Tag: Prajwal Pendrive Case

  • ಡಿಕೆಶಿ ಇನ್ನುಮುಂದೆ ಪೆನ್‌ಡ್ರೈವ್ ಬಗ್ಗೆ ಮಾತನಾಡೋದೆ ಬೇಡ: ಜಿ.ಸಿ ಚಂದ್ರಶೇಖರ್

    ಡಿಕೆಶಿ ಇನ್ನುಮುಂದೆ ಪೆನ್‌ಡ್ರೈವ್ ಬಗ್ಗೆ ಮಾತನಾಡೋದೆ ಬೇಡ: ಜಿ.ಸಿ ಚಂದ್ರಶೇಖರ್

    ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಇನ್ನು ಮುಂದೆ ಪೆನ್‌ಡ್ರೈವ್ (Pendrive Case) ಬಗ್ಗೆ ಮಾತನಾಡೋದೆ ಬೇಡ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ (GC Chandrashekhar) ಹೇಳಿದ್ದಾರೆ.

    ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕತ್ವ ಅಂದರೆ ಅದು ಮಹತ್ವದ ಸ್ಥಾನ. ಆ ಸ್ಥಾನಕ್ಕೆ ಮೆರುಗು ನೀಡುವ ವ್ಯಕ್ತಿಗಳು ಅಲ್ಲಿ ಕೂರಬೇಕು. ಕೀಳು ದರ್ಜೆಯ ಭಾಷೆ ಉಪಯೋಗಿಸುವುದು ವಿಪಕ್ಷಗಳಿಗೆ ಶೋಭೆ ತರುವುದಿಲ್ಲ. ಸ್ವಲ್ಪ ಹೋಂ ವರ್ಕ್ ಮಾಡಿ ವಿಪಕ್ಷ ನಾಯಕರು ಮಾತನಾಡಬೇಕು. ಕಾಂಗ್ರೆಸ್ ನಾಯಕತ್ವ ಬಲಿಷ್ಟ ನಾಯಕತ್ವ. ಡಿಕೆಶಿ, ಸಿದ್ದರಾಮಯ್ಯ ತರಹದ ನಾಯಕತ್ವ ಬೇರೆಲ್ಲೂ ಇಲ್ಲ. ಅವರು ಏನೇ ಮಾಡಿದರೂ ಸರ್ಕಾರವನ್ನು ಅಲುಗಾಡಿಸುವ ಯೋಗ್ಯತೆಯೇ ಇಲ್ಲ. ಕೆಲವು ಬಾರಿ ಆರ್.ಅಶೋಕ್ ಮಾತನಾಡುವುದನ್ನು ನೋಡಿದರೆ ಇವರಿಗಿಂತ ಸಿಟಿ ರವಿಯೇ ಬೆಸ್ಟ್ ಅನಿಸುತ್ತದೆ ಎಂದರು. ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ

    ಸಿಟಿ ರವಿ ಕೂಡ ಕೆಲವೊಮ್ಮೆ ಅಶ್ಲೀಲವಾಗಿ ಮಾತನಾಡುತ್ತಾರೆ. ಆದರೆ ಅಶೋಕ್‌ಗಿಂತ ಸಿ.ಟಿ ರವಿಯೇ ಬೆಸ್ಟ್ ಅನಿಸುತ್ತದೆ. ಕುಮಾರಸ್ವಾಮಿ (HD Kumaraswamy) ಇಡೀ ತನಿಖೆಯೇ ಹಳ್ಳ ಹಿಡಿಯುವಂತೆ ಮಾತನಾಡುತ್ತಿದ್ದಾರೆ. ಇವರು ಹೇಳಿದ ಹಾಗೇ ಎಸ್‌ಐಟಿ ನಡೆಯಬೇಕು. ಇವರು ಹೇಳಿದ ಹಾಗೆ ತನಿಖೆ ನಡೆಯಬೇಕು. ಯಾರು ಯಾರನ್ನೂ ಕೆಣಕಿಲ್ಲ. ಕುಮಾರಸ್ವಾಮಿ ಅವರೇ ದೇವೇಗೌಡರಿಗೆ ನೋವಾಗಿದೆ ಎಂಬುದು ಕಾಂಗ್ರೆಸ್ ನಾಯಕರಿಗೂ ಗೊತ್ತಿದೆ. ದೇವೇಗೌಡರ ಮೇಲೆ ನಮಗೆ ಅಪಾರ ಗೌರವವಿದೆ. ಡಿಕೆ ಶಿವಕುಮಾರ್ ಅವರಿಗೆ ನಾವು ಕೇಳಿಕೊಳ್ಳೋದು ಇಷ್ಟೇ. ಇನ್ನು ಮುಂದೆ ಪೆನ್‌ಡ್ರೈವ್ ವಿಚಾರದಲ್ಲಿ ಮಾತೇ ಆಡಬೇಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಅಪಘಾತಕ್ಕೆ ಇಬ್ಬರು ಟೆಕ್ಕಿಗಳು ಬಲಿ ಕೇಸ್‌; ಕಾರು ಚಲಾಯಿಸಿದ ಅಪ್ರಾಪ್ತನ ತಂದೆ ಬಂಧನ

    ದೇವೇಗೌಡರ ಕುಟುಂಬದ ಬಗ್ಗೆ ಗೌರವವಿದೆ. ಯಾವ ರಾಜಕಾರಣಿ ಕೂಡ ಕುಟುಂಬದಲ್ಲಿ ಈ ರೀತಿ ನಡೆಯಬೇಕು ಎಂದು ಭಾವಿಸುವುದಿಲ್ಲ. ಕುಮಾರಸ್ವಾಮಿ ಅವರು ಪ್ರಕರಣವನ್ನು ನೆಲ ಕಚ್ಚಿಸುತ್ತಿದ್ದಾರೆ. ಎರಡು ಬಾರಿ ಸಿಎಂ ಆಗಿದ್ದವರು ನೀವು. ಇವರು ಹೇಳಿದ ಹಾಗೇ ನಡೆಯಬೇಕು. ಎಸ್‌ಐಟಿ ತನಿಖೆ ಆಗಬೇಕಾ? ಸರ್ ದಯವಿಟ್ಟು ಈ ಪ್ರಕರಣದಲ್ಲಿ ಯಾರು ರಿಯಾಕ್ಟ್ ಮಾಡಬೇಡಿ. ಸರ್ಕಾರ ಅದರ ಪಾಡಿಗೆ ಅದು ನಡೆಯುತ್ತಿದೆ. ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡೋಣ. ಯಾರು ಯಾರನ್ನೂ ಕೆಣಕಿಲ್ಲ ಕುಮಾರಸ್ವಾಮಿ ಅವರೇ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಡಿಕೆಶಿ ರಕ್ಷಣೆಗೆ ಸಿಎಂ, ಸರ್ಕಾರ ನಿಂತಿದೆ: ಹೆಚ್‍ಡಿಕೆ ಆರೋಪ

  • ಚೆನ್ನೈ ಕಂಪನಿಯಲ್ಲಿ 3 ಕೋಟಿ ರೂ. ಕೊಟ್ಟು ಪೆನ್‌ಡ್ರೈವ್‌ ಖರೀದಿಸಿದ್ದಾರೆ: ಜಿ.ಟಿ ದೇವೇಗೌಡ ಗಂಭೀರ ಆರೋಪ

    ಚೆನ್ನೈ ಕಂಪನಿಯಲ್ಲಿ 3 ಕೋಟಿ ರೂ. ಕೊಟ್ಟು ಪೆನ್‌ಡ್ರೈವ್‌ ಖರೀದಿಸಿದ್ದಾರೆ: ಜಿ.ಟಿ ದೇವೇಗೌಡ ಗಂಭೀರ ಆರೋಪ

    – ಈ ತನಿಖೆ ನಡೆಸಲು ಕರ್ನಾಟಕ ಪೊಲೀಸರಿಂದ ಸಾಧ್ಯವಿಲ್ಲ ಎಂದ ಶಾಸಕ

    ಮೈಸೂರು: ಪೆನ್‌ಡ್ರೈವ್‌ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಕೈವಾಡವಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು (JDS Workers) ರಾಜ್ಯಾದ್ಯಂತ ವಿವಿಧೆಡೆ ಪ್ರತಿಭಟನೆ ನಡೆಸಿದ್ದಾರೆ.

    ಸಿಎಂ-ಡಿಸಿಎಂ ವಿರುದ್ಧ ಜೆಡಿಎಸ್ ನಾಯಕರು-ಕಾರ್ಯಕರ್ತರು ಮಂಡ್ಯ, ಮೈಸೂರು, ರಾಮನಗರ, ದೇವನಹಳ್ಳಿ, ಹುಬ್ಬಳ್ಳಿ, ಗದಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮೈಸೂರಿನಲ್ಲಿ ಡಿಸಿ ಕಚೇರಿ ಮುಂಭಾಗ ಜಿ.ಟಿ. ದೇವೇಗೌಡ ಹಾಗೂ ಸಾರಾ ಮಹೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: 7 ದಿನಗಳ ಒಳಗಡೆ ವಿಚಾರಣೆಗೆ ಹಾಜರಾಗಿ – ನಡ್ಡಾ, ವಿಜಯೇಂದ್ರಗೆ ಬೆಂಗಳೂರು ಪೊಲೀಸರಿಂದ ಸಮನ್ಸ್‌

    ಇದೇ ವೇಳೆ ಮಾತನಾಡಿದ ಜಿ.ಟಿ ದೇವೇಗೌಡ ಅವರು, ಪೆನ್‌ಡ್ರೈವ್‌ ಹಂಚಿಕೆ ಮಾಡಲು ಚೆನ್ನೈನ ಕಂಪನಿಯೊಂದರಲ್ಲಿ 3 ಕೋಟಿ ರೂ.ಗೆ ಪೆನ್‌ಡ್ರೈವ್‌ ಖರೀದಿಸಿದ್ದಾರೆ. ಆಸ್ಟ್ರೇಲಿಯಾ ಪ್ರಯೋಗಾಲಯದಲ್ಲಿ ಯಾವುದನ್ನ ಸೇರಿಸಬೇಕು ಅದನ್ನ ಸೇರಿಸಿ ಸಿನಿಮಾ ಮಾಡಿದಂತೆ ಮಾಡಿದ್ದಾರೆ. ಅಲ್ಲಿಂದ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅಂತಾರಾಷ್ಟ್ರೀಯ ಜಾಲ ಸೇರಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಅಂಬಾನಿ, ಅದಾನಿ ಟೆಂಪೋದಲ್ಲಿ ಹಣ ಕಳುಹಿಸುತ್ತಾರೆ- ಮೋದಿಗೆ ರಾಗಾ ತಿರುಗೇಟು

    ಎಸ್‌ಐಟಿ ತನಿಖೆ (SIT Investigation) ರದ್ದಾಗಬೇಕು. ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕು. ಈಗಿರುವ ಎಸ್‌ಐಟಿಯಿಂದ ಏನೂ ಕಂಡುಹಿಡಿಯೋದಕ್ಕೆ ಆಗೋದಿಲ್ಲ. ಪೆನ್‌ಡ್ರೈವ್‌ ಯಾರು ರಿಲೀಸ್ ಮಾಡಿದ್ರು ಅನ್ನೋ ಬಗ್ಗೆ ತನಿಖೆ ನಡೆಯುತ್ತಿಲ್ಲ. ಒಂದು ಪಕ್ಷದ ಮೇಲೆ ಗದಾಪ್ರಹಾರ ಮಾಡುವ ಕೆಲಸ ಆಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

    ಜೆಡಿಎಸ್ ಮುಗಿಸಲು ಸಿಎಂ, ಡಿಸಿಎಂ ಮುಂದಾಗಿದ್ದಾರೆ. ಈ ಪೆನ್‌ಡ್ರೈವ್‌ ಕೇಸ್ ಹಿಂದೆ ಅಂತಾರಾಷ್ಟ್ರೀಯ ಜಾಲವೇ ಇದೆ. ಅವರನ್ನ ತನಿಖೆ ಮಾಡುವುದಕ್ಕೆ ಕರ್ನಾಟಕ ಪೊಲೀಸರಿಂದ ಸಾಧ್ಯವಿಲ್ಲ. ಸಿಬಿಐ ತನಿಖೆ ಬಿಟ್ರೆ ಬೇರೆ ಯಾವುದೇ ತನಿಖೆಯಿಂದ ನ್ಯಾಯ ಸಿಗಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

  • Exclusive: ರೇವಣ್ಣ ಕಿಡ್ನ್ಯಾಪ್‌ ಕೇಸ್‌ – ಅಪಹರಿಸಿ ಸಂತ್ರಸ್ತೆಯನ್ನಿರಿಸಿದ್ದ ತೋಟದ ಮನೆ ಪತ್ತೆ; ಕೂಲಿ ಕಾರ್ಮಿಕರಿಂದ ಸ್ಫೋಟಕ ಮಾಹಿತಿ!

    Exclusive: ರೇವಣ್ಣ ಕಿಡ್ನ್ಯಾಪ್‌ ಕೇಸ್‌ – ಅಪಹರಿಸಿ ಸಂತ್ರಸ್ತೆಯನ್ನಿರಿಸಿದ್ದ ತೋಟದ ಮನೆ ಪತ್ತೆ; ಕೂಲಿ ಕಾರ್ಮಿಕರಿಂದ ಸ್ಫೋಟಕ ಮಾಹಿತಿ!

    – ಕೂಲಿ ಕೆಲಸದಾಕೆ ಅಂತ ಹೇಳಿ ನಮಗೆ ಪರಿಚಯಿಸಲಾಗಿತ್ತು ಎಂದ ಕಾರ್ಮಿಕರು
    – ಆಕೆ ಕ್ಷಣಕ್ಕೊಂದು ಮಾತನಾಡುತ್ತಿದ್ದಳು, ಸಾಲದ ಕಥೆ ಹೇಳ್ತಿದ್ದಳು

    ಮೈಸೂರು: ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಮೇಲಿನ ಅಪಹರಣ ಪ್ರಕರಣದ (HD Revanna Kidnap Case) ಸಂತ್ರಸ್ತ ಮಹಿಳೆ ಕಳೆದ 5 ದಿನಗಳಿಂದ ರೇವಣ್ಣನ ಆಪ್ತ ಸಹಾಯಕನ ತೋಟದ ಮನೆಯಲ್ಲಿ ಇದ್ದರು.

    ಈ ತೋಟದ ಮನೆ ಇರೋದು ಮೈಸೂರು ಜಿಲ್ಲೆಯ ಹುಣಸೂರು (Hunsur) ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದ ಹೊರ ವಲಯದಲ್ಲಿ. ಈ ತೋಟದ ಮನೆಯಲ್ಲಿ (Farmhouse) ಆಕೆ ಏನು ಮಾಡುತ್ತಿದ್ದರು? ನಿಜವಾಗಿಯೂ ಆಕೆಗೆ ತೊಂದರೆ ಕೊಡುತ್ತಿದ್ರಾ ಅನ್ನೋ? ಬಗ್ಗೆ ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

    ಕೂಲಿ ಕೆಲಸಕ್ಕೆ ಬಂದಿರೋ ಮಹಿಳೆ ಅಂತಾ ಹೇಳಿದ್ರು:
    ಸಂತ್ರಸ್ತ ಮಹಿಳೆಯನ್ನು ಇಟ್ಟಿದ್ದ ತೋಟದ ಮನೆಯಲ್ಲಿ ಬೇರೆ ಯಾರಿಗೂ ಅನುಮಾನ ಬಾರದಂತೆ ಇರಲು ಸಂತ್ರಸ್ತೆ ಮಹಿಳೆಯನ್ನು ಕೂಲಿಗೆ ಬಂದ ಮಹಿಳೆ ಅಂತಾ ಬಿಂಬಿಸಲಾಗಿತ್ತು. ತೋಟದ ಮನೆಯಲ್ಲಿನ ಕೆಲಸಗಾರರಿಗೆ ಆ ಮಹಿಳೆಯನ್ನು ಹೊಸ ಕೂಲಿಯವಳು ಅಂತಾ ಪರಿಚಯಿಸಲಾಗಿತ್ತು. ಆಕೆ ಕ್ಷಣಕ್ಕೊಂದು ಮಾತಾಡುತ್ತಿದ್ದಳು, ಮಹಿಳೆಯನ್ನು ವಾಪಾಸ್ ಕಳಿಸಿ ಅಂತಾ ಕಾರ್ಮಿಕರು ತೋಟದ ಮಾಲೀಕರಿಗೆ ಹೇಳಿದ್ದರು. ಆದರೆ ಇದಕ್ಕೆ ಮಾಲೀಕ ಒಪ್ಪದೇ ನಿಮಗೆ ಯಾಕೆ ಅಂತ ಸುಮ್ಮನಿರಿಸಿದ್ದರು ಎಂದು ಕಾರ್ಮಿಕರು ಹೇಳಿದ್ದಾರೆ.

    ಅಲ್ಲದೇ ನಾವು ಆಕೆಯನ್ನು ಯಾವ ಊರಿನವರು ಎಂದು ಹೇಳಿದಾಗ ಆಕೆ ಹೆಚ್‌.ಡಿ ಕೋಟೆ ತಾಲೂಕಿನ ಮಹಿಳೆ ಎಂದು ಹೇಳಿಕೊಂಡಿದ್ದಳು. ಅಲ್ಲದೇ 25 ಸಾವಿರ ಸಂಘಕ್ಕೆ ಸಾಲ ಕಟ್ಟಬೇಕು ಅಂತಾ ನಮ್ಮನ್ನೇ ಯಾಮಾರಿಸಿದ್ದಳು. ಇಲ್ಲಿಗೆ ಯಾರು ಕರೆದುಕೊಂಡುಬಂದು ಬಿಟ್ಟರು ಅಂತಾನೂ ಗೊತ್ತಿಲ್ಲ. ಶನಿವಾರ ರಾತ್ರಿ ನೋಡುವಷ್ಟರಲ್ಲಿ ಆಕೆ ಇರಲೇ ಇಲ್ಲ, ಭಾನುವಾರ ಬೆಳಗ್ಗೆ 9:30ರ ವೇಳೆಗೆ ಪೊಲೀಸರೇ ಕರೆತಂದಿದ್ದರು. ಆದ್ರೆ ಇಲ್ಲಿಂದ ಯಾರನ್ನ ಕರೆದುಕೊಂಡು ಹೋಗಿಲ್ಲ. ನಮಗೆ ಮುಂಚೆನೇ ಆಕೆ ಬಗ್ಗೆ ಗೊತ್ತಿದ್ದರೆ ನಾವೇ ಪೊಲೀಸರಿಗೆ ಹಿಡಿದುಕೊಡುತ್ತಿದ್ದೆವು ಎಂದು ಅಲ್ಲಿನ ಕೂಲಿ ಕಾರ್ಮಿಕರು ಮಾಹಿತಿ ನೀಡಿದ್ದಾರೆ.

    ತೋಟದ ಮನೆಗೆ ರೇವಣ್ಣ ಬಂದಿದ್ರಾ?
    ಈ ತೋಟ ರಾಜ್‌ಗೋಪಾಲ್‌ ಅವರದ್ದು, ರೇವಣ್ಣ ಅವರು ಇಲ್ಲಿಗೆ ಬಂದಿಲ್ಲ, ಈವರೆಗೂ ನಾನು ಅವರನ್ನು ಇಲ್ಲಿ ನೋಡಿಲ್ಲ, ನಾವು ಯಾಕೆ ಸುಳ್ಳು ಹೇಳಬೇಕು ಎಂದು ಕಾರ್ಮಿಕರು ಹೇಳಿದ್ದಾರೆ. ಮತ್ತೊಬ್ಬರು ಕಾರ್ಮಿಕರು ಇಲ್ಲಿ ಮಹಿಳೆ ಇದ್ದುದ್ದನ್ನೇ ನಾವು ನೋಡಿಲ್ಲ ಎಂದಿದ್ದಾರೆ.

  • ಏನಿದು ಲುಕ್‌ಔಟ್ ನೋಟಿಸ್, ರೆಡ್ ಕಾರ್ನರ್, ಬ್ಲೂ ಕಾರ್ನರ್ ನೋಟಿಸ್? ಇವು ಹೇಗೆ ಕೆಲಸ ಮಾಡುತ್ತವೆ?

    ಏನಿದು ಲುಕ್‌ಔಟ್ ನೋಟಿಸ್, ರೆಡ್ ಕಾರ್ನರ್, ಬ್ಲೂ ಕಾರ್ನರ್ ನೋಟಿಸ್? ಇವು ಹೇಗೆ ಕೆಲಸ ಮಾಡುತ್ತವೆ?

    ಬೆಂಗಳೂರು: ದೇಶಾದ್ಯಂತ ಸದ್ಯ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ (Prajwal Pendrive Case) ಭಾರೀ ಸದ್ದು ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ಅವರನ್ನು ವಿಚಾರಣೆಗೆ ಒಳಪಡಿಸಲು ವಿಶೇಷ ತನಿಖಾ ತಂಡ ಲುಕ್‌ಔಟ್ ನೋಟಿಸ್ ಹೊರಡಿಸಿದೆ. ಆದ್ರೆ ಪ್ರಜ್ವಲ್ ವಿದೇಶದಲ್ಲಿ ಇರೋದ್ರಿಂದ ಅವರ ಪತ್ತೆ ಮತ್ತು ಬಂಧನಕ್ಕೆ ರೆಡ್ ಕಾರ್ನರ್ ಮತ್ತು ಬ್ಲೂ ಕಾರ್ನರ್ ನೋಟಿಸ್‌ಗಳನ್ನು ಹೊರಡಿಸುವಂತೆ ಸಿಬಿಐಗೆ ಮನವಿ ಕಳುಹಿಸಲು ಎಸ್‌ಐಟಿ ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಅಷ್ಟಕ್ಕೂ ಲುಕ್ ಔಟ್ ನೋಟಿಸ್ (lookout Notice), ರೆಡ್ ಕಾರ್ನರ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ (Blue Corner Notice,) ಎಂದರೇನು? ಯಾವ ಸಂದರ್ಭದಲ್ಲಿ ಇವುಗಳನ್ನು ಬಳಕೆ ಮಾಡಲಾಗುತ್ತದೆ? ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ಏನಿದು ಲುಕ್ ಔಟ್ ನೋಟಿಸ್?
    ಕ್ರಿಮಿನಲ್ ಪ್ರಕರಣಗಳಲ್ಲಿ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಜಾರಿಗೊಳಿಸಲಾಗುವ ವಿಶೇಷವಾದ ನೋಟಿಸ್ ಇದಾಗಿದೆ. ಇದನ್ನು ಲುಕ್ ಔಟ್ ಸರ್ಕ್ಯೂಲರ್ (LOC) ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದನ್ನು ವಿದೇಶಾಂಗ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಬ್ಯೂರೋ ಆಫ್ ಇಮಿಗ್ರೇಷನ್ (BOI) ಜಾರಿಗೊಳಿಸುತ್ತದೆ. ಯಾವುದೇ ರಾಜ್ಯಗಳಲ್ಲಿ ಸಂಭವಿಸಿದ ಕ್ರಿಮಿನಲ್ ಪ್ರಕರಣಗಳಿಗೆ ಸಂಬAಧಿಸಿದAತೆ, ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಪತ್ತೆ ಹಚ್ಚಲು, ಆಯಾ ರಾಜ್ಯ ಸರ್ಕಾರಗಳ ಅಧೀನ ಕಾರ್ಯದರ್ಶಿ ಹಾಗೂ ಅದಕ್ಕೆ ತತ್ಸಮಾನ ಹುದ್ದೆಗಳಲ್ಲಿರುವ ಅಧಿಕಾರಿಗಳು ಹಾಗೂ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳು ಮನವಿ ಸಲ್ಲಿಸಿದರೆ ಮಾತ್ರ ಇಂಥ ನೋಟಿಸ್ ಜಾರಿಗೊಳಿಸುತ್ತದೆ. ಇದಲ್ಲದೆ, ರಾಜ್ಯ ಸರ್ಕಾರಗಳು ರಚನೆ ಮಾಡುವ ವಿಶೇಷ ತನಿಖಾ ತಂಡಗಳಿಗೂ (SIT) ಇಂಥ ಲುಕ್ ಔಟ್ ನೋಟಿಸ್ ಜಾರಿಗೊಳಿಸಲು ಅವಕಾಶವಿದೆ. ಇದು ಜಾರಿಯಾಗುತ್ತಲೇ ಆ ಆರೋಪಿಯ ಬಗೆಗಿನ ಎಲ್ಲಾ ವಿವರಗಳು, ಯಾವುದೇ ದೇಶವನ್ನು ಪ್ರವೇಶಿಸಲು ಇರುವ ಮಾರ್ಗಗಳಾದ ವಿಮಾನ ನಿಲ್ದಾಣಗಳು, ಬಂದರುಗಳು, ಅಂತಾರಾಷ್ಟ್ರೀಯ ಹೆದ್ದಾರಿಗಳ ಚೆಕ್ ಪಾಯಿಂಟ್ ಗಳನ್ನು ತಲುಪುತ್ತವೆ. ವಿದೇಶದಲ್ಲಿರುವ ಆರೋಪಿಯು ತನ್ನ ವೀಸಾ ಅವಧಿ ಮುಗಿದ ನಂತರ ಇಮಿಗ್ರೇಷನ್ ವಿಭಾಗವನ್ನು ಸಂಪರ್ಕಿಸಲೇಬೇಕು. ಆಗ ಆತನನ್ನು ಕೂಡಲೇ ವಶಕ್ಕೆ ಪಡೆಯಲಾಗುತ್ತದೆ.

    ಏನಿದು ಇಂಟರ್‌ಪೋಲ್ ರೆಡ್ ನೋಟಿಸ್ ಅಥವಾ ರೆಡ್ ಕಾರ್ನರ್ ನೋಟಿಸ್?
    ರೆಡ್ ಕಾರ್ನರ್ ನೋಟಿಸ್ ಎನ್ನುವುದು ಹಸ್ತಾಂತರ, ಶರಣಾಗತಿ ಅಥವಾ ಅಂತಹದ್ದೇ ಕಾನೂನು ಕ್ರಮಕ್ಕೆ ಬಾಕಿ ಇರುವ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ತಾತ್ಕಾಲಿಕವಾಗಿ ಬಂಧಿಸುವುದಕ್ಕೆ ವಿಶ್ವಾದ್ಯಂತ ಕಾನೂನು ಜಾರಿಗೊಳಿಸಲು ಮಾಡುವ ವಿನಂತಿಯಾಗಿದೆ. ಇದು ಕೋರುವ ದೇಶದಲ್ಲಿ ನ್ಯಾಯಾಂಗ ಅಧಿಕಾರಿಗಳು ನೀಡಿದ ಬಂಧನದ ವಾರಂಟ್ ಅಥವಾ ನ್ಯಾಯಾಲಯದ ಆದೇಶವನ್ನು ಇದಕ್ಕಾಗಿ ಒದಗಿಸಬೇಕು. ಆದಾಗ್ಯೂ, ಆ ವ್ಯಕ್ತಿಯನ್ನು ಬಂಧಿಸಬೇಕೆ ಬೇಡವೇ ಎಂಬುದನ್ನು ನಿರ್ಧರಿಸುವಾಗ ಸದಸ್ಯ ರಾಷ್ಟ್ರಗಳು ತಮ್ಮದೇ ಆದ ಕಾನೂನುಗಳ ಪ್ರಕಾರ ನಡೆದುಕೊಳ್ಳುತ್ತವೆ. ರೆಡ್ ನೋಟಿಸ್ ಎಂಬುದು ಬೇಕಾಗಿರುವ ವ್ಯಕ್ತಿಗೆ (ವಾಂಟೆಡ್) ನೀಡುವ ಅಂತಾರಾಷ್ಟ್ರೀಯ ಎಚ್ಚರಿಕೆ ಮಾತ್ರ, ಇದು ಬಂಧನದ ವಾರಂಟ್ ಅಲ್ಲ. ಆದ್ದರಿಂದ ಅಗತ್ಯವಿರುವ ವ್ಯಕ್ತಿಯನ್ನು ಗುರುತಿಸಲು ಮಾಹಿತಿ, ಅವರ ಹೆಸರು, ಹುಟ್ಟಿದ ದಿನಾಂಕ, ರಾಷ್ಟ್ರೀಯತೆ, ಕೂದಲು ಮತ್ತು ಕಣ್ಣಿನ ಬಣ್ಣ, ಛಾಯಾಚಿತ್ರಗಳು ಮತ್ತು ಬೆರಳಚ್ಚುಗಳು ಲಭ್ಯವಿದ್ದರೆ ಅವುಗಳನ್ನು ಒದಗಿಸುತ್ತಾರೆ

    ಏನಿದು ಬ್ಲೂ ಕಾರ್ನರ್ ನೋಟಿಸ್?
    ವಿದೇಶಗಳಲ್ಲಿ ಅಡಗಿಕೊಂಡಿರುವ ಆರೋಪಿಗಳ ಮಾಹಿತಿ ಸಂಗ್ರಹಕ್ಕೆ ಇಂಟರ್‌ಪೋಲ್‌ಗಳ ಮೂಲಕ ಹೊರಡಿಸುವ ನೋಟಿಸ್ ಇದಾಗಿದೆ. ಇಂಟರ್‌ಪೋಲ್ ತನ್ನ ಸದಸ್ಯ ರಾಷ್ಟ್ರಗಳಲ್ಲಿ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿ ಆರೋಪಿಯ ಗುರುತು, ಸ್ಥಳ, ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಮಾಹಿತಿ ಕಲೆಹಾಕುತ್ತದೆ. ಇಂಟರ್ ಪೋಲ್ ಒಟ್ಟು 7 ರೀತಿಯ ನೋಟಿಸ್‌ಗಳನ್ನು ನೀಡಬಹುದು. ಅದರಲ್ಲಿ ಬ್ಲೂ ಕಾರ್ನರ್ ನೋಟಿಸ್ ಆರೋಪಿಯ ವಿರುದ್ಧ ಮಾಹಿತಿ ಸಂಗ್ರಹಕ್ಕೆ, ರೆಡ್ ಕಾರ್ನರ್ ಬಂಧನಕ್ಕೆ, ಯೆಲ್ಲೋ ಕಾರ್ನರ್ ನೋಟಿಸ್ ನಾಪತ್ತೆಯಾದವನ ಪತ್ತೆಗೆ ಬಳಸಲಾಗುತ್ತದೆ. ಆದ್ರೆ ಭಾರತದಲ್ಲಿ ಇಂಟರ್ ಪೋಲ್‌ಗೆ ಸಿಬಿಐ ನೋಡಲ್ ಏಜೆನ್ಸಿಯಾಗಿದ್ದು, ಯಾವುದೇ ತನಿಖಾ ಸಂಸ್ಥೆಗಳು ನೋಟಿಸ್ ನೀಡಲು ಮೊದಲು ಸಿಬಿಐಗೆ ಮನವಿ ಸಲ್ಲಿಸಬೇಕಾಗುತ್ತದೆ.

  • ಆ ಯುವತಿ ನಂಬರ್‌ಗೆ ದಿನಕ್ಕೆರಡು ಬಾರಿ ಕರೆ ಮಾಡ್ತಿದ್ದಾರಂತೆ ಪ್ರಜ್ವಲ್ – ರಹಸ್ಯ ಸ್ಫೋಟ!

    ಆ ಯುವತಿ ನಂಬರ್‌ಗೆ ದಿನಕ್ಕೆರಡು ಬಾರಿ ಕರೆ ಮಾಡ್ತಿದ್ದಾರಂತೆ ಪ್ರಜ್ವಲ್ – ರಹಸ್ಯ ಸ್ಫೋಟ!

    ಬೆಂಗಳೂರು: ವಿದೇಶದಲ್ಲಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಸದ್ಯದಲ್ಲೇ ವಿಶೇಷ ತನಿಖಾ ತಂಡದ ಎದುರು ಶರಣಾಗಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಈ ನಡುವೆ ಸ್ಫೋಟಕ ರಹಸ್ಯವೊಂದು ಬಯಲಾಗಿದೆ.

    ಯಾರೊಂದಿಗೂ ಸಂಪರ್ಕದಲ್ಲಿಲ್ಲದ ಪ್ರಜ್ವಲ್ ರೇವಣ್ಣ ಆ ಒಂದು ನಂಬರ್‌ಗೆ (Mobile Number) ಮಾತ್ರ ದಿನಕ್ಕೆ ಎರಡು ಬಾರಿ ಕರೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಪ್ರಜ್ವಲ್ ಕರೆ ಮಾಡುತ್ತಿರುವುದು ಬೇರೆ ಯಾರಿಗೂ ಅಲ್ಲ, ತಾನೂ ಮದುವೆ ಆಗಬೇಕು ಅಂದುಕೊಂಡಿದ್ದ ಯುವತಿಗೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕೊಳಕು ಕೃತ್ಯಗಳನ್ನು ಸೃಷ್ಟಿಸಿದವರಿಗೆ ಕಾನೂನಿನಡಿ ಶಿಕ್ಷೆಯಾಗಬೇಕು- ಹರ್ಷಿಕಾ ಆಗ್ರಹ

    ಇದೇ ತಿಂಗಳಲ್ಲಿ ಪ್ರಜ್ವಲ್ ಆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡ್ಕೋಬೇಕು ಅಂದುಕೊಂಡಿದ್ದರಂತೆ, ಆ ಹುಡುಗಿಗೆ ದಿನಕ್ಕೆರಡು ಬಾರಿ ಫೋನ್ ಮಾಡಿ ಮಾತನಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಮಾಹಿತಿ ತಿಳಿದಕೂಡಲೇ ಎಸ್‌ಐಟಿ ಆ ಯುವತಿಯ ಚಲನವಲನಗಳ ಮೇಲೆ ನಿಗಾ ವಹಿಸಿದೆ. ಆ ಮೂಲಕ ಪ್ರಜ್ವಲ್ ಎಲ್ಲಿದ್ದಾರೆ ಎಂಬ ಹುಡುಕಾಟವೂ ನಡೆಯುತ್ತಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಕೋವಿಡ್ ಲಸಿಕೆ ಪಡೆದ ಯುವಜನರು ಹೃದಯಾಘಾತದಿಂದ ಸಾಯುತ್ತಿದ್ದಾರೆ: ಪ್ರಿಯಾಂಕಾ ಆತಂಕ

    ಮಂಗಳೂರಿನಲ್ಲಿ ಶರಣಾಗ್ತಾರಾ ಪ್ರಜ್ವಲ್‌?
    ಸದ್ಯ ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ಇಂದು ಶರಣಾಗ್ತಾರಾ? ಎಂಬ ಪ್ರಶ್ನೆ ಎದ್ದಿದೆ. ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ತಂದೆ ಹೆಚ್‌ಡಿ ರೇವಣ್ಣ (HD Revanna) ಬಂಧನಕ್ಕೆ ಒಳಗಾದ ಬೆನ್ನಲ್ಲೇ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಅವರನ್ನು ಬಂಧಿಸಲು ಎಸ್‌ಐಟಿ ಸಿದ್ಧತೆ ನಡೆಸುತ್ತಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಇಂದು ಪ್ರಜ್ವಲ್‌ ರೇವಣ್ಣ ಶರಣಾಗ್ತಾರಾ?

    ಇಂದು (ಮೇ 5) ಮಂಗಳೂರು ವಿಮಾನ ನಿಲ್ದಾಣಕ್ಕೆ (Mangaluru Airport) ಪ್ರಜ್ವಲ್‌ ಆಗಮಿಸುವ ಸಾಧ್ಯತೆಯಿದೆ. ಸದ್ಯ ಪ್ರಜ್ವಲ್‌ ಯುಎಇಯಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲುಕೌಟ್‌ ನೋಟಿಸ್‌ ಜಾರಿಯಾದ ಹಿನ್ನೆಲೆಯಲ್ಲಿ ವಿಮಾನದಿಂದ ಇಳಿದು ವಲಸೆ ಕೇಂದ್ರದ ಬಳಿಯೇ ಬಂಧನವಾಗುವ ಸಾಧ್ಯತೆಯಿದೆ. ಈಗಾಗಲೇ ಅಬುಧಾಬಿಯಿಂದ ಬೆಳಗ್ಗೆ 6:24ಕ್ಕೆ ಆಗಮಿಸಿದ ವಿಮಾನಲ್ಲಿ ಪ್ರಜ್ವಲ್‌ ಬಂದಿಲ್ಲ. ದುಬೈನಿಂದ ಆಗಮಿಸುವ 2ನೇ ವಿಮಾನ ಬೆಳಗ್ಗೆ 7:55ಕ್ಕೆ ಲ್ಯಾಂಡ್‌ ಆಗಲಿದೆ. ದುಬೈನಿಂದ ಸಂಜೆ 6:15ಕ್ಕೆ ಮತ್ತೊಂದು ವಿಮಾನ ಬರಲಿದೆ. ಕುವೈಟ್‌ನಿಂದ 6:40ಕ್ಕೆ ವಿಮಾನ ಬರಲಿದೆ. ಈ ವಿಮಾನಗಳ ಪೈಕಿ ಒಂದು ವಿಮಾನದಲ್ಲಿ ಪ್ರಜ್ವಲ್‌ ಬಂದು ಶರಣಾಗಬಹುದು ಎನ್ನಲಾಗುತ್ತಿದೆ.

  • ಪ್ರಜ್ವಲ್‌ ರೇವಣ್ಣ ಯಾವುದೇ ದೇಶಕ್ಕೆ ಹೋಗಿರಲಿ, ಹಿಡಿದು ತರ್ತೀವಿ: ಗುಡುಗಿದ ಸಿಎಂ

    ಪ್ರಜ್ವಲ್‌ ರೇವಣ್ಣ ಯಾವುದೇ ದೇಶಕ್ಕೆ ಹೋಗಿರಲಿ, ಹಿಡಿದು ತರ್ತೀವಿ: ಗುಡುಗಿದ ಸಿಎಂ

    ಬಾಗಲಕೋಟೆ: ಪ್ರಜ್ವಲ್ ರೇವಣ್ಣ (Prajwal Revanna) ಎಲ್ಲಿಗಾದರೂ ಎಸ್ಕೇಪ್ ಆಗಲು, ಯಾವುದೇ ದೇಶಕ್ಕೆ ಹೋಗಿರಲಿ, ಅಲ್ಲಿಂದ ಹಿಡಿದು ತರ್ತೀವಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಗುಡುಗಿದ್ದಾರೆ.

    ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ದುಬೈಗೆ (Dubai) ಪ್ರಯಾಣ ಬೆಳೆಸಿದ್ದಾರೆಯೇ ಎಂಬುದರ ಕುರಿತು ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಅವರು ಎಲ್ಲಿಗಾದರೂ ಎಸ್ಕೇಪ್ ಆಗಿರಲಿ, ಯಾವುದೇ ದೇಶಕ್ಕೆ ಹೋಗಿರಲಿ, ಅಲ್ಲಿಂದ ಹಿಡಿದು ತರ್ತೀವಿ ಎಂದು ಸಿಎಂ ಗುಡುಗಿದ್ದಾರೆ. ಇದನ್ನೂ ಓದಿ: ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್‌ ಮಾಡ್ತಿದ್ರು: ಪ್ರಜ್ವಲ್‌ ವಿರುದ್ಧ ಮತ್ತೊಬ್ಬ ಸಂತ್ರಸ್ತೆ ದೂರು

    ಪಾಸ್‌ಪೋರ್ಟ್ ರದ್ದು ಮಾಡುವ ಅಧಿಕಾರ ಇರೋದು ಕೇಂದ್ರ ಸರ್ಕಾರಕ್ಕೆ, ನಾನು ಪ್ರಧಾನಿಗೆ ರದ್ದು ಮಾಡಿ ಅಂದು ಪತ್ರ ಕೂಡ ಬರೆದಿದ್ದೇನೆ. ಆದ್ರೆ ಕೇಂದ್ರ ಸರ್ಕಾರವೇ ಪ್ರಜ್ವಲ್‌ರನ್ನ ರಕ್ಷಣೆ ಮಾಡುತ್ತಿದೆ. ಕುಮಾರಸ್ವಾಮಿ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ನನ್ನ ಮಗ ಇದ್ದ ಹಾಗೆ. ನನ್ನ ಮಗ ಬೇರೆ ಅಲ್ಲ, ಪ್ರಜ್ವಲ್ ಬೇರೆ ಅಲ್ಲ ಅಂದಿದ್ದರು. ಈಗ ಅವರ ಕುಟುಂಬ ಬೇರೆ ನಮ್ಮ ಕುಟುಂಬ ಬೇರೆ ಅಂತಿದ್ದಾರೆ. ಅವರು ಎಲ್ಲಾ ಕುಕೃತ್ಯವನ್ನು ಒಟ್ಟಿಗೆ ಮಾಡ್ತಾರೆ, ಆಮೇಲೆ ನಾವಲ್ಲ ಅಂತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಅಲ್ಲದೇ ಪ್ರಜ್ವಲ್ ರೇವಣ್ಣ ಮೇಲೆ ರೇಪ್ ಕೇಸ್ ನೀಡಿದ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆಯನ್ನ ರೇವಣ್ಣ ಎಸ್ಕೇಪ್ ಮಾಡಿಸಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಆ ಹೆಣ್ಣುಮಗಳು ಎಲ್ಲಿ ಹೋಗಿದ್ದಾರೆ? ಎಂದು ಪತ್ತೆ ಹಚ್ಚಲು ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮೇಥಿಯಲ್ಲಿ ಗಾಂಧಿ ಕುಟುಂಬಯೇತರ ಅಭ್ಯರ್ಥಿ – ಯಾರಿದು ಕಿಶೋರಿ ಲಾಲ್ ಶರ್ಮಾ?

    ಪ್ರಜ್ವಲ್ ವಿಡಿಯೊ ಬಗ್ಗೆ ಗೊತ್ತಿದ್ದರೂ ಯಾಕೆ ಅಲಯನ್ಸ್ ಮಾಡಿಕೊಂಡರು? ಮೋದಿ ನಾ ಖಾವುಂಗಾ ನಾ ಖಾನೆ ದೂಂಗಾ ಅಂತಾರೆ. ಅದೇ ಜನ ಇನ್ಕಮ್ ಟ್ಯಾಕ್ಸ್, ಇಡಿ ರೇಡ್ ಆದವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಅಪರಾಧಿಗಳನ್ನೆಲ್ಲ ಸೇರಿಸಿಕೊಂಡಿದ್ದಾರೆ, ಅವರೂ ಮಾಡಬಾರದ ಕೆಲಸ ಮಾಡ್ತಾರೆ. ಅಧಿಕಾರ ಮಾಡುವುದಕ್ಕೋಸ್ಕರ ಮಾಡಬಾರದ ಕೆಲಸಗಳನ್ನೇ ಮಾಡ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

    ಹುಬ್ಬಳ್ಳಿ ನೇಹಾ ಕೊಲೆ ಲವ್ ಜಿಹಾದ್ ಎಂಬ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ, ಅಮಿತ್ ಶಾ ರಾಜಕೀಯಕ್ಕೋಸ್ಕರ ಹೇಳ್ತಾರೆ. ನೇಹಾ ಪ್ರಕರಣದಲ್ಲಿ ಕೂಡಲೇ ಆರೋಪಿಯನ್ನ ಬಂಧಿಸಿದ್ದೇವೆ. ತನಿಖೆಯನ್ನ ಸಿಐಡಿಗೆ ಕೊಟ್ಟಿದ್ದೆವೆ. ಆರೋಪಿಗೆ ಕಠಿಣ ಶಿಕ್ಷೆ ಕೊಡಬೇಕು ಅಂತ, ಪಬ್ಲಿಕ್ ಪ್ರಾಸಿಕ್ಯೂಟರ್ ಜೊತೆಗೆ ಮಾತನಾಡಿ ಸ್ಪೇಷಲ್ ಕೋರ್ಟ್ ಮಾಡಿದ್ದೇವೆ. ಸರ್ಕಾರ ಕಾನೂನು ಪ್ರಕಾರ ಏನೆಲ್ಲಾ ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ರಾಜಕೀಯಕ್ಕೋಸ್ಕರ ನೇಹಾ ಪ್ರಕರಣದ ಬಗ್ಗೆ ಮಾತನಾಡುವ ಅಮಿತ್ ಶಾ, ಮಣಿಪುರ ಘಟನೆ ಬಗ್ಗೆ ಯಾಕೆ ಮಾತಾಡಲಿಲ್ಲ? ದೇಶದ ಗೃಹಸಚಿವರಾಗಿ ಏನು ಮಾಡಿದರು? ಅಲ್ಲಿ ಬಿಜೆಪಿ ಸಿಎಂ ಇದ್ದಾರೆ, ಅವರನ್ನ ಬದಲಾಯಿಸಿದ್ರಾ? ಸರ್ಕಾರವನ್ನ ವಜಾಗೊಳಿಸಿದ್ರಾ ಎಂದು ಪ್ರಶ್ನೆಗಳ ಮಳೆಗರೆದಿದ್ದಾರೆ. ಇದನ್ನೂ ಓದಿ: ಬಿರುಬೇಸಿಗೆಯಲ್ಲಿ ವಾಹನಗಳಿಗೆ ಪೆಟ್ರೋಲ್‌, ಡೀಸೆಲ್‌ ಫುಲ್‌ ಟ್ಯಾಂಕ್‌ ಮಾಡಿಸಿದ್ರೆ ಸಮಸ್ಯೆ ಆಗಲ್ಲ: ಇಂಡಿಯನ್‌ ಆಯಿಲ್‌ ಸ್ಪಷ್ಟನೆ

  • ಸಂಕಷ್ಟದಿಂದ ಪಾರಾಗಲು ದೇವರ ಮೊರೆ ಹೋದ ರೇವಣ್ಣ; ಮನೆಯಲ್ಲೇ ಅಗ್ನಿಕುಂಡ ನಿರ್ಮಿಸಿ ಹೋಮ!

    ಸಂಕಷ್ಟದಿಂದ ಪಾರಾಗಲು ದೇವರ ಮೊರೆ ಹೋದ ರೇವಣ್ಣ; ಮನೆಯಲ್ಲೇ ಅಗ್ನಿಕುಂಡ ನಿರ್ಮಿಸಿ ಹೋಮ!

    ಹಾಸನ: ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಎ1 ಆರೋಪಿ ಸ್ಥಾನದಲ್ಲಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಅವರು ಸದ್ಯ ಸಂಕಷ್ಟದಿಂದ ಪಾರಾಗಲು ದೇವರ ಮೊರೆ ಹೋಗಿದ್ದಾರೆ. ಹೊಳೆನರಸೀಪುರದ ತಮ್ಮ ಮನೆಯಲ್ಲಿ ಅಗ್ನಿಕುಂಡ ನಿರ್ಮಿಸಿ ಮನೆದೇವರಿಗೆ ವಿಶೇಷ ಪೂಜೆ (Speical Pooja) ಸಲ್ಲಿಸಿದ್ದಾರೆ.

    ಬೆಳ್ಳಂಬೆಳಗ್ಗೆಯೇ ದೇವಸ್ಥಾನಕ್ಕೆ (Hassan Temple) ಭೇಟಿ ನೀಡಿದ್ದ ಮಾಜಿ ಸಚಿವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಎಲ್ಲ ಸಂಕಷ್ಟಗಳು ದೂರವಾಗಲೆಂದು ಮೆನಯಲ್ಲೇ ಅಗ್ನಿಕುಂಡ ನಿರ್ಮಿಸಿ ಹೋಮ ನೆರವೇರಿಸಿದ್ದಾರೆ. ನಂತರ ಬೆಂಗಳೂರಿಗೆ ತೆರಳಿದ್ದಾರೆ. ಇದನ್ನೂ ಓದಿ: ತಕ್ಷಣವೇ ವಿಚಾರಣೆಗೆ ಹಾಜರಾಗಿ- ಪ್ರಜ್ವಲ್, ಹೆಚ್.ಡಿ ರೇವಣ್ಣಗೆ ಎಸ್‍ಐಟಿ ನೋಟಿಸ್

    ಪ್ರಕರಣದ ಎ1 ಆರೋಪಿ:
    ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ವಿರುದ್ಧವೂ ದೌರ್ಜನ್ಯ ಆರೋಪ ಕೇಳಿಬಂದಿದೆ. ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆಯೇ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್‌; ಸಂತ್ರಸ್ತರಿಗೆ ನೆರವಾಗದ ಪೊಲೀಸರು!

    ಹೊಳೆನರಸೀಪುರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಜ್ವಲ್‌ ಮತ್ತು ಹೆಚ್‌ಡಿ ರೇವಣ್ಣ ಇಬ್ಬರ ವಿರುದ್ಧವೂ ದೂರು ದಾಖಲಾಗಿದೆ. ದೂರಿನ ಆಧಾರದಲ್ಲಿ ಎಫ್‌ಐಆರ್‌ನಲ್ಲಿ ಹೆಚ್.ಡಿ.ರೇವಣ್ಣ ಎ1 ಮತ್ತು ಪ್ರಜ್ವಲ್‌ ರೇವಣ್ಣ ಎ2 ಆರೋಪಿಯಾಗಿದ್ದಾರೆ. 354 A, 354 D, 509 ಅಡಿ ಪ್ರಕರಣ ದಾಖಲಾಗಿದೆ. 2015 ರಲ್ಲಿ ಹೆಚ್.ಡಿ ರೇವಣ್ಣ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆ ದೂರು ನೀಡಿದ್ದಾರೆ. ತಂದೆ ಮತ್ತು ಮಗನ ವಿರುದ್ಧ ಸಂತ್ರಸ್ತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

    ಈ ಹಿನ್ನೆಲ್ಲಿ ಪ್ರಕರಣದ ತನಿಖೆ ಕೈಗೊಂಡಿರುವ ವಿಶೇಷ ತನಿಖಾ ತಂಡ ಇಬ್ಬರಿಗೂ ನೋಟಿಸ್‌ ಜಾರಿಗೊಳಿಸಿದೆ. ಅಲ್ಲದೇ ಈಗಾಗಲೇ 32 ಮತ್ತು 8 ಜಿಬಿಯ ಎರಡು ಪೆನ್‌ಡ್ರೈವ್‌ಗಳನ್ನು ವಶಪಡಿಸಿಕೊಂಡಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.