Tag: power

  • 2300 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆರಂಭ: ಸಾರ್ವಕಾಲಿಕ ದಾಖಲೆ ಬರೆದ ಕೆಪಿಸಿಎಲ್

    2300 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆರಂಭ: ಸಾರ್ವಕಾಲಿಕ ದಾಖಲೆ ಬರೆದ ಕೆಪಿಸಿಎಲ್

    – 1 ವರ್ಷದಲ್ಲೇ 2300 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ

    – ಬಿಟಿಪಿಎಸ್‍ನ ಮೂರನೇ ಘಟಕ ಮತ್ತು ವೈಟಿಪಿಎಸ್ ನ 1 ಮತ್ತು 2ನೇ ಘಟಕ ಕಾರ್ಯಾರಂಭ

    ರಾಯಚೂರು: ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ವೈಟಿಪಿಎಸ್‍ನ ಎರಡನೇ ಘಟಕ ಈಗ ವಾಣಿಜ್ಯಿಕ ವಿದ್ಯುತ್ ಉತ್ಪಾದನೆಗೆ ಸಿದ್ಧವಾಗಿದೆ. ವೈಟಿಪಿಎಸ್ ಕಚೇರಿಯಲ್ಲಿ – ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್ (ಕೆಪಿಸಿಎಲ್) ವ್ಯವಸ್ಥಾಪಕ ನಿರ್ದೆಶಕ ಜಿ.ಕುಮಾರ್ ನಾಯಕ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.

    ಒಂದೇ ವರ್ಷದಲ್ಲಿ ಬಿಟಿಪಿಎಸ್‍ನ ಮೂರನೇ ಘಟಕ ಮತ್ತು ವೈಟಿಪಿಎಸ್‍ನ 1 ಮತ್ತು 2ನೇ ಘಟಕ ಕಾರ್ಯಾರಂಭಗೊಂಡಿದ್ದು 2300 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆರಂಭವಾಗಿರುವುದು ಸಾರ್ವಕಾಲಿಕ ದಾಖಲೆ ಅಂತ ಕುಮಾರ್ ನಾಯಕ್ ಹೇಳಿದ್ದಾರೆ.

    ವೈಟಿಪಿಎಸ್‍ನ ಎರಡನೇ ಘಟಕ ಸಂಪೂರ್ಣ ದೇಶಿಯ ಘಟಕವಾಗಿದ್ದು,ಎಲ್ಲಾ ಉಪಕರಣಗಳು ಬಿಎಚ್‍ಇಎಲ್‍ನಲ್ಲೇ ತಯಾರುಗೊಂಡಿವೆ. ಮಾರ್ಚ್ 6ರಂದು ಮೊದಲ ಘಟಕದ ವಾಣಿಜ್ಯಿಕ ಉತ್ಪಾದನೆ ಸಾಮರ್ಥ್ಯ ಘೋಷಣೆಯಾಗಿತ್ತು ಏಪ್ರಿಲ್ 6 ರಂದು ಎರಡನೇ ಘಟಕ ಘೋಷಣೆಯಾಗಿದೆ.

    ವೈಟಿಪಿಎಸ್‍ನ 1 ಮತ್ತು 2ನೇ ಘಟಕಗಳಿಂದ 1600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಇದರಿಂದ ಕೆಪಿಸಿಎಲ್ ರಾಜ್ಯದ ವಿದ್ಯುತ್ ಜಾಲಕ್ಕೆ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಂದ ಶೇಕಡಾ 40 ಕ್ಕಿಂತ ಅಧಿಕ ಅಂದ್ರೆ 4300 ಮೆಗಾವ್ಯಾಟ್ ವಿದ್ಯುತ್ ನೀಡಲು ಸಮರ್ಥವಾಗಿದೆ. ಎರಡನೇ ಘಟಕದ ಘೋಷಣೆ ಹಿನ್ನೆಲೆಯಲ್ಲಿ ವೈಟಿಪಿಎಸ್ ಸಿಬ್ಬಂದಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.

  • ಯುಗಾದಿ ಬೆನ್ನಲ್ಲೆ ಕರೆಂಟ್ ಶಾಕ್- ಏಪ್ರಿಲ್ 1ರಿಂದ ವಿದ್ಯುತ್ ದರ ಹೆಚ್ಚಳ

    ಯುಗಾದಿ ಬೆನ್ನಲ್ಲೆ ಕರೆಂಟ್ ಶಾಕ್- ಏಪ್ರಿಲ್ 1ರಿಂದ ವಿದ್ಯುತ್ ದರ ಹೆಚ್ಚಳ

    ಬೆಂಗಳೂರು: ಯುಗಾದಿ ಹಬ್ಬದ ಬೆನ್ನಲ್ಲೇ ಸರ್ಕಾರದಿಂದ ಜನರಿಗೆ ಶಾಕ್ ಕಾದಿದೆ. ಏಪ್ರಿಲ್ 1ರಿಂದ ವಿದ್ಯುತ್ ದರ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ. ಮಾರ್ಚ್ 31ಕ್ಕೆ ಕೆಇಆರ್‍ಸಿಯಿಂದ (ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ)ದರ ಪ್ರಕಟವಾಗಲಿದ್ದು, ಈ ಪರಿಷ್ಕೃತ ದರ ಏಪ್ರಿಲ್ 1ರಿಂದಲೇ ಜಾರಿಯಾಗಲಿದೆ.

    ಎಸ್ಕಾಂಗಳು ಕಳೆದ ಡಿಸೆಂಬರ್‍ನಲ್ಲಿ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಪ್ರಸ್ತಾವನೆಯಲ್ಲಿ ಯೂನಿಟ್ ಗೆ 1.40ಪೈಸೆ ಹೆಚ್ಚಳ ಮಾಡುವಂತೆ ಮನವಿ ಸಲ್ಲಿಸಿತ್ತು.

    ದರ ಏರಿಕೆ ಅನಿವಾರ್ಯ: ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಫೆ. 20ರಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದರು. ಈ ಬಗ್ಗೆ 5 ವಿದ್ಯುತ್ ಸರಬರಾಜು ಕಂಪೆನಿಗಳಿಂದ ಪ್ರಸ್ತಾವನೆ ಬಂದಿದ್ದು, ಪ್ರತಿ ಯೂನಿಟ್‍ಗೆ 1 ರೂಪಾಯಿ 48 ಪೈಸೆ ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ ಎಂದು ತಿಳಿಸಿದ್ದರು. ಕಳೆದ ವರ್ಷ ಮಾರ್ಚ್‍ನಲ್ಲಿ ವಿದ್ಯುತ್‍ದರ ಏರಿಕೆ ಮಾಡಲಾಗಿತ್ತು.

    ಕಳೆದ ಬಾರಿ ಎಷ್ಟು ಹೆಚ್ಚಳ ಮಾಡಲಾಗಿತ್ತು?: ನಗರದ ಗೃಹಬಳಕೆ ಗ್ರಾಹಕರಿಗೆ ಮೊದಲ 30 ಯೂನಿಟ್‍ಗೆ 30 ಪೈಸೆ, 31ರಿಂದ 100 ಯೂನಿಟ್‍ಗೆ 40 ಪೈಸೆ ಹೆಚ್ಚಿಸಲಾಗಿತ್ತು. 100 ಯೂನಿಟ್‍ಗೆ ಮೇಲ್ಪಟ್ಟ ಬಳಕೆಗೆ ಪ್ರತಿ ಹಂತದಲ್ಲಿ ತಲಾ 50 ಪೈಸೆ ಏರಿಸಲಾಗಿತ್ತು. ಗ್ರಾಮೀಣ ಗೃಹಬಳಕೆದಾರರಿಗೂ ಇಷ್ಟೇ ದರ ಹೆಚ್ಚಳವಾಗಿತ್ತು. ಎಲ್ಲ ಗ್ರಾಹಕರನ್ನು ಪರಿಗಣಿಸಿ ಲೆಕ್ಕ ಹಾಕಿದರೆ ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 48 ಪೈಸೆಯಷ್ಟು ಏರಿಕೆ ಮಾಡಿದಂತಾಗಿತ್ತು. ಇದು ಕಳೆದ ಒಂದು ದಶಕದಲ್ಲಾದ ಅತ್ಯಧಿಕ ಪ್ರಮಾಣದ ದರ ಏರಿಕೆಯಾಗಿತ್ತು. ವಿದ್ಯುತ್ ಸರಬರಾಜು ಕಂಪೆನಿಗಳು (ಎಸ್ಕಾಂ) ಪ್ರತಿ ಯೂನಿಟ್‍ಗೆ 1.02 ರೂ. ಹೆಚ್ಚಳಕ್ಕೆ ಅನುಮೋದನೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು.

  • ಬೇಸಿಗೆಯಲ್ಲಿ ಕರೆಂಟ್ ಶಾಕ್: ವಿದ್ಯುತ್ ಕಂಪೆನಿಗಳ ಪ್ರಸ್ತಾವನೆಯಲ್ಲಿ ಇಷ್ಟು ರೇಟ್ ಹೆಚ್ಚು ಮಾಡಬೇಕಂತೆ!

    ಬೇಸಿಗೆಯಲ್ಲಿ ಕರೆಂಟ್ ಶಾಕ್: ವಿದ್ಯುತ್ ಕಂಪೆನಿಗಳ ಪ್ರಸ್ತಾವನೆಯಲ್ಲಿ ಇಷ್ಟು ರೇಟ್ ಹೆಚ್ಚು ಮಾಡಬೇಕಂತೆ!

    ಬೆಂಗಳೂರು: ಬೇಸಿಗೆಯಲ್ಲಿ ವಿದ್ಯುತ್ ದರ ಏರಿಸಲು ಸರ್ಕಾರ ಮುಂದಾಗಿದೆ. ಅದರಲ್ಲೂ ಇಂಧನ ಸಚಿವ ಡಿಕೆ ಶಿವಕುಮಾರ್ ಅವರೇ ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ.

    5 ವಿದ್ಯುತ್ ಸರಬರಾಜು ಕಂಪೆನಿಗಳಿಂದ ಪ್ರಸ್ತಾವನೆ ಬಂದಿದ್ದು, ಪ್ರತಿ ಯೂನಿಟ್‍ಗೆ 1 ರೂಪಾಯಿ 48 ಪೈಸೆ ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ ಎಂದು ತಿಳಿಸಿದ್ದಾರೆ.

    ಕಳೆದ ವರ್ಷ ಮಾರ್ಚ್‍ನಲ್ಲಿ ವಿದ್ಯುತ್‍ದರ ಏರಿಕೆ ಮಾಡಲಾಗಿತ್ತು. ಆದರೆ ಈಗ, ದಾಖಲೆ ಮಟ್ಟದಲ್ಲಿ ಬೇಡಿಕೆ ಇಟ್ಟಿರುವುದರಿಂದ ಬೇಸಿಗೆಯಲ್ಲಿ ಕರೆಂಟ್ ದರ ಏರಿಕೆಯಾಗುವುದು ಪಕ್ಕಾ ಆಗಿದೆ.

    ಕಳೆದ ಬಾರಿ ಎಷ್ಟು ಹೆಚ್ಚಳ ಮಾಡಲಾಗಿತ್ತು?
    ನಗರದ ಗೃಹಬಳಕೆ ಗ್ರಾಹಕರಿಗೆ ಮೊದಲ 30 ಯೂನಿಟ್‍ಗೆ 30 ಪೈಸೆ , 31ರಿಂದ 100 ಯೂನಿಟ್‍ಗೆ 40 ಪೈಸೆ ಹೆಚ್ಚಿಸಲಾಗಿತ್ತು. 100 ಯೂನಿಟ್‍ಗೆ ಮೇಲ್ಪಟ್ಟ ಬಳಕೆಗೆ ಪ್ರತಿ ಹಂತದಲ್ಲಿ ತಲಾ 50 ಪೈಸೆ ಏರಿಸಲಾಗಿತ್ತು. ಗ್ರಾಮೀಣ ಗೃಹಬಳಕೆದಾರರಿಗೂ ಇಷ್ಟೇ ದರ ಹೆಚ್ಚಳವಾಗಿತ್ತು. ಎಲ್ಲ ಗ್ರಾಹಕರನ್ನು ಪರಿಗಣಿಸಿ ಲೆಕ್ಕ ಹಾಕಿದರೆ ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 48 ಪೈಸೆಯಷ್ಟು ಏರಿಕೆ ಮಾಡಿದಂತಾಗಿತ್ತು. ಇದು ಕಳೆದ ಒಂದು ದಶಕದಲ್ಲಾದ ಅತ್ಯಧಿಕ ಪ್ರಮಾಣದ ದರ ಏರಿಕೆಯಾಗಿತ್ತು. ವಿದ್ಯುತ್ ಸರಬರಾಜು ಕಂಪೆನಿಗಳು (ಎಸ್ಕಾಂ) ಪ್ರತಿ ಯೂನಿಟ್‍ಗೆ 1.02 ರೂ. ಹೆಚ್ಚಳಕ್ಕೆ ಅನುಮೋದನೆ ನೀಡುವಂತೆ ಪ್ರಸ್ತಾವ ಸಲ್ಲಿಸಿತ್ತು.

    ಪರಿಹಾರ ಚೆಕ್: ರಾಜ್ಯ ಒಲಂಪಿಕ್ಸ್ ಕ್ರೀಡಾಕೂಟದ ವೇಳೆಯೇ ಸಾವನ್ನಪ್ಪಿದ್ದ ಸಂತೋಷ್ ಡಿ ಹೊಸಮನಿಗೆ ಕರ್ನಾಟಕ ವಿದ್ಯುತ್ ಕಾರ್ಖಾನೆ ವತಿಯಿಂದ 1 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ವಿತರಿಸಲಾಯ್ತು. ಸಂತೋಷ್ ತಂದೆ ದೇವಣ್ಣ ಆರ್ ಹೊಸಮನಿ ಚೆಕ್ ಸ್ವೀಕರಿಸಿದ್ರು.