Tag: prajakeeya

  • ಸಿನಿಮಾ ಮೂಲಕ ಪತಿಯ ಪ್ರಜಾಕೀಯಕ್ಕೆ ಸಾಥ್ ನೀಡಿದ ಪ್ರಿಯಾಂಕ ಉಪೇಂದ್ರ

    ಸಿನಿಮಾ ಮೂಲಕ ಪತಿಯ ಪ್ರಜಾಕೀಯಕ್ಕೆ ಸಾಥ್ ನೀಡಿದ ಪ್ರಿಯಾಂಕ ಉಪೇಂದ್ರ

    ಸ್ಯಾಂಡಲ್‌ವುಡ್ (Sandalwood) ನಟಿ ಪ್ರಿಯಾಂಕಾ ಉಪೇಂದ್ರ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್‌ಗೆ ರೆಡಿಯಿದೆ. ಈ ಬೆನ್ನಲ್ಲೇ `ಪ್ರಜೆಯೇ ಪ್ರಭು’ (Prajeye Prabhu) ಎಂಬ ಚಿತ್ರದ ಮೂಲಕ ನಟಿ ಸದ್ದು ಮಾಡ್ತಿದ್ದಾರೆ. ರಾಜಕಾರಣಿಯಾಗಿ (Politician) ಪ್ರಿಯಾಂಕಾ ತೆರೆಯ ಮೇಲೆ ಮಿಂಚಲಿದ್ದಾರೆ.

    ರಿಯಲ್ ಸ್ಟಾರ್ ಉಪೇಂದ್ರ (Upendra) ಪ್ರಜಾಕೀಯದ ಮೂಲಕ ಹಲವು ವಿಚಾರಗಳನ್ನು ಹೇಳಲು ಹೊರಟಿದ್ದಾರೆ. ಇದೀಗ ಈ ವಿಚಾರವನ್ನು ತೆರೆಯ ಮೇಲೆ ಉಪ್ಪಿ ಪ್ರಜಾಕೀಯದ ಐಡಿಯಾವನ್ನು ತೋರಿಸಲು ಪ್ರಿಯಾಂಕಾ ಹೊರಟಿದ್ದಾರೆ. ಸಾಯಿಲಕ್ಷಣ್ ಅವರು ಈ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇವರ ಶ್ರಮಕ್ಕೆ ಸೌಭಾಗ್ಯ ಸಿನಿಮಾಸ್ ಅಡಿಯಲ್ಲಿ ಮೂವರು ಉದ್ಯಮಿ ಗೆಳೆಯರು ಸೇರಿಕೊಂಡು ಬಂಡವಾಳ ಹೂಡುತ್ತಿದ್ದಾರೆ. ಇದನ್ನೂ ಓದಿ: ಸಾನ್ಯ ನೆನಪಲ್ಲಿ ಬಿಟ್ಟೋಗ್ಬೇಡ ಎಂದು ಭಾವುಕರಾದ ರೂಪೇಶ್ ಶೆಟ್ಟಿ

    ರಾಜಕೀಯ ಹಿನ್ನಲೆಯುಳ್ಳ ಮಹಿಳಾ ಪ್ರಧಾನ ಕಥೆಯನ್ನು ಹೊಂದಿದ್ದು, ಪ್ರಜೆಯೇ ಪ್ರಭುಗಳು ಎಂಬ ಅಡಿಬರಹ ಇರಲಿದೆ. ಭಾರತವನ್ನು ಅಭಿವೃದ್ದಿ ಪಥಕ್ಕೆ ತೆಗೆದುಕೊಂಡು ಹೋಗಬೇಕೆನ್ನುವ ಪ್ರಿಯಾಂಕ ಮಾನವ ಜೀವ ಒಂದೇ ಅಲ್ಲ, ಸರ್ವ ಜೀವಿಗಳು ಸುಖವಾಗಿರಲು ಎಂದೇ ಇವಳ ಅಭಿಲಾಷೆಯಾಗಿರುತ್ತದೆ. ಹಾಗೆಯೇ ಜನರು ನಿಸ್ವಾರ್ಥದಿಂದ ಉನ್ನತ ಹುದ್ದೆಗೆ ಜನಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾರೆ. ಅವರು ಅದರ ಪರಿಮಿತಿಯಲ್ಲಿ ಸ್ಥಾರ್ಥವನ್ನು ಬಯಸದೆ ಕೆಲಸ ಮಾಡಬೇಕು. ಆಸೆಗಳಿಗೆ ಬಲಿಯಾಗಬಾರದು ಎಂಬುದನ್ನ ಹೇಳಲು ಹೊರಟಿದ್ದಾರೆ. ಈ ಮೂಲಕ ಉಪೇಂದ್ರ ಅವರ ಪ್ರಜಾಕೀಯದ (Prajakeeya) ವಿಚಾರವನ್ನೇ ತೆರೆಯ ಮೇಲೆ ಬಿತ್ತರಿಸಲಿದ್ದಾರೆ.

    ಎಂದೂ ಕಾಣಿಸಿಕೊಂಡಿರದ ರಾಜಕಾರಣಿಯ ಪಾತ್ರದಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಜನವರಿ ಕೊನೆಯ ವಾರದಂದು ʻಪ್ರಜೆಯೇ ಪ್ರಭುʼ ಸಿನಿಮಾಗೆ ಚಾಲನೆ ಸಿಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಮಾನ್ಯ ಮುಖ್ಯಮಂತ್ರಿಗಳಲ್ಲಿ ಉಪೇಂದ್ರ ಮನವಿ-ಎರಡರಲ್ಲಿ ಯಾವುದಾದ್ರೂ ಒಂದು ಮಾಡಿ

    ಮಾನ್ಯ ಮುಖ್ಯಮಂತ್ರಿಗಳಲ್ಲಿ ಉಪೇಂದ್ರ ಮನವಿ-ಎರಡರಲ್ಲಿ ಯಾವುದಾದ್ರೂ ಒಂದು ಮಾಡಿ

    ಬೆಂಗಳೂರು: ಕೊರೊನಾ ತಡೆಗಾಗಿ ಸರ್ಕಾರ ಲಾಕ್‍ಡೌನ್ ಘೋಷಿಸಿದ್ರೂ ಜನರು ಮನೆಯಿಂದ ಹೊರಗೆ ಬರೋದನ್ನು ನಿಲ್ಲಿಸಿಲ್ಲ. ಇತ್ತ ಸಿಎಂ ಯಡಿಯೂರಪ್ಪನವರು ಸಹ ಲಾಕ್‍ಡೌನ್ ಸರಿಯಾಗಿ ಪಾಲನೆ ಆಗ್ತಿಲ್ಲ ಎಂದು ಬಹಿರಂಗವಾಗಿ ಬೇಸರ ಹೊರ ಹಾಕಿದ್ದಾರೆ. ಇದೀಗ ಪ್ರಜಾಕೀಯದ ಪ್ರಜಾಕಾರಿಣಿ ಉಪೇಂದ್ರ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.

    1. ಶೇಕಡ ನೂರಕ್ಕೆ ನೂರು ಲಾಕ್‍ಡೌನ್: ಸಂಪೂರ್ಣ ಸರ್ಕಾರಿ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದ ಯೋಜನೆ ಬಳಸಿಕೊಂಡು ಅಗತ್ಯ ವಸ್ತುಗಳನ್ನು ಮನೆಮನೆಗೆ ತಲುಪಿಸಿ
    * ಹಾಲು, ತರಕಾರಿ, ಧಾನ್ಯಗಳನ್ನು ಒಂದು ಜಾಗದಲ್ಲಿ ಕೊಳ್ಳಲು ಬಿಟ್ಟರೆ ಜನ ಸೇರುತ್ತಾರೆ.
    * ಬೇಕರಿ, ದಿನಸಿ ಮತ್ತು ಅಗತ್ಯ ವಸ್ತುಗಳಿಗಾಗಿ ಸಂತೆ, ಅಂಗಡಿ ತೆರೆದರೆ ಅಲ್ಲೂ ಜನ ಸೇರುತ್ತಾರೆ.

    2. ಜನರಿಗೆ ಜವಾಬ್ದಾರಿ ಕೊಟ್ಟು ಸಂಪೂರ್ಣವಾಗಿ ಲಾಕ್‍ಡೌನ್ ತೆರೆಯಿರಿ: ಅಂದರೆ ಅವರವರೇ ಜವಾಬ್ದಾರಿ ತೆಗೆದುಕೊಂಡು ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಅವರವರ ವ್ಯವಹಾರಗಳನ್ನು ಮುಂದುವರಿಸುವುದು. ಜನರನ್ನು ಜನರು ಎಷ್ಟೇ ಮೂರ್ಖರು ಅಂದುಕೊಂಡರು (ಹೀಗೆ ನಾಯಕರಯ ಮಾಡಿಬಿಟ್ಟಿದ್ದಾರೆ) ಅವರವರ ಪ್ರಾಣಕ್ಕೆ ಅವರ ಮಕ್ಕಳ ಪ್ರಾಣಕ್ಕೆ ಬೆಲೆ ಕೊಟ್ಟೇ ಕೊಡುತ್ತಾರೆ ಎಂಬ ನಂಬಿಕೆಯಿಂದ ಹೇಳುತ್ತಿದ್ದೇನೆ.
    * ಲಾಕ್‍ಡೌನ್ ಮಾಡಿ ಜನರನ್ನು ಹಾಲು, ರೇಷನ್ ಖರೀದಿಸುವುದಕ್ಕೆ ಬಿಟ್ಟು ಜನ ಗುಂಪು ಸೇರಿದಾಗ ಜನರನ್ನು ಬೈಯ್ಯುವುದು ಎಷ್ಟು ಸರಿ?

    https://twitter.com/nimmaupendra/status/1248179331072790528

    ಇಷ್ಟೆಲ್ಲಾ ಲಾಕ್‍ಡೌನ್ ಮಾಡಿಯೇ ನಮ್ಮ ದಡ್ಡ ಜನರು ಹೀಗೆ. ಇನ್ನು ಲಾಕ್‍ಡೌನ್ ತೆಗೆದ್ರೆ ರೋಡ್ ರೋಡಲ್ಲಿ ಹೆಣ ಬೀಳುತ್ತೆ ಅಂತ ಹೇಳುವವರಿಗೆ (ಹೆದರುವವರಿಗೆ) ಒಂದು ಕಿವಿ ಮಾತು. ಹೀಗೆ ಲಾಕ್‍ಡೌನ್ ಮುಂದುವರಿಸಿದ್ರೂ ಅದೇ ಪರಿಸ್ಥಿತಿ ಬರಬಹುದು ಯೋಚನೆ ಮಾಡಿ.
    ಮಲಗಿದ್ರೆ-ಸಾವು | ಕೂತಿದ್ರೆ – ರೋಗ | ನಡೀತಿದ್ರೆ ಜೀವನ

    ಎರಡು ಸಲಹೆಗಳನ್ನ ನೀಡಿರುವ ರಿಯಲ್ ಸ್ಟಾರ್ ಉಪೇಂದ್ರ ಟ್ವೀಟ್ ನ್ನು ಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಿದ್ದಾರೆ.

  • ಭ್ರಷ್ಟಾಚಾರ ತಡೆಯಲು ಇರೋದು ಒಂದೇ ಮಾರ್ಗ: ಉಪೇಂದ್ರ ಹೇಳ್ತಾರೆ ಓದಿ

    ಭ್ರಷ್ಟಾಚಾರ ತಡೆಯಲು ಇರೋದು ಒಂದೇ ಮಾರ್ಗ: ಉಪೇಂದ್ರ ಹೇಳ್ತಾರೆ ಓದಿ

    ಬೆಂಗಳೂರು: ಸ್ಯಾಂಡಲ್‍ವುಡ್ ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ ನೀಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ. ತಮ್ಮದೇ ಸ್ವಂತ ಪಕ್ಷ ಕಟ್ಟಿಕೊಂಡಿರುವ ಉಪೇಂದ್ರ ಉತ್ತಮ ಆಡಳಿತ ನಡೆಸುವುದು ಹೇಗೆ ಎಂಬುದನ್ನು ಟ್ವಿಟ್ಟರ್‍ನಲ್ಲಿ ಬರೆದುಕೊಳ್ಳುತ್ತಿದ್ದಾರೆ.

    ಭಾನುವಾರ ಭ್ರಷ್ಟಾಚಾರ ಎಲ್ಲೆಡೆ ಹಬ್ಬಿಕೊಂಡಿದ್ದು, ಅದನ್ನು ನಿವಾರಿಸಬೇಕು ಎಂಬುದರ ಬಗ್ಗೆ ಕೆಲವು ಸಾಲುಗಳುಳ್ಳ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ ಪೌರ ಕಾರ್ಮಿಕರಿಂದ ಹಿಡಿದು ಮಂತ್ರಿಮಂಡಲದವರಗೂ ಹಬ್ಬಿರುವುದನ್ನು ತಡೆಯಲು ಒಂದೇ ಮಾರ್ಗ- ಅದುವೇ ಸಂಪೂರ್ಣ ಪಾರದರ್ಶಕತೆ ಅಂತಾ ಶೀರ್ಷಿಕೆ ಹಾಕಿ ಬರೆದಿದ್ದಾರೆ.

    ಸಂಪೂರ್ಣ ಪಾರದರ್ಶಕತೆ ಹೇಗೆ?:
    ತಂತ್ರಜ್ಞಾನದ ಬಳಕೆಯಿಂದ ದೃಶ್ಯ ಮಾಧ್ಯಮಗಳ ಮೂಲಕ (ಲೈವ್ ಟಿವಿ, ಮೊಬೈಲ್ ನೋಟಿಫಿಕೇಶನ್, ಫೇಸ್‍ಬುಕ್, ಟ್ವಿಟ್ಟರ್ ಇತರೆ ಸಾಮಾಜಿಕ ಜಾಲತಾಣಗಳು ಹಾಗು ಸಿಸಿಟಿವಿ ಇತ್ಯಾದಿಗಳ ಮೂಲಕ) ಪ್ರಜೆಗಳ ತೆರಿಗೆ ಹಣದ ಉಪಯೋಗ ಎಲ್ಲಿ, ಯಾರಿಗೆ, ಯಾವಾಗ, ಎಷ್ಟು ಆಗುತ್ತಿದೆ ಮತ್ತು ಅವುಗಳ ಜವಾಬ್ದಾರಿಯನ್ನು ಯಾರು ಹೊರುತ್ತಾರೆ ಎಂಬ ಸಂಪೂರ್ಣ ವಿವರಗಳನ್ನು ತೆರೆದಿಡಬೇಕು. ಎಲ್ಲ ವಿವರಗಳನ್ನು ಗ್ರಾಮ, ವಾರ್ಡ್, ತಾಲೂಕು, ಜಿಲ್ಲೆಗಳ ಪ್ರಕಾರ ಸಾರ್ವಜನಿಕವಾಗಿ ತೆರೆದಿಟ್ಟಾಗ ಭ್ರಷ್ಟಾಚಾರ ಕಡಿಮೆಯಾಗಿವುದರ ಜೊತೆಗೆ ಪ್ರಜೆಗಳು ಅನಿಸಿಕೆ, ತಿದ್ದುವಿಕೆ ಹಾಗು ಶ್ಲಾಘನೆ ಮಾಡುವುದರ ಮೂಲಕ ಆಡಳಿತದಲ್ಲಿ ಭಾಗವಹಿಸಿದಾಗ ನಿಜವಾದ ಪ್ರಜಾಪ್ರಭುತ್ವದ ಅರ್ಥ ಸಿಗುತ್ತದೆ. ಅಲ್ಲದೇ ಇದನ್ನು ಮಾಡಿದ್ದಲ್ಲಿ ನಮ್ಮ ರಾಜ್ಯದ ಚಿತ್ರಣವೇ ಸುಂದರವಾಗಿ ಬದಲಾಗುತ್ತದೆ ಎಂದು ಉಪೇಂದ್ರ ಬರೆದುಕೊಂಡಿದ್ದಾರೆ.

    ಒಟ್ಟಿನಲ್ಲಿ ಕಾರಣಾಂತರಗಳಿಂದ ವಿಧಾನಸಭಾ ಚುನಾವಣೆಯಿಂದ ದೂರ ಉಳಿದಿದ್ದ ಉಪೇಂದ್ರ 2019ರ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಇದೂವರೆಗೂ ಉಪೇಂದ್ರ ಮಾತ್ರ ಲೋಕಸಭಾ ಚುನಾವಣೆಯ ಸ್ಪರ್ಧೆಯ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದ್ರೆ ತಮ್ಮಲ್ಲಿರುವ ಐಡಿಯಾಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

  • ಮಳೆ ಸಂಕಷ್ಟಕ್ಕೆ ಬ್ರೇಕ್ ಹಾಕಲು ನಟ ಉಪೇಂದ್ರ ಮಾಸ್ಟರ್ ಪ್ಲಾನ್

    ಮಳೆ ಸಂಕಷ್ಟಕ್ಕೆ ಬ್ರೇಕ್ ಹಾಕಲು ನಟ ಉಪೇಂದ್ರ ಮಾಸ್ಟರ್ ಪ್ಲಾನ್

    ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯದ ಮೂಲಕ ರಿಯಲ್ ರಾಜಕಾರಣ ಶುರು ಮಾಡಿದ್ದಾರೆ. ಈಗಾಗಲೇ ಉಪೇಂದ್ರ ಅಭಿವೃದ್ಧಿಯ ಕುರಿತ ಹಲವು ವಿಚಾರಗಳನ್ನ ಚರ್ಚೆ ಮಾಡೋದ್ರಲ್ಲಿ ಬ್ಯೂಸಿಯಾಗಿದ್ದಾರೆ. ಕರ್ನಾಟಕದಲ್ಲಾಗ್ತಿರೋ ಸಮಸ್ಯೆಗಳನ್ನ ಬಗೆಹರಿಸೋ ಕುರಿತು ಈಗಾಗಲೇ ಒಂದಲ್ಲ ಒಂದು ಐಡಿಯಾ ಮಾಡ್ತಿದ್ದಾರೆ.

    ಇತ್ತೀಚೆಗಷ್ಟೇ ಅಮೆರಿಕದ ಎನ್‍ಆರ್‍ಐ ಒಬ್ಬರು ಮಳೆಯಿಂದಾಗೋ ಸಮಸ್ಯೆಯನ್ನ ಬಗೆಹರಿಸೋದು ಹೇಗೆ? ಇಲ್ಲಿ ಆಗ್ತಿರೋ ತೊಂದರೆಗಳನ್ನ ಬಗೆಹರಿಸೋದು ಹೇಗೆ ಅನ್ನೋ ನಿಟ್ಟಿನಲ್ಲಿ ಹಲವು ಪ್ಲಾನ್ ಮಾಡಿ ಉಪ್ಪಿ ಮುಂದಿಟ್ಟಿದ್ದಾರೆ. ಈ ಮೂಲಕ ಮಳೆ ನೀರಿನಿಂದಾಗ್ತಿರೋ ಸಮಸ್ಯೆ ಬಗೆಹರಿಸೋ ಪ್ಲಾನ್ ಮಾಡ್ತಿದ್ದಾರೆ. ಈ ಸಂತಸದ ವಿಷಯವನ್ನ ಉಪೇಂದ್ರ ಫೇಸ್‍ಬುಕ್‍ನಲ್ಲಿ ಲೈವ್ ಬರೋ ಮೂಲಕ ಅದನ್ನ ಬಹಿರಂಗಪಡಿಸಿದ್ದಾರೆ. ಇದ್ರಲ್ಲಿ ಎನ್‍ಆರ್‍ಐ ಜೊತೆ ಉಪ್ಪಿ ಮಾಡಿರೋ ಚರ್ಚೆ ಇದೆ.

    ಮಳೆ ಸಮಸ್ಯೆ ಬಗ್ಗೆ ಎನ್‍ಆರ್‍ಐ ಸೌರಭ್ ಬಾಬು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದು, ನಟ ಉಪೇಂದ್ರ ಜೊತೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಮೆರಿಕದ ಒಳಚರಂಡಿ ವ್ಯವಸ್ಥೆಯನ್ನ ಕಡಿಮೆ ವೆಚ್ಚದಲ್ಲಿ ಬೆಂಗಳೂರಲ್ಲೂ ನಿರ್ಮಿಸಬಹುದು. ಸಾವಿರಾರು ಕೋಟಿ ಹಣ ಬೇಡ. ಬರೀ 50% ಹಣ ಹಾಕಿದ್ರೆ ಸಾಕು ಸಮಸ್ಯೆಗೆ ಮುಕ್ತಿ ಸಿಗುತ್ತೆ ಅಂತ ಹೇಳಿದ್ದಾರೆ.

    ಸಮಸ್ಯೆ ಏನು?: ನಮ್ಮಲ್ಲಿ ರಸ್ತೆ ಪಕ್ಕ ಡ್ರೈನೇಜ್ ಮಾಡಿರ್ತಾರೆ. ಪ್ರತಿ ಹನಿ ಬಿದ್ರೂ ನೀರು ಡ್ರೈನೇಜ್‍ಗೆ ಹೋಗಬೇಕು. ಆಗ ರಸ್ತೆ ಸುರಕ್ಷಿತವಗಿರುತ್ತೆ. ಟಾರ್ ರಸ್ತೆ ಮೇಲೆ ನೀರು ಬಿದ್ರೆ ಹಾಳಾಗುತ್ತೆ. ಆದ್ರೆ ನಮ್ಮಲ್ಲಿ ರಸ್ತೆಯಿಂದ ನೀರು ಹೋಗೋದಕ್ಕೆ ಆಗದಂತೆ ಮೋರಿ ನಿರ್ಮಾಣವಾಗಿರುತ್ತೆ. ಚರಂಡಿ ವ್ಯವಸ್ಥೆಯಲ್ಲೇ ಸಮಸ್ಯೆಯಿದೆ ಅಂತ ಬೆಂಗಳೂರಿನ ಚರಂಡಿಗಳ ಚಿತ್ರಗಳನ್ನ ತೋರಿಸಿ ವಿವರಿಸಿದ್ದಾರೆ.

    ಪರಿಹಾರ ಏನು?: ಅಮೆರಿಕದಲ್ಲಿ ಪೈಪ್ ಡ್ರೈನೇಜ್ ಸಿಸ್ಟಮ್ ಇದೆ. ರಸ್ತೆಯಿಂದ ನೀರು ಚೇಂಬರ್‍ಗೆ ಹೋದ ನಂತರ ಅದು ಪೈಪ್ ಮೂಲಕ ಹೋಗುತ್ತದೆ. ಅದನ್ನ ಗಿಡ ಬೆಳೆಸಲು ಬಳಸಿಕೊಳ್ಳಬಹುದು ಅಂತ ಅಮೆರಿಕದ ಚರಂಡಿ ವ್ಯವಸ್ಥೆಯ ಬಗ್ಗೆ ಚಿತ್ರಗಳ ಮೂಲಕ ಸೌರಭ್ ವಿವರಿಸಿದ್ದಾರೆ.

    ಸಂಪೂರ್ಣ ವಿಡಿಯೋ ಇಲ್ಲಿದೆ ನೋಡಿ: 

    https://www.facebook.com/nimmaupendra/videos/1737351199894111/