Tag: Pralhad Joshi

  • ಭಾರತದ ಸೌರ ಸಾಧನೆಗೆ ತಲೆದೂಗಿವೆ 125 ರಾಷ್ಟ್ರಗಳು – ಸೂರ್ಯಘರ್‌ಗೆ 50ಕ್ಕೂ ಅಧಿಕ ರಾಷ್ಟ್ರಗಳಿಂದ ಬೇಡಿಕೆ

    ಭಾರತದ ಸೌರ ಸಾಧನೆಗೆ ತಲೆದೂಗಿವೆ 125 ರಾಷ್ಟ್ರಗಳು – ಸೂರ್ಯಘರ್‌ಗೆ 50ಕ್ಕೂ ಅಧಿಕ ರಾಷ್ಟ್ರಗಳಿಂದ ಬೇಡಿಕೆ

    * ಸೂರ್ಯಘರ್‌, ಪಿಎಂ ಕುಸುಮ್‌ಗೆ ಬೇಡಿಕೆ ಮುಂದಿಟ್ಟ 50ಕ್ಕೂ ಅಧಿಕ ರಾಷ್ಟ್ರಗಳು
    * ಯಶಸ್ವಿ ಸೌರ ಯೋಜನೆಗಳಿಗಾಗಿ ಭಾರತದ ನೆರವಿಗೆ ವಿವಿಧ ದೇಶಗಳ ಮೊರೆ
    * ಒಂದೇ ತಾಸಲ್ಲಿ 10ಕ್ಕೂ ಹೆಚ್ಚು ರಾಷ್ಟ್ರದ ಪ್ರತಿನಿಧಿಗಳು ಜೋಶಿ ಭೇಟಿ, ಚರ್ಚೆ

    ನವದೆಹಲಿ: ಭಾರತದ ಸೌರ ಯೋಜನೆಗಳ ಪ್ರಗತಿ ಅಂತಾರಾಷ್ಟ್ರೀಯ ಸೌರ ಒಕ್ಕೂಟದಲ್ಲಿನ ಸದಸ್ಯ ರಾಷ್ಟ್ರಗಳ ಸಮೂಹವನ್ನೇ ಸೆಳೆದಿದೆ. ಸರಿಸುಮಾರು 50ಕ್ಕೂ ಅಧಿಕ ದೇಶಗಳು ಇದೀಗ ತಮ್ಮ ರಾಷ್ಟ್ರಗಳಲ್ಲೂ ಭಾರತದ ಸೌರ ಮಾದರಿಯನ್ನೇ ಅನುಸರಿಸಲು ಮುಂದಾಗಿವೆ.

    ನವದೆಹಲಿಯ ಭಾರತ್ ಮಂಟಪದಲ್ಲಿ ಕಳೆದೆರಡು ದಿನಗಳಿಂದ ನಡೆದ ಅಂತಾರಾಷ್ಟ್ರೀಯ ಸೌರ ಒಕ್ಕೂಟದ 8ನೇ ಅಧಿವೇಶನದಲ್ಲಿ ಸದಸ್ಯ ರಾಷ್ಟ್ರಗಳೆಲ್ಲವೂ ಭಾರತದ ಸೌರಶಕ್ತಿ ಪ್ರಗತಿಗೆ ತಲೆದೂಗಿದ್ದು, ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯ ಪರಿಣಾಮ ಯಶಸ್ವಿಗೊಂಡ ಸೌರ ಯೋಜನೆಗಳ ಮಾದರಿಯನ್ನು ಕುತೂಹಲದಿಂದ ವೀಕ್ಷಿಸುತ್ತ 125ಕ್ಕೂ ಹೆಚ್ಚು ರಾಷ್ಟ್ರಗಳು ಸಮಗ್ರ ಮಾಹಿತಿ ಪಡೆದುಕೊಂಡಿವೆ. ಇದನ್ನೂ ಓದಿ: ನಿತೀಶ್ ಸಿಎಂ, ಮೋದಿನೇ ಪಿಎಂ – ಯಾವ್ದೇ ಹುದ್ದೆ ಖಾಲಿ ಇಲ್ಲ; ಗೊಂದಲಕ್ಕೆ ತೆರೆ ಎಳೆದ ಅಮಿತ್ ಶಾ

    146 ಕೋಟಿ ಬೃಹತ್ ಜನಸಂಖ್ಯೆಯುಳ್ಳ ದೊಡ್ಡ ದೇಶ ಭಾರತದಲ್ಲಿ ಸೂರ್ಯ ಘರ್, ಪಿಎಂ ಕುಸುಮ್ ನಂತಹ ಅತ್ಯಂತ ಮಹತ್ವಾಕಾಂಕ್ಷಿ ಸೌರಶಕ್ತಿ ಯೋಜನೆಗಳು ದೇಶದ ಆರ್ಥಿಕ ಸುಸ್ಥಿರತೆ ಜೊತೆಗೆ ಕೃಷಿ ವಲಯ ಸಬಲೀಕರಣಕ್ಕೆ ಕೊಡುಗೆ ನೀಡುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರಲ್ಲದೆ, ತಮ್ಮ ತಮ್ಮ ದೇಶಗಳಲ್ಲೂ ಈ ಯೋಜನೆಗಳ ಅನುಷ್ಠಾನಕ್ಕೆ ಭಾರತದ ನೆರವು ಕೋರಿದರು.

    ಅಧಿವೇಶನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ʻಒಂದು ಜಗತ್ತು, ಒಂದು ಸೂರ್ಯ, ಒಂದು ಗ್ರಿಡ್ʼ ದೃಷ್ಟಿಕೋನವನ್ನು ಬೆಂಬಲಿಸಿ 120ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಸೌರಶಕ್ತಿಯಲ್ಲಿ ಜಾಗತಿಕ ಸಹಕಾರ ಮತ್ತು ಹೂಡಿಕೆಯನ್ನು ವೇಗಗೊಳಿಸುವ ಉದ್ದೇಶದ ಒಪ್ಪಂದಕ್ಕೆ ಸಹಿ ಹಾಕಿದ್ದಲ್ಲದೆ, ತಮ್ಮ ದೇಶಗಳಲ್ಲಿ ಸೌರಶಕ್ತಿ ಪ್ರಗತಿಗೆ ಭಾರತದ ಸಹಾಯಹಸ್ತಕ್ಕೆ ಮೊರೆಯಿಟ್ಟರು. ಇದನ್ನೂ ಓದಿ: ಕ್ರಿಮಿನಲ್‌ ಕೇಸ್‌ಗಳಲ್ಲಿ ಆರೋಪಪಟ್ಟಿ ರೂಪಿಸಲು ವಿಳಂಬ – ಸುಪ್ರೀಂ ಕಳವಳ

    ಇದೇ ಮೊದಲ ಬಾರಿ ಎನ್ನುವಂತೆ 125ಕ್ಕೂ ಹೆಚ್ಚು ರಾಷ್ಟ್ರಗಳ 550ಕ್ಕೂ ಅಧಿಕ ಪ್ರತಿನಿಧಿಗಳು ಮತ್ತು 30 ಮಂತ್ರಿಗಳು, ಸಹಾಯಕ ಸಚಿವರುಗಳು ಇದೇ ಮೊದಲು ಎನ್ನುಂವಂತೆ ಭಾರತಕ್ಕಾಗಮಿಸಿ ಸೌರ ಅಧಿವೇಶನದಲ್ಲಿ ಭಾಗವಹಿಸಿದ್ದಲ್ಲದೆ, ಭಾರತದ ಬ್ಯಾಟರಿ ಸ್ಟೋರೇಜ್‌ ಘಟಕ ವೀಕ್ಷಣೆಗೆ ತೆರಳಿ ಸೌರಕ್ರಾಂತಿ ಅಧ್ಯಯನಕ್ಕೆ ಆಸಕ್ತಿ ತೋರಿದ್ದು ಭಾರತದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.

    ಪ್ರಹ್ಲಾದ್‌ ಜೋಶಿ ಭೇಟಿ ಮಾಡಿ ನೆರವಿಗೆ ಮೊರೆ:
    ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧಿವೇಶನದಲ್ಲಿ ಭಾಗಿಯಾದ ಅನೇಕ ರಾಷ್ಟ್ರಗಳ ಸಚಿವರುಗಳು ಬುಧವಾರ ISA ಅಸೆಂಬ್ಲಿ ಅಧ್ಯಕ್ಷರಾದ ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಭೇಟಿ ಮಾಡಿ ಭಾರತದಲ್ಲಿ ಸೌರಶಕ್ತಿ ಪ್ರಗತಿ ಬಗ್ಗೆ ಚರ್ಚಿಸಿದರಲ್ಲದೆ, ಸಾಮಾಜಿಕ ಮತ್ತು ಕೃಷಿ ವಲಯಕ್ಕೆ ಬೆಳಕು ತೋರಿರುವ ಸೂರ್ಯಘರ್‌ ಮತ್ತು ಪಿಎಂ ಕುಸುಮ್‌ ಯೋಜನೆಗಳನ್ನು ತಮ್ಮ ರಾಷ್ಟ್ರಗಳಲ್ಲೂ ಅಳವಡಿಸಿಕೊಳ್ಳಲು ಇಚ್ಛಾಶಕ್ತಿ ತೋರಿ ನೆರವಾಗುವಂತೆ ಮನವಿ ಮಾಡಿದರು.

    ಸಣ್ಣ ರಾಷ್ಟ್ರಗಳ ಸಚಿವರು ಭಾರತದ ಸೌರಶಕ್ತಿ ಯೋಜನೆಗಳನ್ನು ತಮ್ಮಲ್ಲಿ ಅನುಷ್ಠಾನಗೊಳಿಸಲು ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಅಗತ್ಯ ಸಹಾಯ ಕೋರಿದ್ದಲ್ಲದೆ, ಸೌರ ಫಲಕ, ಸ್ಥಾಪಕಗಳ ತಂತ್ರಜ್ಞಾನ ಅಳವಡಿಕೆ ಬಗ್ಗೆ ಮಹತ್ವದ ಚರ್ಚೆ ನಡೆಸಿದರು. ತಂತ್ರಜ್ಞಾನ ಹಂಚಿಕೆಗೆ ಬೇಡಿಕೆ ಮುಂದಿಟ್ಟರು. ಇದನ್ನೂ ಓದಿ: ಪ್ರಧಾನಿಯಾದ ಬಳಿಕ ಫಸ್ಟ್‌ ಟೈಂ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಮೋದಿ ಭೇಟಿ – ಯಾವಾಗ?

    ಈ ವೇಳೆ ಭಾರತ ಅನುಷ್ಠಾನಗೊಳಿಸಿದ ಸೂರ್ಯಘರ್‌ ಯೋಜನೆ ಲಕ್ಷಾಂತರ ಮನೆಗಳಿಗೆ ಸೌರ ಬೆಳಕು ಚೆಲ್ಲಿದೆ. ಅಲ್ಲದೇ, ಪಿಎಂ ಕುಸುಮ್‌ ಸಹ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್‌ ಕಲ್ಪಿಸಿ ಸಬಲೀಕರಣಗೊಳಿಸಿದೆ. ವಿಶ್ವದ 3ನೇ ಅತಿದೊಡ್ಡ ಸೌರಶಕ್ತಿ ಉತ್ಪಾದಕ ರಾಷ್ಟ್ರವಾಗಿರುವ ಭಾರತ 2030ರ ಗುರಿಗಿಂತ 5 ವರ್ಷಗಳ ಮೊದಲೇ ಪಳೆಯುಳಿಕೆಯೇತರ ಮೂಲಗಳಿಂದ ಶೇ.50ರಷ್ಟು ಇಂಧನ ಸಾಮರ್ಥ್ಯದ ಗುರಿ ಸಾಧಿಸಿದೆ ಎಂದು ಸಚಿವ ಪ್ರಹ್ಲಾದ್‌ ಜೋಶಿ ಗಮನಸೆಳೆದರು.

    ವಿದೇಶಗಳಿಗೆ ಸಚಿವ ಜೋಶಿ ಅಭಯ:
    ಸುಮಾರು ₹4 ಲಕ್ಷ ಕೋಟಿ (USD 46 ಬಿಲಿಯನ್) ಪಳೆಯುಳಿಕೆ ಇಂಧನ ಆಮದು ಮತ್ತು ಮಾಲಿನ್ಯ-ಸಂಬಂಧಿತ ವೆಚ್ಚಗಳನ್ನು ತಪ್ಪಿಸಿದೆ. 1,08,000 GWhಗಿಂತ ಹೆಚ್ಚು ಸೌರ ವಿದ್ಯುತ್ ಉತ್ಪಾದಿಸಿದೆ. ISA ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಿಶೇಷವಾಗಿ ಆಫ್ರಿಕಾ ಮತ್ತು ಸಣ್ಣ ದ್ವೀಪ ರಾಷ್ಟ್ರಗಳಲ್ಲಿ PM ಸೂರ್ಯ ಘರ್, ಮುಫ್ತ್ ಬಿಜ್ಲಿ ಯೋಜನೆ ಮತ್ತು PM-KUSUMನಂತಹ ಯಶಸ್ವಿ ಯೋಜನೆಗಳನ್ನು ಪುನರಾವರ್ತಿಸಲು ಭಾರತ ಸಹಾಯ ಮಾಡುತ್ತದೆ ಎಂದು ಇದೇ ವೇಳೆ ಸಚಿವ ಪ್ರಹ್ಲಾದ್‌ ಜೋಶಿ ಅಭಯ ನೀಡಿದರು.

    861.2 ಶತಕೋಟಿ ಡಾಲರ್‌ ಕೊಡುಗೆ
    2024ರಲ್ಲಿ ಇಂಧನ ಪರಿವರ್ತನೆಯಲ್ಲಿ ಜಾಗತಿಕ ಹೂಡಿಕೆಗಳು 2083 ಶತಕೋಟಿ ಡಾಲರ್‌ ತಲುಪಿದೆ. ISA ಸದಸ್ಯ ರಾಷ್ಟ್ರಗಳು 861.2 ಶತಕೋಟಿ ಡಾಲರ್‌ ಕೊಡುಗೆ ನೀಡಿವೆ. ಇದು ಶುದ್ಧ ಇಂಧನ ಭವಿಷ್ಯ ರೂಪಿಸುವಲ್ಲಿ ಜಾಗತಿಕ ದಕ್ಷಿಣದ ಉದಯೋನ್ಮುಖ ನಾಯಕತ್ವವನ್ನು ಒತ್ತಿಹೇಳುತ್ತದೆ. ನವೀಕರಿಸಬಹುದಾದ ಇಂಧನವು 725 ಶತಕೋಟಿ ಡಾಲರ್‌ ಅನ್ನು ಆಕರ್ಷಿಸಿತು. ಅದರಲ್ಲಿ ಸೌರಶಕ್ತಿಯು 521 ಶತಕೋಟಿ USD ಹೊಂದಿದೆ ಎಂದು ವಿವರಿಸಿದರು.

    ಅಂತರಾಷ್ಟ್ರೀಯ ಸೌರ ಒಕ್ಕೂಟದ ಫ್ರೆಂಚ್ ಸಹ-ಅಧ್ಯಕ್ಷತೆ ಪ್ರತಿನಿಧಿಸುತ್ತಿದ್ದು, ಫ್ರೆಂಚ್ ರಾಜ್ಯ ಸಚಿವೆ ಡೆಲೆಗುಯಿ, ಎಲಿಯೊನೋರ್ ಕ್ಯಾರೊಯಿಟ್ ಅವರು ವಿಡಿಯೋ ಸಂದೇಶ ನೀಡಿ ʼಸೌರಶಕ್ತಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುವ ಅಂತರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಫ್ರಾನ್ಸ್ ಸಹ ಪ್ರಾಮುಖ್ಯತೆ ನೀಡುತ್ತದೆ. ಫ್ರೆಂಚ್, ಯುರೋಪ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹವಾಮಾನ ವಿಶೇಷ ರಾಯಭಾರಿ ಬೆನೈಟ್ ಫರಾಕೊ, ಹತ್ತು ವರ್ಷಗಳ ಹಿಂದೆ ನಾವು ಪ್ಯಾರಿಸ್ ಒಪ್ಪಂದ ಅಳವಡಿಸಿಕೊಂಡಿದ್ದು, ಇದೇ ನವೆಂಬರ್‌ನಲ್ಲಿ COP30ನಲ್ಲಿ ISA ಯಶಸ್ಸು ಪ್ರದರ್ಶಿಸುವುದನ್ನು ಎದುರು ನೋಡುತ್ತಿದ್ದೇವೆ ಎಂದರು.

    ಒಂದೇ ತಾಸಲ್ಲಿ 10ಕ್ಕೂ ಹೆಚ್ಚು ರಾಷ್ಟ್ರದ ಪ್ರತಿನಿಧಿಗಳು ಜೋಶಿ ಭೇಟಿ
    ಬುಧವಾರ ಒಂದೇ ಒಂದು ಗಂಟೆಯಲ್ಲಿ ಸುಮಾರು 10ಕ್ಕೂ ಅಧಿಕ ರಾಷ್ಟ್ರಗಳ ಪ್ರಮುಖರು ಸಚಿವ ಜೋಶಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು ವಿಶೇಷವಾಗಿತ್ತು. ಆಂಟಿಗುವಾ ಮತ್ತು ಬಾರ್ಬುಡಾ, ಬೆಲೀಜ್, ಕಾಮನ್‌ವೆಲ್ತ್ ಆಫ್ ಡೊಮಿನಿಕಾ, ಶ್ರೀಲಂಕಾ, ಡೊಮಿನಿಕನ್ ರಿಪಬ್ಲಿಕ್, ಪಪುವಾ ನ್ಯೂಗಿನಿಯಾ, ಕಿರಿಬಾಟಿ, ನೌರು, ಸುರಿನಾಮ್, ಸೇಂಟ್ ಕಿಟ್ಸ್ ಮತ್ತು ನೆವಿಸ್, ಸೊಲೊಮನ್ ದ್ವೀಪಗಳು, ಮಾಲ್ಡೀವ್ಸ್, ಸೀಶೆಲ್ಸ್, ಮಾರಿಷಸ್, ಫಿಜಿ, ಮಾರ್ಷಲ್ ದ್ವೀಪಗಳು ಸೌರಶಕ್ತಿಯಲ್ಲಿ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದವು.

    ಸೊಮಾಲಿಯಾ ಫೆಡರಲ್ ಸರ್ಕಾರದ ಇಂಧನ ಮತ್ತು ಜಲ ಸಂಪನ್ಮೂಲ ಸಚಿವ ಮೊಹಮ್ಮದ್ ಅಬ್ದುಲ್ಲಾಹಿ ಫರಾಹ್, ಸೇಂಟ್ ಕಿಟ್ಸ್ ಮತ್ತು ನೆವಿಸ್ ಸರ್ಕಾರದ ಲೋಕೋಪಯೋಗಿ ಮೂಲಸೌಕರ್ಯ, ಇಂಧನ, ದೇಶೀಯ ಸಾರಿಗೆ, ಮಾಹಿತಿ, ಸಂವಹನ ಮತ್ತು ತಂತ್ರಜ್ಞಾನ ಹಾಗೂ ಅಂಚೆ ಸಚಿವರಾದ ಕೊನ್ರಿಸ್ ಮೇನಾರ್ಡ್ ಮತ್ತು ಇಂಧನ ಅಧಿಕಾರಿ ಡೆನಾಸಿಯೊ ಫ್ರಾಂಕ್, ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಹುಸೇನ್ ಅಗಿಲ್ ನಸೀರ್ ಮತ್ತು ಮಹಾನಿರ್ದೇಶಕ ಅಹ್ಮದ್ ಅಲಿ, ಎಸ್ವಾಟಿನಿಯ ನೈಸರ್ಗಿಕ ಸಂಪನ್ಮೂಲಗಳು ಮತ್ತು ಇಂಧನ ಸಚಿವ ಲೊಂಖೋಖೇಲಾ ಡ್ಲಾಮಿನಿ, ಲೈಬೀರಿಯಾ ಗಣರಾಜ್ಯದ ಗಣಿ ಮತ್ತು ಇಂಧನ ಉಪ ಸಚಿವ ಚಾರ್ಲ್ಸ್ ಉಮೆಹೈ ಮತ್ತು ಸ್ವತಂತ್ರ ನವೀಕರಿಸಬಹುದಾದ ಇಂಧನ ಏಜೆನ್ಸಿ ಕಾರ್ಯನಿರ್ವಾಹಕ ನಿರ್ದೇಶಕ ಸ್ಯಾಮ್ಯುಯೆಲ್ ಬೊಕೆ ನಾಗ್ಬೆ, ಆಂಟಿಗುವಾ ಮತ್ತು ಬಾರ್ಬುಡಾ ಸರ್ಕಾರದ ಐಸಿಟಿ, ಇಂಧನ ಸಚಿವ ಮೆಲ್ಫೋರ್ಡ್ ವಾಲ್ಟರ್ ಫಿಟ್ಜ್‌ಗೆರಾಲ್ಡ್ ನಿಕೋಲಸ್, ಸಾಲೊಮನ್ ದ್ವೀಪಗಳ ಗಣಿ, ಇಂಧನ ಮತ್ತು ಗ್ರಾಮೀಣ ವಿದ್ಯುದ್ದೀಕರಣ ಸಚಿವ ಡೆರಿಕ್ ರಾಕ್ಲಿಫ್, ಗಣಿ, ಇಂಧನ ಮತ್ತು ಗ್ರಾಮೀಣ ವಿದ್ಯುದ್ದೀಕರಣ ಸಚಿವಾಲಯದ ಕಾಯಂ ಕಾರ್ಯದರ್ಶಿ ಡಾ.ಕ್ರಿಸ್ಟೋಫರ್ ವೆಹೆ ಸಗಾಪೋವಾ, ಪಾಪುವಾ ನ್ಯೂಗಿನಿಯಾದ ಇಂಧನ ಸಚಿವ ಪೀಟರ್ ನಾಮಿಯಾ ಐಸೊಯಿಮೊ, ಕಾಮನ್‌ವೆಲ್ತ್ ಆಫ್ ಡೊಮಿನಿಕಾ ಸರ್ಕಾರದ ಸಚಿವ ಡಾ.ವಿನ್ಸ್ ಹೆಂಡರ್ಸನ್ ಮತ್ತು ವ್ಯಾಪಾರ ಅಧಿಕಾರಿಯಾದ ಲೀವಿಯಾ ಚೆರಾ ಜೋಸೆಫ್ ಅವರು ಬುಧವಾರ ISA ಅಧ್ಯಕ್ಷರಾದ ಸಚಿವ ಜೋಶಿ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು.

  • ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೀತಿಪಾಠ: ಪ್ರಹ್ಲಾದ್ ಜೋಶಿ

    ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೀತಿಪಾಠ: ಪ್ರಹ್ಲಾದ್ ಜೋಶಿ

    – ಇದು ಸಂವಿಧಾನದ ಮೌಲ್ಯಕ್ಕೆ ಸಿಕ್ಕ ಜಯ

    ನವದೆಹಲಿ: ಆರ್‌ಎಸ್‌ಎಸ್ (RSS) ಗುರಿಯಾಗಿಸಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಪಥ ಸಂಚಲನ, ಸಭೆ-ಸಮಾವೇಶಗಳಿಗೆ ನಿರ್ಬಂಧ ಹೇರಿದ್ದ ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ತಾತ್ಕಾಲಿಕ ತಡೆ ನೀಡಿ ನೀತಿಪಾಠ ಹೇಳಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಚಾಟಿ ಬೀಸಿದ್ದಾರೆ.

    ನವದೆಹಲಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರದ ಜಾಗ, ಆವರಣಗಳಲ್ಲಿ ಕಾರ್ಯಕ್ರಮ ನಡೆಸಲು ಖಾಸಗಿ ಸಂಸ್ಥೆಗಳು ಪೂರ್ವಾನುಮತಿ ಪಡೆಯಬೇಕೆಂದು ಹೊರಡಿಸಿದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ತಾತ್ಕಾಲಿಕ ತಡೆ ನೀಡಿದೆ. ಇದು ಸಂವಿಧಾನದ ಮೌಲ್ಯಕ್ಕೆ ಸಿಕ್ಕ ಜಯವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕೇಂದ್ರ ಚುನಾವಣಾ ಆಯುಕ್ತ ರಾಜಕೀಯ ಪುಢಾರಿ: ಯತೀಂದ್ರ ಸಿದ್ದರಾಮಯ್ಯ

    ರಾಜ್ಯ ಕಾಂಗ್ರೆಸ್ ಸರ್ಕಾರ ಪೂರ್ವಾಗ್ರಹಪೀಡಿತವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಗುರಿಯಾಗಿಸಿಕೊಂಡು ಸರ್ಕಾರದ ಆಸ್ತಿ ನೆಪದಲ್ಲಿ ರಸ್ತೆ, ಉದ್ಯಾನವನ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರೇತರ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಖಂಡಿಸಿದರು. ಇದನ್ನೂ ಓದಿ: ದೆಹಲಿ ವಿವಿ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ ಕೇಸ್‌ಗೆ ಟ್ವಿಸ್ಟ್ – ಸುಳ್ಳು ಕಥೆ ಕಟ್ಟಿದ ತಂದೆ ಅರೆಸ್ಟ್

    ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನದ ಮೂಲ ಆಶಯಗಳ ವಿರೋಧವಾಗಿ ನಡೆಯುತ್ತಿದೆ ಎಂಬುದಕ್ಕೆ ಹೈಕೋರ್ಟ್ ಪೀಠ ನೀಡಿದ ಈ ಮಹತ್ವದ ತೀರ್ಪೇ ಸಾಕ್ಷಿ. ಸಂವಿಧಾನ ವಿರೋಧಿ ಕ್ರಮಗಳನ್ನು ಅನುಸರಿಸುವ ಸರ್ಕಾರಕ್ಕೆ ನ್ಯಾಯಾಲಯದ ಈ ತೀರ್ಪು ಎಚ್ಚರಿಕೆಯ ಗಂಟೆಯಾಗಿದೆ. ಈ ಸರ್ಕಾರ ಇನ್ನಾದರೂ ಸಂವಿಧಾನದ ಮೂಲ ಆಶಯ ಗೌರವಿಸುವ ಕಾರ್ಯವನ್ನು ಪಾಲಿಸಲಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಚಿತ್ತಾಪುರ ಶಾಂತಿ ಸಭೆಯಲ್ಲಿ ಅಶಾಂತಿ, ಸಂಘಟನೆಗಳ ಮಧ್ಯೆ ಮೂಡದ ಒಮ್ಮತ: ಇಂದು ಏನಾಯ್ತು?

    ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳನ್ನೇ ಗುರಿಯಾಗಿಸಿಕೊಂಡು ಹೊರಡಿಸಿದ್ದ ಈ ಆದೇಶದ ಹಿಂದಿನ ಪಿತೂರಿಗೆ ನ್ಯಾಯಾಲಯ ತಡೆವೊಡ್ಡಿದಂತಾಗಿದೆ. ಅಲ್ಲದೇ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಪಾಠವನ್ನು ಸರ್ಕಾರಕ್ಕೆ ಮಾಡಿದೆ ಎಂದು ಸಚಿವ ಅಭಿಪ್ರಾಯಪಟ್ಟರು. ಇದನ್ನೂ ಓದಿ: ಧಾರವಾಡ ಹೈಕೋರ್ಟ್ ಆದೇಶಕ್ಕೆ ಮೇಲ್ಮನವಿ ಸಲ್ಲಿಸುತ್ತೇವೆ: ಸಿದ್ದರಾಮಯ್ಯ

  • ಬೆಂಗಳೂರು-ಮುಂಬೈ ಸೂಪರ್‌ಫಾಸ್ಟ್‌ ರೈಲು ಸಂಚಾರಕ್ಕೆ ಅನುಮೋದನೆ

    ಬೆಂಗಳೂರು-ಮುಂಬೈ ಸೂಪರ್‌ಫಾಸ್ಟ್‌ ರೈಲು ಸಂಚಾರಕ್ಕೆ ಅನುಮೋದನೆ

    ಬೆಂಗಳೂರು: ಬೆಂಗಳೂರು-ಮುಂಬೈ ನಡುವೆ ಉದ್ದೇಶಿತ ಸೂಪರ್‌ಫಾಸ್ಟ್ ರೈಲು ಹುಬ್ಬಳ್ಳಿ ಮೂಲಕ ಸಂಚರಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಖಚಿತಪಡಿಸಿದ್ದಾರೆ.

    ಧಾರವಾಡ ಸಂಸದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಬುಧವಾರ ಬರೆದ ಪತ್ರದಲ್ಲಿ ವೈಷ್ಣವ್, ತುಮಕೂರು ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮತ್ತು ಬೆಳಗಾವಿ ಮೂಲಕ ನೂತನ ರೈಲು ಮುಂಬೈ ತಲುಪಲಿದೆ ಎಂದು ತಿಳಿಸಿದ್ದಾರೆ.‌

    ಹೊಸ ರೈಲು ಸಂಚಾರದ ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಶೀಘ್ರವೇ ಬಿಡುಗಡೆ ಮಾಡಲಿದೆ.

    ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಮನವಿಗೆ ಪ್ರತಿಕ್ರಿಯೆಯಾಗಿ ಸಚಿವರು ಸೆಪ್ಟೆಂಬರ್ ಅಂತ್ಯದಲ್ಲಿ ರೈಲಿನ ಯೋಜನೆಗಳನ್ನು ಮೊದಲು ಘೋಷಿಸಿದ್ದರು.

  • ಖಾದ್ಯ ತೈಲ ಘಟಕ ನೋಂದಣಿ ಕಡ್ಡಾಯ: ಸಚಿವ ಪ್ರಹ್ಲಾದ್‌ ಜೋಶಿ

    ಖಾದ್ಯ ತೈಲ ಘಟಕ ನೋಂದಣಿ ಕಡ್ಡಾಯ: ಸಚಿವ ಪ್ರಹ್ಲಾದ್‌ ಜೋಶಿ

    – 2011ರ VOPPA ಆದೇಶಕ್ಕೆ ಪ್ರಮುಖ ತಿದ್ದುಪಡಿ
    – ಆದೇಶ ಪಾಲಿಸದಿದ್ರೆ ಕಠಿಣ ಕ್ರಮ; ಸಚಿವರ ಎಚ್ಚರಿಕೆ

    ನವದೆಹಲಿ: ಖಾದ್ಯ ತೈಲ ವಲಯದಲ್ಲಿ ಹೆಚ್ಚಿನ ನಿಯಂತ್ರಣ, ಮೇಲ್ವಿಚಾರಣೆ ಮತ್ತು ಪಾರದರ್ಶಕತೆಗಾಗಿ ಕೇಂದ್ರ ಸರ್ಕಾರ 2011ರ VOPPA ಆದೇಶಕ್ಕೆ ತಿದ್ದುಪಡಿ ತಂದಿದ್ದು, ಪಾಲಿಸದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ.

    ತರಕಾರಿ ತೈಲ ಉತ್ಪನ್ನಗಳು, ಉತ್ಪಾದನೆ ಮತ್ತು ಲಭ್ಯತೆ (ನಿಯಂತ್ರಣ) ಆದೇಶ-2011 (VOPPA ಆದೇಶ)ಕ್ಕೆ ಪ್ರಮುಖ ತಿದ್ದುಪಡಿಗೆ ಸೂಚಿಸಿದೆ. ತಿದ್ದುಪಡಿ ಮಾಡಲಾದ VOPPA ಆದೇಶ-2025 ಭಾರತದಲ್ಲಿ ಖಾದ್ಯ ತೈಲ ವಲಯದಾದ್ಯಂತ ನಿಯಂತ್ರಕ, ಮೇಲ್ವಿಚಾರಣೆ ಮತ್ತು ಪಾರದರ್ಶಕತೆ ಗುರಿ ಹೊಂದಿದೆ ಎಂದಿದ್ದಾರೆ. ಇದನ್ನೂ ಓದಿ: Bihar Election| ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಘೋಷಣೆ

    ನೋಂದಣಿ ಕಡ್ಡಾಯ: ತಿದ್ದುಪಡಿ ಆದೇಶದಂತೆ ಖಾದ್ಯ ತೈಲ ಪೂರೈಕೆಯಲ್ಲಿ ಭಾಗಿಯಾಗಿರುವ ಎಲ್ಲಾ ಖಾದ್ಯ ತೈಲ ತಯಾರಕರು, ಸಂಸ್ಕರಣಾ ಘಟಕಗಳು, ಮಿಶ್ರಣಕಾರರು, ಮರು-ಪ್ಯಾಕರ್‌ಗಳು ಮತ್ತಿತರ ಪಾಲುದಾರರ ನೋಂದಣಿ ಕಡ್ಡಾಯವಾಗಿದೆ. ಅಲ್ಲದೇ, ಆನ್‌ಲೈನ್ ಪೋರ್ಟಲ್ ಮೂಲಕ ಮಾಸಿಕ ಉತ್ಪಾದನೆ ಮತ್ತು ಸ್ಟಾಕ್ ರಿಟರ್ನ್‌ ಸಲ್ಲಿಕೆ ಸಹ ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

    ಎಲ್ಲಾ ಖಾದ್ಯ ತೈಲ ಸಂಬಂಧಿತ ಘಟಕಗಳು https://www.nsws.gov.in ನಲ್ಲಿ ರಾಷ್ಟ್ರೀಯ ಏಕ ವಿಂಡೋ ವ್ಯವಸ್ಥೆ ಮೂಲಕ ನೋಂದಾಯಿಸಿಕೊಳ್ಳಬೇಕು. ನಂತರ ಘಟಕಗಳು ಮಾಸಿಕ ಉತ್ಪಾದನೆ, ಸ್ಟಾಕ್ ಮತ್ತು ಲಭ್ಯತೆಯ ರಿಟರ್ನ್‌ಗಳನ್ನು https://www.edibleoilindia.in ಮೂಲಕ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ. ಇದನ್ನೂ ಓದಿ: ಟ್ರಂಪ್‌ ಆಸೆಗೆ ತಣ್ಣೀರು – ಮಲೇಷ್ಯಾಗೆ ಬರಲ್ಲ ಎಂದ ಮೋದಿ

    ಖಾದ್ಯ ತೈಲ ವಲಯದಲ್ಲಿ ನಿಖರ ದತ್ತಾಂಶ ಸಂಗ್ರಹಣೆ, ನೈಜ-ಸಮಯದ ಮೇಲ್ವಿಚಾರಣೆ ಮತ್ತು ನೀತಿಗಳ ಸುಧಾರಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರ್ಣಾಯಕ ಹೆಜ್ಜೆಯಿರಿಸಿದೆ. ತಪಾಸಣೆ ಮತ್ತು ಕ್ಷೇತ್ರ ಪರಿಶೀಲನೆಗೆ ಯೋಜಿಸಿದ್ದು, ಎಣ್ಣೆ ಉತ್ಪನ್ನಗಳು, ಉತ್ಪಾದನೆ ಮತ್ತು ಲಭ್ಯತೆ ಬಗೆಗಿನ ಕ್ರಮವನ್ನು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

    ಆದೇಶ ಉಲ್ಲಂಘಿಸಿದರೆ ಕ್ರಮ: ಈ ತಿದ್ದುಪಡಿ VOPPA ಆದೇಶ-2025 ಅನ್ನು ಪಾಲಿಸದಿದ್ದರೆ, ನೋಂದಣಿ, ರಿಟರ್ನ್‌ ಸಲ್ಲಿಸಲು ವಿಫಲವಾದ ತೈಲ ಘಟಕಗಳ ವಿರುದ್ಧ ದಂಡ ವಿಧಿಸುವ ಜತೆಗೆ VOPPA ಆದೇಶ ಉಲ್ಲಂಘನೆ ಎಂದು ಪರಿಗಣಿಸಿ ಕಾಯ್ದೆ 2008ರ ನಿಬಂಧನೆಯಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಎಚ್ಚರಿಸಿದ್ದಾರೆ.

    VOPPA ತಿದ್ದುಪಡಿ ಆದೇಶದ ಅನುಸರಣೆ ಕೇವಲ ನಿಯಂತ್ರಕ ಅವಶ್ಯಕತೆಯಲ್ಲ. ಇದು ಭಾರತದ ಆಹಾರ ಭದ್ರತಾ ಮೂಲಸೌಕರ್ಯಕ್ಕೆ ನಿರ್ಣಾಯಕ ಕೊಡುಗೆಯಾಗಿದೆ. ಖಾದ್ಯ ತೈಲ ವಲಯದಲ್ಲಿ ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕತೆಯನ್ನು ಬಲಪಡಿಸುತ್ತದೆ ಎಂದು ತಿಳಿಸಿದ್ದಾರೆ.

  • ಕೇಂದ್ರದಿಂದ ರಾಜ್ಯಕ್ಕೆ ದೀಪಾವಳಿ ಗಿಫ್ಟ್‌; ಬೆಂಗಳೂರು-ಹುಬ್ಬಳ್ಳಿಗೆ ಸೂಪರ್‌ ಫಾಸ್ಟ್‌ ವಿಶೇಷ ರೈಲು

    ಕೇಂದ್ರದಿಂದ ರಾಜ್ಯಕ್ಕೆ ದೀಪಾವಳಿ ಗಿಫ್ಟ್‌; ಬೆಂಗಳೂರು-ಹುಬ್ಬಳ್ಳಿಗೆ ಸೂಪರ್‌ ಫಾಸ್ಟ್‌ ವಿಶೇಷ ರೈಲು

    * ಸಚಿವ ಪ್ರಹ್ಲಾದ್‌ ಜೋಶಿ ಒತ್ತಾಸೆಗೆ ರೈಲ್ವೆ ಸಚಿವರ ಸ್ಪಂದನೆ
    * ರಾಜಧಾನಿ-ವಾಣಿಜ್ಯ ನಗರಿ ಮಧ್ಯೆ ಡಿ.8ರಿಂದ ಹೊಸ ರೈಲು ಸಂಚಾರ

    ನವದೆಹಲಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರ ದೀಪಾವಳಿ ವೇಳೆ ರಾಜ್ಯಕ್ಕೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ರಾಜಧಾನಿ ಬೆಂಗಳೂರು ಮತ್ತು ವಾಣಿಜ್ಯ‌ ನಗರಿ ಹುಬ್ಬಳ್ಳಿ (Bengaluru-Hubballi) ಮಧ್ಯೆ ನಿತ್ಯ ‘ಸೂಪರ್ ಫಾಸ್ಟ್ ವಿಶೇಷ ರೈಲು’ ಸಂಚಾರದ ಕೊಡುಗೆ ನೀಡಿದೆ.

    ಹುಬ್ಬಳ್ಳಿ-ಬೆಂಗಳೂರು ಮಾರ್ಗದಲ್ಲಿ ಡಿಸೆಂಬರ್ 8ರಿಂದ ಪ್ರತಿನಿತ್ಯವೂ ಈ ವಿಶೇಷ ಸೂಪರ್ ಫಾಸ್ಟ್ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅದರಂತೆ ರೈಲು ಸಂಖ್ಯೆ: 20687 ಮತ್ತು 20688 SBC ಈ ಮಾರ್ಗದಲ್ಲಿ ನಿಯತಕಾಲಿಕವಾಗಿ ಸಂಚಾರ ಆರಂಭಿಸಲಿವೆ. ಇದನ್ನೂ ಓದಿ: ಜಾತಿಗಣತಿಯಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ

    ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಕೊಂಡಿಯಂತಿರುವ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಹೆಚ್ಚಿನ ಜನಸಂಪರ್ಕ ಇರುವುದರಿಂದ ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಕೆಲ ದಿನಗಳ ಹಿಂದಷ್ಟೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಸಚಿವ ಜೋಶಿ ಅವರ ಒತ್ತಾಸೆಗೆ ಸ್ಪಂದಿಸಿದ ರೈಲ್ವೆ ಸಚಿವರಿಬ್ಬರೂ ಇದೀಗ ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ಮತ್ತೊಂದು ಸೂಪರ್‌ ಫಾಸ್ಟ್‌ ವಿಶೇಷ ರೈಲು ಸಂಚಾರಕ್ಕೆ ಕ್ರಮ ಕೈಗೊಂಡಿದ್ದಾರೆ.

    ಈ ಸೂಪರ್‌ ಫಾಸ್ಟ್‌ ರೈಲು ಹುಬ್ಬಳ್ಳಿ, ಕರ್ಜಗಿ, ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಬಿರೂರು, ಅರಸಿಕೆರೆ, ಸಂಪಿಗೆ ರೋಡ್‌, ತುಮಕೂರು, ಯಶವಂತಪುರ ಮತ್ತು ಕೆಎಸ್‌ಆರ್‌ ಬೆಂಗಳೂರು ಮಧ್ಯೆ ಸಂಚರಿಸಲಿದೆ. ರಾಜಧಾನಿ ಮತ್ತು ಉತ್ತರ ಕರ್ನಾಟಕ ಮಾತ್ರವಲ್ಲದೆ, ಮಧ್ಯ ಕರ್ನಾಟಕಕ್ಕೂ ಸಂಪರ್ಕ ಸೇತುವಾಗಿದೆ. ಇದರಿಂದ ರಾಜ್ಯದ ಏಳೆಂಟು ಜಿಲ್ಲೆಗಳಿಗೂ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದನ್ನೂ ಓದಿ: 2027ರ ಏಪ್ರಿಲ್‌ನಲ್ಲಿ ಬೆಂಗಳೂರಲ್ಲಿ ಜೈಟೆಕ್ಸ್‌ ಗ್ಲೋಬಲ್‌ ಸಮ್ಮೇಳನ – ದುಬೈ ವರ್ಲ್ಡ್ ಟ್ರೇಡ್ ಸೆಂಟರ್ ಸಹಕಾರ: ಪ್ರಿಯಾಂಕ್‌ ಖರ್ಗೆ

    ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಈ ಹೊಸ ರೈಲು ಸಮಸ್ತ ಉತ್ತರ ಕರ್ನಾಟಕದ ಅಭಿವೃದ್ಧಿ ಜತೆಗೆ ವಿವಿಧ ಪ್ರದೇಶಗಳ ವಾಣಿಜ್ಯೋದ್ಯಮಕ್ಕೂ ಅನುಕೂಲವಾಗಲಿದೆ. ಹೀಗಾಗಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಹೊಸ ರೈಲು ಕಲ್ಪಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ವಿ.ಸೋಮಣ್ಣ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

  • Bengaluru | ದೇವೇಗೌಡರ ಆರೋಗ್ಯ ವಿಚಾರಿಸಿದ ಪ್ರಹ್ಲಾದ್ ಜೋಶಿ

    Bengaluru | ದೇವೇಗೌಡರ ಆರೋಗ್ಯ ವಿಚಾರಿಸಿದ ಪ್ರಹ್ಲಾದ್ ಜೋಶಿ

    ಬೆಂಗಳೂರು: ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ (Manipal Hospital) ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (HD Deve Gowda) ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

    ಈ ವೇಳೆ ದೇವೇಗೌಡರು ಜೋಶಿ ಅವರೊಂದಿಗೆ ಲವಲವಿಕೆಯಿಂದ ಮಾತನಾಡಿದರು. ಹಿರಿಯ ರಾಜಕೀಯ ಮುತ್ಸದ್ದಿ, ಮಾರ್ಗದರ್ಶಕರು ಆಗಿರುವ ದೇವೇಗೌಡರು ಶೀಘ್ರವೇ ಚೇತರಿಸಿಕೊಂಡು ಉತ್ತಮ ಆರೋಗ್ಯವಂತರಾಗಿರಲಿ ಎಂದು ಹಾರೈಸಿದರು. ಇದನ್ನೂ ಓದಿ: ಬಿಹಾರದಲ್ಲಿ ಸೀಟು ಹಂಚಿಕೆ ಇತ್ಯರ್ಥ – ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ

    ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಶರಣಗೌಡ ಕಂದಕೂರು ಉಪಸ್ಥಿತರಿದ್ದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ತಪ್ಪು ಕಲ್ಪನೆ ದೂರ ಮಾಡಲು ನಾವು ಸಿದ್ಧ: ಸಿ.ಟಿ.ರವಿ

  • ಅಹಮದಾಬಾದ್‌ನಲ್ಲಿ ಮುಖಾಮುಖಿ; ಗಗನಯಾನಿ ಶುಭಾಂಶು ಶುಕ್ಲಾ ಅಭಿನಂದಿಸಿದ ಸಚಿವ ಜೋಶಿ

    ಅಹಮದಾಬಾದ್‌ನಲ್ಲಿ ಮುಖಾಮುಖಿ; ಗಗನಯಾನಿ ಶುಭಾಂಶು ಶುಕ್ಲಾ ಅಭಿನಂದಿಸಿದ ಸಚಿವ ಜೋಶಿ

    ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ISS) ಯಶಸ್ವಿಯಾಗಿ ತಲುಪಿ ಇತಿಹಾಸ ಸೃಷ್ಟಿಸಿರುವ ಭಾರತೀಯ ಗಗನಯಾತ್ರಿ, ಐಎಎಫ್ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಂದು ಅಹಮದಾಬಾದ್‌ ಏರ್‌ಪೋರ್ಟ್‌ನಲ್ಲಿ ಮುಖಾಮುಖಿಯಾಗಿ ಪರಸ್ಪರ ಕುಶಲೋಪರಿ ವಿಚಾರಿಸಿದ್ರು.

    ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕ ಭೇಟಿಯಾದ ಇಬ್ಬರೂ ಕೆಲ ಕಾಲ ಪರಸ್ಪದ ಚರ್ಚೆ ನಡೆಸಿದರು. ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ಯಾನದ ಅನುಭವಗಳನ್ನ ಆಲಿಸಿದ ಸಚಿವ ಜೋಶಿ (Pralhad Joshi) ಹರ್ಷ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ದುಶ್ಯಂತ್-ಆಶಿಕಾ ನಟನೆಯ `ಗತವೈಭವ’ದ ಫಸ್ಟ್‌ ಸಾಂಗ್‌ ರಿಲೀಸ್

    Shubanshu Shukla 1

    ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶದಲ್ಲಿ ನಡೆಸಿದ ಮೊಳಕೆ ಕಾಳುಗಳ ಪ್ರಯೋಗವನ್ನು ಐಐಟಿ ಧಾರವಾಡ ಮತ್ತು ಯುಎಎಸ್ ಧಾರವಾಡ ಸಂಯೋಜಿಸಿ ರೂಪಿಸಿದ್ದರ ಬಗ್ಗೆ ಸಂತಸ ಹಂಚಿಕೊಂಡರು. ಇದನ್ನೂ ಓದಿ: ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಡ್ತಿರುವ ವೀಡಿಯೋ ರಿಲೀಸ್ ಮಾಡಿದ ಬಿಗ್‌ಬಾಸ್ ಟೀಂ

    ಶುಕ್ಲಾ ಅವರ ‎ಈ ಸ್ಫೂರ್ತಿದಾಯಕ ಪ್ರಯಾಣವು ಬಾಹ್ಯಾಕಾಶ ಯಾನದಲ್ಲಿ ಭಾರತದ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಅವರ ಸಾಧನೆಗೆ ಇಡೀ ಭಾರತವೇ ಹೆಮ್ಮೆಪಡುತ್ತದೆ ಎಂದು ಸಚಿವ ಜೋಶಿ ಇದೇ ವೇಳೆ ಸಂತಸ ವ್ಯಕ್ತಪಡಿಸುತ್ತಾ ಶುಕ್ಲಾರನ್ನ ಅಭಿನಂದಿಸಿದರು. ಇದನ್ನೂ ಓದಿ: ಕಾರವಾರ| ಸ್ನೇಹಿತರೊಂದಿಗೆ ಈಜಲು ಹೋಗಿ ನೀರು ಪಾಲಾಗಿದ್ದ ಯುವಕನ ಶವ ಪತ್ತೆ

  • 124 ರಾಷ್ಟ್ರಗಳ ಅಂತಾರಾಷ್ಟ್ರೀಯ ಸೌರ ಒಕ್ಕೂಟದ 8ನೇ ಅಧಿವೇಶನ: ಪ್ರಹ್ಲಾದ್‌ ಜೋಶಿ

    124 ರಾಷ್ಟ್ರಗಳ ಅಂತಾರಾಷ್ಟ್ರೀಯ ಸೌರ ಒಕ್ಕೂಟದ 8ನೇ ಅಧಿವೇಶನ: ಪ್ರಹ್ಲಾದ್‌ ಜೋಶಿ

    * ಅ.27ರಿಂದ 30ರವರೆಗೆ ನವದೆಹಲಿಯಲ್ಲಿ ಆಯೋಜನೆ
    * 125 GW ಸೌರಶಕ್ತಿ ಸಾಮರ್ಥ್ಯದೊಂದಿಗೆ ಭಾರತ ಮುನ್ನಡೆ

    ನವದೆಹಲಿ: ದೆಹಲಿಯಲ್ಲಿ ಅ.27ರಿಂದ 30ರವರೆಗೆ ಅಂತಾರಾಷ್ಟ್ರೀಯ ಸೌರ ಒಕ್ಕೂಟ (ISA)ದ 8ನೇ ಅಧಿವೇಶನವನ್ನು ಭಾರತ ಆಯೋಜಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಹಾಗೂ ಐಎಸ್ಎ ಅಧ್ಯಕ್ಷ ಪ್ರಹ್ಲಾದ್‌ ಜೋಶಿ ತಿಳಿಸಿದರು.

    ಇಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ನಾಲ್ಕು ದಿನಗಳ ಕಾಲ ನವದೆಹಲಿಯ ಭಾರತ್ ಮಂಟಪದಲ್ಲಿ ಈ ಅಧಿವೇಶನ ಏರ್ಪಡಿಸಿದ್ದು, ಸೌರಶಕ್ತಿ ಉತ್ಪಾದನೆ-ಬಳಕೆ ನಿಟ್ಟಿನಲ್ಲಿ ಜಗತ್ತಿನ ಪ್ರಯತ್ನವನ್ನು ಒಂದೇ ವೇದಿಕೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಹೇಳಿದರು.

    ಭಾರತ ಮತ್ತು ಫ್ರಾನ್ಸ್‌ನಿಂದ ಪ್ರಾರಂಭಿಸಲ್ಪಟ್ಟ ISA ಜಾಗತಿಕವಾಗಿ ದಕ್ಷಿಣದ ಅತಿದೊಡ್ಡ ಒಪ್ಪಂದ ಆಧಾರಿತ ಸರ್ಕಾರಿ ಸಂಸ್ಥೆಯಾಗಿದ್ದು, 124 ಸದಸ್ಯ ರಾಷ್ಟ್ರಗಳು ಮತ್ತು ಸಹಿ ಮಾಡಿದ ದೇಶಗಳನ್ನು ಈ ಅಧಿವೇಶನ ಒಟ್ಟುಗೂಡಿಸುತ್ತದೆ ಎಂದರು.

    2018 ರಲ್ಲಿ ನಡೆದ ಮೊದಲ ISA ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ನೆನಪಿಸಿಕೊಂಡ ಸಚಿವರು, ‘ಒಂದು ಸೂರ್ಯ, ಒಂದು ಪ್ರಪಂಚ, ಒಂದು ಗ್ರಿಡ್’ (OSOWOG) ಅನ್ನು ಮುನ್ನಡೆಸುವ ಮೂಲಕ ಸೌರ ನಿಯೋಜನೆಯನ್ನು ಹೆಚ್ಚಿಸುವಲ್ಲಿ ISA ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಭಾರತ ವಿಶ್ವಸಾರ್ಹ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.

    ಭಾರತ 125 GW ಸೌರಶಕ್ತಿ ಸಾಮರ್ಥ್ಯ: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ತನ್ನ ನವೀಕರಿಸಬಹುದಾದ ಇಂಧನ ಗುರಿಗಳನ್ನು 5 ವರ್ಷಗಳ ಮೊದಲೇ ಸಾಧಿಸಿದೆ. ಪಳೆಯುಳಿಕೆಯೇತರ ಸಂಪನ್ಮೂಲಗಳಿಂದ ಒಟ್ಟಾರೆ ಸ್ಥಾಪಿತ ವಿದ್ಯುತ್ ಸಾಮರ್ಥ್ಯದಲ್ಲಿ ಶೇ.50 ದಾಟಿದೆ. ಇಂದು ಸರಿಸುಮಾರು 125 GW ಸೌರಶಕ್ತಿ ಸಾಮರ್ಥ್ಯದೊಂದಿಗೆ ಭಾರತ ವಿಶ್ವದ ಮೂರನೇ ಅತಿದೊಡ್ಡ ಸೌರ ಉತ್ಪಾದಕ ರಾಷ್ಟ್ರವಾಗಿದೆ ಎಂದು ಪ್ರತಿಪಾದಿಸಿದರು.

    ‘ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ’ ಮೂಲಕ ದೇಶದಲ್ಲಿ 20 ಲಕ್ಷಕ್ಕೂ ಹೆಚ್ಚು ಮನೆಗಳು ಸೌರಶಕ್ತಿಯಿಂದ ಬೆಳಕು ಕಂಡಿವೆ. ಅಲ್ಲದೇ, PM-KUSUM ಯೋಜನೆಯಡಿ 3.5 ಮಿಲಿಯನ್ ಗ್ರಿಡ್-ಸಂಪರ್ಕಿತ ಕೃಷಿ ಪಂಪ್‌ಗಳನ್ನು ಸೌರೀಕರಣಗೊಳಿಸಲಾಗುತ್ತಿದೆ ಎಂದರು.

    ಪಿಎಂ ಕುಸುಮ್‌ ಯೋಜನೆ ಮೂರು ಘಟಕಗಳು 10 ಗಿಗಾವ್ಯಾಟ್‌ ಸಣ್ಣ ಸೌರ ಸ್ಥಾವರಗಳ ಸ್ಥಾಪನೆಯನ್ನು ಗುರಿಯಾಗಿಸಿಕೊಂಡಿದೆ. 1.4 ಮಿಲಿಯನ್ ಆಫ್-ಗ್ರಿಡ್ ಸೌರ ಪಂಪ್‌ಗಳನ್ನು ಬೆಂಬಲಿಸುತ್ತಿದೆ. ನಮ್ಮ ಈ ಪ್ರಯತ್ನಗಳು ಭಾರತದ ಶುದ್ಧ ಇಂಧನ ಪರಿವರ್ತನೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಹೇಳಿದರು.

    ಕೇಂದ್ರ ಇಂಧನ ಸಚಿವಾಲಯದ ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ ಮಾತನಾಡಿ, ನಾವಿಂದು ಸೌರಶಕ್ತಿಯಲ್ಲಿ 3ನೇ ಅತಿದೊಡ್ಡ, ಪವನ ವಿದ್ಯುತ್‌ನಲ್ಲಿ 4ನೇ ಅತಿದೊಡ್ಡ ಹಾಗೂ ವಿಶ್ವದ 3ನೇ ಅತಿದೊಡ್ಡ ನವೀಕರಿಸಬಹುದಾದ ಇಂಧನ ಶಕ್ತಿ ಹೊಂದಿದ್ದೇವೆ ಎಂದು ಹೇಳಿದರು.

    ಸೌರ ಮಾಡ್ಯೂಲ್‌ ತಯಾರಿಕೆಯಲ್ಲಿ ಭಾರತ ಸೆಕೆಂಡ್‌: ಸೌರ ಮಾಡ್ಯೂಲ್‌ಗಳ ತಯಾರಿಕೆಯಲ್ಲಿ ಚೀನಾ ನಂತರದ ಎರಡನೇ ಅತಿದೊಡ್ಡ ರಾಷ್ಟ್ರವಾಗಿದೆ ಭಾರತ. ನಮ್ಮ ಉತ್ಪಾದನೆ ಸೌರ ಮಾಡ್ಯೂಲ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ, ಹಸಿರು ಹೈಡ್ರೋಜನ್‌ನಂತಹ ಪ್ರದೇಶಗಳಿಗೂ ವಿಸ್ತರಿಸುತ್ತದೆ. 2031ರ ವೇಳೆಗೆ 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸುವ ಗುರಿಯೊಂದಿಗೆ ಮುನ್ನಡೆದಿದ್ದೇವೆ ಎಂದರು.

    ನವೀಕರಿಸಬಹುದಾದ ಇಂಧನ ವಲಯ ಜಾಗತಿಕವಾಗಿ ಬದಲಾವಣೆಯ ಹಂತದಲ್ಲಿದೆ. ತೈಲವು 1,000 GW ತಲುಪಲು 25 ವರ್ಷಗಳನ್ನು ತೆಗೆದುಕೊಂಡರೆ, ನವೀಕರಿಸಬಹುದಾದ ಇಂಧನ ಕೇವಲ ಎರಡೇ ವರ್ಷಗಳಲ್ಲಿ ಅದನ್ನು ದ್ವಿಗುಣಗೊಳಿಸಿತು ಎಂದರು.

  • ಜಿಎಸ್‌ಟಿ ಸಂಬಂಧಿತ 3,900ಕ್ಕೂ ಅಧಿಕ ಸಂಶಯಗಳ ನಿವಾರಣೆ: ಜೋಶಿ

    ಜಿಎಸ್‌ಟಿ ಸಂಬಂಧಿತ 3,900ಕ್ಕೂ ಅಧಿಕ ಸಂಶಯಗಳ ನಿವಾರಣೆ: ಜೋಶಿ

    – ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ‘1915’; 17 ಭಾಷೆಗಳಲ್ಲಿ ದೂರು ಸ್ವೀಕಾರ

    ನವದೆಹಲಿ: ಕೇಂದ್ರ ಸರ್ಕಾರ ‘Next Gen Gst’ ಸಂಬಂಧಿತ ಪ್ರಶ್ನೆ ಮತ್ತು ದೂರುಗಳನ್ನು ಪರಿಹರಿಸಲೆಂದು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (National Consumer Helpline) ತೆರೆದಿದ್ದು, ಈಗಾಗಲೇ 3,900ಕ್ಕೂ ಹೆಚ್ಚು ಸಂಶಯಗಳನ್ನು ನಿವಾರಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ.

    ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ, ರಾಷ್ಟ್ರೀಯ ಗ್ರಾಹಕ ಸಹಾಯವಾಣಿ 1,915 ತೆರೆದಿದ್ದಲ್ಲದೆ, UMANG ಆಪ್, ವಾಟ್ಸಪ್ ಮತ್ತು ಎಸ್‌ಎಮ್‌ಎಸ್ ಮೂಲಕ ಪ್ರಶ್ನೆ ಮತ್ತು ದೂರುಗಳನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. 17 ಭಾಷೆಗಳಲ್ಲಿ ಸಾರ್ವಜನಿಕರು ದೂರು-ಸಂಶಯಗಳನ್ನು ಸಿಸಿಪಿಎ ಗಮನಕ್ಕೆ ತರಬಹುದಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ದಸರಾ | ಜಂಬೂ ಸವಾರಿಗೆ ಅದ್ದೂರಿ ಚಾಲನೆ

    ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಈಗಾಗಲೇ ಜಿಎಸ್‌ಟಿ ಸಂಬಂಧಿತ ಕುಂದು-ಕೊರತೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಪ್ರತಿಯೊಬ್ಬ ಗ್ರಾಹಕರ ಹಿತರಕ್ಷಣೆ ಕಾಪಾಡುವಲ್ಲಿ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದು, ವ್ಯವಹಾರ-ವಹಿವಾಟುಗಳಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಶೇ.1ರಷ್ಟು ಮೀಸಲಾತಿಗೆ ಆಗ್ರಹ – ದೆಹಲಿಯ ಜಂತರ್ ಮಂತರ್‌ನಲ್ಲಿ ಅಲೆಮಾರಿ ಸಮುದಾಯದಿಂದ ಪ್ರತಿಭಟನೆ

    3981 ಸಂಶಯಗಳ ನಿವಾರಣೆ: ‘Next Gen Gst’ ಬಗ್ಗೆ ಗ್ರಾಹಕರಿಗಿರುವ ತಪ್ಪು ಮಾಹಿತಿಯನ್ನು ದೂರ ಮಾಡುವ ಜೊತೆಗೆ ಜಿಎಸ್‌ಟಿ ಸುಧಾರಣೆಗಳ ಪ್ರಯೋಜನವನ್ನು ಪ್ರತಿಯೊಬ್ಬ ಭಾರತೀಯರಿಗೆ ತಲುಪಿಸುವಲ್ಲಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಮಹತ್ವದ ಹೆಜ್ಜೆಯಿರಿಸಿದೆ. ಈಗಾಗಲೇ 3,981 ಸಂಶಯಗಳನ್ನು ಸ್ವೀಕರಿಸಿ ನಿವಾರಿಸಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಇದನ್ನೂ ಓದಿ: ಸಾಲು ಸಾಲು ರಜೆ ಎಫೆಕ್ಟ್‌ – ಶಿರಾಡಿಘಾಟ್ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌, ಹೈರಾಣದ ಪೊಲೀಸರು!

  • 57 ಹೊಸ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಕೇಂದ್ರ ಅಸ್ತು

    57 ಹೊಸ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಕೇಂದ್ರ ಅಸ್ತು

    – ದೇಶಾದ್ಯಂತ 5,862 ಕೋಟಿ ಅಂದಾಜು ವೆಚ್ಚದಲ್ಲಿ ಹೊಸ ಕೆ.ವಿ.ಗಳಿಗೆ ಅನುಮೋದನೆ

    ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಮಕ್ಕಳಿಗೆ ದಸರಾ ಹಬ್ಬದ ಕೊಡುಗೆ ಎನ್ನುವಂತೆ 57 ಕೇಂದ್ರೀಯ ವಿದ್ಯಾಲಯಗಳ (Kendriya Vidyalaya) ಸ್ಥಾಪನೆಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ, 2026-27ರಿಂದ 9 ವರ್ಷಗಳ ಅವಧಿಯಲ್ಲಿ 5862.55 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಒಟ್ಟು 57 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲು ಒಪ್ಪಿಗೆ ಸೂಚಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಮೆರಿಕ ಶಟ್‌ಡೌನ್‌ -7.50 ಲಕ್ಷ ನೌಕರರಿಗೆ ವೇತನರಹಿತ ಕಡ್ಡಾಯ ರಜೆ!

    ಕೇಂದ್ರ ಸರ್ಕಾರಿ ನೌಕರರ ಮಕ್ಕಳ ಶೈಕ್ಷಣಿಕ ಅಗತ್ಯತೆ ಪೂರೈಸಲು ಬದ್ಧವಾಗಿ ಕೇಂದ್ರ ಸರ್ಕಾರ ಈ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ. ನೂತನ ವಿದ್ಯಾಲಯಗಳನ್ನು ತೆರೆಯಲು 585.52 ಕೋಟಿ ಬಂಡವಾಳ ವೆಚ್ಚ ಮತ್ತು 3277.03 ಕೋಟಿ ಕಾರ್ಯಾಚರಣೆ ವೆಚ್ಚವನ್ನು ಅಂದಾಜಿಸಿದೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಕೆಮ್ಮಿನ ಸಿರಪ್ ಸೇವನೆ – 15 ದಿನಗಳ ಅಂತರದಲ್ಲಿ ಕಿಡ್ನಿ ವೈಫಲ್ಯದಿಂದ 6 ಮಕ್ಕಳು ಸಾವು

    ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಮಾದರಿ ಶಾಲೆಗಳಾಗಿ ಮೊದಲ ಬಾರಿಗೆ ಈ 57 ಕೇಂದ್ರೀಯ ವಿದ್ಯಾಲಯಗಳನ್ನು ಬಾಲವಟಿಕಾಗಳೊಂದಿಗೆ ಮಂಜೂರು ಮಾಡಲಾಗಿದೆ. ಈ ಮೂಲಕ ರಕ್ಷಣಾ ಮತ್ತು ಅರೆಸೈನಿಕ ಪಡೆಗಳು ಸೇರಿದಂತೆ ಕೇಂದ್ರ ಸರ್ಕಾರದ ನೌಕರರ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ದೇಶಾದ್ಯಂತ ಏಕರೂಪದ ಗುಣಮಟ್ಟದ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ರಾಮಚಂದ್ರ ಗುಹಾಗೆ ರಾಜ್ಯ ಸರ್ಕಾರದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

    ಮಾಸ್ಕೋ, ಕಠ್ಮಂಡು ಮತ್ತು ಟೆಹ್ರಾನ್ ಸೇರಿದಂತೆ 3 ವಿದೇಶಗಳಲ್ಲಿ ಸಹ ಒಟ್ಟು 1,288 ಕ್ರಿಯಾತ್ಮಕ ಕೇಂದ್ರೀಯ ವಿದ್ಯಾಲಯಗಳಿದ್ದು, 2025ರ ಜೂನ್ ಅಂತ್ಯದ ವೇಳೆಗೆ ಅಂದಾಜು 13.62 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರ 85 ಕೇಂದ್ರೀಯ ವಿದ್ಯಾಲಯಗಳನ್ನು ನೀಡಿತ್ತು. ಇದೀಗ ಹೆಚ್ಚಿನ ಬೇಡಿಕೆ, ಪ್ರಸ್ತಾವನೆಗಳಿರುವುದರಿಂದ ಮತ್ತೆ 57 ಹೆಚ್ಚುವರಿ ವಿದ್ಯಾಲಯಗಳನ್ನು ಮಂಜೂರು ಮಾಡಿದೆ ಎಂದಿದ್ದಾರೆ. ಇದನ್ನೂ ಓದಿ: ದಸರಾ ಜಂಬೂಸವಾರಿಗೆ ಕೌಂಟ್ ಡೌನ್ – ಭರದಿಂದ ಸಾಗಿದ ತಯಾರಿ

    ಸಿಸಿಇಎ ಗೃಹ ಸಚಿವಾಲಯ ಪ್ರಾಯೋಜಿಸಿದ 7 ಕೆ.ವಿ.ಗಳು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರಾಧಿಕಾರಗಳು ಅನುಮೋದಿಸಿದ ಉಳಿದ 50 ಕೆ.ವಿ.ಗಳನ್ನು ತೆರೆಯಲು ಕೇಂದ್ರ ಅನುಮತಿ ನೀಡಿದೆ. 2024ರಲ್ಲಿ ಮಂಜೂರಾದ 85 ಕೆ.ವಿ.ಗಳೊಂದಿಗೆ ಇವುಗಳ ಸ್ಥಾಪನೆ ಸಹ ಮುಂದುವರಿಯುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಯುವತಿ ಮೇಲೆ ಗ್ಯಾಂಗ್ ರೇಪ್ – ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಅರೆಸ್ಟ್

    17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಾಗೂ ಕೆ.ವಿ.ಗಳಿಲ್ಲದ 20 ಜಿಲ್ಲೆಗಳಲ್ಲಿ ತೆರೆಯಲು ಪ್ರಸ್ತಾಪಿಸಲಾಗಿದೆ. ಇದಲ್ಲದೆ, ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ 14 ಕೆ.ವಿ.ಗಳನ್ನು, ಎಲ್‌ಡಬ್ಲ್ಯೂಇ ಜಿಲ್ಲೆಗಳಲ್ಲಿ 4 ಕೆ.ವಿ.ಗಳು ಮತ್ತು ಎನ್‌ಇಆರ್/ಗುಡ್ಡಗಾಡು ಪ್ರದೇಶಗಳಲ್ಲಿ 5 ಕೆ.ವಿ.ಗಳನ್ನು ತೆರೆಯಲಾಗುತ್ತಿದೆ. ಕಳೆದ ಬಾರಿ ನೀಡದ ರಾಜ್ಯಗಳಿಗೆ ಈ ಸಲ ಆದ್ಯತೆ ನೀಡಲಾಗಿದೆ ಎಂದು ಸಚಿವ ಜೋಶಿ ಹೇಳಿದ್ದಾರೆ. ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್‌ – ಡಿಎ 3% ಏರಿಕೆ

    86 ಸಾವಿರ ವಿದ್ಯಾರ್ಥಿಗಳಿಗೆ ಪ್ರಯೋಜನ: ಕೇಂದ್ರೀಯ ವಿದ್ಯಾಲಯಗಳನ್ನು ತೆರಿದಿರುವುದರಿಂದ ದೇಶಾದ್ಯಂತ 86,640 ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಾರೆ. (ಬಾಲವಟಿಕದಿಂದ 12ನೇ ತರಗತಿವರೆಗೆ) 81 ಜನಕ್ಕೆ ಉದ್ಯೋಗ ಸಹ ಒದಗಿಸುತ್ತದೆ ಅಲ್ಲದೇ, 57 ಹೊಸ ಕೆ.ವಿ.ಗಳ ಅನುಮೋದನೆಯಿಂದ ಒಟ್ಟು 4617 ನೇರ ಶಾಶ್ವತ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಮುಂದಿನ ವರ್ಷವೂ ಯಾಕೆ ಪುಷ್ಪಾರ್ಚನೆ ಮಾಡಬಾರದು? Hope So ನಾನೇ ಮಾಡಬಹುದು: ಸಿಎಂ

    913 ಕೆವಿಗಳು ಪಿಎಂಶ್ರೀ ಶಾಲೆ: ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಸಾರವಾಗಿ 913 ಕೆ.ವಿ.ಗಳನ್ನು ಪಿ.ಎಂ.ಶ್ರೀ ಶಾಲೆಗಳೆಂದು ಗೊತ್ತುಪಡಿಸಲಾಗಿದೆ. ಪ್ರತಿ ವರ್ಷ ಕೆ.ವಿ.ಗಳಲ್ಲಿ ಬಾಲವಟಿಕಾ 1ನೇ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರೂರ್ ಕಾಲುಳ್ತಿತ ದುರಂತ; 2 ವಾರ ತಮಿಳುನಾಡು ಪ್ರವಾಸ ರದ್ದಗೊಳಿಸಿದ ವಿಜಯ್