Tag: Prabhudeva

  • ಪುನೀತ್ ರಾಜ್ ಕುಮಾರ್ ಕಂಡ ನಾಲ್ಕು ಕನಸುಗಳಲ್ಲಿ ಈಡೇರಿದ್ದು ಎಷ್ಟು? ರಾಘವೇಂದ್ರ ರಾಜ್ ಕುಮಾರ್ ಬಿಚ್ಚಿಟ್ಟ ರಹಸ್ಯ

    ಪುನೀತ್ ರಾಜ್ ಕುಮಾರ್ ಕಂಡ ನಾಲ್ಕು ಕನಸುಗಳಲ್ಲಿ ಈಡೇರಿದ್ದು ಎಷ್ಟು? ರಾಘವೇಂದ್ರ ರಾಜ್ ಕುಮಾರ್ ಬಿಚ್ಚಿಟ್ಟ ರಹಸ್ಯ

    ಸಾಮಾನ್ಯರು ಅಸಾಮಾನ್ಯ ಕನಸುಗಳನ್ನು ಕಾಣುವುದು ಸಹಜ. ಆದರೆ, ಸೂಪರ್ ಸ್ಟಾರ್ ನಟರೊಬ್ಬರು ನಾಲ್ಕು ಕನಸುಗಳನ್ನು ಕಂಡು, ಒಂದೇ ಒಂದು ಕನಸನ್ನು ಈಡೇರಿಸಿಕೊಂಡರು ಅನ್ನುವುದು ಅಚ್ಚರಿ. ಈ ವಿಷಯವನ್ನು ಸ್ವತಃ ಸ್ಟಾರ್ ನಟರ ಸಹೋದರರೇ ಹೇಳಿಕೊಂಡಿದ್ದು, ಆ ಕನಸು ಈಡೇರಿದ ಕುರಿತು ಲಕ್ಕಿ ಮ್ಯಾನ್ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ.

    ಅಗಲಿದ ಚೇತನ ಪುನೀತ್ ರಾಜ್ ಕುಮಾರ್ ಅವರು ಏನೆಲ್ಲ ಸಾಧನೆ ಮಾಡಿದ್ದರೂ, ಅವರೂ ನಾಲ್ಕು ಕನಸುಗಳನ್ನು ಕಂಡಿದ್ದರಂತೆ. ಆ ನಾಲ್ಕರಲ್ಲಿ ಒಂದೇ ಒಂದು ಕನಸು ಈಡೇರಿದೆ ಎಂದು ರಾಘವೇಂದ್ರ ರಾಜ್ ಕುಮಾರ್ ಈ ವಿಷಯವನ್ನು ಹಂಚಿಕೊಂಡರು. ನಾಲ್ಕು ಕನಸುಗಳಲ್ಲಿ ಪ್ರಭುದೇವ ಅವರ ಜೊತೆ ಡಾನ್ಸ್ ಮಾಡಬೇಕು ಎನ್ನುವುದು ಅಪ್ಪ ಆಸೆ ಆಗಿತ್ತಂತೆ. ಅದನ್ನು ಲಕ್ಕಿ ಮ್ಯಾನ್ ಸಿನಿಮಾದ ಮೂಲಕ ಅಪ್ಪು ಈಡೇರಿಸಿಕೊಂಡಿದ್ದಾರೆ. ಇದನ್ನೂ ಓದಿ:ಎರಡನೇ ಮದುವೆ ವದಂತಿಯ ಬಗ್ಗೆ ಮೇಘನಾ ರಾಜ್ ಸ್ಪಷ್ಟನೆ

    ಹಾಗಾದರೆ, ಅಪ್ಪು ಕಂಡ ಇತರ ಕನಸುಗಳು ಅಂದರೆ, ತಾವು ಸ್ಟಾರ್ ನಟ ಆದ ನಂತರ ತಂದೆಯೊಂದಿಗೆ ನಟಿಸುವ ಆಸೆ ಹೊಂದಿದ್ದರಂತೆ. ಮಣಿರತ್ನಂ ಅವರು ನಿರ್ದೇಶನದಲ್ಲಿ ಕೆಲಸ ಮಾಡಲು ಬಯಸಿದ್ದರಂತೆ ಮತ್ತು ಅಪ್ಪು ಚಿತ್ರಕ್ಕೆ ಎ.ಆರ್.ರೆಹಮಾನ್ ಅವರು ಸಂಗೀತ ನಿರ್ದೇಶನ ಮಾಡಬೇಕು ಎಂದು ಅವರು ಕನಸು ಕಂಡಿದ್ದರು. ಅಲ್ಲದೇ ಪ್ರಭುದೇವ ಅವರ ಜೊತೆ ಡಾನ್ಸ್ ಮಾಡುವಂತಹ ಅವಕಾಶಕ್ಕೆ ಕಾದಿದ್ದರು. ಅದೊಂದು ಇದೀಗ ಈಡೇರಿದೆ.

    Live Tv
    [brid partner=56869869 player=32851 video=960834 autoplay=true]

  • ಶಿವಣ್ಣ -ಪ್ರಭುದೇವ ಹೊಸ ಪ್ರಾಜೆಕ್ಟ್‌ಗೆ ಈ ನಾಯಕಿಯರು ಫಿಕ್ಸ್

    ಶಿವಣ್ಣ -ಪ್ರಭುದೇವ ಹೊಸ ಪ್ರಾಜೆಕ್ಟ್‌ಗೆ ಈ ನಾಯಕಿಯರು ಫಿಕ್ಸ್

    ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಸೌಂಡ್ ಮಾಡುತ್ತಿರುವ `ಗಾಳಿಪಟ -2′ ಸಿನಿಮಾದ ಸಕ್ಸಸ್ ನಂತರ ನಿರ್ದೇಶಕ ಯೋಗರಾಜ್ ಭಟ್, ಶಿವಣ್ಣ ಮತ್ತು ಪ್ರಭುದೇವ ಕಾಂಬಿನೇಷನ್ ಸಿನಿಮಾಗೆ ಡೈರೆಕ್ಷನ್ ಮಾಡಲು ಸಜ್ಜಾಗಿದ್ದಾರೆ. ಈ ಸ್ಟಾರ್ ನಟರಿಗೆ ನಾಯಕಿಯರನ್ನ ಕೂಡ ಯೋಗರಾಜ್ ಭಟ್ ಹುಡುಕಿದ್ದಾರೆ.

    yogaraj bhat (3)ಇತ್ತೀಚೆಗಷ್ಟೇ ಶಿವಣ್ಣ ಮತ್ತು ಪ್ರಭುದೇವ ಕಾಂಬಿನೇಷನ್‌ನಲ್ಲಿ ನಿರ್ದೇಶನ ಮಾಡುವುದಾಗಿ ಭಟ್ರು ಅಧಿಕೃತವಾಗಿ ಹೇಳಿದ್ದರು. ಇದೀಗ ಈ ಸಿನಿಮಾಗಾಗಿ ತೆರೆಮರೆಯಲ್ಲಿ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ. ಶಿವರಾಜ್‌ಕುಮಾರ್ ಮತ್ತು ಪ್ರಭುದೇವ ಚಿತ್ರಕ್ಕೆ ಚಂದನವನದ ಪ್ರತಿಭಾವಂತ ನಾಯಕಿಯರನ್ನೇ ಭಟ್ರು ಹುಡುಕಿದ್ದಾರೆ.

    `ಕುಲದಲ್ಲಿ ಕೀಳ್ಯಾವುದೋ’ ತಾತ್ಕಲಿಕ ಟೈಟಲ್‌ನ ಈ ಚಿತ್ರದಲ್ಲಿ ನಾಯಕಿಯರಾಗಿ ರಾಜಕುಮಾರ ಮತ್ತು ಜೇಮ್ಸ್ ಚಿತ್ರದ ನಾಯಕಿ ಪ್ರಿಯಾ ಆನಂದ್ ಶಿವಣ್ಣಗೆ ಜೋಡಿಯಾಗಿ ಕಾಣಿಸಿಕೊಂಡ್ರೆ, ಇತ್ತ ಪ್ರಭುದೇವಗೆ ನಾಯಕಿಯಾಗಿ ಸಖತ್ ಬ್ಯೂಟಿ ನಿಶ್ವಿಕಾ ನಾಯ್ಡು ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ತಂದೆಯ ಹುಟ್ಟು ಹಬ್ಬದ ನೆನಪಿಗೆ ಹುಟ್ಟೂರಿನ ಆಸ್ಪತ್ರೆಗೆ 50 ಲಕ್ಷ ರೂ. ನೀಡಿದ ಪ್ರಶಾಂತ್ ನೀಲ್

    ಬಿಗ್ ಸ್ಟಾರ್‌ಗಳಿರುವ ಈ ಪ್ರಾಜೆಕ್ಟ್ ಮೇಲೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿಗೆ ನಿರೀಕ್ಷೆಯಿದೆ. ಇದೇ ಆಗಸ್ಟ್ 20ಕ್ಕೆ ಸಿನಿಮಾ ಕೂಡ ಸೆಟ್ಟೇರಲಿದೆ. ಮುಂದಿನ ದಿನಗಳಲ್ಲಿ ಈ ಚಿತ್ರ ಹೇಗೆ ಕಮಾಲ್ ಮಾಡಬಹುದು ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಚಿತ್ರದಲ್ಲಿ ಕನ್ನಡದ ನಟಿ.?

    ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಚಿತ್ರದಲ್ಲಿ ಕನ್ನಡದ ನಟಿ.?

    ಭಾರತೀಯ ಚಿತ್ರರಂಗದ ಮೈಕಲ್ ಜಾಕ್ಸನ್‌ ಎಂದೇ ಖ್ಯಾತಿ ಪಡೆದಿರುವ ಪ್ರಭುದೇವ, ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ದಕ್ಷಿಣದ ನಟಿ ರಮ್ಯಾ ಕೃಷ್ಣ ನಟಿಸಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಮತ್ತೊಂದು ಹಾಟ್ ನ್ಯೂಸ್ ಈಗ ಹೊರಬಿದ್ದಿದೆ. ಪ್ರಭುದೇವ ನಾಯಕನಾಗಿ ಅಭಿನಯಿಸುವ ಚಿತ್ರದಲ್ಲಿ ಕನ್ನಡದ ಸ್ಟಾರ್ ನಾಯಕಿ ಕೂಡ ಬಣ್ಣ ಹಚ್ಚಲಿದ್ದಾರಂತೆ.

    ಇತ್ತೀಚೆಗಷ್ಟೇ ಕನ್ನಡದ ಯೋಗರಾಜ್ ಭಟ್ ಅವರ ಚಿತ್ರದಲ್ಲಿ ನಟಿಸುವುದಾಗಿ ಅನೌನ್ಸ್ ಮಾಡಿದ ಬೆನ್ನಲ್ಲೇ ವಿನು ವೆಂಕಟೇಶ್ ನಿರ್ದೇಶನದ ಬಹುಭಾಷಾ ಚಿತ್ರದಲ್ಲಿ ಪ್ರಭುದೇವ ನಾಯಕನಾಗಿ ನಟಿಸಲು ಸಜ್ಜಾಗಿದ್ದಾರೆ. ಪ್ರಭುದೇವ ಜೊತೆ ಕನ್ನಡದ ಸ್ಟಾರ್ ನಟಿ ಬುಲ್ ಬುಲ್ ಬೆಡಗಿ ರಚಿತಾ ರಾಮ್ ಕೂಡ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ : ಬಾಕ್ಸ್ ಆಫೀಸ್ ಧೂಳಿಪಟ

    ಈ ಚಿತ್ರವು ಸೈನ್ಸ್ ಫಿಕ್ಷನ್ ಜಾನರ್‌ನಲ್ಲಿದ್ದು, 15ನೇ ಶತಮಾನದ ಕಥೆಯನ್ನ ತೆರೆಯ ಮೇಲೆ ತರಲು ನಿರ್ದೇಶಕ ವಿನು ವೆಂಕಟೇಶ್ ಸಜ್ಜಾಗಿದ್ದಾರೆ. ಎಂದೂ ಮಾಡಿರದ ಭಿನ್ನ ಗೆಟಪ್‌ನಲ್ಲಿ ಪ್ರಭುದೇವ ಬಣ್ಣ ಹಚ್ಚಲಿದ್ದಾರೆ. ಎರಡು ಕಾಲಘಟ್ಟದ ಕಥೆಯಲ್ಲಿ ಅದ್ದೂರಿ ಡ್ಯಾನ್ಸ್ ಕೂಡ ಇರಲಿದೆ. ಪ್ರಭುದೇವ ಅವರ ಡ್ಯಾನ್ಸ್ ಜತೆ ರಚಿತಾ ರಾಮ್ ಮೋಡಿ ಹೇಗಿರಲಿದೆ ಎಂಬುದನ್ನ ಕಾದುನೋಡಬೇಕಿದೆ.

  • ಪ್ರಭುದೇವ ನಟನೆಯ ಪ್ಯಾನ್ ಇಂಡಿಯಾ ಚಿತ್ರದಲ್ಲಿ `ಬಾಹುಬಲಿ’ ನಟಿ

    ಪ್ರಭುದೇವ ನಟನೆಯ ಪ್ಯಾನ್ ಇಂಡಿಯಾ ಚಿತ್ರದಲ್ಲಿ `ಬಾಹುಬಲಿ’ ನಟಿ

    ಇಂಡಿಯನ್ ಮೈಕಲ್ ಜಾಕ್ಸನ್ ಅಂತಲೇ ಫೇಮಸ್ ಆಗಿರುವ ಪ್ರಭುದೇವ ಸಂದೇಶ್ ಪ್ರೊಡಕ್ಷನ್ ಸಂಸ್ಥೆಯ ಮೂಲಕ ಮತ್ತೆ ಕನ್ನಡ ಸಿನಿಮಾಗೆ ಬಣ್ಣ ಹಚ್ತಿದ್ದಾರೆ. ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ಸ್ಟಾರ್ ನಟ ಪ್ರಭುದೇವ ಜೊತೆ ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಾ ಕೃಷ್ಣ ಕೂಡ ಕಾಣಿಸಿಕೊಳ್ತಿದ್ದಾರೆ.

     

    View this post on Instagram

     

    A post shared by Sandesh Nagraj (@sandesh_nagaraju)

    ದಕ್ಷಿಣ ಭಾರತದ ಸ್ಟಾರ್ ನಟ ಪ್ರಭುದೇವ ಮತ್ತೆ ಕನ್ನಡ ಸಿನಿಮಾಗೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಸಂದೇಶ್ ಪ್ರೊಡಕ್ಷನ್‌ನ 31ನೇ ಚಿತ್ರ ಇದಾಗಿದ್ದು, ಕನ್ನಡ, ತೆಲುಗಿ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಈ ಚಿತ್ರ ತೆರೆ ಕಾಣಲಿದೆ. `ಬಾಹುಬಲಿ’ ಖ್ಯಾತಿಯ ಶಿವಗಾಮಿ ಅಲಿಯಾಸ್ ನಟಿ ರಮ್ಯಾ ಕೃಷ್ಣ ಕೂಡ ಈ ಚಿತ್ರಕ್ಕೆ ಸಾಥ್ ನೀಡ್ತಿದ್ದಾರೆ. ಪ್ರಭುದೇವ ಜೊತೆ ಪ್ರಮುಖ ಪಾತ್ರಕ್ಕೆ ರಮ್ಯಾ ಕೃಷ್ಣ ಬಣ್ಣ ಹಚ್ಚಲಿದ್ದಾರೆ. ಸಾಕಷ್ಟು ಸ್ಟಾರ್ ಕಲಾವಿದರ ದಂಡೇ ಈ ಚಿತ್ರದಲ್ಲಿರಲಿದೆ. ಇದನ್ನೂ ಓದಿ: ಮಾಲ್ಡೀವ್ಸ್‌ನಲ್ಲಿ ತನ್ನ ಹುಡುಗನ ಜೊತೆ ಕಾಣಿಸಿಕೊಂಡ `ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಚಿನ್ನು

    ವಿನಿ ವೆಂಕಟೇಶ್ ನಿರ್ದೇಶನದ ಚಿತ್ರದಲ್ಲಿ ಡ್ಯಾನ್ಸ್ ಕಿಂಗ್ ಪ್ರಭುದೇವ ಎಂದೂ ಮಾಡಿರದ ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಜುಲೈ 5ರಿಂದ ಶುರುವಾಗಲಿದೆ. ಅಂಡಮಾನ್, ನಿಕೋಬಾರ್, ಬೆಂಗಳೂರು ಸೇರಿದಂತೆ ಹಲವಡೆ ಚಿತ್ರೀಕರಣ ನಡೆಯಲಿದೆ. ಇನ್ನು ಸದ್ಯದಲ್ಲೇ ಚಿತ್ರದ ಟೈಟಲ್ ಕೂಡ ರಿವೀಲ್ ಮಾಡಲಿದೆ ಚಿತ್ರತಂಡ.

  • ರೈತನ ಮಗ ಈಗ ಕೆಪಿಎಸ್‍ಸಿ ಸದಸ್ಯ

    ರೈತನ ಮಗ ಈಗ ಕೆಪಿಎಸ್‍ಸಿ ಸದಸ್ಯ

    ಬೆಂಗಳೂರು: ರೈತ ಕುಟುಂಬದಲ್ಲಿ ಹುಟ್ಟಿ, ಉತ್ತಮ ಶಿಕ್ಷಣ ಪಡೆದು, ವಿದೇಶದಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿದ ಪಿಹೆಚ್‍ಡಿ ಪದವೀಧರ, ಪ್ರಸ್ತುತ ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಡಾ. ಬಿ. ಪ್ರಭುದೇವ್ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ.

    ಡಾ. ಬಿ. ಪ್ರಭುದೇವ್ ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮದವರು. ದಿ. ಬಸವೇಗೌಡ ಹಾಗೂ ದಿ. ಕೆಂಪಮ್ಮ ಅವರ ಪುತ್ರ ಡಾ. ಪ್ರಭುದೇವ್ ಪಾಂಡವಪುರದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಮೈಸೂರಿನ ಮರಿಮಲ್ಲಪ್ಪ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದಾರೆ.

    ಮಂಡ್ಯ ಜಿಲ್ಲೆಯ ಪಿಇಎಸ್ ಕಾಲೇಜಿನಲ್ಲಿ ಬಿ.ಇ. ಪದವಿ, ಮೈಸೂರಿನ ವಿವಿಯಲ್ಲಿ ವ್ಯವಹಾರ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪಿಹೆಚ್‍ಡಿ ಪದವಿ ಪಡೆದರು.

    ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು ಕನ್ನಡ ಮಾಧ್ಯಮದಲ್ಲಿ ಕರ್ನಾಟಕ ಆಡಳಿತ ಸೇವೆ ಪರೀಕ್ಷೆ ಬರೆದಿರುವ ಇವರು ವಾಣಿಜ್ಯ ತೆರಿಗೆ ಅಧಿಕಾರಿಯಾಗಿ, ಪ್ರವಾಸೋಧ್ಯಮ ಅಭಿವೃದ್ಧಿ ನಿಗಮ, ಕರಕುಶಲ ಅಭಿವೃದ್ಧಿ ನಿಗಮ, ಹಟ್ಟಿ ಚಿನ್ನದ ಗಣಿ, ಪರಿಸರ ಪ್ರವಾಸೋದ್ಯಮ ನಿಗಮಗಳಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

    ಅಮೆರಿಕದ ಡೆಟ್ರಾಯಿಟ್ ನಲ್ಲಿರುವ ಫೋರ್ಡ್ ಮೋಟಾರ್ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿ, ಶ್ಲಾಘನಾ ಪತ್ರವನ್ನೂ ಪಡೆದಿದ್ದಾರೆ. ಎ.ಎಸ್.ಕ್ಯೂ. ಸಂಸ್ಥೆಯಿಂದ ಸರ್ಟಿಫೈಡ್ ಕ್ವಾಲಿಟಿ ಇಂಜಿನಿಯರ್ ವಿಷಯದಲ್ಲಿ ಪರಿಣಿತಿಯನ್ನೂ ಹೊಂದಿದ್ದಾರೆ. ಅಮೆರಿಕದ ಕನ್ನಡ ಕೂಟಗಳ ಆಗರ, ಒಕ್ಕಲಿಗ ಪರಿಷತ್ ಆಗರ, ಉತ್ತರ ಅಮೇರಿಕದ ವೀರಶೈವ ಸಮಾಜ ಆಗರ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

    ಪ್ರಸ್ತುತ ಕೌಶಲ್ಯಾಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಬಿ. ಪ್ರಭುದೇವ್ ಅವರನ್ನು ರಾಜ್ಯ ಸರ್ಕಾರ ಕೆಪಿಎಸ್‍ಸಿ ಸದಸ್ಯರನ್ನಾಗಿ ನೇಮಿಸಿದೆ.

  • ನನ್ನ ದೊಡ್ಡಣ್ಣನೊಂದಿಗೆ ಇದ್ದಿದ್ದು ತುಂಬಾ ಖುಷಿ ತಂದಿದೆ: ಸುದೀಪ್

    ನನ್ನ ದೊಡ್ಡಣ್ಣನೊಂದಿಗೆ ಇದ್ದಿದ್ದು ತುಂಬಾ ಖುಷಿ ತಂದಿದೆ: ಸುದೀಪ್

    ಬೆಂಗಳೂರು: ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕನ್ನಡ ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ವೇದಿಕೆಗೆ ಎಂಟ್ರಿ ಕೊಟ್ಟಿದ್ದರು. ಹೀಗಾಗಿ ನನ್ನ ದೊಡ್ಡಣ್ಣನೊಂದಿಗೆ ಇದ್ದಿದ್ದು ನನಗೆ ತುಂಬಾ ಖುಷಿಯಾಗಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

    ಹೌದು…ಶನಿವಾರ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಹಿಂದಿ ಬಿಗ್‍ಬಾಸ್ ವೇದಿಕೆಯಿಂದ ನಟ ಸಲ್ಮಾನ್ ಖಾನ್ ಕನ್ನಡ ಬಿಗ್‍ಬಾಸ್ ಶೋನಲ್ಲಿ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಈ ಬಗ್ಗೆ ಸುದೀಪ್ ಟ್ವೀಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

    “ಬಿಗ್‍ಬಾಸ್ ವೇದಿಕೆಯಿಂದ ಸಲ್ಮಾನ್ ಖಾನ್ ಸರ್ ಅವರನ್ನು ಸಂಪರ್ಕಿಸಲಾಗಿತ್ತು. ನಿಜಕ್ಕೂ ಹಿಂದಿ ಬಿಗ್‍ಬಾಸ್ ವೇದಿಕೆಯಿಂದ ಕನ್ನಡ ಬಿಗ್‍ಬಾಸ್‍ಗೆ ಇದೇ ಮೊದಲ ಬಾರಿಗೆ ವಿಡಿಯೋ ಕಾಲ್ ಬಂದಿತ್ತು. ಅದರಲ್ಲೂ ನನ್ನ ದೊಡ್ಡಣ್ಣನೊಂದಿಗೆ ಇದ್ದಿದ್ದು ನನಗೆ ತುಂಬಾ ಖುಷಿ ತಂದಿದೆ. ‘ದಬಾಂಗ್3’ ಸಿನಿಮಾ ಯಾವಾಗಲು ನನಗೆ ಬಹಳ ವಿಶೇಷವಾಗಿರುತ್ತದೆ” ಎಂದು ಬರೆದುಕೊಂಡಿದ್ದಾರೆ.

    ಸಲ್ಮಾನ್ ಖಾನ್ ಜೊತೆಗೆ ಪ್ರಭುದೇವ, ಸೋನಾಕ್ಷಿ ಸಿನ್ಹಾ ಕೂಡ ವಿಡಿಯೋ ಕಾಲ್ ಮೂಲಕ ಕನ್ನಡ ಬಿಗ್‍ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಸಲ್ಮಾನ್ ಖಾನ್ ಸುದೀಪ್ ಬಳಿ ಕನ್ನಡವನ್ನು ಹೇಳಿಸಿಕೊಂಡು ಮಾತನಾಡಿದ್ದಾರೆ. ಜೊತೆಗೆ ಸುದೀಪ್ ಅವರನ್ನು ಹೊಗಳಿದ್ದಾರೆ.

    ಸಲ್ಮಾನ್ ಖಾನ್ ಮತ್ತು ಸುದೀಪ್ ‘ದಬಾಂಗ್3’ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಸಲ್ಲು ಮುಂದೆ ವಿಲನ್ ಆಗಿ ಸುದೀಪ್ ಅಬ್ಬರಿಸಿದ್ದಾರೆ. ಸಿನಿಮಾದ ಪ್ರಚಾರಕ್ಕೆ ಬಿಗ್‍ಬಾಸ್ ವೇದಿಕೆಯ ಮೇಲೆ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಪ್ರಭುದೇವ ಅವರು ನಿರ್ದೇಶನ ಮಾಡಿದ್ದು, ಇದೇ ಡಿಸೆಂಬರ್ 20 ರಂದು ತೆರೆಗೆ ಬರುತ್ತಿದೆ. ವಿಶೇಷ ಎಂದರೆ ಈ ಚಿತ್ರ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ.

  • ಪ್ರಭುದೇವ ಜೊತೆ ಡ್ಯಾನ್ಸ್ ಕಲಿತ ಸಲ್ಮಾನ್, ಸುದೀಪ್: ವಿಡಿಯೋ ನೋಡಿ

    ಪ್ರಭುದೇವ ಜೊತೆ ಡ್ಯಾನ್ಸ್ ಕಲಿತ ಸಲ್ಮಾನ್, ಸುದೀಪ್: ವಿಡಿಯೋ ನೋಡಿ

    ಮುಂಬೈ: ಸ್ಯಾಂಡಲ್‍ವುಡ್ ಕಿಚ್ಚ ಸುದೀಪ್ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಹಾಗೂ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋವನ್ನು ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ಪ್ರಭುದೇವ ನಿರ್ದೇಶನದ ‘ದಬಾಂಗ್-3’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಸಲ್ಮಾನ್ ಖಾನ್, ಸುದೀಪ್ ಹಾಗೂ ನಿರ್ಮಾಪಕ ಸಾಜಿದ್ ನದಿಯಾವಾಲಾ ನಿರ್ದೇಶಕ ಪ್ರಭುದೇವ ಜೊತೆ ಸೂಪರ್ ಹಿಟ್ ‘ಊರ್ವಶಿ’ ಹಾಡಿಗೆ ಡ್ಯಾನ್ಸ್ ಕಲಿತಿದ್ದಾರೆ.

    ಸಲ್ಮಾನ್ ಖಾನ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿ ಅದಕ್ಕೆ, “ಮಾಸ್ಟರ್ ಪ್ರಭುದೇವ ಜೊತೆ ಡ್ಯಾನ್ಸ್ ಕ್ಲಾಸ್” ಎಂದು ಬರೆದು ಕಿಚ್ಚ ಸುದೀಪ್ ಹಾಗೂ ಸಾಜಿದ್ ನದಿಯಾವಾಲಾ ಅವರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರು ಕೂಡ ಈ ವಿಡಿಯೋವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.

     

    View this post on Instagram

     

    Dance class from the master himself . . Prabhu Deva @kichchasudeepa @wardakhannadiadwala

    A post shared by Salman Khan (@beingsalmankhan) on

    ಸುದೀಪ್ ದಬಾಂಗ್ 3 ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಲಿದ್ದು, ಈ ಪಾತ್ರ ಹೀರೋ ಪಾತ್ರಕ್ಕೆ ಇರುವಷ್ಟೇ ಸಮಾನ ಪ್ರಾಮುಖ್ಯತೆಯನ್ನು ಹೊಂದಿದೆ. ಚಿತ್ರದಲ್ಲಿ ಗೂಂಡಾ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಲ್ಮಾನ್ ಖಾನ್ ಮತ್ತು ಅರ್ಬಾಜ್ ಖಾನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

     

    View this post on Instagram

     

    The master Prabhu sir himslef …. .. What a moment.

    A post shared by kicchasudeep (@kichchasudeepa) on

    ಸುದೀಪ್ ಈ ಹಿಂದೆ, ಬಿಸಿಲ ಶೆಕೆ ಜೋರಾಗಿದ್ದರೂ ಅದು ಸೆಟ್‍ನಲ್ಲಿ ಇರುವ ಉತ್ಸಾಹವನ್ನು ಕುಗ್ಗಿಸಲು ಆಗಲ್ಲ. ಇದು ರೋಮಾಂಚಕ ದಿನ, ಅದ್ಭುತ ತಂಡ, ಅದ್ಭುತ ಜನ. ಹಾಗೆಯೇ ಇಲ್ಲಿರುವ ಮನಮೋಹಕ ಜಿಮ್ ಒಂದು ರೀತಿ ಬೋನಸ್ ಸಿಕ್ಕ ಹಾಗೆ. ದಬಾಂಗ್ 3 ಚಿತ್ರದ ಮೊದಲ ದಿನ ಖುಷಿ ಖುಷಿಯಾಗಿ ಆರಂಭವಾಗಿದೆ. ನನಗೆ ನನ್ನ ಮನೆಯಲ್ಲಿದ್ದೇನೆ ಎನ್ನುವ ರೀತಿ ನೋಡಿಕೊಳ್ಳುತ್ತಿರುವುದಕ್ಕೆ ಸಲ್ಮಾನ್ ಖಾನ್ ಸರ್ ಗೆ ಧನ್ಯವಾದಗಳು ಎಂದು ಬರೆದು ಸಲ್ಮಾನ್ ಖಾನ್ ಹಾಗೂ ದಬಾಂಗ್- 3ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.

  • ಮಿನರ್ವ ಮಿಲ್‍ಗೆ ಬಾರದವರು ಮುಂಬೈಗೆ ಬರಲು ಸಾಧ್ಯವೇ – ರಕ್ಷಿತಾ ಕಾಲೆಳೆದ ಸುದೀಪ್

    ಮಿನರ್ವ ಮಿಲ್‍ಗೆ ಬಾರದವರು ಮುಂಬೈಗೆ ಬರಲು ಸಾಧ್ಯವೇ – ರಕ್ಷಿತಾ ಕಾಲೆಳೆದ ಸುದೀಪ್

     ಬೆಂಗಳೂರು: ದಬಾಂಗ್ 3 ಚಿತ್ರದಲ್ಲಿ ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಜೊತೆ ಕಿಚ್ಚ ಸುದೀಪ್ ನಟಿಸುತ್ತಿದ್ದು, ಸೆಟ್ ಗೆ ನಿರ್ದೇಶಕ ಪ್ರೇಮ್ ಅವರನ್ನು ಕರೆ ತಂದಿದ್ದಕ್ಕೆ ನಟಿ ರಕ್ಷಿತಾ ಕಿಚ್ಚನ ಕಾಲೆಳೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವ ಮೂಲಕ ಸುದೀಪ್ ಅವರು ರಕ್ಷಿತಾ ಕಾಲೆಳೆದಿದ್ದಾರೆ.

    ನೀವು ಪ್ರೇಮ್ ಅವರನ್ನು ಮಾತ್ರ ಸೆಟ್ ಗೆ ಕರೆದಿದ್ದೀರಿ ನನ್ನನ್ನು ಯಾಕೆ ಕರೆದಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಸುದೀಪ್ ಕಾಲೆಳೆದಿದ್ದಾರೆ. ಈ ಟ್ವೀಟ್ ಗೆ ಕಿಚ್ಚ ಕೂಡ ರೀಟ್ವೀಟ್ ಮಾಡಿ ತಮಾಷೆಯಾಡಿದ್ದಾರೆ.

    ರಕ್ಷಿತಾ ಹೇಳಿದ್ದೇನು?:
    ಗೆಳೆಯ ಕಿಚ್ಚ ಸುದೀಪ್ ಅವರು ನನ್ನ ನೆಚ್ಚಿನ ನಟ ಸಲ್ಮಾನ್ ಖಾನ್ ಜೊತೆ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಸೆಟ್ ಗೆ ಪ್ರೇಮ್ ಅವರನ್ನು ಆಹ್ವಾನಿಸಿದ್ದಾರೆ. ಆದರೆ ನನ್ನ ಮಾತ್ರ ಕರೆದಿಲ್ಲ. ನಿಮಗೆ ನಾನೇನು ಮಾಡಿದ್ದೇನೆ ಎಂದು ಹೇಳಿ. ನಾನು ಅಳುತ್ತಿದ್ದೇನೆ. ಆದರೂ ಒಬ್ಬಳು ಒಳ್ಳೆಯ ಗೆಳತಿಯಾಗಿ ಚಿತ್ರಕ್ಕೆ ಶುಭ ಹಾರೈಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಸುದೀಪ್ ಪ್ರತಿಕ್ರಿಯೆ:
    ಪತಿ ನಿದೇರ್ಶಿಸಿದ್ದ ವಿಲನ್ ಚಿತ್ರ 2 ವರ್ಷ ಶೂಟಿಂಗ್ ನಡೆದಿದ್ದ ಸಂದರ್ಭದಲ್ಲಿ ನನ್ನ ನಟನೆ ನೋಡಲು ಒಮ್ಮೆಯೂ ಶೂಟಿಂಗ್ ಸೆಟ್ ಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಚಂದ್ರ ಲೇಔಟಿನಿಂದ ಮಿನರ್ವ ಮಿಲ್ ಗೆ ಬಾರದೇ ಇದ್ದವರು ಇನ್ನು ಮುಂಬೈಗೆ ಬರಲು ಸಾಧ್ಯವೇ ಎಂದು ಪ್ರಶ್ನಿಸಿದ ಕಿಚ್ಚ, ಹೀಗಾಗಿ ಸುಮ್ನೆ ನಿಮಗೆ ತೊಂದರೆ ಯಾಕೆ ಎಂದು ಸೆಟ್ ಗೆ ಆಹ್ವಾನಿಸಿಲ್ಲ ಎಂದು ತಮಾಷೆಯಾಡಿದ್ದಾರೆ.

    ಸಲ್ಲುಗೆ ಕಿಚ್ಚ ಧನ್ಯವಾದ:
    ಸಿನಿಮಾ ಸೆಟ್ ನಲ್ಲಿ ತನ್ನ ಉಪಚರಿಸಿದ ಸಲ್ಮಾನ್ ಖಾನ್ ಗೆ ಕಿಚ್ಚ ಸುದೀಪ್ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ, ಬಿಸಿಲ ಬೇಗೆ ಜಾಸ್ತಿ ಇದ್ದರೂ ಸೆಟ್‍ನಲ್ಲಿ ಉತ್ಸಾಹದ ಮೇಲೆ ಅದು ಪ್ರಭಾವ ಬೀರಿಲ್ಲ. ಇದು ರೋಮಾಂಚಕ ದಿನ, ಅದ್ಭುತ ತಂಡ, ಅತ್ಯದ್ಭುತ ಜನ. ಹಾಗೆಯೇ ಇಲ್ಲಿರುವ ಮನಮೋಹಕ ಜಿಮ್ ಒಂದು ರೀತಿ ಬೋನಸ್ ಸಿಕ್ಕ ಹಾಗೆ. ದಬಾಂಗ್ 3 ಚಿತ್ರದ ಮೊದಲ ದಿನ ಖುಷಿ ಖುಷಿಯಾಗಿ ಆರಂಭವಾಗಿದೆ. ನನಗೆ ನನ್ನ ಮನೆಯಲ್ಲಿದ್ದೇನೆ ಎನ್ನುವ ರೀತಿ ನೋಡಿಕೊಳ್ಳುತ್ತಿರುವುದಕ್ಕೆ ಸಲ್ಮಾನ್ ಖಾನ್ ಸರ್ ಗೆ ಧನ್ಯವಾದಗಳು ಎಂದು ಬರೆದುಕೊಂಡು ಸಲ್ಮಾನ್ ಖಾನ್ ಹಾಗೂ ದಬಾಂಗ್ 3ಗೆ ಟ್ಯಾಗ್ ಮಾಡಿದ್ದಾರೆ.

    ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ `ರಕ್ತ ಚರಿತ್ರ 2’ರ ನಂತರ ಸುದೀಪ್ ಹಿಂದಿ ಚಿತ್ರರಂಗಕ್ಕೆ ಹಿಂದಿರುಗುವುದಕ್ಕೆ ದಬಾಂಗ್ 3 ಒಳ್ಳೆಯ ಅವಕಾಶ ನೀಡಿದೆ. ವರದಿಗಳ ಪ್ರಕಾರ, ಸುದೀಪ್ ಕಾಪ್-ಆಕ್ಷನ್‍ನ 3ನೇ ಕಂತಿನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, ಇದನ್ನು ಪ್ರಭುದೇವ್ ನಿರ್ದೇಶಿಸಲಿದ್ದಾರೆ.

  • ದಿಗ್ಗಜರಿಗೆ ರಾಷ್ಟ್ರಪತಿಗಳಿಂದ ಪದ್ಮ ಗೌರವ ಪ್ರದಾನ

    ದಿಗ್ಗಜರಿಗೆ ರಾಷ್ಟ್ರಪತಿಗಳಿಂದ ಪದ್ಮ ಗೌರವ ಪ್ರದಾನ

    ನವದೆಹಲಿ: ನಟ ಮೋಹನ್‍ಲಾಲ್, ನಟ ಮತ್ತು ನೃತ್ಯ ನಿರ್ದೇಶಕ ಪ್ರಭುದೇವ ಹಾಗೂ ಗಾಯಕ, ಸಂಗೀತ ನಿರ್ದೇಶಕ ಶಂಕರ್ ಮಹಾದೇವನ್ ಸೇರಿದಂತೆ 56 ಮಂದಿ ಸಾಧಕರಿಗೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

    ಈ ಬಾರಿ ಪದ್ಮ ಪ್ರಶಸ್ತಿಗೆ ಒಟ್ಟು 112 ಮಂದಿ ಸಾಧಕರು ಆಯ್ಕೆಯಾಗಿದ್ದರು. ಅವರಲ್ಲಿ ಇಂದು 56 ಮಂದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. 112 ಮಂದಿಯಲ್ಲಿ ಸಾಧಕರಲ್ಲಿ 94 ಗಣ್ಯರಿಗೆ ಪದ್ಮಶ್ರೀ, 14 ಗಣ್ಯರಿಗೆ ಪದ್ಮಭೂಷಣ, ನಾಲ್ವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ಪ್ರಕಟಿಸಲಾಗಿತ್ತು. ಅವರಲ್ಲಿ 21 ಮಹಿಳೆಯರು ಹಾಗೂ ಇಬ್ಬರು ತೃತೀಯ ಲಿಂಗಿ ಕೂಡ ಸೇರಿದ್ದಾರೆ.

    ಸಮಾಜ ಸೇವಕಿ ಸಾಲುಮರದ ತಿಮ್ಮಕ್ಕ, ಪುರಾತತ್ವ ಶಾಸ್ತ್ರಜ್ಞೆ ಶಾರದಾ ಶ್ರೀನಿವಾಸನ್, ನಟ- ಗಾಯಕ ರಾಜೀವ ತಾರನಾಥ್, ನಟ- ನೃತ್ಯ ನಿರ್ದೇಶಕ ಪ್ರಭುದೇವ ಸೇರಿ ಐದು ಮಂದಿ ಕರ್ನಾಟಕದ ಸಾಧಕರು ಕೂಡ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಅವರಲ್ಲಿ ಇಂದು ಪ್ರಭುದೇವ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗಿದ್ದು, ಇನ್ನುಳಿದ ಗಣ್ಯರಿಗೆ ಮಾರ್ಚ್ 16ರಂದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

    ಸಂಗೀತ ಲೋಕದಲ್ಲಿ ತನ್ನದೆ ಚಾಪು ಮೂಡಿಸಿರುವ ಶಂಕರ್ ಮಹಾದೇವನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ, ನೃತ್ಯ ಮತ್ತು ನಟನೆಯಲ್ಲಿ ಹೆಸರು ಮಾಡಿರುವ, ಭಾರತದ ಮೈಕಲ್ ಜ್ಯಾಕ್ಸನ್ ಎಂದೇ ಪ್ರಸಿದ್ಧಿಯಾಗಿರುವ ಪ್ರಭುದೇವ ಅವರಿಗೂ ಕೂಡ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ಮಾಲಿವುಡ್‍ನ ಖ್ಯಾತ ನಟ ಮೋಹನ್‍ಲಾಲ್ ಅವರಿಗೆ ಭಾರತದ ಮೂರನೇಯ ಉನ್ನತ ಪ್ರಜೆ ಪ್ರಶಸ್ತಿಯಾದ ಪದ್ಮಭೂಷಣ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೆಯೇ ನಟ ಕೇದಾರ್ ಖಾನ್ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

    ಈ ಬಗ್ಗೆ ಮೋಹನ್‍ಲಾಲ್ ಅವರು ಪ್ರತಿಕ್ರಿಯಿಸಿ, ಇಂತಹ ಗೌರವಾನ್ವಿತ ಪ್ರಶಸ್ತಿಯನ್ನು ಪಡೆಯಲು ನಿಜಕ್ಕೂ ಹೆಮ್ಮೆಯಾಗುತ್ತಿದೆ. 41 ವರ್ಷದಿಂದ ನಾನು ಚಿತ್ರರಂಗದಲ್ಲಿ ಇದ್ದೇನೆ. ಇದರ ಎಲ್ಲಾ ಪ್ರಶಂಸೆ ನನ್ನ ಈ ಸಾಧನೆಯ ಪ್ರಯಾಣದಲ್ಲಿ ಬೆಂಬಲವಾಗಿ ನಿಂತ ನನ್ನ ಸಹೋದ್ಯೋಗಿಗಳು ಹಾಗೂ ನನ್ನ ಕುಟುಂಬಕ್ಕೆ ಸಲ್ಲಬೇಕು ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.

    ಪ್ರಭುದೇವ ಅವರು, ಈ ಪ್ರಶಸ್ತಿ ನಿಮ್ಮಿಂದ ನನಗೆ ಲಭಿಸಿದೆ. ಇದರ ಎಲ್ಲಾ ಪ್ರಶಂಸೆ ನಿಮಗೇ ಸಲ್ಲಬೇಕು. ಲವ್ ಯು ಆಲ್ ನಿಮ್ಮ ಅಭಿಮಾನಕ್ಕೆ ಧನ್ಯವಾದ ಎಂದು ಬರೆದು ಪದ್ಮಶ್ರೀ ಪ್ರಶಸ್ತಿಯೊಂದಿಗೆ ತಾವು ತೆಗೆಸಿಕೊಂಡ ಫೋಟೋವನ್ನು ಹಾಕಿ ಅಭಿಮಾನಿಗಳಿಗೆ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ.

    ಬಹುತೇಕ ನಾನು ರಚಿಸಿರುವ ಹಾಡುಗಳಿಗೆ ನನ್ನ ಸ್ನೇಹಿತರಾದ ಎಹ್ಸಾನ್ ಮತ್ತು ಲಾಯ್ ಅವರು ಕೂಡ ಶ್ರಮಿಸಿದ್ದಾರೆ. ಆದರಿಂದ ಅವರಿ ಒಬ್ಬರೂ ಕೂಡ ಈ ಪ್ರಶಸ್ತಿಗೆ ಪಾಲುದಾರರು ಎಂದು ಶಂಕರ್ ಮಹಾದೇವನ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv