Tag: pragathi

  • ರಿಷಬ್ ಬಗ್ಗೆ ನನಗೆ ಹೆಮ್ಮೆ ಇದೆ – ಪತ್ನಿ ಪ್ರಗತಿ ಶೆಟ್ಟಿ ಭಾವುಕ ನುಡಿ

    ರಿಷಬ್ ಬಗ್ಗೆ ನನಗೆ ಹೆಮ್ಮೆ ಇದೆ – ಪತ್ನಿ ಪ್ರಗತಿ ಶೆಟ್ಟಿ ಭಾವುಕ ನುಡಿ

    ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್-1 (Kantara Chapter 1) ಟ್ರೈಲರ್ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಟ್ರೈಲರ್ ರಿಲೀಸ್ ಬಳಿಕ ಚಿತ್ರತಂಡ ಕಾಂತಾರ ಸಿನಿಮಾದ ಶೂಟಿಂಗ್ ಅನುಭವವನ್ನ ಹಂಚಿಕೊಂಡಿದೆ.

    ಕಾಂತಾರ ಚಾಪ್ಟರ್-1 ಸಿನಿಮಾ ಶೂಟಿಂಗ್‌ಗೆ ರಿಷಬ್ ಹೋಗ್ತಿದ್ದಾರೆ ಅಂದ್ರೆ ಅವರ ಪತ್ನಿ ಪ್ರಗತಿ ಶೆಟ್ಟಿ ಅದೆಷ್ಟೋ ದೇವಾನುದೇವತೆಗಳಿಗೆ ಹರಕೆ ಹೊತ್ತಿದ್ದಾರಂತೆ. ದೇವರ ಮುಂದೆ ಪ್ರಾರ್ಥನೆ ಮಾಡಿದ್ದಾರಂತೆ. ಈ ಸಿನಿಮಾ ಶೂಟಿಂಗ್ ಮುಗಿಯುವವರೆಗೂ ಮಕ್ಕಳು ಶಾಲೆಗೆ ಹೋಗುವುದನ್ನೂ ನೋಡೋಕೆ ಆಗಿರ್ಲಲ್ಲವಂತೆ ನಟ ರಿಷಬ್‌ಗೆ. ಈ ವೇಳೆ ಕಾಂತಾರ ಸಿನಿಮಾದಲ್ಲಿ ನಟಿಸಿದ ಕಲಾವಿದರ ಸಾವಿನ ಬಗ್ಗೆಯೂ ರಿಷಬ್ ಶೆಟ್ಟಿ ಫಸ್ಟ್ ಟೈಂ ರಿಯಾಕ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ: 4 ಸಲ ಸತ್ತೇ ಹೋಗ್ತಿದ್ದೆ, ದೈವ ನನ್ನನ್ನ ಬದುಕಿಸಿದೆ – ರಿಷಬ್ ಶೆಟ್ಟಿ ಭಾವುಕ

    ಕಾಂತಾರ ಶೂಟಿಂಗ್ ಟೈಂನಲ್ಲಿ ನಡೆದ ಅವಘಡಗಳ ಬಗ್ಗೆ ರಿಷಬ್ ಶೆಟ್ಟಿ ಮನಬಿಚ್ಚಿ ಮಾತಾಡಿದ್ದಾರೆ. ಮೂರು ವರ್ಷದ ಈ ಜರ್ನಿಯಲ್ಲಿ ನಾಲ್ಕು ಬಾರಿ ಸತ್ತು ಬದುಕಿದೆ ಎಂಬ ಆಘಾತಕಾರಿ ವಿಚಾರವನ್ನ ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ಪತ್ನಿ ಕೂಡಾ ರಿಷಬ್ ಶೆಟ್ಟಿ ಬಗ್ಗೆ ಹೆಮ್ಮೆಯ ಸಂಗತಿಗಳನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್‌-1 ಟ್ರೈಲರ್ ರಿಲೀಸ್ – ದೃಶ್ಯ ವೈಭವಕ್ಕೆ ಮನಸೋತ ಫ್ಯಾನ್ಸ್

    ಇನ್ನು ಇದೇ ವೇಳೆ ಮಾತನಾಡಿದ ರಿಷಬ್ ಪತ್ನಿ ಪ್ರಗತಿ, ದೈವಗಳ ಆಶೀರ್ವಾದಿಂದ ಟ್ರೈಲರ್ ರಿಲೀಸ್ ಆಗಿದೆ. ಶೂಟಿಂಗ್ ವೇಳೆ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದೇವೆ. ರಿಷಬ್ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಎಷ್ಟೇ ಅಡೆತಡೆ ಬಂದರೂ ಎಲ್ಲವನ್ನೂ ಎದುರಿಸಿ ಶ್ರಮದಿಂದ ಕೆಲಸ ಮಾಡಿದ್ದಾರೆ. ಇದು ಸುಲಭದ ಕೆಲಸವಲ್ಲ. ರೈಟರ್, ಡೈರೆಕ್ಟರ್, ಆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ವೇದಿಕೆ ಮೇಲೆ ಪತಿ ಬಗ್ಗೆ ಪತ್ನಿ ಪ್ರಗತಿ ಮಾತಾಡುತ್ತಲೇ ಭಾವುಕರಾಗಿದ್ದಾರೆ.

    ದೇಶದ ಚಿತ್ತ ಈಗ ಒನ್ಲಿ ಕಾಂತಾರದತ್ತ ಆಗಿದೆ. ಈ ಸಂದರ್ಭದಲ್ಲಿ ನಟ ನಿರ್ದೇಶಕ ರಿಷಬ್ ಶೆಟ್ಟಿ ಹಲವಾರು ಸಂಗತಿಗಳನ್ನ ಬಿಚ್ಚಿಟ್ಟಿದ್ದಾರೆ. ಶೂಟಿಂಗ್ ವೇಳೆ ಆದ ಹಲವಾರು ಅವಘಡಗಳ ಬಗ್ಗೆ ಮಾತ್ನಾಡಿದ್ದಾರೆ. ಕಾಂತಾರ ಚಾಪ್ಟರ್-1 ಸಿನಿಮಾ ಕಂಪ್ಲೀಟ್ ಮಾಡೋಕೆ ಆಗ್ತಿರ್ಲಿಲ್ಲವೇನೊ ಅನ್ನುವಷ್ಟರ ಮಟ್ಟಿಗೆ ಅಡೆತಡೆಗಳು ಎದುರಾಗಿವೆಯಂತೆ. ಅವೆಲ್ಲವನ್ನ ಎದುರಿಸಿ ಕಾಂತಾರ ಚಾಪ್ಟರ್-1 ಚಿತ್ರದ ಶೂಟಿಂಗ್ ಮುಗಿಸಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ.

    ಕಾಂತಾರ ಸಿನಿಮಾವನ್ನ ನೋಡಿದ ಪ್ರೇಕ್ಷಕರು ಚಾಪ್ಟರ್-1 ಮೇಲೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಯನ್ನ ತಲುಪಲು ಚಿತ್ರತಂಡ ಹಗಲಿರುಳು ಶ್ರಮಿಸಿದೆ. ಈ ಸಿನಿಮಾ ಶೂಟಿಂಗ್ ವೇಳೆ ಎಂಥದ್ದೇ ಕಷ್ಟಗಳು ಎದುರಾದರೂ ಛಲಬಿಡದೇ ಶೂಟಿಂಗ್ ಮುಗಿಸಿದ್ದಾರೆ ರಿಷಬ್ ಅಂಡ್ ಟೀಂ. ಇವತ್ತು ಇಷ್ಟೆಲ್ಲ ಆಗಿರೋದಕ್ಕೆ ದೈವದ ಕೃಪೆ ಎನ್ನುತ್ತೆ ಕಾಂತಾರ ತಂಡ. ಇನ್ನೇನು ಸಿನಿಮಾ ತೆರೆಗೆ ಬರಲು ಸಿದ್ಧತೆ ಮಾಡಿಕೊಂಡಿದೆ. ಇದೇ ವಿಜಯದಶಮಿಯ ದಿನದಂದು ಥಿಯೇಟರ್‌ಗೆ ಬರಲು ಸದ್ಯ ಟ್ರೈಲರ್ ಮೂಲಕ ಇನ್ವಿಟೇಶನ್ ಕೊಟ್ಟಿದೆ ಚಿತ್ರತಂಡ.

  • ನಟನೆಗೆ ಗುಡ್‌ ಬೈ ಹೇಳಿ, ವೇಟ್ ಲಿಫ್ಟಿಂಗ್ ಸ್ಪರ್ಧೆಗೆ ಅಭ್ಯಾಸ ಆರಂಭಿಸಿದ ನಟಿ ಪ್ರಗತಿ

    ನಟನೆಗೆ ಗುಡ್‌ ಬೈ ಹೇಳಿ, ವೇಟ್ ಲಿಫ್ಟಿಂಗ್ ಸ್ಪರ್ಧೆಗೆ ಅಭ್ಯಾಸ ಆರಂಭಿಸಿದ ನಟಿ ಪ್ರಗತಿ

    ಹುಭಾಷಾ ನಟಿ ಪ್ರಗತಿ (Pragathi) ಅವರು ಪೋಷಕ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗಮನ ಸೆಳೆದಿದ್ದಾರೆ. ನಟನೆ ಬಿಟ್ಟು ವೇಟ್ ಲಿಫ್ಟಿಂಗ್ (Weight Lifting) ಸಾಹಸಕ್ಕೆ ನಟಿ ಕೈ ಹಾಕಿದ್ದಾರೆ. ವೇಟ್ ಲಿಫ್ಟಿಂಗ್ ಸ್ಪರ್ಧೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:‘ದಿಲ್ಲಿ ಮೇಡಂ ದಿಲ್ಲಿ ಮೇಡಂ ಸ್ಲೇಟು ಬಳಪ ತನ್ನಿ’ ಎಂದರಾ ಹಾಸ್ಟೆಲ್ ಹುಡುಗರು?

    ಕನ್ನಡದ ಪ್ರೇಮ ಖೈದಿ, ಹೃದಯವಂತ, ವಿನಾಯಕ ಗೆಳೆಯರ ಬಳಗ ಸಿನಿಮಾದಲ್ಲಿ ಪ್ರಗತಿ (Actress Pragathi) ನಟಿಸಿದ್ದಾರೆ. ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಪೋಷಕ ಪಾತ್ರಗಳ ಮೂಲಕ ಸೈ ಎನಿಸಿಕೊಂಡಿದ್ದಾರೆ. ಭಾಷೆ ಯಾವುದೇ ಆಗಿದ್ರು, ಆ ಪಾತ್ರವೇ ತಾವಾಗಿ ಪ್ರಗತಿ ನಟಿಸುತ್ತಾರೆ.

    90ರ ದಶಕದಲ್ಲಿ ನಟಿ ಪ್ರಗತಿ ನಾಯಕಿಯಾಗಿ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಮೆರೆದರು. ಮದುವೆಯ ನಂತರ ನಟನೆಗೆ ಗುಡ್ ಬೈ ಹೇಳಿದ್ದರು. ಬಹಳ ವರ್ಷಗಳ ನಂತರ ಪೋಷಕ ಪಾತ್ರಗಳ ಮಾಡುವ ಮುಖಾಂತರ ಗಮನ ಸೆಳೆದರು. ಪತಿಗೆ ಡಿವೋರ್ಸ್‌ ನೀಡಿದ್ದಾರೆ. ಇಬ್ಬರ ಮಕ್ಕಳ ಪಾಲನೆಯನ್ನ ಮಾಡ್ತಿದ್ದಾರೆ. ಪ್ರಗತಿ ಸದ್ಯ ತಮ್ಮದೇ ಯೂಟ್ಯೂಬ್ ಚಾನೆಲ್ ಮಾಡಿ, ಈ ಮೂಲಕ ತಮ್ಮ ಬಗ್ಗೆ ಮತ್ತು ವರ್ಕೌಟ್ ಸೇರಿದಂತೆ ಹಲವು ಬಗೆಯ ವಿಚಾರಗಳನ್ನ ಹೇಳ್ತಿದ್ದಾರೆ. ಈಗ ಪ್ರಗತಿ ಕೆಲವು ದಿನಗಳ ಕಾಲ ನಟನೆಯಿಂದ ದೂರ ಉಳಿದು ವೇಟ್ ಲಿಫ್ಟಿಂಗ್ ಕಡೆ ಗಮನ ಹರಿಸಿದ್ದಾರೆ. ‘ವಿಷನ್ ಡಿಸಿಪ್ಲಿನ್ ಪವರ್ ನ್ಯಾಷನಲ್ 2023’ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಗತಿ ಭಾಗವಹಿಸುತ್ತಿದ್ದಾರಂತೆ. ವೇಟ್ ಲಿಫ್ಟಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಪ್ರಗತಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ನನ್ನ ಹೊಸ ಪ್ರಯಾಣ ಈಗಷ್ಟೇ ಆರಂಭವಾಗಿದೆ. 250 ಕಿಲೋ ಭಾರ ಎತ್ತುವ ಮೂಲಕ ಈ ಪ್ರಯಾಣ ಆರಂಭವಾಗಿದೆ. ಗುರಿ ಸಾಧಿಸುವವರೆಗೂ ವಿಶ್ರಮಿಸುವುದಿಲ್ಲ. ಈ ಜರ್ನಿಯಲ್ಲಿ ನನಗೆ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಪ್ರಗತಿ ತನ್ನನ್ನು ಬೆಂಬಲಿಸಿದವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ತೆಲುಗು ನಟಿ ಪ್ರಗತಿ ಕೆಲವು ದಿನಗಳ ಹಿಂದೆ ಜಿಮ್‌ನಲ್ಲಿ ವರ್ಕೌಟ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಅದಾದ ನಂತರ ಎರಡನೇ ಮದುವೆ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದರು. ಈಗ ಪ್ರಗತಿ ಮತ್ತೆ ಟಾಕ್ ಆಫ್ ದಿ ಟೌನ್ ಎನಿಸಿದ್ದಾರೆ. ನಟನೆ ಬಿಟ್ಟು ವೇಟ್ ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 46ನೇ ವಯಸ್ಸಿಗೆ ಸಿಹಿ ಸುದ್ದಿ ಕೊಟ್ರು ತೆಲುಗಿನ ನಟಿ ಪ್ರಗತಿ

    46ನೇ ವಯಸ್ಸಿಗೆ ಸಿಹಿ ಸುದ್ದಿ ಕೊಟ್ರು ತೆಲುಗಿನ ನಟಿ ಪ್ರಗತಿ

    ಟಾಲಿವುಡ್‌ನಲ್ಲಿ (Tollywood) ಸದ್ಯ ಚಾಲ್ತಿಯಲ್ಲಿರುವ ಸುದ್ದಿ ಅಂದ್ರೆ ನರೇಶ್ (Naresh) ಮತ್ತು ಪವಿತ್ರಾ (Pavitra Lokesh)  ಕಿಸ್ಸಿಂಗ್ ವೀಡಿಯೋ ವಿಚಾರ. ಈ ಬೆನ್ನಲ್ಲೇ ಮತ್ತೊಂದು ಅಚ್ಚರಿಯ ಸುದ್ದಿಯೊಂದು ಟಿಟೌನ್‌ನಲ್ಲಿ ಹರಿದಾಡುತ್ತಿದೆ. ನನಗೂ ಸಂಗಾತಿ ಬೇಕು ಎಂದು ನಟಿ ಪ್ರಗತಿ ಹೇಳಿದ್ದಾರೆ.

    ತೆಲುಗು ಸಿನಿಮಾರಂಗದಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಕಿಸ್ಸಿಂಗ್ ವೀಡಿಯೋ 9Kissing Video) ಭಾರಿ ಸದ್ದು ಮಾಡಿದ ಬೆನ್ನಲ್ಲೇ ನಟಿ ಪ್ರಗತಿ (Actress Pragathi) ತಮ್ಮ ಮಹಾದಾಸೆಯನ್ನ ವ್ಯಕ್ತಪಡಿಸಿದ್ದಾರೆ. ನನಗೂ ಕೂಡ ಸಂಗತಿ(Partner) ಬೇಕು ಎಂದು ಪಟ್ಟು ಹಿಡಿದಿದ್ದಾರಂತೆ. ಇದನ್ನೂ ಓದಿ: ಸೋನು ಗೌಡ ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಹೇಳೋದೇನು?

    ತೆಲುಗಿನ ನಟಿ ಪ್ರಗತಿ 46ನೇ ವಯಸ್ಸಿಗೆ ಮರುಮದುವೆಗೆ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತಮ್ಮ ಆಪ್ತ ವಲಯದಲ್ಲಿ ನನಗೂ ಜೋಡಿ ಬೇಕು ಎಂದು ಹೇಳಿರುವ ಮಾತು ಈಗ ಎಲ್ಲಾ ಕಡೆ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಯಾಗುತ್ತಿದೆ. ಪ್ರಗತಿ ಅವರ ಹೇಳಿಕೆ ಕೇಳಿ, ಎಲ್ಲಾ ಪವಿತ್ರಾ ಮತ್ತು ನರೇಶ್ ಮಹಿಮೆ ಎಂದು ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ.

    ನಟಿ ಪ್ರಗತಿ ಸಾಫ್ಟ್‌ವೇರ್ ಇಂಜಿನಿಯರ್ ಅವರನ್ನ ಮದುವೆಯಾಗಿದ್ದರು. ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ವೈಯಕ್ತಿಕ ಕಾರಣಗಳಿಂದ ಕೆಲ ವರ್ಷಗಳ ಹಿಂದೆ ಇಬ್ಬರು ಡಿವೋರ್ಸ್ ಪಡೆದಿದ್ದರು. ಇದೀಗ ಮತ್ತೆ ಮರುಮದುವೆಗೆ ನಟಿ ಮನಸ್ಸು ಮಾಡಿದ್ದಾರಂತೆ. ಅಷಕ್ಕೂ ಈಗ ಹಬ್ಬಿರುವ ಸುದ್ದಿ ನಿಜಾನಾ, ಸುಳ್ಳಾ ಎಂಬುದನ್ನ ನಟಿಯೇ ಸ್ಪಷ್ಟಪಡಿಸಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k