Tag: Prajwal Revanna Case

  • ಪೆನ್‌ಡ್ರೈವ್‌ ಮಾರಾಟಕ್ಕಿಟ್ಟಿದ್ದೇ ದೇವರಾಜೇಗೌಡ – ಡಿಕೆಶಿ ಜೊತೆಗೆ ಮಾತನಾಡಿಸಿ ತಪ್ಪು ಮಾಡಿದೆ: ಶಿವರಾಮೇಗೌಡ

    ಪೆನ್‌ಡ್ರೈವ್‌ ಮಾರಾಟಕ್ಕಿಟ್ಟಿದ್ದೇ ದೇವರಾಜೇಗೌಡ – ಡಿಕೆಶಿ ಜೊತೆಗೆ ಮಾತನಾಡಿಸಿ ತಪ್ಪು ಮಾಡಿದೆ: ಶಿವರಾಮೇಗೌಡ

    ಬೆಂಗಳೂರು: ಪೆನ್‌ಡ್ರೈವ್‌ಗಳನ್ನ ದೇವರಾಜೇಗೌಡ (Devarajegowda), ಕಾರ್ತಿಕ್‌ ಅವರೇ ಮಾರಾಟಕ್ಕಿಟ್ಟಿದ್ದರು. ನಾನು ಅವನನ್ನ ಡಿಕೆ ಶಿವಕುಮಾರ್‌ ಅವರೊಂದಿಗೆ ಮಾತನಾಡಿಸಿ ತಪ್ಪು ಮಾಡಿದೆ ಎಂಬ ನೋವು ಕಾಡುತ್ತಿದೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ (LR Shivaramegowda) ವಿಷಾದ ವ್ಯಕ್ತಪಡಿಸಿದ್ದಾರೆ.

    ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೆನ್ ಡ್ರೈವ್ ಕೇಸಲ್ಲಿ (Pen Drive Case) ಡಿಸಿಎಂ ಡಿಕೆಶಿ 100 ಕೋಟಿ ಆಫರ್ ನೀಡಿದ್ದರು. ಆಫರ್ ತಂದವರು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಎಂಬ ವಕೀಲ ದೇವರಾಜೇಗೌಡ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.

    ಡಿ.ಕೆ ಶಿವಕುಮಾರ್ (DK Shivakumar) ಅವರ ಜೊತೆ ಮಾತನಾಡಿಸಿ ಎಲ್ಲೋ ತಪ್ಪು ಮಾಡಿದೆನೇನೋ ಅನ್ನೋ ನೋವು ನನಗೆ ಕಾಡುತ್ತಿದೆ. ನನಗೂ ಪೆನ್‌ಡ್ರೈವ್‌ಗೂ ಸಂಬಂಧ ಇಲ್ಲ. ಗೆಸ್ಟ್ ಅಪಿಯರೆನ್ಸ್ ತರ 2 ದಿನ ನಾನು ಸಿಲುಕಿದ್ದೆ, ಆದರೆ ಮೊನ್ನೆ ದಿನ ಏನೋ ಬುಲ್ಲೆಟ್ ಹೊಡೆದಿದ್ದಾನೆ. ಅದಕ್ಕೆ ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ಡಿ.ಕೆ ಶಿವಕುಮಾರ್ ಅವರು ಮಾತನಾಡಬೇಕು ಅಂದಿರಲಿಲ್ಲ ಇವನೇ ಮಾತನಾಡಬೇಕು ಅಂದ ಅವರು ಹಲೋ ದೇವರಾಜೇಗೌಡ ಅಂದಿದ್ದರು ಅಷ್ಟೇ . ಈಗ ಡಿ.ಕೆ ಶಿವಕುಮಾರ್ ಅವರ ಜೊತೆಗೆ ಮಾತನಾಡಿಸಿ ಎಲ್ಲೋ ತಪ್ಪು ಮಾಡಿದೆನೇನೋ ಅನ್ನೋ ನೋವು ನನಗೆ ಕಾಡುತ್ತಿದೆ. ದೇವರಾಜೇಗೌಡ ಮೋಸ್ಟ್ ಕ್ರಿಮಿನಲ್ ಮ್ಯಾನ್. ಮುಂದಾದರೂ ಅವನ ಜೊತೆ ವ್ಯವಹಾರ ಮಾಡೋರು ಜಾಗರೂಕರಾಗಿರಿ. ದೇವರಾಜೇಗೌಡ ಬರೀ ಫೋನ್‌ನಲ್ಲಿ ರೆಕಾರ್ಡ್ ಮಾಡಲ್ಲ, ಅವನ ಬಾಡಿನೇ ರೆಕಾರ್ಡ್ ಮಾಡುತ್ತೆ. ಆ ರೀತಿ ವ್ಯವಸ್ಥೆ ಇರುವ ಮನುಷ್ಯ. ಅವನು ಒಳಗೆ ಹೋದಾಗ, ನಂತರ ಸದ್ಯ ಹುಚ್ಚು ನಾಯಿ ಒಳಗೆ ಹೋಯ್ತಲ್ಲ ಅಂತ ತಿರುಪತಿ ತಿಮ್ಮಪ್ಪನಿಗೆ ಕೈಮುಗಿದೆ ಎಂದು ಏಕವಚದಲ್ಲೇ ವಾಗ್ದಾಳಿ ನಡೆಸಿದ್ದಾರೆ.

    ಪೆನ್‌ಡ್ರೈವ್‌ ಪ್ರಕರಣ ಪ್ರಾಮಾಣಿಕವಾಗಿ ತನಿಖೆ ನಡೆಯಲಿ. ಈ ಪೆನ್‌ಡ್ರೈವ್‌ಗಳನ್ನ ವ್ಯಾಪಾರಕ್ಕೆ ಇಟ್ಟುಕೊಂಡಿದ್ದೇ ದೇವರಾಜೇಗೌಡ ಮತ್ತು ಕಾರ್ತಿಕ್. ಪೊಲೀಸ್ ಭಾಷೆಯಲ್ಲಿ ಕೇಳಿದರೆ ಎಲ್ಲಾ ಹೊರಗೆ ಬರುತ್ತೆ. ನನಗೂ, ಡಿ.ಕೆ ಶಿವಕುಮಾರ್‌ಗೂ ಈ ಪ್ರಕರಣಕ್ಕೆ ಯಾವುದೇ ಸಂಬಧ ಇಲ್ಲ. ನಾನು ಬೌರಿಂಗ್‌ ಕ್ಲಬ್‌ಗೆ ಹೋಗಿಯೇ 4 ವರ್ಷಗಳಾಗಿವೆ. ಅವನು ಬೌರಿಂಗ್‌ ಕ್ಲಬ್‌ನಲ್ಲಿ ಕೂತಿದ್ದ ಜಾಗದಲ್ಲಿ ಮೊದಲು ಔಷಧಿ ಸಿಂಪಡಿಸಬೇಕು ಎಂದು ಲೇವಡಿ ಮಾಡಿದ್ದಾರೆ.

    ಒಕ್ಕಲಿಗ ನಾಯಕತ್ವ ವಿಚಾರ ಎಳೆಯೋದು ಬೇಡ:
    ಇದೇ ವೇಳೆ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಪೆನ್‌ಡ್ರೈವ್‌ ಪ್ರಕರಣದ ಮಧ್ಯೆ ಒಕ್ಕಲಿಗ ನಾಯಕತ್ವದ ವಿಚಾರವನ್ನ ಎಳೆದು ತರೋದು ಬೇಡ. ಕುಮಾರಸ್ವಾಮಿ ಸಿಎಂ ಆಗಿದ್ದವರು. ಅವರಿಗೆ ಏನೇನು ಮಾಹಿತಿ ಇದೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ಒಕ್ಕಲಿಗ ನಾಯಕತ್ವ ಇದರ ಮಧ್ಯೆ ತರುವುದು ಸರಿಯಲ್ಲ. ಜೆಡಿಎಸ್‌ನಲ್ಲಿ ಅಧಿಕಾರನೂ ಕೊಡ್ತಾರೆ ಹಾಗೆಯೆ ರುಬ್ಬಿ ಕಳುಹಿಸ್ತಾರೆ ಎಂದು ತಿರುಗೇಟು ನೀಡಿದ್ದಾರೆ.

  • ಕೇಜ್ರಿವಾಲ್‌ಗೆ ಹುಚ್ಚು, ಬಿಜೆಪಿಯಲ್ಲಿ ವಯಸ್ಸಿನ ಮಿತಿ ಬಗ್ಗೆ ನಿರ್ಧಾರ ಕೈಗೊಂಡಿಲ್ಲ: ಆರ್‌.ಅಶೋಕ್

    ಕೇಜ್ರಿವಾಲ್‌ಗೆ ಹುಚ್ಚು, ಬಿಜೆಪಿಯಲ್ಲಿ ವಯಸ್ಸಿನ ಮಿತಿ ಬಗ್ಗೆ ನಿರ್ಧಾರ ಕೈಗೊಂಡಿಲ್ಲ: ಆರ್‌.ಅಶೋಕ್

    – ಪ್ರಜ್ವಲ್‌ ಪ್ರಕರಣದಲ್ಲಿ ಜೆಡಿಎಸ್‌ ಹೋರಾಟಕ್ಕೆ ಬಿಜೆಪಿ ಬೆಂಬಲವಿದೆ ಎಂದ ಪ್ರತಿಪಕ್ಷ ನಾಯಕ

    ಬೆಂಗಳೂರು: ಅರವಿಂದ ಕೇಜ್ರಿವಾಲ್‌ (Arvind Kejriwal) ಬಹಳ ದಿನ ಜೈಲಿನಲ್ಲಿ ಇದ್ದಿದ್ದರಿಂದ ಹುಚ್ಚರಂತೆ ವರ್ತಿಸುತ್ತಿದ್ದಾರೆ. ವಯಸ್ಸಿನ ಆಧಾರದ ಮೇಲೆ ಟಿಕೆಟ್ ನೀಡುವ ಕುರಿತು ಬಿಜೆಪಿಯಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್‌ (R Ashoka) ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ (PM Candidate) ಯಾರೆಂದು ಅವರಿಗೇ ಗೊತ್ತಿಲ್ಲ. ಈಗಾಗಲೇ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗುವುದು ನಿಶ್ಚಿತವಾಗಿದೆ. 75 ವರ್ಷ ಕಳೆದವರಿಗೆ ಟಿಕೆಟ್‌ ನೀಡಲಾಗುತ್ತಿದೆ. ಟಿಕೆಟ್‌ ನೀಡುವುದಿಲ್ಲ ಎಂಬ ನಿರ್ಧಾರ ಪಕ್ಷದಲ್ಲಿ ಆಗಿಲ್ಲ. ಇದನ್ನು ಕಾಂಗ್ರೆಸ್‌ನವರೇ (Congress) ಸೃಷ್ಟಿ ಮಾಡಿಕೊಂಡಿದ್ದಾರೆ. ಕೇಜ್ರಿವಾಲ್‌ ಅವರು ಮರಳಿ ಜೈಲಿಗೆ ಹೋಗಬೇಕಿದೆ, ಅವರು ಮತ್ತೆ ಬಿಡುಗಡೆಯಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಕೇಜ್ರಿವಾಲ್‌ ತಪ್ಪು ಮಾಡಿಲ್ಲವಾದರೆ ನ್ಯಾಯಾಲಯ (Supreme Court) ಕೂಡಲೇ ಜಾಮೀನು ನೀಡುತ್ತದೆ. ಲಾಲೂ ಪ್ರಸಾದ್‌ ಕೂಡ ಜೈಲಿಗೆ ಹೋಗಿದ್ದಾರೆ. ಜಾಮೀನು ಸಿಕ್ಕಿಲ್ಲ ಎಂದಾದರೆ ಅದಕ್ಕೆ ಸೂಕ್ತವಾದ ಪುರಾವೆ ಇದೆ ಎಂದರ್ಥ. ಅನೇಕ ವಿರೋಧ ಪಕ್ಷಗಳಿದ್ದರೂ ತಪ್ಪು ಮಾಡಿದವರು ಮಾತ್ರ ಜೈಲಿಗೆ ಹೋಗಿದ್ದಾರೆ ಎಂದು ಕುಟುಕಿದರು. ಇದನ್ನೂ ಓದಿ: ಪೆನ್‍ಡ್ರೈವ್ ಕೇಸ್: ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ಮುಗಿಸುವ ಪ್ರಯತ್ನ ಮಾಡಿದ್ದಾರೆ – ಎ.ಮಂಜು

    ವಿಧಾನಪರಿಷತ್‌ ಚುನಾವಣೆಯಲ್ಲಿ ಹೊಂದಾಣಿಕೆ ದೃಷ್ಟಿಯಿಂದ ಪಕ್ಷದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಕೇಂದ್ರದ ನಾಯಕರು ನಿರ್ಧಾರ ಮಾಡಿದ್ದಾರೆ. ಇದರಲ್ಲಿ ರಾಜ್ಯದ ನಾಯಕರ ಪಾತ್ರವಿಲ್ಲ ಎಂದು ಹೇಳಿದರು.

    ಇದೇ ವೇಳೆ ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಜೆಡಿಎಸ್‌ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡುತ್ತದೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಸಹ ಹೇಳಿದರು. ಇದನ್ನೂ ಓದಿ: ರಸ್ತೆಯಲ್ಲಿ ಸಿಕ್ಕ ಪೆನ್‌ಡ್ರೈವ್‌ ಎ.ಮಂಜುಗೆ ಕೊಟ್ಟಿದ್ದೆ; ಬಾಂಬ್ ಸಿಡಿಸಿದ ಆರೋಪಿ ನವೀನ್‌ಗೌಡ!

    ಎಸ್.ಎಂ.ಕೃಷ್ಣ ಆರೋಗ್ಯ ವಿಚಾರಿಸಿದ ಆರ್.ಅಶೋಕ್‌
    ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಆರೋಗ್ಯವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ್‌ ವಿಚಾರಿಸಿದ್ದಾರೆ.

    ಈ ವೇಳೆ ಮಾತನಾಡಿದ ಅವರು, ಎಸ್‌.ಎಂ.ಕೃಷ್ಣ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ನಮ್ಮ ನಾಡಿನ ಮುತ್ಸದ್ಧಿಯಾಗಿದ್ದು, ದೇವರ ಆಶೀರ್ವಾದ ಇದೆ. ನಾವು ಕೂಡ ಅವರ ಆರೋಗ್ಯಕ್ಕೆ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದ್ದಾರೆ.