Tag: Prakash Javedkar

  • ಬಹುಸಂಖ್ಯಾತ ಹಿಂದೂಗಳು ರಾಮ ಮಂದಿರವನ್ನ ಬಾಬ್ರಿ ಮಸೀದಿಯ ಜಾಗದಲ್ಲಿ ನೋಡಲು ಇಷ್ಟಪಡಲ್ಲ: ಶಶಿ ತರೂರ್

    ಬಹುಸಂಖ್ಯಾತ ಹಿಂದೂಗಳು ರಾಮ ಮಂದಿರವನ್ನ ಬಾಬ್ರಿ ಮಸೀದಿಯ ಜಾಗದಲ್ಲಿ ನೋಡಲು ಇಷ್ಟಪಡಲ್ಲ: ಶಶಿ ತರೂರ್

    ನವದೆಹಲಿ: ಬಹುಸಂಖ್ಯಾತ ಹಿಂದೂಗಳು ರಾಮ ಮಂದಿರವನ್ನ ಬಾಬ್ರಿ ಮಸೀದಿಯ ಜಾಗದಲ್ಲಿ ನೋಡಲು ಇಷ್ಟಪಡುವುದಿಲ್ಲ ಎಂದು ತಿರುವನಂತಪುರಂ ಕ್ಷೇತ್ರದ ಕಾಂಗ್ರೆಸ್ ಸಂಸದ ಶಶಿ ತರೂರ್ ಎಂದು ಹೇಳಿದ್ದಾರೆ.

    ಚೆನ್ನೈನಲ್ಲಿ ನಡೆದ “ದ ಹಿಂದೂ ಲಿಟ್ ಫಾರ್ ಲೈಫ್” ಕಾರ್ಯಕ್ರಮದಲ್ಲಿ ಬಾಬ್ರಿ ಮಸೀದಿ ರಾಮಮಂದಿರ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ತರೂರ್, ಬಹುಸಂಖ್ಯಾತ ಹಿಂದೂಗಳು ಅಯೋಧ್ಯೆ ರಾಮ ಜನ್ಮ ಭೂಮಿ ಸ್ಥಳವೆಂದು ನಂಬಿರುತ್ತಾರೆ. ಆದರೆ ನಿಜವಾದ ಹಿಂದು ಬೇರೆಯವರ ಪೂಜಾ ಸ್ಥಳವನ್ನ ಧ್ವಂಸ ಮಾಡಿದ ಜಾಗದಲ್ಲಿ ರಾಮ ಮಂದಿರವನ್ನ ನೋಡಲು ಇಷ್ಟ ಪಡುವುದಿಲ್ಲ ಎಂದು ಉತ್ತರಿಸಿದ್ದಾರೆ.

    ಈ ಹೇಳಿಕೆಯ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದ್ದಂತೆ ತರೂರ್, ಸಾಹಿತ್ಯ ಉತ್ಸವಲ್ಲಿ ಕೇಳಿದ ಪ್ರಶ್ನೆಗೆ ಪ್ರತ್ಯುತ್ತರವಾಗಿ ನಾನು ಈ ಹೇಳಿಕೆಯನ್ನ ನೀಡಿದ್ದು, ಇದು ನನ್ನ ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ ಅಭಿಪ್ರಾಯವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಬಿಜೆಪಿ ವಕ್ತಾರ ಶಹನವಾಜ್ ಹುಸೇನ್ ಪ್ರತಿಕ್ರಿಯಿಸಿ, ಪ್ರತಿದಿನ ಪೂಜೆ ಮಾಡಲು ತಾತ್ಕಾಲಿಕವಾಗಿ ನಿರ್ಮಿಸಿರುವ ದೇವಾಲಯದ ಟೆಂಟ್ ಅನ್ನು ತೆಗೆದು ಹಾಕಬೇಕೆನ್ನುವುದು ಇವರ ವಾದವೇ? ಇದೂವರೆಗೂ ಯಾರು ಈ ರೀತಿಯ ಬೇಡಿಕೆಯನ್ನು ಇಟ್ಟಿಲ್ಲ ಪ್ರಶ್ನಿಸಿದ್ದಾರೆ.

    ಕೆಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೇಡ್ಕರ್ ಅವರು, ನಿಜವಾದ ಹಿಂದುಗಳಿಗೆ ಅಯೋಧ್ಯೆಯಲ್ಲಿ ರಾಮ ಮಂದಿರವನ್ನ ನೋಡಲು ಬಯಸುವುದಿಲ್ಲ ಎಂದು ಹೇಳಿಕೆ ಕೊಟ್ಟಿರುವ ಶಶಿ ತರೂರ್ ರ ನೋಡಿ ನನಗೆ ಬಹಳ ಆಶ್ಚರ್ಯವಾಗಿದೆ. ನೈಜತೆಯಿಂದ ಎಷ್ಟು ದೂರವಿದ್ದಾರೆ ಎಂದು ಇದರಿಂದ ತಿಳಿಯುತ್ತೆ. ಇದು ಕೇವಲ ರಾಹುಲ್ ಗಾಂಧಿ ಮತ್ತು ಶಶಿ ತರೂರ್ ಅವರ ನಿಲುವಾಗಿದ್ದು, ಜನರದ್ದಲ್ಲ. ಇವರೆಲ್ಲಾ ಚುನಾವಣೆಯ ಸಮಯದಲ್ಲಿ ಮಾತ್ರ ಹಿಂದೂಗಳಾಗಿರುತ್ತಾರೆ ಎಂದು ಟೀಕಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv