Tag: prabhas

  • ‘ಕಲ್ಕಿ 2898 ಎಡಿ’ ಚಿತ್ರ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಪ್ರಭಾಸ್ ಫ್ಯಾನ್ಸ್

    ‘ಕಲ್ಕಿ 2898 ಎಡಿ’ ಚಿತ್ರ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಪ್ರಭಾಸ್ ಫ್ಯಾನ್ಸ್

    ವೈಜಯಂತಿ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಬಹುಕೋಟಿ ವೆಚ್ಚದ ‘ಕಲ್ಕಿ 2898 ಎಡಿ’ (Kali 2898 AD) ಸಿನಿಮಾ ಬಾಕ್ಸ್ಆಫೀಸ್‌ನಲ್ಲಿ ಗಳಿಕೆಯ ನಾಗಾಲೋಟ ಮುಂದುವರಿಸಿದೆ. ಸಾಹಸ ದೃಶ್ಯಗಳಿಗೆ ಪ್ರೇಕ್ಷಕ ವರ್ಗ ಮೂಕವಿಸ್ಮಿತನಾಗಿದ್ದ. ನಿರ್ದೇಶಕ ನಾಗ್ ಅಶ್ವಿನ್ ಅವರ ಕೈ ಚಳಕಕ್ಕೂ ಬಹುಪರಾಕ್ ಸಿಕ್ಕಿತ್ತು. ಅಭಿಮಾನಿಗಳಿಂದಲೂ ಪ್ರಭಾಸ್ ಹೊಸ ಅವತಾರಕ್ಕೆ ಮೆಚ್ಚುಗೆಯ ಮಹಾಪೂರವೇ ಸಿಕ್ಕಿತ್ತು. ಸಲಾರ್‌ಗೂ ಮುನ್ನ ಸರಣಿ ಸೋಲು ಅನುಭವಿಸಿದ್ದ ಪ್ರಭಾಸ್‌ಗೀಗ ‘ಕಲ್ಕಿ’ ಸಿನಿಮಾ ಮೂಲಕ ಮತ್ತೆ ಮರು ಜೀವ ಸಿಕ್ಕಿದೆ.

    ಪ್ಯಾನ್ ಇಂಡಿಯಾ ಸ್ಟಾರ್ ಎಂಬ ಹಣೆಪಟ್ಟಿಯನ್ನು ಮತ್ತಷ್ಟು ಗಟ್ಟಿಯಾಗಿಯೇ ಅಚ್ಚೊತ್ತಿಕೊಂಡಿದ್ದಾರೆ ಪ್ರಭಾಸ್. ಕಲ್ಕಿ ಸಿನಿಮಾ ಅಂಥದ್ದೊಂದು ದೊಡ್ಡ ಗೆಲುವನ್ನು ಪ್ರಭಾಸ್ (Prabhas) ಅವರಿಗೆ ನೀಡಿದೆ. ಫ್ಯಾಂಟಸಿ ಸಿನಿಮಾ ಮೂಲಕ, ಕಣ್ಣಿಗೆ ಅಚ್ಚರಿ ಎನಿಸುವ ದೃಶ್ಯಾವಳಿಗಳನ್ನೇ ನೋಡುಗರಿಗೆ ನೀಡಿ, ಮಾಸ್ ಆ್ಯಕ್ಷನ್ ಸೀನ್‌ಗಳಿಂದ ಸಮೃದ್ಧವಾದ ಚಿತ್ರವನ್ನೇ ಪ್ರೇಕ್ಷಕನ ತಟ್ಟೆಗೆ ಬಡಿಸಿದ್ದಾರೆ ಪ್ರಭಾಸ್. ತಮ್ಮ ಗಮನಾರ್ಹವಾದ ಪಾತ್ರದಿಂದಲೇ ಗಮನ ಸೆಳೆದ ಪ್ರಭಾಸ್, ಜಾಗತಿಕ ಅಭಿಮಾನಿಗಳಿಗೂ ಹಬ್ಬದೂಟ ಹಾಕಿಸಿದ್ದಾರೆ.

    ಪ್ರಭಾಸ್ ಅವರ ಕಟ್ಟಾ ಅಭಿಮಾನಿಗಳ ತಂಡವೊಂದು ಇತ್ತೀಚೆಗೆ ಅವರ ‘ಕಲ್ಕಿ 2898 ಎಡಿ’ ಸಿನಿಮಾ ವೀಕ್ಷಿಸಲು ಜಪಾನ್‌ನಿಂದ (Japan) ಹೈದರಾಬಾದ್‌ಗೆ ಆಗಮಿಸಿತ್ತು. ಈ ಅದ್ಭುತ ಗೆಸ್ಚರ್ ಸೂಪರ್‌ಸ್ಟಾರ್‌ನ ಜಾಗತಿಕ ಸ್ಟಾರ್‌ಡಮ್‌ಗೆ ಹಿಡಿದ ಸಾಕ್ಷಿ.‌ ಇದನ್ನೂ ಓದಿ:ದರ್ಶನ್ ಘಟನೆ ಕೇಳಿದ್ಮೇಲೆ ಶಾಕ್ ಆಯ್ತು: ‘ತಾರಕ್‌’ ನಟಿ ಶಾನ್ವಿ ಶ್ರೀವಾತ್ಸವ್

    ಚಿತ್ರದ ಅಧಿಕೃತ ಇನ್ಸ್ಟಾಗ್ರಾಂ ಹ್ಯಾಂಡಲ್, ಹೈದರಾಬಾದ್‌ನ ಪ್ರಸಾದ್ಸ್ ಮಲ್ಟಿಪ್ಲೆಕ್ಸ್‌ನಲ್ಲಿ ಐಕಾನಿಕ್ ರೆಬೆಲ್ ಟ್ರಕ್ ಪಕ್ಕದಲ್ಲಿ ನಿಂತಿರುವ ಮೂವರು ಜಪಾನಿ ಅಭಿಮಾನಿಗಳ ಫೋಟೋಗಳನ್ನು ಹಂಚಿಕೊಂಡಿದೆ. ಪ್ರಭಾಸ್ ಪಾತ್ರದ ಭೈರವ ಮತ್ತು ಬುಜ್ಜಿ ವಾಹನದ ಫೋಟೋ ಇರುವ ವಿಶೇಷ ಬಾವುಟ ಹಿಡಿದು ‘ಕಲ್ಕಿ 2898 ಎಡಿ’ ಚಿತ್ರ ಬಿಡುಗಡೆಗೆ ಅಭಿನಂದನೆಗಳು ಎಂದು ಜಪಾನಿನ ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಶಿವರಾಜ್‌ಕುಮಾರ್, ಹೇಮಂತ್ ರಾವ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್

    ‘ಸಲಾರ್’ ನಂತರ ಬಿಡುಗಡೆಯಾದ ಕಲ್ಕಿ ಸಿನಿಮಾ ಮೂಲಕ ಪ್ರಭಾಸ್ ಚಿತ್ರೋದ್ಯಮದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ತಲುಪಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಓಪನಿಂಗ್ ಪ್ರಭಾಸ್ ಸಿನಿಮಾಗಳಿಗೆ ಸಿಗುತ್ತಿವೆ. ಇದೀಗ ‘ಕಲ್ಕಿ 2898 ಎಡಿ’ ಸಿನಿಮಾ ಸಹ ಇದಕ್ಕೆ ಹೊರತಾಗಿಲ್ಲ, ಇದು ಭಾರತೀಯ ಚಿತ್ರರಂಗದಲ್ಲಿ ಅವರ ಮೂರನೇ ಅತಿದೊಡ್ಡ ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ.

    ‘ಬಾಹುಬಲಿ’ಯಿಂದ ‘ಸಲಾರ್’, ‘ಕಲ್ಕಿ 2898 ಎಡಿ’ ವರೆಗೆ ಪ್ರಭಾಸ್ ತಮ್ಮ ಸ್ಟಾರ್ ಪವರ್‌ಗೆ ಸಾಟಿಯಿಲ್ಲ ಎಂಬುದನ್ನು ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಸಮಕಾಲೀನ ಸಿನಿಮಾರಂಗದಲ್ಲಿ ಅತ್ಯಂತ ಅಪ್ರತಿಮ ಮತ್ತು ಪ್ರಭಾವಶಾಲಿ ನಟರಲ್ಲಿ ಒಬ್ಬರಾಗಿ ಹೊರಹೊಮ್ಮುತ್ತಿದ್ದಾರೆ ಪ್ರಭಾಸ್. ನಾಗ್ ಅಶ್ವಿನ್ ನಿರ್ದೇಶಿಸಿದ ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರಂತಹ ಲೆಜಂಡರಿ ಕಲಾವಿದರಿದ್ದಾರೆ. ದೀಪಿಕಾ ಪಡುಕೋಣೆ (Deepika Padukone) ಮತ್ತು ದಿಶಾ ಪಟಾನಿ ಸೇರಿ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ.

  • Kalki 2898 AD: ರಿಲೀಸ್ ಆದ 4 ದಿನದಲ್ಲಿ 500 ಕೋಟಿ ಕಲೆಕ್ಷನ್ ಮಾಡಿದ ಪ್ರಭಾಸ್ ಸಿನಿಮಾ

    Kalki 2898 AD: ರಿಲೀಸ್ ಆದ 4 ದಿನದಲ್ಲಿ 500 ಕೋಟಿ ಕಲೆಕ್ಷನ್ ಮಾಡಿದ ಪ್ರಭಾಸ್ ಸಿನಿಮಾ

    ಡಾರ್ಲಿಂಗ್ ಪ್ರಭಾಸ್ (Prabhas), ದೀಪಿಕಾ ಪಡುಕೋಣೆ ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಜೂನ್ 27ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು. ಬಿಡುಗಡೆಯಾದ 4 ದಿನಕ್ಕೆ 500 ಕೋಟಿ ರೂ. ಕಲೆಕ್ಷನ್ ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಇದನ್ನೂ ಓದಿ:ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ: ಗಣೇಶ್

    ಈ ಸಿನಿಮಾದ ಕತೆ ನಡೆಯುವುದು ಕಲಿಯುಗದ ಅಂತ್ಯದಲ್ಲಿ ಎಂದು ನಿರ್ದೇಶಕ ತೋರಿಸಿ ಕೊಟ್ಟಿದ್ದಾರೆ. 6000 ಸಾವಿರ ವರ್ಷಗಳ ನಡುವೆ ನಡೆವ ಕತೆಯಿದು. 3 ಗಂಟೆಯಲ್ಲಿ ಹೇಳಲು ಸಾಧ್ಯವಿಲ್ಲ. ಎರಡನೇ ಭಾಗದಲ್ಲಿ ಕಲ್ಕಿ ಚಿತ್ರ ಹಲವು ಟ್ವಿಸ್ಟ್‌ಗಳೊಂದಿಗೆ ಬರಲಿದೆ. ಮೊದಲ ಭಾಗದಲ್ಲೇ ಸಾಕಷ್ಟು ಕೌತುಕ ಮೂಡಿಸಿದ ಕಾರಣ ಚಿತ್ರ ಈಗ ಗೆದ್ದು ಬೀಗಿದೆ. 500 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

    ಅಂದಹಾಗೆ, ಸಿನಿಮಾ ರಿಲೀಸ್‌ಗೂ ಮುನ್ನ 2 ಭಾಗಗಳಲ್ಲಿ ಬರಲಿದೆ ಎಂದು ಚಿತ್ರತಂಡ ಘೋಷಿಸಿರಲಿಲ್ಲ. ಈಗ ಸಿನಿಮಾ ನೋಡಿದವರಿಗೆ ಇದು ಖಾತ್ರಿಯಾಗಿದೆ. ಚಿತ್ರದ ಬಗ್ಗೆ ಇನ್ನೂ ಕಥೆ ಹೊರಬರೋದು ಬಾಕಿಯಿದೆ. ಇದು ಆರಂಭವಷ್ಟೇ, ಕಲ್ಕಿ ಭಾಗ 2ರಲ್ಲಿ ಮತ್ತಷ್ಟು ಮಾಹಿತಿ ಸಿಗಲಿದೆ.

    ವೈಜಯಂತಿ ಮೂವೀಸ್ ನಿರ್ಮಾಣದ ಈ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone) ಜೊತೆ ಬಿಗ್ ಬಿ, ಕಮಲ್ ಹಾಸನ್, ದಿಶಾ ಪಟಾನಿ ಸೇರಿದಂತೆ ಹಲವರು ನಟಿಸಿದ್ದಾರೆ. ಮೃಣಾಲ್ ಠಾಕೂರ್, ವಿಜಯ್ ದೇವರಕೊಂಡ, ರಾಜಮೌಳಿ, ರಾಮ್ ಗೋಪಾಲ್ ವರ್ಮಾ,ದುಲ್ಕರ್ ಸಲ್ಮಾನ್ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದಾರೆ.

  • Kalki 2898 AD: 7 ನಿಮಿಷ ನಟಿಸಿದಕ್ಕೆ 20 ಕೋಟಿ ಸಂಭಾವನೆ ಪಡೆದ ಕಮಲ್ ಹಾಸನ್

    Kalki 2898 AD: 7 ನಿಮಿಷ ನಟಿಸಿದಕ್ಕೆ 20 ಕೋಟಿ ಸಂಭಾವನೆ ಪಡೆದ ಕಮಲ್ ಹಾಸನ್

    ಪ್ಯಾನ್ ಇಂಡಿಯಾ ಸಿನಿಮಾ ‘ಕಲ್ಕಿ 2898 ಎಡಿ’ (Kalki 2898 AD)  ಜೂನ್ 27ರಂದು ಬಿಡುಗಡೆಯಾಗಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಇದೀಗ ಕಲ್ಕಿ ಚಿತ್ರದಲ್ಲಿ ವಿಲನ್ ಆಗಿ ನಟಿಸಿರುವ ಕಮಲ್ ಹಾಸನ್ (Kamal Haasan) 7 ನಿಮಿಷ ನಟಿಸಿದಕ್ಕೆ 20 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ.

    ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone), ಬಿಗ್ ಬಿ ನಟನೆಯ ಕಲ್ಕಿ ಚಿತ್ರ ಸಕ್ಸಸ್‌ಫುಲ್ ಪ್ರದರ್ಶನ ಕಾಣ್ತಿದೆ. ರಿಲೀಸ್ ಬಳಿಕ ಕಮಲ್ ಹಾಸನ್ (Kamal Haasan) ನಟಿಸಿದ ಯಾಸ್ಕಿನ್ ಪಾತ್ರದ ಬಗ್ಗೆ ಟಾಕ್ ಆಗುತ್ತಿದೆ. ಈ ಪಾತ್ರಕ್ಕೆ ಅವರು ಸೆಲೆಕ್ಟ್ ಆಗಿದ್ದು ಹೇಗೆ? ಸಂಭಾವನೆ ವಿಚಾರದ ಬಗ್ಗೆ ಫ್ಯಾನ್ಸ್‌ಗೆ ಈಗ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ:ದರ್ಶನ್‌ ಪ್ರಕರಣ: ಹಣೆಬರಹದಲ್ಲಿ ಏನಿದೆಯೋ ಅದೇ ಆಗುತ್ತೆ- ಶಿವಣ್ಣ ಫಸ್ಟ್‌ ರಿಯಾಕ್ಷನ್

    ಸಿನಿಮಾ ಆರಂಭದಲ್ಲಿ ಹಣ್ಣು ಹಣ್ಣು ಮುದುಕನ ಪಾತ್ರದಲ್ಲಿ ಕಮಲ್ ಎಂಟ್ರಿ ಕೊಡ್ತಾರೆ. ಆದರೆ ಚಿತ್ರದ ಅಂತ್ಯದಲ್ಲಿ ಅವರ ನಿಜವಾದ ಲುಕ್ ರಿವೀಲ್ ಆಗುತ್ತದೆ. ಅದನ್ನು ನೋಡಿಯೇ ಫ್ಯಾನ್ಸ್ ದಂಗಾಗಿದ್ದಾರೆ. ಡೈರೆಕ್ಟರ್ ನಾಗ್ ಅಶ್ವಿನ್ ಕತೆ ಮಾಡಿದಾಗಲೇ ಯಾಸ್ಕಿನ್ ಪಾತ್ರವಿತ್ತಂತೆ ಆದರೆ ಯಾರು ಈ ಪಾತ್ರ ಸೂಕ್ತ ಎಂದು ಫೈನಲ್ ಆಗಿರಲಿಲ್ಲವಂತೆ.

    ಬಳಿಕ ಚಿತ್ರೀಕರಣ ಪ್ರಾರಂಭಿಸಿದ ವೇಳೆ, ಕೊಂಚ ಅಳುಕಿನಿಂದಲೇ ಕಮಲ್ ಹಾಸನ್‌ರನ್ನು ಯಾಸ್ಕಿನ್ ಪಾತ್ರಕ್ಕೆ ಕೇಳಿದ್ರಂತೆ ನಾಗ್ ಅಶ್ವಿನ್. ಆದರೆ ಕಮಲ್ ಖುಷಿಯಿಂದಲೇ ಈ ಪಾತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರು. ಆದರೆ ಮೂರೇ ದೃಶ್ಯ, 7 ನಿಮಿಷ 4 ಸೆಕೆಂಡ್ ನಟಿಸಿದ ಕಮಲ್‌ ಹಾಸನ್‌ಗೆ ನಿರ್ಮಾಪಕ ಅಶ್ವಿನ್ ದತ್ 20 ಕೋಟಿ ರೂ. ಸಂಭಾವನೆ ನೀಡಿರೋದು ಈಗ ಹಾಟ್ ಟಾಪಿಕ್ ಆಗಿದೆ.

    ಅಂದಹಾಗೆ, ‘ಕಲ್ಕಿ 2898 ಎಡಿ’ ಪಾರ್ಟ್ 2ನಲ್ಲಿ ಕಮಲ್ ಹಾಸನ್ ಪಾತ್ರವೇ ಹೈಲೆಟ್. ವಿಲನ್ ಆಗಿರುವ ಕಮಲ್ ಪಾತ್ರದ ಮೇಲೆ ಕಥೆ ಸುತ್ತಲಿದೆಯಂತೆ. ಭಾಗ 2ರಲ್ಲಿ ಯಾರು ಊಹಿಸಿರದ ಸಾಕಷ್ಟು ಟ್ವಿಸ್ಟ್‌ಗಳು ಎದುರಾಗಲಿದೆ. ಕಲ್ಕಿ ಸಿನಿಮಾದ ಸಕ್ಸಸ್‌ ನಂತರ ಪಾರ್ಟ್‌ 2 ಬರಲಿದೆ ಎಂದು ಕೇಳಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

  • ಬರಲಿದೆ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಪಾರ್ಟ್ 2

    ಬರಲಿದೆ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಪಾರ್ಟ್ 2

    ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone), ಬಿಗ್ ಬಿ ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಜೂನ್ 27ರಂದು ರಿಲೀಸ್ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಈ ಬೆನ್ನಲ್ಲೇ ಕಲ್ಕಿ ಪಾರ್ಟ್ 2 ಬರುವ ಬಗ್ಗೆ ಕೂಡ ಸಿಹಿಸುದ್ದಿ ಸಿಕ್ಕಿದೆ. ಇದನ್ನೂ ಓದಿ:ಯಾರೂ ಜೈಲಿನ ಬಳಿ ಬರಬೇಡಿ: ಅಭಿಮಾನಿಗಳಿಗೆ ನಟ ದರ್ಶನ್‌ ಮನವಿ

    ಈ ಸಿನಿಮಾದ ಕತೆ ನಡೆಯುವುದು ಕಲಿಯುಗದ ಅಂತ್ಯದಲ್ಲಿ ಎಂದು ನಿರ್ದೇಶಕ ತೋರಿಸಿ ಕೊಟ್ಟಿದ್ದಾರೆ. 6000 ಸಾವಿರ ವರ್ಷಗಳ ನಡುವೆ ನಡೆವ ಕತೆಯಿದು. 3 ಗಂಟೆಯಲ್ಲಿ ಹೇಳಲು ಸಾಧ್ಯವಿಲ್ಲ. ಎರಡನೇ ಭಾಗದಲ್ಲಿ ಕಲ್ಕಿ ಚಿತ್ರ ಹಲವು ಟ್ವಿಸ್ಟ್‌ಗಳೊಂದಿಗೆ ಬರಲಿದೆ.

    ಸಿನಿಮಾ ರಿಲೀಸ್‌ಗೂ ಮುನ್ನ 2 ಭಾಗಗಳಲ್ಲಿ ಬರಲಿದೆ ಎಂದು ಚಿತ್ರತಂಡ ಘೋಷಿಸಿರಲಿಲ್ಲ. ಈಗ ಸಿನಿಮಾ ನೋಡಿದವರಿಗೆ ಇದು ಖಾತ್ರಿಯಾಗಿದೆ. ಚಿತ್ರದ ಬಗ್ಗೆ ಇನ್ನೂ ಕಥೆ ಹೊರಬರೋದು ಬಾಕಿಯಿದೆ. ಇದು ಆರಂಭವಷ್ಟೇ, ಕಲ್ಕಿ ಭಾಗ 2ರಲ್ಲಿ ಮತ್ತಷ್ಟು ಮಾಹಿತಿ ಸಿಗಲಿದೆ.

    ವೈಜಯಂತಿ ಮೂವೀಸ್ ನಿರ್ಮಾಣದ ಈ ಚಿತ್ರದಲ್ಲಿ ಪ್ರಭಾಸ್ (Prabhas), ದೀಪಿಕಾ ಪಡುಕೋಣೆ, ಬಿಗ್ ಬಿ, ಕಮಲ್ ಹಾಸನ್, ದಿಶಾ ಪಟಾನಿ ಸೇರಿದಂತೆ ಹಲವರು ನಟಿಸಿದ್ದಾರೆ. ಮೃಣಾಲ್ ಠಾಕೂರ್, ವಿಜಯ್ ದೇವರಕೊಂಡ, ರಾಜಮೌಳಿ, ರಾಮ್ ಗೋಪಾಲ್ ವರ್ಮಾ,ದುಲ್ಕರ್ ಸಲ್ಮಾನ್ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದಾರೆ.

  • ‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್- ಮೊದಲ ಶೋಗೆ ಉತ್ತಮ ರೆಸ್ಪಾನ್ಸ್

    ‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್- ಮೊದಲ ಶೋಗೆ ಉತ್ತಮ ರೆಸ್ಪಾನ್ಸ್

    ಪ್ರಭಾಸ್ (Prabhas), ದೀಪಿಕಾ ಪಡುಕೋಣೆ (Deepika Padukone) ನಟನೆಯ ‘ಕಲ್ಕಿ 2898 ಎಡಿ’ ಇಂದು (ಜೂನ್ 27) ಸಿನಿಮಾ ರಿಲೀಸ್ ಆಗಿದೆ. ಫಸ್ಟ್ ಡೇ, ಫಸ್ಟ್ ಶೋಗೆ ಪ್ರೇಕ್ಷಕರಿಂದ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

    ಪ್ರಭಾಸ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಅವರು ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದಲ್ಲಿ ನಟಿಸಿದ್ದಾರೆ. ಕಲ್ಕಿ ಚಿತ್ರಕ್ಕೆ ಐತಿಹಾಸಿಕದ ಟಚ್ ಕೊಟ್ಟಿದ್ದು, ಸಹಕಾರಿ ಆಗಿದೆ. ಕೊನೆಯ 30 ನಿಮಿಷ ಥ್ರಿಲ್ಲಿಂಗ್ ಆಗಿದೆ ಎಂದು ಫ್ಯಾನ್ಸ್ ಕೊಂಡಾಡಿದ್ದಾರೆ.‌ ಇದನ್ನೂ ಓದಿ:ಕೀರ್ತಿ ಸುರೇಶ್ ನಟನೆಯ ಮೊದಲ ಬಾಲಿವುಡ್ ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್

    ಇನ್ನೂ ಚಿತ್ರದಲ್ಲಿ ಭೂತ, ವರ್ತಮಾನ ಹಾಗೂ ಭವಿಷ್ಯದ ಕಥೆಯನ್ನು ಡೈರೆಕ್ಟರ್ ನಾಗ್ ಅಶ್ವೀನ್ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಟ್ರೈಲರ್ ಝಲಕ್‌ನಲ್ಲೇ ಆ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಜಗತ್ತಿನ ಮೊದಲ ಪ್ರದೇಶ ಮತ್ತು ಕೊನೆಯ ಪ್ರದೇಶ ಕಾಶಿ ಎನ್ನುವ ಮೂಲಕ ಕಲ್ಕಿ ಟ್ರೈಲರ್ ಶುರುವಾಗಿತ್ತು.

    ಜಗತ್ತಿನಿಂದ ಎಲ್ಲವನ್ನೂ ಕಿತ್ತುಕೊಂಡರೆ ಎಲ್ಲವೂ ಇರುತ್ತದೆ ಎನ್ನುವ ಕುತೂಹಲಕರ ಸಂಭಾಷೆಯಣೆಯಿದೆ. 6000 ಹಿಂದಿನ ಶಕ್ತಿ ಮತ್ತೆ ಬಂದಿದೆ. ಅಳಿವು- ಉಳಿವಿಗಾಗಿ ಹೋರಾಡುವವರ ದೃಶ್ಯ ತೋರಿಸಲಾಗಿದೆ. ಭೈರವನಾಗಿ ಯುದ್ಧಕ್ಕೆ ಪ್ರಭಾಸ್ ಸಜ್ಜಾಗಿದ್ದಾರೆ. 2 ಜಗತ್ತಿನ ಹೋರಾಟವನ್ನು ಸೈನ್ಸ್ ಫಿಕ್ಷನ್ ಮೂಲಕ ಅದ್ಭುತವಾಗಿ ತೋರಿಸಿದ್ದಾರೆ. ಟ್ರೈಲರ್‌ನಿಂದ ಕುತೂಹಲ ಕೆರಳಿದ್ದ ಈ ಚಿತ್ರ, ರಿಲೀಸ್ ಬಳಿಕ ಪ್ರೇಕ್ಷಕರಿಗೆ ಉತ್ತರ ಸಿಕ್ಕಿದೆ. ಸಿನಿಮಾ ನೋಡಿ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಕುಂದಾಪುರಕ್ಕೆ ಬಂದ ‘ಕಲ್ಕಿ’ ಬುಜ್ಜಿ ಜೊತೆ ರಿಷಬ್ ಶೆಟ್ಟಿ ರೌಂಡ್ಸ್

    ಕುಂದಾಪುರಕ್ಕೆ ಬಂದ ‘ಕಲ್ಕಿ’ ಬುಜ್ಜಿ ಜೊತೆ ರಿಷಬ್ ಶೆಟ್ಟಿ ರೌಂಡ್ಸ್

    ಪ್ರಭಾಸ್ (Prabhas) ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ರಿಲೀಸ್‌ಗೂ ಮುನ್ನ ಸಿನಿಮಾ ಅದೆಷ್ಟು ಸದ್ದು ಮಾಡಿದ್ಯೋ ಅಷ್ಟೇ ಚಿತ್ರದ ಬುಜ್ಜಿ ವಾಹನ ಕೂಡ ಅಷ್ಟೇ ಫೇಮಸ್ ಆಗಿದೆ. ಕೆಲದಿನಗಳ ಹಿಂದೆ ನಾಗಚೈತನ್ಯ ಈ ಕಾರನ್ನು ಓಡಿಸಿ ಖುಷಿಪಟ್ಟಿದ್ದರು. ಈಗ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಕೂಡ ಓಡಿಸಿ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ಜೈಲಿನಲ್ಲಿರುವ ನಟ ದರ್ಶನ್ ಭೇಟಿಗೆ ಯಾರಿಗೂ ಅವಕಾಶವಿಲ್ಲ!

    ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಭಾಸ್ ಓಡಿಸುವ ಮೂರು ಚಕ್ರದ ವಾಹನದ ಹೆಸರು ಬುಜ್ಜಿ. ಭಾರಿ ಬಲಶಾಲಿಯಾಗಿರುವ ಈ ವಾಹನ `ಬುಜ್ಜಿ’ ನಾಯಕ ಪ್ರಭಾಸ್‌ಗೆ ವಾಹನ ಮಾತ್ರವಲ್ಲ, ಬೆಸ್ಟ್ ಫ್ರೆಂಡ್ ಕೂಡ. ಇದೀಗ ವಾಹನವು ಕುಂದಾಪುರಕ್ಕೆ ಬಂದಿದ್ದು, ನಟ ರಿಷಬ್ ಶೆಟ್ಟಿ ಸಹ ವಾಹನವನ್ನು ಓಡಿಸಿದ್ದಾರೆ.

    ಕುಂದಾಪುರಕ್ಕೆ ಬಂದ ಬುಜ್ಜಿಗೆ ಮದ್ದಳೆ ಮೇಳದಿಂದ ರಿಷಬ್ ಶೆಟ್ಟಿಯವರು ಸ್ವಾಗತ ಕೋರಿದರು. ಬಳಿಕ ಬುಜ್ಜಿ ವಾಹನದಲ್ಲಿ ಕುಳಿತು ರೌಂಡ್ಸ್ ಹೊಡೆದಿದ್ದಾರೆ. ಬುಜ್ಜಿಯನ್ನು ಓಡಿಸಿ ಸಖತ್ ಥ್ರಿಲ್ ಆದರು. ಟೀಸರ್‌ನಲ್ಲೇ ಗೊತ್ತಾಗುತ್ತೆ ಬುಜ್ಜಿಯ ಹವಾ ಹೇಗಿದೆ ಎಂದು. ಬುಜ್ಜಿಯನ್ನು ಡ್ರೈವ್ ಮಾಡಿದ್ದು ಬಹಳ ಒಳ್ಳೆಯ ಅನುಭವ. ಆಲ್ ದಿ ಬೆಸ್ಟ್ ಬುಜ್ಜಿ ಆಂಡ್ ಭೈರವ. ಜೂನ್ 27ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ, ಆಲ್ ದಿ ಬೆಸ್ಟ್ ಪ್ರಭಾಸ್ ಎಂದು ರಿಷಬ್ ಶೆಟ್ಟಿ ಶುಭಹಾರೈಸಿದ್ದಾರೆ.

     

    View this post on Instagram

     

    A post shared by Vyjayanthi Movies (@vyjayanthimovies)

    ಇನ್ನೂ ಚಿತ್ರದಲ್ಲಿ ಭೂತ, ವರ್ತಮಾನ ಹಾಗೂ ಭವಿಷ್ಯದ ಕಥೆಯನ್ನು ಡೈರೆಕ್ಟರ್ ನಾಗ್ ಅಶ್ವೀನ್ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಟ್ರೈಲರ್‌ ಝಲಕ್‌ನಲ್ಲೇ ಆ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಜಗತ್ತಿನ ಮೊದಲ ಪ್ರದೇಶ ಮತ್ತು ಕೊನೆಯ ಪ್ರದೇಶ ಕಾಶಿ ಎನ್ನುವ ಮೂಲಕ ಕಲ್ಕಿ ಟ್ರೈಲರ್‌ ಶುರುವಾಗುತ್ತೆ. ಜಗತ್ತಿನಿಂದ ಎಲ್ಲವನ್ನೂ ಕಿತ್ತುಕೊಂಡರೆ ಎಲ್ಲವೂ ಇರುತ್ತದೆ ಎನ್ನುವ ಕುತೂಹಲಕರ ಸಂಭಾಷೆಯಣೆಯಿದೆ. 6000 ಹಿಂದಿನ ಶಕ್ತಿ ಮತ್ತೆ ಬಂದಿದೆ. ಅಳಿವು- ಉಳಿವಿಗಾಗಿ ಹೋರಾಡುವವರ ದೃಶ್ಯ ತೋರಿಸಲಾಗಿದೆ. ಭೈರವನಾಗಿ ಯುದ್ಧಕ್ಕೆ ಪ್ರಭಾಸ್ ಸಜ್ಜಾಗಿದ್ದಾರೆ. 2 ಜಗತ್ತಿನ ಹೋರಾಟವನ್ನು ಸೈನ್ಸ್ ಫಿಕ್ಷನ್ ಮೂಲಕ ಅದ್ಭುತವಾಗಿ ತೋರಿಸಿದ್ದಾರೆ.

    ಯುದ್ಧದಲ್ಲಿ ಇದುವರೆಗೂ ನಾನು ಸೋತಿಲ್ಲ, ಇದನ್ನೂ ಸಹ ನಾನು ಸೋಲಲ್ಲ ಎಂದು ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ಪ್ರಭಾಸ್ ಜೊತೆ ದೀಪಿಕಾ, ದಿಶಾ ಪಟಾನಿ ಮಿಂಚಿದ್ದಾರೆ. ಅಮಿತಾಭ್, ಕಮಲ್ ಹಾಸನ್ ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ ವಿಎಫ್‌ಎಕ್ಸ್ ದೃಶ್ಯಕ್ಕೆ ಫ್ಯಾನ್ಸ್ ಮನಸೋತಿದ್ದಾರೆ. ಇದೇ ಜೂನ್ 27ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

  • ದೀಪಿಕಾ ಮಗು ಸಿನಿಮಾ ಮಾಡಲಿದೆ- ಭವಿಷ್ಯ ನುಡಿದ ಕಮಲ್ ಹಾಸನ್

    ದೀಪಿಕಾ ಮಗು ಸಿನಿಮಾ ಮಾಡಲಿದೆ- ಭವಿಷ್ಯ ನುಡಿದ ಕಮಲ್ ಹಾಸನ್

    ಚಿತ್ರರಂಗದಲ್ಲಿನ ಬಹುನಿರೀಕ್ಷಿತ ಪ್ರಭಾಸ್, ದೀಪಿಕಾ (Deepika Padukone) ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಇಡೀ ತಂಡ ಬ್ಯುಸಿಯಾಗಿದೆ. ಈ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಮಗು ಸಿನಿಮಾ ಮಾಡಲಿದೆ ಎಂದು ಕಮಲ್ ಹಾಸನ್ ಭವಿಷ್ಯ ನುಡಿದ್ದಾರೆ.

    ನಿರ್ದೇಶಕ ನಾಗ್ ಅಶ್ವೀನ್ (Nag Ashwin) ಮಗುವಿನಂತೆ ಎಂದು ದೀಪಿಕಾ ವಿವರಿಸಿದರು. ನಾಗ್ ಅಶ್ವೀನ್ ಅವರು ನನಗೆ ಕಾಲ್ ಮಾಡಿದ್ದಾಗ ನಾನು ಬಾಂಬೆಯಲ್ಲಿದ್ದೆ. ಬೇರೆ ಬೇರೆ ಸಿನಿಮಾದ ಚಿತ್ರೀಕರಣದಲ್ಲಿದ್ದ ಕಾರಣ, ಕೆಲಸದಿಂದ ಬ್ರೇಕ್ ತೆಗೆದುಕೊಂಡಿದ್ದೆ. ಆಗ ನನಗೆ ಹಲವು ನಿರ್ದೇಶಕರು ಕರೆ ಮಾಡಿದ್ದರು. ಹಾಗಾಗಿ ನಾನು ಏನಾಯಿತು ಎಂದು ಕೇಳಿದಾಗ, ನಾವು ಕಮಲ್ ಸರ್ ಜೊತೆಗೆ ನಮ್ಮ ಮೊದಲ ದಿನದ ಶೂಟ್ ಮಾಡಿದ್ದೇವೆ ಎಂದು ತಿಳಿಸಲು ಕಾಲ್ ಮಾಡಿರೋದಾಗಿ ಮಗುವಿನಂತೆ ನಾಗ್ ಅಶ್ವೀನ್ ಹೇಳಿದರು ಎಂದು ದೀಪಿಕಾ ಮಾತನಾಡಿದರು.

    ಈ ವೇಳೆ, ದೀಪಿಕಾ ಪಡುಕೋಣೆ ಬೇಬಿ ಬಂಪ್ ತೋರಿಸಿ ಮುಂದೊಂದು ದಿನ ಈ ಮಗು ಕೂಡ ಸಿನಿಮಾ ಮಾಡಲಿ ಎಂದು ಹಾರೈಸುತ್ತೇನೆ ಎಂದು ಕಮಲ್ ಹಾಸನ್ (Kamal Haasan) ಮಾತನಾಡಿದರು. ಇದನ್ನೂ ಓದಿ:ರೇಣುಕಾಸ್ವಾಮಿ ನನಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂದ ಚಿತ್ರಾಲ್ ರಂಗಸ್ವಾಮಿ

    ಇನ್ನೂ ಚಿತ್ರದಲ್ಲಿ ಭೂತ, ವರ್ತಮಾನ ಹಾಗೂ ಭವಿಷ್ಯದ ಕಥೆಯನ್ನು ಡೈರೆಕ್ಟರ್ ನಾಗ್ ಅಶ್ವೀನ್ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಟ್ರೈಲರ್ ಝಲಕ್‌ನಲ್ಲೇ ಆ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಜಗತ್ತಿನ ಮೊದಲ ಪ್ರದೇಶ ಮತ್ತು ಕೊನೆಯ ಪ್ರದೇಶ ಕಾಶಿ ಎನ್ನುಮ ಮೂಲಕ ಕಲ್ಕಿ ಟ್ರೈಲರ್ ಶುರುವಾಗುತ್ತೆ. ಜಗತ್ತಿನಿಂದ ಎಲ್ಲವನ್ನೂ ಕಿತ್ತುಕೊಂಡರೆ ಎಲ್ಲವೂ ಇರುತ್ತದೆ ಎನ್ನುವ ಕುತೂಹಲಕರ ಸಂಭಾಷೆಯಣೆಯಿದೆ. 6000 ಹಿಂದಿನ ಶಕ್ತಿ ಮತ್ತೆ ಬಂದಿದೆ. ಅಳಿವು- ಉಳಿವಿಗಾಗಿ ಹೋರಾಡುವವರ ದೃಶ್ಯ ತೋರಿಸಲಾಗಿದೆ. ಭೈರವನಾಗಿ ಯುದ್ಧಕ್ಕೆ ಪ್ರಭಾಸ್ ಸಜ್ಜಾಗಿದ್ದಾರೆ. 2 ಜಗತ್ತಿನ ಹೋರಾಟವನ್ನು ಸೈನ್ಸ್ ಫಿಕ್ಷನ್ ಮೂಲಕ ಅದ್ಭುತವಾಗಿ ತೋರಿಸಿದ್ದಾರೆ.

    ಯುದ್ಧದಲ್ಲಿ ಇದುವರೆಗೂ ನಾನು ಸೋತಿಲ್ಲ, ಇದನ್ನೂ ಸಹ ನಾನು ಸೋಲಲ್ಲ ಎಂದು ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ಪ್ರಭಾಸ್ ಜೊತೆ ದೀಪಿಕಾ, ದಿಶಾ ಪಟಾನಿ ಮಿಂಚಿದ್ದಾರೆ. ಅಮಿತಾಭ್, ಕಮಲ್ ಹಾಸನ್ ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ವಿಎಫ್‌ಎಕ್ಸ್ ದೃಶ್ಯಕ್ಕೆ ಫ್ಯಾನ್ಸ್ ಮನಸೋತಿದ್ದಾರೆ. ಇದೇ ಜೂನ್ 27ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

  • ಬೆಂಗಳೂರಿನಲ್ಲಿ ಪ್ರಭಾಸ್ ಚಿತ್ರಕ್ಕೆ ಬೇಡಿಕೆ- ಟಿಕೆಟ್ ರೇಟ್ ಡಬಲ್

    ಬೆಂಗಳೂರಿನಲ್ಲಿ ಪ್ರಭಾಸ್ ಚಿತ್ರಕ್ಕೆ ಬೇಡಿಕೆ- ಟಿಕೆಟ್ ರೇಟ್ ಡಬಲ್

    ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone) ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಇದೇ ಜೂನ್ 27ಕ್ಕೆ ರಿಲೀಸ್ ಆಗಲಿದೆ. ಕನ್ನಡ, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಕೂಡ ಶುರುವಾಗಿದೆ. ಇದನ್ನೂ ಓದಿ:250 ಕೋಟಿ ಸಾಲದ ಸುಳಿಯಲ್ಲಿ ರಕುಲ್ ಪ್ರೀತ್ ಸಿಂಗ್ ಪತಿ

    ಮಲ್ಟಿಸ್ಟಾರ್ ಸಿನಿಮಾ ಆಗಿರುವ ‘ಕಲ್ಕಿ’ ಚಿತ್ರದ ಬಗ್ಗೆ ಫ್ಯಾನ್ಸ್ ಭಾರೀ ಕ್ರೇಜ್ ಇದೆ. ಇನ್ನೂ ಬೆಳ್ಳಂಬೆಳಗ್ಗೆ ಸಾಕಷ್ಟು ಕಡೆ ಸಿನಿಮಾದ ಮೊದಲ ಪ್ರದರ್ಶನ ಆರಂಭವಾಗಿದೆ. ಚಿತ್ರಕ್ಕೆ ಭಾರೀ ಕ್ರೇಜ್ ಇದೆ ಎಂಬ ಕಾರಣಕ್ಕೆ ಟಿಕೆಟ್ ದರ ಕೂಡ ಹೆಚ್ಚಿಸಲಾಗಿದೆ. ಇದನ್ನೂ ಓದಿ:ಸರಳವಾಗಿ ಜರುಗಿತು ಝಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆ

    ಇದೀಗ ಟಿಕೆಟ್ ದರವನ್ನು 400 ರೂ.ಯಿಂದ 700 ರೂ.ವರೆಗೆ ಹೆಚ್ಚಿಸಲಾಗಿದೆ. ಇನ್ನೂ ಟಿಕೆಟ್ ದರ ಹೆಚ್ಚಿಸಲಿದ್ದಾರೆ ಎನ್ನಲಾಗಿದೆ. ಬಾಹುಬಲಿ ಸಿನಿಮಾ ಬಳಿಕ ಮತ್ತೆ ಅದೇ ರೀತಿ ಕಲ್ಕಿ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಿಸಿದೆ.

    ಇನ್ನೂ ಚಿತ್ರದಲ್ಲಿ ಭೂತ, ವರ್ತಮಾನ ಹಾಗೂ ಭವಿಷ್ಯದ ಕಥೆಯನ್ನು ಡೈರೆಕ್ಟರ್ ನಾಗ್ ಅಶ್ವೀನ್ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಟ್ರೈಲರ್‌ ಝಲಕ್‌ನಲ್ಲೇ ಆ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಜಗತ್ತಿನ ಮೊದಲ ಪ್ರದೇಶ ಮತ್ತು ಕೊನೆಯ ಪ್ರದೇಶ ಕಾಶಿ ಎನ್ನುಮ ಮೂಲಕ ಕಲ್ಕಿ ಟ್ರೈಲರ್ ಶುರುವಾಗುತ್ತೆ. ಜಗತ್ತಿನಿಂದ ಎಲ್ಲವನ್ನೂ ಕಿತ್ತುಕೊಂಡರೆ ಎಲ್ಲವೂ ಇರುತ್ತದೆ ಎನ್ನುವ ಕುತೂಹಲಕರ ಸಂಭಾಷೆಯಣೆಯಿದೆ. 6000 ಹಿಂದಿನ ಶಕ್ತಿ ಮತ್ತೆ ಬಂದಿದೆ. ಅಳಿವು- ಉಳಿವಿಗಾಗಿ ಹೋರಾಡುವವರ ದೃಶ್ಯ ತೋರಿಸಲಾಗಿದೆ. ಭೈರವನಾಗಿ ಯುದ್ಧಕ್ಕೆ ಪ್ರಭಾಸ್ ಸಜ್ಜಾಗಿದ್ದಾರೆ. 2 ಜಗತ್ತಿನ ಹೋರಾಟವನ್ನು ಸೈನ್ಸ್ ಫಿಕ್ಷನ್ ಮೂಲಕ ಅದ್ಭುತವಾಗಿ ತೋರಿಸಿದ್ದಾರೆ.

    ಯುದ್ಧದಲ್ಲಿ ಇದುವರೆಗೂ ನಾನು ಸೋತಿಲ್ಲ, ಇದನ್ನೂ ಸಹ ನಾನು ಸೋಲಲ್ಲ ಎಂದು ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ಪ್ರಭಾಸ್ (Prabhas) ಜೊತೆ ದೀಪಿಕಾ, ದಿಶಾ ಪಟಾನಿ ಮಿಂಚಿದ್ದಾರೆ. ಅಮಿತಾಭ್, ಕಮಲ್ ಹಾಸನ್ ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ವಿಎಫ್‌ಎಕ್ಸ್ ದೃಶ್ಯಕ್ಕೆ ಫ್ಯಾನ್ಸ್ ಮನಸೋತಿದ್ದಾರೆ. ಸದ್ಯ ಜೂನ್‌ 27ಕ್ಕೆ ಕಲ್ಕಿ ಸಿನಿಮಾ ಥಿಯೇಟರ್‌ನಲ್ಲಿ ಅಬ್ಬರಿಸಲು ಸಿದ್ಧವಾಗಿದೆ.

  • ‘ಕಲ್ಕಿ’ ಸಿನಿಮಾದ ಫೈನಲ್ ಟ್ರೈಲರ್ ರಿಲೀಸ್:  ಜೂನ್ 27ಕ್ಕೆ ಪ್ರಭಾಸ್ ಫ್ಯಾನ್ಸ್ ಗೆ ಹಬ್ಬ

    ‘ಕಲ್ಕಿ’ ಸಿನಿಮಾದ ಫೈನಲ್ ಟ್ರೈಲರ್ ರಿಲೀಸ್: ಜೂನ್ 27ಕ್ಕೆ ಪ್ರಭಾಸ್ ಫ್ಯಾನ್ಸ್ ಗೆ ಹಬ್ಬ

    ವೈಜ್ಞಾನಿಕ ಮತ್ತು ಕಾಲ್ಪನಿಕ ಸಮ್ಮಿಶ್ರಣದ ದೃಶ್ಯಕಾವ್ಯ ‘ಕಲ್ಕಿ 2898 AD’ (Kalki) ಚಿತ್ರದ ಬಹು ನಿರೀಕ್ಷಿತ ಬಿಡುಗಡೆಯ ಟ್ರೈಲರ್ ಅಂತಿಮವಾಗಿ ಅನಾವರಣಗೊಂಡಿದೆ. ಮೊದಲ ನೋಟವು ಭಾರತೀಯ ಪುರಾಣಗಳಲ್ಲಿ ಬೇರೂರಿರುವ ಅಸಾಧಾರಣ ‘ಕಲ್ಕಿ 2898 AD’ ಸಿನಿಮೀಯ ಬ್ರಹ್ಮಾಂಡವನ್ನು ಪ್ರೇಕ್ಷಕರಿಗೆ ಪರಿಚಯಿಸಿದರೆ, ಇದೀಗ ಬಿಡುಗಡೆ ಆಗಿರುವ ಟ್ರೇಲರ್ ಚಿತ್ರದೊಳಗಿನ ಇನ್ನಷ್ಟ ಆಳವನ್ನು ನೋಡುಗನಿಗೆ ಪರಿಚಯಿಸಿದೆ. ಇದು ಮಹಾಕಾವ್ಯದ ಇನ್ನೊಂದು ಹಂತದ ಬಗ್ಗೆ ಸುಳಿವು ನೀಡುತ್ತದೆ.

    ಟ್ರೇಲರ್‌ನಲ್ಲಿ ಒಂದಕ್ಕಿಂತ ಒಂದು ಮೀರಿಸುವ ಪಾತ್ರಗಳೇ ಹೈಲೈಟ್.‌ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ‘ಅಶ್ವತ್ಥಾಮ’ ಆಗಿ ಧೈರ್ಯಶಾಲಿ ಸಾಹಸಗಳನ್ನು ಪ್ರದರ್ಶಿಸುತ್ತಾರೆ. ಉಳಗನಾಯಗನ್ ಕಮಲ್ ಹಾಸನ್ ಗುರುತಿಸಲಾಗದ ಇನ್ನೂ ಮಾರಣಾಂತಿಕ ಅವತಾರದಲ್ಲಿ ‘ಯಾಸ್ಕಿನ್’ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಭೈರವನಾಗಿ, ದೀಪಿಕಾ ಪಡುಕೋಣೆ ‘ಸುಮತಿ’ ಪಾತ್ರದಲ್ಲಿ ಎದುರಾಗಿದ್ದಾರೆ. ದಿಶಾ ಪಟಾನಿ ‘ರಾಕ್ಸಿ’ ಖಡಕ್‌ ಆಗಿಯೇ ಮಿಂಚು ಹರಿಸಿದ್ದಾರೆ.

    ಕಲ್ಕಿ 2898 AD ಚಿತ್ರದ ಟ್ರೇಲರ್‌ನಲ್ಲಿ ಬಗೆಬಗೆ ವಿಭಿನ್ನ ಪ್ರಪಂಚಗಳನ್ನು ಕಾಣಬಹುದು. ಒಂದು  ಕಾಶಿ, ಅದರ ಉಳಿವಿಗಾಗಿ ಹೋರಾಡುತ್ತಿರುವ, ಕೊನೆಯದಾಗಿ ಉಳಿದ ನಗರವೆಂದು ಬಿಂಬಿಸಲಾಗಿದೆ. ದೃಶ್ಯವೈಭವವೇ ಇಡೀ ಟ್ರೇಲರ್‌ನ ಜೀವಾಳ. ಊಹೆಗೂ ನಿಲುಕದ ಒಂದಷ್ಟು ಅಚ್ಚರಿಗೆ ದೂಡುವ ದೃಶ್ಯಗಳೇ ಇಲ್ಲಿನ ಹೈಲೈಟ್.‌ ಅತ್ಯುತ್ತಮ ಹಿನ್ನೆಲೆ ಸ್ಕೋರ್, ಹೈ ಕ್ಲಾಸ್ VFX ಮತ್ತು ರೋಮಾಂಚನಗೊಳಿಸುವ ದೃಶ್ಯಗಳೊಂದಿಗೆ, ಈ ಸಿನಿಮಾ ಮೂಡಿಬಂದಿದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

    ‘ಕಲ್ಕಿ 2898 AD’ ಚಿತ್ರದಲ್ಲಿ ನಿರ್ದೇಶಕ ನಾಗ್ ಅಶ್ವಿನ್ ಅವರ ದೂರದೃಷ್ಟಿಯ ವಿಧಾನವು ಭಾರತೀಯ ಸಿನಿಮಾವನ್ನು ಅದರ ನೆಲದ ದೃಶ್ಯಗಳು ಮತ್ತು ಕಥೆ ಹೇಳುವ ಮೂಲಕ ಮರುವ್ಯಾಖ್ಯಾನಿಸುವ ಭರವಸೆ ನೀಡುತ್ತದೆ. ‘ಕಲ್ಕಿ 2898 AD’ ನಿಜವಾದ ಪ್ಯಾನ್-ಇಂಡಿಯನ್ ಸಿನಿಮಾ ಎನಿಸಿಕೊಂಡಿದೆ. ತಾರಾಗಣದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ ಮತ್ತು ವೈಜಯಂತಿ ಮೂವೀಸ್ ಬಂಡವಾಳ ಹೂಡಿದೆ. ಈ ಬಹುಭಾಷಾ, ಪುರಾಣ- ಪ್ರೇರಿತ ವೈಜ್ಞಾನಿಕ ಕಥೆಯುಳ್ಳ ಸಿನಿಮಾ, ಜೂನ್ 27ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

  • ‘ಕಲ್ಕಿ’ ಇವೆಂಟ್‌ಗೆ 1,14,000 ಮೌಲ್ಯದ ಡ್ರೆಸ್ ಧರಿಸಿ ಬಂದ ದೀಪಿಕಾ ಪಡುಕೋಣೆ

    ‘ಕಲ್ಕಿ’ ಇವೆಂಟ್‌ಗೆ 1,14,000 ಮೌಲ್ಯದ ಡ್ರೆಸ್ ಧರಿಸಿ ಬಂದ ದೀಪಿಕಾ ಪಡುಕೋಣೆ

    ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ (Deepika Paukone) ಸದ್ಯ ‘ಕಲ್ಕಿ 2898 ಎಡಿ’ (Kali 2898 AD) ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ತೊಡಿಗಿಸಿಕೊಂಡಿದ್ದಾರೆ. ಹೀಗಿರುವಾಗ ಇತ್ತೀಚೆಗೆ ‘ಕಲ್ಕಿ’ ಚಿತ್ರದ ಪ್ರಿ ರಿಲೀಸ್ ಇವೆಂಟ್‌ನಲ್ಲಿ ದುಬಾರಿ ಮೊತ್ತದ ಡ್ರೆಸ್ ಧರಿಸಿ ಬಂದಿದ್ದಾರೆ. ನಟಿಯ ಡ್ರೆಸ್ ರೇಟ್ ಕೇಳಿಯೇ ಫ್ಯಾನ್ಸ್ ದಂಗಾಗಿದ್ದಾರೆ.

    ‘ಕಲ್ಕಿ’ ಸಿನಿಮಾ ಕಾರ್ಯಕ್ರಮಕ್ಕೆ ದೀಪಿಕಾ ಪಡುಕೋಣೆ ಸಿಂಪಲ್ ಡ್ರೆಸ್‌ನಲ್ಲಿ ಎಂಟ್ರಿ ಕೊಟ್ಟಿದ್ದರು. ನೋಡಲು ಸಿಂಪಲ್ ಎನಿಸಿದರೂ ಅದು ದುಬಾರಿ ಮೊತ್ತದ ಬಟ್ಟೆಯಾಗಿದೆ. ದೀಪಿಕಾ ಧರಿಸಿದ ಕಪ್ಪು ಬಣ್ಣದ ಡ್ರೆಸ್‌ಗೆ 1,14,000 ಲಕ್ಷ ರೂ.ದಾಗಿದೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ‘ಸೂರ್ಯವಂಶ’ ನಟಿ

    ಅಂದಹಾಗೆ ‘ಕಲ್ಕಿ’ ಚಿತ್ರದ ಕಾರ್ಯಕ್ರಮದಲ್ಲಿ ಗರ್ಭಿಣಿ ದೀಪಿಕಾ ವೇದಿಕೆಯಿಂದ ಇಳಿಯಲು ಪ್ರಭಾಸ್ (Prabhas) ಸಹಾಯ ಮಾಡಿದ್ದಾರೆ. ಅದಕ್ಕೆ, ಅಮಿತಾಭ್ ಬಚ್ಚನ್ (Amithab Bachchan) ಕಾಲೆಳೆದಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು.

    ಸಿನಿಮಾ ಕುರಿತು ಈವೆಂಟ್‌ನಲ್ಲಿ ಮಾತಾಡಿ, ಬರುತ್ತಿದ್ದಂತೆ ಗರ್ಭಿಣಿ ದೀಪಿಕಾ ವೇದಿಕೆಯಿಂದ ಇಳಿಯಲು ಮುಂದಾದಾಗ, ಪ್ರಭಾಸ್ ಮತ್ತು ಅಮಿತಾಭ್ ಇಬ್ಬರೂ ನಟಿಯ ಸಹಾಯಕ್ಕೆ ಧಾವಿಸಿದರು. ಪ್ರಭಾಸ್ ಅವರು ದೀಪಿಕಾ ಅವರ ಕೈ ಹಿಡಿದು ಆರಾಮವಾಗಿ ವೇದಿಕೆಯಿಂದ ಕೆಳಗೆ ಇಳಿಯಲು ಸಹಾಯ ಮಾಡಿದರು. ಬಿಗ್ ಬಿ ಅವರು ಪ್ರಭಾಸ್ ಹಿಂದೆ ನಿಂತು ತಮಾಷೆ ಮಾಡಿದರು.

     

    View this post on Instagram

     

    A post shared by Viral Bhayani (@viralbhayani)

    ಈ ಕಾರ್ಯಕ್ರಮದಲ್ಲಿ ಡಾರ್ಲಿಂಗ್ ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮತ್ತು ದೀಪಿಕಾ ಪಡುಕೋಣೆ, ರಾಣಾ ದಗ್ಗುಬಾಟಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ‘ಕಲ್ಕಿ’ ಪ್ರೀ ರಿಲೀಸ್ ಈವೆಂಟ್‌ಗಾಗಿ 10 ಕೋಟಿ ರೂ. ಖರ್ಚಾಗಿದೆ ಎನ್ನಲಾಗಿದೆ.


    ಅಂದಹಾಗೆ, ‘ಕಲ್ಕಿ 2898 ಎಡಿ’ ಸಿನಿಮಾ ಇದೇ ಜೂನ್ 27ಕ್ಕೆ ರಿಲೀಸ್ ಆಗಲಿದೆ. ಬಹುಭಾಷೆಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಮೊದಲ ಬಾರಿಗೆ ದೀಪಿಕಾ, ಈ ಚಿತ್ರಕ್ಕಾಗಿ ತಮ್ಮ ಮಾತೃಭಾಷೆ ಕನ್ನಡದಲ್ಲಿ ಡಬ್ ಮಾಡಿರೋದು ವಿಶೇಷ.