Tag: Prajwal Revanna Pen drive Case

  • ಪ್ರಜ್ವಲ್ ಜಾಮೀನು ಅರ್ಜಿ ವಿಚಾರಣೆ ಜೂ.24ಕ್ಕೆ ಮುಂದೂಡಿಕೆ

    ಪ್ರಜ್ವಲ್ ಜಾಮೀನು ಅರ್ಜಿ ವಿಚಾರಣೆ ಜೂ.24ಕ್ಕೆ ಮುಂದೂಡಿಕೆ

    -ಪ್ರತಿ ಪ್ರಕರಣದಲ್ಲೂ ಪುರುಷತ್ವ ಪರೀಕ್ಷೆಯಿಂದ ಮುಜುಗರ ಎಂದ ಪ್ರಜ್ವಲ್

    ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Court) ವಿಚಾರಣೆಯನ್ನು ಜೂ.24ಕ್ಕೆ ಮುಂದೂಡಿದೆ.

    ಎರಡನೇ ಕೇಸ್‍ನಲ್ಲಿ ಬಾಡಿ ವಾರೆಂಟ್ ಪಡೆದಿದ್ದ ಎಸ್‍ಐಟಿ, ಇಂದು ಕೋರ್ಟ್‍ಗೆ ಹಾಜರುಪಡಿಸಿತು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಂತೋಷ್ ಗಜಾನನ ಭಟ್, ಎಸ್‍ಐಟಿಗೆ ನೋಟಿಸ್ ನೀಡಿ ಅರ್ಜಿ ವಿಚಾರಣೆಯನ್ನು ಮುಂದೂಡಿದ್ದಾರೆ. ಈ ಮೂಲಕ ಪ್ರಜ್ವಲ್‍ಗೆ ನ್ಯಾಯಾಂಗ ಬಂಧನ ಮುಂದುವರಿಸಲಾಗಿದೆ. ಇದನ್ನೂ ಓದಿ: ಇಂಡಿಯಾ ಒಕ್ಕೂಟದ ನಾಯಕರಿಗೆ ಪತ್ರ ಬರೆದು ಭೇಟಿಗೆ ಸಮಯ ಕೇಳಿದ ಸ್ವಾತಿ ಮಲಿವಾಲ್

    ವಿಚಾರಣೆ ವೇಳೆ ನ್ಯಾಯಮೂರ್ತಿಗಳು, ನಿಮಗೆ ಆರೋಗ್ಯ ಸಮಸ್ಯೆ ಇದೆಯೇ ಎಂದು ವಿಚಾರಿಸಿದ್ದಾರೆ. ಈ ವೇಳೆ ಪ್ರಜ್ವಲ್ ಉಸಿರಾಟದ ಸಮಸ್ಯೆ ಇದೆ. ಎಂಆರ್‍ಐ ಮಾಡಿಸಬೇಕಿದೆ ಎಂದು ಹೇಳಿದ್ದಾರೆ. ನಾನು ಎರಡು ಕೇಸ್‍ನಲ್ಲಿ ಪುರುಷತ್ವ ಪರೀಕ್ಷೆ ಒಪ್ಪಿ ಮಾಡಿಸಿಕೊಂಡಿದ್ದೇನೆ. ಇದರಿಂದ ತುಂಬಾ ಮುಜುಗರ ಆಗತ್ತೆ. ಮತ್ತೆ ಅದೇ ಟೆಸ್ಟ್ ಮಾಡಿಸಲು ಹೇಳ್ತಾರೆ. ಈಗಾಗಲೇ ಎರಡು ಬಾರಿ ಒಂದೇ ಟೆಸ್ಟ್ ಮಾಡಲಾಗಿದೆ ಎಂದು ಅವರು ಜಡ್ಜ್ ಮುಂದೆ ಅಳಲು ತೋಡಿಕೊಂಡಿದ್ದಾರೆ.

    ಈ ವೇಳೆ ಮೂರನೇ ಕೇಸ್‍ನಲ್ಲಿ ಕಸ್ಟಡಿಗೆ ಬಾಡಿ ವಾರಂಟ್ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದ್ದು, ಜೂ.19 ರಂದು ಅರ್ಜಿ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ವಯನಾಡಿನಿಂದ ಸ್ಪರ್ಧಿಸುತ್ತಿರುವುದು ನನಗೆ ಖುಷಿ ತಂದಿದೆ: ರಾಬರ್ಟ್ ವಾದ್ರಾ

  • 2ನೇ ಅತ್ಯಾಚಾರ ಪ್ರಕರಣ – ಪ್ರಜ್ವಲ್‍ಗೆ ಮತ್ತೆ ಮೆಡಿಕಲ್ ಟೆಸ್ಟ್

    2ನೇ ಅತ್ಯಾಚಾರ ಪ್ರಕರಣ – ಪ್ರಜ್ವಲ್‍ಗೆ ಮತ್ತೆ ಮೆಡಿಕಲ್ ಟೆಸ್ಟ್

    – ವಿದೇಶಿ FSL ತಜ್ಞರ ನೆರವು ಪಡೆಯಲು ಮುಂದಾದ ಎಸ್‍ಐಟಿ?

    ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ದಾಖಲಾಗಿದ್ದ 2ನೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ (Medical Examination) ನಡೆಸಲಾಗಿದೆ.

    ವಿಡಿಯೋದಲ್ಲಿ ಕಾಣಿಸಿದ ಪುರುಷನ ಅಂಗಾಂಗಳೊಂದಿಗೆ ಪ್ರಜ್ವಲ್ ರೇವಣ್ಣ ಅಂಗಗಳನ್ನು ಹೋಲಿಕೆ ಮಾಡಲು ಅಧಿಕಾರಿಗಳ ತಂಡ ಚಿಂತನೆ ನಡೆಸಿದೆ. ಈ ಪರೀಕ್ಷೆಗೆ ಗುಜರಾತ್‍ನ ಅಹಮದಾಬಾದ್‍ನ ವಿಧಿ ವಿಜ್ಞಾನ ಪ್ರಯೋಗಾಲಯ (FSL) ಹಾಗೂ ವಿದೇಶಿ ತಜ್ಞರ ನೆರವು ಪಡೆದುಕೊಳ್ಳಲು ಎಸ್‍ಐಟಿ ತಂಡ ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಎಸ್‍ಐಟಿ ಅಧಿಕಾರಿಗಳು ಆರೋಪಿಯ ಧ್ವನಿ ಮಾದರಿಯನ್ನು ಸಂಗ್ರಹಿಸಿದ್ದಾರೆ. ಅಶ್ಲೀಲ ವಿಡಿಯೋಗಳಲ್ಲಿನ ಮುಖ ಮರೆ ಮಾಚಿಕೊಂಡಿರುವ ವ್ಯಕ್ತಿಯ ಪತ್ತೆಗೆ ಅಂಗಾಂಗ ಪರೀಕ್ಷೆಗೆ ಎಸ್‍ಐಟಿ ಮುಂದಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: `ಡಿ’ಬಾಸ್ ಬಗ್ಗೆ ಮಾತಾಡಿದ್ರೆ ಜೀವಂತ ಸುಡೋದಾಗಿ ಬೆದರಿಕೆ – ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ವಶಕ್ಕೆ

    ಮೊದಲನೇ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ವ್ಯದ್ಯಕೀಯ ಪರೀಕ್ಷೆ ನಡೆದಿತ್ತು. ಇದೀಗ ದಾಖಲಾಗಿದ್ದ, 2ನೇ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‍ಗೆ ವೈದ್ಯಕೀಯ ಪರೀಕ್ಷೆ ನಡೆದಿದೆ. ಪ್ರಜ್ವಲ್‍ಗೆ ವ್ಯದ್ಯಕೀಯ ಪರೀಕ್ಷೆ ಹಿನ್ನೆಲೆ ಬೌರಿಂಗ್ ಆಸ್ಪತ್ರೆ ಸುತ್ತ ಪೊಲೀಸ್ ಭದ್ರತೆ ನೀಡಲಾಗಿತ್ತು.

    ನಾಲ್ಕು ಜನ ವೈದ್ಯರ ತಂಡ ಐದು ಗಂಟೆಗಳ ಕಾಲ ಪ್ರಜ್ವಲ್‍ಗೆ ವೈದ್ಯಕೀಯ ಪರಿಕ್ಷೆಯನ್ನು ನಡೆಸಿದ್ದಾರೆ. ಈ ವೇಳೆ ಎಫ್‍ಎಸ್‍ಎಲ್ ಅಧಿಕಾರಿಗಳ ತಂಡವು ಭಾಗಿಯಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತಹ ಎಲ್ಲಾ ಟೆಸ್ಟ್‌ಗಳನ್ನು ವೈದ್ಯರ ತಂಡ ನಡೆಸಿದೆ. ಈ ಬಗ್ಗೆ ಎಸ್‍ಐಟಿ ತಂಡಕ್ಕೆ ವೈದ್ಯಕೀಯ ವರದಿಯನ್ನು ವೈದ್ಯರ ತಂಡ ನೀಡಲಿದೆ.

    ಬಂಧನಕ್ಕೊಳಗಾಗಿರುವ ಆರೋಪಿ ಪ್ರಜ್ವಲ್ ಹಲವು ಮಹಿಳೆಯ ಜೊತೆ ಇದ್ದಾರೆ ಎನ್ನಲಾದ ವೀಡಿಯೋ ವೈರಲ್ ಆಗಿತ್ತು. ವೀಡಿಯೋಗಳು ವೈರಲ್ ಆಗುತ್ತಿದ್ದಂತೆ ಅವರು ಜರ್ಮನಿಗೆ ತೆರಳಿ ತಲೆ ಮರೆಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸುಮಾರು 34 ದಿನಗಳ ಕಾಲ ಯಾರ ಸಂಪರ್ಕಕ್ಕೂ ಸಿಗದೇ ಜರ್ಮನಿಯಲ್ಲಿದ್ದರು. ಬಳಿಕ ಭಾರತಕ್ಕೆ ಮರಳುತ್ತಿದ್ದಂತೆ ಎಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಕಮರಿಗೆ ಉರುಳಿ ಬಿದ್ದ ಟೆಂಪೋ – 8 ಮಂದಿ ದುರ್ಮರಣ

  • ಪೆನ್‌ಡ್ರೈವ್ ಹಂಚಿದವರು ತನಿಖಾಧಿಕಾರಿ ಎದುರೇ ಸಂಭ್ರಮಾಚರಣೆ ಮಾಡ್ತಾರೆ: ವಕೀಲ ಗೋಪಾಲಗೌಡ ಆರೋಪ

    ಪೆನ್‌ಡ್ರೈವ್ ಹಂಚಿದವರು ತನಿಖಾಧಿಕಾರಿ ಎದುರೇ ಸಂಭ್ರಮಾಚರಣೆ ಮಾಡ್ತಾರೆ: ವಕೀಲ ಗೋಪಾಲಗೌಡ ಆರೋಪ

    ಹಾಸನ: ಸರ್ಕಾರ ಪೆನ್‌ಡ್ರೈವ್ ಪ್ರಕರಣದ (Prajwal Revanna Pen drive Case) ಸೂತ್ರಧಾರನನ್ನು ರಕ್ಷಣೆ ಮಾಡುತ್ತಿದೆ ಎಂದು ವಕೀಲ ಗೋಪಾಲಗೌಡ ಗಂಭೀರ ಆರೋಪ ಮಾಡಿದ್ದಾರೆ.

    ಜೆಡಿಎಸ್ (JDS) ಕಾನೂನು ವಿಭಾಗದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವೇಳೆ ಕೆ.ಆರ್. ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಭಾಗಿಯಾಗದ ರೇವಣ್ಣ (H.D Revanna) ಅವರನ್ನು ಬಂಧಿಸಲಾಗಿತ್ತು. ಅವರ ಹೆಸರು ದೂರಿನಲ್ಲಿ ಎಲ್ಲಿಯೂ ಇರಲಿಲ್ಲ. ಅವರ ಜಾಮೀನು ಅರ್ಜಿ ವಜಾ ಆದ 10 ನಿಮಿಷಕ್ಕೆ ಬಂಧಿಸಲಾಗಿತ್ತು. ರಾಜ್ಯ ಸರ್ಕಾರ ರಾಜಕೀಯವಾಗಿ ರೇವಣ್ಣ ಅವರಿಗೆ ಹಿನ್ನಡೆ ಉಂಟು ಮಾಡಲು ಈ ರೀತಿ ಷಡ್ಯಂತ್ರ ರೂಪಿಸಿದೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನಿಂದ ಬೀಳ್ತಿದ್ದ ಯುವಕನನ್ನ ಒಂದೇ ಕೈಯಲ್ಲಿ ರಕ್ಷಿಸಿದ ಕಂಡಕ್ಟರ್!

    ರೇವಣ್ಣ ಅವರ ಮೇಲೆ ಕೈಗೊಂಡ ಕಾನೂನು ಕ್ರಮ ಬೇರೆಯವರ ಮೇಲೂ ಕೈಗೊಳ್ಳಬೇಕಲ್ಲವೇ? ಜಾಮೀನು ನೀಡಬಹುದಾದ ಕೇಸ್‌ನಲ್ಲಿ ರೇವಣ್ಣ ಬಂಧನ ಆಗ್ತಾರೆ, ಆದರೆ ಹಾಸನದ ಹೆಣ್ಣುಮಕ್ಕಳ ಮರ್ಯಾದೆ ತೆಗೆದವರ ಬಂಧನ ಯಾಕೆ ಆಗಿಲ್ಲ? ಅದು ಜಾಮೀನು ರಹಿತ ಕೇಸ್ ಇರುವ ಪುಟ್ಟಿ ಆಲಿಯಾಸ್ ಪುಟ್ಟರಾಜ್, ಕಾರ್ತಿಕ್ ಮತ್ತು ಶರತ್ ಅವರ ಬಂಧನ ಯಾಕಾಗಿಲ್ಲ? ನ್ಯಾಯಾಲಯ ಜಾಮೀನು ಅರ್ಜಿ ವಜಾ ಮಾಡಿದೆ ಎಂದರೆ ಅವರ ಬಂಧನ ಅಗತ್ಯವಿದೆ ಎಂದಲ್ಲವೇ? ಇದರ ನಡುವೆ ಇಬ್ಬರು ಆರೋಪಿಗಳು ಚುನಾವಣೆ ಗೆದ್ದ ಸಂಭ್ರಮದಲ್ಲಿ ಭಾಗಿ ಆಗ್ತಾರೆ. ತನಿಖಾಧಿಕಾರಿ ಎದುರೇ ಅವರು ಸಂಭ್ರಮಾಚರಣೆ ಮಾಡ್ತಾರೆ ಎಂದರೆ ಏನರ್ಥ ಎಂದು ಅವರು ಕಿಡಿಕಾರಿದ್ದಾರೆ.

    ಎಸ್‌ಐಟಿ (SIT) ಆರೋಪಿಗಳ ರಕ್ಷಣೆಗಾಗಿ ಇದೆಯೇ? ಅಧಿಕಾರಿಗಳಿಗೆ ಏನಾದರೂ ಭಯ ಇದೆಯಾ? ಭಯ ಇದ್ದರೆ ಅವರು ಹೇಳಬೇಕು. ತನಿಖೆಯಲ್ಲಿ ಯಾಕೆ ತಾರತಮ್ಯ ಮಾಡುತ್ತಿದ್ದೀರಾ? ಮುಂದಿನ ದಿನಗಳಲ್ಲಿ ಈ ವಿಚಾರದಲ್ಲಿ ನಾವು ಸುಮ್ಮನೇ ಕೂರುವುದಿಲ್ಲ. ಒಂದು ವಾರದೊಳಗೆ ಅವರ ಬಂಧನ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಮೂರನೇ ಆರೋಪಿ ಶರತ್‌ಗೌಡ ಮನೆಗೆ ಪೊಲೀಸ್ ಭದ್ರತೆ ಕೊಡಲಾಗಿದೆ. ಕಾಂಗ್ರೆಸ್‌ನ ಕೆಲವು ನಾಯಕರು ಪೆನ್‌ಡ್ರೈವ್ ಹಂಚಿಕೆಯ ಮೂಲ ಹೇಳಿ ಹೋದರು. ಇದರ ಹಿಂದೆ ಮಾಜಿ ಶಾಸಕರು ಇದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಹೇಳಿದ ಮಾಜಿ ಶಾಸಕರನ್ನು ಕೂಡ ಎಸ್‌ಐಟಿ ತನಿಖೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಎಸ್‌ಐಟಿ ಕೇವಲ ಬೋಗಸ್ ತನಿಖೆ ನಡೆಸುತ್ತಿದೆ. ಹೊಳೆನರಸೀಪುರ ಮನೆಯಲ್ಲಿ ಮಹಜರು ಮಾಡಿದ್ದಾಗ, ಹೊರಗಿನಿಂದ ಬಟ್ಟೆಯನ್ನು ತಂದಿಟ್ಟರು. ತಲೆ ಕೂದಲನ್ನು ಕೂಡ ಅವರು ತಂದಿಟ್ಟು ಮಹಜರು ಮಾಡಿದ್ದಾರೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಆಗ ಅದನ್ನು ಮಹಜರಿನಲ್ಲಿ ರೆಕಾರ್ಡ್ ಮಾಡಲಿಲ್ಲ. ಅವರ ಈ ಪ್ರಕ್ರಿಯೆಗೆ ಸ್ವತಃ ಸಂತ್ರಸ್ತರು ಅವಕಾಶ ಕೊಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಸಿಬ್ಬಂದಿ ಕರ್ತವ್ಯದಿಂದ ಅಮಾನತು – ಬಳಿಕ ಅರೆಸ್ಟ್‌!