Tag: prahalad joshi

  • ಹರ್ಷಿಕಾ ಹಲ್ಲೆ ಪ್ರಕರಣ- ಪ್ರಹ್ಲಾದ್ ಜೋಶಿ ನಿವಾಸಕ್ಕೆ ಭುವನ್ ದಂಪತಿ ಭೇಟಿ

    ಹರ್ಷಿಕಾ ಹಲ್ಲೆ ಪ್ರಕರಣ- ಪ್ರಹ್ಲಾದ್ ಜೋಶಿ ನಿವಾಸಕ್ಕೆ ಭುವನ್ ದಂಪತಿ ಭೇಟಿ

    ಹುಬ್ಬಳ್ಳಿ: ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ (Harshika Poonacha) ದಂಪತಿ ಇಂದು (ಏ.24) ಸಚಿವ ಪ್ರಹ್ಲಾದ್ ಜೋಶಿ (Prahalad Joshi) ನಿವಾಸಕ್ಕೆ ಭೇಟಿಯಾಗಿದ್ದಾರೆ. ಎಲೆಕ್ಷನ್ ಮುಗಿದ ನಂತರ ಹರ್ಷಿಕಾ ದಂಪತಿ ಮೇಲಿನ ಹಲ್ಲೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹರ್ಷಿಕಾ ತಿಳಿಸಿದ್ದಾರೆ.

    ಪ್ರಹ್ಲಾದ್ ಜೋಶಿರನ್ನು ಭೇಟಿಯಾಗಿ ತಮ್ಮ ಮೇಲಿನ ಹಲ್ಲೆ ಬಗ್ಗೆ ವಿವರಿಸಿದ್ದಾರೆ. ದೌರ್ಜನ್ಯದ ವಿಚಾರ ತಿಳಿದ್ಮೇಲೆ ಸಚಿವ ಪ್ರಹ್ಲಾದ್ ಜೋಶಿ ಕಾನೂನು ಕ್ರಮ ಜರುಗಿಸೋದಾಗಿ ದಂಪತಿಗೆ ಭರವಸೆ ನೀಡಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ. ಭೇಟಿಯ ಬಳಿಕ ಬಗ್ಗೆ ಹರ್ಷಿಕಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ನೇಹಾ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಲು ಹುಬ್ಬಳ್ಳಿಗೆ ಬಂದಿದ್ದೇವೆ ಎಂದು ಹರ್ಷಿಕಾ ಮಾತನಾಡಿದ್ದಾರೆ. ನಮಗೆ ಆದ ತೊಂದರೆಗೆ ಪ್ರಹ್ಲಾದ್ ಜೋಶಿಯವರು ಸ್ಪಂಧಿಸಿದ್ದರು. ಇಲ್ಲಿ ಬರುವ ಮುಂಚೆಯೇ ತಮ್ಮ ಮೇಲಿನ ಹಲ್ಲೆ ಬಗ್ಗೆ ಪ್ರಹ್ಲಾದ್ ಜೋಶಿಯವರು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಅವರಿಗೆ ಧನ್ಯವಾದ ತಿಳಿಸಲು ಮನೆಗೆ ಬಂದಿದ್ದೇವೆ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಕಾಂಗ್ರೆಸ್ ಪರ ತಮ್ಮ ವಿಡಿಯೋ ದುರ್ಬಳಕೆ: ಗರಂ ಆದ ಅಲ್ಲು ಅರ್ಜುನ್

    ನಮ್ಮ ಕುಟುಂಬ ಯಾರ ತಂಟೆಗೂ ಹೋಗದೆ ನಮ್ಮ ಪಾಡಿಗೆ ನಾವಿದ್ದೇವೆ. ಬೆಂಗಳೂರಿನ ರೆಸ್ಟೋರೆಂಟ್‌ಗೆ ಹೋದಾಗ ಕೆಲವರು ತೊಂದರೆ ಮಾಡಿದ್ದಾರೆ. ಕನ್ನಡ ಮಾತಾಡಿದ್ದಕ್ಕೆ ನಮ್ಮ ಜೊತೆ ಜಗಳ ತೆಗೆದಿದ್ದಾರೆ. ನಮ್ಮ ರಾಜ್ಯದಲ್ಲಿ ನಾವು ಕನ್ನಡ ಮಾತನಾಡಿದ್ದೇ ತಪ್ಪಾ ಎಂದು ನಟಿ ಪ್ರಶ್ನಿಸಿದ್ದಾರೆ. ಅಂದು ಸಾಕಷ್ಟು ಜನರು ಜಮಾಯಿಸಿ ದೌರ್ಜನ್ಯ ಮಾಡಿದ್ದರು. ಕತ್ತಲ್ಲಿದ್ದ ಚೈನ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಸೆಲೆಬ್ರಿಟಿಗಳಿಗೆ ಹೀಗಾದರೆ ಜನಸಾಮಾನ್ಯರ ಸ್ಥಿತಿಯೇನು ಎಂದ ಹರ್ಷಿಕಾ ಬೇಸರ ಹೊರಹಾಕಿದ್ದಾರೆ.

    ಈ ವೇಳೆ, ಭುವನ್ ಪೊನ್ನಣ್ಣ ಪ್ರತಿಕ್ರಿಯಿಸಿ, ಜೋಶಿ ಸರ್‌ಗೆ ಭೇಟಿಯಾಗಿ ನಮಗಾದ ತೊಂದರೆ ಬಗ್ಗೆ ಹೇಳಿದ್ದೇವೆ. ಎಲೆಕ್ಷನ್ ಆದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಜೋಶಿ ಸರ್ ಭೇಟಿಯಾಗಿ ನಮಗೆ ಧೈರ್ಯ ಬಂದಿದೆ. ಬೆಂಗಳೂರು ಪೊಲೀಸರು ಸಮರ್ಪಕ ತನಿಖೆ ಮಾಡುತ್ತಿದ್ದಾರೆ. ಆರೋಪಿಗಳನ್ನು ಗುರುತಿಸಿದ್ದು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಪ್ರಕರಣಕ್ಕೆ ಪೊಲೀಸರು ಸಾಕಷ್ಟು ಬೆಂಬಲ ನೀಡಿದ್ದಾರೆ ಎಂದು ಮಾತನಾಡಿದ್ದಾರೆ.

  • ನಾಳೆ ಸಂಜೆಯೊಳಗೆ ಕ್ಯಾಬಿನೆಟ್ ಪಟ್ಟಿ ಪ್ರಕಟ: ಬೊಮ್ಮಾಯಿ

    ನಾಳೆ ಸಂಜೆಯೊಳಗೆ ಕ್ಯಾಬಿನೆಟ್ ಪಟ್ಟಿ ಪ್ರಕಟ: ಬೊಮ್ಮಾಯಿ

    ನವದೆಹಲಿ: ನಾಳೆ ಸಂಜೆಯೊಳಗೆ ಸಚಿವ ಸಂಪುಟ ಸೇರುವವರ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ. ಸಂಪುಟ ರಚನೆ ಕುರಿತು ಚರ್ಚೆ ಮಾಡಿದ್ದೇವೆ. ಎಷ್ಟು ಜನ ಮಂತ್ರಿಗಳಾಗಬೇಕು? ಎಷ್ಟು ಜನರು ಸಂಪುಟದಲ್ಲಿರಬೇಕು ಎಂಬುದನ್ನು ಹೈಕಮಾಂಡ್ ತಿಳಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

    ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ, ನಾವು ಬೇರೆ ಬೇರೆ ವಿಂಗಡನೆ ಮಾಡಿರುವ ಎರಡ್ಮೂರು ಪಟ್ಟಿಗಳನ್ನು ಕೊಟ್ಟಿದ್ದೇನೆ. ನಮ್ಮ ಪಕ್ಷದಲ್ಲಿ ಯಾರೂ ವಲಸಿಗರಲ್ಲ, ಎಲ್ಲರೂ ಬಿಜೆಪಿಯವರೇ. ನಾವು ಹೇಳಿದ್ದನ್ನು ಕೇಳಿಸಿಕೊಂಡು ನಾಳೆ ಹೈಕಮಾಂಡ್‍ನಿಂದ ಪಟ್ಟಿ ಬಿಡುಗಡೆ ಮಾಡುತ್ತಾರೆ. ಡಿಸಿಎಂ ಹುದ್ದೆ ಸೃಷ್ಟಿ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಮೊಬ್ಲಾಕ್‍ಮೇಲ್, ಶಾಸಕರೊಂದಿಗೆ ಟೀ ಪಾರ್ಟಿ ಮಾಡಿದವರೆಲ್ಲಾ ಮಂತ್ರಿ ಆಗ್ತಾರೆ: ಗೂಳಿಹಟ್ಟಿ ಶೇಖರ್

    ಪ್ರಾದೇಶಿಕತೆ, ಸಮುದಾಯ ಸೇರಿದಂತೆ ಎಲ್ಲವನ್ನೂ ಪರಿಗಣಿಸಿ ಸಂಪುಟ ಪಟ್ಟಿ ಬಿಡುಗಡೆ ಮಾಡುತ್ತಾರೆ. ನಾಳೆ ರಾತ್ರಿಯೊಳಗೆ ಸಂಪುಟ ಸೇರುವವರ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬಿಡುಗಡೆ ಮಾಡಲಿದ್ದು, ನಾಳೆ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಪ್ರಮಾಣ ವಚನದ ಕುರಿತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದರು.

    ಬೆಂಗಳೂರಿನಲ್ಲಿ ಪೊಲೀಸರ ಮೇಲೆ ವಿದೇಶಿ ಪ್ರಜೆಗಳು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾವು ರಾಜ್ಯದಲ್ಲಿ ಡ್ರಗ್ಸ್ ಪ್ರಕರಣ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಂಡಿದ್ದೇವೆ. ವಿದೇಶಿ ಪ್ರಜೆಗಳು ಮೊದಲು ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಪೊಲೀಸರು ಅವರಿಗೆ ಸರಿಯಾದ ಕ್ರಮ ಕೈಗೊಂಡಿದ್ದಾರೆ ಎಂದು ಸಮರ್ಥಿಸಿಕೊಂಡರು.

    ಸಚಿವ ಸಂಪುಟ ರಚನೆ ಸಂಬಂಧ ಮಹತ್ವದ ಚರ್ಚೆಯಲ್ಲಿ ಸಿಎಂ ಬೊಮ್ಮಾಯಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದರು.

  • ಬೆಳಗಾವಿಗೆ ರಾಹುಲ್ ಗಾಂಧಿ ಪ್ರಚಾರಕ್ಕೆ ಬಂದ್ರೆ ಬಿಜೆಪಿ ಅಭ್ಯರ್ಥಿ ಗೆಲ್ತಾರೆ : ಪ್ರಹ್ಲಾದ್ ಜೋಶಿ

    ಬೆಳಗಾವಿಗೆ ರಾಹುಲ್ ಗಾಂಧಿ ಪ್ರಚಾರಕ್ಕೆ ಬಂದ್ರೆ ಬಿಜೆಪಿ ಅಭ್ಯರ್ಥಿ ಗೆಲ್ತಾರೆ : ಪ್ರಹ್ಲಾದ್ ಜೋಶಿ

    ಬೆಳಗಾವಿ: ಇನ್ನೂ 20 ವರ್ಷ ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುತ್ತದೆ. ನೀವು ರಾಹುಲ್ ಗಾಂಧಿಯನ್ನು ಪ್ರಚಾರಕ್ಕೆ ಕರೆಸಬಹುದು. ಆದರೆ ನಿಮಗೆ ಅಧಿಕಾರ ಸಿಗುವುದಿಲ್ಲ. ರಾಹುಲ್ ಗಾಂಧಿ ಕಾಲಿಟ್ಟರೆ ಸಾಕು ಐದಾರು ಲಕ್ಷ ಮತಗಳ ಅಂತರದಲ್ಲಿ ಮಂಗಳ ಅಂಗಡಿ ಗೆಲ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

    ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ನಡೆದ ಉಪ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ದೇಶದ ರಕ್ಷಣೆ, ಸಮಗ್ರತೆ ಪ್ರಶ್ನೆ ಬಂದಾಗ ಕಾಂಗ್ರೆಸ್ ಪಕ್ಷವು ವಿದೇಶಗಳೊಂದಿಗೆ ರಾಜಿ ಮಾಡಿಕೊಂಡ ಅನೇಕ ಉದಾಹರಣೆಗಳಿವೆ. ಕಾಂಗ್ರೆಸ್ ಪಕ್ಷವು ಚೀನಾದಿಂದ ಹಣ ಪಡೆದುಕೊಂಡು ಉಚಿತ ವ್ಯಾಪಾರದ ಒಪ್ಪಂದವನ್ನು ಮಾಡಿಕೊಂಡು, ಭಾರತದ ವ್ಯಾಪಾರ-ವಹಿವಾಟುಗಳಿಗೆ ನಷ್ಟ ಮಾಡಿದೆ. ದೇಶದ ಹಿತದ ವಿರುದ್ದವಾದ ಒಂದು ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಪಕ್ಷ ಸತೀಶ್ ಜಾರಕಿಹೊಳಿಯನ್ನು ಇಲ್ಲಿ ಒತ್ತಾಯಪೂರ್ವಕವಾಗಿ ಚುನಾವಣೆಗೆ ನಿಲ್ಲಿಸಿದೆ. ಡಿಕೆಶಿ ಸತೀಶ್ ಜಾರಕಿಹೊಳಿಯನ್ನು ಹಿಡಿದುಕೊಂಡು ಬಂದು ಇಲ್ಲಿ ಚುನಾವಣೆಗೆ ನಿಲ್ಲಿಸಿದ್ದಾರೆ. ಸತೀಶ್ ಜಾರಕಿಹೊಳಿ ಗೆಲ್ಲುವ ಪ್ರಶ್ನೆ ಇಲ್ಲ. ಒಂದು ವೇಳೆ ಗೆದ್ದರೆ, ಪಾರ್ಲಿಮೆಂಟ್ ನಲ್ಲಿ ಸದನದ ಬಾವಿಯೊಳಗಿಳಿದು ಮೋದಿ ವಿರುದ್ದ ಧಿಕ್ಕಾರ ಎಂದು 51 ಜನ ಕೂಗುತ್ತಿರುತ್ತಾರೆ. ಅವರೊಂದಿಗೆ ಇವರು 52ನೇಯವರಾಗಿ ಸೇರಿಕೊಳ್ಳುತ್ತಾರೆ. ಈ ರೀತಿ ಸದನದೊಳಗೆ ಕೂಗಾಡುವವರು ಬೇಕೋ ಅಥವಾ ದೇಶದಲ್ಲಿ ಕೃಷಿಗಾಗಿ ಒಳ್ಳೆಯ ಕಾನೂನನ್ನು ತಂದು, ನೀರಾವರಿಗೆ ದುಡ್ಡು ಕೊಟ್ಟು, ಜಗತ್ತಿನಲ್ಲಿ ದೇಶದ ಗರಿಮೆಯನ್ನು ಜಾಸ್ತಿ ಮಾಡಿರುವ ಪಕ್ಷದ ನಾಯಕನ ಪರವಾಗಿ ಕೈ ಎತ್ತುವವರು ಬೇಕೋ ನೀವೇ ನಿರ್ಧರಿಸಿ ಎಂದು ಮನವಿ ಮಾಡಿದರು.

    ರಾಮಮಂದಿರ ನಿರ್ಮಾಣಕ್ಕೆ ಯಾರು ಒಂದು ನಯಾ ಪೈಸೆ ದುಡ್ಡು ಕೊಟ್ಟಿಲ್ಲವೋ ಅವರು ಲೆಕ್ಕ ಕೇಳ್ತಿದ್ದಾರೆ. ನೀವು ಹಣ ಕೊಟ್ಟಿಲ್ಲ. ಹಾಗಾಗಿ ನಿಮಗೆ ಲೆಕ್ಕ ಕೊಡಲ್ಲ. ಜನರಿಗೆ ಕೊಡ್ತೀವಿ. ಸಿದ್ದರಾಮಯ್ಯ ನಾನು ಸಿಎಂ ಆಗ್ತಿನೋ ಡಿಕೆಶಿ ಸಿಎಂ ಆಗ್ತಾರೋ ಅಂತ ಕನಸು ಕಾಣ್ತಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಸರ್ಕಾರ ಬರಲು ಸಾಧ್ಯವೇ ಇಲ್ಲ. ನೀವು ಸುಮ್ಮನೆ ಮನೆಗೆ ಹೋಗ್ತಿರಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದರು.

  • ನರಭಕ್ಷಕರಿಂದ ನಾವು ದೇಶದ ಏಕತೆ ಬಗ್ಗೆ ಕಲಿಯಬೇಕಿಲ್ಲ – ಜೋಶಿ ವಿರುದ್ಧ ಎಚ್‍ಡಿಕೆ ಕಿಡಿ

    ನರಭಕ್ಷಕರಿಂದ ನಾವು ದೇಶದ ಏಕತೆ ಬಗ್ಗೆ ಕಲಿಯಬೇಕಿಲ್ಲ – ಜೋಶಿ ವಿರುದ್ಧ ಎಚ್‍ಡಿಕೆ ಕಿಡಿ

    ಕಲಬುರಗಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನಮ್ಮನ್ನು ದೇಶದ್ರೋಹಿಗಳು ಅಂತಾರೆ ಗೋಧ್ರಾ ಹತ್ಯಾಕಾಂಡ ಸೇರಿದಂತೆ ಹಲವು ಅಮಾಯಕರ ಪ್ರಾಣ ತೆಗೆದ ನರಭಕ್ಷಕರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಜೋಶಿ ಹಾಗೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

    ಕಲಬುರಗಿ ನಗರದ ಪೀರ್ ಬಂಗಲಾದಲ್ಲಿ ಆಯೋಜಿಸಿದ ಸಿಎಎ ವಿರೋಧಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ಚಾಮರಾಜನಗರದಲ್ಲಿ ಜಿಹಾದಿಗಳ ಬಂಧನ ಎಂದು ಹೇಳುತ್ತಾರೆ. ಇನ್ನೊಂದು ಕಡೆ ಬಾಂಬ್ ಪ್ರಕರಣ ಎನ್ನುತ್ತಾರೆ. ಇದು ಬಿಜೆಪಿ ಸರ್ಕಾರದ ಪ್ಲ್ಯಾನ್ ಅಲ್ಲ, ಮಂಗಳೂರಿನ ಪ್ರಭಾಕರ ಭಟ್ ಅವರ ಪ್ಲ್ಯಾನ್ ಆಗಿದೆ ಎಂದು ಆರೋಪಿಸಿದರು.

    ಇತ್ತೀಚೆಗೆ ಹುಬ್ಬಳ್ಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿದ್ದಾಗ ನೆಹರು ಮಾಡಿದ ತಪ್ಪುಗಳನ್ನು ಸರಿ ಮಾಡುತ್ತಿರುವುದ್ದಾಗಿ ಅವರಿಗೆ ಅವಮಾನ ಮಾಡಿದ್ದಾರೆ. ಸ್ವಾತಂತ್ರ್ಯಕ್ಕೆ ಎಲ್ಲಾ ಜನಾಂಗದವರು ಅವರ ಜೊತೆ ಹೋರಾಟ ಮಾಡಿದ್ದಾರೆ. ಗಾಂಧಿ, ನೆಹರು ಅವರು ಇರುವಾಗ ನೀವು ಹುಟ್ಟಿರಲಿಲ್ಲ. ಇನ್ನು ಆರ್ಟಿಕಲ್ 370 ರದ್ದು ಮಾಡಿ ಅಲ್ಲಿ ತುರ್ತು ಪರಿಸ್ಥಿತಿ ನಿರ್ಮಿಸಿದ್ದು, ಅಲ್ಲಿ ಈಗ 40 ಸಾವಿರ ಸೈನಿಕರನ್ನು ನಿಯೋಜನೆ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಜನಪರ ಸರ್ಕಾರ ಅಲ್ಲ ಅದು 155 ಸರ್ಕಾರವಾಗಿದೆ. ಬ್ರಿಟಿಷ್ ಆಡಳಿತಕ್ಕಿಂತ ಹೆಚ್ಚಿನ ಆಡಳಿತವನ್ನು ಈ ಹಕ್ಕಬುಕ್ಕರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಮುಸ್ಲಿಂ ಸಮುದಾಯದವರ ವಿರುದ್ಧ ಆರೋಪ ಮಾಡುವ ಈ ಸರ್ಕಾರ ಮುಂದಿನ ದಿನಗಳಲ್ಲಿ ತೆರಬೇಕಾಗುತ್ತದೆ. ಸೋಮವಾರದ ಮಂಗಳೂರಿನ ಘಟನೆ ಮುಸ್ಲಿಂ ಸಮುದಾಯದವರನ್ನು ಹಿಂದು ಸಮುದಾಯದವರು ಕೆಟ್ಟದಾಗಿ ನೋಡುವಂತೆ ಆರ್‍ಎಸ್‍ಎಸ್ ಹಾಗೂ ವಿಶ್ವಹಿಂದೂ ಪರಿಷತ್ ಮಾಡುತ್ತಿದೆ. ಆದರೆ ಇದರಿಂದ ಯಾವ ಮುಸ್ಲಿಂ ಬಾಂಧವರು ಉದ್ರೆಕಕ್ಕೆ ಒಳಗಾಗಿ ಯಾವ ಹೇಳಿಕೆಯನ್ನು ನೀಡಬೇಡಿ ಎಂದು ಎಚ್‍ಡಿಕೆ ಬಹಿರಂಗ ಸಭೆಯಲ್ಲಿ ಹೇಳಿದರು.

  • ನೈತಿಕತೆ ಎನ್ನೋದು ಕಾಂಗ್ರೆಸ್‍ನವರಿಗೆ ಗೊತ್ತೇ ಇಲ್ಲ; ಪ್ರಹ್ಲಾದ್ ಜೋಶಿ ಕಿಡಿ

    ನೈತಿಕತೆ ಎನ್ನೋದು ಕಾಂಗ್ರೆಸ್‍ನವರಿಗೆ ಗೊತ್ತೇ ಇಲ್ಲ; ಪ್ರಹ್ಲಾದ್ ಜೋಶಿ ಕಿಡಿ

    – ಶಾಸಕರ ರೆಸಾರ್ಟ್ ಗಲಾಟೆ ಪಾರ್ಟಿ ಡ್ರಾಮಾ

    ಹುಬ್ಬಳ್ಳಿ: ರಾಜ್ಯ ಸರ್ಕಾರ ರಜೆ ಹಾಗೂ ಶೋಕಾಚರಣೆ ಘೋಷಣೆ ಮಾಡಿದ್ದರೂ ಕಾರ್ಯಕ್ರಮ ಮಾಡಿದ್ದಾರೆ. ಇದು ಅಕ್ಷಮ್ಯ ಅಪರಾಧ, ನೈತಿಕತೆ ಎನ್ನುವುದು ಕಾಂಗ್ರೆಸ್‍ನವರಿಗೆ ಗೊತ್ತೇ ಇಲ್ಲ ಎಂದು ಸಂಸದ ಪ್ರಹ್ಲಾದ್ ಜೋಶಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎನ್ನೋದು ಅಪ್ರಸ್ತುತ. ಕೂಡಲೇ ಕಾಂಗ್ರೆಸ್ ಅಧ್ಯಕ್ಷರು ಈ ಘಟನೆ ಬಗ್ಗೆ ಕ್ಷಮೆ ಕೇಳಬೇಕು. ಅಲ್ಲದೇ ಸಿಎಂ, ಡಿಸಿಎಂ ಉತ್ತರ ಕೊಡಬೇಕು. ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದರೆಂದು ಸರ್ಕಾರಿ ರಜೆ ಘೋಷಿಸಿದ್ದರೂ ಕಾರ್ಯಕ್ರಮವನ್ನು ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ನೈತಿಕತೆ ಇಲ್ಲ. ದೇಶ ವಿರೋಧಿ ಹೇಳಿಕೆ ಕೊಟ್ಟ ಕನ್ನಯ್ಯ ಕುಮಾರ್‍ನನ್ನು ಕರೆದುಕೊಂಡು ಬಂದು ಸಚಿವ ಪ್ರಿಯಾಂಕ್ ಖರ್ಗೆ ಕಾರ್ಯಕ್ರಮ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಚಿವ ಪ್ರಿಯಾಂಕ್ ಖರ್ಗೆಗೆ ವೇಣುಗೋಪಾಲ್ ಕ್ಲಾಸ್!

    ರೆಸಾರ್ಟಿನಲ್ಲಿ ಶಾಸಕರ ಗಲಾಟೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಇದು ಕಾಂಗ್ರೆಸ್ ಪಾರ್ಟಿಯ ಡ್ರಾಮಾ. ಎಲ್ಲರನ್ನ ಅಲ್ಲಿಗೆ ಕರೆದುಕೊಂಡು ಹೋಗಿದ್ದು ಏಕೆ? ಎಲ್ಲಾ ಡ್ರಾಮಾ ಮುಗಿದ ಮೇಲೆ ಕೇಸ್ ಹಾಕಿದ್ದಾರೆ. ಹೀಗಾಗಿ ಕೂಡಲೇ ಸೂಕ್ತ ತನಿಖೆ ನಡೆಸಿ ಎಲ್ಲರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಪ್ರಹ್ಲಾದ್ ಜೋಶಿ ಆಗ್ರಹಿಸಿದರು. ಇದನ್ನೂ ಓದಿ: ಈಗಲ್ಟನ್ ರೆಸಾರ್ಟಿನಲ್ಲಿ ಸಣ್ಣ ಅಚಾತುರ್ಯವಾಗಿರೋದು ನಿಜ: ಸಿಎಂ ಎಚ್‍ಡಿಕೆ

    ಈ ವಿಷಯವಾಗಿ ಹುಬ್ಬಳ್ಳಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯಿಸಿ, ರಕ್ಷಣೆ ಕೊಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಶಾಸಕರನ್ನ ರೆಸಾರ್ಟಿಗೆ ಕರೆದುಕೊಂಡು ಹೋಗಿದ್ದರು. ಆದರೆ ಅವರ ಶಾಸಕರಿಗೆ ರಕ್ಷಣೆ ನೀಡಲು ಆಗಿಲ್ಲ. ಜನರಿಗೆ ರಕ್ಷಣೆ ಎಲ್ಲಿಂದ ಕೊಡುತ್ತಾರೆ ಎಂದು ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ ನಿನ್ನೆ ಸರ್ಕಾರಿ ರಜೆ ಘೋಷಣೆ ಮಾಡಿದ್ದರೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾರ್ಯಕ್ರಮ ಮಾಡಿದ್ದಾರೆ. ನೈತಿಕ ಹೊಣೆ ಹೊತ್ತು ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಸದ ಜೋಶಿ ವಿರುದ್ಧ ಬಿಜೆಪಿ ಮಾಜಿ ಶಾಸಕನ ಮಗಳ ಫೇಸ್‍ಬುಕ್ ವಾರ್!

    ಸಂಸದ ಜೋಶಿ ವಿರುದ್ಧ ಬಿಜೆಪಿ ಮಾಜಿ ಶಾಸಕನ ಮಗಳ ಫೇಸ್‍ಬುಕ್ ವಾರ್!

    ಹುಬ್ಬಳ್ಳಿ: ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಕುಂದಗೋಳ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಎಸ್.ಐ ಚಿಕ್ಕನಗೌಡರ ಪುತ್ರಿ ಫೇಸ್‍ಬುಕ್ ನಲ್ಲಿ ವಾರ್ ಆರಂಭಿಸಿದ್ದಾರೆ.

    ನನ್ನ ತಂದೆಯ ಸೋಲಿಗೆ ಕಾರಣರಾದ ಮಹೇಶ್ ಗೌಡ ಜೊತೆಗೆ ನೀವು ಹೊಂದಾಣಿಕೆ ಮಾಡಿದ್ದು ಎಷ್ಟು ಸರಿ? ಆ ದ್ರೋಹಿಗಳನ್ನು ಪಕ್ಷದಿಂದ ಕಿತ್ತೊಗೆಯೋವರೆಗೂ ನಮಗೆ ಸಮಾಧಾನ ಇಲ್ಲ ಎಂದು ಫೇಸ್‍ಬುಕ್ ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿಕೊಂಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಮಾನ್ಯ ಸಂಸದರೇ ಏನಿದು? ನಿಮ್ಮ ಪಕ್ಷವಾದ ಬಿಜೆಪಿಗೆ ಮೋಸ ಮಾಡಿ ಪಕ್ಷಕ್ಕೆ ದ್ರೋಹ ಮಾಡಿದವರನ್ನು ಮುಂದೆ ನಿಲ್ಲಿಸಿಕೊಂಡು ಕಾರ್ಯಕ್ರಮ ಮಾಡ್ತೀರಿ. ನಾವು ಪ್ರೂಫ್ ಸಮೇತ ಕೆಲವು ಮುಖಂಡರು ಕಾಂಗ್ರೆಸ್‍ಗೆ ಬೆಂಬಲಿಸುವಂತೆ ಪ್ರಚಾರ ಮಾಡಿದ್ದನ್ನು ಸಿಡಿಯಲ್ಲಿ ಹಾಗೂ ಲಿಖಿತದ ಮೂಲಕ ಅವರೆಲ್ಲರನ್ನು ಪಕ್ಷದಿಂದ ವಜಾ ಮಾಡುವಂತೆ ಕೇಳಿಕೊಂಡಿದ್ದೇವು. ಆದರೆ ಅದನ್ನು ಮಾಡುವುದು ಬಿಟ್ಟು ನೀವು ಅದೇ ಮೋಸಗಾರರ ಗ್ಯಾಂಗ್ ಕಟ್ಟಿಕೊಂಡು ಕಾರ್ಯಕ್ರಮಗಳನ್ನ ಮಾಡಿದ್ದೀರಿ.

     

    ಇಂತಹ ಜನರ ವಿರುದ್ಧ ನೀವು ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ನನ್ನ ಪ್ರಶ್ನೆಗೆ ಉತ್ತರಿಸಿ. ಹಾಗೆಯೇ ಬಿಜೆಪಿಯ ನಿಜವಾದ ಕಾರ್ಯಕರ್ತರು ಹಾಗೂ ಮತದಾರರಿಗೆ ಬೆಲೆ ಇಲ್ಲವೇ? ನಿಮ್ಮ ಮೇಲೆ ನನಗೆ ತುಂಬಾ ಗೌರವವಿದೆ. ಚಿಕ್ಕ ವಯಸ್ಸಿನಿಂದ ನಿಮ್ಮನ್ನು ನೋಡುತ್ತಿದ್ದೇನೆ. ಆದರೆ ಯಾವುದೋ ಗುಂಪಿನ ಹಿತಾಸಕ್ತಿಗೆ ಕುಂದಗೋಳದಲ್ಲಿ ಬಿಜೆಪಿ ಸೋಲುವ ಹಾಗೆ ಮಾಡಿದ್ದು ವಿಪರ್ಯಾಸ. ಅದೇನೆ ಆಗಲಿ, ಪಕ್ಷ ಎಂದ ಮೇಲೆ ನಾವೆಲ್ಲ ಒಂದೇ ಎನ್ನಬೇಕಲ್ಲವೇ? ಅಧಿಕಾರ ಶಾಶ್ವತವಲ್ಲ. ಆದರೆ ನಿಮಗೂ ಅದೇ ರೀತಿ ಆದರೆ ಹೇಗೆ ಇರುತ್ತಾ ಯೋಚನೆ ಮಾಡಿ. ಆ ದ್ರೋಹಿಗಳನ್ನು ಪಕ್ಷದಿಂದ ಕಿತ್ತೊಗೆಯೋವರೆಗೂ ನಮಗೆ ಸಮಾಧಾನ ಇಲ್ಲ. ಆದಷ್ಟು ಬೇಗ ಕ್ರಮ ಕೈಗೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇನೆ.

    ನಂದಾ ಅವರ ಪೋಸ್ಟ್‍ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಂದಾ ಅವರು, ನಾನು ಯಾರಿಗೂ ವಾರ್ನಿಂಗ್ ಕೊಟ್ಟಿಲ್ಲ. ಕೊಡುವಷ್ಟು ದೊಡ್ಡವಳು ಅಲ್ಲ. ಅನ್ಯಾಯವನ್ನು ಪ್ರಶ್ನಿಸಿದ್ದೇನೆ ಅಷ್ಟೇ. ಜೈ ಬಿಜೆಪಿ, ಜೈ ಮೋದಿಜಿ ಎಂದು ಹೇಳಿಕೊಂಡಿದ್ದಾರೆ

    https://www.facebook.com/nanda.chikkanagoudar/posts/2324053347605526

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv