Tag: Prabhu

  • ತಮಿಳಿನತ್ತ ಹಾಸ್ಯ ನಟ ಕೋಮಲ್

    ತಮಿಳಿನತ್ತ ಹಾಸ್ಯ ನಟ ಕೋಮಲ್

    ಸ್ಯಾಂಡಲ್‌ವುಡ್ ಹಾಸ್ಯ ನಟ ಕೋಮಲ್ (Komal) ಇದೀಗ ಕಾಲಿವುಡ್‌ಗೆ (Kollywood) ಕಾಲಿಟ್ಟಿದ್ದಾರೆ. ತಮಿಳಿನ ಖ್ಯಾತ ನಟನ ಜೊತೆ ಕೋಮಲ್ ತೆರೆಹಂಚಿಕೊಳ್ತಿದ್ದಾರೆ. ಚಿತ್ರದ ಅಪ್‌ಡೇಟ್ ಶೇರ್ ಮಾಡಿ ಕೋಮಲ್ ಸಂಭ್ರಮಿಸಿದ್ದಾರೆ. ತಮಿಳು ಸಿನಿಮಾದ ಶೂಟಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಈ ಬಾರಿಯೂ ಸುಮಲತಾ ಪರ ದರ್ಶನ್ ಪ್ರಚಾರ ಫಿಕ್ಸ್

    ಹಾಸ್ಯ ನಟನಾಗಿ ಪರಿಚಿತರಾಗಿ ಇದೀಗ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ನಲ್ಲಿ ಕೋಮಲ್ ಮೋಡಿ ಮಾಡ್ತಿದ್ದಾರೆ. ಇದರ ನಡುವೆ ಕಾಲಿವುಡ್ ಸಿನಿಮಾದಲ್ಲಿ ನಟಿಸುವ ಆಫರ್ ಸಿಕ್ಕಿದೆ. ಚಿತ್ರವೊಂದರಲ್ಲಿ ತಮಿಳು ಲೆಜೆಂಡರಿ ಆ್ಯಕ್ಟರ್ ಶಿವಾಜಿ ಗಣೇಶನ್ ಪುತ್ರ ಪ್ರಭು (Prabhu) ಜೊತೆ ಕೋಮಲ್ (Komal) ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    ಶೂಟಿಂಗ್ ಸೆಟ್‌ನಲ್ಲಿ ನಟ ಪ್ರಭು ಜೊತೆ ಮಾತನಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿ ಪ್ರಭು ಜೊತೆ ತೆರೆಹಂಚಿಕೊಳ್ತಿರೋದು ಖುಷಿ ಕೊಟ್ಟಿದೆ ಎಂದು ಕೋಮಲ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಇದು ನನ್ನ ಮೊದಲ ತಮಿಳು ಸಿನಿಮಾ ಎಂದಿದ್ದಾರೆ.

    ತಮಿಳು ಸಿನಿಮಾ ಜೊತೆ ಕನ್ನಡದ ‘ಕುಟೀರ’ ಸಿನಿಮಾದಲ್ಲಿ ಕೋಮಲ್ ಬ್ಯುಸಿಯಾಗಿದ್ದಾರೆ. ಕೋಮಲ್‌ಗೆ ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸುತ್ತಿದ್ದಾರೆ. ಇದರ ಜೊತೆಗೆ ‘ಗಿಚ್ಚಿ ಗಿಲಿ ಗಿಲಿ’ 3 ಶೋಗೆ ಕೋಮಲ್‌ ಜಡ್ಜ್ ಆಗಿದ್ದಾರೆ.

  • ಕಾಟಾಚಾರದ ಬೆಳೆ ವೀಕ್ಷಣೆ ಮಾಡಿದ ಸಚಿವ ಪ್ರಭು ಚವ್ಹಾಣ್

    ಕಾಟಾಚಾರದ ಬೆಳೆ ವೀಕ್ಷಣೆ ಮಾಡಿದ ಸಚಿವ ಪ್ರಭು ಚವ್ಹಾಣ್

    ಬೀದರ್: ಮಹಾ ಮಳೆ, ಧನ್ನೆಗಾಂವ್ ಹಾಗೂ ಕಾರಂಜಾ ಜಲಾಶಯದಿಂದ ಮಾಂಜ್ರಾನದಿಗೆ ಅಪಾರ ಪ್ರಮಾಣದ ನೀರು ಬಿಟ್ಟ ಪರಿಣಾಮ ಗಡಿ ಜಿಲ್ಲೆ ಬೀದರ್ ಅತಿವೃಷ್ಠಿಗೆ ನಲುಗಿ ಹೋಗಿದೆ. ಬೆಳೆಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಬೆಳೆ ವಿಕ್ಷಣೆ ಮಾಡಿದ್ದಾರೆ.

    ಬೀದರ್ ತಾಲೂಕಿನ ನೇಮತಾಬಾದ್, ಅಲ್ಲೇಪೂರೆ ಹಾಗೂ ಔರಾದ್ ತಾಲೂಕಿನ ಕೌಠಾ ಬಳಿಯ ಮಾಂಜ್ರಾನದಿಗೆ ಭೇಟಿ ನೀಡಿದ್ದರು. ಸಚಿವರು ಬೆಳೆಹಾನಿಯಾದ ಸ್ಥಳದಲ್ಲಿ ಕೇವಲ 10 ನಿಮಿಷಗಳ ಕಾಲ ವೀಕ್ಷಣೆ ಮಾಡಿ ಸ್ಥಳದಲ್ಲಿ ಕ್ಯಾಮೆರಾಗೆ ಪೋಸು ಕೋಡುತ್ತಾ ಕಾಟಾಚಾರಕ್ಕೆ ಬೆಳೆ ವೀಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ:  ಜೆಡಿಎಸ್ ತೋಟದ ಮನೆಗೆ ಕರೆದೊಯ್ದು ಸಂಘಟನೆ ಮಾಡಬೇಕು: ಆರಗ ಜ್ಞಾನೇಂದ್ರ

    ಈ ವೇಳೆ ಇಷ್ಟೋದು ಬೆಳೆಹಾನಿಯಾಗಿದ್ದರು ಇನ್ನೂ ಅಧಿಕಾರಿಗಳು ಸ್ಥಳಕ್ಕೆ ಬರುತ್ತಿಲ್ಲಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‍ಗೆ ರೈತರು ತರಾಟೆ ತೆಗೆದುಕೊಂಡರು. ಜಿಲ್ಲಾಧಿಕಾರಿ ರಾಮಚಂದ್ರನ್ ಆರ್,ಕೃಷಿ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.