Tag: Prajwal Devraj

  • ಸಿನಿಮಾ ನಿರ್ಮಾಣದತ್ತ ಹೆಜ್ಜೆ ಇಟ್ಟ ಪ್ರಜ್ವಲ್ ದೇವರಾಜ್

    ಸಿನಿಮಾ ನಿರ್ಮಾಣದತ್ತ ಹೆಜ್ಜೆ ಇಟ್ಟ ಪ್ರಜ್ವಲ್ ದೇವರಾಜ್

    ನ್ನಡ ಪ್ರೇಕ್ಷಕರಿಗೆ ಸದಭಿರುಚಿಯ ಸಿನಿಮಾಗಳ ಮೂಲಕ ಉತ್ತಮ ಮನರಂಜನೆ ನೀಡುವ ಉದ್ದೇಶದಿಂದ ಪ್ರಾರಂಭವಾದ ಸಂಸ್ಥೆ ಪುರಾತನ ಫಿಲಂಸ್. ಈಗಾಗಲೇ ಸನ್ ಆಫ್ ಮುತ್ತಣ್ಣ (Son of Muthanna) ಎಂಬ ಭಾವನಾತ್ಮಕ ಕಥೆಯ ಚಿತ್ರ ನಿರ್ಮಿಸಿ ತೆರೆಗೆ ತರುತ್ತಿರುವ ಪುರಾತನ ಫಿಲಂಸ್ ಮುಂದಿನ ದಿನಗಳಲ್ಲಿ ನಟ ಪ್ರಜ್ವಲ್ ದೇವರಾಜ್ (Prajwal Devraj) ಅವರ ಜೊತೆಗೂಡಿ ಅತ್ಯುತ್ತಮ ತಾಂತ್ರಿಕತೆಯ ಹಾಗೂ ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ.

    ಪುರಾತನ ಫಿಲಂಸ್ ಹಾಗೂ ಪ್ರಜ್ವಲ್ ದೇವರಾಜ್ ಸೇರಿ “P2 ಪ್ರೊಡಕ್ಷನ್ಸ್” ಎಂಬ ನೂತನ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಇದರ ಮೂಲಕ ಪ್ರತಿಭಾವಂತ ಕಲಾವಿದರು, ತಂತ್ರಜ್ಞರು ಮತ್ತು ಒಳ್ಳೆಯ ಕಥೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲಿದೆ. ಈಗಾಗಲೇ ಹೊಸ ಪ್ರತಿಭೆಗಳಿಗೆ ಮಣೆ ಹಾಕುವ ನಿಟ್ಟಿನಲ್ಲಿ ಕೆಲವು ಕೆಲಸಗಳನ್ನು ಮಾಡುತ್ತಿದೆ. ಇದನ್ನೂ ಓದಿ: ಮಲ್ಲಿಗೆ ಮುಡಿದ ನಟಿ ನವ್ಯಾಗೆ ಆಸ್ಟ್ರೇಲಿಯಾದಲ್ಲಿ 1 ಲಕ್ಷ ದಂಡ

    ಇದುವರೆಗೆ ಲವರ್ ಬಾಯ್, ಆಕ್ಷನ್ ಹೀರೋ ಹೀಗೆ ಎಲ್ಲಾ ತರಹದ ಪಾತ್ರಗಳನ್ನ ನಿರ್ವಹಿಸುವ ಮೂಲಕ ಗುರುತಿಸಿಕೊಂಡ ನಟ ಪ್ರಜ್ವಲ್ ದೇವರಾಜ್ ಇದೀಗ ಚಲನಚಿತ್ರ ನಿರ್ಮಾಣದತ್ತ ಹೊಸ ಹೆಜ್ಜೆ ಇಟ್ಟಿದ್ದು, ದೊಡ್ಡ ಸಂಸ್ಥೆಯ ಜತೆ ಕೈಜೋಡಿಸಿದ್ದಾರೆ. ಹೊಸ ಹೊಸ ಸಿನಿಮಾಗಳನ್ನು ಮಾಡುವ ಪ್ಲ್ಯಾನ್ ಮಾಡಿದ್ದಾರೆ.

  • ಬರ್ತ್‌ಡೇ ದಿನ ಹತ್ತಿರ ಬರುತ್ತಿದ್ದಂತೆ ಫ್ಯಾನ್ಸ್‌ಗೆ ಪ್ರಜ್ವಲ್ ದೇವರಾಜ್ ವಿಶೇಷ ಮನವಿ

    ಬರ್ತ್‌ಡೇ ದಿನ ಹತ್ತಿರ ಬರುತ್ತಿದ್ದಂತೆ ಫ್ಯಾನ್ಸ್‌ಗೆ ಪ್ರಜ್ವಲ್ ದೇವರಾಜ್ ವಿಶೇಷ ಮನವಿ

    ಸ್ಯಾಂಡಲ್‌ವುಡ್‌ಗೆ ‘ಸಿಕ್ಸರ್’ (Sixer) ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಜ್ವಲ್ ದೇವರಾಜ್ (Prajwal Devraj) ಅವರಿಗೆ ಅಪಾರ ಅಭಿಮಾನಿಗಳ ಬಳಗವಿದೆ. ಇದೇ ಜುಲೈ 4ರಂದು ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬವಾಗಿದ್ದು, ತಮ್ಮ ಅಭಿಮಾನಿಗಳಿಗೆ ನಟ ಪ್ರಜ್ವಲ್ ವಿಶೇಷ ಮನವಿಯೊಂದನ್ನ ಮಾಡಿದ್ದಾರೆ. ಹುಟ್ಟುಹಬ್ಬಕ್ಕೆ (Birthday) ಕೆಲ ದಿನಗಳ ಬಾಕಿ ಇರುವಾಗಲೇ ಕೇಕ್- ಹಾರ ತರಬೇಡಿ ಎಂದು ಕೋರಿಕೆಯೊಂದನ್ನ ಮಾಡಿದ್ದಾರೆ.

    ಸಿಕ್ಸರ್, ಜೆಂಟಲ್‌ಮ್ಯಾನ್, ಅರ್ಜುನ್ ಗೌಡ, ಅಬ್ಬರ, ಜೀವಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಪ್ರಜ್ವಲ್ ದೇವರಾಜ್ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ತಮ್ಮ ಫ್ಯಾನ್ಸ್ಗೆ ವಿಶೇಷ ಮನವಿಯೊಂದನ್ನ ಮಾಡಿದ್ದಾರೆ.ಇದನ್ನೂ ಓದಿ:ಬಾಲಿವುಡ್ ‘ಮೂವೀ ಮಾಫಿಯಾ’ ವಿರುದ್ಧ ಮತ್ತೆ ಗುಡುಗಿದ ಕಂಗನಾ ರಣಾವತ್

    ಹಾಯ್ ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಪ್ರಜ್ವಲ್ ದೇವರಾಜ್ ಮಾತನಾಡ್ತಾ ಇದ್ದೀನಿ. ನಾನು ಈ ವಿಡಿಯೊ ಮಾಡುತ್ತಿರುವ ಕಾರಣ ಏನು ಅಂತ ಅಂದ್ರೆ, ಕಳೆದ ಐದು ವರ್ಷಗಳಿಂದ ನನ್ನ ಹುಟ್ಟುಹಬ್ಬದ ದಿನ ನಿಮ್ಮನ್ಯಾರನ್ನೂ ಸಹ ಭೇಟಿಯಾಗಲು ಆಗಿರಲಿಲ್ಲ. ಕಾರಣ ಏನು ಅಂತ ನಿಮಗೂ ಸಹ ಗೊತ್ತು. ಈ ವರ್ಷ ನಾಲ್ಕನೇ ತಾರೀಖು ನಿಮ್ಮನ್ನೆಲ್ಲರನ್ನೂ ಸಹ ಭೇಟಿಯಾಗ್ತೇನೆ. ಮನೆಯತ್ರ ಎಲ್ಲರೂ ಬನ್ನಿ. ಎಲ್ರೂ ಊಟ ಮಾಡಿಕೊಂಡು ಹೋಗಿ. ನಿಮ್ಮ ಜತೆ ಸಾಕಷ್ಟು ಸಮಯ ಕಳೆಯಬೇಕು ಅಂತ ನನಗೂ ಸಹ ಆಸೆ ಇದೆ. ಆದರೆ ಒಂದು ಮನವಿ ನನ್ನ ಕಡೆಯಿಂದ. ಹಾರ, ಕೇಕು ಇವೆಲ್ಲವೂ ತರದೇ ಶಾಲಾ ಮಕ್ಕಳಿಗಾಗಿ, ಶಾಲೆಗಳಿಗಾಗಲಿ ಅಥವಾ ಕಷ್ಟದಲ್ಲಿರುವ ಮಕ್ಕಳ ಫೀಸ್‌ಗಾಗಿಯಾದರೂ ಉಪಯೋಗಿಸಿ. ಇದೇ ನೀವು ನನಗೆ ಕೊಡುವ ಉಡುಗೊರೆ ಎಂದು ಪ್ರಜ್ವಲ್ ದೇವರಾಜ್ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ಪ್ರಜ್ವಲ್ ಮನವಿ ಮಾಡಿರುವ ಪರಿಗೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ವರ್ಷವಾದರೂ ತಮ್ಮ ನೆಚ್ಚಿನ ನಟನನ್ನ ಭೇಟಿಯಾಗುವ ಖುಷಿಯಲ್ಲಿದ್ದಾರೆ ಪ್ರಜ್ಜು ಫ್ಯಾನ್ಸ್. ಮಾಫಿಯಾ, ಗಣ, ತತ್ಸಮ ತದ್ಭವ ಚಿತ್ರಗಳು ತೆರೆಗೆ ಅಬ್ಬರಿಸಲು ಸಿದ್ಧವಾಗಿದೆ. ಒಂದಕ್ಕಿಂತ ಒಂದರಲ್ಲಿ ಭಿನ್ನ ಪಾತ್ರಗಳ ಮೂಲಕ ಹೀರೋ ಪ್ರಜ್ವಲ್ ಮೋಡಿ ಮಾಡಲು ಬರುತ್ತಿದ್ದಾರೆ.

  • ‘ಅಭಿವಾ’ ಜೋಡಿಗೆ ಸಿಂಹಪ್ರಿಯ, ಪ್ರಜ್ವಲ್ ದಂಪತಿ ಕಡೆಯಿಂದ ಸ್ವೀಟ್ ವಿಶ್

    ‘ಅಭಿವಾ’ ಜೋಡಿಗೆ ಸಿಂಹಪ್ರಿಯ, ಪ್ರಜ್ವಲ್ ದಂಪತಿ ಕಡೆಯಿಂದ ಸ್ವೀಟ್ ವಿಶ್

    ಅಂಬರೀಶ್-ಸುಮಲತಾ ಅವರ ಪುತ್ರ ಅಭಿಷೇಕ್- ಅವಿವಾ (Aviva) ಆರತಕ್ಷತೆ ಅದ್ದೂರಿಯಾಗಿ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯುತ್ತಿದೆ. ಸ್ಯಾಂಡಲ್‌ವುಡ್ ನಟ- ನಟಿಯರು ಬಾಲಿವುಡ್ ಸ್ಟಾರ್ಸ್ ಸಾಕ್ಷಿಯಾಗುವ ಮೂಲಕ ನವಜೋಡಿಗೆ ಶುಭಕೋರುತ್ತಿದ್ದಾರೆ. ಅಭಿವಾ ಜೋಡಿಗೆ ಕನ್ನಡದ ಬೆಸ್ಟ್ ಕಪಲ್ ಆಗಿರುವ ವಸಿಷ್ಠ ಸಿಂಹ- ಹರಿಪ್ರಿಯಾ, ಪ್ರಜ್ವಲ್-ರಾಗಿಣಿ ಶುಭಕೋರಿದ್ದಾರೆ. ನವಜೋಡಿಗೆ ಏನಂದ್ರು ಗೊತ್ತಾ.? ಇಲ್ಲಿದೆ ಮಾಹಿತಿ

    ಐದಾರು ವರ್ಷಗಳ ಪ್ರೀತಿಗೆ ಅಭಿವಾ ಜೂನ್ 5ಕ್ಕೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಜೂನ್ 7ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಕಾರ್ಯಕ್ರಮ ನಡೆಯುತ್ತಿದೆ. ಅಭಿವಾ ಜೋಡಿ ಗೋಲ್ಡನ್ ಬಣ್ಣದ ಧಿರಿಸಿನಲ್ಲಿ ಮಿಂಚಿದ್ದಾರೆ. ಅಭಿವಾ ಆರತಕ್ಷತೆಗೆ ಚಿತ್ರರಂಗ- ರಾಜಕೀಯ ಸಾಕ್ಷಿಯಾಗಿದೆ. ಇದನ್ನೂ ಓದಿ:‘ಅಭಿವಾ’ ಜೋಡಿಗೆ ಶುಭಹಾರೈಸಿದ ನಟಿ ರಮ್ಯಾ

    ಅಭಿಷೇಕ್‌ಗೆ ಟಿಪ್ಸ್ ಕೊಡೋಕೆ ಏನಿಲ್ಲ. ಎಲ್ಲರೂ ಸಂಸಾರ ಸಾಗರದಲ್ಲಿ ಈಜಲೇಬೇಕು. ಹೋಗ್ತಾ ಹೋಗ್ತಾ ಅವರೇ ಕಂಡುಕೊಳ್ತಾರೆ. ಡಿಯರ್ ಅಭಿ ಮದುವೆಯಾಗಿರೋದು ತುಂಬಾ ಖುಷಿಯಾಗುತ್ತೆ. ಬೆಸ್ಟ್ ವಿಶ್ ಟು ಟೈಗರ್. ನಾವು ಅವರಿಗಿಂತ ಮೂರು-ನಾಲ್ಕು ತಿಂಗಳು ಸೀನಿಯರ್ ಅಷ್ಟೇ ಎಂದು ವಸಿಷ್ಠ ಹಾರೈಸಿದ್ದಾರೆ. ಸುಮಲತಾ ಮೇಡಂ ಅವರ ಜೊತೆ ನಾನು ವರ್ಕ್ ಮಾಡಿದ್ದೀನಿ. ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ನನ್ನ ತಾಯಿ ಪಾತ್ರ ಮಾಡಿದ್ರು. ಅಭಿನ ನನ್ನ ಬ್ರದರ್ ಅಂತಾ ಕರೀಬೇಕು. ನನ್ನ ಬ್ರದರ್ ಹ್ಯಾಪಿ ಮ್ಯಾರೀಡ್ ಲೈಫ್ ಎಂದು ನಟಿ ಹರಿಪ್ರಿಯಾ (Haripriya) ಹಾರೈಸಿದ್ದಾರೆ.

    ನನ್ನ ಇನ್ನೊಬ್ಬ ತಮ್ಮದು ಮದುವೆ ನಡೆದಿದೆ. ಅವರ ಮನೆಯ ಎಲ್ಲಾ ಕಾರ್ಯಕ್ರಮದಲ್ಲೂ ಪಾಲ್ಗೋಳ್ಳುತ್ತಾ ಬಂದಿದ್ದೀವಿ. ಬಹಳ ಮಜವಾಗಿದೆ. ಅಭಿ ಹೇಳ್ತಿದ್ದ, ನಾವಿಬ್ಬರು ಪ್ರೀತಿಗೆ ಪ್ರೇರಣೆ ಅಂತಾ ಸೋ ನಮ್ಮ ಹಾಗೇ ಅವರು ಕೂಡ ಖುಷಿಯಾಗಿರಲಿ ಎಂದು ಪ್ರಜ್ವಲ್ ದೇವರಾಜ್ (Prajwal Devraj) ದಂಪತಿ ವಿಶ್ ಮಾಡಿದ್ದಾರೆ.

    ಅವಿವಾ ಆರತಕ್ಷತೆ ಸಂಭ್ರಮದಲ್ಲಿ ಮೆಗಾಸ್ಟಾರ್‌ ಚಿರಂಜೀವಿ, ಜಾಕಿ ಶ್ರಾಫ್, ಮಾಜಿ ಸಿಎಂ ಬೊಮ್ಮಾಯಿ, ನಟಿ ಮಾಲಾಶ್ರೀ, ರಮೇಶ್ ಅರವಿಂದ್, ರಿಷಬ್‌ ಶೆಟ್ಟಿ ದಂಪತಿ ಸೇರಿದಂತೆ ಹಲವರು ಭಾಗಿಯಾಗಿ ವಿಶ್ ಮಾಡಿದ್ದಾರೆ.

  • 50 ದಿನ ಪೂರೈಸುವುದಕ್ಕೂ ಮೊದಲೇ `ಕಾಂತಾರ’ ಎತ್ತಂಗಡಿ ಆಗುತ್ತಾ?

    50 ದಿನ ಪೂರೈಸುವುದಕ್ಕೂ ಮೊದಲೇ `ಕಾಂತಾರ’ ಎತ್ತಂಗಡಿ ಆಗುತ್ತಾ?

    ರಿಷಬ್ ಶೆಟ್ಟಿ (Rishab Shetty) ಅಭಿನಯದ `ಕಾಂತಾರ’ (Kantara Film) ಈ ಶುಕ್ರವಾರಕ್ಕೆ 50 ದಿನಗಳನ್ನ ಪೂರೈಸಲಿದೆ. ನವರಾತ್ರಿ ಸಮಯದಲ್ಲಿ ಸೆಪ್ಟೆಂಬರ್‌ 30ರಂದು ಬಿಡುಗಡೆಯಾಗಿ 50ನೇ ದಿನಕ್ಕೆ ಕಾಲಿಡುತ್ತಿರುವ ಸಮಯದಲ್ಲೇ ಈ ಚಿತ್ರ ಥಿಯೇಟರ್‌ನಿಂದ ಎತ್ತಂಗಡಿ ಆಗುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಹೌದು. ಪ್ರಜ್ವಲ್ ದೇವರಾಜ್ (Prajwal Devraj) ನಟನೆಯ `ಅಬ್ಬರ’ ಚಿತ್ರ ಈ ಶುಕ್ರವಾರ(ನ.28) ತೆರೆಗೆ ಬರಲಿದೆ. ʻಕಾಂತಾರʼ ಪ್ರದರ್ಶನಗೊಳ್ಳುತ್ತಿರುವ ಥಿಯೇಟರ್‌ನಲ್ಲಿ ಈ ಚಿತ್ರ ರಿಲೀಸ್‌ ಆಗಲಿರುವುದರಿಂದ ಕಾಂತಾರದ ಕಲೆಕ್ಷನ್‌ ಓಟಕ್ಕೆ ಬ್ರೇಕ್‌ ಬೀಳಲಿದೆ. ಇದನ್ನೂ ಓದಿ:ಉರ್ಫಿ ಜಾವೇದ್ ಮೇಲೆ ದೂರುಗಳ ಸುರಿಮಳೆ : ಗೌರಮ್ಮ ಆಗಿ ಬದಲಾದ ನಟಿ

    ಈ ಹಿಂದೆ ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಸಂತೋಷ ಮುಖ್ಯ(Santhosh Theatre) ಚಿತ್ರಮಂದಿರದಲ್ಲಿ ಕೊರೊನಾ ನಂತರ ರಿಲೀಸ್ ಆದ ಯಾವ ಚಿತ್ರವು 25 ದಿನಗಳನ್ನ ಪೂರೈಸಿರಲಿಲ್ಲ. ಈಗ ಕಾಂತಾರ 50 ದಿನ ಪೂರೈಸುವತ್ತ ಹೆಜ್ಜೆ ಇಟ್ಟಿತ್ತು. ಆದರೆ ಪ್ರಜ್ವಲ್ ದೇವರಾಜ್ ನಟನೆಯ ʻಅಬ್ಬರʼ ಚಿತ್ರ ಬರುತ್ತಿರುವ ಕಾರಣ, ಕಾಂತಾರ ಓಟಕ್ಕೆ ಬ್ರೇಕ್ ಬಿದ್ದಿದೆ. ಕಾಂತಾರದ ಮಹತ್ತರ ದಾಖಲೆಗೆ ಅಡ್ಡಿಯಾಗಿದೆ.

    ಈಗಾಗಲೇ ಅಬ್ಬರ ಚಿತ್ರಕ್ಕೆ ಮುಂಚಿತವಾಗಿ ಮುಂಗಡ ಬುಕ್ಕಿಂಗ್ ಕೂಡ ತೆರೆಯಲಾಗಿದೆ. ಸಂತೋಷ ಚಿತ್ರಮಂದಿರವನ್ನ ಮುಖ್ಯ ಚಿತ್ರಮಂದಿರ ಎಂದು ಘೋಷಿಸಿರುವ ಕಾರಣ ಹೊಸ ಸಿನಿಮಾ ಪ್ರದರ್ಶನವಾಗುತ್ತಿದೆ.

    ಹದಿನಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಕಾಂತಾರ 380 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿ ನಿರ್ಮಾಪಕರ ಜೇಬು ತುಂಬಿಸಿದೆ. ಆದರೆ ಈ ವಾರ ʼಅಬ್ಬರʼದ ಜೊತೆ ಹಲವು ಚಿತ್ರಗಳು ಬಿಡುಗಡೆಯಾಗಲಿರುವುದರಿಂದ ಕಾಂತಾರ ಕಲೆಕ್ಷನ್‌ ಕಡಿಮೆಯಾಗುವ ಸಾಧ್ಯತೆಯಿದೆ.

    ದೈವದ ಕಥೆಗೆ ಪರಭಾಷಾ ಪ್ರೇಕ್ಷಕರು ಕೂಡ ಫಿದಾ ಆಗಿದ್ದಾರೆ. ಕಾಂತಾರ ವರ್ಲ್ಡ್‌ ವೈಡ್ 400 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಮುನ್ನುಗ್ಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ಒಂದು, ಎರಡು ವಾರಗಳ ಕಾಲ ಥಿಯೇಟರ್‌ನಲ್ಲಿ ಓಡುವುದು ಅಪರೂಪ. ಪ್ರತಿ ವಾರ ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ರಿಲೀಸ್‌ ಆಗುತ್ತಿದ್ದರೂ ಕಾಂತಾರ ಕನ್ನಡ ಅಲ್ಲದೇ ಬೇರೆ ಭಾಷೆಗಳಲ್ಲಿ ಭಾರತ ಅಲ್ಲದೇ ವಿದೇಶದಲ್ಲೂ ಕಮಾಲ್‌ ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಹುಟ್ಟುಹಬ್ಬಕ್ಕೆ ಪ್ರಜ್ವಲ್ ದೇವರಾಜ್ ಬ್ರೇಕ್: ಕಾರಣವೇನು ಗೊತ್ತಾ?

    ಹುಟ್ಟುಹಬ್ಬಕ್ಕೆ ಪ್ರಜ್ವಲ್ ದೇವರಾಜ್ ಬ್ರೇಕ್: ಕಾರಣವೇನು ಗೊತ್ತಾ?

    ಪ್ರಜ್ವಲ್ ದೇವರಾಜ್ ಅಭಿಮಾನಿಗಳಿಗೆ ಇದು ಕಹಿ ಸುದ್ದಿ. ಈ ವರ್ಷವೂ ಸ್ಯಾಂಡಲ್‌ವುಡ್ ನಟ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಅಭಿಮಾನಿಯ ಮೇಲಿರುವ ಅಭಿಮಾನಕ್ಕೆ ಬರ್ತಡೇಗೆ ಪ್ರಜ್ವಲ್ ಬ್ರೇಕ್ ಹಾಕಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ನಟ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಕಳೆದ ವರ್ಷ ಕೋವಿಡ್ ಹಿನ್ನಲೆಯಿಂದ ಅಭಿಮಾನಿಗಳ ಜತೆ ಬರ್ತಡೇ ಆಚರಣೆ ಮಾಡಿರಲಿಲ್ಲ. ಈ ಬಾರಿಯೂ ಕೂಡ ಜುಲೈ 4ರಂದು ಆಚರಣೆ ಮಾಡಲಾಗುತ್ತಿಲ್ಲ. ಇದಕ್ಕೆ ಕಾರಣ ಅಭಿಮಾನಿ ಮೇಲಿರುವ ಅಭಿಮಾನ. ಇತ್ತೀಚೆಗಷ್ಟೇ ಪ್ರಜ್ವಲ್ ಅವರ ಅಪ್ಪಟ ಅಭಿಮಾನಿ ಸತೀಶ್ ಎಂಬುವವರು ನಿಧನರಾಗಿದ್ದು, ಈ ಹಿನ್ನಲೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ನಟ ತಿಳಿಸಿದ್ದಾರೆ. ಇದನ್ನೂ ಓದಿ:ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ ಸುದೀಪ್

    ಈ ವರ್ಷವೂ ಕೂಡ ನಾನು ಬರ್ತಡೇ ಆಚರಿಸಿಕೊಳ್ಳುತ್ತಿಲ್ಲ. ಪ್ರತಿ ವರ್ಷ ನನ್ನ ದಿನವನ್ನು ಹಬ್ಬವಾಗಿ ಸಲೆಬ್ರೇಟ್ ಮಾಡುತ್ತಿದ್ದೀರಿ. ನನಗೆ ಸಾಕಷ್ಟು ಪ್ರೀತಿಯನ್ನ ಕೊಟ್ಟಿದ್ದೀರಿ. ಈಗ ನನ್ನ ಅಭಿಮಾನಿಗಳಿಗೂ ನಾನು ಪ್ರೀತಿಯನ್ನ ಕೊಡಬೇಕು. ಇತ್ತೀಚೆಗಷ್ಟೇ ನನ್ನ ಆಪ್ತ ನನ್ನ ಅಭಿಮಾನಿ ಸತೀಶ್ ಎಂಬುವವರು ನಿಧನರಾಗಿದ್ದಾರೆ. ಈ ನಿಮಿತ್ತ ಈ ವರ್ಷ ಹುಟ್ಟುಹಬ್ಬ ಬೇಡ ಎಂದು ವಿಡಿಯೋ ಮೂಲಕ ನಟ ಪ್ರಜ್ವಲ್ ಮನವಿ ಮಾಡಿದ್ದಾರೆ. ನಟನ ನಡೆಗೆ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

    Live Tv

  • ಶಿವರಾತ್ರಿ ಸಡಗರಕ್ಕೆ ಸಿದ್ಧಗೊಂಡ ಸ್ಯಾಂಡಲ್ ವುಡ್

    ಶಿವರಾತ್ರಿ ಸಡಗರಕ್ಕೆ ಸಿದ್ಧಗೊಂಡ ಸ್ಯಾಂಡಲ್ ವುಡ್

    ನಾಳೆ (ಫೆ.01) ಶಿವರಾತ್ರಿ. ಹಬ್ಬ ಹರಿದಿನಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಸ್ಯಾಂಡಲ್ ವುಡ್ ಸದಾ ಸಿದ್ಧವಿರುತ್ತದೆ. ಪ್ರತಿ ಸಲದಂತೆಯೂ ಈ ಬಾರಿಯೂ ಶಿವರಾತ್ರಿಯನ್ನು ಸಡಗರದಿಂದ ಕನ್ನಡ ಚಿತ್ರರಂಗ ಬರಮಾಡಿಕೊಳ್ಳುತ್ತಿದೆ. ಒಂದು ಕಡೆ ಈ ವಾರ ಐದಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಆಗಿದ್ದರೆ, ನಾಳೆ ಮತ್ತಷ್ಟು ಕಾರ್ಯಕ್ರಮಗಳು ಪ್ಲ್ಯಾನ್ ಆಗಿವೆ. ಇದನ್ನೂ ಓದಿ : ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ

    ಸಲಗ ಸಿನಿಮಾದ ನಂತರ ದುನಿಯಾ ವಿಜಯ್ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿರುವ ವಿಜಯ್, ಈ ಸಿನಿಮಾದಲ್ಲಿ ಅವರು ಯಾವೆಲ್ಲ ಪಾತ್ರ ನಿರ್ವಹಿಸಲಿದ್ದಾರೆ ಎಂದು ಈವರೆಗೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಈಗಾಗಲೇ ರಿಲೀಸ್ ಆದ ಪೋಸ್ಟರ್ ಹೇಳುವ ಪ್ರಕಾರ, ದುನಿಯಾ ವಿಜಯ್ ಅವರು ನಟನೆಯೊಂದಿಗೆ ನಿರ್ದೇಶನ ಮಾಡಲಿದ್ದಾರೆ ಎನ್ನುತ್ತದೆ. ಶಿವರಾತ್ರಿ ದಿನದಂದು ಇದೆಲ್ಲದಕ್ಕೂ ಉತ್ತರ ಸಿಗಲಿದೆ. ಹಾಗೂ ಟೈಟಲ್ ಕೂಡ ಲಾಂಚ್ ಆಗಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ವಿಕ್ರಾಂತ್ ರೋಣ 2 ಮುನ್ಸೂಚನೆ ಕೊಟ್ಟರಾ ಸುದೀಪ್?

    ಪ್ರಜ್ವಲ್ ದೇವರಾಜ್ ಮತ್ತು ರಚಿತಾ ರಾಮ್ ಕಾಂಬಿನೇಷನ್ ನ ವೀರಂ ಸಿನಿಮಾದ ಹಾಡೊಂದು ಶಿವರಾತ್ರಿಗಾಗಿ ರಿಲೀಸ್ ಆಗುತ್ತಿದೆ. ಶಿವನ ಆರಾಧನೆಯ ಕುರಿತಾಗಿಯೇ ಈ ಹಾಡು ಮೂಡಿ ಬಂದಿದ್ದು, ಖ್ಯಾತ ಗಾಯಕಿ ಅನನ್ಯ ಭಟ್ ಈ ಗೀತೆಯನ್ನು ಹಾಡಿದ್ದಾರೆ. ಅನೂಪ್ ಸೀಳೀನ್ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿ ಬಂದಿದ್ದು, ನಾಗೇಂದ್ರ ಪ್ರಸಾದ್ ಈ ಗೀತೆಯನ್ನು ಬರೆದಿದ್ದಾರೆ. ಈ ಹಾಡು ಅಕ್ಕ ಮತ್ತು ತಂಗಿಯ ಭಾವನಾತ್ಮಕ ಸನ್ನಿವೇಶದಲ್ಲಿ ಸ್ಥಳ ಪಡೆದಿದೆ. ಇದನ್ನೂ ಓದಿ : ಏನಾಯ್ತು ಅಮಿತಾಭ್ ಬಚ್ಚನ್ ಗೆ? ಆತಂಕದಲ್ಲಿ ಅಭಿಮಾನಿಗಳು

    ಅಲ್ಲದೇ ಶಿವರಾತ್ರಿ ಮುನ್ನ ದಿನವೇ ಸುನಿ ನಿರ್ದೇಶನದ ಹೊಸ ಸಿನಿಮಾದ ಪೋಸ್ಟರ್ ಮತ್ತು ನಾಯಕನ ಪರಿಚಯದ ಟೀಸರ್ ವೊಂದು ಬಿಡುಗಡೆ ಆಗಿದೆ. ಹೊಸ ಹುಡುಗನಿಗಾಗಿ ಸುನಿ ವಿಶೇಷ ಟೀಸರ್ ವೊಂದನ್ನು ತಯಾರಿಸಿ, ಆ ಮೂಲಕ ತಮ್ಮ ಸಿನಿಮಾದ ನಾಯಕನನ್ನು ಪರಿಚಯಿಸಿದ್ದಾರೆ. ಶಿವರಾತ್ರಿ ಒಂದು ದಿನ ಮುನ್ನವೇ ಈ ಟೀಸರ್ ಅಭಿಮಾನಿಗಳಿಗೆ ಇಷ್ಟವಾಗಿದೆ.

  • ಪ್ರಜ್ವಲ್ ದೇವರಾಜ್, ಪತ್ನಿ ರಾಗಿಣಿಗೆ ಕೊರೊನಾ ಸೋಂಕು

    ಪ್ರಜ್ವಲ್ ದೇವರಾಜ್, ಪತ್ನಿ ರಾಗಿಣಿಗೆ ಕೊರೊನಾ ಸೋಂಕು

    ಬೆಂಗಳೂರು: ನಟ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಪ್ರಜ್ವಲ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಈ ವಿಷಯವನ್ನ ಪ್ರಜ್ವಲ್ ದೇವರಾಜ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಇಬ್ಬರಿಗೂ ಕೋವಿಡ್ ಸೋಂಕು ತಗುಲಿದ್ದು, ವೈದ್ಯರು ಸೂಚಿಸಿರುವ ಔಷಧಿಯನ್ನ ತೆಗೆದುಕೊಳ್ಳುತ್ತಿದ್ದೇವೆ. ಹಾಗೆ ಕೊರೊನಾಗೆ ಸಂಬಂಧಿಸಿದ ಪರೀಕ್ಷೆಗೂ ಒಳಗಾಗಿದ್ದೇವೆ. ಇಬ್ಬರು ಜೊತೆಯಾಗಿದ್ದು, ಯಾರೂ ಅತಂಕಕ್ಕೊಳಗಾಗೋದು ಬೇಡ. ನಿಮ್ಮ ಪ್ರೀತಿ ಮತ್ತು ಕಾಳಜಿ ಧನ್ಯವಾದಗಳು ಎಂದು ಪ್ರಜ್ವಲ್ ಬರೆದುಕೊಂಡಿದ್ದಾರೆ.

    ಫೆಬ್ರವರಿ 5ರಂದು ಪ್ರಜ್ವಲ್ ದೇವರಾಜ್ ಅಭಿನಯದ ಇನ್‍ಸ್ಪೆಕ್ಟರ್ ವಿಕ್ರಂ ಸಿನಿಮಾ ರಿಲೀಸ್ ಆಗಿತ್ತು. ಕೊರೊನಾ ಆತಂಕದ ನಡುವೆಯೂ ಚಿತ್ರತಂಡ ಸಿನಿಮಾವನ್ನ ರಿಲೀಸ್ ಒಪ್ಪಿಕೊಂಡಿತ್ತು. ಇನ್‍ಸ್ಪೆಕ್ಟರ್ ವಿಕ್ರಂ ಅಭಿಮಾನಿಗಳಿಂದ ಮೆಚ್ಚುಗೆ ಸಹ ಪಡೆದುಕೊಂಡಿತ್ತು.

    ರಾಜ್ಯದಲ್ಲಿ ಬುಧವಾರ ಕೊರೊನಾ ಮರಣ ಕೇಕೆ ಹಾಕಿದ್ದು, ಒಂದೇ ದಿನ 26 ಜನರನ್ನ ಬಲಿ ಪಡೆದುಕೊಂಡಿದೆ. ಬುಧವಾರ 4,225 ಪ್ರಕರಣಗಳು ವರದಿಯಾಗಿದ್ದು, 1,492 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

     

    View this post on Instagram

     

    A post shared by Prajwal Devaraj (@prajwaldevaraj)

    ಕೊರೊನಾ ಸೋಂಕಿತರ ಸಂಖ್ಯೆ 9,97,004ಕ್ಕೆ ಏರಿಕೆಯಾಗಿದ್ದು, 28,248 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 12,567ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದ ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ 266 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

  • ಅಭಿಮಾನಿ ದೇವರುಗಳು ಕನ್ನಡ ಸಿನಿಮಾಗಳ ಕೈ ಬಿಡಲ್ಲ: ಪ್ರಜ್ವಲ್ ದೇವರಾಜ್

    ಅಭಿಮಾನಿ ದೇವರುಗಳು ಕನ್ನಡ ಸಿನಿಮಾಗಳ ಕೈ ಬಿಡಲ್ಲ: ಪ್ರಜ್ವಲ್ ದೇವರಾಜ್

    ಬೆಂಗಳೂರು: ನಮ್ಮ ಅಭಿಮಾನಿ ದೇವರುಗಳು ಖಂಡಿತವಾಗಿ ಕನ್ನಡ ಸಿನಿಮಾಗಳ ಕೈ ಬಿಡುವುದಿಲ್ಲ. ಕೇವಲ ನನ್ನ ಸಿನಿಮಾಕ್ಕೆ ಮಾತ್ರವಲ್ಲದೇ ಇತರೆ ನಟರ ಸಿನಿಮಾಗಳಿಗೂ ಹೀಗೆ ಬೆಂಬಲ ನೀಡಿ ಪ್ರೋತ್ಸಾಹಿಸಿ ಎಂದು ನಟ ಪ್ರಜ್ವಲ್ ದೇವರಾಜ್ ಹೇಳಿದರು.

    ಇಂದಿನಿಂದ ರಾಜ್ಯದಲ್ಲಿ ಹೌಸ್ ಫುಲ್ ಪ್ರದರ್ಶನಗಳು ಕಾಣುತ್ತಿವೆ. ಇಂದು ಕನ್ನಡದ 4 ಸಿನಿಮಾಗಳು ತೆರೆ ಮೇಲೆ ಅಪ್ಪಳಿಸಿವೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾವೆಲ್ಲರೂ ಒಂದು ರೀತಿಯ ಕಷ್ಟಕರವಾದ ದಿನದ ಸವಾಲನ್ನು ಹೆದರಿಸಿ ಕೊರೊನಾ ಗೆದ್ದು ಬಂದಿದ್ದೇವೆ. ಇದೀಗ ವ್ಯಾಕ್ಸಿನ್ ಕೂಡ ಬಂದಿದೆ. ಇನ್ನು ಮುಂದೆ ಕನ್ನಡ ಚಿತ್ರರಂಗದ ಹಬ್ಬ ಮತ್ತೆ ಶುರುವಾಗಿದೆ ಅಂತಾನೇ ಹೇಳಬಹುದು. ಸಿನಿಮಾ ವೀಕ್ಷಿಸಲು ಇಷ್ಟೊಂದು ಮಂದಿ ಸೇರಿರುವುದನ್ನು ಕಂಡು ನನಗೆ ಬಹಳ ಖುಷಿಯಾಗುತ್ತಿದೆ. ನಮ್ಮ ಅಭಿಮಾನಿ ದೇವರುಗಳು ಖಂಡಿತವಾಗಿ ಕನ್ನಡ ಸಿನಿಮಾಗಳ ಕೈ ಬಿಡುವುದಿಲ್ಲ ಎಂದು ತಿಳಿದಿದೆ. ಕೇವಲ ನನ್ನ ಸಿನಿಮಾಕ್ಕೆ ಮಾತ್ರವಲ್ಲದೇ ಇತರೆ ನಟರ ಸಿನಿಮಾಗಳಿಗೂ ಹೀಗೆ ಬೆಂಬಲ ನೀಡಿ ಪ್ರೋತ್ಸಹಿಸಿ ಎಂದು ತಿಳಿಸಿದರು.

    ಸಿನಿಮಾ ಕುರಿತಂತೆ ಮಾತನಾಡಿದ ಪ್ರಜ್ವಲ್, ನಮಗೆ ಯಾವಾಗಲಾದರೂ ಬೇಸರವಾದರೆ ನಮ್ಮ ಮೂಡ್ ಬದಲಾಯಿಸಿಕೊಳ್ಳಲು ನಾವು ಮೊದಲು ಹಾಸ್ಯ ಅಥವಾ ಮನರಂಜನೆಯ ಕಡೆಗೆ ವಾಲುತ್ತೇವೆ. ಹಾಗೆಯೇ ಹಾಸ್ಯ ಹಾಗೂ ಮನರಂಜನೆ ಖುಷಿಗೆ ಮೆಡಿಸಿನ್ ‘ಇನ್ಸ್‍ಪೆಕ್ಟರ್ ವಿಕ್ರಮ್’. ಈ ಸಿನಿಮಾವನ್ನು ವೀಕ್ಷಿಸಿದರೆ ನೀವು ಎಲ್ಲಾ ನೋವನ್ನು ಮರೆಯುವುದರ ಜೊತೆಗೆ ಮತ್ತೊಮ್ಮೆ ಈ ಸಿನಿಮಾವನ್ನು ನೋಡಬೇಕು ಎಂದು ಅನಿಸುವಂತಿದೆ ಎಂದು ಹೇಳಿದರು.

    ಸ್ಯಾಂಡಲ್‍ವುಡ್ ಡೈನಾಮಿಕ್ ಪ್ರಿನ್ಸ್ ನಟ ಪ್ರಜ್ವಲ್ ದೇವ್‍ರಾಜ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಇನ್ಸ್ ಪೆಕ್ಟರ್ ವಿಕ್ರಮ್ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಇನ್ನೂ ನಟ ಪ್ರಜ್ವಲ್ ಪತ್ನಿ ಹಾಗೂ ಸಹೋದರನೊಂದಿಗೆ ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿದರು. ಮೊದಲ ದಿನವೇ ಉತ್ತಮ ರೆಸ್ಪಾನ್ಸ್ ಪಡೆಯುತ್ತಿರುವ ಇನ್ಸ್ ಪೆಕ್ಟರ್ ವಿಕ್ರಮ್ ಸಿನಿಮಾದಲ್ಲಿ ಪ್ರಜ್ವಲ್‍ಗೆ ಜೋಡಿಯಾಗಿ ನಟಿ ಭಾವನಾ ನಟಿಸಿದ್ದಾರೆ. ಈ ಚಿತ್ರಕ್ಕೆ ಸಹಾನ ಮೂರ್ತಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾಕ್ಕೆ ಅನೂಪ್ ಸೀಲಿನ್ ಸಂಗೀತ ಸಂಯೋಜಿಸಿದ್ದು, ವಿಕ್ಯಂತ್ ಬಂಡವಾಳ ಹೂಡಿದ್ದಾರೆ.

  • 2ನೇ ವಾರವೂ ‘ಆ್ಯಕ್ಟ್ 1978’ ಚಿತ್ರ ಹೌಸ್‍ಫುಲ್: ಮಂಸೂರೆ ಚಿತ್ರಕ್ಕೆ ಡೈನಾಮಿಕ್ ಪ್ರಿನ್ಸ್, ನಿರಂಜನ್ ದೇಶಪಾಂಡೆ ಫಿದಾ

    2ನೇ ವಾರವೂ ‘ಆ್ಯಕ್ಟ್ 1978’ ಚಿತ್ರ ಹೌಸ್‍ಫುಲ್: ಮಂಸೂರೆ ಚಿತ್ರಕ್ಕೆ ಡೈನಾಮಿಕ್ ಪ್ರಿನ್ಸ್, ನಿರಂಜನ್ ದೇಶಪಾಂಡೆ ಫಿದಾ

    ಸ್ಯಾಂಡಲ್‍ವುಡ್ ಅಂಗಳದಲ್ಲಿ ಕೊರೊನಾ ಲಾಕ್‍ಡೌನ್ ಬಳಿಕ ಹೊಸ ಅಲೆ ಸೃಷ್ಟಿಸಿರುವ ‘ಆ್ಯಕ್ಟ್ 1978’ ಚಿತ್ರ ಪ್ರತಿಯೊಬ್ಬರಿಂದ ಬಹುಪರಾಕ್ ಹೇಳಿಸಿಕೊಳ್ಳುತ್ತ ಮುನ್ನುಗ್ಗುತ್ತಿದೆ. ಪ್ರೇಕ್ಷಕ ಮಹಾಪ್ರಭು ಹಾಗೂ ಸಿನಿ ದಿಗ್ಗಜರಿಂದ ಅಭೂತ ಪೂರ್ವ ಮೆಚ್ಚುಗೆ ಪಡೆದುಕೊಂಡಿರುವ ‘ಆ್ಯಕ್ಟ್ 1978’ ಚಿತ್ರಕ್ಕೆ ಇದೀಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಬಿಗ್ ಬಾಸ್ ಸ್ಪರ್ಧಿ ನಿರಂಜನ್ ದೇಶಪಾಂಡೆ ಫಿದಾ ಆಗಿದ್ದಾರೆ.

    ಎರಡನೇ ವಾರವೂ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿರುವ ‘ಆ್ಯಕ್ಟ್ 1978′ ಚಿತ್ರವನ್ನು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ನಿರೂಪಕ, ಬಿಗ್‍ಬಾಸ್ ಸ್ಪರ್ಧಿ ನಿರಂಜನ್ ದೇಶಪಾಂಡೆ ಕೊಂಡಾಡಿದ್ದಾರೆ. ನಟ ಪ್ರಜ್ವಲ್ ದೇವರಾಜ್ ಮಾತನಾಡಿ ಈ ಚಿತ್ರದ ಬಗ್ಗೆ ಮಾತನಾಡೋದಕ್ಕೆ ನನಗೆ ತುಂಬಾ ಹೆಮ್ಮೆ ಆಗುತ್ತದೆ. ನಿಜ ಜೀವನಕ್ಕೆ ಹತ್ತಿರವಾದ ಈ ಸಿನಿಮಾ ನೋಡಿ ನಾನು ತುಂಬಾ ಭಾವುಕನಾದೆ ಎಂದಿದ್ದಾರೆ. ಇನ್ನು ನಿರಂಜನ್ ದೇಶಪಾಂಡೆ ಮಾತನಾಡಿ, ಕೆಲವು ಸಿನಿಮಾ ಬಗ್ಗೆ ಏನು ಮಾತನಾಡಬೇಕು ಅನ್ನೋದೇ ತಿಳಿಯೋದಿಲ್ಲ. ಸಿನಿಮಾ ನೋಡಿ ಆಚೆ ಬಂದ ಮೇಲೆ ಒಂದು ಕ್ಷಣ ಮೂಕವಿಸ್ಮಿತನಾದೆ. `ಆ್ಯಕ್ಟ್ 1978’ ಸಿನಿಮಾ ಒಂದು ರೆವಲೂಶನ್ ಕ್ರಿಯೇಟ್ ಮಾಡುವ ಚಿತ್ರ ಎಂದು ಪ್ರಶಂಸಿದ್ದಾರೆ. ಜೊತೆಗೆ ನಿರ್ದೇಶನ ಹಾಗೂ ಪಾತ್ರವರ್ಗಗಳ ನಟನೆಯನ್ನು ನಿರಂಜನ್ ದೇಶಪಾಂಡೆ ಕೊಂಡಾಡಿದ್ದಾರೆ.

    ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಂಸೂರೆ ನಿರ್ದೇಶನದ ‘ಆ್ಯಕ್ಟ್ 1978’ ಚಿತ್ರ ನವೆಂಬರ್ 20ರಂದು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ದಿನವೇ ಚಿತ್ರತಂಡದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿನಿರಸಿಕರಿಂದ ಚಿತ್ರಕ್ಕೆ ಸಿಕ್ಕಿತ್ತು. ಎರಡನೇ ವಾರವೂ ಚಿತ್ರ ಜನಭರಿತ ಪ್ರದರ್ಶನವನ್ನು ಕಾಣುತ್ತಿದ್ದು, ಅಭೂತಪೂರ್ವ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಚಿತ್ರದ ಬಗ್ಗೆ ಕೇಳಿ ಬರುತ್ತಿದ್ದ ಮಾತುಗಳಿಂದ ಪ್ರಭಾವಿತರಾಗಿ ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್, ಶ್ರೀಮುರಳಿ, ಖ್ಯಾತ ಹಾಗೂ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ನಟಿ ಆಶಿಕಾ ರಂಗನಾಥ್ ಸೇರಿದಂತೆ ಚಿತ್ರರಂಗದ ಖ್ಯಾತನಾಮರು ಹಾಗೂ ರಾಜಕೀಯ ನಾಯಕರು ಸಿನಿಮಾ ನೋಡಿ ಇಡೀ ಚಿತ್ರತಂಡಕ್ಕೆ ಶಹಬ್ಬಾಸ್ ಹೇಳಿ ‘ಆಕ್ಟ್ 1978’ ಚಿತ್ರದ ಯಶಸ್ಸಿನ ಪಯಣಕ್ಕೆ ಸಾಥ್ ನೀಡಿದ್ದರು.

    ದೇವರಾಜ್. ಆರ್ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಆ್ಯಕ್ಟ್ 1978’ ಚಿತ್ರದಲ್ಲಿ ಯಜ್ಞಾ ಶೆಟ್ಟಿ, ದತ್ತಣ್ಣ, ಅಚ್ಯುತ್ ಕುಮಾರ್, ಸಂಚಾರಿ ವಿಜಯ್, ಶ್ರುತಿ, ಸುಧಾ ಬೆಳವಾಡಿ ಸೇರಿದಂತೆ ಸ್ಟಾರ್ ಕಲಾವಿದರು ನಟಿಸಿದ್ದಾರೆ. ಕೊರೊನಾ ಭೀತಿ ನಡುವೆಯೂ ಜನ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡಿ ಪ್ರೀತಿ ತೋರಿಸುತ್ತಿರುವುದಕ್ಕೆ ಚಿತ್ರತಂಡ ದಿಲ್‍ಖುಷ್ ಆಗಿದೆ.