Tag: Pramod Mutalik

  • ಯುಗಾದಿ, ರಾಮನವಮಿ ಹಲಾಲ್ ಮುಕ್ತ ಆಗಲಿ: ಪ್ರಮೋದ್ ಮುತಾಲಿಕ್

    ಯುಗಾದಿ, ರಾಮನವಮಿ ಹಲಾಲ್ ಮುಕ್ತ ಆಗಲಿ: ಪ್ರಮೋದ್ ಮುತಾಲಿಕ್

    ಧಾರವಾಡ: ನಾಡಿನ ಜನತೆ ಈಗ ಯುಗಾದಿ ಹಬ್ಬದ (Ugadi Festival) ಸಂಭ್ರಮದಲ್ಲಿದ್ದಾರೆ. ಮುಂದೆ ಶ್ರೀರಾಮ ನವಮಿ ಕೂಡ ಬರಲಿದೆ. ಈ ಎರಡೂ ಹಬ್ಬಗಳು ಹಲಾಲ್ ಮುಕ್ತವಾಗಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ಹೇಳಿದರು.

    ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಹಲಾಲ್ ಎಂಬುದು ಇಸ್ಲಾಂಗೆ ಸಂಬಂಧಿಸಿದ್ದು. ಅದು ಹಿಂದೂಗಳಿಗೆ ಸಂಬಂಧಿಸಿದ್ದಲ್ಲ. ಅವರು ಹಲಾಲ್ ಮಾಡಿಕೊಂಡರೆ ಅದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಅದನ್ನು ಹಿಂದೂಗಳ ಮೇಲೆ ಹೇರುವುದನ್ನು ನಾವು ಒಪ್ಪುವುದಿಲ್ಲ. ಇಸ್ಲಾಂನವರು ಹಲಾಲ್ ಮೂಲಕ ವ್ಯಾಪಾರ ಮಾಡುತ್ತಾರೆ. ಕುಂಕುಮ, ಅರಿಶಿನ, ತೆಂಗಿನಕಾಯಿ, ತಾಳಿ ಇವೆಲ್ಲವನ್ನು ಹಲಾಲ್ ಮೂಲಕ ಮಾರಾಟ ಮಾಡುತ್ತಾರೆ. ಅಂತವರ ಬಳಿ ಹಿಂದೂಗಳು ವ್ಯಾಪಾರ ಮಾಡಬಾರದು ಎಂದರು. ಇದನ್ನೂ ಓದಿ: ಮಳೆಗೆ ವಿದ್ಯುತ್ ಲೈನ್ ಮೇಲೆ ಬಿದ್ದ ಮರ – ಮೊಸಳೆಗಳಿರುವ ನದಿಯಲ್ಲಿ 2 ದಿನ ಕಾರ್ಯಾಚರಣೆ ನಡೆಸಿ ವಿದ್ಯುತ್ ಪೂರೈಸಿದ ಹೆಸ್ಕಾಂ ಸಿಬ್ಬಂದಿ

    ಹಿಂದೂಗಳು ಶುದ್ಧ ಮತ್ತು ಪವಿತ್ರವಾಗಿರುವ ವಸ್ತುಗಳನ್ನು ಖರೀದಿ ಮಾಡಿ ದೇವರಿಗೆ ಸಮರ್ಪಿಸಬೇಕು. ಗೋ ಹಂತಕರ, ಭಕ್ಷಕರ ಜೊತೆ ವ್ಯಾಪಾರ ಮಾಡಿ ಯುಗಾದಿಯನ್ನು ಹಲಾಲ್ ಮಾಡಬಾರದು. ಮುಸ್ಲಿಂ ವ್ಯಾಪಾರಿಗಳು ವಸ್ತುಗಳ ಮೇಲೆ ಉಗುಳಿ ಹೇಸಿಗೆ ಮಾಡುತ್ತಾರೆ. ಅಂತವರ ಬಳಿ ನಾವು ಯಾಕೆ ವ್ಯಾಪಾರ ಮಾಡಬೇಕು? ಅಂತದನ್ನು ತೆಗೆದುಕೊಂಡು ನೈವೇದ್ಯ ಮಾಡಿ, ಪೂಜೆ ಮಾಡುವುದು ಸರಿಯಲ್ಲ. ಇದು ಶಾಸ್ತ್ರದ ವಿರುದ್ಧವಾದದ್ದು. ನಮ್ಮ ದೇವರನ್ನು ನಂಬದೇ ಇರುವವರ ಜೊತೆ ನಾವು ವ್ಯಾಪಾರ ಮಾಡಬಾರದು ಎಂದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ದು ವಿಜಯೇಂದ್ರ & ಡಿಕೆಶಿ, ಹನಿಟ್ರ್ಯಾಪ್‌ ಕೇಸ್‌ನಲ್ಲೂ ಇದೇ ಟೀಂ ಇದೆ – ಯತ್ನಾಳ್‌ ಬಾಂಬ್‌

    ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರ ಉಚ್ಚಾಟನೆಯ ಕುರಿತು ಪ್ರತಿಕ್ರಿಯಿಸಿ, ಉಚ್ಚಾಟನೆ ಪ್ರಕ್ರಿಯೆಯನ್ನು ಬಿಜೆಪಿ ವರಿಷ್ಠರು ಮರು ಪರಿಶೀಲಿಸಬೇಕು. ಇದು ಪಕ್ಷದ ಆಂತರಿಕ ವಿಚಾರ. ಇಡೀ ದೇಶದಲ್ಲಿ ಇರುವ ಬಿಜೆಪಿಯು ಹಿಂದುತ್ವದ ಪಕ್ಷ. ಆದರೆ, ಸದ್ಯ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆ ದುರದೃಷ್ಟಕರ ಎಂದರು. ಇದನ್ನೂ ಓದಿ: ದೆಹಲಿಯಲ್ಲಿ ತಾಪಮಾನ ಇಳಿಕೆ – 2 ದಿನದಲ್ಲಿ 7 ಡಿಗ್ರಿ ಇಳಿಕೆ

    ಯತ್ನಾಳ್ ಅವರು ಹಿಂದುತ್ವದ ಗಟ್ಟಿ ಧ್ವನಿ. ಅವರ ಉಚ್ಚಾಟನೆಯಿಂದ ರಾಜ್ಯದಲ್ಲಿ ಎಲ್ಲೋ ಒಂದು ಕಡೆ ನೋವು, ವೇದನೆ ಇದೆ. ನಮ್ಮ ಸಂಘಟನೆ ಕೂಡ ಕೇಂದ್ರದ ಪದಾಧಿಕಾರಿಗಳಿಗೆ ಈ ಕುರಿತು ಆಗ್ರಹ ಮಾಡುತ್ತೇವೆ. ಹಿಂದುತ್ವದ ವಿಚಾರ ಬೆಳೆಸಲು ಅವಕಾಶ ಮಾಡಿ ಕೊಡಬೇಕು. ಈಗ ಹಿಂದುತ್ವವನ್ನು ತಮ್ಮ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು. ಇದನ್ನೂ ಓದಿ: ತುಂಬಾ ಬೇಗ ಬ್ಯಾಟಿಂಗ್‌ಗೆ ಬಂದ್ರಿ – ಆರ್‌ಸಿಬಿ ವಿರುದ್ಧ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಧೋನಿ ಕಾಲೆಳೆದ ಸೆಹ್ವಾಗ್

    ಯತ್ನಾಳ್ ನಿಜವಾದ ಹಿಂದುತ್ವವಾದಿ. ಅವರು ಹೊಸ ಪಕ್ಷ ಮಾಡುವಾಗ ನಮಗೆ ಆಹ್ವಾನ ನೀಡಿದರೆ ಅದನ್ನು ನಮ್ಮ ಸಂಘಟನೆ ಪದಾಧಿಕಾರಿಗಳ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ, ಅದಕ್ಕಿಂತ ಪೂರ್ವದಲ್ಲಿ ಯತ್ನಾಳ್ ಅವರ ಉಚ್ಚಾಟನೆಯನ್ನು ಬಿಜೆಪಿ ಮರು ಪರಿಶೀಲಿಸಬೇಕು. ಅವರನ್ನು ಪಕ್ಷದೊಳಗೆ ಕರೆದುಕೊಂಡು ಬಂದು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಪಕ್ಷದಲ್ಲಿ ತಪ್ಪು ಒಪ್ಪು ಏನೆಂದು ವರಿಷ್ಠರೇ ನಿರ್ಧಾರ ಮಾಡಲಿ. ಬಿಜೆಪಿಯನ್ನು ನಾವು ಹಿಂದುತ್ವದ ಪಕ್ಷ ಎನ್ನುತ್ತಿದ್ದೇವೆ. ಹಿಂದುತ್ವದ ವಿಚಾರಧಾರೆ ಹಾಳಾಗದಂತೆ ನೋಡಿಕೊಳ್ಳಲು ಯತ್ನಾಳ್ ಅವರನ್ನು ಪಕ್ಷದ ಒಳಗಡೆ ಕರೆದುಕೊಂಡು ಬರಬೇಕು. ಈ ಸಂಬAಧ ಕೇಂದ್ರಕ್ಕೆ ನಾವು ಮನವಿ ಮಾಡಿಕೊಳ್ಳುತ್ತೇವೆ ಎಂದರು.

  • ರಾತ್ರೋರಾತ್ರಿ ಸ್ಮಶಾನ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ – ಸ್ಥಳೀಯರಿಂದ ಆಕ್ರೋಶ

    ರಾತ್ರೋರಾತ್ರಿ ಸ್ಮಶಾನ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ – ಸ್ಥಳೀಯರಿಂದ ಆಕ್ರೋಶ

    ಹುಬ್ಬಳ್ಳಿ: ರಾತ್ರೋರಾತ್ರಿ ಸ್ಮಶಾನದ ಕಾಂಪೌಂಡ್ ಒಡೆದು ಇಂದಿರಾ ಕ್ಯಾಂಟೀನ್ (Indira Canteen) ನಿರ್ಮಾಣ ಮಾಡುತ್ತಿದ್ದು, ಸರ್ಕಾರದ ನಡೆಗೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಜಿಲ್ಲೆಯ ಮಂಟೂರು ರಸ್ತೆಯ ಸತ್ಯಹರಿಶ್ಚಂದ್ರ ಕಾಲೋನಿಯಲ್ಲಿ (Satya Harishchandra) ನಡೆದಿದೆ.

    ಇಂದಿರಾ ಕ್ಯಾಂಟೀನ್ ಬಡವರ, ಶ್ರಮಿಕರ, ಕಾರ್ಮಿಕರ ಹೊಟ್ಟೆ ತುಂಬಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಆರಂಭಿಸಿರುವ ಯೋಜನೆಯಾಗಿದೆ. ಯೋಜನೆ ಆರಂಭದಿಂದಲೂ ಈ ಯೋಜನೆ ಒಂದಿಲ್ಲಾ ಒಂದು ವಿವಾದಕ್ಕೆ ಕಾರಣವಾಗಿದೆ. ಈ ಕ್ಯಾಂಟೀನ್ ದಲಿತರ ಮತ್ತು ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ವಾಣಿಜ್ಯ ನಗರಿಯಲ್ಲಿ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿಗೆ ಭಾರಿ ವಿರೋಧ ವ್ಯಕ್ತವಾಗಿದೆ.ಇದನ್ನೂ ಓದಿ: ನಾಗಮಂಗಲ ಗಲಭೆ; ಕಿಡಿಗೇಡಿಗಳು ಅಂಗಡಿಗೆ ಪೆಟ್ರೋಲ್ ಬಾಂಬ್ ಎಸೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

     ಒಂದು ಕಡೆ ಇಂದಿರಾ ಕ್ಯಾಂಟೀನ್ ಕಾಮಗಾರಿ, ಇನ್ನೊಂದು ಕಡೆ ಹಿಂದೂಪರ ಸಂಘಗಳ ತೀವ್ರ ಆಕ್ರೋಶ. ಹುಬ್ಬಳ್ಳಿ ಮಂಟೂರು ರಸ್ತೆಯಲ್ಲಿ ಸತ್ಯಹರಿಶ್ಚಂದ್ರ ಕಾಲೋನಿಯ ಪಕ್ಕದಲ್ಲಿ ಸರ್ವೆ ನಂಬರ್ 212ರಲ್ಲಿ ಸುಮಾರು ಏಂಟು ಎಕರೆಯಲ್ಲಿ ಹಿಂದೂಗಳ ರುದ್ರಭೂಮಿಯಿದೆ. ಸ್ಮಶಾನದ ಕಾಂಪೌಂಡ್ ಗೋಡೆ ಒಡೆದು ರಾತ್ರೋರಾತ್ರಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿದೆ.

    ಕಾಮಗಾರಿ ಸ್ಥಳಕ್ಕೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ (Pramod Mutalik) ಭೇಟಿ ನೀಡಿ ಮಾತನಾಡಿ, ಅಬ್ಬಯ್ಯ ಅವರು ದಲಿತರ ವೋಟ್ ಮೇಲೆ ಗೆದ್ದಿದ್ದಾರೆ. ಆದರೆ ಈಗ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇವತ್ತು ಇಂದಿರಾ ಕ್ಯಾಂಟೀನ್, ನಾಳೆ ಅಬ್ಬಯ್ಯ ಕ್ಯಾಂಟೀನ್ ಕಟ್ಟುತ್ತಾರೆ. ಹಿಂದೂ ರುದ್ರಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ಬೇಡ. ಕೂಡಲೇ ಇಂದಿರಾ ಕ್ಯಾಂಟೀನ್ ಕಟ್ಟಡ ಸ್ಥಳಾಂತರ ಮಾಡಿ. ಇಲ್ಲದಿದ್ದರೆ ಉಗ್ರ ಹೋರಾಟ ಮೂಲಕ ನಾವೇ ತೆರವು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಸತ್ಯಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ ಮತ್ತು ಹೋರಾಟ ಸಮಿತಿ ಈ ಬಗ್ಗೆ ಸಾಕಷ್ಟು ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ತಮ್ಮ ಪ್ರತಿಷ್ಠೆಗಾಗಿ ರುದ್ರಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿದ್ದು, ಅಧಿಕಾರಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗಿದೆ. ಈಗ ಈ ಹೋರಾಟಕ್ಕೆ ಹಿಂದೂಪರ ಸಂಘಟನೆಗಳು ಸಹ ಕೈ ಜೋಡಿಸಿದ್ದು, ರುದ್ರಭೂಮಿ ಹೋರಾಟ ತೀವ್ರತೆ ಪಡೆದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ನಮ್ಮ ಪಾರ್ಟಿ, ನಮ್ಮ ಲೀಡರ್, ನನ್ನಿಷ್ಟ: ವಿದೇಶದಲ್ಲಿ ರಾಹುಲ್ ಗಾಂಧಿ ಭೇಟಿ ಬಗ್ಗೆ ಡಿಸಿಎಂ ಪ್ರತಿಕ್ರಿಯೆ

  • ಮುಸ್ಲಿಂ ಮುಖಂಡರು ಅವರ ಹುಡುಗರಿಗೆ ಬುದ್ಧಿ ಹೇಳಬೇಕು: ಮುತಾಲಿಕ್

    ಮುಸ್ಲಿಂ ಮುಖಂಡರು ಅವರ ಹುಡುಗರಿಗೆ ಬುದ್ಧಿ ಹೇಳಬೇಕು: ಮುತಾಲಿಕ್

    – ಮೊಬೈಲ್ ಸೀಜ್ ಆದ ರಾತ್ರಿ ಫೋಟೋ ವೈರಲ್

    ಹುಬ್ಬಳ್ಳಿ: ಮುಸಲ್ಮಾನ ಮುಖಂಡರು ಅವರ ಹುಡುಗರಿಗೆ ಮೊದಲು ಬುದ್ಧಿ ಹೇಳಬೇಕು. ಅಪರಾಧ ಕೃತ್ಯಗಳನ್ನು ಮಾಡಿದರೆ ನಿಮ್ಮ ಕುಟುಂಬ, ವ್ಯಾಪಾರ, ವಹಿವಾಟಿಗೆ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ (Neha) ಅವರ ಮನೆಗೆ ಭೇಟಿ ನೀಡಿ, ಪೋಷಕರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಲವ್ ಜಿಹಾದ್ ಷಡ್ಯಂತ್ರದ ಸಮಗ್ರ ತನಿಖೆಯಾಗಬೇಕು. ಈ ಮಾನಸಿಕತೆ ಎಲ್ಲಿಂದ, ಯಾರಿಂದ ಬರುತ್ತಿದೆ? ಇಂತಹ ಕೃತ್ಯಗಳು ಇಲ್ಲಿಗೆ ಕೊನೆಯಾಗಬೇಕು ಎಂದಿದ್ದಾರೆ. ಇದನ್ನೂ ಓದಿ: 9 ಅಲ್ಲ 14 ಬಾರಿ ನೇಹಾಳನ್ನು ಇರಿದು ಕೊಂದ ಫಯಾಜ್- ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಏನಿದೆ?

    ಆರೋಪಿಯ ಮೊಬೈಲ್ ಸೀಜ್ ಆದ ರಾತ್ರಿಯೇ ಅದರಲ್ಲಿನ ಫೋಟೋ ಹೊರಗೆ ಬಂದಿದೆ. ಸರ್ಕಾರಕ್ಕೆ ಈ ಪ್ರಕರಣದ ದಿಕ್ಕು ತಪ್ಪಿಸಬೇಕಿತ್ತು. ಇಬ್ಬರ ನಡುವೆ ಲವ್ ಇತ್ತು ಎಂದು ಬಿಂಬಿಸಿದವರ ಬಂಧನವಾಗಬೇಕು. ಮುಸಲ್ಮಾನರು, ಆತನ ಕುಟುಂಬ ಬಹಿಷ್ಕರಿಸುವ ಫತ್ವಾ ಹೊರಡಿಸುತ್ತಿಲ್ಲ. ಕೇವಲ ಗಲ್ಲಿಗೇರಿಸಿ ಎನ್ನುವ ನಾಟಕ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

    ಈ ಕೊಲೆಯ ಹಿಂದೆ ಹಲವರಿದ್ದಾರೆ ಎಂದು ನೇಹಾ ತಂದೆ ಹೇಳಿದ್ದಾರೆ. ಅಧಿಕಾರಿಗಳು ಇದನ್ನು ಸರಿಯಾಗಿ ತನಿಖೆ ಮಾಡಬೇಕು. ಕರ್ನಾಟಕದ ಪೊಲೀಸರು ಸಮರ್ಥರಾಗಿದ್ದಾರೆ. ರಾಜಕೀಯ ಒತ್ತಡ, ವೋಟ್ ಬ್ಯಾಂಕ್, ಮುಸಲ್ಮಾನರ ಓಲೈಕೆಗಾಗಿ ಈ ತನಿಖೆ ದಾರಿ ತಪ್ಪಬಾರದು. ಈ ಪ್ರಕರಣ ತನಿಖೆಯನ್ನು ಸಿಐಡಿಗೆ ವಹಿಸಿರುವುದು, ವಿಶೇಷ ನ್ಯಾಯಾಲಯ ಸ್ಥಾಪನೆ ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ನೇಹಾ ಹಿರೇಮಠ ತಂದೆಯ ಬಳಿ ಕ್ಷಮೆಯಾಚಿಸಿದ ಸಿಎಂ!

  • ಸ್ವಾತಂತ್ರ್ಯ ಬಂದ ಮೇಲೂ ಗಣೇಶೋತ್ಸವಕ್ಕೆ ಪರದಾಡುತ್ತಿದ್ದೇವೆ: ಮುತಾಲಿಕ್‌

    ಸ್ವಾತಂತ್ರ್ಯ ಬಂದ ಮೇಲೂ ಗಣೇಶೋತ್ಸವಕ್ಕೆ ಪರದಾಡುತ್ತಿದ್ದೇವೆ: ಮುತಾಲಿಕ್‌

    ಧಾರವಾಡ: ಬ್ರಿಟಿಷರು ಇದ್ದಾಗಲೇ ಗಣೇಶೋತ್ಸವಕ್ಕೆ ಅಡ್ಡಿ ಇರಲಿಲ್ಲ. ಸ್ವಾತಂತ್ರ್ಯ ಬಂದ ನಂತರ ಗಣೇಶೋತ್ಸವ ಆಚರಣೆಗೆ ಪರದಾಡುವಂತಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಬೇಸರ ವ್ಯಕ್ತಪಡಿಸಿದ್ದಾರೆ

    ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಆದೇಶಕ್ಕೆ ಪ್ರತಿಕ್ರಿಯಿಸಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಸುಪ್ರೀಂ ಕೋರ್ಟ್‌ ಆದೇಶವನ್ನು ನಾವೆಲ್ಲರೂ ಪಾಲನೆ ಮಾಡಲೇಬೇಕು. ಆದರೆ ಸಮಸ್ಯೆ ಹಾಗೆಯೇ ಉಳಿಯಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಥಾಸ್ಥಿತಿ ಕಾಪಾಡಿ – ಈದ್ಗಾ ಮೈದಾನದಲ್ಲಿ ಗಣೋಶೋತ್ಸವ ಆಚರಣೆ ಇಲ್ಲ

    ಸುಪ್ರೀಂ ಕೋರ್ಟ್‌ನಲ್ಲಿ ದಾರಿ ತಪ್ಪಿಸುವ ವಾದಗಳು ನಡೆದಿವೆ. ವಕ್ಫ್ ಬೋರ್ಡ್ ಪಾರ್ಟಿಯಾಗೇ ಇರಲಿಲ್ಲ. ಅದರೆ ಏಕಾಏಕಿ ವಕ್ಫ್ ಬೋರ್ಡ್ ಪ್ರವೇಶವಾಗಿದೆ. ವಕ್ಫ್ ಬೋರ್ಡ್ ಅಧ್ಯಕ್ಷ 3 ದಿನಗಳಿಂದ ದೆಹಲಿಗೆ ಹೋಗಿ ಕೂತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ಗಣೇಶನ ವಿರೋಧಿಗಳ ರೀತಿ ವರ್ತಿಸಬಾರದು ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಇರಾಕ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ – ಗುಂಡಿನ ದಾಳಿಗೆ 23 ಮಂದಿ ಸಾವು, 300 ಜನರಿಗೆ ಗಾಯ

    ಕಾಂಗ್ರೆಸ್ ಹಾಗೂ ವಕ್ಫ್ ಬೋರ್ಡಿನಿಂದ ಗಣೇಶೋತ್ಸವಕ್ಕೆ ಅಡ್ಡಿಯಾಗುತ್ತಿದೆ. ಸುಪ್ರೀಂ ಕೋರ್ಟ್ ಹೈಕೋರ್ಟ್‌ಗೆ ಹೋಗಿ ಅಂತ ಹೇಳಿರುವುದರಿಂದ ಸರ್ಕಾರವೇ ಹೈಕೋರ್ಟ್‌ ಮೂಲಕ ಗಣೇಶೋತ್ಸವ ಆಚರಣೆಗೆ ಅವಕಾಶ ಕೊಡಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬುರ್ಕಾ ಹಾಕ್ಕೊಂಡು ಓಡಾಡಿದ್ರೂ ಬಿಜೆಪಿಗೆ ಒಂದು ವೋಟು ಬರಲ್ಲ: ಮುತಾಲಿಕ್

    ಬುರ್ಕಾ ಹಾಕ್ಕೊಂಡು ಓಡಾಡಿದ್ರೂ ಬಿಜೆಪಿಗೆ ಒಂದು ವೋಟು ಬರಲ್ಲ: ಮುತಾಲಿಕ್

    ಮಂಡ್ಯ: ಬುರ್ಕಾ ಹಾಕ್ಕೊಂಡು ಹೋಡಾಡಿದ್ರೂ ಬಿಜೆಪಿಗೆ ಒಂದು ಮುಸ್ಲಿಂ ವೋಟು ಬರಲ್ಲ. ಹಾಗಿದ್ದರೂ ಯಾಕೆ ಮುಸ್ಲಿಮರ ಓಲೈಕೆ ಮಾಡಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಟೀಕಿಸಿದ್ದಾರೆ.

    ಮಂಡ್ಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯವರು ಮುಸ್ಲಿಮರಿಗೆ ಹೆದರುತ್ತಿದ್ದಾರೆ. ನಿಮಗೆ ಆಗದಿದ್ರೆ ಹೇಳಿ ನಾವು ಮೈಕ್ ಬಂದ್ ಮಾಡಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನೆಮ್ಮದಿ ಕೆಡಿಸಲು ಕೆಲ ಶಕ್ತಿಗಳು ರಾಜ್ಯದಲ್ಲಿ ಆಜಾನ್, ಸುಪ್ರಭಾತ ಸಂಘರ್ಷ ನಡೆಸಿವೆ: ಹೆಚ್‍ಡಿಡಿ

    Pramod Muthalik (3)

    ಇದೇ ವೇಳೆ `ಪಾಕಿಸ್ತಾನ ಜಿಂದಾಬಾದ್’ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಸ್ಲಾಂ ಅಜೆಂಡಾ ಅಲ್ಲಲ್ಲಿ ಹೊರಬರುತ್ತಿದೆ. ಮುಸ್ಲಿಮರ ಸೊಕ್ಕು, ನಿರ್ಲಕ್ಷ್ಯತನ, ದೇಶದ್ರೋಹಿತನ ಈ ರೀತಿ ಹೊರಬರುತ್ತಿದೆ. ಇವರ ವಿರುದ್ಧ ಸರಿಯಾದ ಕ್ರಮ ಆಗುತ್ತಿಲ್ಲ. ಹಾಗಾಗಿಯೇ ದೇಶದ್ರೋಹದ ಕ್ಯಾನ್ಸರ್ ಹರಡುತ್ತಿದೆ. ಈ ಕ್ಯಾನ್ಸರ್ ಬಿಜೆಪಿ ಸರ್ಕಾರ ಮಾತ್ರವಲ್ಲದೇ, ದೇಶವನ್ನೇ ನುಂಗಿಹಾಕುತ್ತದೆ. ಆದ್ದರಿಂದ ಅಂತಹವರನ್ನು ಒದ್ದು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಚಹಾ, ಸಿಗರೇಟ್ ತಂದುಕೊಡುವಂತಹ ರೌಡಿಗಳಿಂದ ನಾನೇನು ಕಲಿಯಬೇಕಿಲ್ಲ: ಯತ್ನಾಳ್

    Pramod Muthalik
    ಸಾಂದರ್ಭಿಕ ಚಿತ್ರ

    ಕವಲಂದೆ ಘಟನೆಗೆ ಸಂಬಂಧಿಸಿದಂತೆ ಮಾತನಾಡಿ, ಇಲ್ಲಿನ ಘಟನೆ ಹಿಂದೆ ಮೌಲ್ವಿ ಇದ್ದಾನೆ. ಅವನ ಪ್ರಚೋದನಕಾರಿ ಭಾಷಣದಿಂದಲೇ ಈ ರೀತಿ ಆಗಿದೆ. ತಪ್ಪಿತಸ್ಥರನ್ನು ಎನ್‌ಕೌಂಟರ್ ಮಾಡಿ ಬಿಸಾಕಿ. ಅವರನ್ನೇಕೆ ಸಾಕಿ ಸಲುಹುತ್ತೀರಾ? ಎಂದು ವಾಗ್ದಾಳಿ ನಡೆಸಿದ್ದಾರೆ.

    ಕವಲಂದೆ ಶೇ.60ರಷ್ಟು ಮುಸ್ಲಿಮರೇ ಇದ್ದಾರೆ. ಅಲ್ಲಿ ಯಾಕೆ ಪೊಲೀಸರು ವೀಡಿಯೋ ಮಾಡಿಲ್ಲ. ಹಿಂದೂಗಳ ಕಾರ್ಯಕ್ರಮ ಇದ್ದಾಗ ಕ್ಯಾಮೆರಾ ಹಿಡಿದು ಬರುತ್ತಾರೆ. ಅಲ್ಲಿ ಏಕೆ ವಿಡಿಯೋ ಮಾಡಲಿಲ್ಲ. ಇದು ಪೊಲೀಸರ ನಿರ್ಲಕ್ಷ್ಯ ಅಲ್ಲವೇ? ಈ ಕವಲಂದೆಯ ಮುಸ್ಲಿಮ ಮುಖಂಡ ವಿರುದ್ಧ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

  • ಈ ಸರ್ಕಾರಕ್ಕೆ ಗಟ್ಸ್, ತಾಕತ್ತು ಇಲ್ಲ- ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ

    ಈ ಸರ್ಕಾರಕ್ಕೆ ಗಟ್ಸ್, ತಾಕತ್ತು ಇಲ್ಲ- ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ

    ಮಂಡ್ಯ: ಗಲಭೆ ಅಶಾಂತಿ ಎಲ್ಲವೂ ಮಸೀದಿಯ ಮೈಕ್ ಮೂಲಕ ಆಗುತ್ತಿದೆ. ಆದ್ದರಿಂದಲೇ ಯೋಗಿ ಸರ್ಕಾರ 60 ಸಾವಿರ ಮೈಕ್ ತೆರವುಗೊಳಿಸಿದೆ. ಆದರೆ, ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹಸಚಿವ ಆರಗ ಜ್ಞಾನೇಂದ್ರ ಅವರು ಏಕೆ ಗಟ್ಸ್‌ ತೋರಿಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

    DVG PRAMODH MUTHALIK
    ಸಾಂದರ್ಭಿಕ ಚಿತ್ರ

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೈಕ್‌ಗಳನ್ನು ನಿಷೇಧಿಸುವ ಕೆಲಸ ನಮ್ಮ ರಾಜ್ಯದಲ್ಲಿ ಏಕೆ ಆ ಕೆಲಸ ಆಗುತ್ತಿಲ್ಲ? ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಆರಗ ಜ್ಞಾನೇಂದ್ರ ಅವರು ಏಕೆ ಯೋಗಿ ರೀತಿ ಗಡ್ಸ್ ತೋರಿಸುತ್ತಿಲ್ಲ? ಎಂದು ಪ್ರಶ್ನಿಸಿರುವ ಮುತಾಲಿಕ್, ಸುಪ್ರೀಂ ಆದೇಶ ಎಲ್ಲರಿಗೂ ಒಂದೇ. ನೀವು ಹೊಸ ನಿಯಮ ಮಾಡಬೇಕಿಲ್ಲ. ಸರ್ಕಾರ ಆದೇಶ ಪಾಲಿಸದೇ ಇರೋದ್ರಿಂದ ನಮ್ಮ ಹೋರಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ, ಅಮಿತ್ ಶಾ, ಬಿಜೆಪಿಯ MLAಗಳು ಜೈಲಿಗೆ ಏಕೆ ಹೋಗಿದ್ರು: ಕಟೀಲ್‍ಗೆ ಡಿಕೆಶಿ ಪ್ರಶ್ನೆ

    Pramod Muthalik, CM Basavaraj Bommai

    ನಾಳೆಯಿಂದಲೇ ಹಿಂದೂ ಸಂಘಟನೆಗಳಿಂದ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಪಠಣ ಹಾಗೂ ಭಕ್ತಿಗೀತೆಗಳ ಪ್ರಸಾರ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಮಂಡ್ಯದ ಕಲ್ಲಹಳ್ಳಿಯ ಹನುಮ ಮಂದಿರ ಸೇರಿದಂತೆ 3 ದೇವಾಲಯಗಳಲ್ಲಿ ಬೆಳಗ್ಗೆ 5 ಗಂಟೆಗೆ ಚಾಲನೆ ನೀಡಲಾಗುತ್ತಿದೆ. ನಾಳೆಯ ಅಭಿಯಾನ ತಡೆಯಲು ಬಂದ್ರೆ ಸಂಘರ್ಷ ಗ್ಯಾರೆಂಟಿ. ಪೊಲೀಸರು ನಮ್ಮ ಅಭಿಯಾನ ತಡೆಯುವುದಲ್ಲ, ಮಸೀದಿಗಳಲ್ಲಿ ಮೈಕ್ ಅಳವಡಿಸುವುದನ್ನು ತಡೆಯಲಿ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ವಿಶ್ವ ತಾಯಂದಿರ ದಿನಾಚರಣೆ – 600ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ

    ನಮ್ಮ ಸಂಘಟನೆ ಕಾರ್ಯಕರ್ತರು ರಾಜ್ಯದಾದ್ಯಂತ ದೇವಾಲಯಗಳಲ್ಲಿ ಅಭಿಯಾನ ನಡೆಸಲು ಮನವಿ ಮಾಡಿದ್ದಾರೆ. ನಾಳೆಯಿಂದ ಹನುಮಾನ್ ಚಾಲೀಸಾ, ಭಕ್ತಿಗೀತೆಗಳನ್ನು ಪ್ರಸಾರ ಮಾಡಲಾಗುತ್ತದೆ. ದೇವಾಲಯದ ಆಡಳಿತ ಮಂಡಳಿ ಹಾಗೂ ಅರ್ಚಕರು ಭಕ್ತಿಗೀತೆಗಳನ್ನು ಹಾಕ್ತಾರೆ. ಬೆಳಿಗ್ಗೆ 5 ಗಂಟೆಗೆ ಹಾಕಲು ಅಭಿಯಾನ ಆರಂಭಿಸಿದ್ದು, ದಿನಕ್ಕೆ 4 ಬಾರಿ ಮಸೀದಿ ಅಜಾನ್ ಮೊಳಗುವ ವೇಳೆ ಭಕ್ತಿಗೀತೆ ಹಾಕುವ ಬಗ್ಗೆ ನಿರ್ಧರಿಸುತ್ತೇವೆ ಎಂದಿದ್ದಾರೆ.

    Pramod Muthalik, CM Basavaraj Bommai

    ಬೆಳಗ್ಗೆ 5 ಗಂಟೆಗೆ ಮೈಕ್ ಹಾಕಲು ಅವಕಾಶ ಇಲ್ಲವೆಂದು ಸುಪ್ರೀಂಕೋರ್ಟ್ ಆದೇಶವೇ ಹೇಳಿದೆ. ಆದರೆ ಮಸೀದಿಗಳಲ್ಲಿ ಬೆಳಗ್ಗಿನ ಜಾವ ಆಜಾನ್ ಕೂಗುತ್ತಾರೆ. ನಾವು ಸರ್ಕಾರಕ್ಕೆ ಎಚ್ಚರಿಕೆ ನೀಡಲು ಆದೇಶ ಉಲ್ಲಂಘಿಸುತ್ತಿದ್ದೇವೆ. ನಾಳೆ ಬಳಿಕ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್

    ಸರ್ಕಾರದಿಂದಲೇ ಬೆದರಿಕೆ: ರಾಜ್ಯದ್ಯಾಂತ ಸುಮಾರು ಸಾವಿರ ದೇವಾಲಯಗಳನ್ನು ಸಂಪರ್ಕಿಸಿದ್ದೇವೆ. ದೇವಾಲಯದ ಅರ್ಚಕರು, ಟ್ರಸ್ಟ್ನವರು ಸಂತೋಷದಿAದಲೇ ಒಪ್ಪಿದ್ದಾರೆ. ಬೆಳಗ್ಗಿನ ಜಾವ ಭಕ್ತಿ ಗೀತೆ, ಹನುಮಾನ್ ಚಾಲೀಸಾ ಹಾಕಲು ಮುಂದಾಗಿದ್ದಾರೆ. ಎಲ್ಲರಲ್ಲೂ ಸಂತೋಷ ಇದೆ, ಆಕ್ರೋಶವೂ ಇದೆ. ಏಕೆಂದರೆ ಮುಸ್ಲಿಂರ ಉದ್ಧಟತನ ಹೆಚ್ಚಾಗಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ. ನಮ್ಮ ಅಭಿಯಾನವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ನಾವು ಸಂಪರ್ಕಿಸಿದ ದೇವಾಲಯಗಳಿಗೆ ಹೋಗಿ ಹೆದರಿಸುತ್ತಿದ್ದಾರೆ. ಈ ದಾದ ಗಿರಿ ನಡೆಯಲ್ಲ, ಮುಸ್ಲಿಮರ ಮೈಕಿಗೆ ನಿಮ್ಮ ದಾದಾಗಿರಿ ತೋರಿಸಿ ಎಂದು ಸವಾಲು ಹಾಕಿದ್ದಾರೆ.

  • ಶ್ರೀರಂಗಪಟ್ಟಣದಲ್ಲಿ ಹರ್ಷನ ಅಸ್ಥಿ ವಿಸರ್ಜಿಸಿದ ಪ್ರಮೋದ್ ಮುತಾಲಿಕ್, ಕಾಳಿ ಸ್ವಾಮಿ

    ಶ್ರೀರಂಗಪಟ್ಟಣದಲ್ಲಿ ಹರ್ಷನ ಅಸ್ಥಿ ವಿಸರ್ಜಿಸಿದ ಪ್ರಮೋದ್ ಮುತಾಲಿಕ್, ಕಾಳಿ ಸ್ವಾಮಿ

    ಮಂಡ್ಯ: ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಕಾಳಿ ಸ್ವಾಮಿ ಶಿವಮೊಗ್ಗದಲ್ಲಿ ಹತ್ಯೆಯಾಗಿದ್ದ ಬಜರಂಗದಳ ಕಾರ್ಯಕರ್ತ ಹರ್ಷನ ಅಸ್ಥಿಯನ್ನು ವಿಸರ್ಜನೆ ಮಾಡಿದರು.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಅಸ್ಥಿ ವಿಸರ್ಜನೆ ಕಾರ್ಯಕ್ರಮ ನಡೆದಿದೆ. ಕಾಳಿ ಸ್ವಾಮಿ ಮೃತ ಹರ್ಷನ ಅಸ್ಥಿಯನ್ನು ಸೇತುವೆ ಬಳಿಯಿಂದ ಪೂಜಾ ಸ್ಥಳಕ್ಕೆ ತಲೆ ಮೇಲೆ ಹೊತ್ತು ತಂದಿದ್ದಾರೆ. ನಂತರ ಮುತಾಲಿಕ್‍ರಿಂದ ಪಶ್ಚಿಮವಾಹಿನಿಯ ಅರಳಿ ಕಟ್ಟೆ ಬಳಿ ಅಸ್ಥಿ ವಿಸರ್ಜನಾ ಕಾರ್ಯ ಆರಂಭವಾಯಿತು.

    ಪ್ರಧಾನ ಅರ್ಚಕರಾದ ಸಂದೀಪ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆದಿದೆ. ಧುರುಮತಿ ನಾರಾಯಣ ಹೋಮ, ಅಸ್ಥಿ ಸಂಚಯನ, ವಿಸರ್ಜನೆ, ಪಂಚಾಮೃತ ಅಭಿಷೇಕ, ದಶದಾನ, ಪುಣ್ಯಃ ಸೇರಿದಂತೆ ಹಲವು ಪೂಜಾ ವಿಧಿ ವಿಧಾನ ನಡೆದಿದೆ. ಈ ವೇಳೆ ಕಾವೇರಿ ನದಿಗೆ ಅಸ್ಥಿ ವಿಸರ್ಜನೆ ಮೂಲಕ ಹರ್ಷ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸಿದರು. ಪೂಜೆ ಮುಗಿದ ಬಳಿಕ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದರು. ಇದನ್ನೂ ಓದಿ: ಮಣಪ್ಪುರಂ ಗೋಲ್ಡ್ ಲೋನ್ ಸಿಬ್ಬಂದಿಯ ಎಡವಟ್ಟು- ಯಾರದೋ ಬಂಗಾರ ಮತ್ಯಾರಿಗೋ

    ಹರ್ಷನ ಕೊಲೆ ಪ್ರಕರಣದಿಂದಾಗಿ ಶಿವಮೊಗ್ಗವೇ ಹೊತ್ತಿ ಉರಿದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 144 ಸೆಕ್ಷನ್‍ನ್ನು ಹಾಕಲಾಗಿತ್ತು. ಹರ್ಷನ ಶವ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಈಗಾಗಲೇ ಕೊಲೆಗೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸೂಕ್ತ ಕ್ರಮ : ಬೊಮ್ಮಾಯಿ

  • ಟಿಕೆಟ್ ಸಿಗದಿದ್ರೆ ಬಿಜೆಪಿ ಪರ ಪ್ರಚಾರ: ಪ್ರಮೋದ್ ಮುತಾಲಿಕ್

    ಟಿಕೆಟ್ ಸಿಗದಿದ್ರೆ ಬಿಜೆಪಿ ಪರ ಪ್ರಚಾರ: ಪ್ರಮೋದ್ ಮುತಾಲಿಕ್

    – ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಇಲ್ಲ

    ಹುಬ್ಬಳ್ಳಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿ. ಬೈ ಎಲೆಕ್ಷನ್ ನಲ್ಲಿ ಟಿಕೆಟ್ ಸಿಗದಿದ್ರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ. ಬೆಳಗಾವಿ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಸಿಗುತ್ತೋ ಅವರ ಪರವಾಗಿ ನಾನು ಪ್ರಚಾರಕ್ಕೆ ಹೋಗುತ್ತೇನೆ. ನನಗೆ ದೇಶ ಮುಖ್ಯ ಹೀಗಾಗಿ ಬಿಜೆಪಿ ಪರ ಪ್ರಚಾರ ಮಾಡುವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಮೋದ್ ಮುತಾಲಿಕ್, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಈಗಾಗಲೇ ಹಲವರು ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದಾರೆ. ಚುನಾವಣೆ ಘೋಷಣೆಯಾಗಿ ಮೂರು ದಿನ ಕಳೆದ್ರು ಬಿಜೆಪಿ ಅಭ್ಯರ್ಥಿ ಹೆಸರನ್ನ ಇನ್ನೂ ಘೋಷಣೆ ಮಾಡಿಲ್ಲ. ಆದ್ರೆ ನಾನು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಆಕ್ಷಾಂಕಿಯಾಗಿರುವೆ. ನನಗೆ ಟಿಕೆಟ್ ಸಿಗುವ ಭರವಸೆ ಇದೆ ಎಂದರು.

    ಟಿಕೆಟ್ ವಿಚಾರವಾಗಿ ಬಿಜೆಪಿಯ ಎಲ್ಲಾ ಪ್ರಮುಖರನ್ನ ಭೇಟಿ ಮಾಡಿದ್ದೇನೆ. ಎಲ್ಲರೂ ಸಹ ಕೋರ್ ಕಮಿಟಿ ಯಲ್ಲಿ ಚರ್ಚಿಸುವುದಾಗಿ ಹೇಳಿದ್ದಾರೆ. ಶೇಕಡ 90ರಷ್ಟು ನನಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಟಿಕೆಟ್ ವಿಚಾರವಾಗಿ ರಾಜಕೀಯ ಬೆಳವಣಿಗೆ ಆಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಮುಸ್ಲಿಂ ಸಂಪ್ರದಾಯ ಹಿಂದೂ ಧರ್ಮದಲ್ಲಿ ಅಳವಡಿಸಿಕೊಳ್ಳಬೇಡಿ: ಪ್ರಮೋದ್ ಮುತಾಲಿಕ್

    ಮುಸ್ಲಿಂ ಸಂಪ್ರದಾಯ ಹಿಂದೂ ಧರ್ಮದಲ್ಲಿ ಅಳವಡಿಸಿಕೊಳ್ಳಬೇಡಿ: ಪ್ರಮೋದ್ ಮುತಾಲಿಕ್

    ದಾವಣಗೆರೆ: ಪ್ರಸಿದ್ದ ದಾವಣಗೆರೆಯ ದುಗ್ಗಮ್ಮ ಜಾತ್ರೆಗೆ ತಂದ ಕುರಿಯನ್ನು ಮುಸ್ಲಿಂ ಸಂಪ್ರದಾಯದಂತೆ ಹಲಾಲ್ ಮಾಡುವ ವ್ಯವಸ್ಥೆ ಕೈ ಬಿಡಬೇಕು. ನಮ್ಮ ಹಿಂದು ಧರ್ಮ ಪದ್ದತಿಯಂತೆ ಕಡಿಯಿರಿ ತಿನ್ನಿರಿ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಹಂಚಿಕೊಂಡಿರುವ ಅವರು, ದಾವಣಗೆರೆಯಲ್ಲಿ ಅದ್ಧೂರಿಯಾಗಿ ದುಗ್ಗಮ್ಮನ ಜಾತ್ರೆ ನಡೆಯುತ್ತಿದ್ದು, ಕುರಿಗಳನ್ನು ಮುಸ್ಲಿರಿಂದ ಹಲಾಲ್ ಮಾಡಿಸಲಾಗುತ್ತಿದೆ. ಇದು ಹಿಂದು ಧರ್ಮಕ್ಕೆ ಅಪಪ್ರಚಾರ ಮಾಡಿದಂತೆ, ತಾಯಿ ದುಗ್ಗಮ್ಮನಿಗೆ ಅವಮಾನ ಮಾಡಿದಂತೆ, ಗೋ ಹಂತಕ ಮುಸ್ಲಿಂರಿಂದ ಹಲಾಲ್ ಮಾಡಿಸುವುದು ಬೇಡ ಎಂದು ಹೇಳಿದ್ದಾರೆ.

    ಇನ್ನು ವಿಜೃಂಭಣೆಯಿಂದ ಶಾಂತಿ ರೀತಿಯಲ್ಲಿ ಹಬ್ಬ ಆಚರಿಸಿ. ತಾಯಿ ದುಗ್ಗಮ್ಮ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಪ್ರಮೋದ್ ಮುತಾಲಿಕ್ ಶುಭ ಹಾರೈಸಿದ್ದಾರೆ.

  • ಶಿವು ಉಪ್ಪಾರ್ ಕೇಸ್ – ನ್ಯಾಯಕ್ಕಾಗಿ `ಬೆಳಗಾವಿ ಚಲೋ’ಗೆ ಕರೆ ನೀಡಿದ ಶ್ರೀರಾಮ ಸೇನೆ

    ಶಿವು ಉಪ್ಪಾರ್ ಕೇಸ್ – ನ್ಯಾಯಕ್ಕಾಗಿ `ಬೆಳಗಾವಿ ಚಲೋ’ಗೆ ಕರೆ ನೀಡಿದ ಶ್ರೀರಾಮ ಸೇನೆ

    ದಾವಣಗೆರೆ: ಗೋ ರಕ್ಷಕ ಶಿವು ಉಪ್ಪಾರ್ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಜುಲೈ 8ರಂದು ಬೆಳಗಾವಿ ಚಲೋ ಕಾರ್ಯಕ್ರಮ ನಡೆಸುತ್ತಿದ್ದೇವೆ. ಆರೋಪಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲವೆಂದರೆ ಹೋರಾಟ ನಡೆಸುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎಚ್ಚರಿಗೆ ನೀಡಿದ್ದಾರೆ.

    ದಾವಣಗೆರೆಯಲ್ಲಿ ಮಾತನಾಡಿದ ಅವರು, ಗೋ ರಕ್ಷಕ ಶಿವು ಉಪ್ಪಾರ್ ಸಾವು ಆತ್ಮಹತ್ಯೆಯಿಂದ ಆಗಿದಲ್ಲ, ಅವನನ್ನು ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಬೇಕು. ಈ ಸಂಬಂಧ ಎಲ್ಲಾ ಸಾಕ್ಷಿಗಳಿದ್ದರೂ ಆರೋಪಿಗಳನ್ನು ಯಾಕೆ ಬಂಧಿಸುತ್ತಿಲ್ಲ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

    ಈ ಸಂಬಂಧ ಗೋ ರಕ್ಷಕನ ಸಾವಿಗೆ ನ್ಯಾಯ ನೀಡಲು ಜುಲೈ 8ಕ್ಕೆ ಶ್ರೀರಾಮ ಸೇನೆ ನೇತೃತ್ವದಲ್ಲಿ ಎಲ್ಲಾ ಹಿಂದೂ ಸಂಘಟನೆಗಳು ಸೇರಿ ಬೆಳಗಾವಿ ಚಲೋ ಹಮ್ಮಿಕೊಂಡಿದ್ದು, ಇದರಲ್ಲಿ 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿಂದ ಕೇಂದ್ರ ಸಚಿವ ಸುರೇಶ್ ಅಂಗಡಿಗೆ ಘೇರಾವ್ ಹಾಕಲಾಗುವುದು ಎಂದು ತಿಳಿಸಿದರು.

    ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಂಡು ಸರ್ಕಾರ ಶಿವು ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಸರ್ಕಾರ ಆರೋಪಿಗಳನ್ನು ಬಂಧಿಸದಿದ್ದರೆ ಡಿಸಿ ಕಚೇರಿಗೆ ಘೇರಾವ್ ಹಾಕಲು ನಿರ್ಧಾರಿಸಿದ್ದೇವೆ. ಈ ಕೊಲೆ ಪ್ರಕರಣದ ಸಮಗ್ರ ತನಿಖೆ ನಡೆಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಗೆ ಕೊಟ್ಟರು.

    ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷದವರಿಗೂ ಒಂದು ಹಸುವಿಗೆ ಇಂತಿಷ್ಟು ಹಣ ಎಂದು ಮಾಮೂಲಿ ಹೋಗುತ್ತಿದೆ. ಕಸಾಯಿಖಾನೆಗಳಿಗೆ ಹಸು ಸಾಗಾಟಕ್ಕೆ ತಡೆ ಹಾಕಲೇಬೇಕು. ಇಲ್ಲದಿದ್ದರೆ ಶ್ರೀರಾಮ ಸೇನೆ ನೇತೃತ್ವದಲ್ಲಿ ತಡೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.