Tag: prabhakar bhat

  • ಪುತ್ತೂರಿನ ಘಟನೆಗೆ ಪ್ರಭಾಕರ್ ಭಟ್, ನಳಿನ್ ಕುಮಾರ್ ಕಟೀಲ್ ಕಾರಣ: ಅಭಯ್ ಚಂದ್ರ ಜೈನ್

    ಪುತ್ತೂರಿನ ಘಟನೆಗೆ ಪ್ರಭಾಕರ್ ಭಟ್, ನಳಿನ್ ಕುಮಾರ್ ಕಟೀಲ್ ಕಾರಣ: ಅಭಯ್ ಚಂದ್ರ ಜೈನ್

    – ಬಿ.ಕೆ ಹರಿಪ್ರಸಾದ್‍ರನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿ

    ಮಂಗಳೂರು: ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರೇ ಕಾರಣ ಎಂದು ಮಾಜಿ ಸಚಿವ ಅಭಯ್ ಚಂದ್ರ ಜೈನ್ (AbhayChandra Jain) ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಗೆ ನೇರ ಕಾರಣ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ನಳಿನ್ ಕುಮಾರ್ ಕಟೀಲ್ ಕಾರಣ. ಸಿದ್ದರಾಮಯ್ಯ (Siddaramaiah) ನಾಳೆ ಅಧಿಕಾರ ಸ್ವೀಕಾರ ಮಾಡಬೇಕು. ಕಲ್ಲಡ್ಕ ಭಟ್ ಈ ಘಟನೆಗೆ ಕಾಂಗ್ರೆಸ್ ಕಾರಣ ಅಂತಾ ಹೇಳುತ್ತಾರೆ. ಕಟೀಲ್ ಲೋಕಸಭಾ ಸದಸ್ಯನಾಗಿ ಕಾರ್ಯಕರ್ತರಿಗೆ ಸಾಯುವ ಹಾಗೆ ಹೊಡಿಸ್ತಾರೆ ಅಂದ್ರೆ ಅವರಿಗೆ ಮಾನವೀಯತೆ ಇದ್ಯಾ ಎಂದು ಜೈನ್ ಪ್ರಶ್ನಿಸಿದರು.

    ಇದೇ ವೇಳೆ ಬಿ.ಕೆ ಹರಿಪ್ರಸಾದ್ (BK Hariprasad) ರನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದು ಒತ್ತಾಯಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಇದೆ. ಮೊಯ್ಲಿ, ಆಸ್ಕರ್, ಪೂಜಾರಿಯವರಂತಹ ನಾಯಕ ನಮಗೆ ಬೇಕು. ಈ ಜಿಲ್ಲೆಗೆ ಬಲಿಷ್ಠ ನಾಯಕ ಬೇಕು. ಇದನ್ನು ಹೈಕಮಾಂಡ್, ಕಾಂಗ್ರೆಸ್ ಪ್ರಮುಖರು ಇದನ್ನು ಅರಿಯಬೇಕು. ಹೀಗಾಗಿ ಬಿ.ಕೆ ಹರಿಪ್ರಸಾದ್ ಅವರನ್ನು ಗೃಹ ಸಚಿವರನ್ನಾಗಿ ಮಾಡಬೇಕು. ಹಾಗೆಯೇ ದ.ಕ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿಯೂ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ‘ಸಿದ್ದರಾಮಯ್ಯ ಎಂಬ ನಾನು’: ಸಿದ್ದರಾಮಯ್ಯ ಕುರಿತು ಮತ್ತೊಂದು ಸಿನಿಮಾ ಘೋಷಣೆ

    ಹರಿಪ್ರಸಾದ್ ಶಕ್ತಿವಂತ, ಆಡಳಿತದಲ್ಲಿ ತಿಳುವಳಿಕೆಯುಳ್ಳ ವ್ಯಕ್ತಿಯಾಗಿದ್ದಾರೆ. ಹರಿಪ್ರಸಾದ್ ಉಸ್ತುವಾರಿ ಮಂತ್ರಿ ಆದರೆ ಜಿಲ್ಲೆಯ ಅಭಿವೃದ್ಧಿಯಾಗುತ್ತದೆ. ಅವರು ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದ ಜನರನ್ನು ಸಮಾನಾಗಿ ಕಾಣುತ್ತಾರೆ. ಹರಿಪ್ರಸಾದ್ ಅವರು ಗಡುಸಾಗಿ ಆಡಳಿತ ನಡೆಸುವ ವ್ಯಕ್ತಿಯಾಗಿದ್ದಾರೆ. ಅವರು ಛಲದಂಕ ಮಲ್ಲ,1978 ರಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೊಟ್ಟರೆ ಜನ ಸಾಮರಸ್ಯದ ಜೀವನ ಮಾಡಬಹುದು. ಜಿಲ್ಲೆಗೆ ಶಕ್ತಿ ತುಂಬುವ ಕೆಲಸವನ್ನು ಬಿ.ಕೆ ಹರಿಪ್ರಸಾದ್ ಮಾಡಲಿದ್ದಾರೆ. ಯುಟಿ ಖಾದರ್ (UT Khader) ಗೂ ಒಳ್ಳೆಯ ಮಂತ್ರಿ ಸ್ಥಾನ ಸಿಗಬೇಕು ಎಂದರು.

    ಹರಿಪ್ರಸಾದ್ ಗೆ ಉಸ್ತುವಾರಿ ಸ್ಥಾನ, ಖಾದರ್ ಗೆ ಮಂತ್ರಿ ಸ್ಥಾನ ಕೊಡಬೇಕು. ಕಾಂಗ್ರೆಸ್ ನ ಐದು ಗ್ಯಾರಂಟಿ ಜಿಲ್ಲೆಯಲ್ಲಿ ಯಶಸ್ವಿಯಾಗಿಲ್ಲ. ಆದರೆ ಈ ಜಿಲ್ಲೆಗೂ ಆ ಯೋಜನೆಯನ್ನು ಜಾರಿ ಮಾಡಬೇಕು. ಯುಟಿ ಖಾದರ್ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದಾರೆ. ಯುಟಿ ಖಾದರ್ ರಲ್ಲಿ ಡ್ಯಾಶಿಂಗ್ ನೇಚರ್ ಇಲ್ಲ. ಖಾದರ್ ಮೇಲೆ ಕೋಮು ಭಾವನೆ ತೋರಿಸಿ ಅವರನ್ನು ಸ್ತಬ್ಧ ಮಾಡುತ್ತಾರೆ ಎಂದು ಹೇಳಿದರು.

  • ಖಾದರ್ ಹೋದ ದೇವಾಲಯಕ್ಕೆ ಮತ್ತೊಮ್ಮೆ ಬ್ರಹ್ಮಕಲಶ ಆಗ್ಲೇಬೇಕು- ಪ್ರಭಾಕರ ಭಟ್

    ಖಾದರ್ ಹೋದ ದೇವಾಲಯಕ್ಕೆ ಮತ್ತೊಮ್ಮೆ ಬ್ರಹ್ಮಕಲಶ ಆಗ್ಲೇಬೇಕು- ಪ್ರಭಾಕರ ಭಟ್

    ಮಂಗಳೂರು: ಆಹಾರ ಮತ್ತು ನಾಗರೀಕ ಸರಬರಾಜು ಪೂರೈಕೆ ಇಲಾಖೆಯ ಸಚಿವ ಯು ಟಿ.ಖಾದರ್ ಒಬ್ಬ ಕೊಳಕು ಮನುಷ್ಯ. ದೇವಸ್ಥಾನಕ್ಕೆ ಆ ಖಾದರನ್ನು ಯಾಕೆ ಕರೀತೀರಾ ಅಂತ ಗೊತ್ತಿಲ್ಲ. ಯಾವ ದೇವಸ್ಥಾನಕ್ಕೆ ಖಾದರ್ ಬಂದಿದ್ದಾನೋ ಅದಕ್ಕೆ ಮತ್ತೊಂದು ಬ್ರಹ್ಮಕಲಶ ಆಗಲೇಬೇಕು ಅಂತ ಆರ್ ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಮಂಗಳೂರಿನ ಹೊರವಲಯದ ಕೈರಂಗಳದಲ್ಲಿ ಗೋ ಹಂತಕರ ಬಂಧನಕ್ಕೆ ಆಗ್ರಹಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಭೂತ ಕಟ್ಟುವ ವ್ಯಕ್ತಿ ಆತನಿಗೆ ಮಂಡೆ ಶುದ್ಧವಿಲ್ಲ. ಆತ ದನದ ಮಾಂಸ ತಿನ್ನುವ ಖಾದರ್ ಗೆ ಬೂಲ್ಯ ಕೊಟ್ಟಿದ್ದಾನಲ್ಲ. ದೇವಾಲಯದ ಒಳಗಡೆ ಬೇರೆಯವರಿಗೆ ಪ್ರವೇಶವಿಲ್ಲ. ಹೀಗಾಗಿ ದೇವಸ್ಥಾನಕ್ಕೆ ಖಾದರ್ ಬಂದಿದ್ದಾನೋ ಅದಕ್ಕೆ ಮತ್ತೊಂದು ಬ್ರಹ್ಮಕಲಶ ಆಗಲೇಬೇಕು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕೊರಗಜ್ಜನ ಪ್ರಸಾದ ಸ್ವೀಕರಿಸಿದ ಸಚಿವ ಖಾದರ್ ವಿರುದ್ಧ ಮುಸ್ಲಿಮರಿಂದ ಟೀಕೆ

    ಗೋ ಮಾಂಸ ಭಕ್ಷಕರನ್ನ ದೇವಸ್ಥಾನಕ್ಕೆ ಕರೆ ತರ್ತೀರಾ. ಅವ ಒಂದು ಮಾರ್ಗ ಮಾಡಿದ ಅಂತ ಆತನನ್ನು ದೇವಸ್ಥಾನಕ್ಕೆ ಕರೆಯುತ್ತೀರಾ. ನಾಚಿಕೆಯಾಗಲ್ವ. ಅವನೇನು ಅಪ್ಪನ ಹಣದಿಂದ ಮಾಡಿದ್ದಾ? ಅಲ್ಲ. ಸರ್ಕಾರಕ್ಕೆ ನಾವು ಕೊಟ್ಟ ತೆರಿಗೆಯಿಂದ ಅವರು ರಸ್ತೆ ಮಾಡಿದ್ದು. ಆದರೆ ಅದೇ ಕಾರಣಕ್ಕೆ ಅವನನ್ನು ದೇವಸ್ಥಾನದ ಒಳಗೆ ಕರೆದುಕೊಂಡು ಹೋಗ್ತೀರಲ್ವಾ? ಅನೇಕ ಜನರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ. ಆದರೆ ಖಾದರ್ ನಂಥವರಿಗೆ ಪ್ರವೇಶ ಕೊಡ್ತೀರಲ್ವಾ ನೀವು? ನನ್ನ ಪ್ರಕಾರ ಅಂಥವರಿಗೆ ನಿಷೇಧ ಮಾಡುವ ಅವಶ್ಯಕತೆ ಇದೆ ಅಂತ ಅನಿಸುತ್ತೆ. ಇದು ಹಿಂದೂ ಸಮಾಜಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ ಅಂತ ಹೇಳಿದ್ರು.

    ನಮ್ಮ ದೇಶದ ಪ್ರಾಣದ-ಪ್ರಾಣ, ಉಸಿರಿನ-ಉಸಿರಾಗಿರುವಂತಹ ಹಸುವನ್ನು ರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಅಂತ ಅವರು ನುಡಿದ್ರು. ಇದನ್ನೂ ಓದಿ: ಮಂಗ್ಳೂರಲ್ಲಿ ದೈವಸ್ಥಾನಕ್ಕೆ ಹೋಗಿ ನಿಂದನೆಗೊಳಗಾದ ಶಾಸಕ ಮೊಯ್ದೀನ್ ಬಾವಾ

  • ಅನುದಾನಕ್ಕೆ ಕತ್ತರಿ ಹಾಕಿದ್ರೂ ಕುಗ್ಗಲಿಲ್ಲ- ಭತ್ತ ಬೆಳೆದು ಸರ್ಕಾರಕ್ಕೆ ಸವಾಲೆಸೆದ ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳು

    ಅನುದಾನಕ್ಕೆ ಕತ್ತರಿ ಹಾಕಿದ್ರೂ ಕುಗ್ಗಲಿಲ್ಲ- ಭತ್ತ ಬೆಳೆದು ಸರ್ಕಾರಕ್ಕೆ ಸವಾಲೆಸೆದ ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳು

    ಮಂಗಳೂರು: ರಾಜಕೀಯ ಜಿದ್ದಿನಿಂದ ಸುದ್ದಿಯಲ್ಲಿದ್ದ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಈಗ ಛಲದಿಂದ ಸುದ್ದಿಯಾಗಿದೆ. ಅನುದಾನ ಕಡಿತಗೊಳಿಸಿ ಮಧ್ಯಾಹ್ನದ ಬಿಸಿಯೂಟ ಕಸಿದುಕೊಂಡಿತ್ತ ಸರ್ಕಾರದ ವಿರುದ್ಧ ಶ್ರೀರಾಮವಿದ್ಯಾಕೇಂದ್ರದ ಮಕ್ಕಳೇ ಭತ್ತ ಬೆಳೆದಿದ್ದಾರೆ.

    ಆಗಸ್ಟ್ ತಿಂಗಳಲ್ಲಿ ಸಿದ್ದು ಸರ್ಕಾರ, ಕಲ್ಲಡ್ಕ ಪ್ರಭಾಕರ್ ಭಟ್ಟರ ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳ ಬಿಸಿಯೂಟಕ್ಕೆ ಕತ್ತರಿ ಹಾಕಿತ್ತು. ಆದ್ರೆ, ಯಾರ ಮುಂದೆಯೂ ಕೈಯೊಡ್ಡದ ಕಲ್ಲಡ್ಕ ಶಾಲೆಯ ಮಕ್ಕಳು ಇದೀಗ ಸ್ವಾವಲಂಬಿಗಳಾಗಿದ್ದಾರೆ.

    ಸರ್ಕಾರ ಅನುದಾನ ಕಟ್ ಮಾಡಿದ ಕೂಡಲೇ ವಿದ್ಯಾರ್ಥಿಗಳು ಶಾಲೆಗೆ ಸೇರಿದ ಸುಮಾರು ಏಳು ಎಕರೆ ಗದ್ದೆಯಲ್ಲಿ ತಾವೇ ಭತ್ತದ ಪೈರು ನಾಟಿ ಮಾಡಿದ್ದರು. ಇದೀಗ ಭತ್ತ ಬೆಳೆದು ನಿಂತಿದೆ. ವಿದ್ಯಾರ್ಥಿಗಳು ತಾವೇ ಕಟಾವು ಮಾಡಿ ಒಟ್ಟು ಮಾಡಿದ್ದಾರೆ. ಸುಮಾರು 20 ಕ್ವಿಂಟಾಲ್ ನಷ್ಟು ಭತ್ತ ಸಿಕ್ಕಿದೆ.

    ಸರ್ಕಾರ ಅನ್ನ ಕಸಿದರೂ ನಾವೇ ನಮಗೆ ಬೇಕಾದ ಅನ್ನದ ದಾರಿಯನ್ನು ಹುಡುಕಿದ್ದೇವೆ ಅನ್ನುವ ಖುಷಿ ವಿದ್ಯಾರ್ಥಿಗಳಲ್ಲಿದೆ. ಇನ್ನು ಭತ್ತದ ಹುಲ್ಲನ್ನ ಅಲ್ಲಿನ ದನಕರುಗಳಿಗೆ ಮೇವನ್ನಾಗಿ ಬಳಸಲಾಗುತ್ತಿದೆ.

    ಮಕ್ಕಳ ಈ ಕೃಷಿಗೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಕಲ್ಲಡ್ಕ ಡಾ.ಪ್ರಭಾಕರ ಭಟ್ಟರು ಸಾಥ್ ನೀಡಿದ್ರು. ಇದೀಗ ಮಕ್ಕಳ ಕೃಷಿಗೆ ಫಲ ಸಿಕ್ಕಿರೋ ಖುಷಿ ಅವರಲ್ಲಿದೆ. ಭತ್ತ ಕೃಷಿಯನ್ನು ಮುಂದುವರೆಸಿಕೊಂಡು ಹೋಗಲು ಶಾಲೆ ಆಡಳಿತ ಮಂಡಳಿ ನಿರ್ಧರಿಸಿದೆ. ಒಟ್ಟಿನಲ್ಲಿ ಮಕ್ಕಳ ಸ್ವಾವಲಂಬನೆ ಇಡೀ ದೇಶಕ್ಕೆ ಮಾದರಿ ಅಂದ್ರೆ ತಪ್ಪಾಗಲಿಕ್ಕಿಲ್ಲ.

    https://www.youtube.com/watch?v=88Za5hVEpZM

  • ಮತೀಯವಾದ ಸೃಷ್ಟಿಸುವ ಕಾರ್ಖಾನೆಗಳಾಗಿವೆ ಶಾಲೆಗಳು: ಕಲ್ಲಡ್ಕ ಭಟ್ ವಿರುದ್ಧ ರೈ ಹೊಸ ಬಾಂಬ್!

    ಮತೀಯವಾದ ಸೃಷ್ಟಿಸುವ ಕಾರ್ಖಾನೆಗಳಾಗಿವೆ ಶಾಲೆಗಳು: ಕಲ್ಲಡ್ಕ ಭಟ್ ವಿರುದ್ಧ ರೈ ಹೊಸ ಬಾಂಬ್!

    ಮಂಗಳೂರು: ಕೊಲ್ಲೂರು ದೇಗುಲದಿಂದ ಪಡೆದ ಹಣ ಅವ್ಯವಹಾರವಾಗಿದೆ. ದೇಣಿಗೆ ಹಣದಲ್ಲಿ ಪ್ರಭಾಕರ್ ಭಟ್ಟರು ರಿಯಲ್ ಎಸ್ಟೇಟ್ ಮಾಡುತ್ತಾರೆ ಅಂತ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.

    ಕಲ್ಲಡ್ಕ ವಿದ್ಯಾಕೇಂದ್ರಗಳ ಅನುದಾನ ಕಡಿತ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಲ್ಲಡ್ಕದ ಎರಡೂ ಶಾಲೆಗಳು ಆರ್ಥಿಕ ಸದೃಢವಾಗಿವೆ. ದೇಗುಲದ ಹಣವನ್ನು ಖಾಸಗಿ ಶಾಲೆಗೆ ನೀಡಲು ಅವಕಾಶ ಇಲ್ಲ. ಉಭಯ ಜಿಲ್ಲೆಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಹಲವಾರು ಶಾಲೆಗಳಿವೆ ಅಂತ ಹೇಳಿದ್ದಾರೆ.

    ಹಾಲಿವುಡ್, ಬಾಲಿವುಡ್ ನಟರು, ಉದ್ಯಮಿಗಳಿಂದ ದೇಗುಲಕ್ಕೆ ದೇಣಿಗೆ ಬರುತ್ತೆ. ಈ ಹಣವನ್ನು ಪ್ರಭಾಕರ್ ಭಟ್ ನಗದು ರೂಪದಲ್ಲಿ ಪಡೆದು ದುರುಪಯೋಗ ಮಾಡುತ್ತಿದ್ದಾರೆ. ಹೀಗಾಗಿ ಭಟ್ಟರ ಅವ್ಯವಹಾರದ ಬಗ್ಗೆ ಕೂಡಲೇ ತನಿಖೆ ಆಗಬೇಕು ಅಂತ ಅವರು ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಶಾಲೆಗೆ ಬರುತ್ತಿದ್ದ ಅನುದಾನ ಕಡಿತಗೊಳಿಸಿದ ಸರ್ಕಾರ

    ಕಲ್ಲಡ್ಕ ಶಾಲೆಯ ನೂರು ಮೀಟರ್ ದೂರದಲ್ಲಿ ಸರ್ಕಾರಿ ಶಾಲೆ ಇದೆ. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲಿ. ಈ ಎರಡೂ ಶಾಲೆಗಳು ಮತೀಯವಾದ ಸೃಷ್ಟಿಸುವ ಕಾರ್ಖಾನೆಗಳಾಗಿವೆ. ಮಕ್ಕಳ ಕೈಯಲ್ಲಿ ತಟ್ಟೆ ಕೊಟ್ಟು ರಾಜಕೀಯ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಣ ಸಂಗ್ರಹಕ್ಕೆ ಅಭಿಯಾನ ಮಾಡುತ್ತಿದ್ದು, ಇದೊಂದು ದುಡ್ಡು ಮಾಡುವ ದಂಧೆಯಾಗಿದೆ ಅಂತ ಅವರು ತಿರುಗೇಟು ನೀಡಿದ್ದಾರೆ.

    ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಶಾಲೆಗೆ ಅನುದಾನ ಕಟ್- ತಟ್ಟೆ ಹಿಡಿದು ಸರ್ಕಾರದ ವಿರುದ್ಧ ಮಕ್ಕಳ ಧಿಕ್ಕಾರ

    ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ ಭಟ್ಟರ ಹಿಂದೂ ಧರ್ಮಕ್ಕೆ ಧಿಕ್ಕಾರ, ಮೋದಿ ದೊಡ್ಡ ಜಾದೂಗಾರ: ಅಮೀನ್ ಮಟ್ಟು

    ಇದನ್ನೂ ಓದಿ: ಸರ್ಕಾರದಿಂದ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ಬರುತ್ತಿದ್ದ ಅನುದಾನ ಕಟ್: ರಮಾನಾಥ ರೈ ಹೀಗಂದ್ರು!

  • ಎಸ್‍ಡಿಪಿಐ ಆಶ್ರಫ್ ಕೊಲೆ ಪ್ರಕರಣ- ಪ್ರಮುಖ ಆರೋಪಿ ಎಸ್ಕೇಪ್

    ಎಸ್‍ಡಿಪಿಐ ಆಶ್ರಫ್ ಕೊಲೆ ಪ್ರಕರಣ- ಪ್ರಮುಖ ಆರೋಪಿ ಎಸ್ಕೇಪ್

    – ಐವರು ಆರೋಪಿಗಳ ಬಂಧನ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಕೋಮು ಗಲಭೆ ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿರುವಾಗಲೇ ಎಸ್‍ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆ ನಡೆದಿತ್ತು. ಜೂನ್ 21ರಂದು ಮಧ್ಯಾಹ್ನ ನಡೆದ ಹತ್ಯೆ ಭಾರೀ ಸುದ್ದಿಯಾಗಿತ್ತು.

    ಮಂಗಳೂರು ಪೊಲೀಸರು ಜಂಟಿಕಾರ್ಯಾಚರಣೆ ನಡೆಸಿ ಎರಡೇ ದಿನದಲ್ಲಿ ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಟ್ವಾಳದ ಆಸುಪಾಸಿನ ನಿವಾಸಿಗಳಾದ ಪವನ್ ಕುಮಾರ್, ಅಭಿನ್ ರೈ, ಶಿವಪ್ರಸಾದ್, ಸಂತೋಷ್ ಮತ್ತು ರಂಜಿತ್ ಬಂಧಿತ ಆರೋಪಿಗಳು.

    ಆರೋಪಿಗಳ ಪೈಕಿ ನಾಲ್ವರ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಈಗಾಗ್ಲೆ ಹಲವಾರು ಕೇಸುಗಳಿವೆ. ಅಲ್ಲದೆ, ಈ ಹಿಂದೆ ಕೋಮು ಗಲಭೆಯಲ್ಲಿ ಗುರುತಿಸಿಕೊಂಡಿದ್ದರು. ಆದರೆ ಅಶ್ರಫ್ ಹತ್ಯೆಯನ್ನು ಯಾವ ಕಾರಣಕ್ಕೆ ನಡೆಸಿದ್ದಾರೆ ಅನ್ನೋದ್ರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಕೊಲೆಯ ಕಾರಣ, ಹಿಂದಿರುವ ಶಕ್ತಿಗಳೂ ಬೆಳಕಿಗೆ ಬರಲಿದೆ. ಪದೇ ಪದೇ ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಂಡವರ ವಿರುದ್ಧ ಗೂಂಡಾ ಕಾಯಿದೆ ಹಾಕಲಾಗುವುದು ಅಂತಾ ಐಜಿಪಿ ಹೇಳಿದ್ದಾರೆ.

    ಕೊಲೆಯ ಪ್ರಮುಖ ಆರೋಪಿ ಭರತ್ ಕುಮ್ಡೋಲು ತಲೆಮರೆಸಿಕೊಂಡಿದ್ದಾನೆ. ಈತ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಶಿಷ್ಯ ಅಂತ ಹೇಳಲಾಗ್ತಿದೆ. ಯಾಕಂದ್ರೆ, ಕಳೆದ ತಿಂಗಳ 28 ರಂದು ಪ್ರಭಾಕರ್ ಭಟ್ಟರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಭರತ್ ಕಾಣಿಸಿಕೊಂಡಿದ್ದನು ಎನ್ನಲಾಗಿದೆ.

    ಹೀಗಾಗಿ, ಬಂಟ್ವಾಳದ ಬೆಂಜನಪದವು ಬಳಿ ನಡೆದ ಆಶ್ರಫ್ ಮರ್ಡರ್ ಕೇಸ್‍ಗೂ ಭಟ್ಟರಿಗೂ ನಂಟಿದ್ಯಾ ಅನ್ನೋ ಅನುಮಾನ ಎದ್ದಿದೆ. ಆದರೆ, ಭರತ್ ಕುಮ್ಡೇಲು ಹಾಗೂ ದಿವ್ಯರಾಜ್ ಶೆಟ್ಟಿ, ಕೊಲೆಗೆ ಸಂಚು ರೂಪಿಸಿದವರಾಗಿದ್ದು ಇನ್ನೆರಡು ದಿನಗಳಲ್ಲಿ ಬಂಧಿಸುವುದಾಗಿ ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಹೇಳಿದ್ದಾರೆ.