Tag: praise

  • ನಮ್ಮ ಅಭ್ಯರ್ಥಿ ಕೆಲಸ ಮಾಡಿಲ್ಲ, ಶ್ರೀನಿವಾಸ ಮಾನೆ ಉತ್ತಮ ಕೆಲಸ ಮಾಡಿದಕ್ಕೆ ಗೆದ್ದಿದ್ದಾರೆ: ಈಶ್ವರಪ್ಪ

    ನಮ್ಮ ಅಭ್ಯರ್ಥಿ ಕೆಲಸ ಮಾಡಿಲ್ಲ, ಶ್ರೀನಿವಾಸ ಮಾನೆ ಉತ್ತಮ ಕೆಲಸ ಮಾಡಿದಕ್ಕೆ ಗೆದ್ದಿದ್ದಾರೆ: ಈಶ್ವರಪ್ಪ

    ದಾವಣಗೆರೆ: ಶ್ರೀನಿವಾಸ ಮಾನೆ ಉತ್ತಮ ಕೆಲಸ ಮಾಡಿದಕ್ಕೆ ಹಾನಗಲ್‍ನಲ್ಲಿ ಗೆದ್ದಿದ್ದಾರೆ, ನಮ್ಮ ಅಭ್ಯರ್ಥಿ ಕೆಲಸ ಮಾಡಿಲ್ಲ, ಅದಕ್ಕೆ ಸೋತಿದ್ದಾರೆ ಎಂದು ದಾವಣಗೆರೆಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಹಾನಗಲ್ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಡಿ ಹೊಗಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನೆ ಎರಡ್ಮೂರು ವರ್ಷದಿಂದ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ, ಸಿದ್ದರಾಮಯ್ಯ, ಇಂದಿರಾಗಾಂಧಿ ಸೋತಿರಲಿಲ್ವಾ, ಹಾನಗಲ್‍ನಲ್ಲಿ ನಾವು ಸೋತಿದ್ದೇವೆ, ಸಿಂದಗಿಯಲ್ಲಿ ದಿಗ್ವಿಜಯ ಸಾಧಿಸಿದ್ದೇವೆ, ಎಲ್ಲ ಚುನಾವಣೆಯಲ್ಲೂ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಹಾನಗಲ್‍ನಲ್ಲಿ 7 ಸಾವಿರ ಮತಗಳಿಂದ ಸೋತಿದ್ದೇವೆ, ಆದರೆ ಸಿಂದಗಿಯಲ್ಲಿ 31 ಸಾವಿರ ಮತಗಳಿಂದ ಐತಿಹಾಸಿಕ ಗೆಲುವು ಸಾಧಿಸಿದ್ದೇವೆ. ಹಾನಗಲ್ ಸೋಲಿನ ಬಗ್ಗೆ ಪರಾಮರ್ಶೆ ನಡೆಸುತ್ತೇವೆ, ಸೋಲನ್ನಾಗಲಿ, ಗೆಲುವನ್ನಾಗಲಿ ಯಾವುದೇ ಒಬ್ಬರ ಮೇಲೆ ಹಾಕುವುದಿಲ್ಲ, ಭವಿಷ್ಯದ ಚುನಾವಣೆಯಲ್ಲಿ ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ ಎಂದರು. ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ಉಪಚುನಾವಣೆ ಫಲಿತಾಂಶ ಭವಿಷ್ಯದ ಚುನಾವಣೆಗೆ ದಿಕ್ಸೂಚಿ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‍ಗೆ ಸದಾ ಸಿಎಂ ಕುರ್ಚಿ ಮೇಲೆ ಕಣ್ಣು. ಇದೇ ಚಿಂತೆಯಲ್ಲಿ ಅವರಿಗೆ ಹಗಲುರಾತ್ರಿ ನಿದ್ರೆ ಇಲ್ಲ, ಕನಸಲ್ಲಿ ಮಾತ್ರ ಸಿಎಂ ಸ್ಥಾನ ಇಟ್ಟುಕೊಳ್ಳಲಿ, ಹೊರಗೆ ಬಂದರೆ ಪರಸ್ಪರ ಕಿತ್ತಾಡುತ್ತಾರೆ. ಭವಿಷ್ಯದಲ್ಲಿ ಅವರ ಗುಂಪುಗಾರಿಕೆ ಯಾವ ಮಟ್ಟಕ್ಕೆ ಹೋಗಿತ್ತೆ ಅಂತ ಕಾದು ನೋಡಿ ಎಂದರು. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

    ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ 2023ರ ಚುನಾವಣೆ ನಡೆಯುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ, ಇದನ್ನು ಕೇಂದ್ರದ ನಾಯಕರೇ ಸ್ಪಷ್ಟಪಡಿಸಿದ್ದಾರೆ, ಅವರಿಗಿಂತ ದೊಡ್ಡವನು ನಾನಲ್ಲ ಎಂದರು. ಅಲ್ಲದೆ ಉಪಚುನಾವಣೆ ಫಲಿತಾಂಶ ಭವಿಷ್ಯದ ಚುನಾವಣೆಗೆ ದಿಕ್ಸೂಚಿ ಅಲ್ಲ, ಹಾನಗಲ್ ಫಲಿತಾಂಶವನ್ನು ಕಾಂಗ್ರೆಸ್ ದಿಕ್ಸೂಚಿ ಎಂದು ಪರಿಗಣಿಸಿದ್ರೆ, ಸಿಂದಗಿ ಫಲಿತಾಂಶವನ್ನು ಹೇಗೆ ಪರಿಗಣಿಸಬೇಕು, ಉಪಚುನಾವಣೆ ಫಲಿತಾಂಶ ಭವಿಷ್ಯದ ಚುನಾವಣೆ ದಿಕ್ಸೂಚಿ ಅಲ್ಲ ಎಂದು ಸಚಿವ ಈಶ್ವರಪ್ಪ ಕಾಂಗ್ರೆಸ್ ನಾಯಕರಿಗೆ ಟಾಂಗ್ ನಿಡೀದರು. ಇದನ್ನೂ ಓದಿ:  ಅಪ್ಪು ಕೊನೆ ಕ್ಷಣದ ವಿಡಿಯೋ ಲಭ್ಯ