Tag: Prakash Padukone

  • ವಿದ್ಯಾರ್ಥಿ ಭವನ ಹೋಟೆಲ್‌ನಲ್ಲಿ ಮಸಾಲೆ ದೋಸೆ ಸವಿದ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ

    ವಿದ್ಯಾರ್ಥಿ ಭವನ ಹೋಟೆಲ್‌ನಲ್ಲಿ ಮಸಾಲೆ ದೋಸೆ ಸವಿದ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ

    ಬೆಂಗಳೂರು: ಗಾಂಧೀ ಬಜಾರ್‌ನಲ್ಲಿರುವ ಪ್ರಸಿದ್ಧ ವಿದ್ಯಾರ್ಥಿ ಭವನ (Vidyarthi Bhavan) ಹೋಟೆಲಿಗೆ ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ (Indian Former Badminton Player) ಹಾಗೂ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ಲಕ್ಷ್ಯ ಸೇನ್‌ಗೆ ಮೆಂಟರ್ ಆಗಿದ್ದ ಪ್ರಕಾಶ್ ಪಡುಕೋಣೆ ಭೇಟಿ ನೀಡಿದ್ದಾರೆ.ಇದನ್ನೂ ಓದಿ: ಜೆಡಿಎಸ್ ಕಾರ್ಯಾಧ್ಯಕ್ಷೆ ಎಂದು ಹೇಳಿ 8 ಮದುವೆಯಾಗಿ ಕೋಟಿ ಕೋಟಿ ವಂಚನೆ – ಖತರ್ನಾಕ್ ಲೇಡಿ ವಿರುದ್ಧ ಕೇಸ್

    ಪ್ರಕಾಶ್ ಪಡುಕೋಣೆ (Prakash Padukone)ಹಾಗೂ ಪತ್ನಿ ಉಜ್ಜಾಲಾ ಪಡುಕೋಣೆ (Ujjala Padukone) ಅವರು ಭೇಟಿ ನೀಡಿ, ವಿದ್ಯಾರ್ಥಿ ಭವನದ ಫೇಮಸ್ ಮಸಾಲೆ ದೋಸೆಯನ್ನು (Masala Dosa) ಸವಿದಿದ್ದಾರೆ.

    ಪ್ರಕಾಶ್ ಪಡುಕೋಣೆ ಭೇಟಿ ನೀಡಿದ ವಿಚಾರವನ್ನು ವಿದ್ಯಾರ್ಥಿ ಭವನ ತನ್ನ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿದೆ. ದಂಪತಿ ಉಪಹಾರವನ್ನು ಸಂತೋಷದಿಂದ ಸೇವಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದೆ. ‘ನಿನ್ನೆ ಸಂಜೆ ಭಾರತ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ ಪಡುಕೋಣೆ ಭೇಟಿ ನೀಡಿರುವುದು ಸಂತೋಷವಾಯಿತು’ ಎಂದು ಹೇಳಿದೆ.ಇದನ್ನೂ ಓದಿ: ದುಬೈನಲ್ಲಿ ಕಾರು-ಲಾರಿ ಡಿಕ್ಕಿ: ಬೆಳಗಾವಿ ಮೂಲದ ಒಂದೇ ಕುಟುಂಬದ ನಾಲ್ವರ ಸಜೀವ ದಹನ

    ಬೆಂಗಳೂರಿನ ಗಾಂಧೀ ಬಜಾರ್ ಬಡಾವಣೆಯಲ್ಲಿರುವ ವಿದ್ಯಾರ್ಥಿ ಭವನ 70 ವರ್ಷಕ್ಕಿಂತ ಹಳೆಯದಾದ ಸಸ್ಯಾಹಾರಿ ಹೋಟೆಲ್ ಆಗಿದ್ದು, ಈಗಲೂ ಜನಪ್ರಿಯತೆ ಮತ್ತು ಆಹಾರದ ಗುಣಮಟ್ಟವನ್ನು ಉಳಿಸಿಕೊಂಡು ಬಂದಿದೆ. ಭಾರತ ಸೇರಿದಂತೆ ವಿದೇಶದ ಹಲವು ಗಣ್ಯರು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಆಹಾರ ಸೇವಿಸುತ್ತಾರೆ.

  • ಅಪ್ಪು ಕಪ್ ಸೀಸನ್-2 :  ಲೋಗೋ ಅನಾವರಣ ಮಾಡಿದ ಪ್ರಕಾಶ್ ಪಡುಕೋಣೆ

    ಅಪ್ಪು ಕಪ್ ಸೀಸನ್-2 : ಲೋಗೋ ಅನಾವರಣ ಮಾಡಿದ ಪ್ರಕಾಶ್ ಪಡುಕೋಣೆ

    ವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ಆಯೋಜಿಸಲಾಗಿರುವ ಅಪ್ಪು ಕಪ್ (Appu Cup) ಸೀಸನ್-2 ಸ್ಯಾಂಡಲ್ ವುಡ್ ಬ್ಯಾಡ್ಮಿಂಟನ್ ಲೀಗ್ ಲೋಗೋ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿಂದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ (Badminton League) ನಲ್ಲಿ ನೆರವೇರಿತು. ಭಾರತೀಯ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ (Prakash Padukone) ಲೋಗೋ ಅನಾವರಣ ಮಾಡಿ ಆಟಗಾರರಿಗೆ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ರಾಜೇಶ್ ರೆಡ್ಡಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮಾ.ಹರೀಶ್, ಹಿರಿಯ ಸಿನಿಮಾ ಪತ್ರಕರ್ತರಾದ ಸದಾಶಿವ ಶೆಣೈ ಉಪಸ್ಥಿತರಿದ್ದರು.

    ಬಳಿಕ ಪ್ರಕಾಶ್ ಪಡುಕೋಣೆ, ಪುನೀತ್ ರಾಜ್ ಕುಮಾರ್ (Puneeth Rajkumar) ಅವರು ನನಗೆ ಪರ್ಸನಲ್ ಆಗಿ ಗೊತ್ತಿದ್ದರು. ತುಂಬಾ ಫ್ರೆಂಡ್ಲಿಯಾಗಿದ್ದವರು. ಐದಾರು ವರ್ಷದ ಹಿಂದೆ ನಾವೊಂದು ಇವೆಂಟ್ ಮಾಡಿದ್ದೆವು. ಒಂದೇ ಒಂದು ಫೋನ್ ಕಾಲ್ ಗೆ ಬಂದು ನಮ್ಮ ಜೊತೆ ಎಕ್ಸಿಬ್ಯೂಷನ್ ಮ್ಯಾಚ್ ಆಡಿದ್ದರು. ಸ್ಯಾಂಡಲ್ ವುಡ್ ಇಂಡಸ್ಟ್ರೀಯಲ್ಲಿ ತುಂಬಾ ಜನ ಬ್ಯಾಡ್ಮಿಂಟನ್ ಆಡುತ್ತಾರೆ ಅನ್ನೋದನ್ನು ಕೇಳಿ ಖುಷಿ ಆಯ್ತು. ಅಪ್ಪು ಕಪ್ ಸ್ಯಾಂಡಲ್ ವುಡ್ ಬ್ಯಾಡ್ಮಿಂಟನ್ ಹೀಗೆ ಮುಂದುವರೆಯಲಿ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ:ಮಹೇಶ್ ಬಾಬು ಚಿತ್ರದಿಂದ ಪೂಜಾ ಹೆಗ್ಡೆ ಕಿಕ್ ಔಟ್- ತ್ರಿಷಾ ಇನ್?

    ಕನ್ನಡ ಕಲಾವಿದರು, ತಂತ್ರಜ್ಞರು ಹಾಗೂ ಮಾಧ್ಯಮದವರು ಆಡಲಿರುವ ಈ ಪಂದ್ಯಾವಳಿ ಆಗಸ್ಟ್ ತಿಂಗಳಾಂತ್ಯಕ್ಕೆ ಶುರುವಾಗಲಿದೆ. ಕಳೆದ ಬಾರಿ ಒಟ್ಟು ಎಂಟು ತಂಡಗಳು ಭಾಗಿಯಾಗಿದ್ದವು. ದಿಗಂತ್, ಸೃಜನ್ ಲೋಕೇಶ್, ವಸಿಷ್ಠ ಸಿಂಹ, ಪ್ರಿಯಾಂಕಾ ಉಪೇಂದ್ರ, ರಾಗಿಣಿ, ಕವಿತಾ ಲಂಕೇಶ್, ಶ್ವೇತಾ ಶ್ರೀವಾಸ್ತವ್, ಮಾಸ್ಟರ್ ಆನಂದ್  ತಂಡದ ಪೈಕಿ ಸೃಜನ್ ಲೋಕೇಶ್ ನೇತೃತ್ವದ ರಾಜ್ ಕುಮಾರ ಕಿಂಗ್ಸ್ ಕಳೆದ ಬಾರಿ ಗೆಲುವು ಸಾಧಿಸಿತ್ತು. ಈ ಬಾರಿ ಮತ್ತಷ್ಟು ತಾರೆಯರು ಅಪ್ಪು ಕಪ್ ಸೀಸನ್-2 ಸ್ಯಾಂಡಲ್ ವುಡ್ ಬ್ಯಾಡ್ಮಿಂಟನ್ ಲೀಗ್ ಮೆರಗು ಹೆಚ್ಚಿಸಲಿದ್ದಾರೆ.

  • ತಂದೆಯ ಹುಟ್ಟುಹಬ್ಬದಂದು ತಿರುಪತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ದೀಪಿಕಾ ಪಡುಕೋಣೆ

    ತಂದೆಯ ಹುಟ್ಟುಹಬ್ಬದಂದು ತಿರುಪತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ದೀಪಿಕಾ ಪಡುಕೋಣೆ

    ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಕಾನ್ ಫೆಸ್ಟಿವಲ್ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ. ಕುಟುಂಬದ ಜೊತೆ ತಿರುಪತಿ ತಿರುಮಲಕ್ಕೆ ಭೇಟಿ ಕೊಟ್ಟಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಹಿಂದಿ ಚಿತ್ರರಂಗದ ಪ್ರತಿಭಾನ್ವಿತ ನಟಿ ಕನ್ನಡತಿ ದೀಪಿಕಾ, 75ನೇ ಕಾನ್ ಚಿತ್ರೋತ್ಸವದಲ್ಲಿ ಜ್ಯೂರಿಯಾಗಿ ಕಾಣಿಸಿಕೊಂಡ ನಂತರ ಇದೀಗ ತಮ್ಮ ಕುಟುಂಬದ ಜತೆ ತಿರುಪತಿ ತಿಮ್ಮಪ್ಪನ ಸನ್ನಿಧಿ ಬಂದಿದ್ದಾರೆ. ತಂದೆ ಪ್ರಕಾಶ್ ಪಡುಕೋಣೆ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದಿದ್ದಾರೆ. ಸದ್ಯ ದೀಪಿಕಾ ತಮ್ಮ ಕುಟುಂಬದ ಜೊತೆ ತಿರುಪತಿಗೆ ಬಂದಿರುವ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮಲಯಾಳಂ ಪೃಥ್ವಿರಾಜ್ ಜೊತೆ ಹೊಂಬಾಳೆ ಫಿಲ್ಮ್ಸ್ ಘೋಷಣೆ : ಐದು ಭಾಷೆಗಳಲ್ಲಿ ಸಿನಿಮಾ

    ಶಾರುಖ್ ನಟನೆಯ `ಪಠಾಣ್’, ಹೃತಿಕ್ ರೋಷನ್ ಜತೆಗಿನ ಚಿತ್ರ ಮತ್ತು ಪ್ರಭಾಸ್ ಮತ್ತು ಬಿಗ್‌ಬಿ ಕಾಂಬಿನೇಷನ್ ಹೊಸ ಚಿತ್ರದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ದೀಪಿಕಾ ಪಡುಕೋಣೆ ಬ್ಯುಸಿಯಾಗಿದ್ದಾರೆ.

  • 7 ಕೋಟಿಗೆ ಬೆಂಗಳೂರಲ್ಲಿ ಫ್ಲ್ಯಾಟ್ ಖರೀದಿಸಿದ ದೀಪಿಕಾ

    7 ಕೋಟಿಗೆ ಬೆಂಗಳೂರಲ್ಲಿ ಫ್ಲ್ಯಾಟ್ ಖರೀದಿಸಿದ ದೀಪಿಕಾ

    – ತಂದೆ ಜೊತೆ ಗಂಗಾನಗರದಲ್ಲಿ ಮನೆ ಖರೀದಿ

    ಬೆಂಗಳೂರು: ಮೂಲತಃ ಕರ್ನಾಟಕದವರಾದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತವರಿನತ್ತ ಕೊಂಚ ಒಲವು ಹೊಂದಿದ್ದಾರೆ. ಹೀಗಾಗಿ ನಗರದ ಬಳ್ಳಾರಿ ರಸ್ತೆಯ ಗಂಗಾನಗರದಲ್ಲಿ 6.79 ಕೋಟಿ ರೂ.ಗಳನ್ನು ನೀಡಿ ಫ್ಲ್ಯಾಟ್ ಖರೀದಿಸಿದ್ದಾರೆ. ಆದರೆ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರಾ ಅಥವಾ ರಾಜ್ಯಕ್ಕೆ ಭೇಟಿ ನೀಡಿದಾಗ ಉಳಿದುಕೊಳ್ಳಲು ಫ್ಲ್ಯಾಟ್ ಖರೀದಿಸಿದ್ದಾರಾ ತಿಳಿಯಬೇಕಿದೆ.

    ದೀಪಿಕಾ ಪಡುಕೋಣೆಯವರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪಡುಕೋಣೆಯವರು. ಇವರ ತಂದೆ ಪ್ರಕಾಶ್ ಪಡುಕೋಣೆ ಭಾರತದ ಮಾಜಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರರು. ದೀಪಿಕಾ ಅವರು ತವರಿನ ಬಗ್ಗೆ ಒಲವು ಹೊಂದಿದ್ದಾರೆ. ಆಗಾಗ ರಾಜ್ಯಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ಇದೀಗ ಬೆಂಗಳೂರಲ್ಲಿ ಮನೆ ಫ್ಲ್ಯಾಟ್ ಖರೀದಿಸುವ ಮೂಲಕ ಗಮನಸೆಳೆದಿದ್ದಾರೆ. ಇದನ್ನೂ ಓದಿ: ವಿಕ್ರಾಂತ್ ರೋಣ ಸಿನಿಮಾಗೆ ಸಲ್ಮಾನ್ ಖಾನ್ ಮೆಚ್ಚುಗೆ

    ಬಾಲಿವುಡ್‍ಗೆ ಕಾಲಿಟ್ಟ ಬಳಿಕ ಹ್ಯಾಟ್ರಿಕ್ ಸಿನಿಮಾಗಳಲ್ಲಿ ನಟಿಸಿರುವ ದೀಪಿಕಾ, ಮುಂಬೈನಲ್ಲೇ ವಾಸಿಸುತ್ತಿದ್ದರು. ಬಳಿಕ ನಟ ರಣವೀರ್ ಸಿಂಗ್ ಜೊತೆ ವಿವಾಹವಾದರು. ಇದೀಗ ತಂದೆ ಜೊತೆ ಸೇರಿ ಬೆಂಗಳೂರಿನಲ್ಲಿ ಮನೆ ಖರೀದಿಸುವ ಮೂಲಕ ತವರಿಗೆ ಮರಳುತ್ತಿದ್ದಾರೆ. ಆದರೆ ಇದೇ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರಾ ಅಥವಾ ಆಗಾಗ ಭೇಟಿ ಕೊಡಲಿದ್ದಾರಾ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ:  ಜನ್ಮದಿನಾಚರಣೆಯ ಸಂಭ್ರಮದಲ್ಲಿ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್

    ಆ.7ರಂದು 6.79 ಕೋಟಿ ರೂ.ಗೆ ಫ್ಲ್ಯಾಟ್ ಖರೀದಿಸಿದ್ದು, ಸ್ಟಾಂಪ್ ತೆರಿಗೆಯಾಗಿ 34.64 ಲಕ್ಷ ರೂ.ಪಾವತಿಸಿದ್ದಾರೆ. ಬೆಂಗಳೂರಿನಿಂದ ಬಳ್ಳಾರಿ ಅಂದರೆ ಹೊಸ ವಿಮಾನ ನಿಲ್ದಾಣದ ರಸ್ತೆಯ ಗಂಗಾನಗರದಲ್ಲಿನ ಎಂಬಸಿ ಗ್ರೂಪ್‍ನ ಫೋರ್ ಸೀಸನ್ಸ್ ಎಂಬ 27 ಅಂತಸ್ತಿನ ಅಪಾರ್ಟ್‍ಮೆಂಟ್‍ನಲ್ಲಿ 22ನೇ ಅಂತಸ್ತಿನಲ್ಲಿ ಫ್ಲ್ಯಾಟ್ ಖರೀದಿಸಿದ್ದಾರೆ.

    ಫ್ಲ್ಯಾಟ್ ವಿಶೇಷತೆ
    ಒಟ್ಟು 3451.37 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಈ ಅಪಾರ್ಟ್‍ಮೆಂಟ್‍ನಲ್ಲಿ ಪ್ರತಿಯೊಬ್ಬರಿಗೂ ಖಾಸಗಿ ನಿವಾಸವನ್ನು ನೀಡುತ್ತದೆ. ವಿಸ್ತಾರವಾದ 2 ಮಲಗುವ ಕೋಣೆಗಳು ಹಾಗೂ 2 ಕಾರ್ ಪಾರ್ಕಿಂಗ್‍ಗಳನ್ನು ಹೊಂದಿದೆ.

  • ತಂದೆಗಾಗಿ ದೀಪಿಕಾ ಟ್ವೀಟ್

    ತಂದೆಗಾಗಿ ದೀಪಿಕಾ ಟ್ವೀಟ್

    ಮುಂಬೈ: ಬಾಲಿವುಡ್ ಮಸ್ತಾನಿ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆಗಾಗಿ ಟ್ವೀಟ್ ಮಾಡಿ, ನಮಗೆ ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಪ್ರಕಾಶ್ ಪಡುಕೋಣೆ ಮಾಜಿ ಬ್ಯಾಡ್ಮಿಂಟನ್ ಆಟಗಾರರಾಗಿದ್ದಾರೆ.

    ಪತ್ರಕರ್ತರೊಬ್ಬರ ಟ್ವೀಟಿಗೆ ಪ್ರತಿಕ್ರಿಯೆ ನೀಡಿರುವ ಪದ್ಮಾವತಿ, ಅಪ್ಪ, ಬ್ಯಾಡ್ಮಿಂಟನ್ ಮತ್ತು ಭಾರತದ ಕ್ರೀಡಾಲೋಕಕ್ಕೆ ನಿಮ್ಮ ಕೊಡುಗೆ ಅಪಾರ. ನಿಮ್ಮ ಶಿಸ್ತು, ಸಮರ್ಪಣೆ ಮತ್ತು ಶಿಸ್ತು ಹಲವರಿಗೆ ಸ್ಪೂರ್ತಿಯಾಗಿದೆ. ಇಷ್ಟು ವರ್ಷಗಳ ನಿಮ್ಮ ಪರಿಶ್ರಮಕ್ಕೆ ಕೃತಜ್ಞತೆಗಳು. ನಮಗೆ ನಿಮ್ಮ ಬಗ್ಗೆ ಗೌರವ ಮತ್ತು ಹೆಮ್ಮೆ ಇದೆ ಎಂದು ಭಾವನಾತ್ಮಕವಾಗಿ ಮುದ್ದಿನ ಮಗಳಾಗಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.

    ಇದೇ ದಿನ ಪ್ರಕಾಶ್ ಪಡುಕೋಣೆಯವರು, ಲಂಡನ್ ನಗರದ ವೆಂಬ್ಲೆ ಏರೆನಾದಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ತಮ್ಮದಾಗಿಸಿಕೊಂಡಿದ್ದರು ಎಂದು ಬರೆದು ದೀಪಿಕಾ ಅವರಿಗೆ ಪತ್ರಕರ್ತ ಟ್ಯಾಗ್ ಮಾಡಿದ್ದರು. ಈ ಟ್ವೀಟಿಗೆ ದೀಪಿಕಾ ಪ್ರತಿಕ್ರಿಯಿಸುವ ತಮ್ಮ ತಂದೆಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

  • ಯುವ ಬ್ಯಾಡ್ಮಿಂಟನ್ ಪ್ರತಿಭೆಗಳ ತರಬೇತಿಗೆ ಇನ್ಫೋಸಿಸ್ 16 ಕೋಟಿ ರೂ. ನೆರವು

    ಯುವ ಬ್ಯಾಡ್ಮಿಂಟನ್ ಪ್ರತಿಭೆಗಳ ತರಬೇತಿಗೆ ಇನ್ಫೋಸಿಸ್ 16 ಕೋಟಿ ರೂ. ನೆರವು

    ಬೆಂಗಳೂರು: ಯುವ ಪ್ರತಿಭೆಗಳಿಗೆ ಬ್ಯಾಡ್ಮಿಂಟನ್ ತರಬೇತಿ ನೀಡುತ್ತಿರುವ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯೊಂದಿಗೆ ಇನ್ಫೋಸಿಸ್ 16 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ.

    ಇನ್ಫೋಸಿಸ್‍ನ ಕಾರ್ಪೊರೇಟ್ ಹೊಣೆಗಾರಿಗೆ ವಿಭಾಗವಾಗಿರುವ ಇನ್ಫೋಸಿಸ್ ಫೌಂಡೇಶನ್ ಪ್ರಕಾಶ್ ಪಡುಕೋಣೆ ಅವರ ಅಕಾಡೆಮಿಯೊಂದಿಗೆ 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ 25 ವರ್ಷಗಳನ್ನು ಪೂರೈಸಿದ್ದು, ಇಲ್ಲಿ ತರಬೇತಿ ಪಡೆದ ಹಲವು ಯುವ ಪ್ರತಿಭೆಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಅಕಾಡೆಮಿಯಲ್ಲಿ ತರಬೇತಿ ಪಡೆಯಲಿರುವ ಯುವ ಸಮುದಾಯಕ್ಕೆ ನೆರವಾಗುವ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಹೊಸ ಪ್ರತಿಭೆಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ತರಬೇತಿ ಹಾಗೂ ನೆರವು ನೀಡಲು ಸಹಕಾರಿಯಾಗುತ್ತದೆ.

    ಇನ್ಫೋಸಿಸ್‍ನ ಈ ಕಾರ್ಯಕ್ರಮಕ್ಕೆ ಇನ್ಫೋಸಿಸ್ ಫೌಂಡೇಶನ್ ಪಿಪಿಬಿಎ ಚಾಂಪಿಯನ್ ನರ್ಚರಿಂಗ್ ಪ್ರೋಗ್ರಾಂ ಎಂದು ಹೆಸರಿಸಲಾಗಿದೆ. 2019 ಅಕ್ಟೋಬರ್ ನಿಂದ ಆರಂಭವಾಗುವ ಈ ಕಾರ್ಯಕ್ರಮ ಮುಂದಿನ 5 ವರ್ಷಗಳ ಕಾಲ ನಡೆಯಲಿದೆ. ಅಕಾಡೆಮಿಯಲ್ಲಿ ಪ್ರತಿ ವರ್ಷ 65 ಯುವ ಪ್ರತಿಭೆಗಳಿಗೆ ತರಬೇತಿ ನೀಡುವ ಗುರಿಯನ್ನು ಕಾರ್ಯಕ್ರಮ ಹೊಂದಿದೆ.

    ಈ ಕಾರ್ಯಕ್ರಮದಿಂದ ಭಾರತದಲ್ಲಿ ಮುಂದಿನ 10 ವರ್ಷಗಳ ಬ್ಯಾಡ್ಮಿಂಟನ್ ನಲ್ಲಿ ಯುವ ಪ್ರತಿಭೆಗಳು ರಾರಾಜಿಸಲಿದ್ದಾರೆ. ಅದರಲ್ಲೂ ದೇಶದ 2 ಮತ್ತು 3 ದರ್ಜೆಯ ನಗರ, ಹಳ್ಳಿ ಪ್ರದೇಶಗಳಿಂದ ನಾವು ಯುವ ಆಟಗಾರರನ್ನು ಆಯ್ಕೆ ಮಾಡಿ ತರಬೇತಿ ನೀಡುತ್ತಿದ್ದೇವೆ. ಇನ್ಫೋಸಿಸ್ ನೆರವಿನಿಂದ ಸಂಸ್ಥೆ ಮತ್ತಷ್ಟು ಪ್ರತಿಭೆಗಳಿಗೆ ತರಬೇತಿ ನೀಡಲಿದೆ ಎಂದು ಪ್ರಕಾಶ್ ಪಡುಕೋಣೆ ತಿಳಿಸಿದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಸುಧಾ ಮೂರ್ತಿ ಅವರು, ನಮ್ಮ ಭಾರತದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಸಾಧನೆ ಮಾಡಬೇಕಿದೆ. ವಿಶ್ವಮಟ್ಟದ ತರಬೇತಿ ನೀಡುವ ಮೂಲಕ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಕಾರ್ಯಕ್ರಮ ಇದಾಗಿದ್ದು, ಬೆಂಬಲದ ಕೊರತೆ ಎದುರಿಸುತ್ತಿದ್ದ ಕ್ರೀಡಾಪಟುಗಳಿಗೆ ಇದು ನೆರವಾಗಲಿದೆ ಎಂದಿದ್ದಾರೆ.

  • ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ!

    ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ!

    ನವದೆಹಲಿ: ಬಾಲಿವುಡ್‍ನ ಗುಳಿಕೆನ್ನೆ ಬೆಡಗಿ, ಪದ್ಮಾವತಿ ದೀಪಿಕಾ ಪಡುಕೋಣೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಣ್ಣೀರು ಹಾಕಿದ್ದಾರೆ.

    ಖ್ಯಾತ ಬ್ಯಾಡ್ಮಿಂಟನ್ ಆಟಗಾರರಾಗಿರುವ ದೀಪಿಕಾರ ತಂದೆ ಪ್ರಕಾಶ್ ಪಡುಕೋಣೆ `ಜೀವಮಾನ ಶ್ರೇಷ್ಠ’ ಪ್ರಶಸ್ತಿಯನ್ನು ಪಡೆದುಕೊಂಡರು. ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ ನೀಡುವ ಲೈಫ್ ಟೈಮ್ ಅಚೀವ್‍ಮೆಂಟ್ ಅವಾರ್ಡ್ ಈ ಬಾರಿ ಪ್ರಕಾಶ್ ಪಡುಕೋಣೆ ಅವರಿಗೆ ಲಭಿಸಿದೆ. ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ದೀಪಿಕಾ, ತನ್ನ ತಂದೆಯನ್ನು ಕಂಡು ಒಂದು ಕ್ಷಣ ಭಾವುಕರಾಗಿದ್ದಾರೆ.

    ದೀಪಿಕಾ ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿಯೂ ಕುಟುಂಬಕ್ಕೆ ಸಮಯವನ್ನು ಮೀಸಲಿಡುತ್ತಾರೆ. ದೆಹಲಿಯಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ತಾಯಿ ಉಜ್ಜಲಾ, ಸೋದರಿ ಅನಿಶಾ ಜೊತೆ ದೀಪಿಕಾ ಭಾಗಿಯಾಗಿದ್ರು. ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರಕಾಶ್ ಪಡುಕೋಣೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ರು.

    ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸಹ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿ ಪಡುಕೋಣೆ ಕುಟುಂಬದ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದು, `ಜೀವಮಾನ ಶ್ರೇಷ್ಠ ಪ್ರಶಸ್ತಿ ಪಡೆದ ಪಡುಕೋಣೆ ಸರ್‍ಗೆ ಹಾಗು ನಿಮ್ಮ ಸುಂದರ ಕುಟುಂಬಕ್ಕೆ ಶುಭಾಶಯಗಳು. ದೀಪಿಕಾ ನನ್ನ ನೆಚ್ಚಿನ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ’ ಅಂತ ಬರೆದುಕೊಂಡಿದ್ದಾರೆ.

    ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ದೀಪಿಕಾ ಪಡುಕೊಣೆ ಅವರು ಸಿಲ್ಕ್ ಸೀರೆ, ಅದಕ್ಕೆ ಸರಿಹೊಂದುವ ಉದ್ದನೆ ತೋಳಿನ ಬ್ಲೌಸ್ ಧರಿಸಿ ಅಪ್ಪಟ ದೇಸಿ ಲುಕ್‍ನಲ್ಲಿ ಕಂಗೊಳಿಸುತ್ತಿದ್ದರು. ಮುಂಬೈ ವಿಮಾನ ನಿಲ್ದಾಣದಿಂದ ದೆಹಲಿಗೆ ಬರುವ ಸಂದರ್ಭದಲ್ಲಿ ದೀಪಿಕಾ ಮತ್ತು ಸೋದರಿ ಅನಿಶಾ ಇಬ್ಬರು ನೀಲಿ ಬಣ್ಣದ ಜೀನ್ಸ್, ವೈಟ್ ಟೀಶರ್ಟ್ ಮೇಲೊಂದು ಕಪ್ಪು ಬಣ್ಣದ ಜ್ಯಾಕೆಟ್ ಧರಿಸಿ ಮಿಂಚಿದ್ದರು.

    ಹಲವಾರು ವಿವಾದಗಳ ಬಳಿಕ ಇದೀಗ ದೀಪಿಕಾ ನಟಿಸಿದ್ದ `ಪದ್ಮಾವತ್’ ಚಿತ್ರ ಬಿಡಿಗಡೆಯಾಗಿದ್ದು, ಈಗಾಗಲೇ 100 ಕೋಟಿಗೂ ಅಧಿಕ ಹಣವನ್ನು ಗಳಿಸಿ ಮುನ್ನುಗುತ್ತಿದೆ. ಸಿನಿಮಾದಲ್ಲಿ ದೀಪಿಕಾ ರಜಪೂತ ರಾಣಿ ಪದ್ಮಾವತಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸಾಕಷ್ಟು ಅಡೆ ತಡೆಗಳು ಉಂಟಾದರೂ ನೋಡುಗರು ಮತ್ತು ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ.

    https://www.instagram.com/p/Beih6h8FbgF/?taken-by=pvsindhu1

    https://www.instagram.com/p/BeiwLF3DLCd/?taken-by=deepika_padukone05

    https://www.instagram.com/p/BejsaotD7zl/?taken-by=deepika_padukone05

    https://www.instagram.com/p/BeiQYe0B1is/?utm_source=ig_embed

    https://www.instagram.com/p/BehxTRFHYxc/?taken-by=shaleenanathani

  • ಸೈನಾ ಪಾತ್ರ ನಿರ್ವಹಣೆಗೆ ಶ್ರದ್ಧಾ ಕಪೂರ್ ಹೇಗೆ ತಯಾರಿ ನಡೆಸ್ತಿದ್ದಾರೆ ಗೊತ್ತಾ?

    ಸೈನಾ ಪಾತ್ರ ನಿರ್ವಹಣೆಗೆ ಶ್ರದ್ಧಾ ಕಪೂರ್ ಹೇಗೆ ತಯಾರಿ ನಡೆಸ್ತಿದ್ದಾರೆ ಗೊತ್ತಾ?

    ಮುಂಬೈ: ಬಾಲಿವುಡ್ ಹೀರೋ ಪ್ರಭಾಸ್ ಅಭಿನಯದ ಸಾಹೋಗೆ ಆಯ್ಕೆ ಆಗಿರುವ ಶ್ರದ್ಧಾ ಕಪೂರ್ ಸೈನಾ ನೆಹ್ವಾಲ್ ಅವರ ಜೀವನಾಧರಿತ ಚಿತ್ರದಲ್ಲೂ ನಟಿಸುತ್ತಿದ್ದು ಈಗ ನಾನು ಹೇಗೆ ಈ ಚಿತ್ರಕ್ಕೆ ತಯಾರಿ ಆಗುತ್ತಿದ್ದೇನೆ ಎನ್ನುವುದನ್ನು ತೋರಿಸಲು ಫೋಟೋಗಳನ್ನು ಪ್ರಕಟಿಸಿದ್ದಾರೆ.

    ಶ್ರದ್ಧಾ ಹಾಗೂ ಸೈನಾ ಜೊತೆಯಲ್ಲೇ ಬ್ಯಾಡ್ಮಿಂಟನ್ ಟ್ರೈನಿಂಗ್ ಮುಗಿಸಿ ತೆಗೆಸಿಕೊಂಡ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದಾರೆ. ಫೋಟೋದಲ್ಲಿ ಸೈನಾ ಮತ್ತು ಶ್ರದ್ಧಾ ಗಂಭೀರವಾಗಿ ಮಾತನಾಡುತ್ತಿದ್ದು ಸೈನಾ ಶ್ರದ್ಧಾಗೆ ಬ್ಯಾಡ್ಮಿಂಟನ್ ಟೆಕ್ನಿಕ್ ಗಳನ್ನು ಹೇಳಿಕೊಡುತ್ತಿದ್ದಾರೆ.

    ಈ ಮೊದಲು ದೀಪಿಕಾ ಪಡುಕೋಣೆ ಅವರನ್ನು ಸೈನಾ ಪಾತ್ರಕ್ಕಾಗಿ ಆಯ್ಕೆ ಮಾಡಲಾಗಿತ್ತು ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಈಗ ಈ ಸಿನಿಮಾ ಶ್ರದ್ಧಾ ಪಾಲಾಗಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರ ತಂದೆ ಪ್ರಕಾಶ್ ಪಡುಕೋಣೆ ಶ್ರದ್ಧಾಳಿಗೆ ಬ್ಯಾಡ್ಮಿಂಟನ್ ಹೇಳಿಕೊಡುತ್ತಿದ್ದಾರೆ. ಸಿನಿಮಾ ಶೂಟಿಂಗ್ ಮುಗಿಯುವರೆಗೆ ಶ್ರದ್ಧಾ ದಿನನಿತ್ಯ ಬ್ಯಾಡ್ಮಿಂಟನ್ ಅಭ್ಯಾಸವನ್ನು ನಡೆಸುತ್ತಾರೆ ಎಂದು ಮೂಲಗಳು ತಿಳಿಸಿವೆ.

    ಸೈನಾ ಬ್ಯಾಡ್ಮಿಂಟನ್ ಆಟಕ್ಕಾಗಿ ಜೀವನವನ್ನು ಮುಡಿಪಿಟ್ಟಿದ್ದಾರೆ. ಹೀಗಾಗಿ ಈ ಪಾತ್ರಕ್ಕೆ ನ್ಯಾಯ ಒದಗಿಸಲು ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ ಎಂದು ಶ್ರದ್ಧಾ ತಿಳಿಸಿದ್ದಾರೆ. ಅಮೋಲ್ ಗುಪ್ತಾ ನಿರ್ದೇಶಿಸುತ್ತಿರುವ ಈ ಚಿತ್ರ ಹೈದರಾಬಾದ್ ಹಾಗೂ ಮುಂಬೈನಲ್ಲಿ ಚಿತ್ರೀಕರಣ ಆಗಲಿದೆ. 2018ರಲ್ಲಿ ಈ ಚಿತ್ರ ತೆರೆ ಮೇಲೆ ಬರುವ ಸಾಧ್ಯತೆಯಿದೆ.

     

     

    ????❤️ @nehwalsaina

    A post shared by Shraddha (@shraddhakapoor) on