Tag: powerstar

  • ಅಮ್ಮನ ಬಗ್ಗೆ ಅಪ್ಪು ಮಾತನಾಡಿದ್ದ ಸ್ಫೂರ್ತಿದಾಯಕ ಮಾತುಗಳು ವೈರಲ್

    ಅಮ್ಮನ ಬಗ್ಗೆ ಅಪ್ಪು ಮಾತನಾಡಿದ್ದ ಸ್ಫೂರ್ತಿದಾಯಕ ಮಾತುಗಳು ವೈರಲ್

    ಸ್ಯಾಂಡಲ್‍ವುಡ್ ಪವರ್ ಸ್ಟಾರ್ ದಿ. ಡಾ. ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ತಿಂಗಳುಗಳೇ ಕಳೆದರೂ ಅವರ ಮೇಲಿನ ಅಭಿಮಾನ ಇನ್ನೂ ಕರಗಿಲ್ಲ. ಈ ಮಧ್ಯೆ ಪುನೀತ್ ಸಿನಿಮಾ ಡೈಲಾಗ್‍ಗಳು, ಕಾರ್ಯಕ್ರಮದಲ್ಲಿ ಅವರು ಮಾತಾಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಅದೇ ರೀತಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ಪು, ಅಲ್ಲಿ ತಮ್ಮ ಅಮ್ಮನ ಬಗ್ಗೆ ಮಾತಾನಾಡಿರುವ ಸ್ಫೂರ್ತಿದಾಯಕ ಮಾತುಗಳು ವೈರಲ್ ಆಗುತ್ತಿದೆ.

    ಹೌದು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಬಗ್ಗೆ ಮಾತಾನಾಡುತ್ತಾ ಅಪ್ಪು ಹೆಮ್ಮೆ ವ್ಯಕ್ತಪಡಿಸಿದರು. ನಾನು ನನ್ನ ಅಮ್ಮನಂತೆ ಆಗಬೇಕು. ಕೈಯಲ್ಲಿ ಪರ್ಸ್ ಇಟ್ಟುಕೊಂಡರೆ ತುಂಬಾ ಹಣ ಇದೆ ಅಂತ ಅನಿಸೋದು. ಅಮ್ಮನಂತೆ ಚೆನ್ನಾಗಿ ಸಂಪಾದನೆ ಮಾಡ್ಬೇಕು. ನಮ್ಮಮ್ಮ ಸಂಪಾದನೆ ಅನ್ನೋದಕ್ಕಿಂತ ಹೆಚ್ಚಾಗಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಅಲ್ಲದೆ ಹಲವಾರು ಮಂದಿಯನ್ನು ಇಂಡಸ್ಟ್ರಿಗೆ ಪರಿಚಯಿಸಿದ್ದಾರೆ ಎಂದಿದ್ದರು.  ಇದನ್ನೂ ಓದಿ: 88 ವರ್ಷಗಳ ಕನ್ನಡ ಚಿತ್ರರಂಗದ ಎಲ್ಲ ದಾಖಲೆ ಮುರಿದ ಜೇಮ್ಸ್ : 100 ಕೋಟಿ, ಅಧಿಕೃತ ಹೇಳಿಕೆ

    ನನಗೆ ಇಬ್ಬರು ಹೆಣ್ಣುಮಕ್ಕಳು. ಆದರೆ ಇಲ್ಲಿ ಹೆಣ್ಣು ಬೇರೆ ಅಲ್ಲ, ಗಂಡು ಬೇರೆ ಅಲ್ಲ, ಇಲ್ಲಿ ಎಲ್ಲಾರು ಸಮಾನರು ಎಂದು ಹೇಳಿದರು. ಸಮಾಜಕ್ಕೆ ಹೆಣ್ಣು ಮಗಳು ಅಂತ ಬಂದಾದ ಬಳಿಕ ಅವರೂ ಕೆಲಸ ಮಾಡಲೇಬೇಕು. ನಮ್ಮ ಅಮ್ಮನೂ ಕೆಲಸ ಮಾಡುತ್ತಿದ್ದರು. ಅದಕ್ಕೆ ನಾನು ಯಾರನ್ನು ನೋಡಿದರೂ ಯಾವಾಗ್ಲೂ ಕೆಲಸ ಮಾಡಿ, ಜೀವನದಲ್ಲಿ ಚೆನ್ನಾಗಿರಿ ಅಂತ ಹೇಳುತ್ತೇನೆ. ಇದಕ್ಕೆ ನಮ್ಮ ಅಮ್ಮನೇ ಸ್ಫೂರ್ತಿ ಅಂತ ಅಪ್ಪು ಸಂತಸ ವ್ಯಕ್ತಪಡಿಸಿದ್ದರು.

    ನಾನೆಷ್ಟು ಒಳ್ಳೆಯ ಕೆಲಸ ಮಾಡುರುತ್ತೀನೋ, ಅಷ್ಟು ಕೆಟ್ಟ ಕೆಲಸನೂ ಮಾಡಿರುತ್ತೇನೆ. ಯಾಕೆಂದರೆ ಇದು ಜೀವನ ಎಂದ ಅವರು, ಈ ಜೀವನದಲ್ಲಿ ನನ್ನ ತಿದ್ದಿ, ಬೆಳೆಸಿರುವವರೆಂದರೆ ನನ್ನ ತಾಯಿ ಎಂದಿದ್ದರು. ಅಪ್ಪು ಅವರ ಈ ಮಾತುಗಳು ಇದೀಗ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಬರಲಿವೆ ಪುನೀತ್ ನಟನೆಯ ‘ಯುವರತ್ನ’ ಸಿನಿಮಾದ ಅನ್ ಕಟ್ ಸೀನ್ಸ್ : ನಿರ್ದೇಶಕ ಸಂತೋಷ್ ಆನಂದ್

    ಮಾರ್ಚ್ 17ರಂದು ಅಪ್ಪು ಹುಟ್ಟುಹಬ್ಬವಾಗಿದ್ದು, ಅಂದೇ ಪುನೀತ್ ನಟನೆಯ ಕೊನೆಯ ಚಿತ್ರ ಜೇಮ್ಸ್ ರಿಲೀಸ್ ಆಗಿದೆ. ಅದ್ಯ ಚಿತ್ರ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರು ಕಣ್ಣೀರು ಹಾಕಿದ್ದಾರೆ.

  • ರಾಜಕುಮಾರನ ಜೇಮ್ಸ್ ಜಾತ್ರೆ – ಸಿನಿಮಾದಲ್ಲಿ ಸಾವು ಗೆದ್ದ ಅಪ್ಪು ಬದುಕಲ್ಲಿ ಗೆಲ್ಲಬಾರದಿತ್ತೇ..!

    ರಾಜಕುಮಾರನ ಜೇಮ್ಸ್ ಜಾತ್ರೆ – ಸಿನಿಮಾದಲ್ಲಿ ಸಾವು ಗೆದ್ದ ಅಪ್ಪು ಬದುಕಲ್ಲಿ ಗೆಲ್ಲಬಾರದಿತ್ತೇ..!

    * ಪವಿತ್ರ ಕಡ್ತಲ, ಮೆಟ್ರೋ ಬ್ಯೂರೋ ಚೀಫ್, ಪಬ್ಲಿಕ್ ಟಿವಿ

    ಶಿಳ್ಳೆ , ಚಪ್ಪಾಳೆ, ಹರ್ಷೋದ್ಘಾರ, ಪಟಾಕಿಯ ಸದ್ದು, ಹಾಲಿನ ಅಭಿಷೇಕ ಇಡೀ ಬೆಂಗಳೂರಿನಲ್ಲಿ ಇಂದು ಪುನೀತೋತ್ಸವ. ಆದ್ರೇ ಇವೆಲ್ಲವನ್ನೂ ಮೀರಿ ಪ್ರತಿಯೊಬ್ಬರ ಮನದಲ್ಲಿ ದುಃಖದ ಕಾರ್ಮೋಡವಿತ್ತು. ಜೇಮ್ಸ್ ಸಿನಿಮಾದಲ್ಲಿ ಅಪ್ಪು ಖಡಕ್ ಲುಕ್, ಫಿಟ್ ಆಂಡ್ ಫೈನ್ ಆಗಿ ರಾಯಲ್ ಆಗಿ ಕಾಣ್ತಿರುವ ಅಪ್ಪು ನಿಜವಾಗಲೂ ಇನ್ನಿಲ್ವಾ… ಸಿನಿಮಾದಲ್ಲಿ ಅಬ್ಬರಿಸ್ತಾ ಇರುವ ಈ ರಾಜ ನಮ್ಮನ್ನು ಹೀಗೆ ಬಿಟ್ಟು ಹೋಗೇಬಿಟ್ರಾ ಎನ್ನುವ ನೋವಿನ ಭಾವ ಪ್ರತಿ ಕ್ಷಣದಲ್ಲಿ ಮತ್ತೆ ಮತ್ತೆ ಕಾಡಿ ಎದೆ ಭಾರವೆನಿಸುವ ಕ್ಷಣವದು.

    ಅಪ್ಪುವಿನ ಫುಲ್ ಪ್ರೇಮ್ ಥಿಯೇಟರ್ ಪರದೆಯಲ್ಲಿ ಬಂದಾಗೆಲ್ಲ ದುಃಖ ತಡೆಯಲಾರದೇ ಅದೆಷ್ಟೋ ಜನ ಸ್ಕ್ರೀನ್ ತಬ್ಬಿ ಹಿಡಿದು ಅಪ್ಪು ಅಪ್ಪು ಅಂತಾ ಮೌನವಾಗಿ ಕಣ್ಣೀರಾದ್ರು. ಹೀಗೆ ನಡುನೀರಿನಲ್ಲಿ ತಾನು ಕೋಟ್ಯಂತರ ಅಭಿಮಾನಿಗಳನ್ನು ಬಿಟ್ಟು ಹೋಗುತ್ತೇನೆ, ಇವರೆಲ್ಲ ನನ್ನ ಸಾವನ್ನು ಅರಗಿಸಿಕೊಳ್ಳಲಾರರು ಅಂತಾ ಅಪ್ಪುವಿಗೆ ಮೊದಲೇ ಗೊತ್ತಿದ್ದು, ಆ ನೋವಿಗೆ ಮುಲಾಮು ಹಚ್ಚೋಕೆ ಜೇಮ್ಸ್ ಸಿನಿಮಾ ಮಾಡಿದ್ರಾ ಅನ್ನೋವಷ್ಟು ಕಾಡಿಬಿಡುತ್ತೆ ಸಿನಿಮಾ. ಇದನ್ನೂ ಓದಿ: ಗುರುವಾರಕ್ಕೂ ಪುನೀತ್ ಸಿನಿಮಾ ರಿಲೀಸಿಗೂ ಏನದು ನಂಟು?

    ಜೇಮ್ಸ್ ಇಡೀ ಸಿನಿಮಾದ ಕಥೆ, ಸಂದೇಶ, ಡ್ಯಾನ್ಸು ಸಾಂಗ್ಸ್.. ಊಹೂ ಅದ್ಯಾವುದೂ ಅಭಿಮಾನಿಗಳ ಪಾಲಿಗೆ ಮುಖ್ಯವಾಗಲೇ ಇಲ್ಲ. ಕೇವಲ ಅಪ್ಪು ಜಪ. ಅಪ್ಪುವನ್ನು ಕಣ್ಣುತುಂಬಿಸಿಕೊಳ್ಳುವ ತವಕ. ಮತ್ತೆ ಎಂದೂ ತೆರೆಯ ಮೇಲೆ ಈ ‘ರಾಜಕುಮಾರ’ನ ನೋಡಲಾರೆವು ಎನ್ನುವ ಕಹಿ ಸತ್ಯ ಪದೇ ಪದೇ ಕಣ್ಣೀರಾಗಿಸುವ ಸಂದರ್ಭದಲ್ಲಿಯೂ ಜೇಮ್ಸ್ ಕೋಟಿ ಕಂಗಳ ಕಣ್ಣೀರು ಒರೆಸುವ ಪುಟ್ಟ ಕರ್ಚೀಫಿನಂತೆ, ಥೇಟು ಅಪ್ಪುವಿನ ನಿಷ್ಕಲ್ಮಷ ನಗೆಯಂತೆ ಕಾಣಿಸಿದೆ.

    ಅಪ್ಪು ಕೊನೆಯ ಸಿನಿಮಾ ಹೇಗಿದೆ..!?: ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ನಲ್ಲಿ ಅಪ್ಪುವಿನದ್ದು ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ಹಾಗೂ ಸೈನಿಕನಾಗಿ ಡಬಲ್ ಶೇಡ್ ಇರುವ ಪಾತ್ರ. ಇಡೀ ಸಮಾಜವನ್ನು ಡ್ರಗ್ಸ್ ಮಾಫಿಯವನ್ನು ಕಿತ್ತೊಗೆಯಲು ನಾಯಕನ ಶ್ರಮ ಸಿನಿಮಾದ ಹೈಲೈಟ್ಸ್. ಇದನ್ನೂ ಓದಿ: ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂ

    ಸೈನಿಕ ಹಾಗೂ ಏಜೆನ್ಸಿ ಸೆಕ್ಯೂರಿಟಿ ಆಗಿ ಡಬಲ್ ಶೇಡ್‍ನಲ್ಲಿ ಪಾತ್ರ ನಿರ್ವಹಿಸಿದ ಪುನೀತ್‍ಗೆ ಗೆ ಪ್ರಿಯಾ ಆನಂದ್ ಜೋಡಿಯಾಗಿದ್ದಾರೆ. ಆರಂಭದಲ್ಲಿಯೇ ಕಾರ್ ಚೇಸಿಂಗ್ ನಲ್ಲಿ ಪವರ್ ಸ್ಟಾರ್ ಮಾಸ್ ಎಂಟ್ರಿ ಅಭಿಮಾನಿಗಳ ಮೈಯಲ್ಲಿ ಮಿಂಚು ಹರಿಸುತ್ತೆ. ಇನ್ನು ಅಪ್ಪು ಫೈಟಿಂಗ್, ಯಾರೂ ಬೀಟ್ ಮಾಡಲು ಆಗದ ಸಕತ್ ಡ್ಯಾನ್ಸ್, ಜೇಮ್ಸ್ ಸಿನಿಮಾದ ಸೆಂಟರ್ ಆಫ್ ಅಟ್ರ್ಯಾಕ್ಷನ್. ಅಪ್ಪುವಿನ ಧ್ವನಿಯನ್ನು ಕೊಂಚ ಮಿಸ್ ಮಾಡಿಕೊಳ್ಳುವ ಅಭಿಮಾನಿಗಳಿಗೆ ಶಿವಣ್ಣನ ಧ್ವನಿ ಕೊಂಚ ಸಮಾಧಾನ ಕೊಡುತ್ತೆ.

    ಸಿನಿಮಾದಲ್ಲಿ ಸಾವು ಗೆದ್ದ ಅಪ್ಪು..! ರಿಯಲ್ ಲೈಫ್ ನಲ್ಲಿ ಚಾನ್ಸ್ ಕೊಡದ ವಿಧಿ.!: ರಿಯಲ್ ಲೈಫ್ ನಲ್ಲಿ ಕೊಂಚವೂ ವಿನಾಯಿತಿ ತೋರದಂತೆ ಅಪ್ಪುವನ್ನು ವಿಧಿ ಕಿತ್ತುಕೊಂಡಿತ್ತು. ಆದ್ರೆ ಸಿನಿಮಾದಲ್ಲಿ ಅಪ್ಪು ಇಪ್ಪತ್ತು ದಿನಗಳ ಕಾಲ ಐಸಿಯುನಲ್ಲಿದ್ದು ಸಾವು ಬದುಕಿನ ಮಧ್ಯೆ ಹೋರಾಡಿ ಸಾವು ಗೆಲ್ಲುವ ಸೀನ್ ಅಭಿಮಾನಿಗಳನ್ನು ಕಣ್ಣೀರಗಾಗಿಸಿತು. ನಿಜ ಜೀವನದಲ್ಲೂ ಹೀಗಾಗಬಾರದಾಗಿತ್ತೇ.., ಅಪ್ಪು ಒಂದು ಬಾರಿ ಎದ್ದು ಬರಬಾರದಿತ್ತೇ ಅಂತಾ ಅನಿಸುವಂತಿತ್ತು. ಅಭಿಮಾನಿಗಳ ಕಣ್ಮನ ತಣಿಸುವ ಪುನೀತ್ ಸಂಭ್ರಮ ಜೇಮ್ಸ್ ಜಾತ್ರೆಯನ್ನು ತಡಮಾಡದೇ ಕಣ್ತುಂಬಿಸಿಕೊಳ್ಳಿ. ಇದನ್ನೂ ಓದಿ: ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ

  • ಸೌದೆ ಹಿಡಿದು ದೇವಿರಮ್ಮನ ದರ್ಶನ – ಅಪ್ಪು ಅಭಿಮಾನಿಯ ವಿಶೇಷ ಹರಕೆ!

    ಸೌದೆ ಹಿಡಿದು ದೇವಿರಮ್ಮನ ದರ್ಶನ – ಅಪ್ಪು ಅಭಿಮಾನಿಯ ವಿಶೇಷ ಹರಕೆ!

    ಚಿಕ್ಕಮಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಾಘಾತದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು, ದೇವೀರಮ್ಮನಿಗೆ ಪೂಜೆ ಮಾಡಿಸಿ ನಮ್ಮಣ್ಣಂಗೆ ಏನೂ ಆಗೋದು ಬೇಡ, ಹೆಗಲ ಮೇಲೆ ಸೌದೆ ಹೊತ್ಕೊಂಡು ನಿನ್ನ ಬೆಟ್ಟ ಹತ್ತಿ ಪೂಜೆ ಮಾಡಿಸ್ತೀನಿ ಅಂತ ಹರಕೆ ಕಟ್ಟಿಕೊಂಡಿದ್ರು. ಆದರೆ ವಿಧಿಲಿಖಿತ ಬೇರೆಯೇ ಇತ್ತು. ಕೋಟ್ಯಂತರ ಮನಸುಗಳ ಪ್ರಾರ್ಥನೆ ಆ ಭಗವಂತನಿಗೆ ಕೇಳಿಸ್ತೋ-ಇಲ್ವೊ ಪುನೀತ್ ನಮ್ಮನ್ನ ಅಗಲಿಯೇ ಬಿಟ್ಟರು. ಆದರೆ ಹರಕೆ ಕಟ್ಟಿಕೊಂಡಿದ್ದ ಆ ಯುವಕರು ಅಪ್ಪು ಕುಟುಂಬಕ್ಕಾಗಿ ಹರಕೆ ಸಲ್ಲಿಸಿದ್ದಾರೆ. ಇದು ಕಾಫಿನಾಡಿನ ಅಪ್ಪು ಅಭಿಮಾನಿಗಳ ಅಭಿಮಾನದ ಕಥೆ.

    ಪುನೀತ್ ಅಪ್ಪಟ ಅಭಿಮಾನಿ ಚಿಕ್ಕಮಗಳೂರಿನ ರವಿ ಅವರು ಸೌದೆ ಹೊತ್ತು ದೇವೀರಮ್ಮನ ದರ್ಶನ ಮಾಡಿದ್ದಾರೆ. ಅಪ್ಪುಗೆ ಹೃದಯಾಘಾತವಾದ ಸುದ್ದಿ ತಿಳಿಯುತ್ತಿದ್ದಂತೆ ಬೇಗ ಗುಣಮುಖರಾಗಲಿ. ಬೆಟ್ಟ ಹತ್ತಿ ಪೂಜೆ ಮಾಡಿಸ್ತೀನಿ ಅಂತ ದೇವೀರಮ್ಮನಿಗೆ ಹರಕೆ ಕಟ್ಟಿಕೊಂಡಿದ್ದರಂತೆ. ಆದರೀಗ ಅಪ್ಪು ಇಲ್ಲದ ಕಾರಣ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ಒಳ್ಳೆದಾಗಲಿ ಅಂತ 3,800 ಅಡಿ ಎತ್ತರದ ಬೆಟ್ಟವನ್ನ ಹತ್ತಿ ದೇವೀರಮ್ಮನಿಗೆ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಈಡೇರಿತು ಕನ್ನಡಿಗರ ಕಣ್ಮಣಿಯ ಮಹದಾಸೆ – 40 ಸಾವಿರ ಅಭಿಮಾನಿಗಳಿಗೆ ಒಟ್ಟಿಗೇ ಊಟ!

    ಅಪ್ಪು ರವಿ ಅಂತಲೇ ಫೇಮಸ್ ಆಗಿರೋ ರವಿ, ನಾನು ನನ್ನ ತಮ್ಮ ಇಬ್ಬರೂ ಅಪ್ಪು ರೀತಿ ನೇತ್ರದಾನ ಮಾಡೋಕೆ ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಮಗಳ ಹೆಸರಿದ್ದ ಕ್ಯಾಂಟೀನ್‍ಗೆ ಅಪ್ಪು ಹೆಸರನ್ನು ಮರುನಾಮಕರಣ ಮಾಡಿದ್ದಾರೆ. ಕ್ಯಾಂಟಿನ್‍ಗೆ ಬರುವ 60 ವರ್ಷ ಮೇಲ್ಪಟ್ಟವರಿಗೆ ಉಚಿತ ಊಟ-ತಿಂಡಿ, ಕಾಫಿ-ಟೀ ಕೊಡ್ತಿದ್ದಾರೆ. ಇನ್ನು ಕ್ಯಾಂಟಿನ್‍ಗೂ ಮೊದಲು ಆರ್ಕೇಸ್ಟ್ರಾದಲ್ಲಿ ಕೆಲಸ ಮಾಡುತ್ತಿದ್ದ ರವಿ, ಅಪ್ಪು ರೀತಿ ಡ್ಯಾನ್ಸ್ ಮಾಡ್ತಿದ್ರಂತೆ, ಕೊನೆಯಲ್ಲಿ ಪುನೀತ್ ಹಾಡು ಇಲ್ಲದೆ ವಾಪಸ್ ಬರುತ್ತಿರಲಿಲ್ವಂತೆ.

  • ಈಡೇರಿತು ಕನ್ನಡಿಗರ ಕಣ್ಮಣಿಯ ಮಹದಾಸೆ – 40 ಸಾವಿರ ಅಭಿಮಾನಿಗಳಿಗೆ ಒಟ್ಟಿಗೇ ಊಟ!

    ಈಡೇರಿತು ಕನ್ನಡಿಗರ ಕಣ್ಮಣಿಯ ಮಹದಾಸೆ – 40 ಸಾವಿರ ಅಭಿಮಾನಿಗಳಿಗೆ ಒಟ್ಟಿಗೇ ಊಟ!

    ಬೆಂಗಳೂರು: ‘ಕನ್ನಡಿಗರ ಕಣ್ಮಣಿ’ ಪುನೀತ್ ರಾಜ್ ಕುಮಾರ್ ಅವರ ಮಹದಾಸೆ ಈಡೇರಿದೆ. ಯುವರತ್ನ ಪ್ರಚಾರದ ವೇಳೆ ಅಭಿಮಾನಿಗಳ ಅಭಿಮಾನ ಕಂಡು ಅಪ್ಪು ಪುಳಕಿತಗೊಂಡಿದ್ದರು. ಅಲ್ಲದೆ ‘ಅಭಿಮಾನಿ ದೇವರಿಗೆ’ ಒಟ್ಟಿಗೆ ಊಟ ಹಾಕಿಸುವ ಮನದಾಸೆಯೊಂದನ್ನು ಇಟ್ಟುಕೊಂಡಿದ್ದು, ಪತ್ನಿ ಅಶ್ವಿನಿ ಬಳಿ ಹೇಳಿಕೊಂಡಿದ್ದರು.

    ಹೌದು. ದೊಡ್ಮನೆಯ ದೊಡ್ಡ ಗುಣ ಇದು. ಅನ್ನಸಂತರ್ಪಣೆ ಸ್ವತಃ ಪುನೀತ್ ಬಯಕೆ ಅಂತೆ. ಮಂಗಳವಾರ ಬೆಂಗಳೂರಿನಲ್ಲಿ ಪ್ಯಾಲೇಸ್ ಗ್ರೌಂಡ್‍ನಲ್ಲಿ 40 ಸಾವಿರಕ್ಕೂ ಹೆಚ್ಚು ಜನ ದೇವರ ಪ್ರಸಾದ ಎಂಬಂತೆ ಸ್ವೀಕರಿಸಿದ್ದಾರೆ. ಇದು ಅಪ್ಪು ಮಹದಾಸೆಯಾಗಿತ್ತು.  ಇದನ್ನೂ ಓದಿ: 46 ವರ್ಷಕ್ಕೆ ನನ್ನ ತಮ್ಮ ದೇವರಿಗೆ ತುಂಬಾ ಇಷ್ಟ ಆಗ್ಬಿಟ್ಟ: ಶಿವಣ್ಣ

    ಯುವರತ್ನ ಪ್ರಚಾರದ ವೇಳೆ ದೂರದೂರುಗಳಿಗೆ ಪ್ರಚಾರಕ್ಕಾಗಿ ಸುತ್ತಿದ್ದ ಅಪ್ಪುಗೆ ಜನರು ತೋರಿಸಿದ ಪ್ರೀತಿ ನೋಡಿ ಇವರಿಗೆಲ್ಲ ಒಂದೇ ಒಂದು ಬಾರಿ ಊಟ ಹಾಕಿಸಬೇಕಲ್ಲ ಎಂದು ಪತ್ನಿಯತ್ತ ಹೇಳಿಕೊಂಡಿದ್ದರಂತೆ. ಅಪ್ಪು ಆ ಮನದಾಸೆ, ಮಹದಾಸೆಯನ್ನು ಅಣ್ಣಾವ್ರ ಕುಟುಂಬ ಈಡೇರಿಸಿದೆ. ಇದನ್ನೂ ಓದಿ: ಇತಿಹಾಸ ಬರೆದ ಪವರ್ ಸ್ಟಾರ್ ಪುಣ್ಯಸ್ಮರಣೆ- ದಾಖಲೆ ಪ್ರಮಾಣದಲ್ಲಿ ನೇತ್ರದಾನಕ್ಕೆ ಅರ್ಜಿ

    ದೊಡ್ಮನೆ ಧನ್ಯವಾದ:
    12 ದಿನಗಳ ಕಾಲ ಶಾಂತಿ ಸುವ್ಯವಸ್ಥೆ ಕಾಪಾಡಿದ ಅಭಿಮಾನಿಗಳು, ಪೊಲೀಸರಿಗೆ ದೊಡ್ಮನೆ ಕುಟುಂಬ ಪ್ರೀತಿಯಿಂದ ಕೃತಜ್ಞತೆ, ಧನ್ಯವಾದ ಅರ್ಪಿಸಿದೆ. ಅಭಿಮಾನಿ ಸಾಗರ ನೋಡಿದ ಅಪ್ಪು ಪತ್ನಿ ಅಶ್ವಿನಿ ಕಣ್ಣೀರಾಗಿದ್ರು. ಶಿವಣ್ಣ ಮಾತಾಡಿ, ಅಪ್ಪು ಅಗಲಿದ ನೋವಿದೆ. ಅಭಿಮಾನಿಗಳು ಪ್ರಸಾದ ಅಂತಿದ್ದಾರೆ. ಇದೇ ವೇಳೆ ಅಭಿಮಾನಿಗಳನ್ನು ದೇವರು ಅಂತ ಅಪ್ಪಾಜಿ ಹೇಳ್ತಿದ್ದನ್ನು ಸ್ಮರಿಸಿಕೊಂಡ್ರು. ರಾಘಣ್ಣ ಅವರಂತೂ ಅಭಿಮಾನಿಗಳಿಗೆ ಸಾಷ್ಟಾಂಗ ನಮಸ್ಕಾರ ಹೇಳಿದ್ರು. ಅಲ್ಲದೆ ಅಪ್ಪಾಜಿ, ಅಪ್ಪು ಅವರ ಒಳ್ಳೆಯ ಕೆಲಸಗಳನ್ನು ಮುಂದುವರಿಸೋಣ ಅಂತ ಕರೆ ನೀಡಿದ್ರು.

  • ಕಲಾವಿದನ ಕೈಯಲ್ಲಿ ಅರಳಿದ ಪವರ್ ಸ್ಟಾರ್ ಶಿಲ್ಪಕಲೆ

    ಕಲಾವಿದನ ಕೈಯಲ್ಲಿ ಅರಳಿದ ಪವರ್ ಸ್ಟಾರ್ ಶಿಲ್ಪಕಲೆ

    ಶಿವಮೊಗ್ಗ: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಕಾಲಿಕ ನಿಧನ ಅವರ ಅಭಿಮಾನಿಗಳ ಮನಸ್ಸಿಗೆ ಸಾಕಷ್ಟು ನೋವು ತರಿಸಿದೆ. ಹೀಗಾಗಿಯೇ ಅಭಿಮಾನಿಗಳು ಪುನೀತ್ ಅಗಲಿಕೆ ನಂತರ ವಿಭಿನ್ನವಾಗಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

    ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ನಿವಾಸಿ, ಕಲಾವಿದ ಜಗದೀಶ್ ಅವರು ಪುನೀತ್ ರಾಜ್‍ಕುಮಾರ್ ಅವರ ಮಣ್ಣಿನ ಪುತ್ಥಳಿಯನ್ನು ನಿರ್ಮಿಸಿ ಅಗಲಿದ ಕರುನಾಡ ಕುವರನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಮ್ಮ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರ ನೆನಪು ತಮ್ಮೊಂದಿಗೆ ಸದಾ ಶಾಶ್ವತವಾಗಿ ಇರಲಿ, ಅವರು ಎಲ್ಲಿಗೂ ಹೋಗಿಲ್ಲ, ನಮ್ಮೊಂದಿಗೆ ಇದ್ದಾರೆ. ಎನ್ನುವ ಭಾವನೆಯಿಂದ ಅಪ್ಪು ಅವರ ಮಣ್ಣಿನ ಮೂರ್ತಿ ಮಾಡುವ ಮೂಲಕ ನಟನಿಗೆ ಅಂತಿಮ ವಿದಾಯ ಹೇಳಿದ್ದಾರೆ. ಇದನ್ನೂ ಓದಿ: ತಾನು ನೆಟ್ಟ ಗಿಡಕ್ಕೆ ಪುನೀತ್ ರಾಜ್ ಕುಮಾರ್ ಅಂತ ಹೆಸರಿಟ್ಟ ವಿಶಾಲ್

    ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿಯ ಶಿಲ್ಪಕಲಾ ಕೇಂದ್ರದ ಶಿಲ್ಪಿ ಜಗದೀಶ್ ಅವರು ಅಪ್ಪಟ ಪುನೀತ್ ರಾಜ್‍ಕುಮಾರ್ ಅಭಿಮಾನಿ. ನಟನ ಅಗಲಿಕೆ ನನಗೆ ಸಹಿಸಲಾಸಾಧ್ಯ ಬೇಸರ ತಂದಿದೆ. ನಾನು ಬಹಳ ನೊಂದಿದ್ದೇನೆ. ಅವರ ಮೂರ್ತಿ ಮಾಡುವ ಮೂಲಕ ಅವರಿಗೆ ಅಂತಿಮ ನಮನ ಸಲ್ಲಿಸುತ್ತೇನೆ. ಅವರನ್ನು ಭೇಟಿ ಮಾಡುವ ಕನಸು ಕಂಡಿದ್ದೆ. ಆದರೆ ಆ ಕನಸು ಕನಸಾಗಿಯೇ ಉಳಿಯಿತು ಎಂದು ಭಾವುಕರಾಗಿ ಅಪ್ಪುಗೆ ನಮನ ಸಲ್ಲಿಸಿದ್ದಾರೆ.

  • ಅಂಜನಿಪುತ್ರ ಚಿತ್ರಕ್ಕೆ ತಡೆಯಾಜ್ಞೆ- ನಿರ್ಮಾಪಕ, ವಿತರಕ ಜಾಕ್ ಮಂಜು ಪ್ರತಿಕ್ರಿಯೆ

    ಅಂಜನಿಪುತ್ರ ಚಿತ್ರಕ್ಕೆ ತಡೆಯಾಜ್ಞೆ- ನಿರ್ಮಾಪಕ, ವಿತರಕ ಜಾಕ್ ಮಂಜು ಪ್ರತಿಕ್ರಿಯೆ

    ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಅಂಜನಿಪುತ್ರ’ ಚಿತ್ರಕ್ಕೆ ಒಂದಲ್ಲ ಒಂದು ಕಂಟಕಗಳು ಎದುರಾಗುತ್ತಲೇ ಇವೆ. ಚಿತ್ರ ಪ್ರದರ್ಶಗೊಂಡ ದಿನದಂದೇ ಅಪ್ಪು ಅಭಿಮಾನಿಯೊಬ್ಬ ಸಿನಿಮಾವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಬೆನ್ನಲ್ಲೇ ಇದೀಗ ಕೋರ್ಟ್ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದೆ.

    ಈ ಕುರಿತು ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಕೋರ್ಟ್ ಚಿತ್ರಕ್ಕೆ ತಡೆಯಾಜ್ಞೆ ನೀಡಿರುವ ಕುರಿತು ಹಾಗೂ ಯಾಕ್ ನೀಡಿದೆ ಅನ್ನೋದರ ಬಗ್ಗೆ ನನಗೆ ಈವರೆಗೂ ಮಾಹಿತಿ ಬಂದಿಲ್ಲ. ಇನ್ನು ಸಿನಿಮಾದಲ್ಲಿರೋ ಸನ್ನಿವೇಶದಲ್ಲಿ ವಕೀಲರಿಗೆ ಏನಾದ್ರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಅಂತ ಹೇಳಿದ್ರು.

    ನನ್ನ ಸಿನಮಾ ತಂಡದ ಜೊತೆ ಮಾತನಾಡಿ, ಆ ಸಿನಿಮಾವನ್ನು ನೋಡಿ ನೋಟೀಸ್ ಇಲ್ಲದೆನೆ ತೆಗೆಯುವುದಕ್ಕೆ ಪ್ರಯತ್ನಿಸುತ್ತೇನೆ. ಆದರೆ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ನಿಲ್ಲಿಸಿ ಅನ್ನೋ ವಿಚಾರದ ಕುರಿತು ಇದುವರೆಗೆ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಕರ್ನಾಟಕದಾದ್ಯಂತ ಎಲ್ಲಾ ಚಿತ್ರ ಮಂದಿರಗಳಲ್ಲೂ ಚಿತ್ರ ಪ್ರದರ್ಶನವಾಗುತ್ತಿದೆ. ನಾನು ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡುವುದಿಲ್ಲ. ಕಾನೂನಿಗೆ ತಲೆಬಾಗ್ತೀನಿ. ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ನಿಲ್ಲಿಸಿ ಎಂದು ಆ ಪ್ರತಿ ನನ್ನ ಕೈಗೆ ಬಂದ ಪಕ್ಷದಲ್ಲಿ ನಾನು ಅದನ್ನು ಫಾಲೋ ಮಾಡುತ್ತೇನೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಅಂಜನಿಪುತ್ರದ ವಿರುದ್ಧ ನಾನು ದೂರು ನೀಡಿದ್ದು ಯಾಕೆ? ವಕೀಲ ನಾರಾಯಣಸ್ವಾಮಿ ಆರೋಪಿಸಿದ್ದು ಹೀಗೆ

    ವಕೀಲರು ತಿಳಿದವರು, ಬುದ್ಧಿವಂತರು. ಹೀಗಾಗಿ ಇದರಿಂದ ದಯವಿಟ್ಟು ಕೋಪ ಮಾಡಿಕೊಳ್ಳಬೇಡಿ. ಯಾಕಂದ್ರೆ ಚಿತ್ರದ ಮೊದಲಿನಲ್ಲೇ ಇಲ್ಲಿ ಬರುವ ಸನ್ನಿವೇಶಗಳೆಲ್ಲವೂ ಕಾಲ್ಪನಿಕವೆಂದು ನಾವು ಹೇಳಿರುತ್ತೇವೆ. ಉದಾಹರಣೆಗೆ ಒಂದು ಸಿನಿಮಾದಲ್ಲಿ 10 ಮಂದಿಯನ್ನು ಸಾಯಿಸೋದು ಅಥವಾ ಅತ್ಯಾಚಾರ ಮಾಡುವಂತಹ ಸನ್ನಿವೇಶಗಳು ಬರುತ್ತವೆ. ಆದ್ರೆ ನೀವು ಯಾವತ್ತೂ ಈ ಕುರಿತು ಕಾನೂನು ಮೆಟ್ಟಿಲು ಹತ್ತಿರುವುದಿಲ್ಲ. ಆದ್ರೆ ಇದೀಗ ವಕೀಲರಿಗೆ ಏನೋ ಒಂದು ಮಾತು ಅಂದಿದ್ದಾರೆ ಅಂತ ಈ ರೀತಿ ಮಾಡುವುದು ಸರಿಯಲ್ಲ. ಸೆನ್ಸಾರ್ ಮಂಡಳಿಯವರು ಈ ಚಿತ್ರವನ್ನು ನೋಡಿ, ಚಿತ್ರದಲ್ಲಿ ಬರುವ ಪ್ರತಿಯೊಂದು ಸನ್ನಿವೇಶಗಳನ್ನು ನೋಡಿಯೇ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರು ಸಿನಿಮಾಟೋಗ್ರಾಫಿಯನ್ನು ಓದಿಯೇ ಮಾಡಿದ್ದಾರೆ. ಹೀಗಾಗಿ ತಪ್ಪು ಅಂತ ಅವರಿಗೂ ಅನಿಸಿಲ್ಲ. ಇವೆಲ್ಲದರ ಮಧ್ಯೆ ನಿಮಗೆ ನೋವಾಗಿದ್ದರೆ ಕ್ಷಮಿಸಿ ಬಿಡಿ ಅಂದ್ರು. ಇದನ್ನೂ ಓದಿ:  ಪುನೀತ್ ಅಭಿನಯದ ಅಂಜನಿಪುತ್ರ ಪ್ರದರ್ಶನಕ್ಕೆ ಬ್ರೇಕ್

    ಒಟ್ಟಿನಲ್ಲಿ ಈ ವಿಚಾರದ ಕುರಿತು ದಯವಿಟ್ಟು ನೋವಾಗಬೇಡಿ. ಒಂದು ವೇಳೆ ನೀವು ಈ ಕುರಿತು ಕೋರ್ಟ್ ಮೊರೆ ಹೋಗಿದ್ದರೆ ದಯವಿಟ್ಟು ಅದನ್ನು ವಾಪಾಸ್ ತೆಗೆದುಕೊಳ್ಳಿ. ಯಾಕಂದ್ರೆ ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಸಿನಿಮಾ ರಂಗದಲ್ಲಿ ಬಹಳಷ್ಟು ಒದ್ದಾಡುತ್ತಿದ್ದೇವೆ. ಹೀಗಾಗಿ ದಯವಿಟ್ಟು ಇದನ್ನು ಮುಂದುವರೆಸೋದು ಬೇಡ ಅಂತ ವಕೀಲರಿಗೆ ಜಾಕ್ ಮನವಿ ಮಾಡಿಕೊಂಡರು. ಇದನ್ನೂ ಓದಿ: ಅಂಜನಿಪುತ್ರ ಎಫ್‍ಬಿ ಲೈವ್ ಮಾಡಿದ್ದು ಯಾಕೆ? ಯುವಕ ಹೇಳಿದ್ದು ಏನು?

    ಚಿತ್ರಪ್ರದರ್ಶನ ನಿಂತು ಬಿಟ್ಟರೆ ಸುಮಾರು 400ರಿಂದ 500 ಜನರ ಜೀವನ ಬೀದಿಗೆ ಬರುತ್ತೆ. ಅವರೆಲ್ಲರ ಮನೆ, ಮಡದಿ ಮಕ್ಕಳು ಕೂಡ ಬೀದಿಗೆ ಬರುತ್ತಾರೆ. ಇದರಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ಇವರಿಬ್ಬರೇ ಇರಲ್ಲ. ನಿರ್ಮಾಪಕರು ಬಂಡವಾಳ ಹಾಕಿರುತ್ತಾರೆ. ವಿತರಕರು ಅವರಿಂದ ತೆಗೆದುಕೊಂಡಿರುತ್ತಾರೆ. ನಾನಿದನ್ನು ತಪ್ಪು ಅಂತ ಹೇಳ್ತಿಲ್ಲ ಆದ್ರೆ ವಕೀಲರು ಸನ್ನಿವೇಶದ ಕ್ಲಿಪ್ಪಿಂಗ್ಸನ್ನು ತೆಗದುಕೊಂಡು ಹೋಗಿ ಕೋರ್ಟ್ ನಲ್ಲಿ ತೋರಿಸಬೇಕು ಅಂದ್ರೆ ಅವರು ಕೂಡ ಅದನ್ನು ಕದ್ದು ಹೋಗಿರುವುದೇ ಆಗಿದೆ ಅಲ್ಲವೇ. ಇದು ಕೂಡ ಕಾನೂನು ರೀತಿಯಲ್ಲಿ ತಪ್ಪು ಅಲ್ಲವೇ ಅಂತ ಅವರು ಪ್ರಶ್ನಿಸಿದ್ರು. ಇದನ್ನೂ ಓದಿ: ದಯವಿಟ್ಟು ಕಟೌಟ್‍ ಗಳಿಗೆ ಹಾಲು ಹಾಕಿ ಪೋಲು ಮಾಡ್ಬೇಡಿ: ಅಭಿಮಾನಿಗಳಿಗೆ ಅಪ್ಪು ಮನವಿ

    ಕನ್ನಡ ಚಿತ್ರರಂಗ ಬಹಳ ಕಷ್ಟದಲ್ಲಿದೆ. ಹೀಗಾಗಿ ಥಿಯೇಟರ್ ನಲ್ಲಿ ಸಿನಿಮಾವನ್ನು ಕದ್ದು ಸಾಮಾಜಿಕ ಜಾಲತಾಣದಲ್ಲಿ ಹಾಕುವಂತಹ ಕೆಲಸವನ್ನು ದಯವಿಟ್ಟು ಮಾಡಬೇಡಿ. ನೀವು ಚಿತ್ರಮಂದಿರಕ್ಕೆ ಬರೋದಿಕೆ ಇಷ್ಟವಿಲ್ಲ ಎಂದ್ರೂ ಪರವಾಗಿಲ್ಲ. ಆದ್ರೆ ಇಂತಹ ತಪ್ಪು ಕೆಲಸಗಳನ್ನು ಮಾಡಕ್ಕೆ ಹೋಗಬೇಡಿ ಅಂತ ಕಿವಿ ಮಾತು ಹೇಳಿದ್ರು. ಇದನ್ನೂ ಓದಿ:  ರಿಲೀಸ್ ಆಗಿದ್ದ ಅಂಜನಿಪುತ್ರನಿಗೆ ಅಭಿಮಾನಿಯಿಂದ ಶಾಕ್!

    ಸ್ಯಾಂಡಲ್ ವುಡ್ ಹನುಮಭಕ್ತ ಎ.ಹರ್ಷ ನಿರ್ದೇಶನದಲ್ಲಿ, ಎಮ್.ಎನ್.ಕುಮಾರ್ ನಿರ್ಮಾಣದಲ್ಲಿ ಅಂಜನಿಪುತ್ರ ಮೂಡಿಬಂದಿದೆ. ಉಗ್ರಂ ಖ್ಯಾತಿಯ ರವಿಬಸ್ರೂರು ಅಂಜನಿಪುತ್ರ ಚಿತ್ರದ ಸಂಗೀತದ ಸಾರಥ್ಯ ವಹಿಸಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿದ್ದು, ನಟಿ ಹರಿಪ್ರಿಯಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್‍ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.