Tag: Prabhu Chauhan

  • ಬಿಜೆಪಿ ಮುಖಂಡರಿಂದ ಬೆಳೆಹಾನಿ ವೀಕ್ಷಣೆ – ರೈತರ ಸಂಕಷ್ಟಗಳನ್ನು ವಿವರಿಸಿದ ಪ್ರಭು ಚವ್ಹಾಣ್‌

    ಬಿಜೆಪಿ ಮುಖಂಡರಿಂದ ಬೆಳೆಹಾನಿ ವೀಕ್ಷಣೆ – ರೈತರ ಸಂಕಷ್ಟಗಳನ್ನು ವಿವರಿಸಿದ ಪ್ರಭು ಚವ್ಹಾಣ್‌

    ಬೀದರ್: ಜಿಲ್ಲೆಯ ಬಿಜೆಪಿ ಮುಖಂಡರು ಬೀದರ್‌ನಾದ್ಯಂತ ಸಂಚರಿಸಿ ಅತೀವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿಯನ್ನು ವೀಕ್ಷಿಸಿದರು. ಈ ವೇಳೆ ಶಾಸಕ ಪ್ರಭು ಚವ್ಹಾಣ್‌ (Prabhu Chauhan) ಬೆಳೆ ಹಾನಿಯ ಬಗ್ಗೆ ವಿವರಣೆ ನೀಡಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ನೇತೃತ್ವದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಯಿತು. ಕೌಠಾ(ಬಿ) ಗ್ರಾಮದಲ್ಲಿ ಹಾನಿಯಾದ ಕೃಷಿಭೂಮಿಗಳಿಗೆ ಟ್ರಾಕ್ಟರ್ ಮೂಲಕ ತೆರಳಿ ಹಾನಿಯ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಬೆಳೆಹಾನಿಯ ಬಗ್ಗೆ ಶಾಸಕ ಪ್ರಭು ಚವ್ಹಾಣ್‌ ಅವರು, ಔರಾದ(ಬಿ) ಕ್ಷೇತ್ರದಲ್ಲೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಪ್ರತಿಯೊಂದು ಗ್ರಾಮದಲ್ಲಿ ಸಾವಿರಾರು ಎಕರೆಯಷ್ಟು ಬೆಳೆ ಹಾನಿಯಾಗಿದೆ. ಇಲ್ಲಿನ ಬಹುತೇಕ ರೈತರು ಉಪಜೀವನಕ್ಕೆ ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ ಬೆಳೆದು ನಿಂತಿದ್ದ ಉದ್ದು, ಹೆಸರು, ಸೋಯಾಬೀನ್, ತೊಗರಿ, ಹತ್ತಿ, ಕಬ್ಬು ಸೇರಿದಂತೆ ಎಲ್ಲ ಬೆಳೆಗಳು ಮುಳುಗಡೆಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ: ಟ್ರಂಪ್‌ ಭಾಷಣಕ್ಕೆ ಅಡ್ಡಿ – ಇಬ್ಬರು ಇಸ್ರೇಲ್‌ ಸಂಸದರನ್ನು ಹೊರದಬ್ಬಿದ ಸಿಬ್ಬಂದಿ

    ನಮ್ಮೂರಿನ ಎಲ್ಲ ಕಡೆಗಳಲ್ಲಿ ಬೆಳೆ ನಷ್ಟವಾಗಿದೆ. ನದಿ ತೀರದಲ್ಲಿ ಅತೀ ಹೆಚ್ಚು ಹಾಳಾಗಿದ್ದು, ಎಲ್ಲ ಹೊಲಗಳು ಸಂಪೂರ್ಣ ಮುಳುಗಡೆಯಾಗಿವೆ. ಮಳೆಗಾಲದ ಆರಂಭದಲ್ಲಿ ಎಲ್ಲ ಬೆಳೆಗಳು ಚೆನ್ನಾಗಿದ್ದವು. ಹಾಗಾಗಿ ರೈತರು ಈ ಬಾರೀ ಹೆಚ್ಚಿನ ಲಾಭ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ ಅನಿರೀಕ್ಷಿತವಾಗಿ ಸುರಿದ ಧಾರಾಕಾರ ಮಳೆಗೆ ಎಲ್ಲ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರ ಬೇಗ ಪರಿಹಾರ ಕೊಡಲು ತಾವು ಸಹಕರಿಸಬೇಕು ಎಂದು ಮನವಿ ಮಾಡಿದರು.

  • ಕೋರ್ಟ್‌ಗೆ ಹಾಜರಾಗಲು ಮತ್ತೆ ಸಮಯ ಕೇಳಿದ ಪ್ರಭು ಚೌಹಾಣ್ – 1 ಲಕ್ಷ ದಂಡ ವಿಧಿಸಿದ ಕಲಬುರಗಿ ಪೀಠ

    ಕೋರ್ಟ್‌ಗೆ ಹಾಜರಾಗಲು ಮತ್ತೆ ಸಮಯ ಕೇಳಿದ ಪ್ರಭು ಚೌಹಾಣ್ – 1 ಲಕ್ಷ ದಂಡ ವಿಧಿಸಿದ ಕಲಬುರಗಿ ಪೀಠ

    ಬೀದರ್: ಕೋರ್ಟ್‌ಗೆ ಹಾಜರಾಗಲು ಪದೇ ಪದೇ ಸಮಯ ಕೇಳುತ್ತಿರುವ ಹಿನ್ನೆಲೆ ಕರ್ನಾಟಕ ಹೈಕೋರ್ಟ್‌ನ (Karnataka Highcourt) ಕಲಬುರಗಿ ಪೀಠ (Kalaburagi Bench) ಔರಾದ್ (Aurad) ಶಾಸಕ ಪ್ರಭು ಚೌಹಾಣ್‌ಗೆ  (Prabhu Chauhan) 1 ಲಕ್ಷ ರೂ. ದಂಡ ವಿಧಿಸಿದೆ.

    ಶಾಸಕ ಪ್ರಭು ಚೌಹಾಣ್ ವಿರುದ್ಧ ಜಾತಿ ವಿವಾದಕ್ಕೆ ಸಂಬಂಧಿಸಿದಂತೆ ಕಲಬುರಗಿ ಪೀಠದಲ್ಲಿ ವ್ಯಕ್ತಿಯೊಬ್ಬರು ದಾವೆ ಹೂಡಿದ್ದರು. ಈ ಸಂಬಂಧ ಕೋರ್ಟ್‌ಗೆ ಹಾಜರಾಗಲು ಚೌಹಾಣ್ ಪರ ವಕೀಲರು ಪದೇ ಪದೇ ಸಮಯ ಕೇಳುತ್ತಿರುವ ಹಿನ್ನೆಲೆ ದಂಡ ವಿಧಿಸಲಾಗಿದೆ.ಇದನ್ನೂ ಓದಿ: ಜಪಾನ್‌ನ ಹೈ-ಸ್ಪೀಡ್ ಬುಲೆಟ್ ರೈಲಿನಲ್ಲಿ ಮೋದಿ ಸವಾರಿ

    ಕಳೆದ ಬಾರಿಯೂ ಕೋರ್ಟ್‌ಗೆ ಹಾಜರಾಗದೆ ಚೌಹಾಣ್ ಪರ ವಕೀಲರು ಸಮಯ ಕೇಳಿದ್ದರು. ಈ ಬಾರಿಯೂ ಮತ್ತೆ ಸಮಯ ಕೇಳಿದ್ದಕ್ಕೆ 1 ಲಕ್ಷ ದಂಡ ರೂ. ವಿಧಿಸಿ, ಸೆ.8ಕ್ಕೆ ವಿಚಾರಣೆಯನ್ನು ಮುಂದೂಡಿದೆ.

    ಬೀದರ್‌ನ (Bidar) ಕಮಲ ನಗರ ತಾಲೂಕಿನ ನಿವಾಸಿ ನರಸಿಂಗ್ ಎಂಬುವವರು ಶಾಸಕ ಪ್ರಭು ಚೌಹಾಣ್ ಪರಿಶಿಷ್ಟ ಜಾತಿಯವರಲ್ಲ, ಅವರು ಪರಿಶಿಷ್ಟ ಪಂಗಡದವರು ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ದಾವೆ ಹೂಡಿದ್ದರು.

    ಚೌಹಾಣ್ ಅವರು ಮೂಲತಃ ಮಹಾರಾಷ್ಟ್ರದಲ್ಲಿ (Maharashtra) ಜನಿಸಿದ್ದು, ಕರ್ನಾಟಕ (Karnataka) ನಿವಾಸಿಯಲ್ಲ. ಅವರು ಮಹಾರಾಷ್ಟ್ರದಲ್ಲಿ ಲಂಬಾಣಿ ಪರಿಶಿಷ್ಟ ಪಂಗಡಕ್ಕೆ (ST) ಸೇರಿದವರಾಗಿದ್ದಾರೆ. ಹೀಗಾಗಿ ಶಾಸಕ ಚೌಹಾಣ್ ಅವರ ಎಸ್ಸಿ (SC) ಜಾತಿ ಪ್ರಮಾಣ ಪತ್ರ ರದ್ದುಗೊಳಿಸಬೇಕು ಎಂದು ಉಲ್ಲೇಖಿಸಿದ್ದರು.ಇದನ್ನೂ ಓದಿ: ನಟ ದರ್ಶನ್ ಬಳ್ಳಾರಿ ಜೈಲಿನ ಶಿಫ್ಟ್ ಭವಿಷ್ಯ ಇಂದು ನಿರ್ಧಾರ

     

  • ಅತ್ಯಾಚಾರ ಆರೋಪ ಕೇಸ್ – ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನಿಗೆ ಮಧ್ಯಂತರ ಜಾಮೀನು ಮಂಜೂರು

    ಅತ್ಯಾಚಾರ ಆರೋಪ ಕೇಸ್ – ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನಿಗೆ ಮಧ್ಯಂತರ ಜಾಮೀನು ಮಂಜೂರು

    ಬೀದರ್: ಅತ್ಯಾಚಾರ ಆರೋಪ ಹೊತ್ತು ಬಂಧನ ಭೀತಿಯಲ್ಲಿದ್ದ ಬಿಜೆಪಿ ಶಾಸಕ ಪ್ರಭು ಚೌಹಾಣ್ (Prabhu Chauhan) ಪುತ್ರನಿಗೆ ಹೈಕೋರ್ಟ್ (High Court) ಜಾಮೀನು ಮಂಜೂರು ಮಾಡಿದೆ.

    ಬೀದರ್ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪ್ರತೀಕ್ ಚೌಹಾಣ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು. ವಾದ-ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, 2 ಲಕ್ಷ ರೂ. ಬಾಂಡ್ ಶ್ಯೂರಿಟಿ ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆ ಷರತ್ತು ವಿಧಿಸಿದೆ. ಜೊತೆಗೆ ಪೊಲೀಸರು ಪ್ರಭು ಚೌಹಾಣ್ ಪುತ್ರನನ್ನು ಬಂಧನ ಮಾಡುವಂತಿಲ್ಲ ಎಂದು ಸೂಚಿಸಿದೆ.ಇದನ್ನೂ ಓದಿ: ಭಾರೀ ಮಳೆಗೆ ವಿದ್ಯುತ್ ಸಮಸ್ಯೆ – ಮಾರ್ಗ ಮಧ್ಯದಲ್ಲೇ ನಿಂತ ಮೋನೋ ರೈಲು

    ಇನ್ನೂ ಈಗಾಗಲೇ ಬೀದರ್‌ನ ಮಹಿಳಾ ಠಾಣೆಯಿಂದ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಅತ್ಯಾಚಾರ ಕೇಸ್ ವರ್ಗಾವಣೆ ಮಾಡಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

    ಬಿಜೆಪಿ ಶಾಸಕರ ಪುತ್ರನ ವಿರುದ್ಧ ಯುವತಿಯೊಬ್ಬಳು ಅತ್ಯಾಚಾರ ಕೇಸ್ ದಾಖಲಿಸಿದ್ದರು. ಮದುವೆಯಾಗುವುದಾಗಿ ನಂಬಿಸಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಗಂಭೀರ ಆರೋಪ ಮಾಡಿದ್ದರು.ಇದನ್ನೂ ಓದಿ: ಏರ್‌ಪೋರ್ಟ್ ಮಾದರಿಯಲ್ಲೇ ಇನ್ಮುಂದೆ ರೈಲಿಗೂ ಲಗೇಜ್ ಪಾಲಿಸಿ

  • ಅತ್ಯಾಚಾರ ಆರೋಪ ಕೇಸ್: ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನ ನಿರೀಕ್ಷಣಾ ಜಾಮೀನು ಅರ್ಜಿ ವಜಾ

    ಅತ್ಯಾಚಾರ ಆರೋಪ ಕೇಸ್: ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನ ನಿರೀಕ್ಷಣಾ ಜಾಮೀನು ಅರ್ಜಿ ವಜಾ

    ಬೀದರ್: ಅತ್ಯಾಚಾರ ಆರೋಪ ಹೊತ್ತಿರುವ ಬಿಜೆಪಿ (BJP) ಶಾಸಕ ಪ್ರಭು ಚೌಹಾಣ್ (Prabhu Chauhan) ಪುತ್ರ ಪ್ರತೀಕ್ ಚೌಹಾಣ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು (Anticipatory Bail) ಅರ್ಜಿಯನ್ನು ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ವಜಾಗೊಳಿಸಿದೆ.

    ಚೌಹಾಣ್ ಪುತ್ರನ ಪರ ವಕೀಲ ಎಂ.ಎಂ.ಗೋಡ್ಬಲೆಯವರು ನಿರೀಕ್ಷಣಾ ಜಾಮೀನಿಗಾಗಿ ಮಂಗಳವಾರ (ಜು.29) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ್ದ ಕೋರ್ಟ್ ಗುರುವಾರಕ್ಕೆ (ಜು.31) ತೀರ್ಪನ್ನು ಕಾಯ್ದಿರಿಸಿತ್ತು. ಬಳಿಕ ಜಾಮೀನು ನೀಡದಂತೆ ಕೋರ್ಟ್‌ಗೆ ಸಂತ್ರಸ್ತೆ ಪರ ವಕೀಲರು ತಕರಾರು ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.ಇದನ್ನೂ ಓದಿ: ಅತ್ಯಾಚಾರ ಆರೋಪ ಕೇಸ್;‌ ಜಾಮೀನಿಗಾಗಿ ಬಿಜೆಪಿ ಶಾಸಕ ಪ್ರಭು ಚೌಹಾಣ್‌ ಪುತ್ರ ಕೋರ್ಟ್‌ಗೆ ಅರ್ಜಿ

    ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಬಿಜೆಪಿ ಶಾಸಕ ಚೌಹಾಣ್ ಪುತ್ರನಿಗೆ ಬಂಧನ ಭೀತಿ ಹೆಚ್ಚಾಗಿದೆ. ಈಗಾಗಲೇ ಬೀದರ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

    ಬಿಜೆಪಿ ಶಾಸಕರ ಪುತ್ರನ ವಿರುದ್ಧ ಯುವತಿಯೊಬ್ಬಳು ಅತ್ಯಾಚಾರ ಕೇಸ್ ದಾಖಲಿಸಿದ್ದರು. ಮದುವೆಯಾಗುವುದಾಗಿ ನಂಬಿಸಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಗಂಭೀರ ಆರೋಪ ಮಾಡಿದ್ದರು.ಇದನ್ನೂ ಓದಿ: ನಂಗೆ ಯಾರೂ ಬಾಯ್‌ಫ್ರೆಂಡ್ ಇಲ್ಲ, 4 ತಿಂಗಳು ನನ್ನ ಫೋನ್ ಪ್ರತೀಕ್ ಚೌಹಾಣ್ ಬಳಿ ಇತ್ತು: ಸಂತ್ರಸ್ತೆ

  • ಅತ್ಯಾಚಾರ ಆರೋಪ ಕೇಸ್;‌ ಜಾಮೀನಿಗಾಗಿ ಬಿಜೆಪಿ ಶಾಸಕ ಪ್ರಭು ಚೌಹಾಣ್‌ ಪುತ್ರ ಕೋರ್ಟ್‌ಗೆ ಅರ್ಜಿ

    ಅತ್ಯಾಚಾರ ಆರೋಪ ಕೇಸ್;‌ ಜಾಮೀನಿಗಾಗಿ ಬಿಜೆಪಿ ಶಾಸಕ ಪ್ರಭು ಚೌಹಾಣ್‌ ಪುತ್ರ ಕೋರ್ಟ್‌ಗೆ ಅರ್ಜಿ

    ಬೀದರ್‌: ಅತ್ಯಾಚಾರ ಆರೋಪ ಹೊತ್ತಿರುವ ಬಿಜೆಪಿ ಶಾಸಕ ಪ್ರಭು ಚೌಹಾಣ್‌ (Prabhu Chauhan) ಪುತ್ರ ಪ್ರತೀಕ್‌ ಚೌಹಾಣ್‌ ಬಂಧನ ಭೀತಿಯಲ್ಲಿದ್ದು, ಜಾಮೀನಿಗಾಗಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

    ಚೌಹಾಣ್ ಪುತ್ರ‌ನ ಪರ ವಕೀಲ ಎಂ.ಎಂ.ಗೋಡ್ಬಲೆಯಿಂದ ನಿರೀಕ್ಷಣಾ ಜಾಮೀನುಗಾಗಿ ಕೋರ್ಟ್‌ಗೆ ಮಂಗಳವಾರ ಅರ್ಜಿ ಸಲ್ಲಿಸಲಾಗಿದೆ. ಇಂದು ವಾದ-ಪ್ರತಿವಾದ ಆಲಿಸಿದ ಜಿಲ್ಲಾ ಸತ್ರ ನ್ಯಾಯಾಲಯ ಆವೇಶವನ್ನು ಇದೇ ತಿಂಗಳು 31 ಕ್ಕೆ ಮುಂದೂಡಲಾಗಿದೆ. ಇದನ್ನೂ ಓದಿ: ನಂಗೆ ಯಾರೂ ಬಾಯ್‌ಫ್ರೆಂಡ್ ಇಲ್ಲ, 4 ತಿಂಗಳು ನನ್ನ ಫೋನ್ ಪ್ರತೀಕ್ ಚೌಹಾಣ್ ಬಳಿ ಇತ್ತು: ಸಂತ್ರಸ್ತೆ

    ನೀರಿಕ್ಷಣಾ ಜಾಮೀನು ಆದೇಶವನ್ನು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾದೀಶ ಬಿ.ಕೆ ಕೋಮಲಾ ಅವರು 31ಕ್ಕೆ ಮೂಂದೂಡಿದ್ದಾರೆ. ಹೀಗಾಗಿ, ಬಂಧನದ ಭೀತಿಯಿಂದ ಸಚಿವ ಚೌಹಾಣ್ ಪುತ್ರನಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ.

    ಚೌಹಾಣ್ ಪುತ್ರನಿಗೆ ನೀರಿಕ್ಷಣಾ ಜಾಮೀನು ನೀಡದಂತೆ ಕೋರ್ಟ್‌ಗೆ ಸಂತ್ರಸ್ತೆ ಪರ ವಕೀಲರು ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಬೀದರ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ನನ್ನನ್ನು ಮುಗಿಸಬೇಕು ಅಂತ ಭಗವಂತ್‌ ಖೂಬಾ ಪಿತೂರಿ ಮಾಡಿದ್ದಾರೆ: ಪ್ರಭು ಚೌಹಾಣ್‌ ಗಂಭೀರ ಆರೋಪ

    ಬಿಜೆಪಿ ಶಾಸಕರ ಪುತ್ರನ ವಿರುದ್ಧ ಯುವತಿಯೊಬ್ಬಳು ಅತ್ಯಾಚಾರ ಕೇಸ್‌ ದಾಖಲಿಸಿದ್ದರು. ಮದುವೆಯಾಗುವುದಾಗಿ ನಂಬಿಸಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಗಂಭೀರ ಆರೋಪ ಮಾಡಿದ್ದರು.

  • ಪ್ರತೀಕ್ ಬೇರೆ ಹುಡ್ಗೀರ ಜೊತೆ ವಿಡಿಯೋ ಕಾಲ್, ಚಾಟ್ ಮಾಡಿದ್ದಾನೆ: ಸಂತ್ರಸ್ತೆ ಸಹೋದರ ಆರೋಪ

    ಪ್ರತೀಕ್ ಬೇರೆ ಹುಡ್ಗೀರ ಜೊತೆ ವಿಡಿಯೋ ಕಾಲ್, ಚಾಟ್ ಮಾಡಿದ್ದಾನೆ: ಸಂತ್ರಸ್ತೆ ಸಹೋದರ ಆರೋಪ

    ಬೀದರ್: ಮಾಜಿ ಸಚಿವ ಪ್ರಭು ಚೌಹಾಣ್ (Prabhu Chauhan) ಪುತ್ರ ಪ್ರತೀಕ್ ಚೌಹಾಣ್ (Pratheek Chauhan) ಬಹಳಷ್ಟು ಹುಡುಗಿಯರ ಜೊತೆ ವಿಡಿಯೋ ಕಾಲ್, ವಾಟ್ಸಪ್ ಚಾಟ್ ಮಾಡಿದ್ದಾನೆ ಎಂದು ಸಂತ್ರಸ್ತೆಯ ಸಹೋದರ ಗಂಭೀರ ಆರೋಪ ಮಾಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿರಿಯರ, ಕುಟುಂಬಸ್ಥರು, ವಕೀಲರು ಸಮ್ಮುಖದಲ್ಲಿ ಯಾವುದೇ ಇತ್ಯರ್ಥವಾಗಿಲ್ಲ. ಏನು ಮಾತುಕತೆಯಾಗಿದೆ ಎಂದು ಸಿಡಿಆರ್ ತೆಗೆಯರಿ. 5 ರಂದು ಮದುವೆಗೆ ದಿನಾಂಕ ನಿಗದಿ ಮಾಡಿ ಎಂದು ಕೇಳಲು ಮನೆಗೆ ಹೋಗಿದ್ದೆವು. ಆಗ ನಮ್ಮ ಮೇಲೆ ಅವರು ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ. ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ಹೆದರಿಸಿದ್ರು ಎಂದು ದೂರಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶದ ವಾಯುಪಡೆಯ ತರಬೇತಿ ವಿಮಾನ ದುರಂತ – ಪೈಲಟ್ ಸೇರಿ 16 ಜನ ಸಾವು

    ಬಳಿಕ ಸಂತ್ರಸ್ತೆ ತಾಯಿ ಮಾತನಾಡಿ, ಎಲ್ಲಾ ದಾಖಲೆಗಳು ನಮ್ಮ ಬಳಿ ಇದ್ದು, ಪೊಲೀಸರಿಗೆ ನೀಡಿದಲಾಗಿದೆ. ಪ್ರತೀಕ್ ಚೌಹಾಣ್ ಸುಳ್ಳು ಹೇಳುತ್ತಿದ್ದಾರೆ. ಮದುವೆ ಮಾಡುತ್ತೀರಾ ಎಂದು ಕೇಳಿದಾಗ ನಿರಾಕರಣೆ ಮಾಡಿದ್ರು. ನಾವು ಬಹಳಷ್ಟು ದಿನ ಕಾದಿದ್ದೇವೆ. ಆದರೆ ಅವರೇ ಮದುವೆ ಕ್ಯಾನ್ಸಲ್ ಮಾಡಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: 2 ತಿಂಗಳಲ್ಲಿ ಮತ್ತೆ ನನ್ನನ್ನ ಬಿಜೆಪಿಗೆ ಸೇರಿಸಿಕೊಳ್ತಾರೆ: ಯತ್ನಾಳ್

    ಸಂತ್ರಸ್ತ ಯುವತಿ ಪ್ರತಿಕ್ರಿಯಿಸಿ, ನನಗೆ ನ್ಯಾಯ ಬೇಕು, ನನ್ನ ಜೊತೆ ಆಗಿದ್ದು ಬೇರೆ ಯುವತಿಗೆ ಆಗಬಾರದು. ನನಗೆ ಯಾರೂ ಬಾಯ್‌ಫ್ರೆಂಡ್ ಇಲ್ಲ. ಅವರು ಸುಳ್ಳು ಆರೋಪ ಮಾಡಿದ್ದಾರೆ. ನಾನು ಯಾರ ಜೊತೆಗೂ ಚಾಟಿಂಗ್, ವೀಡಿಯೋ ಕಾಲ್ ಅಲ್ಲಿ ಮಾತಾಡಿಲ್ಲ. ನನ್ನ ಹಾಗೂ ಪ್ರತೀಕ್ ನಡುವೆ ಪ್ರೀತಿ ಇತ್ತು. 4 ತಿಂಗಳು ನನ್ನ ಫೋನ್ ಪ್ರತೀಕ್ ಚೌಹಾಣ್ ಬಳಿಯೇ ಇತ್ತು ಎಂದು ಆರೋಪಿಸಿದ್ದಾರೆ.  ಇದನ್ನೂ ಓದಿ: ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳ ಆರೋಪ

    ನಾನು ಪ್ರತೀಕ್ ಬಿಟ್ಟು ಬೇರೆ ಯುವಕನನ್ನು ಪ್ರೀತಿ ಮಾಡಿಲ್ಲ. ಪ್ರತೀಕ್ ತಪ್ಪು ಮಾಡಿಲ್ಲ ಅಂದರೆ ಏಕೆ ಮುಂದೆ ಬರುತ್ತಿಲ್ಲ, ಅವರ ತಂದೆ ಯಾಕೆ ಸುದ್ದಿಗೋಷ್ಠಿ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

    ಈ ವೇಳೆ ಕೈ ಕಟ್ ಮಾಡಿದ ವಿಡಿಯೋ ಕೂಡಾ ಬಿಡುಗಡೆ ಮಾಡಿದ ಸಂತ್ರಸ್ತೆ, ನೀನು ನನ್ನ ಎಷ್ಟು ಪ್ರೀತಿ ನೋಡೋಣ ಎಂದು ಚೌಹಾಣ್ ಪುತ್ರ ಬ್ಲೇಡ್‌ನಿಂದ ನನ್ನ ಕೈ ಕಟ್ ಮಾಡಿ ಓಡಿ ಹೋಗಿದ್ದಾನೆ. ಪ್ರಭು ಚೌಹಾಣ್, ಇದು ಭಗವಂತ್ ಖೂಬಾ ಪಿತೂರಿ ಎಂದು ಹೇಳಿದ್ದಾರೆ. ನಾನು ಇಲ್ಲಿಯವರೆಗೆ ಖೂಬಾರನ್ನು ನೋಡಿಲ್ಲ. ನಾಗಲಕ್ಷ್ಮಿ ಹಾಗೂ ಎಸ್ಪಿಗೆ ದೂರು ನೀಡಿ ಎಲ್ಲಾ ಹೇಳಿದ್ದು, ನನಗೆ ನ್ಯಾಯ ಸಿಗುತ್ತದೆ ಎಂದಿದ್ದಾರೆ.

  • ನಂಗೆ ಯಾರೂ ಬಾಯ್‌ಫ್ರೆಂಡ್ ಇಲ್ಲ, 4 ತಿಂಗಳು ನನ್ನ ಫೋನ್ ಪ್ರತೀಕ್ ಚೌಹಾಣ್ ಬಳಿ ಇತ್ತು: ಸಂತ್ರಸ್ತೆ

    ನಂಗೆ ಯಾರೂ ಬಾಯ್‌ಫ್ರೆಂಡ್ ಇಲ್ಲ, 4 ತಿಂಗಳು ನನ್ನ ಫೋನ್ ಪ್ರತೀಕ್ ಚೌಹಾಣ್ ಬಳಿ ಇತ್ತು: ಸಂತ್ರಸ್ತೆ

    – ಎಷ್ಟು ಪ್ರೀತಿ ಮಾಡ್ತೀಯಾ ನೋಡೋಣ ಎಂದು ಬ್ಲೇಡ್‌ನಿಂದ ಕೈ ಕಟ್‌ ಮಾಡಿದ್ದ ಎಂದ ಸಂತ್ರಸ್ತೆ
    – ವೀಡಿಯೋ ಸಮೇತ ದಾಖಲೆ ಬಿಡುಗಡೆ

    ಬೀದರ್: ಶಾಸಕ ಪ್ರಭು ಚೌಹಾಣ್ (Prabhu Chauhan) ಪುತ್ರನ ಗಂಭೀರ ಆರೋಪ ಬೆನ್ನಲ್ಲೇ ಇಂದು ಸಂತ್ರಸ್ತೆ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿ ತಿರುಗೇಟು ನೀಡಿದರು.

    ನನಗೆ ನ್ಯಾಯ ಬೇಕು, ನನ್ನ ಜೊತೆ ಆಗಿದ್ದು ಬೇರೆ ಯುವತಿಗೆ ಆಗಬಾರದು. ನನಗೆ ಯಾರೂ ಬಾಯ್‌ಫ್ರೆಂಡ್ ಇಲ್ಲ. ಅವರು ಸುಳ್ಳು ಆರೋಪ ಮಾಡಿದ್ದಾರೆ. ನಾನು ಯಾರ ಜೊತೆಗೂ ಚಾಟಿಂಗ್, ವೀಡಿಯೋ ಕಾಲ್ ಅಲ್ಲಿ ಮಾತಾಡಿಲ್ಲ. ನನ್ನ ಹಾಗೂ ಪ್ರತೀಕ್ (Pratheek Chauhan) ನಡುವೆ ಪ್ರೀತಿ ಇತ್ತು. 4 ತಿಂಗಳು ನನ್ನ ಫೋನ್ ಪ್ರತೀಕ್ ಚೌಹಾಣ್ ಬಳಿಯೇ ಇತ್ತು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: 2 ತಿಂಗಳಲ್ಲಿ ಮತ್ತೆ ನನ್ನನ್ನ ಬಿಜೆಪಿಗೆ ಸೇರಿಸಿಕೊಳ್ತಾರೆ: ಯತ್ನಾಳ್

    ನಾನು ಪ್ರತೀಕ್ ಬಿಟ್ಟು ಬೇರೆ ಯುವಕನನ್ನು ಪ್ರೀತಿ ಮಾಡಿಲ್ಲ. ಪ್ರತೀಕ್ ತಪ್ಪು ಮಾಡಿಲ್ಲ ಅಂದರೆ ಏಕೆ ಮುಂದೆ ಬರುತ್ತಿಲ್ಲ, ಅವರ ತಂದೆ ಯಾಕೆ ಸುದ್ದಿಗೋಷ್ಠಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜು.23, 24 ರಂದು ಹಾಲು, ಸಿಗರೇಟ್ ಮಾರಾಟ ಬಂದ್

    ಈ ವೇಳೆ ಕೈ ಕಟ್ ಮಾಡಿದ ವಿಡಿಯೋ ಕೂಡಾ ಬಿಡುಗಡೆ ಮಾಡಿದ ಸಂತ್ರಸ್ತೆ, ನೀನು ನನ್ನ ಎಷ್ಟು ಪ್ರೀತಿ ನೋಡೋಣ ಎಂದು ಚೌಹಾಣ್ ಪುತ್ರ ಬ್ಲೇಡ್‌ನಿಂದ ನನ್ನ ಕೈ ಕಟ್ ಮಾಡಿ ಓಡಿ ಹೋಗಿದ್ದಾನೆ. ಪ್ರಭು ಚೌಹಾಣ್, ಇದು ಭಗವಂತ್ ಖೂಬಾ ಪಿತೂರಿ ಎಂದು ಹೇಳಿದ್ದಾರೆ. ನಾನು ಇಲ್ಲಿಯವರೆಗೆ ಖೂಬಾರನ್ನು ನೋಡಿಲ್ಲ. ನಾಗಲಕ್ಷ್ಮಿ ಹಾಗೂ ಎಸ್ಪಿಗೆ ದೂರು ನೀಡಿ ಎಲ್ಲಾ ಹೇಳಿದ್ದು, ನನಗೆ ನ್ಯಾಯ ಸಿಗುತ್ತದೆ ಎಂದರು. ಇದನ್ನೂ ಓದಿ: ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳ ಆರೋಪ

  • ಪ್ರಭು ಚೌಹಾಣ್ ಪುತ್ರ ಯುವತಿಗೆ ವಂಚನೆ ಆರೋಪ – ಇಬ್ಬರೂ ಒಂದೇ ರೂಮ್‌ನಲ್ಲಿದ್ದ ಬಗ್ಗೆ ಸಾಕ್ಷಿ ಬಿಡುಗಡೆ

    ಪ್ರಭು ಚೌಹಾಣ್ ಪುತ್ರ ಯುವತಿಗೆ ವಂಚನೆ ಆರೋಪ – ಇಬ್ಬರೂ ಒಂದೇ ರೂಮ್‌ನಲ್ಲಿದ್ದ ಬಗ್ಗೆ ಸಾಕ್ಷಿ ಬಿಡುಗಡೆ

    ಬೆಂಗಳೂರು: ಮಾಜಿ ಸಚಿವ ಪ್ರಭು ಚೌಹಾಣ್ (Prabhu Chauhan) ಪುತ್ರನ ವಿರುದ್ಧ ನಂಬಿಸಿ ವಂಚನೆ ಆರೋಪ ಮಾಡಿದ್ದ ಯುವತಿ, ಆರೋಪ ಸಂಬಂಧ ಒಂದೇ ರೂಮ್‌ನಲ್ಲಿ ಪ್ರತೀಕ್ (Pratheek Chauhan) ಮತ್ತು ತಾನು ಇದ್ದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದಾಳೆ.

    ಶನಿವಾರವಷ್ಟೇ ಮಹಿಳಾ ಆಯೋಗದ ಅಧ್ಯಕ್ಷೆಯನ್ನು ಭೇಟಿಯಾಗಿ ಸಂತ್ರಸ್ತೆ ದೂರು ಸಲ್ಲಿಕೆ ಮಾಡಿದ್ದರು. ಆ ಬೆನ್ನಲ್ಲೆ ಈಗ ಪ್ರತೀಕ್ ಮತ್ತು ಯುವತಿ ಜೊತೆಗಿದ್ದ ಹೊಟೇಲ್ ರೂಮ್‌ಗಳ ದಾಖಲಾತಿಯನ್ನ ಬಿಡುಗಡೆ ಮಾಡಿದ್ದಾರೆ. 2023ರ ಡಿಸೆಂಬರ್‌ನಲ್ಲಿ ಇಬ್ಬರ ನಿಶ್ಚಿತಾರ್ಥ ಆಗಿತ್ತು. ನಿಶ್ಚಿತಾರ್ಥಕ್ಕೂ ಮುನ್ನ ಆಕ್ಟೋಬರ್‌ನಲ್ಲೇ ಸಂತ್ರಸ್ತೆ ಮತ್ತು ಪ್ರತೀಕ್ ಚೌಹಾಣ್ ಬೆಂಗಳೂರಿನ ರೇಸ್‌ಕೋರ್ಸ್ ಬಳಿಯ ಖಾಸಗಿ ಹೊಟೇಲ್‌ನಲ್ಲಿ ಒಟ್ಟಾಗಿ ಇದ್ದರು. ಆದಾದ ಬಳಿಕ ಅದೇ ವರ್ಷ ಡಿಸೆಂಬರ್‌ನಲ್ಲಿ ಇಬ್ಬರ ನಿಶ್ಚಿತಾರ್ಥ ಆಗಿದೆ. ಇದನ್ನೂ ಓದಿ: ಮೈಸೂರು | ಕಬಿನಿ ಜಲಾಶಯಕ್ಕೆ ಸಿಎಂ, ಡಿಸಿಎಂ ಬಾಗಿನ ಅರ್ಪಣೆ – ನಾಡಿನ ಒಳಿತಿಗೆ ಪ್ರಾರ್ಥನೆ

    ನಂತರ 2024ರ ಮಾರ್ಚ್ನಲ್ಲೂ ಈ ಇಬ್ಬರು ಒಟ್ಟಾಗಿ ಮಹಾರಾಷ್ಟ್ರದ ಲಾತೂರ್‌ನಲ್ಲಿ ಒಂದೇ ರೂಮ್‌ನಲ್ಲಿ ಕಾಲ ಕಳೆದಿದ್ದಾರೆ. ಪ್ರತೀಕ್ ನನ್ನ ದೈಹಿಕವಾಗಿ ಬಳಸಿಕೊಂಡು ಮದುವೆಯಾಗದೆ ವಂಚಿಸಿದ್ದಾನೆ ಎಂಬ ಆರೋಪಕ್ಕೆ ಪೂರಕವಾಗಿ ಸಂತ್ರಸ್ತೆ ಈ ದಾಖಲೆ ಬಿಡುಗಡೆ ಮಾಡಿದ್ದಾರೆ. ಎರಡು ದಿನದ ಹಿಂದೆ ಪ್ರಭು ಚೌಹಾನ್ ನನ್ನ ಮಗ ಆ ರೀತಿ ಯುವತಿಯನ್ನ ಮಿಸ್ ಯೂಸ್ ಮಾಡಿಕೊಂಡಿಲ್ಲ ಎಂದು ಆರೋಪ ತಳ್ಳಿ ಹಾಕಿದ್ದರು. ಈ ಬೆನ್ನಲ್ಲೇ ಯುವತಿ ಆರೋಪ ಸಂಬಂಧ ದಾಖಲೆಯನ್ನ ಬಿಡುಗಡೆ ಮಾಡಿದ್ದಾಳೆ. ಇದನ್ನೂ ಓದಿ:  ಬಿಎಂಟಿಸಿ ಬಸ್ ಅಪಘಾತದಲ್ಲಿ ಯುವತಿ ಬಲಿ ಪ್ರಕರಣ – ಕಂಡಕ್ಟರ್‌ ಅಮಾನತು, ಚಾಲಕ ವಜಾ

  • ಮಗ ಯಾವುದೇ ತಪ್ಪು ಮಾಡಿಲ್ಲ, ನನ್ನನ್ನು ರಾಜಕೀಯವಾಗಿ ಮುಗಿಸಲು ನಮ್ಮ ಮೇಲೆ ಆರೋಪ: ಪ್ರಭು ಚೌಹಾಣ್‌

    ಮಗ ಯಾವುದೇ ತಪ್ಪು ಮಾಡಿಲ್ಲ, ನನ್ನನ್ನು ರಾಜಕೀಯವಾಗಿ ಮುಗಿಸಲು ನಮ್ಮ ಮೇಲೆ ಆರೋಪ: ಪ್ರಭು ಚೌಹಾಣ್‌

    ಬೆಂಗಳೂರು: ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ನನ್ನನ್ನ ರಾಜಕೀಯವಾಗಿ ಮುಗಿಸಲು ನಮ್ಮವರೇ ನಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ಶಾಸಕ ಪ್ರಭು ಚೌಹಾಣ್‌ (Prabhu Chauhan) ತಿಳಿಸಿದ್ದಾರೆ.

    ತಮ್ಮ ಮತ್ತು ತಮ್ಮ ಪುತ್ರನ ಮೇಲೆ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿರುವ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಮಗ ಏನು ತಪ್ಪು ಮಾಡಿಲ್ಲ. ನನ್ನನ್ನ ರಾಜಕೀಯವಾಗಿ (Politics) ಮುಗಿಸಬೇಕು ಅಂತ ನಮ್ಮವರೇ ಪಿತೂರಿ ಮಾಡ್ತಿದ್ದಾರೆ. ಯಾರು ಇದರ ಹಿಂದೆ ಯಾರಿದ್ದಾರ ಎನ್ನುವುದು ಗೊತ್ತಿದೆ. ಸೂಕ್ತ ಸಮಯದಲ್ಲಿ ನಾನು ದಾಖಲಾತಿ ಬಿಡುಗಡೆ ‌ಮಾಡುತ್ತೇನೆ ಎಂದು ತಿಳಿಸಿದರು.

    ಆ ಹುಡುಗಿ ಜೊತೆ ನಿಶ್ಚಿತಾರ್ಥ ನಡೆದಿದ್ದು ಸತ್ಯ. ಆದರೆ ನನ್ನ ಮಗ ಆಕೆಯನ್ನ ದುರ್ಬಳಕೆ ಮಾಡಿದ್ದಾನೆ ಎನ್ನುವುದು ಸುಳ್ಳು. ಆಕೆ ನನಗೂ ಮಗಳು ಇದ್ದ ಹಾಗೇ. ಅದ್ದೂರಿಯಾಗಿ ನಾವು ಎಂಗೇಜ್ ಮೆಂಟ್ ಮಾಡಿದ್ವಿ. ಎರಡು ಕುಟುಂಬ ಸೇರಿಯೇ ಮದುವೆ ರದ್ದು ಮಾಡಿದ್ದೇವೆ ಎಂದರು. ಇದನ್ನೂ ಓದಿ: ಮದ್ವೆಯಾಗ್ತೀನಿ ಅಂತ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡ ಆರೋಪ ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರನ ವಿರುದ್ಧ ದೂರು

     

    ಹುಡುಗಿ ಅವರ ಕುಟುಂಬದ ಜೊತೆ ಒಂದು ವರ್ಷದ ಹಿಂದೆಯೇ ಮಾತುಕತೆ ಆಗಿ ಒಪ್ಪಿಗೆಯಿಂದಲೇ ಮದುವೆ ರದ್ದು ಮಾಡಿದ್ದೇವೆ. ಈಗ ನಮ್ಮವರೇ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಹುಡುಗಿ ಮನೆಗೆ ಯಾರು ಹೋಗಿ ಕುಮ್ಮಕ್ಕು ಕೊಟ್ಟಿದ್ದಾರೆ ನನಗೆ ಗೊತ್ತಿದೆ. ಅವರ ಮನೆಗೆ ಅವರು ಹೋಗಿರೋ ಫೋಟೋ ನನ್ನ ಬಳಿ ಇದೆ. ನನ್ನ ಮಗ ಏನು ತಪ್ಪು ಮಾಡಿಲ್ಲ. ಮಹಿಳಾ ಆಯೋಗ ನೋಟಿಸ್‌ ಕೊಡಲಿ ಉತ್ತರ ಕೊಡ್ತೀವಿ. ನಾವು ಕೂಡಾ ಕಾನೂನು ಹೋರಾಟ ಮಾಡ್ತೀವಿ ಅಂತ ತಿಳಿಸಿದರು.

    ನಾನು ಸಮಾಜದ ಮುಖಂಡ ಇದ್ದೇನೆ. ನನ್ನ ವಿರುದ್ದ ಇದು ಪಿತೂರಿ. ನನ್ನ ಮಗ ಏನು ತಪ್ಪು ಮಾಡಿಲ್ಲ.ಆಕೆ ಏನೇನು ಮೊಬೈಲ್ ಚಾಟ್ ಮಾಡಿದ್ಲು ಅಂತ ಅವರ ಅಪ್ಪ-ಅಮ್ಮನಿಗೆ ತೋರಿಸಿದ್ವಿ. ಆದಾದ ಬಳಿಕ ಮದುವೆ ರದ್ದು ಮಾಡುವ ಬಗ್ಗೆ ನಿರ್ಧಾರ ಮಾಡಿದ್ದೇವೆ. ಈಗ ನನ್ನ ಮಗನ ವಿರುದ್ದ ‌ಸುಮ್ಮನೆ ದೂರು ನೀಡಿದ್ದಾರೆ. ನಾನು ಈಗ ಮುಂಬೈನಲ್ಲಿದ್ದು ಬಂದ ಕೂಡಲೇ ಸುದ್ದಿಗೋಷ್ಟಿ ಮಾಡಿ ಎಲ್ಲಾ ಮಾಹಿತಿ ಕೊಡುತ್ತೇನೆ ಎಂದು ಹೇಳಿದರು.

  • ಮದ್ವೆಯಾಗ್ತೀನಿ ಅಂತ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡ ಆರೋಪ – ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರನ ವಿರುದ್ಧ ದೂರು

    ಮದ್ವೆಯಾಗ್ತೀನಿ ಅಂತ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡ ಆರೋಪ – ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರನ ವಿರುದ್ಧ ದೂರು

    ಬೆಂಗಳೂರು: ಮಾಜಿ ಸಚಿವರೂ, ಬೀದರ್‌ನ ಔರಾದ್‌ ಕ್ಷೇತ್ರದ ಬಿಜೆಪಿ ಶಾಸಕರೂ ಆಗಿರುವ ಪ್ರಭು ಚೌಹಾಣ್‌ (Prabhu Chauhan) ಪುತ್ರನ ವಿರುದ್ಧ ಯುವತಿಯೊಬ್ಬರು ಮಹಿಳಾ ಆಯೋಗಕ್ಕೆ (Womenʼs Commission) ದೂರು ನೀಡಿದ್ದಾರೆ.

    ಪ್ರಭು ಚೌಹಾಣ್‌ ಅವರ ಪುತ್ರ ಪ್ರತೀಕ್‌ ಚೌಹಾಣ್‌ (Prateek Chauhan) ತನ್ನನ್ನ ಮದುವೆಯಾಗೋದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಯುವತಿಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಔರಾದ್‌ನ ಹೋಕ್ರಾಣಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರೆ, ಪೊಲೀಸರು ದೂರು ಸ್ವೀಕರಿಸಿಲ್ಲ. ಹೀಗಾಗಿ ಆಯೋಗಕ್ಕೆ ದೂರು ನೀಡಿದ್ದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್‌ ಖರ್ಗೆ, ವಿಶ್ವವಿಖ್ಯಾತ ಆರ್ಥಿಕ ತಜ್ಞ ಸಂತೋಷ್ ಲಾಡ್‌ಗೆ ಬಡ್ಡಿ ಸಮೇತ ಚುಕ್ತಾ ಮಾಡ್ತಿನಿ: ಪ್ರತಾಪ್‌ ಸಿಂಹ

    ಲೈಂಗಿಕವಾಗಿ ಬಳಕೆ – ದೂರಿನಲ್ಲಿ ಏನಿದೆ?
    ಮಹಿಳಾ ಆಯೋಗಕ್ಕೆ ಪ್ರತೀಕ್ ಚೌಹಾಣ್ ವಿರುದ್ಧ ದೂರು ಸಲ್ಲಿಕೆಯಾಗಿದೆ. ಮದುವೆ ಯಾಗೋದಾಗಿ ನಂಬಿಸಿ ಮೋಸ ಮಾಡಿದ್ದು, ಲೈಂಗಿಕವಾಗಿಯೂ ಬಳಸಿಕೊಂಡಿದ್ದಾಗಿ ಯುವತಿ ಆರೋಪಿಸಿದ್ದಾರೆ. ಮನೆಯವರೆಲ್ಲ ಸೇರಿ 2023ರ ಡಿಸೆಂಬರ್‌ 25ರಂದು ನಿಶ್ಚಿತಾರ್ಥ ಮಾಡಿದ್ದರು. ಎರಡೂ ಕುಟುಂಬಸ್ಥರು ಒಪ್ಪಿ ಪ್ರತೀಕ್‌ ನಿವಾಸದಲ್ಲೇ ನಿಶ್ಚಿತಾರ್ಥ ಮಾಡಿದ್ದರು. ಬಳಿಕ ಪ್ರತಿಕ್ ಜೊತೆ ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಿಕೊಟ್ಟಿದ್ದರು. ಅದರಂತೆ ಪ್ರತೀಕ್‌ 2025ರ ಮಾರ್ಚ್‌ 7, 24, 27, ಏಪ್ರಿಲ್‌ 8 ರಂದು ಮಹಾರಾಷ್ಟ್ರದ ಲಾತೂರ್‌ಗೆ ನನ್ನನ್ನ ಕರೆದುಕೊಂಡು ಹೋಗಿದ್ದರು. ಆ ಸಂದರ್ಭದಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ರೆ ತಪ್ಪಿಲ್ಲ ಅಂತ ಪ್ರತೀಕ್‌ ಒತ್ತಾಯಿಸಿದ್ರೂ, ಅದಾದ್ಮೇಲೆ ನಾನೂ ಸಹಕರಿಸಿದೆ. ಇದನ್ನೂ ಓದಿ: ನಟ ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ಮನವಿ

    ಅಲ್ಲದೇ 2024ರ ಮೇ 13ರಂದು ವಿಮಾನದಲ್ಲಿ ಶಿರಡಿಗೆ ಹೋಗಿದ್ದೆವು. ನಾಲ್ವರು ಜೊತೆಗೆ ಹೋಗಿದ್ದೆವು, ಅಲ್ಲಿ ಖಾಸಗಿ ಹೋಟೆಲ್‌ನಲ್ಲಿ ನಾನು ಪ್ರತೀಕ್‌ ಒಂದೇ ರೂಮಿನಲ್ಲಿ ತಂಗಿದ್ದೆವು. ಆಗಲೂ ಪ್ರತೀಕ್ ಲೈಂಗಿಕ ಸಂಪರ್ಕ ಮಾಡಿದ್ದಾನೆ. ನಂತರ ಮದುವೆಗೆ ಒತ್ತಾಯ ಮಾಡಿದ್ರೆ ಮುಂದೂಡುತ್ತಲೇ ಬಂದಿದ್ದ. ನನ್ನ ಕನ್ಯತ್ವದ ಬಗ್ಗೆಯೂ ಪ್ರಶ್ನೆ ಮಾಡಿದ್ದಾನೆ. ಈ ಬಗ್ಗೆ ಪ್ರಸಕ್ತ ಜುಲೈ 5ರಂದು ನನ್ನ ಪೋಷಕರು ಪ್ರತೀಕ್‌ ಮನೆಗೆ ಭೇಟಿ ಕೊಟ್ಟು ಪ್ರಶ್ನೆ ಮಾಡಿದ್ದಾರೆ. ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ನಮ್ಮನ್ನ ಬಡವರು ಅಂತ ಹೀಯಾಳಿದ್ದಾರೆ. ಈ ಬಗ್ಗೆ ಇದೇ ಜುಲೈ 6ರಂದು ಔರಾದ್‌ನ ಹೋಕ್ರಾನ್‌ ಠಾಣೆಗೆ ದೂರು ಕೊಡಲು ಹೋಗಿದ್ದೆವು. ಆದ್ರೆ ಅವರು ಸ್ವೀಕರಿಸಲಿಲ್ಲ. ಅವರು ಪೊಲೀಸರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಹೀಗಾಗಿ, ಮಹಿಳಾ ಆಯೋಗಕ್ಕೆ ದೂರು ನೀಡಿದ್ದೇವೆ. ಮಹಿಳಾ ಆಯೋಗ ಏನೋ ಕ್ರಮ ಕೈಗೊಳ್ಳುತ್ತಾರೆ ನೋಡುತ್ತೇವೆ, ನಮಗೆ ನ್ಯಾಯ ಬೇಕು ಅಂತ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ದಿಢೀರ್‌ ಆಸ್ಪತ್ರೆಗೆ ದಾಖಲಾದ ನಟ ವಿಜಯ್‌ ದೇವರಕೊಂಡ