Tag: Prakash Rai

  • ಸರೋಜಾದೇವಿ ಅಗಲಿಕೆಗೆ ಕಂಬನಿ ಮಿಡಿದ ಸ್ಯಾಂಡಲ್‍ವುಡ್ ನಟ, ನಟಿಯರು

    ಸರೋಜಾದೇವಿ ಅಗಲಿಕೆಗೆ ಕಂಬನಿ ಮಿಡಿದ ಸ್ಯಾಂಡಲ್‍ವುಡ್ ನಟ, ನಟಿಯರು

    ಗಲಿದ ಖ್ಯಾತ ಸಿನಿಮಾ ನಟಿ ಸರೋಜಾದೇವಿಯವರ (Saroja Devi) ಅಗಲಿಕೆಗೆ ಸ್ಯಾಂಡಲ್‍ವುಡ್ (Saroja Devi) ನಟ ನಟಿಯರು ಸೇರಿದಂತೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

    ಸರೋಜಾದೇವಿಯವರ ಬಗ್ಗೆ ಮಾತಾಡಿರುವ ನಟ ಪ್ರಕಾಶ್ ರೈ (Prakash Raj ) ಭಾರತೀಯ ಚಿತ್ರರಂಗದ ಎಲ್ಲಾ ಭಾಷೆಯ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. 160ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸೋದು ಸಾಮಾನ್ಯವಾದ ಮಾತಲ್ಲ. ಅವರ ಜೊತೆ ನಾನು ನಟಿಸದೇ ಹೋದ್ರು, ಸಾಕಷ್ಟು ಬಾರಿ ಮಾತನಾಡಿದ್ದೆ. ಯಾವಾಗ ಸಿಕ್ಕರು ಆತ್ಮೀಯವಾಗಿ ಮಾತನಾಡುತ್ತಿದ್ದರು. ನನಗೆ ಅವಾರ್ಡ್ ಸಿಕ್ಕಾಗ ಕರೆ ಮಾಡಿ, ಮಾತನಾಡಿದ್ರು. ಗಂಭೀರವಾಗಿ ತುಂಬು ಜೀವನ ನಡೆಸಿದ್ದಾರೆ. ಅದ್ಬುತವಾದ ನಟಿ ಅವರು, ಅವರ ಅಗಲಿಕೆ ಚಿತ್ರರಂಗಕ್ಕೆ ಸಾಕಷ್ಟು ನಷ್ಟ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ. ಇದನ್ನೂ ಓದಿ: ಸರೋಜಾದೇವಿಯವ್ರು ತಲೆಮಾರುಗಳಲ್ಲಿ ಅಳಿಸಲಾಗದ ಗುರುತು ಬಿಟ್ಟು ಹೋಗಿದ್ದಾರೆ: ಮೋದಿ ಸಂತಾಪ

    ಸಂಗೀತ ನಿರ್ದೇಶಕ ಗುರುಕಿರಣ್ (Prakash Raj) ಪ್ರತಿಕ್ರಿಯಿಸಿ, ಕನ್ನಡ, ದಕ್ಷಿಣ ಭಾರತ ಕಂಡ ಅತ್ಯುತ್ತಮ ನಟಿ ಸರೋಜಾದೇವಿಯವರು. ಅಂತಹ ಸ್ಟಾರ್ ಇನ್ನೂ ಸಿಗಲ್ಲ. ದಕ್ಷಿಣ ಭಾರತ ಆಳಿದವರು. ಹೀರೋಗಳು ಕೂಡ ಇವರ ಡೇಟ್‍ಗಾಗಿ ಕಾಯುತ್ತಿದ್ದರು. ಅವರ ಅಗಲುವಿಕೆ ತುಂಬಲಾರದ ನಷ್ಟ ಎಂದಿದ್ದಾರೆ.

    ಹಿರಿಯ ನಟ ಶ್ರೀನಿವಾಸ ಮೂರ್ತಿಯವರು ಮಾತನಾಡಿ, ಸರೋಜಾದೇವಿಯವರ ಅಗಲುವಿಕೆ ಕನ್ನಡ ಚಿತ್ರರಂಗ ಮಾತ್ರ ಅಲ್ಲ, ಭಾರತೀಯ ಚಿತ್ರರಂಗಕ್ಕೆ ದುಃಖದ ವಿಚಾರ. ಪಂಚಭಾಷೆ ತಾರೆ ಅಂತ ಹೆಸರು ಪಡೆದವರು. ಎಲ್ಲಾರ ಜೊತೆ ನಟಿಸಿದ್ದವರು. ಹೀರೋಗೆ ಕೊಟ್ಟಷ್ಟೇ ಪ್ರಾಮುಖ್ಯತೆ ಇವರಿಗೂ ಇತ್ತು. ನನ್ನ ಪುಣ್ಯ, ಅವರ ಜೊತೆ ಗಂಡನ ಪಾತ್ರ ಮಾಡಿದ್ದೆ. ಒಂದೂವರೆ ತಿಂಗಳ ಹಿಂದೆ ಮಾತನಾಡಿದ್ದೆ. ಈ ವೇಳೆ, ಅವರ ದಿನಚರಿ ಬಗ್ಗೆಯೂ ಹೇಳಿಕೊಂಡಿದ್ದರು. ಪೂಜೆ, ಸಿನಿಮಾ ನೋಡೋದು. ಕಲಾವಿದರಿಗೆ ಪ್ರೋತ್ಸಾಹ ಮಾಡುತ್ತಿದ್ದರು. ಕನ್ನಡದಷ್ಟೇ ಒಳ್ಳೇಯ ಪಾತ್ರಗಳನ್ನ ಬೇರೆ ಭಾಷೆಯಲ್ಲಿ ಮಾಡಿ ಸಾಧನೆ ಮಾಡಿದ್ದರು. ಹುಟ್ಟಿದ ಮೇಲೆ ಸಾವು ಇರುತ್ತೆ. ಬೆಳಗ್ಗೆ ಪೂಜೆ ಮಾಡಿ ತಿಂಡಿ ಮಾಡಿದ ಕೂಡಲೇ ಸಾವಾಗಿದೆ. ಅವರನ್ನು ಕಳೆದುಕೊಂಡಿದ್ದೇವೆ ದುಃಖವಾಗಿದೆ ಎಂದು ಹೇಳಿಕೊಂಡಿದ್ದಾರೆ.

    ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಪ್ರತಿಕ್ರಿಯಿಸಿ, ಸರೋಜಾದೇವಿಯವರು ಅವರು, ನಮ್ಮ ಕುಟುಂಬಕ್ಕೆ ತುಂಬಾ ಆತ್ಮೀಯವಾಗಿದ್ದರು. ಆಕೆ ಒಬ್ಬ ಮಹಾನ್ ನಟಿ, ಅಚ್ಚಕನ್ನಡ ಮಾತನಾಡುವಂತಹ ಹಿರೋಯಿನ್. ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರವನ್ನು ಅವರಂತೆ ಯಾರು ಮಾಡಲು ಸಾಧ್ಯವಿಲ್ಲ. ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬರಬೇಕು ಅಂತಾ ಪತ್ರ ಬರೆದಿದ್ದೆ. ಪಂಚಭಾಷೆಯಲ್ಲಿ ಅವರು ನಟನೆ ಮಾಡಿದ್ದಾರೆ. ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ.

    ನಿರ್ಮಾಪಕ ಬಾ.ಮಾ ಹರೀಶ್ ಮಾತನಾಡಿ, ಯಾವುದೇ ಭಾಷೆಯಲ್ಲೂ ಅವರು ನಟನೆ ಮಾಡಿದ್ರೂ ಕನ್ನಡ ಭಾಷೆಗೆ ತುಂಬಾ ಗೌರವ ಕೊಡ್ತಿದ್ರು. ಈ ಹನ್ನೊಂದನೇ ಕ್ರಾಸ್‍ಗೆ ಬಿ ಸರೋಜಾ ದೇವಿ ಹೆಸ್ರು ಇಡಬೇಕು ಅಂತಾ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ವಿ. ಅವರ ನಿಧನದ ನಂತರ ಹೆಸ್ರು ಇಡೋದಾಗಿ ಅಧಿಕಾರಿಗಳು ಹೇಳಿದ್ರು. ಈಗಿನ ಸರ್ಕಾರ ಈ ರಸ್ತೆಗೆ ಅವರ ಹೆಸರು ಇಡಬೇಕು ಎಂದು ಮನವಿ ಮಾಡ್ತೀನಿ ಎಂದಿದ್ದಾರೆ.

    ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಕ್ರಿಯಿಸಿ, ಸರೋಜಾ ದೇವಿಯವರು ಕರ್ನಾಟಕದವರು, ಕನ್ನಡಿಗರು, ಕನ್ನಡ ಚಿತ್ರಕ್ಕಿಂತ ಹೆಚ್ಚಾಗಿ ತಮಿಳು ಚಿತ್ರಗಳಲ್ಲಿ ಭಾರಿ ಪಾತ್ರ ಮಾಡಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ರಾಜ್ಯ ಕಂಡತಂಹ ಸಂಗೀತಗಾರ ಹೊನ್ನಪ್ಪ ಭಾಗವತರ್ ಬಳಿ ಸಂಗೀತ ಕಲಿತಿದ್ದರು. ಹೊನ್ನಪ್ಪ ಭಾಗವತರ್ ಅವರನ್ನು ಸಿನಿಮಾಕ್ಕೆ ಕರೆದುಕೊಂಡು ಬಂದರು. ತಮಿಳಿನಲ್ಲಿ ಎಂ.ಜಿ ರಾಮಚಂದ್ರನ್ ಜೊತೆ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಇವರು ತಮಿಳುನಾಡಿನ ಮುಖ್ಯಮಂತ್ರಿ ಆಗಬೇಕಿತ್ತು. ಅಷ್ಟೋತ್ತಿಗೆ ಜಯಲಲಿತಾ ಬಂದ್ರು. ಇವರ ನಿಧನದಿಂದ ನಮ್ಮ ನಾಡಿಗೆ ಅಪಾರವಾದ ನೋವಾಗಿದೆ. ಸುಮಾರು 3 ವರ್ಷದ ಹಿಂದೆ ನನ್ನ ಜೊತೆ ಮಾತನಾಡಿದ್ದರು ಎಂದು ಹೇಳಿಕೊಂಡಿದ್ದಾರೆ.

    ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ಸರೋಜ ದೇವಿಯವರು ಸಿನಿಮಾ ಲೆಜೇಂಡ್. ಅವರ ಜೊತೆ ಹಲವು ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ್ದೇನೆ. ಅವರನ್ನ ಈಗ ಮುಟ್ಟಿದಾಗಲೂ ಮೈ ರೋಮಾಂಚನ ಆಯ್ತು. ಇವರಿಗೆಲ್ಲ ಸಾವು ಬರಬಾರದು ಅಂತ ಅನ್ನಿಸುತ್ತೆ. ನಾವೆಲ್ಲ ಸಿನಿಮಾ ರಂಗಕ್ಕೆ ಬರಲು ಇವರೇ ಸ್ಫೂರ್ತಿ. ರಾಣಿ ಹಾಗೇ ಬದುಕಿ ಸಿನಿಮಾ ಮಾಡಿ ಬಿಟ್ಟು ಹೋಗಿದ್ದೀರಾ. ಜಯಮಾಲರ ಮಗಳ ಮದುವೆಯಲ್ಲಿ ಭೇಟಿಯಾಗಿದ್ದೆವು. ಈಗಲೂ ಅವರು ಹಂಸ ನಡಿಗೆಯಲ್ಲೇ ನಡೆಯುತ್ತಿದ್ದರು ಎಂದು ಹೇಳಿದ್ದಾರೆ.

    ನಟಿ ಅನುಪ್ರಭಾಕರ್ ಮಾತನಾಡಿ, ಚಿತ್ರರಂಗ ಹಿರಿಯರನ್ನ ಕಳೆದುಕೊಳ್ಳುತ್ತಿದೆ ಅನ್ನೋದು ಬೇಸರದ ವಿಷಯ. ಅವರು ಬಹಳ ಸ್ಟ್ರಾಂಗ್ ಲೇಡಿ. ಇತ್ತೀಚೆಗೆ ಅವರನ್ನು ಭೇಟಿಯಾಗೋಕೆ ಆಗಿರಲಿಲ್ಲ. ಅವರು ಕನ್ನಡಿಗರಷ್ಟೇ ಅಲ್ಲ ಭಾರತೀಯ ಕಲಾವಿದರಿಗೆ ಮಾದರಿ. ನಮ್ಮ ಕನ್ನಡಿಗರಿಗೆ ಕಿತ್ತೂರು ರಾಣಿ ಚೆನ್ನಮ್ಮ ಅಂದ್ರೆ ಸರೋಜಮ್ಮ ಎಂದಿದ್ದಾರೆ.

    ಉದ್ಯಮಿ ಹಾಗೂ ಮಾಜಿ ಶಾಸಕ ಅಶೋಕ್ ಖೇಣಿ ಮಾತನಾಡಿ, ಸರೋಜದೇವಿ ಮತ್ತು ನಮ್ಮ ತಾಯಿಯ ಸ್ನೇಹಿತರು. ಅವರ ಅಗಲುವಿಕೆ ಬಹಳ ದೊಡ್ಡ ನಷ್ಟ. ನಮ್ಮ ತಾಯಿ ಕೂಡ ಸ್ವರ್ಗದಲ್ಲಿದ್ದಾರೆ. ಮತ್ತೆ ಅವರೆಲ್ಲ ಅಲ್ಲಿ ಒಟ್ಟಿಗೆ ಸೇರುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿನಿಮಾದ ಸುವರ್ಣ ಯುಗವೊಂದು ಅಂತ್ಯವಾಗಿದೆ – ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ರಜನಿಕಾಂತ್‌, ಖುಷ್ಬು

  • ಬಹುಭಾಷಾ ನಟ ಆಂಧ್ರ, ತಮಿಳುನಾಡಿನಲ್ಲೇಕೆ ಹೋರಾಡುತ್ತಿಲ್ಲ: ಪ್ರಕಾಶ್ ರೈಗೆ ಕುಟುಕಿದ ಎಂಬಿ ಪಾಟೀಲ್‌

    ಬಹುಭಾಷಾ ನಟ ಆಂಧ್ರ, ತಮಿಳುನಾಡಿನಲ್ಲೇಕೆ ಹೋರಾಡುತ್ತಿಲ್ಲ: ಪ್ರಕಾಶ್ ರೈಗೆ ಕುಟುಕಿದ ಎಂಬಿ ಪಾಟೀಲ್‌

    ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಹೋರಾಟದ ಹಕ್ಕಿದೆ. ನಾನೂ ಹೋರಾಟ ಮಾಡಿಕೊಂಡೇ ಬಂದಿರುವವನು. ಈ ವಿಷಯ ಬಹುಭಾಷಾ ನಟ ಪ್ರಕಾಶ್ ರೈಗೆ (Prakash Rai) ಗೊತ್ತಿರಲಿಕ್ಕಿಲ್ಲ. ಬರಪೀಡಿತ ವಿಜಯಪುರ ಜಿಲ್ಲೆಯನ್ನು ನಾನು ಹೋರಾಡಿಯೇ ನೀರಾವರಿ ಭೂಮಿಯನ್ನಾಗಿ ಮಾಡಿದ್ದೇನೆ. ಪ್ರಕಾಶ್ ರೈ ಅವರು ನಮಗಿಂತ ಆಂಧ್ರದಲ್ಲಿ ಹೆಚ್ಚು ಪ್ರಭಾವಿಗಳು ಮತ್ತು ಜನಪ್ರಿಯರು. ಆದ್ದರಿಂದ ಅವರು ಬೇರೆಬೇರೆ ರಾಜ್ಯಗಳಲ್ಲೂ ರೈತರ ಭೂಸ್ವಾಧೀನದ ವಿರುದ್ಧ ಹೋರಾಟ ಮಾಡಿದರೆ ಒಳ್ಳೆಯದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ (MB Patil) ಕುಟುಕಿದ್ದಾರೆ.

    ಮಂಗಳವಾರ ಇಲ್ಲಿನ‌ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ನಮ್ಮಲ್ಲಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕಿಗಾಗಿ ಕೇವಲ 1,282 ಎಕರೆ ಮಾತ್ರ ಸ್ವಾಧೀನಪಡಿಸಿಕೊಳ್ಳಲು ತೀರ್ಮಾನಿಸಿದ್ದೇವೆ. ಪಕ್ಕದ ಆಂಧ್ರ ಪ್ರದೇಶದಲ್ಲಿ (Andhra Pradesh) ಇದೇ ಉದ್ದೇಶಕ್ಕಾಗಿ ನಮ್ಮ ಗಡಿಗೇ ಅಂಟಿಕೊಂಡಿರುವ ಮಡಕಶಿರಾದಿಂದ ಪೆನುಗೊಂಡದವರೆಗೆ 10 ಸಾವಿರ ಎಕರೆಯನ್ನು ಸ್ವಾಧೀನಪಡಿಸಿಕೊಂಡು, ಉಚಿತವಾಗಿ ಕೊಡುವುದಾಗಿ ಹೇಳಲಾಗುತ್ತಿದೆ. ಅಲ್ಲದ, ಆಂಧ್ರದಲ್ಲಿ ಬೇರೆಬೇರೆ ಕೈಗಾರಿಕಾ ಉದ್ದೇಶಗಳಿಗೆ 45 ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇನ್ಫೋಸಿಸ್, ಕಾಗ್ನಿಜೆಂಟ್, ಟಿಸಿಎಸ್ ಮುಂತಾದ 100 ಕಂಪನಿಗಳಿಗೆ ವಿಶಾಖಪಟ್ಟಣದಲ್ಲಿ ಎಕರೆಗೆ ಬರೀ 99 ಪೈಸೆಯಂತೆ ಭೂಮಿ ಕೊಡಲಾಗಿದೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ಪ್ರಕಾಶ್ ರೈಗೆ ಇವೆಲ್ಲ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿ ಕಿಡಿಕಾರಿದರು. ಇದನ್ನೂ ಓದಿ: ಡಿಫೆನ್ಸ್ ಕಾರಿಡಾರ್ ಬಗ್ಗೆ ಚರ್ಚಿಸಲು ನಾಳೆ ಸಿಎಂ ಜೊತೆ ರಾಜನಾಥ್ ಸಿಂಗ್ ಭೇಟಿ: ಎಂ.ಬಿ.ಪಾಟೀಲ್

    ಇತ್ತ ತಮಿಳುನಾಡಿನ (Tamil Nadu) ಹೊಸೂರು ನಮ್ಮಿಂದ ಕೇವಲ 50 ಕಿ.ಮೀ. ದೂರದಲ್ಲಿದೆ. ಅಲ್ಲಿನ ಸರ್ಕಾರ ಈಗ ಆ ಪ್ರದೇಶವನ್ನು ಕೇಂದ್ರೀಕರಿಸಿ ಕೈಗಾರಿಕಾ ಬೆಳವಣಿಗೆಯನ್ನು ವಿಸ್ತರಿಸುತ್ತಿದೆ. ಜತೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ನಿರ್ಮಿಸಲು ಮುಂದಾಗಿದೆ. ಇದಕ್ಕೆಲ್ಲ ಅದೂ ಸಹ ಅಗ್ಗದ ದರದಲ್ಲಿ ಭೂಮಿ ಕೊಡುತ್ತಿದೆ. ಆಂಧ್ರ ಮತ್ತು ತಮಿಳುನಾಡಿನಲ್ಲಿ ಉದ್ಯಮ ನಡೆಸುತ್ತಿರುವವರಿಗೆ ಬೆಂಗಳೂರು ಬರೀ ಆಶ್ರಯತಾಣವಾಗಿ ಕಾಣುತ್ತಿದೆ. ಆಂಧ್ರದ ಯೋಜನೆ ಗೆದ್ದರೆ, ನಮ್ಮ ರಕ್ಷಣಾ ಮತ್ತು ಏರೋಸ್ಪೇಸ್ ಕಂಪನಿಗಳು ಅಲ್ಲಿಗೆ ಹೋಗಬಹುದು. ಇದರಿಂದ ರಾಜ್ಯಕ್ಕೆ ಆಗುವ ನಷ್ಟವನ್ನು ಅಂದಾಜು ಮಾಡಲೂ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಕರ್ನಾಟಕವು (Karnataka) ದೇಶದ ರಕ್ಷಣೆ ಮತ್ತು ವೈಮಾಂತರಿಕ್ಷ ವಹಿವಾಟಿನಲ್ಲಿ ಶೇಕಡ 65ರಷ್ಟು ಪಾಲು ಹೊಂದಿದ್ದು, ಈ ವಲಯದಲ್ಲಿನ ನಮ್ಮ ಕಾರ್ಯ ಪರಿಸರವು ಜಾಗತಿಕವಾಗಿ ತೃತೀಯ ಸ್ಥಾನದಲ್ಲಿದೆ. ನಮ್ಮಲ್ಲಿ ಈ ವಲಯದ ಎಚ್ಎಎಲ್, ಸ್ಯಾಫ್ರಾನ್, ಬೋಯಿಂಗ್, ಏರ್ ಬಸ್, ಕಾಲಿನ್ಸ್, ಲಾಕ್ ಹೀಡ್ ಮಾರ್ಟಿನ್ ಮುಂತಾದ ದೈತ್ಯ ಕಂಪನಿಗಳಿವೆ. ದೇವನಹಳ್ಳಿಯಲ್ಲಿರುವ ವಿಮಾನ ನಿಲ್ದಾಣದ ಪಕ್ಕದಲ್ಲೇ ಏರೋಸ್ಪೇಸ್ ಪಾರ್ಕ್ ಇದೆ. ಇದಕ್ಕೆ ಮತ್ತಷ್ಟು ಬಲ ತುಂಬಲೆಂದೇ ಈಗ ಅದರ ಸನಿಹದಲ್ಲೇ ಉದ್ದೇಶಿತ ಪಾರ್ಕ್ ಸ್ಥಾಪಿಸುವ ಚಿಂತನೆ ಇದೆ. ಸಂತ್ರಸ್ತ ರೈತರಿಗೆ 2013ರ ಭೂಸ್ವಾಧೀನ ಕಾಯ್ದೆಯ ಪ್ರಕಾರವೇ ನ್ಯಾಯಯುತ ಪರಿಹಾರ ಕೊಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

    ಪ್ರಕಾಶ್ ರೈ ಬಗ್ಗೆ ವೈಯಕ್ತಿಕವಾಗಿ ಯಾವ ಸಿಟ್ಟೂ ಇಲ್ಲ. ಹಿಂದೆ ನಾನು ನೀರಾವರಿ ಸಚಿವನಾಗಿದ್ದಾಗಲೂ ಒಳ್ಳೆಯ ಕೆಲಸಗಳನ್ನೇ ಮಾಡಿದ್ದೇನೆ. ರೈತ ಮುಖಂಡ ಬಯ್ಯಾರೆಡ್ಡಿ ಅವರೇ ಇದನ್ನು ಮೆಚ್ಚಿಕೊಂಡು ಮಾತನಾಡಿದ್ದರು. ದುರದೃಷ್ಟವಶಾತ್ ಇವತ್ತು ಅವರು ನಮ್ಮೊಂದಿಗಿಲ್ಲ. ಅವರು ನಿಜವಾದ ರೈತ ನಾಯಕರಾಗಿದ್ದರು. ಈಗ ನಮ್ಮ ವಿರುದ್ಧ ಮಾತನಾಡುತ್ತಿರುವವರು ಇದನ್ನೆಲ್ಲ ಅರಿಯಬೇಕು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

     

    ಇಬ್ಬರ ಮಧ್ಯೆ ವಾಕ್ಸಮರ ಯಾಕೆ?
    ದೇವನಹಳ್ಳಿ ಕೃಷಿ ಭೂಮಿ ಸ್ವಾಧೀನಕ್ಕೆ ಪ್ರಕಾಶ್ ರಾಜ್ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಎಂಬಿ ಪಾಟೀಲ್‌ ಆಕ್ಷೇಪ ವ್ಯಕ್ತಪಡಿಸಿ ಪ್ರಕಾಶ್‌ ರಾಜ್ ಬಹುಭಾಷಾ ನಟರಲ್ವಾ? ಕರ್ನಾಟಕದಲ್ಲಿ (Karnataka) ಮಾತ್ರವಲ್ಲ, ಗುಜರಾತ್‌ನಲ್ಲೂ (Gujarat) ಹೋರಾಟ ಮಾಡಲಿ ಎಂದು ಸವಾಲ್‌ ಎಸೆದಿದ್ದರು.

    ಎಂಬಿಪಿ ಸವಾಲಿಗೆ ತಿರುಗೇಟು ನೀಡಿದ್ದ ಪ್ರಕಾಶ್‌ ರಾಜ್‌, ಇದು ದೇವನಹಳ್ಳಿ ರೈತರ ಸಮಸ್ಯೆ, ಎಲ್ಲೆಲ್ಲೋ ಮಾಡಲು ಸಾಧ್ಯವಿಲ್ಲ. ನಾವು ದೇಶದ ಹಲವು ಕಡೆ ಹೋರಾಟ ಮಾಡಿದ್ದೇವೆ. ತಮಿಳುನಾಡಿನ ರೈತರ ಪರ ದೆಹಲಿಯಲ್ಲಿ ಕುಳಿತವನು ನಾನೇ. ಪಂಜಾಬ್​ ರೈತರು ಹೋರಾಟ ಮಾಡ್ದಾಗಲು‌‌ ನಿಂತವನು‌ ನಾನೇ, ನಾವು ಎಲ್ಲಾ ವಿಚಾರಗಳ ಬಗ್ಗೆ ಮಾತನಾಡುತ್ತೇವೆ. ಮೋದಿಯನ್ನು ನಿಮಗಿಂತ ಜಾಸ್ತಿ ನಾನು ಪ್ರಶ್ನೆ ಮಾಡಿದ್ದೇನೆ ಎಂದು ಪ್ರಕಾಶ್ ರಾಜ್​ ತಿರುಗೇಟು ನೀಡಿದ್ದರು.

     

  • ದ್ವೇಷದ ವಿರುದ್ಧ ಮತ ಹಾಕಿದ್ದೇನೆ: ನಟ ಪ್ರಕಾಶ್ ರೈ ವಿಡಿಯೋ ವೈರಲ್

    ದ್ವೇಷದ ವಿರುದ್ಧ ಮತ ಹಾಕಿದ್ದೇನೆ: ನಟ ಪ್ರಕಾಶ್ ರೈ ವಿಡಿಯೋ ವೈರಲ್

    ಹುಭಾಷಾ ನಟ ಪ್ರಕಾಶ್ ರೈ ಇಂದು ಬೆಳಗ್ಗೆ ಮತದಾನ ಮಾಡಿ, ತಾವು ಮತದಾನ ಮಾಡಿರುವ ಕುರಿತಂತೆ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಆ ವಿಡಿಯೋವನ್ನು ಅನೇಕರು ಹಂಚಿಕೊಂಡಿದ್ದಾರೆ. ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ನಿಮ್ಮ ಮಾತನ್ನು ಅನುಮೋದಿಸುತ್ತೇವೆ ಎಂದಿದ್ದಾರೆ.

     

    ವೋಟು ಹಾಕಿದ ನಂತರ ಪೋಸ್ಟ್ ಮಾಡಿದ ವಿಡಿಯೋದಲ್ಲಿ ದೇಶದ ಬದಲಾವಣೆಗಾಗಿ ಮತದಾನ ಮಾಡಿರುವೆ, ದ್ವೇಷದ ವಿರುದ್ಧ ಮತ ಹಾಕಿರುವೆ. ಸಂಸತ್ ನಲ್ಲಿ ನನ್ನ ಪರವಾಗಿ ಧ್ವನಿ ಕೇಳಲಿ ಎಂದು ವೋಟು ಮಾಡಿದ್ದೇನೆ. ದಯಮಾಡಿ ವೋಡು ಮಾಡಿ, ಬದಲಾವಣೆಗೆ ಮತ ಹಾಕಿ ಎಂದು ಮಸೇಜ್ ನೀಡಿದ್ದರು.

     

    ಸಂಜೆ ಹೊತ್ತಿಗೆ ಮೂವತ್ತೆಂಟು ಸಾವಿರಕ್ಕೂ ಹೆಚ್ಚು ಜನ ವಿಡಿಯೋವನ್ನು ಲೈಕ್ ಮಾಡಿದ್ದರೆ, 215ಕ್ಕೂ ಹೆಚ್ಚು ಜನರ ಬುಕ್ ಮಾರ್ಕ್ ಮಾಡಿಕೊಂಡಿದ್ದಾರೆ. ಐದು ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. ಜೊತೆಗೆ ಪಾಸಿಟಿವ್ ಮತ್ತು ನೆಗೆಟಿವ್ ಕಾಮೆಂಟ್ ಎರಡೂ ಹೇರಳವಾಗಿಯೇ ಇವೆ.

  • ‘ಫಾದರ್’ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮಗ, ಪ್ರಕಾಶ್ ರೈ ತಂದೆ

    ‘ಫಾದರ್’ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮಗ, ಪ್ರಕಾಶ್ ರೈ ತಂದೆ

    ನ್ನಡದ ಹೆಸರಾಂತ ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು (R. Chandru) ಕಳೆದ ತಿಂಗಳವಷ್ಟೇ ಐದು ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ಮೊದಲ ಚಿತ್ರವಾಗಿ ಫಾದರ್ (Father) ಸೆಟ್ಟೇರಲಿದೆ. ಚಂದ್ರು ತಮ್ಮ ಹುಟ್ಟು ಹಬ್ಬದಂದು ಈ ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಈ ಚಿತ್ರದಲ್ಲಿ ಹೆಸರಾಂತ ತಾರಾ ಬಳಗವೇ ಇದೆ.

    ಡಾರ್ಲಿಂಗ್ ಕೃಷ್ಣ (Darling Krishna) ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದರೆ, ತಂದೆಯ ಪಾತ್ರದಲ್ಲಿ ಹೆಸರಾಂತ ನಟ ಪ್ರಕಾಶ್ ರೈ (Prakash Rai) ಅಭಿನಯಿಸುತ್ತಿದ್ದಾರೆ. ಅಪ್ಪ – ಮಗನ ಬಾಂಧವ್ಯದ ಚಿತ್ರವಿದು. ತೆಲುಗಿನ ಸುನೀಲ್ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ನಟರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಒಟ್ಟಿನಲ್ಲಿ ಇದೇ ವರ್ಷ ಐದು ಚಿತ್ರಗಳಿಗೂ ಚಾಲನೆ ಸಿಗಲಿದೆ ಎನ್ನುವುದು ಚಂದ್ರು ಮಾತು.

    ಡಾರ್ಲಿಂಗ್ ಕೃಷ್ಣ ಮತ್ತು ಪ್ರಕಾಶ್ ರೈ ಕಾಂಬಿನೇಷನ್ ನ ಮೊದಲ ಸಿನಿಮಾವಿದು. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಪರಿಕಲ್ಪನೆಯಲ್ಲಿ ಮೂಡಿ ಬರಲಿದೆ. ಸದ್ಯಕ್ಕೆ ಇಷ್ಟೇ ಮಾಹಿತಿಯನ್ನು ನೀಡಿರುವ ಚಂದ್ರು, ಮುಂದಿನ ದಿನಗಳಲ್ಲಿ ನಾಯಕಿ ಮತ್ತು ತಂತ್ರಜ್ಞರ ವಿವರನ್ನು ನೀಡಲಿದ್ದಾರಂತೆ.

     

    ಈ ಸಿನಿಮಾದ ನಂತರ ಚಂದ್ರು ಮತ್ತೊಂದು ಮೆಗಾ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಲಿದ್ದಾರೆ. ಅದು ಕೂಡ ಭಾರೀ ಬಜೆಟ್ ಅನ್ನು ಹೊಂದಿರುವ ಸಿನಿಮಾವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿ ಬರಲಿದೆ. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲಿ ಅವರು ತೊಡಗಿಕೊಳ್ಳಲಿದ್ದಾರೆ.

  • ‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಪ್ರಕಾಶ್ ರೈ- ರಮ್ಯಾಕೃಷ್ಣ

    ‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಪ್ರಕಾಶ್ ರೈ- ರಮ್ಯಾಕೃಷ್ಣ

    ಶ್ರೀನಗರ ಕಿಟ್ಟಿ (Srinagar Kitty) ಮುಖ್ಯಭೂಮಿಕೆಯಲ್ಲಿ ಮೂಡಿ ಬರಲಿರುವ ಸಂಜು ವೆಡ್ಸ್ ಗೀತಾ 2 (Sanju Weds Geetha 2) ಸಿನಿಮಾದಲ್ಲಿ ಅಚ್ಚರಿಯ ತಾರಾಬಳಗ ಇರಲಿದೆಯಂತೆ ನಿರ್ದೇಶಕ ನಾಗಶೇಖರ್ (Nagashekhar) ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಕಿಟ್ಟಿ ನಾಯಕನಾದರೆ, ನಾಯಕಿಯ ಆಯ್ಕೆ ನಡೆಯಬೇಕಿದೆ. ಈಗಾಗಲೇ ರಚಿತಾ ರಾಮ್ ಅವರ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿರುವುದರಿಂದ, ಬಹುತೇಕ ಅವರೇ ಖಚಿತ ಎಂದು ಹೇಳಲಾಗುತ್ತಿದೆ.

    ಇನ್ನೂ ಅಚ್ಚರಿಯ ಸಂಗತಿ ಅಂದರೆ, ಈ ಸಿನಿಮಾದಲ್ಲಿ ದಕ್ಷಿಣದ ಖ್ಯಾತ ತಾರೆಗಳಾದ ಪ್ರಕಾಶ್ ರೈ (Prakash Rai) ಮತ್ತು ರಮ್ಯಾಕೃಷ್ಣ (Ramya Krishna) ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಯಾರು, ಯಾವ ಪಾತ್ರಗಳನ್ನು ಮಾಡಲಿದ್ದಾರೆ ಎಂದು ನಾಗಶೇಖರ್ ಹೇಳದೇ ಇದ್ದರೂ, ಇಬ್ಬರೂ ನಟಿಸುವುದು ಪಕ್ಕಾ ಎಂದಿದ್ದಾರೆ. ಈಗಾಗಲೇ ಹಾಡುಗಳಿಗೆ ಸಂಗೀತ ಸಂಯೋಜನೆಯ ಕೆಲಸ ಪ್ರಾರಂಭವಾಗಿದೆ. ಇದನ್ನೂ ಓದಿ:‘ಲೈಗರ್‌’ ನಟಿ ಜೊತೆ ಆದಿತ್ಯ ಕಪೂರ್ ಕಣ್ ಕಣ್ ಸಲಿಗೆ

    ಈ ಸಿನಿಮಾದ ಕುರಿತು ಹತ್ತಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ ನಿರ್ದೇಶಕ ನಾಗಶೇಖರ್. ಸಂಜು ವೆಡ್ಸ್ ಗೀತಾ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ನಾಯಕನಾದರೆ, ರಮ್ಯಾ ನಾಯಕಿ. ಆದರೆ, ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಮುಂದುವರೆದರೆ, ರಮ್ಯಾ ನಾಯಕಿಯಾಗಿ ನಟಿಸುತ್ತಿಲ್ಲ. ಅದರ ಬದಲು ರಚಿತಾ ರಾಮ್ ಅವರಿಗೆ ಮಣೆ ಹಾಕಿದ್ದಾರಂತೆ ನಾಗಶೇಖರ್. ಆದರೆ, ರಚಿತಾ ಈವರೆಗೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.

    ಮೊದಲ ಭಾಗದ ಕಥೆಯನ್ನು ರಾಜ್ಯದ ಒಬ್ಬ ಪೊಲೀಸ್ ಅಧಿಕಾರಿ ಹೇಳಿದ್ದರು. ಅವರು ತನಿಖೆ ಮಾಡಿದ್ದ ಕೇಸ್ ಅನ್ನು ಆಧರಿಸಿದ ಸಿನಿಮಾ ಅದಾಗಿತ್ತು. ಪಾರ್ಟ್ 2 ಸಿನಿಮಾಗೆ ಕಥೆ ಹೇಳಿದ್ದು ಕನ್ನಡದ ಒಬ್ಬ ಸೂಪರ್ ಸ್ಟಾರ್ ಅಂತೆ. ಈ ಕುರಿತು ನಾಗಶೇಖರ್ ಮಾತನಾಡಿದ್ದಾರೆ. ಆದರೆ, ಆ ಸ್ಟಾರ್ ಯಾರು ಎನ್ನುವ ಕುತೂಹಲವನ್ನು ಅವರು ಬಿಟ್ಟುಕೊಟ್ಟಿಲ್ಲ. ಸ್ಟಾರ್ ನಟರೊಬ್ಬರು ಹೇಳಿದ ಕಥೆಯನ್ನೇ ಡೆವಲಪ್‌ ಮಾಡಿದ್ದೇನೆ ಎಂದಿದ್ದಾರೆ ನಾಗಶೇಖರ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ರಾಂತಿ ಬಳಿಕ ‘ಬಘೀರ’ ಶೂಟಿಂಗ್ ನಲ್ಲಿ ಭಾಗಿಯಾದ ಶ್ರೀಮುರಳಿ

    ವಿಶ್ರಾಂತಿ ಬಳಿಕ ‘ಬಘೀರ’ ಶೂಟಿಂಗ್ ನಲ್ಲಿ ಭಾಗಿಯಾದ ಶ್ರೀಮುರಳಿ

    ರೋಬ್ಬರಿ ಮೂರು ತಿಂಗಳು ನಂತರ ಮತ್ತೆ ಬಘೀರ (Bagheera) ಸಿನಿಮಾದ ಶೂಟಿಂಗ್ ಪ್ರಾರಂಭವಾಗಿದೆ. ಚಿತ್ರೀಕರಣದಲ್ಲಿ ಗಾಯಗೊಂಡಿದ್ದ ನಟ ಶ್ರೀಮುರಳಿಗೆ ವೈದ್ಯರು ಮೂರು ತಿಂಗಳ ಕಾಲ ವಿಶ್ರಾಂತಿ ತಗೆದುಕೊಳ್ಳುವಂತೆ ಸೂಚಿಸಿದ್ದರು. ಇದೀಗ ವಿಶ್ರಾಂತಿ ಪಡೆದು ಮತ್ತೆ ಚಿತ್ರೀಕರಣದಲ್ಲಿ (Shooting) ಪಾಲ್ಗೊಂಡಿದ್ದಾರೆ. ಅರ್ಧಕ್ಕೆ ನಿಂತಿದ್ದ ಸಾಹಸ ದೃಶ್ಯದ ಚಿತ್ರೀಕರಣಲ್ಲಿ ಅವರು ಭಾಗಿಯಾಗಿದ್ದಾರೆ.

    ನಿರ್ದೇಶಕ ಸೂರಿ ಸದ್ಯ ಪ್ರಕಾಶ್ ರೈ (Prakash Rai) ಕಾಣಿಸಿಕೊಳ್ಳುವ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದು, ಈ ದೃಶ್ಯಗಳು ಮುಗಿಯುತ್ತಿದ್ದಂತೆಯೇ ಚಿತ್ರತಂಡ ಮೈಸೂರಿಗೆ ಹಾರಲಿದೆಯಂತೆ. ರೇಸ್ ಕೋರ್ಸ್ ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಣ ಮಾಡುವ ಪ್ಲ್ಯಾನ್ ಮಾಡಿದೆಯಂತೆ ಚಿತ್ರತಂಡ. ಈ ಭಾಗದ ಶೂಟಿಂಗ್ ನಲ್ಲೂ ಶ್ರೀಮುರಳಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಸ್ಟಾರ್‌ ನಟರ ಚಿತ್ರಕ್ಕೆ ಶ್ರೀಲೀಲಾನೇ ಬೇಕು- ತೆಲುಗಿನ 9 ಸಿನಿಮಾಗಳಲ್ಲಿ ‘ಕಿಸ್‌’ ನಟಿ ಬ್ಯುಸಿ

    ಮೂರು ತಿಂಗಳ ಹಿಂದೆ ರಾಕ್‌ಲೈನ್ ಸ್ಟುಡಿಯೋದಲ್ಲಿ (Rockline Studio) ಹೊಂಬಾಳೆ ಸಂಸ್ಥೆ (Hombale Films) ನಿರ್ಮಾಣದ `ಬಘೀರ’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ರೋರಿಂಗ್ ಸ್ಟಾರ್ ಶ್ರೀಮುರಳಿಗೆ (Actor Srimurali) ಗಾಯಗಳಾಗಿದ್ದವು. ಸೂರಿ ನಿರ್ದೇಶನದ ಈ ಚಿತ್ರ ಕೊನೆಯ ಹಂತದ ಚಿತ್ರೀಕರಣದಲ್ಲಿತ್ತು. ಇನ್ನೇರೆಡೆ ದಿನಗಳಲ್ಲಿ ಶೂಟಿಂಗ್‌ಗೆ ಬ್ರೇಕ್ ಬೀಳೋದರಲ್ಲಿತ್ತು. ಈ ವೇಳೆ ಶ್ರೀಮುರಳಿಗೆ ಪೆಟ್ಟಾಗಿತ್ತು.

    `ಕೆಜಿಎಫ್’ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಬರೆದಿರುವ ಕಥೆಗೆ, ಡಾ.ಸೂರಿ ನಿರ್ದೇಶನ ಮಾಡುತ್ತಿದ್ದು, ಬಘೀರನಾಗಿ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿ ರಗಡ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆಯೇ ಚಿತ್ರ ಫಸ್ಟ್ ಲುಕ್ ರಿವೀಲ್ ಆಗಿದ್ದು, ಶ್ರೀಮುರಳಿ ಸಖತ್ ಖಡಕ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ರು. ಈ ಲುಕ್ ನೋಡಿ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದರು.

  • ಹಿಂದಿ ಹೇರಿಕೆಯ ವಿರುದ್ಧ ರಮ್ಯಾ ಕಿಡಿಕಿಡಿ : ಬಾಲಿವುಡ್ ಬಗೆಗೂ ಪಾಠ

    ಹಿಂದಿ ಹೇರಿಕೆಯ ವಿರುದ್ಧ ರಮ್ಯಾ ಕಿಡಿಕಿಡಿ : ಬಾಲಿವುಡ್ ಬಗೆಗೂ ಪಾಠ

    ‘ನಾಟು ನಾಟು’ (Natu Natu) ಹಾಡಿಗೆ ಆಸ್ಕರ್ (Oscar) ಬರುತ್ತಿದ್ದಂತೆಯೇ ಮತ್ತೆ ಬಾಲಿವುಡ್ (Bollywood) ಮೇಲೆ ಹಲವರು ಮುಗಿ ಬಿದ್ದಿದ್ದಾರೆ. ಪ್ರಕಾಶ್ ರೈ (Prakash Rai) ಸೇರಿದಂತೆ ಕೆಲ ನಟರು ಆಸ್ಕರ್ ‍ಪ್ರಶಸ್ತಿಯನ್ನಿಟ್ಟುಕೊಂಡು ಬೇರೆ ಬೇರೆ ರೀತಿಯಲ್ಲಿ ಟಾಂಗ್ ನೀಡುತ್ತಿದ್ದಾರೆ. ಆರ್.ಆರ್.ಆರ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದವರ ವಿರುದ್ಧ ವಾಗ್ದಾಳಿ ಮಾಡಿರುವ ಅವರು, ಆಸ್ಕರ್ ಪ್ರಶಸ್ತಿ ಬಂದಿದ್ದಕ್ಕೆ ಈಗ ಏನ್ ಹೇಳ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.

    ನಟಿ ರಮ್ಯಾ (Ramya) ಕೂಡ ಹಿಂದಿ ಹೇರಿಕೆ ಹಾಗೂ ಬಾಲಿವುಡ್ ಬಗ್ಗೆ ವಿಭಿನ್ನವಾದ ರೀತಿಯಲ್ಲೇ ಟ್ವೀಟ್ ಮಾಡಿದ್ದು, ಹಿಂದಿ (Hindi) ಮಾತಾಡಲ್ಲ ಎಂದು ವೈರಲ್ ಆಗಿದ್ದ ಆಟೋಡ್ರೈವರ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಭಾರತ ಹಲವು ಭಾಷೆಗಳನ್ನು, ನಾನಾ ರೀತಿಯ ಸಂಸ್ಕೃತಿಯನ್ನು ಹೊಂದಿರುವ ದೇಶ. ಯಾರೂ ಯಾರ ಮೇಲೆ ಹೇರಿಕೆ ಸಲ್ಲ. ಭಾರತ ಅಂದರೆ ಬಾಲಿವುಡ್ ಅಲ್ಲ, ಭಾರತ ಅಂದರೆ ಹಿಂದಿಯಲ್ಲ’ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ:  ಕ್ರಿಕೆಟರ್ ಶುಭಮನ್ ಗಿಲ್ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾದ ರಶ್ಮಿಕಾ ಮಂದಣ್ಣ

    ಭಾಷಾ ವಿಚಾರವಾಗಿ ನಟಿ ರಮ್ಯಾ ಆಗಾಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಲೇ ಇರುತ್ತಾರೆ. ಅದರಲ್ಲೂ ದಕ್ಷಿಣ ಸಿನಿಮಾಗಳ ಬಗ್ಗೆಯೂ ಮೆಚ್ಚುಗೆ ನುಡಿಗಳನ್ನು ಆಡಿದ್ದಾರೆ. ನಾಟು ನಾಟು ತೆಲುಗಿನ ಸಿನಿಮಾ. ಆಸ್ಕರ್ ವೇದಿಕೆಯ ಮೇಲೆ ತೆಲುಗು ಗೀತೆಯನ್ನೇ ಹಾಡಿದ್ದು ಎಂದು ಬರೆಯುವ ಮೂಲಕ ಹಿಂದಿ ಹೇರಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ವಿರೋಧಿಸಿದ್ದಾರೆ. ರಮ್ಯಾ ಟ್ವೀಟ್ ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

  • ಹಿಂದಿ ಹೇರಿಕೆ ಕುರಿತು ಮತ್ತೆ ಗುಡುಗಿದ ನಟ ಪ್ರಕಾಶ್ ರೈ

    ಹಿಂದಿ ಹೇರಿಕೆ ಕುರಿತು ಮತ್ತೆ ಗುಡುಗಿದ ನಟ ಪ್ರಕಾಶ್ ರೈ

    ಭಾಷಾ ವಿಚಾರದಲ್ಲಿ ಮತ್ತೆ ಪ್ರಶ್ನೆ ಮಾಡಿದ್ದಾರೆ ನಟ ಪ್ರಕಾಶ್ ರೈ (Prakash Rai). ಹಿಂದಿ (Hindi)ಹೇರಿಕೆಯನ್ನು ಯಾವತ್ತೂ ಸಹಿಸಲ್ಲ ಎನ್ನುವ ಅವರು ಎಲ್ಲ ಭಾಷೆಗೂ ಗೌರವ ಕೊಡುವುದಾಗಿ ಹೇಳಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ‘ನನ್ನ ಬೇರು, ನನ್ನ ಮೂಲ ಕನ್ನಡ. ನನ್ನ ತಾಯಿಯನ್ನು ಗೌರವಿಸದೆ ನಿನ್ನ ಹಿಂದಿಯನ್ನು ಹೇರಿದರೆ ನಾವು ಹೀಗೇ ಪ್ರತಿಭಟಿಸುತ್ತೇವೆ. ಹೆದರಲ್ಲ ಅಷ್ಟೇ’ ಎಂದು ಬರೆದುಕೊಂಡಿದ್ದಾರೆ.

    ಕನ್ನಡದ (Kannada) ವಿಚಾರವಾಗಿ ಪ್ರಕಾಶ್ ರೈ ಮತ್ತೆ ಮಾತನಾಡಿದ್ದಕ್ಕೆ ಕಾರಣವಿದೆ. ಈ ಹಿಂದೆ ಪ್ರಕಾಶ್ ರೈ ‘ನಂಗೆ ಹಿಂದಿ ಬರಲ್ಲ ಹೋಗ್ರಪ್ಪ’ ಎಂದು ಬರಹವಿರುವ ಟಿ ಶರ್ಟ್ ಹಾಕಿಕೊಂಡಿದ್ದರು. ಹಿಂದಿ ಹೇರಿಕೆಯನ್ನು ಬಲವಾಗಿ ವಿರೋಧಿಸಿದ್ದರು. ಇದಕ್ಕೆ ಆಕ್ಷೇಪನೆ ವ್ಯಕ್ತಪಡಿಸಿದ್ದ ಶಶಾಂಕ್ ಶೇಖರ್ ಝಾ (Shashank Shekhar Jha) ಎನ್ನುವವರು ಪ್ರಕಾಶ್ ರೈ ವಿರುದ್ಧ ಎಫ್‍.ಐ.ಆರ್ ಹಾಕಿದ್ದೀರಾ ಎಂದು ಪೊಲೀಸರಿಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರಕಾಶ್ ರೈ ಸಿಡಿದೆದ್ದಿರಾ. ಇದನ್ನೂ ಓದಿ: ಬ್ಯಾಕ್‌ಲೆಸ್ ಫೋಟೋ ಶೇರ್‌, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ `ಸಲಾರ್’ ನಟಿ

    ಸರಣಿಯ ಟ್ವೀಟ್ ಮಾಡಿರುವ ಪ್ರಕಾಶ್ ರೈ, ‘ನಾನು ಏಳು ಭಾಷೆಗಳನ್ನು ಬಲ್ಲೆ. ಒಂದು ಭಾಷೆಯನ್ನು ಕಲಿತು ಮಾತನಾಡುವುದು ಎಂದರೆ ಆ ಭಾಷೆಯ ಜನರನ್ನು ಗೌರವಿಸುವುದು. ನಾನು ಹೋಗುವಲ್ಲೆಲ್ಲಾ ಆಯಾ ಭಾಷೆಯಲ್ಲಿ ಸಂವಾದಿಸುತ್ತೇನೆ. ನನ್ನ ಭಾಷೆಯನ್ನು ಹೇರುವುದಿಲ್ಲ. ಆದರೆ, ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ ನಿಂತು ಹೋರಾಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

    ಕನ್ನಡ ನೆಲೆ, ನುಡಿ ಬಗ್ಗೆ ಪ್ರಕಾಶ್ ರೈ ಮತ್ತೆ ಧ್ವನಿ ಎತ್ತಿದ್ದಕ್ಕೆ ಹಲವರು ಬೆಂಬಲವಾಗಿ ನಿಂತಿದ್ದಾರೆ. ಇನ್ನೂ ಕೆಲವರು ಟೀಕೆಯನ್ನೂ ಮಾಡಿದ್ದಾರೆ. ಕನ್ನಡದ ವಿಚಾರವಾಗಿ ಏನೇ ಟೀಕೆಗಳು ಬಂದರೂ, ನಾನು ಹೆದರುವುದಿಲ್ಲ. ಹಿಂದಿ ಹೇರಿಕೆಯನ್ನೂ ಸಹಿಸುವುದಿಲ್ಲ ಎಂದು ಪ್ರಕಾಶ್ ಉತ್ತರಿಸಿದ್ದಾರೆ. ಬಹುತೇಕ ಪ್ರಶ್ನೆಗಳಿಗೆ ಉತ್ತರಿಸುವಂತಹ ಕೆಲಸವನ್ನೂ ಅವರು ಮಾಡಿದ್ದಾರೆ.

  • ಪ್ರಕಾಶ್ ರೈ ‘ಅರ್ಬನ್ ನಕ್ಸಲ್’ : ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್

    ಪ್ರಕಾಶ್ ರೈ ‘ಅರ್ಬನ್ ನಕ್ಸಲ್’ : ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್

    ಹೆಸರಾಂತ ನಟ ಪ್ರಕಾಶ್ ರೈ (Prakash Rai) ಗೆ ದಿ ಕಾಶ್ಮೀರ್ ಫೈಲ್ಸ್ (The Kashmir Files)ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅರ್ಬನ್ ನಕ್ಸಲ್ (Urban Naxal) ಎಂದು ಕರೆದಿದ್ದಾರೆ. ಅಲ್ಲದೇ, ಅಂಧಕಾರ್ ರಾಜ್ ಎಂದೂ ಅವರನ್ನು ಸಂಬೋಧಿಸಿದ್ದಾರೆ. ಈ ಹಿಂದಿ ಪ್ರಕಾಶ್ ರೈ ಪಠಾಣ್ (Pathan) ಸಿನಿಮಾದ ಬಗ್ಗೆ ಮಾತನಾಡುತ್ತಾ, ‘ಪಠಾಣ್ ಸಿನಿಮಾ 700 ಕೋಟಿ ಸಂಪಾದಿಸಿದೆ. ಕೆಲವರು ಈ ಸಿನಿಮಾವನ್ನು ಬ್ಯಾನ್ ಮಾಡಲು ಹೊರಟಿದ್ದರು. ಮೂರ್ಖರು, ಮತಾಂಧರು ಪಠಾಣ್ ಸಿನಿಮಾಗೆ ತೊಂದರೆ ಕೊಟ್ಟರು. ಮೋದಿ (Modi) ಸಿನಿಮಾ 30 ಕೋಟಿಯೂ ಕಲೆಕ್ಷನ್ ಮಾಡಲಿಲ್ಲ. ಅವರು ಬೊಗಳುತ್ತಾರೆ ಕಚ್ಚುವುದಿಲ್ಲ’ ಎಂದು ಟೀಕೆ ಮಾಡಿದ್ದರು.

    ಮುಂದುವರೆದು ಮಾತನಾಡಿದ್ದ ಪ್ರಕಾಶ್ ರೈ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನೂ ಟೀಕಿಸಿದ್ದರು. ಭಾಸ್ಕರ್ ಪ್ರಶಸ್ತಿಯನ್ನೂ ಪಡೆಯದವರು ಆಸ್ಕರ್ ಪ್ರಶಸ್ತಿ ಕೇಳುತ್ತಿದ್ದಾರೆ ಎಂದು ಪರೋಕ್ಷವಾಗಿ ವಿವೇಕ್ ಅಗ್ನಿಹೋತ್ರಿಯನ್ನು ಕಾಲೆಳೆದಿದ್ದರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಅಂತಾರಾಷ್ಟ್ರೀಯ ಜ್ಯೂರಿಗಳು ತೆಗಳಿದ್ದರು ಎಂದು ನೆನಪಿಸಿದ್ದರು. ಹೀಗಾಗಿ ಅಗ್ನಿಹೋತ್ರಿ ಮತ್ತೆ ಪ್ರಕಾಶ್ ರೈಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾ ರ್ಥ್ -ಕಿಯಾರಾ ಜೋಡಿ

    ಸೋಷಿಯಲ್ ಮೀಡಿಯಾದಲ್ಲಿ ಪ್ರಕಾಶ್ ರೈ ಅವರ ಬಗ್ಗೆ ಬರೆದಿರುವ ವಿವೇಕ್ ಅಗ್ನಿಹೋತ್ರಿ, ‘ಅರ್ಬನ್ ನಕ್ಸಲ್ ಗಳ ನಿದ್ದೆ ಕೆಡಿಸಿದೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ. ಚಿತ್ರವು ಬಿಡುಗಡೆಯಾಗಿ ಒಂದು ವರ್ಷ ಕಳೆದರೂ, ಓರ್ವ ವ್ಯಕ್ತಿಯ ನಿದ್ದೆ ಕೆಡಿಸಿದೆ ಆ ಸಿನಿಮಾ. ಭಾಸ್ಕರ್ ಪ್ರಶಸ್ತಿಯು ನಿಮ್ಮ ಬಳಿಯೇ ಇರುವಾಗ  ಅದನ್ನು ನಾನು ಪಡೆಯಲು ಸಾಧ್ಯವಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

    ಪಠಾಣ್ ಸಿನಿಮಾದ ಗೆಲುವಿನ ಹಿನ್ನೆಲೆಯಲ್ಲಿ ಶಾರುಖ್ ಖಾನ್ ಪರವಾಗಿ ಪ್ರಕಾಶ್ ರೈ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಭಕ್ತರು ಎಷ್ಟೇ ಚೀರಾಡಿದರೂ ಸಿನಿಮಾ ಗೆದ್ದಿತು. ಆದರೆ, ಮೋದಿ ಸಿನಿಮಾ ಮೂವತ್ತು ಕೋಟಿ ರೂಪಾಯಿಯನ್ನೂ ಮಾಡಲಿಲ್ಲ ಎಂದು ಕಾಲೆಳೆದಿದ್ದರು. ಪ್ರಕಾಶ್ ರೈ ಅವರ ಈ ಬರಹ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಇದೀಗ ವಿವೇಕ್ ಅಗ್ನಿಹೋತ್ರಿ ತಿರುಗೇಟು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೋಮಲ್ ನಟನೆಯ ‘ಕಾಲಾಯ ನಮಃ’ ಅಡ್ಡದಲ್ಲಿ ಕಾಣಿಸಿಕೊಂಡ ಪ್ರಕಾಶ್ ರೈ

    ಕೋಮಲ್ ನಟನೆಯ ‘ಕಾಲಾಯ ನಮಃ’ ಅಡ್ಡದಲ್ಲಿ ಕಾಣಿಸಿಕೊಂಡ ಪ್ರಕಾಶ್ ರೈ

    ನಪ್ರಿಯ ಹಾಸ್ಯನಟ ಕೋಮಲ್ ಕುಮಾರ್, ಐದು ವರ್ಷಗಳ ನಂತರ ನಾಯಕರಾಗಿ ನಟಿಸುತ್ತಿರುವ ಚಿತ್ರ ‘ಕಾಲಾಯಾ ನಮಃ’ ಪ್ರಸ್ತುತ ಈ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈಗ ಮತ್ತೊಂದು ಖುಷಿಯ ವಿಚಾರವೆಂದರೆ, ತಮ್ಮ ನಟನೆಯ ಮೂಲಕ ಭಾರತದಾದ್ಯಂತ ಹೆಸರು ಮಾಡಿರುವ ಬಹುಭಾಷಾ ನಟ ಪ್ರಕಾಶ್ ರೈ ‘ಕಾಲಾಯಾ ನಮಃ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.  ಪ್ರಕಾಶ್ ರೈ ಅವರ ಅಭಿನಯದ ಸನ್ನಿವೇಶಗಳ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ.

    ಕೋಮಲ್ ಹಲವು ವರ್ಷಗಳ ನಂತರ ಮತ್ತೆ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಸಂಭ್ರಮ ತಂದಿದೆ. ಬಹುತೇಕ ಹಾಸ್ಯ ಪಾತ್ರಗಳ ಮೂಲಕವೇ ಗುರುತಿಸಿಕೊಂಡಿದ್ದ ಅವರು, ಆನಂತರ ಒಂದಷ್ಟು ಸಾಹಸ ಪ್ರಧಾನ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದರು. ಸಿನಿಮಾ ರಂಗದಲ್ಲಿ ಏರುಗತಿಯಲ್ಲಿ ಇರುವಾಗಲೇ, ಹಲವು ಎಡವಟ್ಟುಗಳನ್ನು ಮಾಡಿಕೊಂಡ ಪರಿಣಾಮ, ಚಿತ್ರಗಳು ಸೋಲು ಕಂಡವು. ಆನಂತರ ಅವರು ಸಿನಿಮಾ ರಂಗದಿಂದಲೇ ದೂರ ಉಳಿದುಕೊಂಡರು. ಇದನ್ನೂ ಓದಿ:ನಾವಿನ್ನೂ ಮಗುವಿಗೆ ಸಿದ್ಧರಿಲ್ಲ: ಚಂದನ್ ಶೆಟ್ಟಿ ಪ್ರತಿಕ್ರಿಯೆ

    ಇದೀಗ ಮತ್ತೆ ಹೊಸ ಸಿನಿಮಾದ ಮೂಲಕ ವಾಪಸ್ಸಾಗಿದ್ದಾರೆ. ಎಲ್ಲ ಎಚ್ಚರಿಕೆಗಳನ್ನು ತಗೆದುಕೊಂಡು ಈ ಸಿನಿಮಾವನ್ನು ಮಾಡುತ್ತಿದ್ದಾರೆ. ಅನುಸೂಯ ಕೋಮಲ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಮತಿವಣನ್ ನಿರ್ದೇಶಿಸುತ್ತಿದ್ದಾರೆ. ಎಮಿಲ್ ಸಂಗೀತ ನಿರ್ದೇಶನ ಹಾಗೂ ರಾಕೇಶ್ ಸಿ ತಿಲಕ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕೋಮಲ್ ಕುಮಾರ್,  ಆಸಿಯಾ ಫಿರ್ದೋಸ್, ಪ್ರಕಾಶ್ ರೈ, ಸುಚೀಂದ್ರ ಪ್ರಸಾದ್, ತಿಲಕ್, ಯತಿರಾಜ್ ಜಗ್ಗೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k