Tag: Prakash Rai

  • ವಿಚಾರವಾದಿಗಳು ದ್ರೋಣಾಚಾರ್ಯರಾದರೆ ನಾನೊಬ್ಬ ಏಕಲವ್ಯ: ಪ್ರಕಾಶ್ ರೈ

    ವಿಚಾರವಾದಿಗಳು ದ್ರೋಣಾಚಾರ್ಯರಾದರೆ ನಾನೊಬ್ಬ ಏಕಲವ್ಯ: ಪ್ರಕಾಶ್ ರೈ

    ಚಿತ್ರದುರ್ಗ: ವಿಚಾರವಾದಿಗಳು ದ್ರೋಣಾಚಾರ್ಯರಾದರೆ ನಾನೊಬ್ಬ ಏಕಲವ್ಯನೆಂದು ಬಹುಭಾಷಾ ನಟ ಪ್ರಕಾಶ ರೈ ಹೇಳಿದ್ದಾರೆ.

    ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿಯಲ್ಲಿ ನಡೆಯುತ್ತಿರೋ ರಾಷ್ಟ್ರೀಯ ನಾಟಕೋತ್ಸವಕ್ಕೆ ಕಂಸಾಳೆ ಬಾರಿಸುತ್ತಾ, ಆ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಮೂಲಕ ಚಾಲನೆ ನೀಡಿ ಪ್ರಕಾಶ್ ರೈ ಮಾತನಾಡಿದರು.

    ಮುಕ್ತ ವಿಚಾರ, ಸಾಹಿತಿಗಳು ಹಾಗು ಬಸವಣ್ಣನವರಂತಹ ಹೋರಾಟಗಾರರನ್ನು ನನಗೆ ಮೊದಲು ಪರಿಚಯಿಸಿದ್ದು ಈ ರಂಗಭೂಮಿ. ನನ್ನಲ್ಲಿ ಮಾನವೀಯ ಮೌಲ್ಯಗಳನ್ನು ಸೃಷ್ಟಿಸಿ, ಇಷ್ಟೊಂದು ಎತ್ತರಕ್ಕೆ ಬೆಳೆಸುವಲ್ಲಿ ಈ ರಂಗಭೂಮಿಯ ಕೊಡುಗೆ ಅಪಾರ ಎಂದು ಸ್ಮರಿಸಿದರು.

    ಒಂದು ಕಾಲದಲ್ಲಿ ಆಯುಧಗಳಿಗೆ ಸಾಣೆ ಹಿಡಿಯುತಿದ್ದ ಈ ಹಳ್ಳಿ ಇಂದು ರಂಗ ಕಲಾವಿದರ ಮನಸುಗಳಿಗೆ ಸಾಣೆ ಹಿಡಿಯುತ್ತಾ ಸಾಣಿಹಳ್ಳಿ ಯಾಗಿದೆ ಅಂತ ಕೂಡ ಬಣ್ಣಿಸಿದರು. ಈ ಸಮಾರಂಭದ ದಿವ್ಯಸಾನಿಧ್ಯವನ್ನು ತರಳುಬಾಳು ಶಾಖಾಮಠದ ಪಂಡಿತಾರಾದ್ಯ ಶ್ರೀಗಳು ವಹಿಸಿದ್ದೂ, ಕೇಂದ್ರ ಕೌಶಲ್ಯಭಿವೃದ್ಧಿ ಖಾತೆ ಸಚಿವ ಅನಂತ ಕುಮಾರ್ ಹೆಗ್ಡೆ,ಸಮಾಜಕಲ್ಯಾಣ ಸಚಿವ ಹೆಚ್.ಆಂಜನೇಯ, ತೋಟಗಾರಿಕಾ ಹಾಗು ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಗಣ್ಯರು ಭಾಗಿಯಾಗಿದ್ರು.

  • ಜಿಎಸ್‍ಟಿಗೆ ಪ್ರಕಾಶ್ ರೈ ವಿರೋಧ ಯಾಕೆ?- ಈ ಸ್ಟೋರಿ ಓದಿ

    ಜಿಎಸ್‍ಟಿಗೆ ಪ್ರಕಾಶ್ ರೈ ವಿರೋಧ ಯಾಕೆ?- ಈ ಸ್ಟೋರಿ ಓದಿ

    ಬೆಂಗಳೂರು: ಕಳೆದ ಐದು ದಿನಗಳಿಂದ ಹಿರಿಯ ರಂಗಕರ್ಮಿ ಪ್ರಸನ್ನ ಅವರು ಕೈ ಉತ್ಪನ್ನಗಳನ್ನ ತೆರಿಗೆಯಿಂದ ಮುಕ್ತಗೂಳಿಸಬೇಕು ಅಂತ ನಗರದಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದು, ಇದೀಗ ಈ ಸತ್ಯಾಗ್ರಹಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಕೈ ಜೋಡಿಸಿದ್ದಾರೆ.

    ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದು ಜಿಎಸ್‍ಟಿ ಅನ್ನೋದು ನಿಜವಾದ ಗ್ರಾಮೀಣ ಪ್ರದೇಶದಲ್ಲಿ ಸರಿಯಲ್ಲ. ಅವರವರ ವರಮಾನದಲ್ಲಿ ಸಮಾನತೆ ಇಲ್ಲದಿದ್ದರೆ ಏನು ಪ್ರಯೋಜನ? ಯಾಕಂದ್ರೆ ಗ್ರಾಮೀಣ ಭಾಗದಲ್ಲಿ ಸಮಾನ ಅದಾಯ ಇರುವುದಿಲ್ಲ. ಹಲವು ಸರ್ಕಾರಗಳು ಗ್ರಾಮೀಣ ಭಾಗದ ಜನರನ್ನು, ಬುಡಕಟ್ಟು ಜನರನ್ನು, ಅದಿವಾಸಿಗಳನ್ನು ಕಡೆಗಣಿಸುತ್ತಿದ್ದಾರೆ. ಬಡವರಿಗೆ, ಹಿಂದುಳಿದವರಿಗೆ ಜಿಎಸ್‍ಟಿಯಿಂದ ವಿನಾಯಿತಿಯನ್ನು ನೀಡಬೇಕು. ಹೆಚ್ಚಾಗಿ ಗ್ರಾಮೀಣ ಪ್ರದೇಶವಿರುವ ಭಾರತ ದೇಶದಲ್ಲಿ ಎಷ್ಟರಮಟ್ಟಿಗೆ ಒಂದು ಸಮಾನವಾದ ತೆರಿಗೆ ನಿಯಮವನ್ನು ಒಪ್ಪಿಕೊಳ್ಳಲಾಗುತ್ತದೆ? ಅವರವರ ವರಮಾನದಲ್ಲಿ ಸಮಾನತೆ ಇಲ್ಲದಿದ್ದರೆ ಏನು ಪ್ರಯೋಜನ? ಅಂತ ಹೇಳಿದ್ರು.

    ಗ್ರಾಮೀಣ ಜನರನ್ನ ಕಡೆಗಣಿಸ್ತಿದ್ದಾರೆ: 1930ರ ಕಾಲದಲ್ಲಿ ಬ್ರಿಟೀಷರು ಉಪ್ಪಿಗೆ ತೆರಿಗೆ ಹಾಕಿದ್ರು. ಅದಾದ ನಂತರ ಬಂದ ಎಲ್ಲಾ ಸರ್ಕಾರಗಳು ಬ್ರಿಟೀಷರಂತೆ ಕೆಲಸ ಮಾಡುತ್ತಿವೆ. ಇವತ್ತ್ಯಾಕೆ ಇದೊಂದು ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಿದೆ ಅಂದ್ರೆ ಸಾಕಷ್ಟು ವರ್ಷಗಳಿಂದ ಬಂದಂತಹ ಯಾವುದೇ ಸರ್ಕಾರಗಳು ಕೂಡ ನಮ್ಮ ರೈತರು, ಆದಿವಾಸಿಗಳು ಹಾಗೂ ಗ್ರಾಮೀಣ ಪ್ರದೇಶದ ಜನರನ್ನು ಕಡೆಗಣಿಸುತ್ತಲೇ ಬಂದಿವೆ ಅನ್ನೋದನ್ನ ನಾವು ಒಪ್ಪಿಕೊಳ್ಳಲೇಬೇಕು ಅಂದ್ರು.

    ಕೈ ಉತ್ಪನ್ನಗಳು ಏನು ಅನ್ನೋದರ ಬಗ್ಗೆ ಒಂದು ಸ್ಪಷ್ಟವಾದ ಪರಿಕಲ್ಪನೆ ಇಲ್ಲದಂತಹ ಸರ್ಕಾರಗಳು ಇಂದು ನಮ್ಮ ದೇಶವನ್ನು ಆಳುತ್ತಾ ಇವೆ. ಬ್ರಿಟೀಷರು ನಮ್ಮ ದೇಶಕ್ಕೆ ಬರೋದಕ್ಕಿಂತಲೂ ಮೊದಲು ನಮ್ಮ ದೇಶದಲ್ಲಿ ಯಂತ್ರಗಳಿರಲಿಲ್ಲ. ಆ ಸಂದರ್ಭದಲ್ಲಿ ನಾವು ನಮ್ಮ ಕೈಯಿಂದ ಉತ್ಪನ್ನವಾದ ವಸ್ತುಗಳನ್ನೇ ಬಳಸುತ್ತಾ ಇದ್ದೆವು ಮತ್ತು ಅದನ್ನೇ ಬೇರೆ ದೇಶಕ್ಕೆ ರಫ್ತು ಮಾಡುತ್ತಿದ್ದೆವು. ಆ ಕಾಲದಲ್ಲಿಯೇ ನಾವು ಇಷ್ಟೊಂದು ಬಡವರಾಗಿರಲಿಲ್ಲ. ಕೈ ಉತ್ಪನ್ನಗಳು ಮತ್ತು ಗ್ರಾಮೀಣ ಬದುಕನ್ನು ನೋಡಬೇಕಾದ್ರೆ ಅದು ಕೇವಲ ಹಣಕಾಸಿಗಾಗಿ ಮಾತ್ರವಲ್ಲ. ಅದು ಅವರ ಅಸ್ತಿತ್ವ, ನಮ್ಮ ಸಂಸ್ಕೃತಿ, ಬದುಕಿನ ರೀತಿ. ಜ್ಞಾನ, ಕೊಂಡಾಟ ಹಾಗೂ ನಮ್ಮ ಸಂಭ್ರಮವನ್ನು ಹೇಳಿಕೊಳ್ಳುವಂತಹ ಒಂದು ರೈತ ಬದುಕು ಕಟ್ಟುವ ರೀತಿಯಾಗಿದೆ. ಹೀಗಿದ್ದಂತಹ ಸಂದರ್ಭದಲ್ಲಿ ಬ್ರಿಟೀಷರು ಇಲ್ಲಿಗೆ ಬಂದು ಅವರ ಯಂತ್ರಗಳನ್ನು ಇಲ್ಲಿಗೆ ತಂದು, ಅದರಿಂದ ಉತ್ಪಾದಿಸಿ, ನಮ್ಮ ಗ್ರಾಮೀಣ ಜನರ ಕೈ ಉತ್ಪನ್ನಗಳನ್ನು ಕಡಿಮೆ ಮಾಡಿ ವಿದೇಶಗಳಿಂದ ನಾವೇ ವಸ್ತುಗಳನ್ನು ಆಮದು ಮಾಡಿಕೊಳ್ಳುವಂತೆ ಮಾಡಿದ್ದಾರೆ ಅಂದ್ರು.

    ಜಿಎಸ್‍ಟಿಯಿಂದ ಸೋಲು: ಇಂದಿನ ಬಿಜೆಪಿ ಸರ್ಕಾರ ಕೂಡ ಈ ಹಿಂದಿನ ಸರ್ಕಾರಗಳಂತೆ ಅದನ್ನೇ ಮುಂದುವರೆಸಿಕೊಂಡು ಬಂದಿದೆ. ಇಂದು ನಾವು ಈ ಹೋರಾಟ ಮಾಡುವ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ನಮ್ಮ ಮುಂದಿದೆಯಷ್ಟೆ. ಇವರು ಇನ್ನೂ ದೊಡ್ಡ ತಪ್ಪು ಮಾಡಿದ್ದಾರೆ ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಕೈ ಉತ್ಪನ್ನಗಳನ್ನ ತೆರಿಗೆ ಮುಕ್ತಗೊಳಿಸಬೇಕು ಅನ್ನೋ ನಿಟ್ಟಿನಲ್ಲಿ ಪ್ರಸನ್ನ ಅವರು ಕಳೆದ 5 ದಿನಗಳಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಜಿಎಸ್‍ಟಿಗೆ ವಿರೋಧ ವ್ಯಕ್ತಪಡಿಸಲೇಬೇಕು. ಇಂದು ಜಿಎಸ್‍ಟಿ ಎಲ್ಲರಿಗೂ ಸಮಾನ ತೆರಿಗೆ. ಯಾವ ಒಂದು ದೊಡ್ಡ ದೃಷ್ಟಿಕೋನದಿಂದ ಮಾಡಿದ್ರೋ? ಇದ್ರಿಂದ ಸೋಲುಂಟಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ದೊಡ್ಡ ದೊಡ್ಡ ಕಂಪನಿಗಳಿಗೆ ಒಂದೇ ಟ್ಯಾಕ್ಸ್. ಒಬ್ಬ ಸಾಮಾನ್ಯ ಮನುಷ್ಯನಿಗೂ ಅದೇ ಟ್ಯಾಕ್ಸ್ ಆದ್ರೆ ಹೇಗೆ ಬದುಕಲು ಸಾಧ್ಯ. ಸಾಮಾನ್ಯ ವ್ಯಕ್ತಿಯ ಉತ್ಪನನ್ನಗಳಿಗೆ ಬೆಲೆ ಕೊಡ್ತಾ ಇಲ್ಲ. ಆತನಿಗೆ ಉದ್ಯೋಗಾವಕಶವನ್ನು ಕೊಡ್ತಾ ಇಲ್ಲ. ಈಗಾಗಲೇ ಯಾಂತ್ರೀಕರಣದಿಂದ ಒದ್ದಾಡುತ್ತಿರೋ ಹೊತ್ತಲ್ಲಿ ಆತನ ಮೇಲೆ ಈ ಜಿಎಸ್‍ಟಿ ಯನ್ನು ಹಾಕಿ ತುಳಿದರೆ ಈ ದೇಶ ಏನಾಗಬೇಕು ಅಂತ ಹೇಳಿದ್ರು.

    ಇದೇ ವೇಳೆ ಮಾತನಾಡಿದ ರಂಗಕರ್ಮಿ ಪ್ರಸನ್ನ, ಜಿಎಸ್‍ಟಿ ತೆರಿಗೆ ಜಾರಿಗೆ ತರುವ ಮೊದಲು ಅವರು ಕೈ ಉತ್ಪನ್ನಗಳನ್ನು ಪರಿಗಣಿಸಲೇ ಇಲ್ಲ. ಕೈ ಉತ್ಪನ್ನ ಅನ್ನೋ ವ್ಯಾಖ್ಯಾನವೇ ಇಡೀ ಜಿಎಸ್‍ಟಿ ಎಂಬ ಪದಗುಚ್ಚದಲ್ಲೇ ಇಲ್ಲ. ಹೀಗಾಗಿ ಇದೊಂದು ಯಂತ್ರೋತ್ಪನ್ನಗಳ ಪರವಾದ ಹಾಗೂ ಕೈ ಉತ್ಪನ್ನಗಳ ವಿರುದ್ಧವಾದ ತೆರಿಗೆಯಾಗಿ ಜಾರಿಗೆ ಬಂದಿದೆ. ಕೈ ಉತ್ಪನ್ನಗಳು ಸಹಜವಾಗಿಯೇ ದುಬಾರಿ. ಹೀಗಾಗಿ ಅವುಗಳಿಗೆ ತೆರಿಗೆ ವಿಧಿಸದೇ ಇರುವುದರ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಬೇಕಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಇಂದು ಟಾಟಾ, ಬಿರ್ಲಾಗಳಿಗೆ ಸಾಮಾಜಿಕ ನ್ಯಾಯಗಳನ್ನು ವಿಧಿಸುತ್ತಿವೆ. ಹೀಗಾಗಿ ಈ ವಿಷಯ ನಿರ್ಧಾರವಾಗುವವರೆಗೆ ಅಂದ್ರೆ ನಮ್ಮ ದೇಶದ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗೋವರೆಗೆ ಈ ಹೋರಾಟ ಮುಂದುವರೆಸುವುದಾಗಿ ಹೇಳಿದ್ರು.

  • ಎಲ್ಲವನ್ನು ನೋಡಿಕೊಂಡು ಸುಮ್ಮನಿರುವ ಹೇಡಿಯಲ್ಲ: ಪ್ರಕಾಶ್ ರೈ ಘರ್ಜನೆ

    ಎಲ್ಲವನ್ನು ನೋಡಿಕೊಂಡು ಸುಮ್ಮನಿರುವ ಹೇಡಿಯಲ್ಲ: ಪ್ರಕಾಶ್ ರೈ ಘರ್ಜನೆ

    ಉಡುಪಿ: ಎಲ್ಲವನ್ನೂ ನೋಡಿಕೊಂಡು ಸುಮ್ಮನಿರುವ ಹೇಡಿ ನಾನಲ್ಲ ಎಂದು ನಟ ಪ್ರಕಾಶ್ ರೈ ಗುಡುಗಿದ್ದಾರೆ.

    ಉಡುಪಿಯಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಾವು – ನಮ್ಮ ಮಕ್ಕಳು ನೆಮ್ಮದಿಯಿಂದ ಬದುಕುವ ಸಮಾಜ ಬೇಕು ಎಂದರು.

    ಧೈರ್ಯದಿಂದ ಬದುಕುವ ಹಕ್ಕಿನ ಸಮಾಜ ಬೇಕು. ಕಳೆದ ಒಂದು ವಾರದಿಂದ ನಡೆದ ಬೆಳವಣಿಗೆ ನೋಡಿ ವಿದೇಶದಲ್ಲಿರುವ ಗೆಳೆಯರು ನನ್ನ ವಿರುದ್ಧದ ಟೀಕೆಗೆ ಹೆದರಿದರು. ನನ್ನ ಅಮ್ಮ ದೇವರ ಕೋಣೆಯಲ್ಲಿ ಕುಳಿತು ಹೆದರಿದರು. ನಟನಾಗಿ- ಚಿತ್ರಕಾರನಾಗಿ ಮಾತನಾಡಲೇಬಾರದಾ ಎಂದು ಪ್ರಕಾಶ್ ರೈ ಪ್ರಶ್ನೆ ಮಾಡಿದರು.

    ಸಮಾಜದಿಂದ ಬೆಳೆದ ನಮಗೆ ಸಮಾಜದ ಒಳಿತಿನ ಹಕ್ಕಿದೆ. ನಾನು ಸುಮ್ಮನೆ ಕುಳಿತುಕೊಳ್ಳುವ ಹೇಡಿಯಲ್ಲ. ಬಾಯಿ ಮುಚ್ಚಿಸೋದು ಕೊಲೆ ನಡೆಸಿದಂತೆಯೇ ಎಂದು ಆಕ್ರೋಶದಿಂದ ಹೇಳಿದರು.

    ಕಾರಂತ ಪ್ರಶಸ್ತಿ ಪಡೆದು ಬಹಳ ಸಂತೋಷವಾಯ್ತು. ಒಟ್ಟಿನಲ್ಲಿ ಯಾರು ಗೆದ್ದರು? ಯಾರು ಸೋತರೂ ಅನ್ನೋದು ಮುಖ್ಯವಲ್ಲ. ಪ್ರಶಸ್ತಿ ಪ್ರಧಾನ ಆಗ್ಬೇಕಿತ್ತು. ನಾನು ಪ್ರಶಸ್ತಿಗೆ ಅರ್ಹನಾಗಿದ್ದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಅನ್ನಬಹುದು. ಕರ್ನಾಟಕದಲ್ಲಿ ನನ್ನ ಹಾಗೆ ಮಾತಾಡೋರು ಒಂಟಿಯಲ್ಲ. ಅವರಿಗೂ ಸ್ವಾತಂತ್ರ್ಯ ಇದೆ. ವೈಯಕ್ತಿಕ ವಿಚಾರ ಹೇಳಿ ಹಣಿಯುವ ಕೃತ್ಯ ನಡೆಯುತ್ತಿದೆ. ಇದು ಕನ್ನಡ ನಾಡಲ್ಲಿ ನಡೆಯೋದಿಲ್ಲ ಎಂದರು.

    ನನ್ನ ಜೀವನ ನೋಡಿದೋರಿಗೆ ನಾನೇನು ಅಂತ ಗೊತ್ತು. ಆಯಾಯ ಕ್ಷಣದಲ್ಲಿ ಕೇಳಿದೊರಿಗೆ ನಾನು ಸೆಲೆಕ್ಟಿವ್ ಅನಿಸುತ್ತದೆ. ಬಿಜೆಪಿ ಬಹಿಷ್ಕರಿಸಿದ ಬಗ್ಗೆ ಏನೂ ಹೇಳಲ್ಲ. ಅಭಿಪ್ರಾಯ ಸ್ವಾತಂತ್ರ್ಯ ಬೇಕು ಅನ್ನೋದಷ್ಟೇ ನನ್ನ ನಿಲುವು ಎಂದು ಹೇಳಿದರು.

    ಕಾರಂತ ಥೀಂ ಪಾರ್ಕ್‍ಗೆ ಪ್ರಕಾಶ್ ರೈ ಆಗಮಿಸುತ್ತಿದ್ದಂತೆ ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ರು. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ರು. ಪೊಲೀಸರು ಸುಮಾರು 20 ಮಂದಿಯನ್ನ ಅರೆಸ್ಟ್ ಮಾಡಿದ್ರು. ಕಪ್ಪು ಅಂಗಿ ಧರಿಸಿ ಬಂದಿದ್ದ ವ್ಯಕ್ತಿಯನ್ನ ಗೇಟ್ ಬಳಿ ತಡೆದ ಪೊಲೀಸರು ಅಂಗಿ ತೆಗೆಸಿದ್ರು.

    ಇದನ್ನೂ ಓದಿ: ನನ್ನಿಂದ ನೋವಾಗಿದ್ದರೆ ಕ್ಷಮಿಸಿ – ಕ್ಷಮೆ ಕೋರಿದ ಪ್ರಕಾಶ್ ರೈ

    https://youtu.be/NcUXZL5iH5s

  • ನನ್ನಿಂದ ನೋವಾಗಿದ್ದರೆ ಕ್ಷಮಿಸಿ – ಕ್ಷಮೆ ಕೋರಿದ ಪ್ರಕಾಶ್ ರೈ

    ನನ್ನಿಂದ ನೋವಾಗಿದ್ದರೆ ಕ್ಷಮಿಸಿ – ಕ್ಷಮೆ ಕೋರಿದ ಪ್ರಕಾಶ್ ರೈ

    ಉಡುಪಿ: ನನ್ನಿಂದ ನೋವಾಗಿದ್ದರೆ ಕ್ಷಮಿಸಿ. ನಿಮ್ಮಲ್ಲಿ ಆತಂಕ ಸೃಷ್ಟಿಸಿದ್ದಕ್ಕೆ ಕ್ಷಮೆ ಇರಲಿ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.

    ಇಂದು ಉಡುಪಿಯಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಅಬ್ಬಬ್ಬಾ ಕೆಲ ದಿನಗಳಿಂದ ಏನೇನೋ ಆಯ್ತು. ನೋವಾದವರು ನನ್ನನ್ನು ಕ್ಷಮಿಸಿಬಿಡಿ ಅಂದ್ರು.

    ಅಜ್ಜನ ಮನೆಗೆ ಬಂದ ಮೊಮ್ಮಗ ನಾನು. ಬರೆದಂತೆ ಜೀವಿಸಿದವರು, ಜೀವಿಸಿದ್ದನ್ನು ಬರೆದವರು ಕಾರಂತರು. ಕಾರಂತರು ಅಘಾದವಾದ ಮರ. ಇಡೀ ಸಮಾಜದ ಸ್ವಾಸ್ತ್ಯಕ್ಕಾಗಿದ್ದ ಮರ. ಶಿವರಾಮ ಕಾರಂತರು ಕೈಗಾ ವಿರೋಧಿಯಾಗಿದ್ದರು. ಅವರಿಗೆ ಸುಳ್ಳು ಇಷ್ಟವಾಗ್ತಿರಲಿಲ್ಲ. ನಾನು ನಿಷ್ಠುರವಾಗಿ ಮಾತನಾಡಿದ್ರೆ ನನ್ನ ತಪ್ಪಲ್ಲ. ಕಾರಂತ, ತೇಜಸ್ವಿ, ಲಂಕೇಶರನ್ನು ಬೈಯ್ಯಿರಿ. ವಿರೋಧವಿದ್ದರೂ ಇಲ್ಲಿಗೆ ಬರಲು ಕಾರಣ ನೀವು. ಕಾರಂತರ ಅಭಿಮಾನಿಗಳಿಗಾಗಿ ಪ್ರಶಸ್ತಿ ಸ್ವೀಕರಿಸಿದೆ ಅಂತ ಹೇಳಿದ್ರು.

    ಗೋಮಾಂಸ ತಿನ್ನುವವರು ತಿನ್ತಾರೆ, ಅಡ್ಡಿ ಮಾಡಬೇಡಿ. ಹಿಂಸೆ ಮಾಡದೆ ಕೊಲ್ಲಿ ಅಂದಿದ್ರು ಕಾರಂತರು. ವಿರೋಧದ ನಡುವೆಯೂ ನಾನು ಬರಲು ಕಾರಣ ಏನು ಗೊತ್ತಾ? ಅವರ ಊರಿನ ಸಂಭ್ರಮದಲ್ಲಿ ಭಾಗಿಯಾಗುವ ಆಸೆ. ಒಮ್ಮೆ ನಿರ್ಧಾರ ತಗೊಂಡ್ರೆ ನಾನು ಹಿಂದೆ ಸರಿಯಲ್ಲ. ಉಡುಪಿ ದಕ್ಷಿಣ ಕನ್ನಡದಲ್ಲಿ ಸಿಕ್ಕ ಸ್ವಾಗತ ನೋಡಿ ಸಂತೋಷವಾಗಿದೆ ಅಂದ್ರು.

    ಕೆರೆಗಳ ಪುನರುಜ್ಜೀವನಕ್ಕೆ ಹೊರಟಿದ್ದೇನೆ. 10 ಜಲತಜ್ಞರನ್ನು ಸೇರಿಸಿ ಸಭೆಗಳು ಆಗಿದೆ. 3 ತಿಂಗಳಿಂದ ಕೆಲಸ ಕಾರ್ಯ ನಡೆಯುತ್ತಿದೆ. ನಾನು ಕಾರಣನಲ್ಲದಿದ್ದರೂ ನನ್ನಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿ. ನಿಮ್ಮ ಪ್ರೀತಿಯ ಅಂತಃಕರಣ ಕಸಿವಿಸಿ ಮಾಡಿದ್ದರೆ ಕ್ಷಮಿಸಿ ಅಂದ್ರು.

    ಕರಾವಳಿಯ ಜನ ವಿರೋಧಿಸಿದರು. ಕೆಲವರು ಅಪ್ಪಿಕೊಂಡು ಸ್ವಾಗತಿಸಿದರು. ವ್ಯವಸ್ಥಿತವಾಗಿ ಹೆದರಿಸುವ ಕೆಲಸ ನಡೆದಿದೆ. ಇದು ಬಹಳ ಅಪಾಯಕಾರಿ. ಎಂಡಪಂಥ- ಬಲಪಂಥದ ನಡುವೆ ನಾವು ಬದುಕುವ ಭಯ ಅಡಗಿದೆ. ನನ್ನ ಮಗಳಿಗೆ ಭಯ ಆವರಿಸಿದೆ. ವಾಕ್ ಸ್ವಾತಂತ್ರ್ಯ ಇಲ್ಲವಾಗಿ ಹೋಯ್ತಾ? ಮಾತಿಗೆ ಮಾತು ಉತ್ತರವಾಗಬೇಕು, ಕ್ರೌರ್ಯ- ಕೊಲೆ ಉತ್ತರವಲ್ಲ. ಬಾಯಿ ಮುಚ್ಚಿಸುವುದು ಕೊಲೆಯೇ ಅಲ್ಲವೇ? ಪರಿಸರಕ್ಕೆ ವಿರೋಧವಾಗದೆ ಮಾತನಾಡಿದರೆ ತಪ್ಪೇನು. ನಾನು ನನಗಾಗಿ ಮಾತನಾಡುತ್ತೇನೆ ಅಂತ ಪ್ರಕಾಶ್ ರೈ ಹೇಳಿದ್ರು.

    ಉಡುಪಿಯ ಕುಂದಾಪುರದ ಕೋಟದಲ್ಲಿ ನಡೆದ ಸಮಾರಂಭದಲ್ಲಿ ಪ್ರಕಾಶ್ ರೈಗೆ ಕಾರಂತ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಹಾರ, ಹಣ್ಣು-ಹಂಪಲು, ಬೆಳ್ಳಿ ಫಲಕ ನೀಡಿ ಗೌರವ ನೀಡಲಾಯ್ತು. ಎಳನೀರು ಕುಡಿಯುತ್ತಾ ಡೈಲಾಗ್ ಹೊಡೆದ ಪ್ರಕಾಶ್ ರೈ, ಕಾರಂತರು ಸ್ಟ್ರಾ ಉಪಯೋಗಿಸ್ತಾ ಇರಲಿಲ್ಲ. ನಾನೂ ಕಾರಂತರ ಕ್ಷೇತ್ರದಲ್ಲಿ ಸ್ಟ್ರಾ ಉಪಯೋಗಿಸಲ್ಲ ಅಂದ್ರು.

    ಕಾರಂತ ಥೀಂ ಪಾರ್ಕ್‍ಗೆ ಪ್ರಕಾಶ್ ರೈ ಆಗಮಿಸುತ್ತಿದ್ದಂತೆ ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು ಪ್ರಕಾಶ್ ರೈಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ರು. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ರು. ಪೊಲೀಸರು ಸುಮಾರು 20 ಮಂದಿಯನ್ನ ಅರೆಸ್ಟ್ ಮಾಡಿದ್ರು. ಕಪ್ಪು ಅಂಗಿ ಧರಿಸಿ ಬಂದಿದ್ದ ವ್ಯಕ್ತಿಯನ್ನ ಗೇಟ್ ಬಳಿ ತಡೆದ ಪೊಲೀಸರು ಅಂಗಿ ತೆಗೆಸಿದ್ರು.

  • `ಕಾರಂತ ಪ್ರಶಸ್ತಿ’ ಪ್ರಕಾಶ್ ರೈ ಸಾಧನೆಗೆ ನೀಡುತ್ತಿರುವುದು, ರಾಜಕೀಯ ಬೆರೆಸಬೇಡಿ- ಪ್ರಮೋದ್

    `ಕಾರಂತ ಪ್ರಶಸ್ತಿ’ ಪ್ರಕಾಶ್ ರೈ ಸಾಧನೆಗೆ ನೀಡುತ್ತಿರುವುದು, ರಾಜಕೀಯ ಬೆರೆಸಬೇಡಿ- ಪ್ರಮೋದ್

    ಉಡುಪಿ: ನಟ ಪ್ರಕಾಶ್ ರೈಗೆ ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಸಮಿತಿಯಲ್ಲಿ ಯಾವುದೇ ಗೊಂದಲವಿಲ್ಲ. ನಟ ಪ್ರಕಾಶ್ ರೈಯವರೇ ಕಾರಂತರ ಹೆಸರಿನ ಗೌರವಕ್ಕೆ ಪಾತ್ರರಾಗಲಿದ್ದಾರೆ ಎಂದು ಕೋಟತಟ್ಟು ಗ್ರಾ.ಪಂ.ಅಧ್ಯಕ್ಷ ಪ್ರಮೋದ್ ಹಂದೆ ಹೇಳಿದ್ದಾರೆ.

    ಕುಂದಾಪುರ ತಾಲೂಕಿನ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ರೈ ಆಯ್ಕೆಯನ್ನು ವಿರೋಧ ಮಾಡೋದು ಸರಿಯಲ್ಲ. ಕೋಟತಟ್ಟು ಗ್ರಾ.ಪಂ. ಶಿವರಾಮ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಶಿವರಾಮ ಕಾರಂತ ಟ್ರಸ್ಟ್ ಕೊಡುವ ಪ್ರಶಸ್ತಿ ಇದು. ಕಳೆದ 13 ವರ್ಷಗಳಿಂದ ಕೊಡುತ್ತಿರುವ ಪ್ರಶಸ್ತಿ ಈ ಬಾರಿ ನಟ ಪ್ರಕಾಶ್ ರೈಯನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ರು.

    ಪ್ರಕಾಶ್ ರೈ ಈ ಪ್ರಶಸ್ತಿಗೆ ನಿಜವಾಗಿಯೂ ಅರ್ಹರು. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ವೈಯುಕ್ತಿಕ ಹೇಳಿಕೆಗೂ ಪ್ರಶಸ್ತಿಗೂ ಸಂಬಂಧವಿಲ್ಲ. ಅಕ್ಟೋಬರ್ 10ರಂದು ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮ ನಿಗದಿಯಂತೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಅವರು ಹೇಳಿದ್ರು.

    ಪ್ರಶಸ್ತಿ ಆಯ್ಕೆಗೆ ಐದು ಮಂದಿ ಆಯ್ಕೆ ಮಂಡಳಿ ನೇಮಕ ಮಾಡಲಾಗಿತ್ತು. ಆಯ್ಕೆ ಮಂಡಳಿ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿದೆ. ಕಳೆದ 12 ವರ್ಷಗಳಲ್ಲಿ ಸಾಧಕರಿಗೆ ನೀಡುತ್ತಾ ಬಂದಂತೆಯೇ ಈ ಬಾರಿ ಪ್ರಕಾಶ್ ರೈ ಪ್ರಶಸ್ತಿ ಸ್ವೀಕರಿಸಲು ಬರುತ್ತಾರೆ. ಕಾರಂತರ ಹೆಸರಿಗೆ ಚ್ಯುತಿ ಬರಬಾರದು. ಪ್ರಶಸ್ತಿ ನೀಡಿಕೆ ವಿಚಾರದಲ್ಲಿ ರಾಜಕೀಯ ಬೇಡ ಅಂದ್ರು.

    ಈ ಹಿಂದೆ ಕಾರಂತ ಪ್ರಶಸ್ತಿಗೆ ಪಾತ್ರರಾದವರು ಮಾಜಿ ಸಿಎಂ ವೀರಪ್ಪ ಮೊಯ್ಲಿ, ಪತ್ರಕರ್ತ ರವಿ ಬೆಳಗೆರೆ, ಸಾಹಿತಿ ಜಯಂತ್ ಕಾಯ್ಕಿಣಿ, ದಿ. ರಾಮಚಂದ್ರ ಚಿಟ್ಟಾಣಿ, ಡಾ. ಬಿ.ಎಮ್ ಹೆಗ್ಡೆ, ಸಾಲುಮರದ ತಿಮ್ಮಕ್ಕ, ಡಾ. ಎಂ ಮೋಹನ್ ಆಳ್ವ, ನಾಟಕಕಾರ ಸದಾನಂದ ಸುವರ್ಣ, ಬಿ. ಜಯಶ್ರೀ, ಗಿರೀಶ್ ಕಾಸರವಳ್ಳಿ, ಮಾಜಿ ಲೋಕಾಯುಕ್ತ ವೆಂಕಟಾಚಲಯ್ಯ, ಶಿಕ್ಷಣ ತಜ್ಞ ಕೆ.ಆರ್ ಹಂದೆ ಇವರುಗಳಿಗೆ ಕಾರಂತ ಹುಟ್ಟೂರ ಸನ್ಮಾನ ಲಭಿಸಿತ್ತು. ಈ ಬಾರಿ ನಟ ಪ್ರಕಾಶ್ ರೈ ಈ ಗೌರವಕ್ಕೆ ಪಾತ್ರರಾಗಲಿದ್ದಾರೆ.

     

  • ತಮ್ಮ ದಂಧೆಗಾಗಿ, ಹಣಕ್ಕಾಗಿ ತಮಿಳುನಾಡಿನಲ್ಲಿ ರೈ, ಇಲ್ಲಿ ರಾಜ್: ಪ್ರತಾಪ್ ಸಿಂಹ

    ತಮ್ಮ ದಂಧೆಗಾಗಿ, ಹಣಕ್ಕಾಗಿ ತಮಿಳುನಾಡಿನಲ್ಲಿ ರೈ, ಇಲ್ಲಿ ರಾಜ್: ಪ್ರತಾಪ್ ಸಿಂಹ

    ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ದೊಡ್ಡ ನಟ ಅಂತಾ ಟೀಕಿಸಿರುವ ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಪ್ರಕಾಶ್ ರೈ ಸಿನಿಮಾಗಳಲ್ಲಿ ಖಳ ನಟನ ಪಾತ್ರ ಮಾಡುತ್ತಾ ಮಾಡುತ್ತಾ ತಮ್ಮೊಳಗೆ ಖಳನ ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ. ಪ್ರಕಾಶ್ ರೈ ವೈಯ್ಯಕ್ತಿಕ ಜೀವನಕ್ಕೂ, ನಟನ ಜೀವನಕ್ಕೂ ಬಹಳ ಸಾಮ್ಯತೆ ಇದೆ ಎಂದು ಟೀಕಿಸಿದ್ದಾರೆ.

    ಇದನ್ನೂ ಓದಿ: ಮೋದಿ ನನಗಿಂತ ಹಿರಿಯ ನಟ: ಪ್ರಕಾಶ್ ರಾಜ್

    ತಮ್ಮ ದಂಧೆಗಾಗಿ, ಹಣಕ್ಕಾಗಿ ತಮಿಳುನಾಡಲ್ಲಿ ಪ್ರಕಾಶ ರೈ ಆಗುತ್ತಾರೆ, ಇಲ್ಲಿ ಪ್ರಕಾಶ್ ರಾಜ್ ಆಗುತ್ತಾರೆ. ಗೌರಿ ಹತ್ಯೆಗೂ ಪ್ರಧಾನ ಮಂತ್ರಿಗಳೂ ಏನೂ ಸಂಬಂಧವಿದೆ. ಸಂಘ ಪರಿವಾರದವರ ಹತ್ಯೆ ಆದಾಗಲೂ ಪ್ರಧಾನಿ ಅವರು ಪ್ರತಿಕ್ರಿಯೆ ಕೊಟ್ಟಿಲ್ಲ. ಆಗಾಂತ ನಾವು ಪ್ರಧಾನಿಯನ್ನು ದೂರುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿಗಳ ವಿರುದ್ಧ ಸಾರ್ವಜನಿಕವಾಗಿ ಟೀಕೆ ಮುಂದುವರಿಸಿದರೆ ಅವರು ನಿಂತಿರುವ ವೇದಿಕೆಗಳಿಗೆ ಹೋಗಿ ನಾವು ತಕ್ಕ ಉತ್ತರ ಕೊಡುತ್ತೇವೆ ಎಂದು ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದರು.

    ಇದನ್ನೂ ಓದಿ: ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಲು ಹುಚ್ಚು ಹೇಳಿಕೆ: ಪ್ರಕಾಶ್ ರಾಜ್ ವಿರುದ್ಧ ಸುರೇಶ್ ಕುಮಾರ್ ವಾಗ್ದಾಳಿ