ಇಸ್ಲಾಮಾಬಾದ್: ಅಫ್ಘಾನಿಸ್ತಾನದ ಗಡಿಯಲ್ಲಿರುವ ಪಾಕಿಸ್ತಾನದ ವಾಯುವ್ಯ ಬುಡಕಟ್ಟು ಜಿಲ್ಲೆಗಳಲ್ಲಿ ಮಸೀದಿಯೊಂದರಲ್ಲಿ ವಿದ್ಯುತ್ ಕಡಿತದ ಬಗ್ಗೆ ನಡೆದ ವಾದ ತೀವ್ರಗೊಂಡು ಗುಂಡಿನ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಶ್ರೀಲಂಕಾ ಹಾದಿಯಲ್ಲೇ ಸಾಗುತ್ತಿರುವ ಪಾಕಿಸ್ತಾನ ಇದೀಗ ತನ್ನ ದೇಶದ ಜನತೆಗೆ ಮತ್ತೊಂದು ಶಾಕ್ ನೀಡಿದೆ. ಲೋಡ್ ಶೆಡ್ಡಿಂಗ್ ಕೊರತೆಯಿಂದಾಗಿ ವಿದ್ಯುತ್ ಬಿಕ್ಕಟ್ಟು ಎದುರಿಸುತ್ತಿದ್ದು, ಈ ಬೆನ್ನಲ್ಲೇ ಮೊಬೈಲ್ ಬಳಕೆ ಹಾಗೂ ಇಂಟರ್‍ನೆಟ್ ಸೇವೆಯನ್ನು ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಗಲಾಟೆ ನಡೆದಿದೆ.
ಲಕ್ಕಿ ಮಾರ್ವತ್ ಜಿಲ್ಲೆಯ ಐಸಾಕ್ ಖೇಲ್ ಪ್ರದೇಶದ ಮಸೀದಿಯಲ್ಲಿ ನಡೆದ ಪ್ರಾರ್ಥನೆಯ ನಂತರ ಆರಾಧಕರ ಗುಂಪು ತಮ್ಮ ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡಿರುವುದಕ್ಕೆ ಬಗ್ಗೆ ತೀವ್ರ ವಾಗ್ವಾದ ನಡೆಸಿದರು. ಈ ಸಂದರ್ಭದಲ್ಲಿ ಇಬ್ಬರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡರು. ಇದನ್ನೂ ಓದಿ:ಪಾಕ್‌ನಲ್ಲಿ ಮೊಬೈಲ್, ಇಂಟರ್‌ನೆಟ್ ಸೇವೆ ಶೀಘ್ರವೇ ಸ್ಥಗಿತ!
ಇಸ್ಲಾಮಾಬಾದ್: ಹಣದ ಕೊರತೆಯನ್ನು ಎದುರಿಸುತ್ತಿರುವ ಪಾಕಿಸ್ತಾನ, ಇಂಧನವನ್ನು ಉಳಿಸುವ ಪ್ರಯತ್ನದಲ್ಲಿದೆ. ಈ ಹಿನ್ನೆಲೆ ಸರ್ಕಾರ ಇಸ್ಲಾಮಾಬಾದ್ ನಗರದಲ್ಲಿ ರಾತ್ರಿ 10 ಗಂಟೆಯ ಬಳಿಕ ಮದುವೆ ಕಾರ್ಯಕ್ರಮಗಳನ್ನು ನಿಷೇಧಿಸಿದೆ ಹಾಗೂ ದೇಶಾದ್ಯಂತ ರಾತ್ರಿ 8:30ರ ಬಳಿಕ ಮಾರುಕಟ್ಟೆಗಳನ್ನು ಮುಚ್ಚಲು ನಿರ್ಧರಿಸಿದೆ.
ಪಾಕಿಸ್ತಾನದ ವಿದ್ಯುತ್ ಬಿಕ್ಕಟ್ಟು ಅಲ್ಲಿನ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಈ ಹಿನ್ನೆಲೆ ರಾಷ್ಟ್ರೀಯ ಆರ್ಥಿಕ ಮಂಡಳಿ(ಎನ್‌ಇಸಿ) ದೇಶಾದ್ಯಂತ ಮಾರುಕಟ್ಟೆಗಳನ್ನು ರಾತ್ರಿ 8:30ಕ್ಕೆ ಮುಚ್ಚುವಂತೆ ಒತ್ತಾಯಿಸಿದೆ. ಜೊತೆಗೆ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ರಾತ್ರಿ 10 ಗಂಟೆ ಬಳಿಕ ಯಾವುದೇ ಮದುವೆ ಕಾರ್ಯಕ್ರಮಗಳನ್ನು ನಡೆಸದಂತೆ ತಿಳಿಸಿದೆ. ಈ ಕ್ರಮವನ್ನು ಜೂನ್ 8ರಿಂದಲೇ ಕಾರ್ಯಗತಗೊಳಿಸಿದೆ. ಇದನ್ನೂ ಓದಿ: ಯುಎಸ್ ಮಿಲಿಟರಿ ವಿಮಾನ ಪತನ- ನಾಲ್ವರ ದುರ್ಮರಣ
ಬುಧವಾರ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಿಂಧ್, ಪಂಜಾಬ್ ಹಾಗೂ ಬಲೂಚಿಸ್ತಾನದ ಮುಖ್ಯಮಂತ್ರಿಗಳು ಈ ಬಗ್ಗೆ ಸಮಾಲೋಚನೆ ನಡೆಸಲು 2 ದಿನಗಳ ಕಾಲಾವಕಾಶ ಕೋರಿದ್ದು, ಆದರೂ ಈ ಕ್ರಮಕ್ಕೆ ಒಪ್ಪಿಗೆ ನೀಡಿದ್ದಾರೆ. ಇದನ್ನೂ ಓದಿ: 105 ಗಂಟೆಯಲ್ಲಿ 75 ಕಿ.ಮೀ ಹೆದ್ದಾರಿ ನಿರ್ಮಿಸಿ ಗಿನ್ನಿಸ್ ದಾಖಲೆ ಬರೆದ NHAI
ದೇಶದಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್ 22,000 ಮೆಗಾವ್ಯಾಟ್ ಹಾಗೂ ಅವಶ್ಯಕತೆ ಇರುವುದು 26,000 ಮೆಗಾವ್ಯಾಟ್. ದೇಶದಲ್ಲಿ ಸುಮಾರು 4,000 ಮೆಗಾವ್ಯಾಟ್ ಶಕ್ತಿಯ ಕೊರತೆಯಿದೆ. ಮಾರುಕಟ್ಟೆಯನ್ನು ಬೇಗನೆ ಮುಚ್ಚುವುದು ಹಾಗೂ ಜನರಿಗೆ ಮನೆಯಿಂದಲೇ ಕೆಲಸ ಮಾಡಿಸುವ ವ್ಯವಸ್ಥೆಗಳಿಂದ ವಿದ್ಯುತ್ ಅನ್ನು ಉಳಿಸಬಹುದು ಎಂದು ವಿದ್ಯುತ್ ಸಚಿವ ಖರ‍್ರುಮ್ ದಸ್ತಗಿರ್ ತಿಳಿಸಿದ್ದಾರೆ.
ಮುಂಬೈ: 5.93 ಕೋಟಿ ರೂಪಾಯಿ ಮೌಲ್ಯದ ವಿದ್ಯುತ್ ಕಳ್ಳತನ ಮಾಡಿದ ಆರೋಪದಲ್ಲಿ ತಂದೆ-ಮಗನ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಥಾಣೆ ಜಿಲ್ಲೆಯ ಮುರ್ಬಾದ್ ಪ್ರದೇಶದಲ್ಲಿ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್(MSEDCL) ತಂಡವು ಮೇ 5 ರಂದು ಫಲೇಗಾಂವ್‍ನಲ್ಲಿ ಕಲ್ಲು ಪುಡಿ ಮಾಡುವ ಘಟಕದ ಮೇಲೆ ದಾಳಿ ನಡೆಸಿದ ವೇಳೆ ಈ ಅಕ್ರಮ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಿದ್ದು, ಡಿಕೆಶಿ ಇಬ್ಬರಿಗೂ ಮುಸ್ಲಿಮರೇ ಬೇಕು: ಪ್ರತಾಪ್ ಸಿಂಹ
ಕಳೆದ 29 ತಿಂಗಳಲ್ಲಿ ಒಟ್ಟು 5.93 ಕೋಟಿ ಮೌಲ್ಯದ 34,09,901 ಯೂನಿಟ್ ವಿದ್ಯುತ್ ಕಳ್ಳತನವಾಗಿದೆ ಎಂದು ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿದ್ದಾರೆ. ಪರಿಣಾಮ ಪೊಲೀಸರಿಗೆ ಈ ಕುರಿತು ತನಿಖೆ ಮಾಡಲು ಆದೇಶ ಕೊಡಲಾಗಿದೆ. ಈ ಹಿನ್ನೆಲೆ ಪೊಲೀಸರು ಆರೋಪಿಗಳಿಗಾಗಿ ಜಾಲ ಬೀಸಿದ್ದು, ಅಪ್ಪ-ಮಗ ಸಿಕ್ಕಿ ಬಿದ್ದಿದ್ದಾರೆ.
ಕಲ್ಯಾಣ್ ತಾಲೂಕಿನ ಫಾಲೇಗಾಂವ್ ಗ್ರಾಮದ ನಿವಾಸಿಗಳಾದ ಚಂದ್ರಕಾಂತ್ ಭಾಂಬ್ರೆ, ಅವರ ಪುತ್ರ ಸಚಿನ್ ಭಾಂಬ್ರೆ ಮತ್ತು ಅವರ ಚಾಲಕನ ವಿರುದ್ಧ ಮುರ್ಬಾದ್ ಪೊಲೀಸ್ ಠಾಣೆಯಲ್ಲಿ ವಿದ್ಯುತ್ ಕಳ್ಳತನ ಪ್ರಕರಣ ದಾಖಲಾಗಿದೆ. ಅವರ ವಿರುದ್ಧ ವಿದ್ಯುತ್ ಕಾಯ್ದೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮುರ್ಬಾದ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಾಣ ಪಣಕ್ಕಿಟ್ಟು 8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗು ರಕ್ಷಿಸಿದ – ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ
ತನಿಖೆಯಲ್ಲಿ ತಿಳಿದಿದ್ದೇನು?
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ವಿದ್ಯುತ್ ಮೀಟರ್ ಟ್ಯಾಂಪರಿಂಗ್ ಮಾಡಿದ್ದಾರೆ. ವಿದ್ಯುತ್ ಬಳಕೆಯ ದಾಖಲೆಗಳು ಅನುಮಾನಾಸ್ಪದವಾಗಿವೆ. ಆದ್ದರಿಂದ ಮೀಟರ್ ವಶಪಡಿಸಿಕೊಳ್ಳಲಾಗಿದ್ದು, ಅದನ್ನು ಪ್ರಯೋಗಾಲಯದಲ್ಲಿ ಸಂಪೂರ್ಣ ಪರೀಕ್ಷೆ ನಡೆಸಲಾಯಿತು. ಪರೀಕ್ಷೆ ವೇಳೆ ಮೀಟರ್‌ಗೆ ಕಪ್ಪು ಅಂಟುಗಳನ್ನು ಸುತ್ತುವ ಮೂಲಕ ರಿಮೋಟ್ ಕಂಟ್ರೋಲ್ ಸರ್ಕ್ಯೂಟ್ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ. ಈ ರಿಮೋಟ್ ಕಂಟ್ರೋಲ್ ಸಹಾಯದಿಂದ ಸರ್ಕ್ಯೂಟ್ ನಿಯಂತ್ರಿಸಿ ಅಪ್ಪ-ಮಗ ವಿದ್ಯುತ್ ಕಳ್ಳತನ ಮಾಡುತ್ತಿದ್ದರು ಎಂದು ತಾಂತ್ರಿಕ ವಿಶ್ಲೇಷಣೆ ತಿಳಿಸಿದೆ.
ಚಂಡೀಗಢ: ಜುಲೈ 1 ರಿಂದ ಪ್ರತಿಯೊಂದು ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಪಂಜಾಬ್‍ನ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ಘೋಷಿಸಿದೆ.
ಈ ಕುರಿತಂತೆ ಮಂಗಳವಾರ ಟ್ವೀಟ್ ಮಾಡಿದ್ದ ಭಗವಂತ್ ಮಾನ್ ಅವರು, ನಮ್ಮ ನಾಯಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಅದ್ಭುತವಾದ ಸಭೆ ನಡೆಸಿದ್ದೇನೆ. ಶೀಘ್ರದಲ್ಲಿಯೇ ಪಂಜಾಬ್ ಜನತೆಗೆ ಒಳ್ಳೆಯ ಸುದ್ದಿ ನೀಡುತ್ತೇನೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಉಪನ್ಯಾಸಕಿಯರ ಜೊತೆ ಅಸಭ್ಯ ವರ್ತನೆ – ಉಪನ್ಯಾಸಕನಿಗೆ ಹಿಗ್ಗಾಮುಗ್ಗ ಥಳಿತ
ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಎಎಪಿ ನೀಡಿದ ಪ್ರಮುಖ ಭರವಸೆಗಳಲ್ಲಿ ಪ್ರತಿ ಮನೆಗೆ 300 ಯೂನಿಟ್‍ಗಳವರೆಗೆ ಉಚಿತ ವಿದ್ಯುತ್ ಒದಗಿಸುವುದು ಒಂದಾಗಿತ್ತು. ಸದ್ಯ 300 ಯೂನಿಟ್‍ಗಳವರೆಗೆ ಉಚಿತ ವಿದ್ಯುತ್ ಸರಬರಾಜು ಘೋಷಿಸುವ ವೇಳೆ ಅರವಿಂದ್ ಕೇಜ್ರಿವಾಲ್ ಅವರು ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಯ ಹೊರತಾಗಿಯೂ, ದೀರ್ಘ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲಾಗುತ್ತದೆ ಮತ್ತು ಅನೇಕ ಜನರು ದುಬಾರಿ ಬಿಲ್‍ಗಳನ್ನು ಪಡೆಯುತ್ತಾರೆ ಎಂದಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ತಪ್ಪಾದ ಬಿಲ್‍ಗಳನ್ನು ಪಡೆದ ಅನೇಕ ಜನರಿದ್ದಾರೆ ಮತ್ತು ವಿದ್ಯುತ್ ಬಿಲ್ ಪಾವತಿಸದೇ ಇರುವವರ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಅಂತಹ ಜನರು ವಿದ್ಯುತ್ ಕದಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ನಾನು ತಪ್ಪಿತಸ್ಥನಲ್ಲ ನನ್ನ ತಪ್ಪು ಇದ್ದರೆ ಭಗವಂತ ನನಗೆ ಶಿಕ್ಷೆ ಕೊಡಲಿ: ಈಶ್ವರಪ್ಪ
ಎಎಪಿ ಸರ್ಕಾರವು ದೆಹಲಿಯಲ್ಲಿ ಪ್ರತಿ ಮನೆಗಳಿಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತದೆ. ಕಳೆದ ತಿಂಗಳು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಯನ್ನು ಘೋಷಿಸಿದ್ದರು. ಇದೀಗ ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ತಿಳಿಸಿದ್ದಾರೆ.
ಜೈಪುರ: ಕರ್ನಾಟಕದಲ್ಲಿ ಹಿಂದುತ್ವ ರಾಜಕಾರಣ ನಡೆಯುತ್ತಿದ್ದರೆ, ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಮುಸ್ಲಿಮರ ಓಲೈಕೆ ಪಾಲಿಟಿಕ್ಸ್ ನಡೆಯುತ್ತಿದೆ. ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಆದೇಶವೊಂದು ವಿವಾದಕ್ಕೆ ಕಾರಣವಾಗಿದೆ.
ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ದಿನದ 24 ಗಂಟೆಯೂ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಜೋಧ್‍ಪುರ ಡಿಸ್ಕಾಮ್ ಆದೇಶ ಹೊರಡಿಸಿದೆ. ಉಪವಾಸ ಇರುವ ಮುಸ್ಲಿಮರಿಗೆ ಬಿಸಿಲ ಬೇಗೆಯಿಂದ ಯಾವುದೇ ತೊಂದರೇ ಆಗಬಾರದು. ಹೀಗಾಗಿ ಎಲ್ಲೆಡೆ ಇಡೀ ತಿಂಗಳು ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಬೇಕು ಎಂದು ಸುತ್ತೋಲೆ ಕಳಿಸಿದೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ಹಾಕಲು ಲೌಡ್ ಸ್ಪೀಕರ್- ಬಿಜೆಪಿ ನಾಯಕನ ಆಫರ್
ರಾಜಸ್ಥಾನ ಸರ್ಕಾರದ ಈ ಆದೇಶಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅತ್ತ ದಕ್ಷಿಣ ದೆಹಲಿಯಲ್ಲಿ ನವರಾತ್ರಿ ಪ್ರಯುಕ್ತ ಏಪ್ರಿಲ್ 14ರವರೆಗೂ ಮಾಂಸದಂಗಡಿ ಬಂದ್ ಮಾಡಲಾಗಿದೆ. ಆದರೆ ಮಾಂಸವೇನು ಅಪವಿತ್ರ ಅಲ್ಲ, ಅದು ಆಹಾರ ಅಷ್ಟೇ. ಇಷ್ಟ ಇದ್ದವರು ತಿಂತಾರೆ. ಇಷ್ಟವಿಲ್ಲದವರು ತಿನ್ನಲ್ಲ. ಯಾಕೆ ಮಾಂಸದಂಗಡಿ ಬಂದ್ ಮಾಡಬೇಕು ಎಂದು ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ಇತ್ತ ಮಹಾರಾಷ್ಟ್ರದಲ್ಲೂ ಮೈಕ್ ದಂಗಲ್ ಜೋರಾಗಿದೆ. ದೇಗುಲಗಳಲ್ಲಿ ಹನುಮಾನ್ ಚಾಲೀಸಾ ಹಾಕಲು ಉಚಿತವಾಗಿ ಲೌಡ್ ಸ್ಪೀಕರ್ ಒದಗಿಸಲು ಸಿದ್ಧ ಎಂದು ಮಹಾರಾಷ್ಟ್ರದ ಬಿಜೆಪಿಯ ಧನಿಕ ನಾಯಕ ಮೋಹಿತ್ ಕಂಬೋಜ್ ಘೋಷಿಸಿದ್ದಾರೆ. ಇದನ್ನೂ ಓದಿ: ರಂಜಾನ್ ಸಮಯದಲ್ಲಿ ಮಧುಮೇಹ ನಿರ್ವಹಣೆ ಹೇಗೆ?
ವಿಜಯಪುರ: ಕಾರ್ಮಿಕರೊಬ್ಬರು ಆಕಸ್ಮಿಕ ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಶಿವಾಜಿ ಗಲ್ಲಿಯ ನಿವಾಸಿ ಚಂದ್ರಕಾಂತ್ ಭೀಮಪ್ಪಾ ಗೋಡೆಕಟ್ಟಿ (45) ಮೃತ ಕಾರ್ಮಿಕ. ವ್ಯಕ್ತಿಯು ಪಟ್ಟಣದ ನಂದಿ ತರಕಾರಿ ಮಾರುಕಟ್ಟೆಯ ಪಕ್ಕದ ವಾಣಿಜ್ಯ ಸಂಕೀರ್ಣದಲ್ಲಿ ಕಟ್ಟಡ ಕಾಮಗಾರಿ ಮಾಡುತ್ತಿದ್ದರು. ಈ ವೇಳೆ ಆಯ ತಪ್ಪಿ ಸರ್ವಿಸ್ ವಯರ್ ಮೇಲೆ ಬಿದ್ದ ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: Bulldozer is Back – ಟ್ರೆಂಡ್ ಆಯ್ತು ಬುಲ್ಡೋಜರ್, ಬುಲ್ಡೋಜರ್ ಏರಿ ಬಿಜೆಪಿಯಿಂದ ಸಂಭ್ರಮಾಚರಣೆ
ಜನರು ಮೃತ ವ್ಯಕ್ತಿಯನ್ನು ನೋಡಲು ಮುಗಿಬಿದ್ದಿದ್ದಾರೆ. ಸಿಪಿಐ ಬಸವರಾಜ ಪಾಟೀಲ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವದೆಹಲಿ: ದೇಶದಲ್ಲಿ ಕಲ್ಲಿದ್ದಲು ಕೊರತೆ ಹೆಚ್ಚಾಗುತ್ತಿದ್ದು ಕರ್ನಾಟಕ ಸೇರಿದಂತೆ ದೆಹಲಿ, ಗುಜರಾತ್, ರಾಜಸ್ಥಾನ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ.
ರಾಜಸ್ಥಾನದಲ್ಲಿ ಲೋಡ್ ಶೆಡ್ಡಿಂಗ್ ಹೇರಲಾಗಿದೆ. ದೆಹಲಿ ಸಿಎಂ ಕೇಜ್ರಿವಾಲ್ ಪ್ರಧಾನಿ ಮೋದಿಗೆ ಪತ್ರ ಬರೆದು ದೆಹಲಿಯಲ್ಲಿ ವಿದ್ಯುತ್ ಕ್ಷಾಮ ತಲೆದೋರಬಹುದು ಎಂದಿದ್ದಾರೆ. ಮೂಲಗಳ ಪ್ರಕಾರ ದೇಶದಲ್ಲಿ ನಿತ್ಯ 18.5 ಲಕ್ಷ ಟನ್ ಕಲ್ಲಿದ್ದಲು ಅಗತ್ಯ ಇದ್ದು, 17.5 ಲಕ್ಷ ಟನ್ ಪೂರೈಕೆ ಆಗುತ್ತಿದೆ ಎನ್ನಲಾಗಿದೆ.
ಕಲ್ಲಿದ್ದಲು ಖಾತೆಯನ್ನೂ ನಿಭಾಯಿಸುತ್ತಿರುವ ಪ್ರಹ್ಲಾದ್ ಜೋಷಿ ಉನ್ನತ ಸಭೆ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಟ್ವೀಟ್ ಮಾಡಿ, ದೇಶದಲ್ಲಿ ಸದ್ಯಕ್ಕೆ 43 ಮಿಲಿಯನ್ ಟನ್‍ನಷ್ಟು ಕಲ್ಲಿದ್ದಲು ದಾಸ್ತಾನಿದೆ. ಇದು 24 ದಿನಗಳಿಗೆ ಬೇಕಾಗುವಷ್ಟು ಅಗತ್ಯ ಕಲ್ಲಿದ್ದಲು ದಾಸ್ತಾನು ಇದೆ. ವಿದ್ಯುತ್ ಶಕ್ತಿ ಅಭಾವ ಆಗುವುದಿಲ್ಲ. ಉಷ್ಣ ವಿದ್ಯುತ್ ಸ್ಥಾವರಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ಪೂರೈಕೆ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಹ್ಲಾದ್ ಜೋಷಿ ಹೇಳಿದ್ದೇನು?
ಇಂದು ಕಲ್ಲಿದ್ದಲಿನ ಉತ್ಪಾದನೆ ಮತ್ತು ಪೂರೈಕೆ ಕುರಿತು ಪರಿಶೀಲನಾ ಸಭೆ ನಡೆಸಲಾಯಿತು. ದೇಶದಲ್ಲಿ ವಿದ್ಯುತ್ ಶಕ್ತಿಯ ಅಭಾವ ಇರುವುದಿಲ್ಲ. ಕೋಲ್ ಇಂಡಿಯಾದಲ್ಲಿ ಸುಮಾರು 43 ಟನ್ ಕಲ್ಲಿದ್ದಲಿನ ಸಂಗ್ರಹವಿದ್ದು, ಅದು ಸುಮಾರು 24 ದಿನಗಳ ಕಲ್ಲಿದ್ದಲಿನ ಬೇಡಿಕೆಯನ್ನು ಇಡೇರಿಸಬಲ್ಲದು.
ಥರ್ಮಲ್ ಪಾವರ್ ಪ್ಲ್ಯಾಂಟಗಳಿಗೆ ಬೇಕಾಗುವಷ್ಟು ಕಲ್ಲಿದ್ದಲನ್ನು ಪ್ರತಿದಿನದಂತೆ ಸರಬರಾಜು ಮಾಡಲಾಗುತ್ತಿದೆ.ಮಳೆಗಾಲವು ಕಡಿಮೆ ಆದ ಹಿನ್ನಲೆಯಲ್ಲಿ ಕಲ್ಲಿದ್ದಲಿನ ಸರಬರಾಜು ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗಲಿದ್ದು ದೇಶದಲ್ಲಿ ಅಗತ್ಯ ಕಲ್ಲಿದ್ದಲಿನ ಸಂಗ್ರಹವಿದೆ.
ದೇಶೀಯ ಕಲ್ಲಿದ್ದಲು ಪೂರೈಕೆ ಹೆಚ್ಚಿದ್ದು ದೇಶದ ಕಲ್ಲಿದ್ದಲು ಆಮದು ಗಣನೀಯವಾಗಿ ಕಡಿಮೆ ಆಗಿರುವದು ಹೆಮ್ಮೆಯ ವಿಷಯ. ಆತ್ಮನಿರ್ಭರಭಾರತದ #AatmanirbharBharat ನಿರ್ಮಾಣದ ಹಾದಿಯಲ್ಲಿ ದೇಶೀಯ ಕಲ್ಲಿದ್ದಲಿನಿಂದ ವಿದ್ಯುತ್ ಶಕ್ತಿ ನಿರ್ಮಾಣ ಈ ಹಣಕಾಸಿನ ಅರ್ಧವರ್ಷದ ಅವಧಿಯಲ್ಲಿ ಸುಮಾರು 24% ಹೆಚ್ಚಿದ್ದು, ಕಲ್ಲಿದ್ದಲಿನ ಆಮದು 30% ಕಡಿಮೆಯಾಗಿದೆ. ಇದನ್ನೂ ಓದಿ: ಚೀನಾ ಕೈಯಿಂದ ನಾರ್ವೆಯ ಸೋಲಾರ್ ಕಂಪನಿ ಖರೀದಿಸಿದ ರಿಲಯನ್ಸ್
ಈ ಹಣಕಾಸಿನ ಅರ್ಧವರ್ಷ ದಲ್ಲಿ ಕಲ್ಲಿದ್ದಲಿನ ಸಾರ್ವಜನಿಕ ವಲಯವಾದ CIL ಅತ್ಯಂತ ಗರಿಷ್ಟ ಕಲ್ಲಿದ್ದಲಿನ ಉತ್ಪಾದನೆ ಹಾಗೂ ಪೂರೈಕೆ ಮಾಡಿದೆ. ಸುಮಾರು 263 MT ಕಲ್ಲಿದ್ದಲಿನ ಉತ್ಪಾದನೆ ಈ ವರ್ಷ ಆಗಿದ್ದು ಅದು ಕಳೆದ ವರ್ಷಕ್ಕಿಂತ 6.3% ನಷ್ಟು ಹೆಚ್ಚಿಗೆ ಆಗಿದೆ. ಸುಮಾರು 323 MT ಸರಬರಾಜು ಮಾಡಿದ್ದು ಕಳೆದ ವರ್ಷಕ್ಕಿಂತ 9% ಹೆಚ್ಚಿಗೆ ಆಗಿದೆ.
ಪ್ರತಿದಿನ ಕೋಲ್ ಇಂಡಿಯಾ ಮತ್ತು ಉಳಿದ ಕಲ್ಲಿದ್ದಲು ಉತ್ಪಾದನಾ ಘಟಕಗಳು ವಿದ್ಯುತ್ ಶಕ್ತಿ ಉತ್ಪಾದನೆಗೆ ಬೇಕಾಗುವಷ್ಟು ಕಲ್ಲಿದ್ದಲಿನ ಪೂರೈಕೆ ಮಾಡುತ್ತಿವೆ. ಕಲ್ಲಿದ್ದಲಿನ ಪೂರೈಕೆ ಅತ್ಯಂತ ಗರಿಷ್ಟ ಪ್ರಮಾಣದಲ್ಲಿದ್ದು ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿನ ಕಲ್ಲಿದ್ದಲಿನ ಸಂಗ್ರಹ ಬರುವ ದಿನಗಳಲ್ಲಿ ಹೆಚ್ಚಲಿದೆ.
ಪ್ರತಿದಿನ @CoalIndiaHQ ಮತ್ತು ಉಳಿದ ಕಲ್ಲಿದ್ದಲು ಉತ್ಪಾದನಾ ಘಟಕಗಳು ವಿದ್ಯುತಶಕ್ತಿ ಉತ್ಪಾದನೆಗೆ ಬೇಕಾಗುವಷ್ಟು ಕಲ್ಲಿದ್ದಲಿನ ಪೂರೈಕೆ ಮಾಡುತ್ತಿವೆ. ಕಲ್ಲಿದ್ದಲಿನ ಪೂರೈಕೆ ಅತ್ಯಂತ ಗರಿಷ್ಟ ಪ್ರಮಾಣದಲ್ಲಿದ್ದು ವಿದ್ಯುತ ಉತ್ಪಾದನಾ ಕೇಂದ್ರಗಳಲ್ಲಿನ ಕಲ್ಲಿದ್ದಲಿನ ಸಂಗ್ರಹ ಬರುವ ದಿನಗಳಲ್ಲಿ ಹೆಚ್ಚಲಿದೆ.
ಈ ಹಣಕಾಸಿನ ಅರ್ಧವರ್ಷ ದಲ್ಲಿ ಕಲ್ಲಿದ್ದಲಿನ ಸಾರ್ವಜನಿಕ ವಲಯವಾದ ಕೋಲ್ ಇಂಡಿಯಾ ಅತ್ಯಂತ ಗರಿಷ್ಟ ಕಲ್ಲಿದ್ದಲಿನ ಉತ್ಪಾದನೆ ಹಾಗೂ ಪೂರೈಕೆ ಮಾಡಿದೆ. ಸುಮಾರು 263 ಎಂಟಿ ಕಲ್ಲಿದ್ದಲಿನ ಉತ್ಪಾದನೆ ಈ ವರ್ಷ ಆಗಿದ್ದು ಅದು ಕಳೆದ ವರ್ಷಕ್ಕಿಂತ 6.3% ನಷ್ಟು ಹೆಚ್ಚಿಗೆ ಆಗಿದೆ. ಸುಮಾರು 323 ಎಂಟಿ ಸರಬರಾಜು ಮಾಡಿದ್ದು ಕಳೆದ ವರ್ಷಕ್ಕಿಂತ 9% ಹೆಚ್ಚಿಗೆ ಆಗಿದೆ.
ಮಂಗಳೂರು: ಫೋನ್ ಸಂಭಾಷಣೆಯ ಪ್ರಕರಣ ಸಂಬಂಧ ಕೋರ್ಟಿಗೆ ಹಾಜರಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಾಕ್ಷ್ಯ ಹೇಳುತ್ತಿದ್ದ ಸಂದರ್ಭದಲ್ಲಿ ಕರೆಂಟ್ ಕೈಕೊಟ್ಟ ಪ್ರಸಂಗ ಇಂದು ನಡೆದಿದೆ.
ಸುಳ್ಯದ ಜನ ವಿದ್ಯುತ್ ವ್ಯತ್ಯಯವಾಗುವ ಸಮಸ್ಯೆ ಆಗಾಗ ಎದುರಿಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಇಂದು ಮಾಜಿ ಪವರ್ ಮಿನಿಸ್ಟರ್ ಕೋರ್ಟ್ ಕಟೆಕಟೆಯ್ಲಲಿರುವಾಗಲೇ ಕರೆಂಟ್ ಹೋಗಿದೆ. ಇದೇ ಸಂದರ್ಭದಲ್ಲಿ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರು, ವಿದ್ಯುತ್ ಸಮಸ್ಯೆಯ ಬಗ್ಗೆ ಡಿಕೆಶಿಗೆ ಮನವರಿಕೆ ಮಾಡಿದರು. ಇದನ್ನೂ ಓದಿ: ಕೋರ್ಟ್ ಆದೇಶಕ್ಕೆ ತಲೆ ಬಾಗಿ ಬಂದಿದ್ದೇನೆ – ಸುಳ್ಯ ನ್ಯಾಯಾಲಯಕ್ಕೆ ಇಂದು ಡಿಕೆಶಿ ಹಾಜರು
ಈ ವಿಚಾರದಲ್ಲಿ ನಿಮಗೆ ಅವರು ಬೈದಿದ್ದು ತಪ್ಪು. ಸುಳ್ಯದಲ್ಲಿ ವಿದ್ಯುತ್ ಸಮಸ್ಯೆ ಅಷ್ಟೊಂದಿದೆ. ಇದನ್ನು ನೀವೇ ಈಗ ಸ್ವತಃ ಅನುಭವಿಸಿದ್ದೀರಿ. ಎಲ್ಲರೂ ಪ್ರತೀ ದಿನ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಿಮಗೂ ಇಂದು ವಿದ್ಯುತ್ ಸಮಸ್ಯೆಯ ಅರಿವಾಗಿದೆ ಎಂದು ಡಿಕೆಶಿಗೆ ನ್ಯಾಯಾಧೀಶರು ತಿಳಿಸಿದರು. ಇದನ್ನೂ ಓದಿ: ಸೋನಿಯಾ ಗಾಂಧಿ ಭೇಟಿ ಅಂತ್ಯ- ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯಗೆ ಆಹ್ವಾನ?
ಕೋರ್ಟಿನಲ್ಲಿ ಸಾಕ್ಷ್ಯ ನುಡಿದು ಹೊರ ಬಂದ ಬಳಿಕ ಮಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ಕಾನೂನಿಗೆ ತಲೆ ಬಾಗಿ ಕೋರ್ಟ್‍ಗೆ ಹಾಜರಾಗಿದ್ದೇನೆ. ಆ ವ್ಯಕ್ತಿ ನನಗೆ ಮಾತ್ರವಲ್ಲದೇ ಅಧಿಕಾರಿಗಳಿಗೂ ಅವಾಚ್ಯ ಶಬ್ದದಿಂದ ಬೈದಿದ್ದಾರೆ. ಸಾರ್ವಜನಿಕ ಕೆಲಸ ಮಾಡೋವಾಗ ಕರ್ತವ್ಯಕ್ಕೆ ಅಡ್ಡಿ ಮಾಡುವ ಪ್ರಯತ್ನ ನಡೆಯುತ್ತದೆ. ಈ ಕಾರಣಕ್ಕಾಗಿ ಅಧಿಕಾರಿಗಳು ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ವಿಚಾರವನ್ನು ಕೋರ್ಟ್ ಮುಂದೆ ಹೇಳಿದ್ದೇನೆ ಎಂದರು.
ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಇದೆ. ನಾನು ಸಚಿವನಾಗಿದ್ದ ಸಂದರ್ಭ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿದ್ದೇನೆ. ಈಗಿನ ನೂತನ ಸಚಿವರು ಸಮಸ್ಯೆ ಬಗೆಹರಿಸಬಹುದು ಎಂಬ ಭರವಸೆ ಇದೆ ಎಂದರು. ಇದನ್ನೂ ಓದಿ: ನಿರ್ಭೀತ, ನೈಜ ಕಾಂಗ್ರೆಸ್ಸಿಗಳು ಪ್ರಿಯಾಂಕಾ ಗಾಂಧಿ: ರಾಗಾ
– ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳ : ಆರ್‌ಟಿಪಿಎಸ್‌ಗೆ ಹೊರೆ
ರಾಯಚೂರು: ರಾಜ್ಯಕ್ಕೆ ಶೇ.40 ರಷ್ಟು ವಿದ್ಯುತ್ ಸರಬರಾಜು ಮಾಡುತ್ತಿರುವ ಜಿಲ್ಲೆಯ ಆರ್‍ಟಿಪಿಎಸ್(ರಾಯಚೂರು ಥರ್ಮಲ್ ಪವರ್ ಸ್ಟೇಶನ್) ಇನ್ನು ಎಷ್ಟು ದಿನ ಕಾರ್ಯನಿರ್ವಹಿಸುತ್ತೋ ಗೊತ್ತಿಲ್ಲ. ಯಾಕಂದ್ರೆ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಆರ್‌ಟಿಪಿಎಸ್ ಅವನತಿಯ ಹತ್ತಿರಕ್ಕೆ ಹೋಗುತ್ತಿದೆಯಾ ಅನ್ನೋ ಅನುಮಾನಗಳು ಮೂಡಿವೆ. ಬೇಸಿಗೆ ಹಿನ್ನೆಲೆ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೇಲೆ ಒತ್ತಡ ಬಿದ್ದಿದ್ದರೂ ನಿಗದಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ. ಈಗಾಗಲೇ ನೂರಾರು ಕಾರ್ಮಿಕರನ್ನ ಉದ್ಯೋಗದಿಂದ ಕೈಬಿಡಲಾಗಿದೆ. ಮುಖ್ಯಮಂತ್ರಿಗಳೇ ಆರ್‌ಟಿಪಿಎಸ್ ಮುಂದುವರಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ.
ಜಿಲ್ಲೆಯ ಶಕ್ತಿನಗರದ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್‍ಟಿಪಿಎಸ್ ಇಡೀ ರಾಜ್ಯಕ್ಕೆ ಬಹುದೊಡ್ಡ ವಿದ್ಯುತ್ ಶಕ್ತಿಯ ಮೂಲವಾಗಿದೆ. ಆದರೆ ಇಲ್ಲಿನ 8 ಘಟಕಗಳ ನಿರ್ವಹಣೆ ಸಮಸ್ಯೆ ಹಾಗೂ ವಿದ್ಯುತ್ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಯಾವಾಗ ವಿದ್ಯುತ್ ಕೇಂದ್ರಕ್ಕೆ ಬೀಗ ಬೀಳುತ್ತದೋ ಅನ್ನೋ ಅನುಮಾನಗಳು ಹುಟ್ಟಿಕೊಂಡಿವೆ.
ರಾಯಚೂರಿನ ವಿಧಾನಪರಿಷತ್ ಸದಸ್ಯ ಬಸವರಾಜ್ ಪಾಟೀಲ್ ಇಟಗಿ ಸದನದಲ್ಲಿ ಆರ್‌ಟಿಪಿಎಸ್ನಲ್ಲಿ ವಿದ್ಯುತ್ ಉತ್ಪಾದನಾ ಪ್ರಮಾಣ ಇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಿಎಂ, ಪ್ರಸ್ತುತ ನಿಯಮಗಳಂತೆ ವಿದ್ಯುತ್ ಉತ್ಪಾದನಾ ಘಟಕಗಳನ್ನು ಚಾಲನೆಗೊಳಿಸುವ ಅಥವಾ ಸ್ಥಗಿತಗೊಳಿಸುವ ನಿರ್ಧಾರವನ್ನು ಮೆರಿಟ್ ಆರ್ಡರ್ ಡಿಸ್ಚಾರ್ಜ್ ಆಧಾರದ ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ ಅಂತ ಉತ್ತರಿಸಿದ್ದಾರೆ. ಈ ಮೂಲಕ ಆರ್‌ಟಿಪಿಎಸ್ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.
ಬಹುತೇಕ ಘಟಕಗಳ ನವೀಕರಣ, ದುರಸ್ತಿ ಕಾರ್ಯಬಾಕಿಯಿದ್ದು, ಈ ಮಧ್ಯೆ ಸುಮಾರು 600 ಜನ ಕಾರ್ಮಿಕರನ್ನ ಕೈಬಿಡಲಾಗಿದೆ. ಬೇಸಿಗೆ ಹಿನ್ನೆಲೆ ಶಾಖೋತ್ಪನ್ನ ಕೇಂದ್ರಗಳ ಮೇಲೆ ಒತ್ತಡ ಹೆಚ್ಚಾಗಿದೆ ಆದರೆ ಆರ್‌ಟಿಪಿಎಸ್ ನಲ್ಲಿ ವಿದ್ಯುತ್ ಉತ್ಪಾದನೆ ಇಳಿಮುಖವಾಗಿದೆ. ವಿದ್ಯುತ್ ಕೇಂದ್ರದ ಎಂಟು ಘಟಕಗಳ ಒಟ್ಟು ಸಾಮಥ್ರ್ಯ 1720 ಮೆಗಾವ್ಯಾಟ್ ಇದ್ದು ಸದ್ಯ 1334 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ತಾಂತ್ರಿಕ ಕಾರಣಕ್ಕೆ 8ನೇ ಘಟಕ ಕಾರ್ಯಸ್ಥಗಿತಗೊಳಿಸಿದೆ. ರಾಜ್ಯದ ವಿದ್ಯುತ್ ಬೇಡಿಕೆ 11609 ಮೆಗಾವ್ಯಾಟ್ ಇದ್ದು, ಇದನ್ನ ಸರಿದೂಗಿಸಲು ಆಗದೆ ಲೋಡ್ ಶಡ್ಡಿಂಗ್ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರು, ರೈತರು ತೊಂದರೆಗಿಡಾಗಿದ್ದಾರೆ. ಪಂಪ್ ಸೆಟ್‍ಗೆ ವಿದ್ಯುತ್ ಕೊರತೆ ಉಂಟಾಗಿರುವುದಕ್ಕೆ ರೈತರು ಹೋರಾಟಗಳನ್ನೇ ನಡೆಸಿದ್ದಾರೆ.
ವಿದ್ಯುತ್ ಉತ್ಪಾದನಾ ವೆಚ್ಚ ಹಾಗೂ ಘಟಕಗಳು ಹಳೆಯದಾಗಿರುವ ಕಾರಣಕ್ಕೆ ವಿದ್ಯುತ್ ಕೇಂದ್ರ ಸ್ಥಗಿತವಾದರೆ ಸಾವಿರಾರು ಜನ ನಿರುದ್ಯೋಗಿಗಳಾಗುತ್ತಾರೆ. ಬೇಸಿಗೆ ಸಮಯದಲ್ಲಿ ವಿದ್ಯುತ್ ಕೇಂದ್ರವನ್ನ ಸಮರ್ಪಕವಾಗಿ ಬಳಸಿಕೊಳ್ಳದಿದ್ದರೆ ರಾಜ್ಯದಲ್ಲಿ ವಿದ್ಯುತ್ ಕ್ಷಾಮವೇ ಎದುರಾಗಲಿದೆ. ಒಟ್ಟಿನಲ್ಲಿ ಆರ್‌ಟಿಪಿಎಸ್ಗೆ ವಯಸ್ಸಾಗುತ್ತಿರುವುದರಿಂದ ನಾನಾ ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ.
ಮುಂಬೈ: 2008ರಲ್ಲಿ ವಿದ್ಯುತ್ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಣೆ ಜಿಲ್ಲಾ ನ್ಯಾಯಾಲಯ ಈಗ ತೀರ್ಪು ಪ್ರಕಟಿಸಿದ್ದು, 70 ವರ್ಷದ ವೃದ್ಧನಿಗೆ 2 ವರ್ಷ ಕಠಿಣ ಶಿಕ್ಷೆ ಹಾಗೂ ಬರೋಬ್ಬರಿ 19 ಲಕ್ಷ ರೂ.ಗಳ ದಂಡ ವಿಧಿಸಿದೆ.
ಜಿಲ್ಲಾ ನ್ಯಾಯಾಧೀಶರಾದ ಪಿ.ಪಿ.ಯಾದವ್ ಅವರು ಈ ಆದೇಶ ಪ್ರಕಟಿಸಿದ್ದು, 2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 135ರ ಅಡಿಯಲ್ಲಿ ಶಿಕ್ಷಾರ್ಹ ಅಪಾರಾಧದ ಅಡಿ ಮೊನುದ್ದೀನ್ ಮೆಹಬೂಬ್ ಶೇಖ್ ನನ್ನು ತಪ್ಪಿತಸ್ಥನೆಂದು ಹೇಳಿದೆ. ವಿದ್ಯುತ್ ಕದಿಯುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಸೆಕ್ಷನ್ ರೂಪಿಸಲಾಗಿದೆ.
ಫೆಬ್ರವರಿ 6ರಂದು ನ್ಯಾಯಾಲಯ ಈ ಆದೇಶ ಹೊರಡಿಸಿದ್ದು, ಫೆಬ್ರವರಿ 9ರಂದು ಸಾರ್ವಜನಿಕವಾಗಿ ಲಭ್ಯವಾಗಿದೆ. ಶೈಖ್ ಪವರ್‍ಲೂಮ್ ಫ್ಯಾಕ್ಟರಿ ನೌಕರನಾಗಿದ್ದು, ಪರಿಶೀಲನೆ ವೇಳೆ ವಿದ್ಯುತ್ ಕದ್ದಿರುವುದು ತಿಳಿದಿದೆ. ಅಲ್ಲದೆ ಅಪರಾಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಿದ್ದರು.
ಅಡಿಶನಲ್ ಪಬ್ಲಿಕ್ ಪ್ರಾಸಿಕ್ಯೂಟರ್ ವಿವೇಕ್ ಕಾದು ಅವರು ವಾದ ಮಂಡಿಸಿದ್ದು, 2008 ಮಾರ್ಚ್ 10ರಂದು ಫ್ಯಾಕ್ಟರಿ ಮೇಲೆ ವಿದ್ಯುತ್ ಪ್ರಸರಣ ಕಂಪನಿಯವರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಈ ವೇಳೆ ಅಪರಾಧಿ ಸ್ಥಳದಲ್ಲೇ ಇದ್ದ. ಅಂಡರ್‍ಗ್ರೌಂಡ್ ಕೇಬಲ್‍ನಿಂದ ನೇರವಾಗಿ ಫ್ಯಾಕ್ಟರಿಗೆ ವಿದ್ಯುತ್ ಸಂಪರ್ಕ ಮಾಡಿರುವುದು ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ತಿಳಿದಿದೆ. ಔಟ್‍ಲೆಟ್‍ನ ಅಧಿಕೃತ ಮಾರ್ಗವನ್ನು ಬೈಪಾಸ್ ಮಾಡಿ ಕೇಬಲ್‍ನ್ನು ಮುಖ್ಯ ಸರಬರಾಜು ಮಾರ್ಗಕ್ಕೆ ಸೇರಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ಕುರಿತು ಲೆಕ್ಕ ಹಾಕಲಾಗಿದ್ದು, 2007, ಮೇ 16 ರಿಂದ 2008ರ ಮಾರ್ಚ್ 10ರ ವರೆಗೆ ಒಟ್ಟು 94,589 ಯುನಿಟ್ ವಿದ್ಯುತ್‍ನ್ನು ಕದಿಯಲಾಗಿದ್ದು, ಇದರ ಬೆಲೆ 6,32,454 ರೂ ಆಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಿವೇಕ್ ಕಾದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಈ ಅಪರಾಧ ತುಂಬಾ ಗಂಭೀರವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದ್ದಾರೆ.
ವಿದ್ಯುತ್ ಕದಿಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕದ್ದ ವಿದ್ಯುತ್‍ನ ಮೂರು ಪಟ್ಟು ಹಣವನ್ನು ದಂಡ ನೀಡಬೇಕು. ಅಲ್ಲದೆ ಕನಿಷ್ಟ ಮೂರು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ವಾದ ಆಲಿಸಿದ ನ್ಯಾಯಾಧೀಶರು ಅಪರಾಧಿಗೆ 2 ವರ್ಷಗಳ ಕಠಿಣ ಶಿಕ್ಷೆ ಹಾಗೂ 19 ಲಕ್ಷ ರೂ. ದಂಡ ವಿಧಿಸಿದ್ದಾರೆ.