Tag: powerstar punith rajkumar

  • ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬ – ಅಪ್ಪು ಸಮಾಧಿ ಬಳಿ ಅಭಿಮಾನಿಗಳ ಸಂಭ್ರಮಾಚರಣೆ

    ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬ – ಅಪ್ಪು ಸಮಾಧಿ ಬಳಿ ಅಭಿಮಾನಿಗಳ ಸಂಭ್ರಮಾಚರಣೆ

    ಬೆಂಗಳೂರು: ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜ್‌ಕುಮಾರ್‌ಗೆ (Punith Rajkumar) 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಬಾರದ ಲೋಕಕ್ಕೆ ಹೋಗಿದ್ದರೂ ಅಪ್ಪು ಅಭಿಮಾನಿಗಳ ಪ್ರೀತಿ, ವಿಶ್ವಾಸ, ಹುಟ್ಟುಹಬ್ಬ ಆಚರಿಸುವ ಉತ್ಸಾಹ ಕಿಂಚಿತ್ತೂ ಕಮ್ಮಿಯಾಗಿಲ್ಲ. ಜೊತೆಗಿರದ ಜೀವವನ್ನು ಜೀವಂತವಾಗಿಸಿಕೊಂಡ ಅಭಿಮಾನಿಗಳು ರಾತ್ರಿಯಿಂದಲೇ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಬಳಿ ಹುಟ್ಟುಹಬ್ಬ ಆಚರಣೆಯಲ್ಲಿ ತೊಡಗಿದ್ದಾರೆ.

    ಅದೆಷ್ಟು ವರ್ಷ ಕಳೆದರೂ ಸಹ ಅಪ್ಪು ಇಲ್ಲ ಎನ್ನುವುದನ್ನು ಅಭಿಮಾನಿಗಳು ಜೀರ್ಣಿಸಿಕೊಳ್ಳಲಾರರು. ಅಂದು ಕಣ್ಮುಂದಿದ್ದ ಅಪ್ಪು, ಈಗ ಕಣ್ಮುಂದಿನ ದೇವರಾಗಿದ್ದಾರೆ ಎಂಬುದು ಅಭಿಮಾನಿಗಳ ನಂಬಿಕೆಯಾಗಿದೆ. ಅದರಂತೆ ಅವರ 50ನೇ ವರ್ಷದ ಹುಟ್ಟುಹಬ್ಬವನ್ನ ಅಭಿಮಾನಿಗಳು ಭಾರೀ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಅಪ್ಪು ಸಮಾಧಿ ಬಳಿ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: 59 ಬಾರಿ ಡ್ರಗ್ಸ್‌ ಸಾಗಾಟ ಮಾಡಿದ್ರೂ ವಿಮಾನ ನಿಲ್ದಾಣ ಸಿಕ್ಕಿ ಬಿದ್ದಿಲ್ಲ ಹೇಗೆ?

    ಕಂಠೀರವ ಸ್ಟುಡಿಯೋದಲ್ಲಿ ಇಂದು (ಮಾ.17) ಬೆಳಗ್ಗೆ 9 ಗಂಟೆ ಸುಮಾರಿಗೆ ಅಭಿಮಾನಿಗಳ ಸಮ್ಮುಖದಲ್ಲೇ ಅಪ್ಪು ಕುಟುಂಬಸ್ಥರು ಪೂಜೆ ಮಾಡಲಿದ್ದಾರೆ. ಬಳಿಕ ಸಮಾಧಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಇರುತ್ತದೆ. ನಾನಾ ಊರುಗಳಿಂದ ಸಾವಿರಾರು ಅಪ್ಪು ಅಭಿಮಾನಿಗಳು ಭೇಟಿ ಕೊಡುವ ನಿರೀಕ್ಷೆ ಇದೆ. ತಡರಾತ್ರಿ 12 ಗಂಟೆಯಿಂದ ಶುರುವಾದ ಅಪ್ಪು ಹುಟ್ಟುಹಬ್ಬ ಆಚರಣೆಯ£ನ್ನು ಇಂದು ಇಡೀ ದಿನ ಅಭಿಮಾನಿಗಳು ಹಬ್ಬದಂತೆ ಆಚರಿಸಲಿದ್ದಾರೆ.

    ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನವನ್ನು ಸ್ಫೂರ್ತಿ ದಿನ ಎಂದು ಸರ್ಕಾರ ಘೋಷಿಸಿದೆ. ಅದರಂತೆ ಸ್ಫೂರ್ತಿಯ ಚಿಲುಮೆ ಅಪ್ಪು ನೆನಪಲ್ಲಿ ರಾಜ್ಯದೆಲ್ಲೆಡೆ ಅಭಿಮಾನಿಗಳು ತಮ್ಮಿಷ್ಟ ಬಂದಂತೆ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಜೊತೆಗೆ ಕಂಠೀರವ ಸ್ಟುಡಿಯೋದಲ್ಲಂತೂ ಜಾತ್ರೆಯೇ ನಡೆಯಲಿದ್ದು ಅನ್ನದಾನ, ಉಚಿತ ಆರೊಗ್ಯ ತಪಾಸಣೆ, ರಕ್ತದಾನ ಶಿಬಿರ, ವ್ಯಾಪಾರ ವಹಿವಾಟು ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿದೆ. ಇದನ್ನೂ ಓದಿ: 5 ವರ್ಷದಲ್ಲಿ ರಾಮ ಜನ್ಮಭೂಮಿ ಟ್ರಸ್ಟ್‌ನಿಂದ 400 ಕೋಟಿ ರೂ. ತೆರಿಗೆ ಪಾವತಿ!

    ಪುನೀತ್ ರಾಜ್‌ಕುಮಾರ್ ಇದ್ದಿದ್ದರೇ ಹೇಗೆಲ್ಲಾ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಬೇಕು ಎಂದು ಫ್ಯಾನ್ಸ್ ಅಂದುಕೊಂಡಿದ್ದರೋ ಅದರಂತೆಯೇ ಅದ್ದೂರಿಯಾಗಿಯೇ ಆಚರಿಸಲಾಗುತ್ತಿದೆ. ಅಪ್ಪು ಕುಟುಂಬಸ್ಥರ ಜೊತೆ ಆಪ್ತರು ನಟ-ನಟಿಯರು ನಗುಮೊಗದ ಅರಸನ ಹುಟ್ಟುಹಬ್ಬಕ್ಕೆ ಕಳೆ ತುಂಬಲಿದ್ದಾರೆ. ಜೊತೆಗಿರದ ಈ ಯುವರತ್ನನನ್ನು ಕರುನಾಡು ಎಂದೆಂದಿಂಗೂ ಜೀವಂತವಾಗಿಸಿಕೊಂಡಿದೆ.

  • ನನ್ನ ನೃತ್ಯಕ್ಕೆ ಸ್ಪೂರ್ತಿ ಪುನೀತ್ ರಾಜಕುಮಾರ್: ನಿಖಿಲ್ ಕುಮಾರಸ್ವಾಮಿ

    ನನ್ನ ನೃತ್ಯಕ್ಕೆ ಸ್ಪೂರ್ತಿ ಪುನೀತ್ ರಾಜಕುಮಾರ್: ನಿಖಿಲ್ ಕುಮಾರಸ್ವಾಮಿ

    ಬೆಂಗಳೂರು: ಡ್ಯಾನ್ಸ್ ವಿಷಯಕ್ಕೆ ಬಂದಾಗ ಪುನೀತ್ ರಾಜಕುಮಾರರವರೇ ನನಗೆ ಸ್ಪೂರ್ತಿ ಎಂದು ರೈಡರ್ ಚಿತ್ರದ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಜಕೀಯ ಅಂತಾ ಬಂದಾಗ ನನಗೆ ನನ್ನ ತಾತ ಮಾಜಿ ಪ್ರಧಾನಿ ದೇವೇಗೌಡ್ರೇ ನನಗೆ ಸ್ಪೂರ್ತಿಯಾಗಿದ್ದು, ಸಿನಿಮಾ ಅಂತಾ ಬಂದರೆ ನಟಸಾರ್ವಭೌಮ ಡಾ ರಾಜ್‍ಕುಮಾರ್ ನನಗೆ ಆದರ್ಶ ವ್ಯಕ್ತಿ. ಏಕೆಂದರೆ ಚಿಕ್ಕ ವಯಸ್ಸಿನಿಂದಲೇ ನಾನು ಅವರನ್ನು ನೋಡುತ್ತಾ ಬೆಳೆದಿದ್ದೇನೆ ಎಂದರು. ಇದನ್ನೂ ಓದಿ: ಗೂಗಲ್ ನಂತರ ಇದೀಗ ಇಂಟೆಲ್- ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನ ಇಲ್ಲ

    ರಾಜ್‍ಕುಮಾರ್ ನಂತರ ವಿಶೇಷವಾಗಿ ಡ್ಯಾನ್ಸ್ ಅಂತಾ ಬಂದಾಗ ಅಪ್ಪು ಸರ್ ಅವರು ನನ್ನ ಆದರ್ಶ ವ್ಯಕ್ತಿ. ಎಕೆಂದರೆ ಇಡೀ ದಕ್ಷಿಣ ಭಾರತದಲ್ಲಿ ಅವರ ಹಾಗೇ ಡ್ಯಾನ್ಸ್ ಮಾಡುವ ನಟ ಯಾರು ಇರಲಿಲ್ಲ. ಅವರು ಡ್ಯಾನ್ಸ್ ಮಾಡೋದನ್ನ ನೀವು ಪದೇ ಪದೇ ನೋಡಿರಬಹುದು ಎಂದು ನುಡಿದರು.  ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ದಾಳಿ – ಪೊಲೀಸ್‌ ಅಧಿಕಾರಿ, ನಾಗರಿಕ ಹತ್ಯೆ

    ಡ್ಯಾನ್ಸ್ ವಿಷಯಕ್ಕೆ ಬಂದರೆ ಅಪ್ಪುರವರು ಕೊರಿಯೋಗ್ರಾಫಿ ಮುಗಿದ ಮೇಲೆ 2, 3, ದಿನಗಳ ಕಾಲಾವಧಿ ತೆಗೆದುಕೊಂಡು ಅದನ್ನೂ ಪ್ರ್ಯಾಕ್ಟಿಸ್ ಮಾಡುತ್ತಿದ್ದರು ಎಂದು ಸ್ಮರಿಸಿಕೊಂಡರು.

  • ಸಿಎಂ ನಿವಾಸಕ್ಕೆ ಪುನೀತ್ ರಾಜ್‍ಕುಮಾರ್ ಭೇಟಿ

    ಸಿಎಂ ನಿವಾಸಕ್ಕೆ ಪುನೀತ್ ರಾಜ್‍ಕುಮಾರ್ ಭೇಟಿ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಭೇಟಿ ನೀಡಿದ್ದಾರೆ.

    ಕಳೆದ ಹತ್ತು ದಿನಗಳಿಂದ ಉಪಚುನಾವಣೆ ಪ್ರಚಾರ, ಕಾರ್ಯತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದ ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಭಾನುವಾರ ಸಿನಿಮಾ ನೋಡುವ ಮೂಲಕ ರಿಲ್ಯಾಕ್ಸ್ ಆಗಿದ್ರು. ಹತ್ತು ದಿನಗಳಿಂದ ಮೈಸೂರಿನಲ್ಲೇ ಇರುವ ಮುಖ್ಯಮಂತ್ರಿಗಳು ಬೆಂಗಳೂರಿಗೆ ಹೊರಡುವ ಮುನ್ನ ಭಾನುವಾರ ಮಧ್ಯಾಹ್ನ ಜಯಲಕ್ಷ್ಮಿಪುರದಲ್ಲಿರುವ ಡಿಆರ್‍ಸಿ ಮಲ್ಟಿಪ್ಲೆಕ್ಸ್‍ಗೆ ತೆರಳಿ `ಕೌಟುಂಬಿಕ ಪ್ರಧಾನ’ ಮತ್ತು ಪುನೀತ್ ರಾಜಕುಮಾರ್ ನಾಯಕ ನಟರಾಗಿ ಅಭಿನಯಿಸಿರುವ `ರಾಜಕುಮಾರ’ ಚಿತ್ರ ವೀಕ್ಷಿಸಿದ್ರು.

    ಚಿತ್ರ ವೀಕ್ಷಿಸಿದ ಸಿಎಂ, ರಾಜಕುಮಾರ ಚಿತ್ರತಂಡಕ್ಕೆ ತಮ್ಮ ನಿವಾಸಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದರು. ಹೀಗಾಗಿ ಇಂದು ಪುನೀತ್ ರಾಜ್‍ಕುಮಾರ್ ಸಿಎಂ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಸಿಎಂ, ಚಿತ್ರ ಉತ್ತಮವಾಗಿ ಮೂಡಿಬಂದಿದೆ ಅಂತಾ ಪವರ್ ಸ್ಟಾರ್‍ಗೆ ಅಭಿನಂದನೆ ಸಲ್ಲಿಸಿದ್ರು. ಪುನೀತ್ ಅವರಿಗೆ ಚಿತ್ರದ ನಿರ್ದೇಶಕ ಸಂತೋಷ ಹಾಗೂ ನಿರ್ಮಾಪಕ ವಿಜಯ್ ಸಾಥ್ ನೀಡಿದ್ರು.

    ಮುಖ್ಯಮಂತ್ರಿಗಳು ಮೊದಲಿನಿಂದಲೂ ವರನಟ ಡಾ.ರಾಜಕುಮಾರ್ ಅವರ ಅಭಿಮಾನಿಯಾಗಿದ್ದಾರೆ. ಅಲ್ಲದೇ ಸ್ವಂತ ಜಿಲ್ಲೆಯವರೆಂಬ ಅಭಿಮಾನವೂ ಇದೆ. ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿದ್ದ ಪುನೀತ್, ತಮ್ಮ ಚಿತ್ರ ಬಿಡುಗಡೆ ಆಗುತ್ತಿರುವ ವಿಷಯ ತಿಳಿಸಿದ್ದರು. ಸಿದ್ದರಾಮಯ್ಯ ಅವರು ತಮ್ಮ ಸಿನಿಮಾ ನೋಡಿದ ವಿಷಯವನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡ ಪುನೀತ್, ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಂತಸ ವ್ಯಕ್ತಪಡಿಸಿದರು.

    ಡಾ.ರಾಜ್ ಅವರನ್ನು ಭೇಟಿಯಾದಾಗ ಅವರು “ನಮ್ಮ ಕಾಡಿನವರು ಬಂದರು” ಎಂದು ಹೇಳುತ್ತಿದ್ದುದನ್ನು ಸಿದ್ದರಾಮಯ್ಯ ಇದೇ ವೇಳೆ ಸ್ಮರಿಸಿಕೊಂಡರು.

  • ಬಾಕ್ಸಾಫೀಸಲ್ಲಿ ಧೂಳೆಬ್ಬಿಸಿದ ರಾಜಕುಮಾರ – ಮೊದಲ ದಿನ ಗಳಿಸಿದ್ದೆಷ್ಟು?

    ಬಾಕ್ಸಾಫೀಸಲ್ಲಿ ಧೂಳೆಬ್ಬಿಸಿದ ರಾಜಕುಮಾರ – ಮೊದಲ ದಿನ ಗಳಿಸಿದ್ದೆಷ್ಟು?

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ರಾಜಕುಮಾರನ ದರ್ಬಾರು ಶುರುವಾಗಿದೆ. ಗಂಧದಗುಡಿಯ ಗಲ್ಲಪೆಟ್ಟಿಯಲ್ಲಿ ರಾಜಕುಮಾರನ ವಹಿವಾಟು ಜೋರಾಗಿದೆ. ಆ ವಹಿವಾಟಿನ ಲೆಕ್ಕಚಾರ ಹೀಗಿದೆ.

    ಸ್ಯಾಂಡಲ್‍ವುಡ್‍ನ ಸಮಸ್ತ ಅಪ್ಪು ಅಭಿಮಾನಿಗಳಿಗೆ ನಿನ್ನೆಯಿಂದಲೇ ಯುಗಾದಿ ಹಬ್ಬ ಶುರುವಾಗಿದೆ. ಪುನೀತ್ ಅಭಿಮಾನಿಗಳು ಯಾವ ರೀತಿ ನಿರೀಕ್ಷೆ ಮಾಡಿದ್ರೋ ಅದೇ ರೀತಿ ರಾಜಕುಮಾರ ಚಿತ್ರ ತೆರೆ ಮೇಲೆ ಮೂಡಿಬಂದಿದೆ. ಹಾಗೆಯೇ ಮೊದಲ ದಿನವೇ ರಾಜಕುಮಾರನ ಸಂಪಾದನೆ ಭರ್ಜರಿಯಾಗಿದೆ.

    ಒಂದೇ ದಿನಕ್ಕೆ ರಾಜಕುಮಾರ ಚಿತ್ರದ ನಿರ್ಮಾಪಕ ತಮ್ಮ ಜೇಬಿಗೆ ಆರೂವರೆ ಕೋಟಿ ರೂಪಾಯಿ ಇಳಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಓಪನಿಂಗ್ ಬೇರೆ ಯಾವ ಚಿತ್ರಕ್ಕೂ ಸಿಕ್ಕಿರಲಿಲ್ಲ.

    ಇದನ್ನೂ ಓದಿ: ರಾಜ್ಯಾದ್ಯಂತ `ರಾಜಕುಮಾರ’ನ ಹವಾ- ದಾವಣಗೆರೆಯಲ್ಲಿ ಅಪ್ಪು ಅಭಿಮಾನಿಗಳಿಗೆ ಲಾಠಿಚಾರ್ಜ್

    ಶುಕ್ರವಾರವಷ್ಟೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ರಾಜಕುಮಾರ’ ಚಿತ್ರ ರಾಜ್ಯಾದ್ಯಂತ 275 ಚಿತ್ರ ಮಂದಿಗಳಲ್ಲಿ ತೆರೆಕಂಡಿದೆ. ಜೊತೆಗೆ ದೇಶದ ಕೆಲ ಪ್ರಮುಖ ನಗರಗಳ ಸಿಲ್ವರ್ ಸ್ಕ್ರೀನ್‍ಗಳಲ್ಲಿಯೂ ರಾಜಕುಮಾರ ರಾರಾಜಿಸ್ತಿದೆ. ಇದೀಗಷ್ಟೇ ಪರೀಕ್ಷೆಗಳು ಮುಗಿದು, ಯುಗಾದಿ ಹಬ್ಬರ ರಜೆಗಳು ಶುರುವಾಗ್ತಿವೆ. ಇದು ರಾಜಕುಮಾರನಿಗೆ ಪ್ಲಸ್ ಪಾಯಿಂಟ್. ಸಿನಿಮಾದ ಬಗ್ಗೆ ಒಳ್ಳೆಯ ರೆಸ್ಪಾನ್ಸ್ ಇರುವ ಕಾರಣ ಮುಂದಿನ ದಿನಗಳಲ್ಲಿ ರಾಜಕುಮಾರ ಮತ್ತಷ್ಟು ಕೋಟಿ ಕೊಳ್ಳೆ ಹೊಡೆಯೋದ್ರಲ್ಲಿ ಯಾವುದೇ ಸಂಶಯ ಇಲ್ಲ.

    `ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಇದೇ ಮೊದಲ ಬಾರಿಗೆ ದಕ್ಷಿಣದ ಸುಂದರಿ ಪ್ರಿಯಾ ಆನಂದ್ ಕನ್ನಡ ಚಿತ್ರದಲ್ಲಿ ನಟಿಸಿದ್ದು, ಚೊಚ್ಚಲ ಚಿತ್ರದಲ್ಲೇ ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿ ಕಾಣಿಸಿಕೊಡಿದ್ದಾರೆ.

    ಪ್ರಕಾಶ್ ರೈ, ಅನಂತ್ ನಾಗ್, ಅಚ್ಯುತ್ ಕುಮಾರ್, ಸಾಧುಕೋಕಿಲಾ, ಚಿಕ್ಕಣ್ಣ, ರಂಗಾಯಣ ರಘು, ತಮಿಳು ನಟ ಶರತ್ ಕುಮಾರ್, ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ವೇಳೆ ಹೆಲಿಕಾಪ್ಟರ್ನಿಂದ ಹಾರಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮುಳುಗಿ ಮೃತಪಟ್ಟಿದ್ದ ಅನಿಲ್ ಸೇರಿದಂತೆ ಸೇರಿದಂತೆ ಹಲವು ಮಂದಿ ಅಭಿನಯಿಸಿದ್ದಾರೆ.

    ಮಾರ್ಚ್ 9ರಂದು ಬಿಡುಗಡೆಯಾದ ರಾಜಕುಮಾರ ಅಫಿಶಿಯಲ್ ಮೇಕಿಂಗ್ ವಿಡಿಯೋ 10 ಲಕ್ಷ ವ್ಯೂ ಕಂಡಿದ್ದರೆ, ಫೆ.17ರಂದು ಬಿಡುಗಡೆಯಾಗಿದ್ದ ರಾಜಕುಮಾರ ಚಿತ್ರದ ಟೈಟಲ್ ಹಾಡನ್ನು ಕೇವಲ 6 ಗಂಟೆಯಲ್ಲಿ 1 ಲಕ್ಷ ಜನ ವೀಕ್ಷಿಸಿದ್ದರು.