Tag: power

  • ಡಿಕೆಶಿಯನ್ನು ಸಮಾಧಾನಪಡಿಸಲು ಮುಂದಾದ ಹೈಕಮಾಂಡ್!

    ಡಿಕೆಶಿಯನ್ನು ಸಮಾಧಾನಪಡಿಸಲು ಮುಂದಾದ ಹೈಕಮಾಂಡ್!

    ಬೆಂಗಳೂರು: ಪವರ್ ಫುಲ್ ಇಂಧನ ಖಾತೆ ಕೈ ತಪ್ಪುತ್ತಿದ್ದಂತೆ ಡಿಕೆ ಶಿವಕುಮಾರ್ ಮುನಿಸಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಹೌದು. ಬಹುಮತ ಸಾಬೀತು ಪಡಿಸುವ ಸಂದರ್ಭದಲ್ಲಿ ಆಪರೇಷನ್ ಕಮಲದ ಭೀತಿಯಿಂದ ಕಾಂಗ್ರೆಸ್ ಶಾಸಕರನ್ನು ರಕ್ಷಿಸುವ ಹೊಣೆ ಹೊತ್ತಿದ್ದ ಡಿಕೆ ಶಿವಕುಮರ್ ಇಂಧನ ಖಾತೆ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

    ಅಸಮಾಧಾನಗೊಂಡಿರುವ ಡಿಕೆಶಿಯನ್ನು ಸಮಾಧಾನ ಪಡಿಸಲು ಹೈಕಮಾಂಡ್ ಈಗ ಮುಂದಾಗಿದ್ದು, ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಜೊತೆಗೆ ಖಾತೆ ನೀಡಲು ಮಾತುಕತೆ ನಡೆಯುತ್ತಿದೆ ಎನ್ನುವ ವಿಚಾರ ತಿಳಿದುಬಂದಿದೆ. ಕಂದಾಯ, ಬೆಂಗಳೂರು ಅಭಿವೃದ್ಧಿ ಖಾತೆ ಡಿಕೆ ಶಿವಕುಮಾರ್ ಅವರಿಗೆ ಸಿಗುವ ಸಾಧ್ಯತೆಯಿದ್ದು, ದೆಹಲಿಗೆ ಬರುವಂತೆ ಡಿಕೆಶಿಗೆ ಹೈಕಮಾಂಡ್ ಬುಲಾವ್ ನೀಡಿದೆ.

    ಇಂಧನ ಖಾತೆ ಸೇರಿದಂತೆ ನಾನು ಯಾವುದೇ ಖಾತೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಎಚ್‍ಡಿ ರೇವಣ್ಣ ಜೊತೆ ಮಾತುಕತೆ ನಡೆಸಿಲ್ಲ. ಅವರು ದೊಡ್ಡ ಕುಟುಂಬದ ಮಕ್ಕಳು. ರೇವಣ್ಣ ಜೊತೆ ಮಾತನಾಡಲು ನನಗೆ ಹುಚ್ಚು ಹಿಡಿದಿಲ್ಲ. ಅವರು ದೊಡ್ಡ ನಾಯಕರು ಎಂದು ಡಿಕೆಶಿ ಶುಕ್ರವಾರ ಪ್ರತಿಕ್ರಿಯಿಸಿದ್ದರು.

  • ಕಳೆದ 15 ವರ್ಷದಲ್ಲಿ ಇಂತಹ ಗಾಳಿ, ಮಳೆ ನೋಡಿಲ್ಲ- ಉಡುಪಿಯ ಉದ್ಯಾವರ, ಪಿತ್ರೋಡಿ ತತ್ತರ

    ಕಳೆದ 15 ವರ್ಷದಲ್ಲಿ ಇಂತಹ ಗಾಳಿ, ಮಳೆ ನೋಡಿಲ್ಲ- ಉಡುಪಿಯ ಉದ್ಯಾವರ, ಪಿತ್ರೋಡಿ ತತ್ತರ

    ಉಡುಪಿ: ಕಳೆದ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನೂರಾರು ಮರಗಳು ನೆಲಕ್ಕುರುಳಿ ಸಂಚಾರಕ್ಕೆ ಭಾರೀ ಅಡ್ಡಿಯಾಗಿದೆ.

    ಉಡುಪಿ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಕಟಪಾಡಿ, ಉದ್ಯಾವರ, ಪಿತ್ರೋಡಿಯಲ್ಲಿ ಮಳೆರಾಯ ಅಬ್ಬರಿಸಿದ್ದು ಮನೆ, ಅಂಗಡಿ, ಬಸ್ ನಿಲ್ದಾಣದ ಮೇಲೆ ಮರಗಳು ಉರುಳಿದೆ.

    ವಿಪರೀತ ಗಾಳಿ ಬೀಸಿದ್ದು ವಿದ್ಯುತ್ ತಂತಿಗಳು ತುಂಡಾಗಿ ನೆಲಕ್ಕೆ ಬಿದ್ದಿದೆ. ಮೆಸ್ಕಾಂ ಅಧಿಕಾರಿಗಳ ಮುಂಜಾಗೃತಾ ಕ್ರಮದಿಂದ ಭಾರೀ ಅನಾಹುತ ತಪ್ಪಿದೆ. ಕಳೆದ ರಾತ್ರಿ ಸುರಿದ ಸಿಡಿಲು ಮಳೆಗೆ ಹಿರಿಯಡ್ಕ, ಕಾಪು, ಅಲೆವೂರು ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಗೆ ಎರಡು ಮನೆಗಳ ಮೇಲೆ ಮರ ಉರುಳಿದೆ.

    ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಉಡುಪಿ ಜಿಲ್ಲೆಯಾದ್ಯಂತ ಮಳೆಯಾಗಿದ್ದು, ರಸ್ತೆಗೆ ಬಿದ್ದ ಮರಗಳನ್ನು ಗ್ರಾಮಸ್ಥರೇ ತೆರವು ಮಾಡಿದರು. ಗ್ರಾಮೀಣ ಭಾಗದಲ್ಲಿ ಕಳೆದ 48 ಗಂಟೆಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತವಾಗಿದೆ.

    ಸ್ಥಳೀಯ ಗ್ರಾಮಸ್ಥ ಸಂಜೀವ ಪಿತ್ರೋಡಿ ಪಬ್ಲಿಕ್ ಟಿವಿ ಜೊತೆ ಮಾತಾಡಿ, ಕಳೆದ 15 ವರ್ಷದಲ್ಲಿ ಇಂತಹ ಗಾಳಿ ಮಳೆ ನೋಡಿಲ್ಲ. ರಾತ್ರಿ ಮೂರು ಗಂಟೆಗೆ ಸಿಡಿಲಿನ ಸರಣಿಯೇ ಆಗಿದೆ. ಮರಗಳು ರಸ್ತೆ, ಮನೆ ಮೇಲೆ ಬಿದ್ದು ಇಡೀ ಗ್ರಾಮಕ್ಕೆ ಆತಂಕವಾಗಿದೆ. ಬೆಳಗ್ಗೆ ಎದ್ದಕೂಡಲೇ ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸಿದೆವು. ಬಸ್ ಸ್ಟ್ಯಾಂಡ್ ಮೇಲೆ ಮರ ಬಿದ್ದಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಪರಿಹಾರ ಘೋಷಿಸಬೇಕು ಅಂತ ಒತ್ತಾಯಿಸಿದರು.

  • ಕೇಂದ್ರದಲ್ಲೊಂದು, ರಾಜ್ಯದಲ್ಲೊಂದು ಸರ್ಕಾರ- ಮತ್ತೊಮ್ಮೆ ನಂಬಿಕೆ ನಿಜವಾಯ್ತು

    ಕೇಂದ್ರದಲ್ಲೊಂದು, ರಾಜ್ಯದಲ್ಲೊಂದು ಸರ್ಕಾರ- ಮತ್ತೊಮ್ಮೆ ನಂಬಿಕೆ ನಿಜವಾಯ್ತು

    ಬೆಂಗಳೂರು: ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಅಧಿಕಾರಕ್ಕೆ ಬರಲ್ಲ ಎನ್ನುವ ಮಾತು ಇದೀಗ ಮತ್ತೊಮ್ಮೆ ನಿಜವಾಗಿದೆ.

    ಹೌದು. ಇತ್ತೀಚಿನ ಕೆಲ ವರ್ಷಗಳಲ್ಲಿ ಕೇಂದ್ರದಲ್ಲಿ ಒಂದು ಪಕ್ಷ ಅಧಿಕಾರವಿದ್ದರೆ ರಾಜ್ಯದಲ್ಲಿ ಇನ್ನೊಂದು ಪಕ್ಷ ಅಧಿಕಾರ ಹಿಡಿಯುತ್ತಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಅಸ್ತಿತ್ವಕ್ಕೆ ಬರಲ್ಲ ಎಂಬುದು ಇದೀಗ ಈ ವರ್ಷದ ಚುನಾವಣೆಯಲ್ಲಿ ಮತ್ತೊಮ್ಮೆ ನಿಜವಾಯಿತು.

    ಚುನಾವಣಾ ಫಲಿತಾಂಶಕ್ಕೂ ಮೊದಲೇ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಹೆಚ್ಚು ಸ್ಥಾನವನ್ನು ಗೆದ್ದುಕೊಂಡರೂ ಕಾಂಗ್ರೆಸ್- ಜೆಡಿಎಸ್ ಮೈತ್ರಿಯಿಂದ ಸಾಧ್ಯವಾಗಿಲ್ಲ. ಆದ್ರೂ ರಾಜ್ಯಪಾಲರ ಅನುಮತಿಯಂತೆ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಚುಕ್ಕಾಣಿ ಹಿಡಿದೇ ಬಿಟ್ಟರು. ಒಂದು ವೇಳೆ ಬಹುಮತ ಸಾಬೀತು ಪಡಿಸಿ ಸರ್ಕಾರ ರಚಿಸುತ್ತಿದ್ದರೆ ಕೇಂದ್ರದಲ್ಲಿ ಬಿಜೆಪಿ ಹಾಗೂ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದು ಇತಿಹಾಸ ನಿರ್ಮಾಣವಾಗತಿತ್ತು.

    ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಪರಿಣಾಮ ವಿಶ್ವಾಸ ಮತಯಾಚನೆ ಮಾಡದೇ ಮೂರೇ ದಿನಕ್ಕೆ ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗಿಳಿದ್ರು. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯಾಡಳಿತ ಮಾಡಲಿವೆ.

    ಒಟ್ಟಿನಲ್ಲಿ ಇದೀಗ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರವಾಗಿ ಅಧಿಕಾರ ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದಿವೆ.

    ಈ ಹಿಂದೆ ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರದ ಆಡಳಿತವಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲೂ ಯುಪಿಎ ಆಡಳಿತವಿತ್ತು. 2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದ ನಂತರ ನಡೆದ 2014ರ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದಿತ್ತು.

  • ಶಾಕ್ ಹೊಡೆದು ಕಂಬದ ಮೇಲೆಯೇ ನರಳಾಡಿದ ಚೆಸ್ಕಾಂ ಮಾಜಿ ನೌಕರ!

    ಶಾಕ್ ಹೊಡೆದು ಕಂಬದ ಮೇಲೆಯೇ ನರಳಾಡಿದ ಚೆಸ್ಕಾಂ ಮಾಜಿ ನೌಕರ!

    ಮೈಸೂರು: ವಿದ್ಯುತ್ ಕಂಬ ಏರಿದ ಚೆಸ್ಕಾಂ ಮಾಜಿ ನೌಕರನಿಗೆ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಕಂಬದ ಮೇಲೆಯೇ ನರಳಾಡಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಉಯಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಶಿವಕುಮಾರ್ ವಿದ್ಯುತ್ ಕಂಬ ಏರಿದ ಮಾಜಿ ಗುತ್ತಿಗೆ ನೌಕರ. ಗ್ರಾಮದಲ್ಲಿ ವಿದ್ಯುತ್ ಇಲ್ಲದ ಕಾರಣ ಪರಿಶೀಲನೆಗೆ ಆಗಮಿಸಿದ್ದ ಚೆಸ್ಕಾಂ ಸಿಬ್ಬಂದಿ ಪುಟ್ಟರಾಜು, ಕಂಬ ಹತ್ತುವ ಬದಲು ಶಿವಕುಮಾರ್‍ನನ್ನು ಹತ್ತಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

    ಶಿವಕುಮಾರ ಗುತ್ತಿಗೆ ಅವಧಿ 3 ತಿಂಗಳ ಹಿಂದೆಯೇ ಮುಗಿದಿತ್ತು. ಶಿವಕುಮಾರ್ ವಿದ್ಯುತ್ ಕಂಬ ಏರಿ ದುರಸ್ತಿ ಮಾಡುವ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ಇದರಿಂದ ಕಂಬದಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಶಿವಕುಮಾರ್ ಕೆಲ ಕಾಲ ನರಳಾಡಿದ್ದಾರೆ.

    ತಕ್ಷಣ ಶಿವಕುಮಾರ್ ಸಹಾಯಕ್ಕೆ ಆಗಮಿಸಿದ ಗ್ರಾಮಸ್ಥರು, ಕಂಬದಿಂದ ಇಳಿಸಿ ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೆರವಣಿಗೆ ವೇಳೆ ಧಗಧಗನೆ ಹೊತ್ತಿ ಉರಿದ ಪಲ್ಲಕ್ಕಿ!

    ಮೆರವಣಿಗೆ ವೇಳೆ ಧಗಧಗನೆ ಹೊತ್ತಿ ಉರಿದ ಪಲ್ಲಕ್ಕಿ!

    ಕೋಲಾರ: ಮೆರವಣಿಗೆ ವೇಳೆ ವಿದ್ಯುತ್ ತಂತಿ ಸ್ಪರ್ಶವಾಗಿ ಪಲ್ಲಕ್ಕಿ ಹೊತ್ತಿ ಉರಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಕಳೆದ ರಾತ್ರಿ ನಡೆದಿದೆ.

    ಬೇತಮಂಗಲದಲ್ಲಿ ಶ್ರೀವಿಜಯೇಂದ್ರಸ್ವಾಮಿ ಜಾತ್ರೆ ಅಂಗವಾಗಿ ಪಲ್ಲಕ್ಕಿ ಮೆರವಣಿಗೆ ಆಯೋಜಿಸಲಾಗಿತ್ತು. ಈ ವೇಲೆ ವಿದ್ಯುತ್ ತಂತಿ ತಗುಲಿ ಪಲ್ಲಕ್ಕಿ ಹೊತ್ತಿ ಉರಿದಿದೆ. ಇದರಿಂದ ಗಾಬರಿಗೊಂಡ ಜನ ದಿಕ್ಕಾಪಾಲಾಗಿ ಓಡಿದ್ದಾರೆ.

    ಈ ವೇಳೆ ಸಮಯಪ್ರಜ್ಞೆ ಮೆರೆದ ಕೆಲವರು ಕೂಡಲೇ ವಿದ್ಯುತ್ ಕಡಿತಗೊಳಿಸಿದ್ರು. ಹೀಗಾಗಿ ಹೆಚ್ಚಿನ ಅನಾಹುತ ತಪ್ಪಿದೆ. ಇದು ವಿಜಯೇಂದ್ರ ಸ್ವಾಮಿ ಭಕ್ತರದಲ್ಲಿ ಆತಂಕಕ್ಕೆ ಕಾರಣವಾಯಿತು.

  • ಟಾಯ್ಲೆಟ್ ಪೈಪ್ ಕ್ಲೀನ್ ಮಾಡುವಾಗ ಹೈ-ಟೆನ್ಷನ್ ವಿದ್ಯುತ್ ತಂತಿಗೆ ಕಬ್ಬಿಣದ ರಾಡ್ ತಾಗಿ ಇಬ್ಬರ ಸಾವು

    ಟಾಯ್ಲೆಟ್ ಪೈಪ್ ಕ್ಲೀನ್ ಮಾಡುವಾಗ ಹೈ-ಟೆನ್ಷನ್ ವಿದ್ಯುತ್ ತಂತಿಗೆ ಕಬ್ಬಿಣದ ರಾಡ್ ತಾಗಿ ಇಬ್ಬರ ಸಾವು

    ಬೆಂಗಳೂರು: ಬಹು ಮಹಡಿ ಕಟ್ಟಡದಲ್ಲಿ ಶೌಚಾಲಯದ ಪೈಪ್ ಕ್ಲೀನ್ ಮಾಡಲು ಹೋಗಿ ಹೈಟೆಕ್ಷನ್ ತಂತಿ ಮೂಲಕ ವಿದ್ಯುತ್ ಸ್ಪರ್ಶಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೆಕೊಳಲ ಗ್ರಾಮದಲ್ಲಿ ನಡೆದಿದೆ.

    ಮನೆ ಮಾಲಿಕ ವೀರಪ್ಪ(75) ಹಾಗೂ ಕೊಲ್ಕತ್ತಾ ಮೂಲದ ಕೂಲಿ ಕಾರ್ಮಿಕ ಮೋಹನ್ ಮಹಾಂತ್(50) ಸಾವಿಗೀಡಾದ ದುರ್ದೈವಿಗಳಾಗಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ.

    ಮೂವರು ಮನೆಯ ಶೌಚಾಲಯ ಕ್ಲೀನ್ ಮಾಡುತ್ತಿದ್ದ ವೇಳೆ ಮನೆಯ ಪಕ್ಕದಲ್ಲಿ ಹಾದು ಹೋಗಿದ್ದ ಹೈಟೆಕ್ಷನ್ ತಂತಿಗೆ ಕಬ್ಬಿಣದ ರಾಡ್ ತಾಗಿ ವಿದ್ಯುತ್ ಹರಿದು ಈ ಅವಘಡ ಸಂಭವಿಸಿದೆ.

    ವಿಷಯ ತಿಳಿದ ಮಾರತ್ತಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ವಿದ್ಯುತ್ ಶಾಕ್ ಆಗಿ ಮಗುವಿನ ಬಲಗೈ ಕಟ್- ಮಗಳು ಬೇಡ ಎಂದ ತಂದೆ

    ವಿದ್ಯುತ್ ಶಾಕ್ ಆಗಿ ಮಗುವಿನ ಬಲಗೈ ಕಟ್- ಮಗಳು ಬೇಡ ಎಂದ ತಂದೆ

    ಬೆಂಗಳೂರು: ವಿದ್ಯುತ್ ಶಾಕ್ ಒಳಗಾಗಿ ಬಲಗೈ ಕಳೆದುಕೊಂಡಿದ್ದ 6 ವರ್ಷದ ಮಗಳನ್ನು ತಂದೆಯೊಬ್ಬ ದೂರ ಮಾಡಿದ್ದಾನೆ ಎಂದು ತಾಯಿ ಆರೋಪಿಸಿದ್ದಾರೆ.

    ನೆಲಮಂಗಲ ಪಟ್ಟಣದ ರೇಣುಕಾನಗರದಲ್ಲಿ ಕಳೆದ ಒಂದು ತಿಂಗಳ ಹಿಂದೆ ಮನೆಯ ಮೇಲೆ ಆಟವಾಡುತ್ತಿದ್ದ ಮಗು ಆಯತಪ್ಪಿ ವಿದ್ಯುತ್ ತಂತಿಗೆ ಕೈ ತಗುಲಿದಾಗ, ಮಗುವಿನ ಬಲಗೈ ವಿದ್ಯುತ್ ಶಾಕ್‍ ಗೆ ಒಳಗಾಗಿ ಕೈ ಕಳೆದು ಕೊಂಡಿತ್ತು.

    ಚಿಕಿತ್ಸೆಗೆಂದು ಮಗು ಆಶ್ರಿಯಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದಾಗ, ವೈದ್ಯರು ಪುಟಾಣಿ ಆಶ್ರೀಯಳ ಬಲಗೈ ತುಂಡರಿಸಿ ಜೀವವನ್ನ ಉಳಿಸಿದ್ದಾರೆ. ಆದರೆ ಮಗುವಿಗೆ ಈ ರೀತಿಯಾಗಿ ತಿಂಗಳುಗಳೇ ಕಳೆದರು, ಇಲ್ಲಿಯವರೆಗೂ ಪಾಪಿ ತಂದೆ ಸೈಯದ್ ಪಾಷ ಆಸ್ಪತ್ರೆಗಾಗಲಿ, ಮನೆಗಾಗಲಿ ಬಂದು ತಾನು ಜನ್ಮ ನೀಡಿದ ಮಗುವಿನ ಯೋಗಕ್ಷೇಮ ನೋಡಿಲ್ಲ ಎಂದು ಮಗುವಿನ ತಾಯಿ ಶಬೀನಬಾನು ಆರೋಪಿಸಿದ್ದಾರೆ.

    ಅಲ್ಲದೆ ಮಗು ತನ್ನ ಬಲಗೈ ಕಳೆದುಕೊಂಡಿರೋದರಿಂದ ನೋಡಲು ಅಸಹ್ಯ ಹಾಗೂ ಮುಂದಿನ ಜೀವನ ಕಷ್ಟ ಎಂದು ತಾಯಿ ಮಗುವನ್ನು ತಿರಸ್ಕರಿಸಿ, ಎರಡನೇ ಮದುವೆಯಾಗುವುದಾಗಿ ಹೆಂಡತಿಗೆ ಬೆದರಿಕೆ ಹಾಕುತ್ತಿದ್ದಾನೆ. ಇನ್ನೂ ಸೂಕ್ತ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದ ನೆಲಮಂಗಲ ಬೆಸ್ಕಾಂ ಅಧಿಕಾರಿಗಳು, ಆಸ್ಪತ್ರೆಯ ಖರ್ಚು ವೆಚ್ಚವನ್ನು ನಿಭಾಯಿಸಿ ಕೈತೊಳೆದು ಕೊಂಡಿದ್ದಾರೆ.

    ಇತ್ತ ಗಂಡನ ಆಸರೆ ಇಲ್ಲದೆ ಇತ್ತ ನೆಲಮಂಗಲ ಬೆಸ್ಕಾಂ ಅಧಿಕಾರಿಗಳು ನೀಡಿದ ಪರಿಹಾರದ ಭರವಸೆ ಹುಸಿಯಾಗಿದೆ. ತಾಯಿ ಹಾಗೂ ಕೈ ಕಳೆದುಕೊಂಡಿರುವ ಪುಟ್ಟ ಮಗು ಕಣ್ಣೀರು ಹಾಕುತ್ತಿದ್ದು ಸಹಾಯದ ನಿರೀಕ್ಷೆಯಲ್ಲಿದ್ದಾರೆ.

  • ದಾಖಲೆಯ ಪರ್ಯಾಯ ಮುಗಿಸುತ್ತಿರೋ ಪೇಜಾವರಶ್ರೀ- ಇಂದು ಕೃಷ್ಣನಿಗೆ ಕೊನೆಯ ಪೂಜೆ

    ದಾಖಲೆಯ ಪರ್ಯಾಯ ಮುಗಿಸುತ್ತಿರೋ ಪೇಜಾವರಶ್ರೀ- ಇಂದು ಕೃಷ್ಣನಿಗೆ ಕೊನೆಯ ಪೂಜೆ

    ಉಡುಪಿ: ದಾಖಲೆಯ ಪಂಚಮ ಪರ್ಯಾಯ ಮಹೋತ್ಸವದ ಸಂಭ್ರಮ ಶುರುವಾಗಿದ್ದು, ಪೇಜಾವರಶ್ರೀಗಳು ದಾಖಲೆಯ ಪರ್ಯಾಯವನ್ನು ಮುಗಿಸುತ್ತಿದ್ದಾರೆ.

    ಪೇಜಾವರ ಶ್ರೀಗಳು ಜನವರಿ 18ರಂದು ಪರ್ಯಾಯ ಪೀಠಾವರೋಹಣ ಮಾಡಲಿದ್ದಾರೆ. ಎರಡು ವರ್ಷಗಳ ಕಾಲ ಕಡೆಗೋಲು ಶ್ರೀಕೃಷ್ಣನ ಪೂಜೆ ಮಾಡಿದ್ದ ಪೇಜಾವರಶ್ರೀಗಳ ಪೂಜಾಧಿಕಾರ ಮುಗಿದಿದ್ದು, ಐತಿಹಾಸಿಕ ಐದು ಪರ್ಯಾಯಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಶ್ರೀಕೃಷ್ಣನ ಪೂಜಾಧಿಕಾರ ಪೇಜಾವರ ಮಠದಿಂದ ಪಲಿಮಾರು ಮಠಕ್ಕೆ ಹಸ್ತಾಂತರವಾಗಲಿದೆ.

    ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಕಡೆಗೋಲು ಶ್ರೀಕೃಷ್ಣನಿಗೆ ತನ್ನ ಅಧಿಕಾರಾವಧಿಯ ಕೊನೆಯ ಎರಡು ಪೂಜೆಗಳನ್ನು ಇಂದು ಮಾಡಲಿದ್ದಾರೆ. ನಾಳೆಯಿಂದ ಉಡುಪಿ ಕೃಷ್ಣನಿಗೆ ಪೂಜೆ ಮಾಡುವ ಅಧಿಕಾರ ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿಯ ಪಾಲಾಗಲಿದೆ.

    ಜನವರಿ 17ರ ಮಧ್ಯರಾತ್ರಿ 3 ಗಂಟೆಯಿಂದ ಬೆಳಗ್ಗಿನ ಜಾವ 7 ಗಂಟೆಯವರೆಗೆ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ಈ ಸಂದರ್ಭದಲ್ಲಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯವರು ವಿದ್ಯಾಧೀಶ ಸ್ವಾಮೀಜಿಯವರಿಗೆ ಪೂಜಾಧಿಕಾರ ಮತ್ತು ಕೃಷ್ಣಮಠದ ಎಲ್ಲಾ ಅಧಿಕಾರಗಳನ್ನು ಹಸ್ತಾಂತರ ಮಾಡಲಿದ್ದಾರೆ. ಹೀಗಾಗಿ ಪಲಿಮಾರು ಶ್ರೀಗಳ ಪರ್ಯಾಯಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ಪಲಿಮಾರು ಪರ್ಯಾಯ ಚೆನ್ನಾಗಿ ನಡೆಯಲಿ ಎಂದು ವಿಶ್ವೇಶತೀರ್ಥ ಶ್ರೀಗಳು ಆಶೀರ್ವಾದ ಮಾಡಿದ್ದಾರೆ. ಮುಂದಿನ ಪರ್ಯಾಯ ಸ್ವಾಮೀಜಿಗೆ ಹಿರಿಯ ಯತಿಗಳು ಶುಭಕೋರಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿಶ್ವೇಶತೀರ್ಥ ಸ್ವಾಮೀಜಿ, ನನ್ನ ಪರ್ಯಾಯ ನನಗೆ ಸಂತೃಪ್ತಿ ತಂದಿಲ್ಲ. ಸಂತೋಷವಿದೆ. ಹಲವಾರು ಸಾಮಾಜಿಕ ಕಾರ್ಯಗಳನ್ನುಮಾಡಿದ್ದ ಖುಷಿಯಿದೆ. ವಿರೋಧಗಳು ಬಂತು, ಚರ್ಚೆಗಳು ಆಗಿದೆ. ಹೀಗಾದಾಗ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ಸ್ವಾಮೀಜಿ ಹೇಳಿದರು. ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿಯ ವೈಭವದ ಪುರಪ್ರವೇಶ ನಡೆದಿದೆ. ನಗರದ ಪ್ರಮುಖ ಬೀದಿಗಳಲ್ಲಿ ಸ್ವಾಮೀಜಿಯವರನ್ನು ವಿಶೇಷ ಟ್ಯಾಬ್ಲೋದ ಮೂಲಕ ಮೆರವಣಿಗೆ ಮಾಡಿ ಉಡುಪಿ ಪುರದೊಳಗೆ ಕರೆದುಕೊಂಡು ಬರಲಾಗಿದೆ. ಮುಂದಿನ ಪರ್ಯಾಯ ಚೆನ್ನಾಗಿ ನಡೆಯುತ್ತದೆ ಎಂದು ಶುಭ ಹಾರೈಸಿದರು.

    ಪರ್ಯಾಯ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಹೊರೆ ಕಾಣಿಕೆಗಳು ಬಂದಿದೆ. ಧಾರ್ಮಿಕ ವಿಧಿವಿಧಾನಗಳು ರಾತ್ರಿ ಆರಂಭವಾಗಲಿದ್ದು ಜನವರಿ 18ರ ಬೆಳಗ್ಗಿನ ಜಾವ ಆರು ಗಂಟೆಗೆ ಅನ್ನದ ಸಟ್ಟುಗ ಮತ್ತು ಅಕ್ಷಯ ಪಾತ್ರೆಯನ್ನು ಪೇಜಾವರ ಸ್ವಾಮೀಜಿ ಹಸ್ತಾಂತರ ಮಾಡುತ್ತಾರೆ. ಈ ಮೂಲಕ ಎರಡು ವರ್ಷದ ಪರ್ಯಾಯ ಮುಗಿಸಲಿದ್ದಾರೆ. ಪಲಿಮಾರು ಸ್ವಾಮೀಜಿ ತಮ್ಮ ಸನ್ಯಾಸ ಜೀವನದ ಎರಡನೇ ಪರ್ಯಾಯ ಆರಂಭ ಮಾಡಲಿದ್ದಾರೆ.

    ಒಂದು ಬಾರಿ ಪರ್ಯಾಯ ಪೂಜಾಧಿಕಾರ ಸಿಕ್ಕರೆ ಮತ್ತೆ ಆ ಮಠಕ್ಕೆ ಕೃಷ್ಣನ ಪೂಜಾಧಿಕಾರ ಸಿಗೋದು 14 ವರ್ಷದ ನಂತರ. ಕೃಷ್ಣಮಠಕ್ಕೆ ಸಂಬಂಧಪಟ್ಟ ಒಟ್ಟು 8 ಮಠಗಳಿದ್ದು, ಪಲಿಮಾರು ಮಠ ತನ್ನ ಪರ್ಯಾಯವನ್ನು ಜನವರಿ 18 2018 ರಿಂದ 2020ರವರೆಗೆ ನಡೆಸಲಿದೆ. ಪೇಜಾವರಶ್ರೀಗಳಿಗೆ 8ನೇ ವಯಸ್ಸಿನಲ್ಲಿ ಸನ್ಯಾಸತ್ವ ಪಡೆದುದ್ದರಿಂದ ಈವರೆಗಿನ ಎಲ್ಲಾ ಸ್ವಾಮೀಜಿಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಮತ್ಯಾರೂ ಮಾಡಲು ಅಸಾಧ್ಯವಾದ ದಾಖಲೆಯನ್ನು ತನ್ನ ಹೆಸರಿನಲ್ಲೇ ಉಳಿಸಿಕೊಂಡಿದ್ದಾರೆ.

  • ಕೈಗೆಟುಕುವ ರೀತಿಯಲ್ಲಿ ಜೋತು ಬಿದ್ದ ವಿದ್ಯುತ್ ತಂತಿ- ಆತಂಕದಲ್ಲಿ ಗ್ರಾಮಸ್ಥರು

    ಕೈಗೆಟುಕುವ ರೀತಿಯಲ್ಲಿ ಜೋತು ಬಿದ್ದ ವಿದ್ಯುತ್ ತಂತಿ- ಆತಂಕದಲ್ಲಿ ಗ್ರಾಮಸ್ಥರು

    ಬೆಂಗಳೂರು: ನಗರದ ಹೊರವಲಯದ ನೆಲಮಂಗಲ ನಿವಾಸಿಗಳು ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದು ಪರಿತಪಿಸುವಂತಾಗಿದೆ.

    ತಾಲೂಕಿನ ಚಿಕ್ಕಮಾರನಹಳ್ಳಿ ಗ್ರಾಮದಲ್ಲಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ತಂತಿ, ಕಳೆದ ಒಂದು ವರ್ಷದಿಂದ ಕೈಗೆಟುಕುವ ರೀತಿಯಲ್ಲಿ ಜೋತು ಬಿದ್ದಿದೆ. ಮನೆಯ ಮುಂಭಾಗದಲ್ಲೇ ವಿದ್ಯುತ್ ತಂತಿ ಹಾಯ್ದು ಹೋಗಿದ್ದು, ರೈತರು ತಮ್ಮ ಮನೆಯಿಂದ ಜಮೀನಿಗೆ ಹೋಗಬೇಕಾದರೆ ಇದರ ಕೆಳ ಭಾಗದಲ್ಲೇ ಹೋಗಬೇಕಾಗಿದೆ.

    ಈಗಾಗಲೇ ಇಲ್ಲಿನ ರೈತರು ಹಾಗೂ ಗ್ರಾಮಸ್ಥರು ವಿದ್ಯುತ್ ತಂತಿ ತಗುಲಿ ಅನೇಕ ಬಾರಿ ವಿದ್ಯುತ್ ಶಾಕ್ ಹೊಡೆಸಿಕೊಂಡಿದ್ದಾರೆ. ವಿದ್ಯುತ್ ತಂತಿಗಳ ದುರಸ್ಥಿ ಕಾರ್ಯ ಮಾಡುವಂತೆ, ನೆಲಮಂಗಲ ಬೆಸ್ಕಾಂ ಕಚೇರಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ.

    ಇನ್ನು ಈ ವಿಚಾರದಲ್ಲಿ ಲೈನ್ ಮ್ಯಾನ್‍ಗಳಿಗೆ ತಿಳಿಸಿದರೆ ಬಾಯಿಗೆ ಬಂದ ಹಾಗೆ ಹಣ ಕೇಳುತಿದ್ದು, ಹಣ ಕೊಡಲಾಗದೇ ಇತ್ತ ಭಯದಲ್ಲಿ ಇಡೀ ಗ್ರಾಮವೇ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಅಲ್ಲಿನ ನಿವಾಸಿಗಳು ಅಧಿಕಾರಿಗಳಿಗೆ ಪ್ರತಿನಿತ್ಯ ಹಿಡಿ ಶಾಪ ಹಾಕುತ್ತಿದ್ದಾರೆ.

  • ಬೆಸ್ಕಾಂ ನೌಕರರ ನಿರ್ಲಕ್ಷ್ಯ- 300ಕ್ಕೂ ಹೆಚ್ಚು ಟಿವಿಗಳು ಕರೆಂಟ್ ಗೆ ಆಹುತಿ

    ಬೆಸ್ಕಾಂ ನೌಕರರ ನಿರ್ಲಕ್ಷ್ಯ- 300ಕ್ಕೂ ಹೆಚ್ಚು ಟಿವಿಗಳು ಕರೆಂಟ್ ಗೆ ಆಹುತಿ

    ಚಿತ್ರದುರ್ಗ: ಬೆಸ್ಕಾಂ ನೌಕರರ ನಿರ್ಲಕ್ಷ್ಯದಿಂದಾಗಿ ಮುನ್ನೂರಕ್ಕೂ ಹೆಚ್ಚು ಟಿವಿಗಳು ಕರೆಂಟ್ ಗೆ ಆಹುತಿಯಾಗಿದ್ದು, ಟಿವಿಗಳನ್ನು ರಸ್ತೆಯಲ್ಲಿಟ್ಟು ಪ್ರತಿಭಟಿಸಿರೋ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಕೂಲಿ ನಾಲಿ ಮಾಡಿ ಬದುಕುವ ಕಡು ಬಡ ಕುಟುಂಬಗಳೇ ಹೆಚ್ಚಾಗಿ ವಾಸಿಸುತ್ತಿರೊ ವೆಂಕಟೇಶ್ವರ ಬಡಾವಣೆಯು ಇಂಡಸ್ಟ್ರಿಯಲ್ ಏರಿಯಾ ಪಕ್ಕದಲ್ಲಿದ್ದು, ವಿದ್ಯುತ್ ವೋಲ್ಟೇಜ್ ಏರುಪೇರಾಗಿ ವಿದ್ಯುತ್ ಉಪಕರಣಗಳೆಲ್ಲಾ ಆಹುತಿಯಾಗಿವೆ. ಅಷ್ಟೇ ಅಲ್ಲದೇ ಒಂದೇ ವರ್ಷದಲ್ಲಿ ನಾಲ್ಕು ಬಾರಿ ಬಡವರ ಮನೆಗಳಲ್ಲಿರೋ ಟಿವಿ, ಮಿಕ್ಸಿ, ಫ್ಯಾನ್ ಹಾಗು ಬೆಲೆಬಾಳುವ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿದ್ದು, ನಾಗರೀಕರು ಮನೆಯಲ್ಲಿ ವಾಸಿಸಲು ಭಯಪಡುವಂತಾಗಿದೆ.

    ಈ ಬಗ್ಗೆ ಹಲವು ಬಾರಿ ಚಿತ್ರದುರ್ಗದ ಹಿರಿಯ ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ದಿನ ತಡವಾದರು ವಿದ್ಯುತ್ ಕಟ್ ಮಾಡುವ ಬೆಸ್ಕಾಂ ನೌಕರರು, ಸಮಸ್ಯೆ ಆದಾಗ ಮಾತ್ರ ತಿರುಗಿ ನೋಡಲ್ಲ ಎಂದು ನಾಗರೀಕರು ಬೆಸ್ಕಾಂ ಇಲಾಖೆಗೆ ಹಿಡಿಶಾಪ ಹಾಕಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.