Tag: Prabhu chawan

  • ಸೋಯಾ ಬೀಜ ಸಿಗದಿದ್ದಕ್ಕೆ ಕೃಷಿ ಅಧಿಕಾರಿಯನ್ನು ಗೇಟಿಗೆ ಕಟ್ಟಿ ಹಾಕಿದ ರೈತರು

    ಸೋಯಾ ಬೀಜ ಸಿಗದಿದ್ದಕ್ಕೆ ಕೃಷಿ ಅಧಿಕಾರಿಯನ್ನು ಗೇಟಿಗೆ ಕಟ್ಟಿ ಹಾಕಿದ ರೈತರು

    ಬೀದರ್: ಸಚಿವ ಪ್ರಭು ಚವ್ಹಾಣ್ ಉಸ್ತುವಾರಿ ವಹಿಸಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ರೈತರು, ನಾಟಿ ಮಾಡಲು ಸೋಯಾ ಬೀಜ ಸಿಗದಿದ್ದಕ್ಕೆ ನೊಂದು ಕೃಷಿ ಅಧಿಕಾರಿಯನ್ನು ರೈತ ಸಂಪರ್ಕ ಕೇಂದ್ರದ ಗೇಟಿಗೆ ಕಟ್ಟಿ ಹಾಕಿ ಆಕ್ರೋಶ ಹೊರಹಾಕಿದ್ದಾರೆ.

    ಬೀದರ್‍ನ ರೈತರು ನಾಟಿ ಮಾಡಲು ಬೀಜ ಸಿಗದೆ ನೊಂದು ಹೋಗಿದ್ದಾರೆ. ಕಳೆದ ಒಂದು ವಾರದಿಂದ ಔರಾದ್ ತಾಲೂಕಿನ ರೈತ ಸಂಪರ್ಕ ಕೇಂದ್ರಕ್ಕೆ ಬಿತ್ತನೆ ಬೀಜಕ್ಕಾಗಿ ಕುಗ್ರಾಮಗಳ ಹಾಗೂ ತಾಂಡಾದ ರೈತರು ಅಲೆದು ಅಲೆದು ಸುಸ್ತಾಗಿ ಹೋಗಿದ್ದಾರೆ. ಇದರಿಂದ ಆಕ್ರೋಶಗೊಂಡು ಇಂದು ಬೀಜ ಸಿಗದಿದಕ್ಕೆ ರೈತರು ಅಧಿಕಾರಿಯನ್ನು ಗೇಟಿಗೆ ಕಟ್ಟಿ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಅಪರೂಪದ ನೀಲ್‍ಗಾಯ್ ಪ್ರತ್ಯಕ್ಷ- ರೈತರಲ್ಲಿ ಆತಂಕ

    ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಭೀಮರಾವ್ ಶಿಂಧೆಯನ್ನು ಗೇಟಿಗೆ ಕಟ್ಟಿ ಹಾಕಿ ರೈತರು ಬೀತ್ತನೆ ಬೀಜಕ್ಕಾಗಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಮೊದಲೇ ಕೋವಿಡ್ ನಿಂದ ಸಂಕಷ್ಟ ಅನುಭವಿಸುತ್ತಿರುವ ರೈತರು, ಕೃಷಿ ಅಧಿಕಾರಿಗಳ ಮಹಾ ನಿರ್ಲಕ್ಷ್ಯಕ್ಕೆ ಬೇಸತ್ತು ಹೋಗಿ ಅಧಿಕಾರಿಗಳ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

  • ನೀವಾದ್ರೂ ರೆಮ್‍ಡಿಸಿವರ್ ಇಂಜೆಕ್ಷನ್ ಕೊಡಿಸಿ- ಸಚಿವರ ಮುಂದೆ ರೋಗಿ ಸಂಬಂಧಿಯ ಅಳಲು

    ನೀವಾದ್ರೂ ರೆಮ್‍ಡಿಸಿವರ್ ಇಂಜೆಕ್ಷನ್ ಕೊಡಿಸಿ- ಸಚಿವರ ಮುಂದೆ ರೋಗಿ ಸಂಬಂಧಿಯ ಅಳಲು

    – 30 ಸಾವಿರ ಹಣ ಕೊಡ್ತೀನಿ, ಇಂಜೆಕ್ಷನ್ ನೀಡಿ

    ಬೀದರ್: ಜಿಲ್ಲೆಯಲ್ಲಿ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿದ್ದ ವ್ಯಕ್ತಿಯೊಬ್ಬರಿಗೆ ರೆಮ್‍ಡಿಸಿವರ್ ಇಂಜೆಕ್ಷನ್ ಸಿಗದೆ ಕಷ್ಟಪಡುತ್ತಿರುವುದರ ಕುರಿತು ರೋಗಿಯ ಸಂಬಂಧಿಯೊಬ್ಬರು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಮುಂದೆ ಕೈಮುಗಿದು ಅಳಲು ತೋಡಿಕೊಂಡಿದ್ದಾರೆ.

    ತೀವ್ರವಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಬೀದರ್ ಜಿಲ್ಲೆಯ ಚಿಟ್ಟಗುಪ್ಪ ತಾಲೂಕಿನ ಕಾರಕಾರಪಳ್ಳಿಯ ಪ್ರದೀಪ್ ಎಂಬ ವ್ಯಕ್ತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರದೀಪ್ ಅವರ ಕೊರೊನಾ ವರದಿ ನೆಗೆಟಿವ್ ಇದ್ದರು ಉಸಿರಾಟದ ಸಮಸ್ಯೆ ದಿನೇ ದಿನೇ ತೀವ್ರವಾಗುತ್ತಿದೆ. ಹೀಗಾಗಿ ಇಂದು ರೆಮ್‍ಡಿಸಿವರ್ ಇಂಜೆಕ್ಷನ್ ಸಿಗುತ್ತಿಲ್ಲಾ. ನಾನು ರೆಮ್‍ಡಿಸಿವರ್ ಇಂಜೆಕ್ಷನ್ ಗಾಗಿ 30 ಸಾವಿರ ಹಣ ಇಟ್ಟುಕೊಂಡು ಓಡಾಡುತ್ತಿದ್ದೇನೆ ಆದರೂ ಸಿಗುತ್ತಿಲ್ಲಾ. ನೀವಾದ್ರೂ ಇಂಜೆಕ್ಷನ್ ಕೊಡಿಸಿ ಎಂದು ಪ್ರಭು ಚವ್ಹಾಣ್ ಗೆ ಕೈಮುಗಿದು 30 ಸಾವಿರ ರೂಪಾಯಿಯ ಹಣದ ಕಂತೆಯನ್ನು ರೋಗಿಯ ಸಂಬಂಧಿ ತೋರಿಸಿದ್ದಾರೆ.

    ಕೂಡಲೇ ಪ್ರಭು ಚವ್ಹಾಣ್ ಅವರು ಜಿಲ್ಲಾಡಳಿತಕ್ಕೆ ತಿಳಿಸಿ ಇಂಜೆಕ್ಷನ್ ಕೊಡಿಸುತ್ತೇನೆ ಎಂದು ಸಮಾಧಾನ ಪಡಿಸಿದರು. ಎಲ್ಲರೂ ಕೂಡ ಹೀಗೆ ಹೇಳುತ್ತಿದ್ದಾರೆ. ನೀವಾದರೂ ಸಮಸ್ಯೆ ಬಗೆಹರಿಸಿ ಎಂದು ಸಚಿವರೊಂದಿಗೆ ರೋಗಿಯ ಸಂಬಂಧಿ ಮನವಿ ಮಾಡಿಕೊಂಡಿದ್ದಾರೆ.

    ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರತೀಶ್ ಕುಮಾರ್, ಇದನ್ನೆಲ್ಲಾ ಗಮನಿಸುತ್ತಿದ್ದಂತೆ ಗಡಿ ಜಿಲ್ಲೆ ಬೀದರ್ ನಲ್ಲಿ ರೆಮಿಡಿಸಿವರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆಯಾ? ಎಂಬ ಅನುಮಾನ ಕೂಡ ಕಾಡತೊಡಗುತ್ತಿದೆ. 25 ರಿಂದ 30 ಸಾವಿರಕ್ಕೆ ರೆಮಿಡಿಸಿವರ್ ಇಂಜೆಕ್ಷನ್ ಮಾರಾಟವಾಗುತ್ತಿದ್ದು, ಇದೊಂದು ದೊಡ್ಡ ಮೆಡಿಕಲ್ ಮಾಫಿಯಾ ಆಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಪ್ರತಿಯೊಂದು ರೋಗಿಗಳು ಹಣ ಹಿಡಿದು ಕೊಂಡು ಇಂಜೆಕ್ಷನ್ ಗಾಗಿ ಓಡಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

  • ಕೋವಿಡ್ ಸೋಂಕಿತರ ನರಳಾಟ ಸುಳ್ಳು, ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ- ಪ್ರಭು ಚೌವ್ಹಾಣ್

    ಕೋವಿಡ್ ಸೋಂಕಿತರ ನರಳಾಟ ಸುಳ್ಳು, ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ- ಪ್ರಭು ಚೌವ್ಹಾಣ್

    ಯಾದಗಿರಿ: ಕೋವಿಡ್ ಸೋಂಕಿತರ ನರಳಾಟ ಸುಳ್ಳು. ರಾಜ್ಯದಲ್ಲಿ ಆಕ್ಸಿಜನ್ ಮತ್ತು ಇಂಜೆಕ್ಷನ್ ಸಮಸ್ಯೆ ಇಲ್ಲ, ಬೀದರ್ ಪ್ರಕರಣಗಳು ಸಹ ಸುಳ್ಳು. ಮನೆಯಲ್ಲಿ ಕುಳಿತು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಪಶು ಸಂಗೋಪನಾ ಸಚಿವರಾದ ಪ್ರಭು ಚೌವ್ಹಾಣ್ ಹೇಳಿಕೆ ನೀಡಿದ್ದಾರೆ.

    ಯಾದಗಿರಿಯ ಜಿ.ಪಂ ಸಭಾಂಗಣದಲ್ಲಿ ಮಾತನಾಡಿದ ಪ್ರಭು ಚೌವ್ಹಾಣ್ ಅವರು, ರಾಜ್ಯ ಸರ್ಕಾರದ ವಿಫಲತೆ ಸುದ್ದಿಗಳು ಸುಳ್ಳು. ಕಾಂಗ್ರೆಸ್ ಪಕ್ಷ ಏನು ಅಂತ ರಾಜ್ಯದ ಜನರಿಗೆ ಗೊತ್ತಿದೆ, ಅವರು ಮನೆಯಲ್ಲಿ ಖಾಲಿ ಕುಳಿತು ಏನು ಬೇಕಾದರೂ ಮಾತನಾಡುತ್ತಾರೆ. ಅವರದ್ದು ಮಾತನಾಡುವ ಕೆಲಸ ಅವರು ಮಾತನಾಡುತ್ತೀರಲಿ ನಾವು ನಮ್ಮ ಕೆಲಸ ಮಾಡುತ್ತೇವೆ. ನಮ್ಮ ಸರ್ಕಾರ ಸಮರ್ಥವಾಗಿ ಕೆಲಸ ಮಾಡುತ್ತಿದೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡರು.

    ನಿಯಮ ಉಲ್ಲಂಘನೆ
    ಜಿಲ್ಲೆಯಲ್ಲಿ ಸಭೆ ನಡೆಸಿದ ಪ್ರಭು ಚೌವ್ಹಾಣ್, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಘಟನೆ ಸಹ ನಡೆಯಿತು. ಸಭೆ ಬಳಿಕ ಜಿಲ್ಲಾಡಳಿತ ಭವನದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು. ಜಿ.ಪಂ ಸಭಾಂಗಣದಲ್ಲಿ ಕೋವಿಡ್ ಸಭೆ ಮುಕ್ತಾಯವಾದ ಬಳಿಕ ಸಚಿವ ಪ್ರಭು ಚೌವ್ಹಾಣ್‍ರೊಂದಿಗೆ ಹಲವು ಜನ ಗುಂಪು ಸೇರಿದ್ದರು. ಜನರ ಗುಂಪಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆಗೆ ಸಚಿವರು ಸಂವಹನ ನಡೆಸಿದರು. ಸಚಿವರ ಜೊತೆಗೆ ಶಾಸಕ ವೆಂಕಟರೆಡ್ಡಿ ಮುದ್ನಾಳ, ಸಂಸದ ಅಮರೇಶ್ವರ ನಾಯಕ ಸಹ ನಿಯಮ ಉಲ್ಲಂಘನೆ ಮಾಡಿದರು.