು ಬಿಜೆಪಿ ನಿಷೇಧ ಮಾಡಿಲ್ಲ. ನನ್ನ ಮೇಲೆ 7 ಕೇಸು ಹಾಕಿ ಜೈಲಿಗೆ ಕಳುಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ತಮ್ಮ ಕಾರ್ಯಕರ್ತರು ಸತ್ತರೆ ಒಮ್ಮೆ ಕಣ್ಣೀರಿಡುವ ನಾಯಕರು, ಕೋರ್ಟ್ ಗೆ ಅಲೆದಾಡುವ ಕಾರ್ಯಕರ್ತರ ಬಗ್ಗೆ ಯಾರಿಗೂ ಚಿಂತೆಯೇ ಇಲ್ಲ. ಕಾಂಗ್ರೆಸ್ ನ ಮುಸ್ಲಿಂ ತುಷ್ಟೀಕರಣದಿಂದ ದೇಶದಲ್ಲಿ ಭಯೋತ್ಪಾಧನೆ ಹುಟ್ಟಿತು. ಕಾಂಗ್ರೆಸ್ ದೇಶದಲ್ಲಿ ಧೂಳೀಪಟವಾದ ಮೇಲೆ ಈಗ ಹಿಂದೂಗಳು ನೆನಪಾಗಿದ್ದಾರೆ. ರಾಹುಲ್ ಗಾಂಧಿಯ ದೇವಸ್ಥಾನ ಮಠ ಮಂದಿರದ ಭೇಟಿ ರಾಜಕೀಯ ಅಲ್ಲದೆ ಮತ್ತೇನೂ ಅಲ್ಲ. ಈ ವರೆಗೆ ಹಿಂದೂಗಳ ಕಡೆ ತಿರುಗಿಯೂ ನೋಡದ ಕಾಂಗ್ರೆಸ್ ಪಕ್ಷದಲ್ಲಿ ಈಗ ಯಾಕೆ ಇಷ್ಟೊಂದು ಬದಲಾವಣೆ ಎಂದು ಪ್ರಶ್ನಿಸಿದರು.

    ಶ್ರೀರಾಮ ಸೇನೆ, ಶಿವಸೇನೆ ಜೊತೆ ಕೈ ಜೋಡಿಸಿದ್ದು 52 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ಶೃಂಗೇರಿ ಅಥವಾ ತೆರದಾಳುವಿನಲ್ಲಿ ತಾನು ಸ್ಪರ್ಧಿಸುವುದಾಗಿ ಮುತಾಲಿಕ್ ಘೋಷಿಸಿದರು. ಕಾರ್ಯಕರ್ತರು ಎರಡೂ ಕಡೆಯಿಂದ ಒತ್ತಡ ತರುತ್ತಿದ್ದಾರೆ. ಯಾವುದು ಸೂಕ್ತ ಎಂದು ನಿರ್ಧರಿಸಿ ಸ್ಪರ್ಧಿಸುವುದಾಗಿ ಹೇಳಿದರು. ಶಿವಸೇನೆಯಿಂದ ಕನ್ನಡಕ್ಕೆ ಯಾವುದೇ ಹೊಡೆತ ಬೀಳುವುದಿಲ್ಲ ಎಂದು ಆಶ್ವಾಸನೆ ನೀಡಿದ ಅವರು ಬಿಜೆಪಿಯದ್ದು ಡೋಂಗಿ ಹಿಂದುತ್ವ- ನಮ್ಮದು ಪ್ರಖರ ಹಿಂದುತ್ವ, ಬಿಜೆಪಿಯ ಸೊಕ್ಕಿಗೆ ಶಿವಸೇನೆ ಉತ್ತರ ನೀಡುತ್ತದೆ ಎಂದರು.

    ಇದೇ ವೇಳೆ ಬಿಜೆಪಿ ಜೊತೆ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು, ಈ ಹಿಂದೆಯೇ ಬಿಜೆಪಿಯ ಬಾಗಿಲು ಬಂದ್ ಮಾಡಲಾಗಿದೆ. ಇನ್ನು ಕದ ತೆರೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

  • ಟಿಪ್ಪು ಜಯಂತಿಯನ್ನು ಆಚರಿಸುತ್ತಿರುವುದು ಮುಸ್ಲಿಂ ಮತ ಬ್ಯಾಂಕ್ ಭದ್ರಪಡಿಸಲು: ಪ್ರಮೋದ್ ಮುತಾಲಿಕ್

    ಟಿಪ್ಪು ಜಯಂತಿಯನ್ನು ಆಚರಿಸುತ್ತಿರುವುದು ಮುಸ್ಲಿಂ ಮತ ಬ್ಯಾಂಕ್ ಭದ್ರಪಡಿಸಲು: ಪ್ರಮೋದ್ ಮುತಾಲಿಕ್

    ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಟಿಪ್ಪು ಜಯಂತಿಯನ್ನು ಆಚರಿಸುತ್ತರುವುದು ಕೇವಲ ಮುಸ್ಲಿಂ ಮತ ಬ್ಯಾಂಕ್ ಭದ್ರಪಡಿಸಲು ಮಾತ್ರ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ನವೆಂಬರ್ 10 ರಂದು ಟಿಪ್ಪು ಜಯಂತಿಯನ್ನು ಆಚರಣೆ ಮಾಡುವುದಕ್ಕೆ ನಮ್ಮ ವಿರೋಧವಿದೆ. ಸ್ವಾರ್ಥ ರಾಜಕಾರಣಕ್ಕಾಗಿ ಹಾಗೂ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಇಂತಹ ಆಚರಣೆ ಮಾಡಲಾಗುತ್ತಿದೆ. ಟಿಪ್ಪು ತನ್ನ ಅವಧಿಯಲ್ಲಿ ಹಲವರನ್ನು ಮತಾಂತರಗೊಳಿಸಿದ್ದು, ಇದಕ್ಕೆ ಟಿಪ್ಪು ಮಗ ಬರೆದಿರುವ ಪತ್ರಗಳೇ ಸಾಕ್ಷಿಯಾಗಿವೆ. ಅಲ್ಲದೇ ಟಿಪ್ಪು ಆಡಳಿತ ಅವಧಿಯಲ್ಲಿ ಪರ್ಶಿಯನ್ ಭಾಷೆಯನ್ನು ಜಾರಿಗೆ ತಂದಿರುವ ನಾಡದ್ರೋಹಿ. ಇದನ್ನು ಜನತೆಗೆ ತಿಳಿಸಲು ಮುಂದಿನ ದಿನಗಳಲ್ಲಿ ಶ್ರೀರಾಮ ಸೇನೆ ಒಂದು ಪುಸ್ತಕವನ್ನು ಹೊರತರುತ್ತದೆ ಎಂದು ಹೇಳಿದರು.

    ಮುಂದಿನ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಆಚರಣೆ ರದ್ದು ಮಾಡಬೇಕು. ಅಲ್ಲದೇ ಟಿಪ್ಪುವಿನ ಹೆಸರಿನಲ್ಲಿರುವ ಬೋರ್ಡ್ ಹಾಗೂ ಸರ್ಕಲ್‍ಗಳನ್ನೂ ತೆಗೆದು ಹಾಕಬೇಕೆಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಗೌರಿ ಹತ್ಯೆ ಪ್ರಕರಣದ ಆರೋಪಿಗಳ ಗುರುತು ಪತ್ತೆಗೆ ಎಸ್‍ಐಟಿ ಅಧಿಕಾರಿಗಳು ಬಿಡುಗಡೆಗೊಳಿಸಿರುವ ಶಂಕಿತ ವ್ಯಕ್ತಿಗಳ ಹಣೆಯಲ್ಲಿ ಕುಂಕುಮ ಇರುವುದರ ಕುರಿತು ಕಿಡಿಕಾರಿದ ಅವರು, ತಲೆಯ ಮೇಲೆ ಟೋಪಿ ಹಾಕಿರುವವರ ಭಾವ ಚಿತ್ರ ಬಿಡುಗಡೆ ಮಾಡಿ ಎಂದು ಸವಾಲ್ ಹಾಕಿದರು. ಎಸ್‍ಐಟಿ ಯ ಈ ನಡೆ ಹಿಂದೂಗಳಿಗೆ ಮಾಡಿದ ಅವಮಾನವಾಗಿದ್ದು ತಕ್ಷಣ ಚಿತ್ರಗಳನ್ನು ಹಿಂಪಡೆದು, ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

    ತಮ್ಮ ರಾಜಕೀಯ ಪ್ರವೇಶದ ಕುರಿತು ಮಾತನಾಡಿದ ಅವರು, ಆರ್‍ಎಸ್‍ಎಸ್ ಹಾಗೂ ಬಿಜೆಪಿ ಮುಖಂಡರಿಗೆ ಐದು ತಿಂಗಳ ಹಿಂದೆಯೇ ಪತ್ರವನ್ನು ಬರೆದಿದ್ದೇನೆ, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಿಜೆಪಿಯವರು ನನಗೆ ಟಿಕೆಟ್ ಕೊಟ್ಟರು, ಕೊಡದಿದ್ದರು ರಾಜಕೀಯ ಪ್ರವೇಶ ಮಾಡುವುದು ಖಚಿತ. ಶ್ರೀರಾಮ ಸೇನೆಯ ಸಂಘಟನೆ ಬಲಪಡಿಸುವುದು ಹಾಗೂ ಹಿಂದೂತ್ವಕ್ಕೆ ಬಲ ತುಂಬುದು ನನ್ನ ಉದ್ದೇಶ ಎಂದು ಸ್ಪಷ್ಟಪಡಿಸಿದರು.

    ಕಲಬುರ್ಗಿ ಆಂದೋಲ್ ಗ್ರಾಮದಲ್ಲಿ ನಡೆದ ಗಲಾಟೆ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತ ಬಾಬು ಲಾಖನೆ ಮೇಲೆ ಹಲ್ಲೆಯಾಗಿದೆ. ಇದರಲ್ಲಿ ಅನಾವಶ್ಯಕವಾಗಿ ಸಿದ್ದಲಿಂಗ ಸ್ವಾಮೀಜಿ ಅವರ ಹೆಸರು ತಳಕು ಹಾಕಲಾಗುತ್ತಿದೆ. ಒಂದು ವೇಳೆ ಸಿದ್ದಲಿಂಗ ಸ್ವಾಮೀಜಿ ಅವರ ಮೇಲೆ ಕೇಸ್ ದಾಖಲಿಸಿ, ಬಂಧಿಸಿದರೆ ಅಕ್ಟೋಬರ್ 23ರಂದು ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುತ್ತೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

  • ಪ್ರಮೋದ್ ಮುತಾಲಿಕ್ ಜೊತೆ ಫೋಟೋ ಅಪ್ಲೋಡ್ ಮಾಡಿದ್ದಕ್ಕೆ ಮುಸ್ಲಿಂ ಕಲಾವಿದನಿಗೆ ಜೀವ ಬೆದರಿಕೆ

    ಪ್ರಮೋದ್ ಮುತಾಲಿಕ್ ಜೊತೆ ಫೋಟೋ ಅಪ್ಲೋಡ್ ಮಾಡಿದ್ದಕ್ಕೆ ಮುಸ್ಲಿಂ ಕಲಾವಿದನಿಗೆ ಜೀವ ಬೆದರಿಕೆ

    ಶಿವಮೊಗ್ಗ: ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ ಜೊತೆ ಫೋಟೊ ತೆಗಿಸಿಕೊಂಡ ಕಾರಣಕ್ಕೆ ಸಂಗೀತ ಕಲಾವಿದರರೊಬ್ಬರಿಗೆ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ಸಂಗೀತ ನಿರ್ದೇಶಕ, ತಬಲಾ ವಾದಕ ರಶೀದ್ ಖಾನ್ ಎಂಬವರಿಗೆ ಜೀವಬೆದರಿಕೆ ಹಾಕಲಾಗಿದೆ. ಇತ್ತೀಚಿಗಷ್ಟೇ ರಶೀದ್ ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಇವರು ತಬಲಾ ವಾದಕರಾಗಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಮೋದ್ ಮುತಾಲಿಕ್ ಇವರ ತಬಲಾ ವಾದನಕ್ಕೆ ಮೆಚ್ಚಿ, ಪುರಸ್ಕರಿಸಿದ್ದರು. ಈ ಫೋಟೋವನ್ನು ರಶೀದ್ ಫೇಸ್ ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ರು.

    ಇದನ್ನೂ ಓದಿ: ಬುರ್ಖಾ ತೊಟ್ಟು ಭಕ್ತಿ ಗೀತೆ ಗುನುಗಿದ್ದು ಮಹಾಪ್ರಮಾದನಾ..?

    ಫೇಸ್‍ಬುಕ್‍ನಲ್ಲಿ ಫೋಟೋ ಅಪ್ಲೋಡ್ ಮಾಡಿದಾಗಿನಿಂದ ಭಾರೀ ಟೀಕೆಗಳು ವ್ಯಕ್ತವಾಗಿವೆ. ಇದ್ರಿಂದಾಗಿ ಕೊನೆಗೆ ರಶೀದ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಆದರೆ ಮಂಗಳವಾರ ಪುರದಾಳು ರಸ್ತೆಯಲ್ಲಿ ಬೈಕ್‍ನಲ್ಲಿ ಹೋಗುವಾಗ ಇವರನ್ನು ಅಡ್ಡಗಟ್ಟಿ, ಜೀವ ಬೆದರಿಕೆ ಹಾಕಿದ್ದಾರೆ. ಬೈಕ್‍ಗಳಲ್ಲಿ ಹೆಲ್ಮೆಟ್ ಹಾಕಿಕೊಂಡು ಬಂದ ನಾಲ್ವರು ಅವಾಚ್ಯ ಶಬ್ದಗಳಿಂದ ರಶೀದ್ ಅವರನ್ನು ನಿಂದಿಸಿದ್ದಾರೆ. ಭಯಗೊಂಡ ರಶೀದ್ ತಕ್ಷಣ ಅಲ್ಲಿಂದ ಹಿಂತಿರುಗಿದ್ದಾರೆ.

    ಈ ಬಗ್ಗೆ ರಶೀದ್ ತುಂಗಾ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಗದಗಿನ ಪುಟ್ಟರಾಜ ಗವಾಯಿಗಳ ಪರಂಪರೆಯಲ್ಲಿ ಸಂಗೀತ ಕಲಿತಿರುವ ರಶೀದ್ ಶಿವಮೊಗ್ಗದ ಸಾಂಸ್ಕೃತಿಕ ಲೋಕದಲ್ಲಿ ಅರಳುತ್ತಿರುವ ಪ್ರತಿಭೆ. ಶಾಸ್ತ್ರೀಯ ಸಂಗೀತದ ಜೊತೆ ಅಧುನಿಕ ಸಂಗೀತವನ್ನೂ ಅಭ್ಯಾಸ ಮಾಡಿರುವ ರಶೀದ್ ಸಿನಿಮಾಗಳಿಗೂ ಸಂಗೀತ ನೀಡಿದ್ದಾರೆ. ಇವರದ್ದೇ ಆದಾ ಅಲ್ಬಂ ಡ್ರೀಮ್‍ಡಾಲ್ ಹೊರಬರಲು ಸಿದ್ಧವಾಗುತ್ತಿದೆ.

    ಇದನ್ನೂ ಓದಿ: ಸಹಿಷ್ಣುತೆಯ ಪಾಠ ಹೇಳೋ ಲದ್ದಿಜೀವಿಗಳು ಈಗ ಎಲ್ಲಿದ್ದಾರೆ- ಸುಹಾನ ವಿಚಾರದಲ್ಲಿ ಪ್ರತಾಪ್ ಸಿಂಹ ಪ್ರಶ್ನೆ

     

    https://www.youtube.com/watch?v=BCfd2FYaISA

  • ಮುತಾಲಿಕ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲ್ಲ: ಪೇಜಾವರ ಶ್ರೀ

    ಮುತಾಲಿಕ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲ್ಲ: ಪೇಜಾವರ ಶ್ರೀ

    ಉಡುಪಿ: ವಿಶ್ವಹಿಂದೂ ಪರಿಷತ್ ಮತ್ತು ನನ್ನ ಸಂಬಂಧಕ್ಕೆ ಭಂಗವಿಲ್ಲ. ಸಂಘ ಪರಿವಾರದವರು ಸಂಪರ್ಕ ಮಾಡಿದ್ದಾರೆ. ಅವರಿಗೆ ಸಮಾಧಾನವೂ ಇಲ್ಲ, ವಿರೋಧವೂ ಇಲ್ಲ ಎಂದಿದ್ದಾರೆ. ಹಿಂದೂಗಳಲ್ಲೂ ಕೆಲವರು ಗೋಮಾಂಸ ಭಕ್ಷಣೆ ಮಾಡ್ತಾರೆ. ಈ ಬಗ್ಗೆ ಅರಿವಿದ್ದೇ ಹೇಳಿದ್ದೇನೆ. ಯಾರು ಮಾಡ್ತಾರೆ ಅಂತ ಹೇಳಲಾರೆ ಮತ್ತು ಮುತಾಲಿಕ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡೋದಿಲ್ಲ ಪೇಜಾವರ ಶ್ರೀಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್  

    ರಾಮ ಮಂದಿರ ವಿಚಾರದಲ್ಲಿ ನಡೆದ ಸಂಧಾನದಲ್ಲಿ ಮಂದಿರದೊಳಗೆ ವಾರಕ್ಕೊಮ್ಮೆ ನಮಾಜಿಗೆ ಅವಕಾಶ ನೀಡಲು ತೀರ್ಮಾನವಾಗಿತ್ತು. ಮಂದಿರದೊಳಗೆ ನಮಾಜು ಮಾಡಬಹುದು ಅಂತಾದ್ರೆ, ಕೃಷ್ಣಮಠದ ಹೊರ ಆವರಣದಲ್ಲಿ ನಮಾಜಿಗೆ ಅವಕಾಶ ಕೊಟ್ಟದ್ದು ತಪ್ಪಾಗುತ್ತಾ? ಎಂದು ಪೇಜಾವರ ಸ್ವಾಮಿಗಳು ಪ್ರಶ್ನಿಸಿದ್ದಾರೆ.

    ಇದನ್ನೂ ಒದಿ: ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್  

    ದಶಕಗಳ ಹಿಂದೆ ಎರಡು ಧರ್ಮೀಯರ ನಡುವೆ ಈ ಸಂಧಾನ ನಡೆದಿತ್ತು. ಆಗ ವಿ.ಪಿ.ಸಿಂಗ್ ಪ್ರಧಾನಿಯಾಗಿದ್ರು, ನನಗೂ ಆಹ್ವಾನವಿತ್ತು. ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಂರು ಒಪ್ಪಿದ್ರು, ಆದರೆ ವಾರದಲ್ಲಿ ಒಂದು ದಿನ ಮಂದಿರದೊಳಗೆ ನಮಾಜಿಗೆ ಅವಕಾಶ ಕೋರಿದ್ರು, ಮುಸ್ಲಿಂರ ಪ್ರಾರ್ಥನೆ ಮಾಡಿದ್ರೆ ಹಿಂದೂ ನಿಂದನೆಯಾಗುತ್ತಾ ಎಂದು ಪೇಜಾವರ್ ಶ್ರೀಗಳು ಹೇಳಿದ್ದಾರೆ.

    https://www.youtube.com/watch?v=-E0LxTH_kIM

  • ತೆಲಂಗಾಣ ಸರ್ಕಾರ ಪಾಕಿಸ್ತಾನ ಇದ್ದಂತೆ: ಪ್ರಮೋದ್ ಮುತಾಲಿಕ್

    ತೆಲಂಗಾಣ ಸರ್ಕಾರ ಪಾಕಿಸ್ತಾನ ಇದ್ದಂತೆ: ಪ್ರಮೋದ್ ಮುತಾಲಿಕ್

    ಧಾರವಾಡ: ತೆಲಂಗಾಣ ಸರ್ಕಾರ ಅಲ್ಲಿಯ ಮುಸ್ಲಿಮರ ಓಲೈಕೆಗಾಗಿ ಶೇ.12ರಷ್ಟು ಮೀಸಲಾತಿ ನೀಡಿದೆ. ತೆಲಂಗಾಣ ಸರ್ಕಾರ ಒಂದು ರೀತಿ ಪಾಕಿಸ್ತಾನ ಇದ್ದಂತೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಈ ದೇಶದ ಮುಸ್ಲಿಮರು ದೇಶದಲ್ಲಿ ಸುರಕ್ಷಿತವಾಗಿ ಇದ್ದರೆ ಎಂದರೆ ಅದಕ್ಕೆ ನಮ್ಮ ಸೈನಿಕರು ಕಾರಣ. ಆದರೆ ಕಾಶ್ಮೀರಿ ಮುಸ್ಲಿಮರು ನಮ್ಮ ಸೈನಿಕರ ಮೇಲೆ ಕಲ್ಲು ಎಸೆಯುತಿದ್ದಾರೆ. ಇದಕ್ಕೆ ಇಲ್ಲಿಯ ಮುಸ್ಲಿಮರು ಬಾಯಿ ಬಿಡಬೇಕು. ಇಲ್ಲಿಯ ಮುಸ್ಲಿಮರು ಈ ಬಗ್ಗೆ ಫತ್ವಾ ಹೊರಡಿಸಲಿ, ನಿಮ್ಮ ಮೌನ ಸರಿಯಲ್ಲ, ನೀವು ಸುಮ್ಮನಿದ್ದರೆ ನೀವು ಅದಕ್ಕೆ ಸಮ್ಮತಿ ನೀಡಿದ ಹಾಗೆ ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದ್ರು.

    ಇಲ್ಲಿಯ ಮುಸ್ಲಿಮರು ಬಾಯಿ ಬಿಡದಿದ್ದರೆ ಹಿಂದೂ ಸಂಘಟನೆಗಳು ಆ ಕಲ್ಲುಗಳನ್ನ ಈ ಕಡೆ ತಿರುಗಿಸಬೇಕಾಗುತ್ತೆ ಎಂದು ವಿವಾದಾತ್ಮಕ ಹೇಳಿಕೆಯನ್ನು ಮುತಾಲಿಕ್ ನೀಡಿದರು.

    ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ತೆಲಂಗಾಣ ಸರ್ಕಾರದ ಬಗ್ಗೆ ಹೇಳಿಕೆ ನೀಡಿದ್ದು ಎಲ್ಲೊ ಒಂದು ಕಡೆ ನಿಜವಾಗಿರಬೇಕು. ಇದು ಕೇಂದ್ರ ಸರ್ಕಾರ ತನಿಖೆ ನಡೆಸಬೇಕು. ಜಗತ್ತಿನಲ್ಲಿ ಸಿಗದೇ ಇರುವ ಸವಲತ್ತು ತೆಲಂಗಾಣ ಸರ್ಕಾರ ಮುಸ್ಲಿಮರಿಗೆ ನೀಡುತ್ತಿದೆ. ಇದೇ ವೇಳೆ ದೇಶದ ಸೈನಿಕರ ಶಿರಚ್ಛೇದ ಮಾಡಿದ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಮುತಾಲಿಕ್ ಆಗ್ರಹಿಸಿದರು.