Tag: Powerline

  • ಶಾಲಾ ಆವರಣದಲ್ಲಿ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿ ಸಾವು

    ಶಾಲಾ ಆವರಣದಲ್ಲಿ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿ ಸಾವು

    ರಾಯಚೂರು: ಲಿಂಗಸುಗೂರು ತಾಲೂಕಿನ ಕಿಲ್ಲಾರಹಟ್ಟಿ ಗ್ರಾಮದ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ.

    ಕಿಲ್ಲಾರಹಟ್ಟಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಮಲ್ಲಿಕಾರ್ಜುನ್(13) ಮೃತ ಬಾಲಕ. ಶಾಲಾ ಆವರಣದಲ್ಲಿ ಮಲ್ಲಿಕಾರ್ಜುನ್ ಕ್ರಿಕೆಟ್ ಆಡುವಾಗ ಚೆಂಡು ತರಲು ಹೋಗಿದ್ದ. ಈ ವೇಳೆ ನಿರ್ಮಾಣ ಹಂತದಲ್ಲಿರುವ ಬಿಸಿಯೂಟದ ಕೋಣೆಯ ಮೇಲಿನ ವಿದ್ಯುತ್ ತಂತಿ ಮಲ್ಲಿಕಾರ್ಜುನ್‍ಗೆ ತಗುಲಿದೆ. ಪರಿಣಾಮ ಮಲ್ಲಿಕಾರ್ಜುನ್ ಅಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಪೀಣ್ಯ ಫ್ಲೈಓವರ್ ಮೇಲೆ ಸರಣಿ ಅಪಘಾತ – ಟ್ರಾಫಿಕ್ ಜಾಮ್ 

    crime

    ಘಟನೆ ಹಿನ್ನೆಲೆ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿ ಸಾವಿನಿಂದ ಉಳಿದ ವಿದ್ಯಾರ್ಥಿಗಳ ಪೋಷಕರು ಆತಂಕಕ್ಕೊಳಗಾಗಿದ್ದಾರೆ. ಮೃತ ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್ ತಂತಿ ಮೇಲೆ ಹತ್ತಿ ವ್ಯಕ್ತಿಯಿಂದ ಅವಾಂತರ: ವಿಡಿಯೋ ನೋಡಿ

    ವಿದ್ಯುತ್ ತಂತಿ ಮೇಲೆ ಹತ್ತಿ ವ್ಯಕ್ತಿಯಿಂದ ಅವಾಂತರ: ವಿಡಿಯೋ ನೋಡಿ

    ಚೆನ್ನೈ: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ವಿದ್ಯುತ್ ತಂತಿ ಮೇಲೆ ಹತ್ತಿ ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ಆತಂಕ ಸೃಷ್ಟಿ ಮಾಡಿದ ಘಟನೆ ತಮಿಳುನಾಡಿನ ಈರೋಡ್‍ನಲ್ಲಿ ನಡೆದಿದೆ.

    ಇರೇನ್ (55) ವಿದ್ಯುತ್ ತಂತಿ ಹತ್ತಿದ ವ್ಯಕ್ತಿ. ಮೂಲತ: ಬೆಂಗಳೂರಿನ ಇರೇನ್ ಪೊಲ್ಲಾಚ್ಚಿಯಲ್ಲಿರುವ ತನ್ನ ಹೆಂಡತಿಯನ್ನು ಭೇಟಿಯಾಗಲು ತನ್ನ ಇಬ್ಬರೂ ಮಕ್ಕಳ ಜೊತೆ ಹೋಗುತ್ತಿದ್ದನು. ಈ ವೇಳೆ ಇದಕ್ಕಿಂತೆ ಆತ ವಿದ್ಯುತ್ ಕಂಬ ಏರಿ ತಂತಿ ಮೇಲೆ ಹತ್ತಿದ್ದಾನೆ. ಈ ವಿಚಾರ ಕೂಡಲೇ ಯಾವುದೇ ಅನಾಹುತ ಸಂಭವಿಸಬಾರದೆಂದು ತಕ್ಷಣ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು.

    ಇರೇನ್‍ನನ್ನು ಪೆರುಂದುರೈ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದರು. ನಂತರ ಈರೋಡ್‍ನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಈ ವೇಳೆ ಇರೇನ್ ತನ್ನ ಇಬ್ಬರ ಮಕ್ಕಳ ಜೊತೆ ಆಸ್ಪತ್ರೆಯಿಂದ ಓಡಿ ಹೋಗಲು ಪ್ರಯತ್ನಿಸಿದ್ದನು. ಆದರೆ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಇರೇನ್ ಪುನಃ ಓಡಿ ಹೋಗಿ ವಿದ್ಯುತ್ ಕಂಬದ ಮೇಲೆ ಹತ್ತಲು ಯತ್ನಿಸಿದ್ದಾನೆ. ಯಾವುದೇ ಅನಾಹುತ ಸಂಭವಿಸದಂತೆ ನೋಡಿಕೊಳ್ಳಲು ಸಿಬ್ಬಂದಿಯವರು ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದ್ದರು. ಈ ವೇಳೆ ಇರೇನ್ ವಿದ್ಯುತ್ ತಂತಿ ಮೇಲೆ ನಡೆದುಕೊಂಡು ಹೋಗಿ ಎಲ್ಲರಿಗೆ ಆತಂಕ ಸೃಷ್ಟಿ ಮಾಡಿಸಿದ್ದನು.

    ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಇರೇನ್ ಜೊತೆ ಮಾತನಾಡಿ ಆತನ ಮನವೊಲಿಸಿ, ಕಂಬದಿಂದ ಇಳಿಯುವಂತೆ ಹೇಳಿದ್ದಾರೆ. ಆಗ ಇರೇನ್ ತಕ್ಷಣ ಕಂಬದಿಂದ ಇಳಿಯಲು ಹೋಗಿ ಅಲ್ಲಿಂದ ಬಿದ್ದಿದ್ದಾನೆ. ಸದ್ಯ ಇರೇನ್‍ಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ.

    ಇರೇನ್ ಮಾನಸಿಕ ಅಸ್ವಸ್ಥನಾಗಿದ್ದು, ಆತನಿಗೆ ಹಾಗೂ ಆತನ ಮಕ್ಕಳಿಗೆ ಆಹಾರ ನೀಡಿದ್ದಾರೆ. ನಂತರ ಇರೇನ್ ಪತ್ನಿಗೆ ವಿಷಯವನ್ನು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    https://www.youtube.com/watch?v=KALMzP6w0JE&feature=youtu.be