Tag: Pragatipura

  • ಆಟೋ ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ; ಪರಿಸ್ಥಿತಿ ಉದ್ವಿಗ್ನ – ಮೂವರು ಅರೆಸ್ಟ್

    ಆಟೋ ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ; ಪರಿಸ್ಥಿತಿ ಉದ್ವಿಗ್ನ – ಮೂವರು ಅರೆಸ್ಟ್

    – ಶ್ರೀರಾಮನ ಧ್ವಜ ಹಾರಿಸಿದ್ದೆ, ಬಿಜೆಪಿ ಬೆಂಬಲಿಸಿ ಪೋಸ್ಟ್ ಹಾಕಿದ್ದೆ
    – ಇದೇ ಕಾರಣಕ್ಕೆ ಹಲ್ಲೆ ನಡೆಸಿರುವ ಅನುಮಾನ – ಆಟೋ ಚಾಲಕನಿಂದ ಆರೋಪ

    ಬೆಂಗಳೂರು: ಆಟೋ ಪಾರ್ಕಿಂಗ್ (Auto Parking) ಮಾಡುವ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ನಡುವೆ ಶುರುವಾದ ಗಲಾಟೆಯೊಂದು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ.

    ಬೆಂಗಳೂರಿನ ಪ್ರಗತಿಪುರ (Bengaluru Pragatipura) ಕುಮಾರಸ್ವಾಮಿ ಬಡಾವಣೆಯಲ್ಲಿ ಆಟೋ ಪಾರ್ಕಿಂಗ್ ಮಾಡುವ ವಿಚಾರಕ್ಕೆ ಕುಮಾರ್ ಮತ್ತು ಸಯ್ಯದ್ ಎಂಬವರ ನಡುವೆ ಗಲಾಟೆ ನಡೆದಿದೆ. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ (Kumaraswamy Layout Police) ಪ್ರಕರಣ ದಾಖಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರ ಸುಳ್ಳು ಹೇಳ್ತಿದೆ, ಬರ ಪರಿಹಾರವನ್ನ ನ್ಯಾಯಾಲಯವೇ ತೀರ್ಮಾನಿಸಲಿ: ನಿರ್ಮಲಾ ಸೀತಾರಾಮನ್

    ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಅನ್ಯಕೋಮಿನ ಆಟೋ ಚಾಲಕ ವೇಗವಾಗಿ ಬಂದು ತನ್ನ ಮನೆ ಮುಂದೆ ಆಟೋ ಪಾರ್ಕಿಂಗ್ ಮಾಡಿದ್ದೇನೆ. ಈ ವೇಳೆ ನೆರೆ ಮನೆಯವರು ಪ್ರಶ್ನೆ ಮಾಡಿದಾಗ ಇಬ್ಬರು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದಾರೆ. ಇದರೊಂದ ಕೋಪಗೊಂಡ ಆಟೋ ಚಾಲಕ, ಪಕ್ಕದಲ್ಲೇ ಇದ್ದ ಮಸೀದಿಗೆ ತೆರಳಿ ನಮಾಜ್ ಮುಗಿಸಿ ಹೊರ ಬರುತ್ತಿದ್ದವರಿಗೆ ವಿಚಾರ ಮುಟ್ಟಿಸಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ 20ಕ್ಕೂ ಹೆಚ್ಚು ಯುವಕರು ಘಟನಾ ಸ್ಥಳಕ್ಕೆ ದೌಡಾಯಿಸಿ, ಪ್ರಶ್ನೆ ಮಾಡಿದ ಕುಟುಂಬದ ಮೇಲೆ ಗಲಾಟೆಗೆ ಮುಂದಾಗಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಮಹಿಳೆಯರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಸುಕುಮಾರ್ ಆರೋಪಿಸಿದ್ದಾರೆ.

    ಗಲಾಟೆಯಲ್ಲಿ ಮೂವರು ಮಹಿಳೆಯರು, ಮೂವರು ಪುರುಷರು ಹಾಗೂ 5 ವರ್ಷದ ಮಗುವಿನ ಮೇಲೂ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ವಾಣಿಜ್ಯೋದ್ಯಮಿ ಪಲ್ಲವಿ ಡೆಂಪೊಗೆ ಟಿಕೆಟ್‌ – ಗೋವಾ ಇತಿಹಾಸದಲ್ಲೇ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಮೊದಲ ಮಹಿಳೆ

    ಈ ಕುರಿತು ಪ್ರತಿಕ್ರಿಯಿಸಿರುವ ಆಟೋ ಚಾಲಕ ಆಟೋ ಚಾಲಕ ಸುಕುಮಾರ್ ಘಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಅಯೋಧ್ಯೆ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ದಿನ ಮನೆ ಮೇಲೆ ಧ್ವಜ ಹಾರಿಸಿದ್ದೆ. ನನಗೆ ರಾಮ, ಹಿಂದೂ ಅಂದ್ರೆ ಸ್ವಲ್ಪ ಭಕ್ತಿ ಆಸಕ್ತಿ ಜಾಸ್ತಿ. ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ದಿನ ದೊಡ್ಡ ಶ್ರೀರಾಮನ ಧ್ವಜ ಹಾರಿಸಿದ್ದೆ. ಈಗ ಆದರ ಬಗ್ಗೆಯೂ ಒಂದು ಅನುಮಾನ ಇದೆ, ಆ ವಿಚಾರಕ್ಕು ಏನಾದ್ರು ಹೀಗೆ ಮಾಡಿರಬಹುದಾ ಅಂತಾ ಅನ್ನಿಸಿದೆ. ಮತ್ತೆ ಬಿಜೆಪಿಗೆ ಸಂಬಂಧಿಸಿದ ಕೆಲವು ಪೋಸ್ಟ್ ಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕ್ತಾ ಇರ್ತಿನಿ. ಬರೀ ಆಟೋ ವಿಚಾರಕ್ಕೆ ಗಲಾಟೆ ಅಂದ್ರೆ ನನಗೆ ಡೌಟ್ ಎಂದು ಆರೋಪಿಸಿದ್ದಾರೆ.

    ಸದ್ಯ ಪ್ರಗತಿಪುರದಲ್ಲಿ ಗಲಾಟೆಯಾದ ಮನೆ ಬಳಿ ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ಕದನ ರಣಕಣ – ನಿಖಿಲ್ ಅಥವಾ ಹೆಚ್‌ಡಿಕೆ, ಇಬ್ಬರಲ್ಲಿ ಒಬ್ಬರ ಸ್ಪರ್ಧೆ ಫಿಕ್ಸ್!