Tag: Prabha Mallikarjun

  • ಗಣೇಶ ಹಬ್ಬದ ಚಂದಾ ಕೇಳಲು ಬಂದ ಮಕ್ಕಳಿಗೆ ಹಣದ ಜೊತೆ ಚಾಕೊಲೇಟ್ ನೀಡಿದ ಸಂಸದೆ

    ಗಣೇಶ ಹಬ್ಬದ ಚಂದಾ ಕೇಳಲು ಬಂದ ಮಕ್ಕಳಿಗೆ ಹಣದ ಜೊತೆ ಚಾಕೊಲೇಟ್ ನೀಡಿದ ಸಂಸದೆ

    ದಾವಣಗೆರೆ: ಗಣೇಶ ಹಬ್ಬದ (Ganesh Festival) ಚಂದಾ ಕೇಳಲು ಬಂದ ಮಕ್ಕಳಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ಹಣದ ಜೊತೆ ಚಾಕೊಲೇಟ್ ನೀಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.

    ಪ್ರಭಾ ಮಲ್ಲಿಕಾರ್ಜುನ್ (Prabha Mallikarjun) ಅವರ ನಿವಾಸಕ್ಕೆ ಮಕ್ಕಳು ಗಣೇಶ ಹಬ್ಬಕ್ಕೆ ಚಂದಾ ಕೇಳಲು ಬಂದಿದ್ದರು. ಆ ಮಕ್ಕಳನ್ನು ಪ್ರೀತಿಯಿಂದ ಹತ್ತಿರ ಕರೆದು ಹಣದ ಜೊತೆಗೆ ಚಾಕೊಲೇಟ್ ನೀಡಿ, ಆತ್ಮೀಯವಾಗಿ ಮಾತನಾಡಿದ್ದಾರೆ.ಇದನ್ನೂ ಓದಿ: ನೂತನ ರಥ ನಿರ್ಮಾಣಕ್ಕೆ ‘ಗೃಹಲಕ್ಷ್ಮಿ’ ಹಣ ದೇಣಿಗೆ ನೀಡಿದ ಗದಗ ಮಹಿಳಾಮಣಿಗಳು

    ಹಬ್ಬ ಮಾಡಿ ಜೊತೆಗೆ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ ಎಂದು ಮಕ್ಕಳಿಗೆ ಬುದ್ದಿಮಾತು ಹೇಳಿದ ಸಂಸದೆ, ಗಣೇಶನನ್ನು ಎಲ್ಲಿ ಪ್ರತಿಷ್ಠಾಪನೆ ಮಾಡ್ತಿರಾ? ಹೇಗೆ ಪೂಜೆ ಮಾಡ್ತಿರಾ? ಎಂದು ಕೇಳಿದ್ದಾರೆ.

    ಮಕ್ಕಳ ಜೊತೆಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಆತ್ಮೀಯವಾಗಿ ಮಾತನಾಡುತ್ತಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಪ್ರಣೀತಾ ಸುಭಾಷ್

  • ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಸೊಸೆಗೆ ಗೆಲುವು

    ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಸೊಸೆಗೆ ಗೆಲುವು

    ದಾವಣಗೆರೆ: ಕಾಂಗ್ರೆಸ್‌ನ ಡಾ.ಪ್ರಭಾ ಮಲ್ಲಿಕಾರ್ಜುನ್‌ (Prabha Mallikarjun) ಅವರು ದಾವಣಗೆರೆ ಕ್ಷೇತ್ರದಿಂದ 26,094 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಸಂಸದ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್‌ (Gayathri Siddeshwara) ವಿರುದ್ಧ ಜಯಗಳಿಸಿದ್ದಾರೆ. ಕ್ಷೇತ್ರದಲ್ಲಿ ಜನ ಕಾಂಗ್ರೆಸ್‌ಗೆ (Congress) 6,33,059 ಹಾಗೂ ಬಿಜೆಪಿಗೆ 6,06,965 ಮತ ನೀಡಿದ್ದಾರೆ. ಇದನ್ನೂ ಓದಿ: ಕೋಟೆನಾಡಿನಲ್ಲಿ ಗೋವಿಂದ ಕಾರಜೋಳಗೆ ಜೈಕಾರ ಹಾಕಿದ ಮತದಾರ

    2019ರಲ್ಲಿ ಬಿಜೆಪಿಯ (BJP) ಜಿ.ಎಂ.ಸಿದ್ದೇಶ್ವರ್‌ ಅವರು ಕಾಂಗ್ರೆಸ್‌ನ ಅಭ್ಯರ್ಥಿ ಹೆಚ್‌.ಮಂಜಪ್ಪ ಅವರನ್ನು ಮಣಿಸಿದ್ದರು. ಬರೋಬ್ಬರಿ 1,69,707 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರು.

    ಈ ಬಾರಿ ಸಿದ್ದೇಶ್ವರ್‌ ಟಿಕೆಟ್‌ ನೀಡಲು ಬಿಜೆಪಿ ಹಿಂದೇಟು ಹಾಕಿತ್ತು. ಪಟ್ಟು ಬಿಡದ ಸಿದ್ದೇಶ್ವರ್‌ ತಮ್ಮ ಪತ್ನಿಗೆ ಟಿಕೆಟ್‌ ಗಿಟ್ಟಿಸಿದರು. ಇತ್ತ ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ ತಮ್ಮ ಸೊಸೆಗೆ ಪಕ್ಷದಿಂದ ಟಿಕೆಟ್‌ ಕೊಡಿಸಿದ್ದರು. ಇದನ್ನೂ ಓದಿ: ಹಾವೇರಿಯಲ್ಲಿ ಬೊಮ್ಮಾಯಿಗೆ ಗೆಲುವು

    ಕ್ಷೇತ್ರವು ಇಬ್ಬರು ಮಹಿಳೆಯರ ಹಣಾಹಣಿಯಿಂದ ಕುತೂಹಲ ಮೂಡಿಸಿತ್ತು. ಜಿದ್ದಾಜಿದ್ದಿನ ಹೋರಾಟದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಭಾ ಅವರು ಗೆದ್ದು ಬೀಗಿದ್ದಾರೆ.

  • ಕೆಲಸ ಮಾಡುವವರಿಗೆ ಮಾತ್ರ ಮತ ಹಾಕಿ- ಕೈ ಅಭ್ಯರ್ಥಿಯಿಂದ ವಿಭಿನ್ನ ಪ್ರಚಾರ

    ಕೆಲಸ ಮಾಡುವವರಿಗೆ ಮಾತ್ರ ಮತ ಹಾಕಿ- ಕೈ ಅಭ್ಯರ್ಥಿಯಿಂದ ವಿಭಿನ್ನ ಪ್ರಚಾರ

    ದಾವಣಗೆರೆ: ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಅಭ್ಯರ್ಥಿಗಳು ತಮ್ಮದೇ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಅಂತೆಯೇ ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ವಿಭಿನ್ನವಾಗಿ ಚುನಾವಣಾ ಪ್ರಚಾರವನ್ನು ಮಾಡಿ ಗಮನಸೆಳೆದಿದ್ದಾರೆ.

    ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ (Congress Candidate Prabha Mallikarjun) ಅವರು ವಿಶೇಷವಾಗಿ ಚುನಾವಣಾ ಪ್ರಚಾರ ಮಾಡಿ ಗಮನಸೆಳೆದವರಾಗಿದ್ದಾರೆ. ಇವರು ಇಂದು ನಗರ ಸಾರಿಗೆ ಬಸ್ ನಲ್ಲಿ ಹೋಗಿ ಪ್ರಚಾರ ಮಾಡಿದ್ದಾರೆ. ಸದ್ಯ ಈ ರೀತಿ ವಿನೂತನವಾಗಿ ಚುನಾವಣಾ ಪ್ರಚಾರ ಮಾಡಿರುವ ಪ್ರಭಾ ಅವರ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ನಗರ ಸಾರಿಗೆ ಬಸ್ಸಿನಲ್ಲಿ ಆಧಾರ್ ಕಾರ್ಡ್ (Adhar Card) ತೋರಿಸಿ ಜನರ ಜೊತೆ ಪ್ರಯಾಣ ಮಾಡಿ, ಶಕ್ತಿ ಯೋಜನೆ ಬಗ್ಗೆ ಕೂಡ ಪ್ರಚಾರ ನಡೆಸಿರುವ ಪ್ರಭಾ ಅವರು ಕೆಲಸ ಮಾಡುವವರಿಗೆ ಮಾತ್ರ ಮತ ಹಾಕಿ. ಈ ಬಾರಿ ಕಾಂಗ್ರೆಸ್ ಗೆಲ್ಲಿಸಿ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಹೇಳಿದ್ದಾರೆ.

    ಚುನಾವಣಾ ಪ್ರಚಾರದ ವೇಳೆ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದರು. ಇದನ್ನೂ ಓದಿ: ಸಲೂನ್‌ನಲ್ಲಿ ಜನರಿಗೆ ಕ್ಷೌರ ಮಾಡಿ ಮತಯಾಚನೆ- ಗಮನ ಸೆಳೆದ ಅಭ್ಯರ್ಥಿಯ ಚುನಾವಣಾ ಪ್ರಚಾರ