Tag: prajwaldevaraj

  • 6 ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪ್ರಜ್ವಲ್ ದೇವರಾಜ್

    6 ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪ್ರಜ್ವಲ್ ದೇವರಾಜ್

    ಬೆಂಗಳೂರು: ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಆಗಿರುವ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಅವರು ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ. ದಾಂಪತ್ಯ ಜೀವನಕ್ಕೆ 6 ವರ್ಷ ತುಂಬಿರುವ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ವರ್ಷಗಳು ಹೋಗಬಹುದು, ಆದರೆ ನೆನಪುಗಳು ನಮ್ಮೊಂದಿಗೆ ಬೆಳಗುತ್ತಲೇ ಇರುತ್ತವೆ. ನಿನ್ನೊಂದಿಗೆ ಅತ್ಯುತ್ತಮ ನೆನಪುಗಳನ್ನು ಕಳೆದಿದ್ದೇನೆ ಕನ್ನಾ, ಥ್ಯಾಂಕ್ ಯೂ ಫಾರ್ ಎವ್ರಿಥಿಂಗ್ ಎಂದು ಬರೆದುಕೊಂಡು ಮದುವೆಯ ವೀಡಿಯೋವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ಜೋಡಿಗೆ ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡಿ ಶುಭ ಕೋರುತ್ತಿದ್ದಾರೆ. ಇದನ್ನೂ ಓದಿ:  ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

     

    View this post on Instagram

     

    A post shared by Prajwal Devaraj (@prajwaldevaraj)

    ಪ್ರಜ್ವಲ್ ದೇವರಾಜ್ ತಮ್ಮ ಬಾಲ್ಯದ ಸ್ನೇಹಿತೆಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಹೌದು ತಮ್ಮ ಬಾಲ್ಯ ಸ್ನೇಹಿತೆ ಆದ ರಾಗಿಣಿ ಚಂದ್ರನ್ ಅವರನ್ನು ಪ್ರೀತಿಸಿ ನಂತರ ವಿವಾಹವಾಗಿದ್ದು, ಇದೀಗ ತಮ್ಮ ಆರನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ರಾಗಿಣಿ ಅವರು ಸಹ ಪ್ರೋಫೆಷನಲ್ ಡ್ಯಾನ್ಸರ್ ಆಗಿದ್ದಾರೆ. ಆಗಾಗ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ಡಾನ್ಸ್‍ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದನ್ನೂ ಓದಿ: ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಇಂಡೋನೇಷ್ಯಾ ಸಂಸ್ಥಾಪಕನ ಪುತ್ರಿ ಮತಾಂತರ

    ಪ್ರಜ್ವಲ್ ದೇವರಾಜ್ ಅವರು ತಮ್ಮ ಅಭಿನಯದ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ವಾರ್ಷಿಕಫತ್ಸವ ಸಂಭ್ರಮದಲ್ಲಿ ಇರುವ ಈ ಜೋಡಿಗೆ ಮದುವೆ ವಾರ್ಷಿಕೋತ್ಸವಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

  • ಡೈನಾಮಿಕ್ ಪ್ರಿನ್ಸ್ ಪ್ರಜ್ಜುಗೆ ದಾಸನ ವಿಶ್

    ಡೈನಾಮಿಕ್ ಪ್ರಿನ್ಸ್ ಪ್ರಜ್ಜುಗೆ ದಾಸನ ವಿಶ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಪ್ರಜ್ವಲ್‍ಗೆ ನಟ ದರ್ಶನ್ ಟ್ವೀಟ್ ಮೂಲಕವಾಗಿ ಶುಭಕೋರಿದ್ದಾರೆ.

    ಹುಟ್ಟು ಹಬ್ಬದ ಶುಭಾಶಯಗಳು ಪ್ರಜ್ಜು, ದೇವರು ಆಯಸ್ಸು ಆರೋಗ್ಯ ಕೊಟ್ಟು ಇನ್ನಷ್ಟು ಯಶಸ್ಸು ಕೊಡಲಿ. ನಿಮ್ಮ ಮುಂದಿನ ಎಲ್ಲ ಸಿನಿಮಾಗಳು ಪ್ರಜ್ವಲಿಸಲಿ ಎಂದು ಬರೆದುಕೊಂಡು ದರ್ಶನ್ ಮತ್ತು ಪ್ರಜ್ವಲ್ ಕಾರಿನಲ್ಲಿ ಕುಳಿತುಕೊಂಡಿರುವ ಹಳೆಯ ಫೋಟೋವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕವಾಗಿ ಶುಭಕೋರಿದ್ದಾರೆ.

    ಡೈನಾಮಿಕ್ ಸ್ಟಾರ್ ದೇವರಾಜ್‍ರವರ ಮಗ ಪ್ರಜ್ವಲ್ ಸ್ಯಾಂಡಲ್‍ವುಡ್‍ನಲ್ಲಿರುವ ಕ್ಯೂಟ್ ಸ್ಟಾರ್ ನಟರಲ್ಲೊಬ್ಬರಾಗಿದ್ದಾರೆ . ಪ್ರಜ್ವಲ್ ಅವರು ಇಂದು 34 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವೇಳೆ ಸಾಕಷ್ಟು ಅಭುಮಾನಿಗಳು, ಸೆಲೆಬ್ರಿಟಿಗಳು ಶುಭಕೋರುತ್ತಿದ್ದಾರೆ. ಜನ್ಮ ದಿನದಂದು ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಅಭಿಮಾನಿಗಳೆಗೆ ಗಿಫ್ಟ್ ನೀಡಿದ್ದಾರೆ. ಇಲ್ಲಿ ಅತ್ತರು ಅಲ್ಲಿ ನೆತ್ತರು,, ಎಂದು ಬರೆದುಕೊಂಡು “ಮಾಫಿಯ” ಸಿನಿಮಾದ ಪೋಸ್ಟರ್ ಅನ್ನು ಪ್ರಜ್ವಲ್ ದೇವರಾಜ್ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.  ಇದನ್ನೂ ಓದಿ: 34ನೇ ವಸಂತಕ್ಕೆ ಕಾಲಿಟ್ಟ ಡೈನಾಮಿಕ್ ಪ್ರಿನ್ಸ್ – ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್

     

    View this post on Instagram

     

    A post shared by Prajwal Devaraj (@prajwaldevaraj)

    ಈ ಬಾರಿ ಕೊರೊನಾ ಇರುವುದರಿಂದ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ಪ್ರಜ್ವಲ್ ದೇವರಾಜ್‍ರವರು ಅಭಿನಯಿಸಿರುವ ಮಾಫಿಯಾ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಸಿನಿಮಾಕ್ಕೆ ನಿರ್ದೇಶಕ ಗುರುದತ್ ಆ್ಯಕ್ಷನ್ ಕಟ್ ಹೇಳಿದ್ದು, ಪೋಸ್ಟರ್‍ನಲ್ಲಿ ಪ್ರಜ್ವಲ್ ಪೊಲೀಸ್ ಆಫೀಸರ್ ಡ್ರೆಸ್ ತೊಟ್ಟು, ಜೀಪಿನೊಳಗೆ ಕುಳಿತುಕೊಂಡು ಖಡಕ್ ಲುಕ್ ನೀಡಿದ್ದಾರೆ.