Tag: power sub-transmission center

  • ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ನಾಗದೋಷ – ಜ್ಯೋತಿಷಿಗಳ ಮಾತುಕೇಳಿ ಅಧಿಕಾರಿಯಿಂದ ಹೋಮ

    ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ನಾಗದೋಷ – ಜ್ಯೋತಿಷಿಗಳ ಮಾತುಕೇಳಿ ಅಧಿಕಾರಿಯಿಂದ ಹೋಮ

    ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಜೂಲಕಟ್ಟಿ ವಿದ್ಯುತ್ ಉಪ ಪ್ರಸರಣ ಕೇಂದ್ರಕ್ಕೆ ನಾಗದೋಷ ಎಂದು ಮಾತು ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಜ್ಯೋತಿಷಿಗಳ ಸಲಹೆ ಮೇರೆಗೆ ಹೋಮ ಹವನ ನಡೆಸಲಾಗಿದೆ.

    ಪ್ರಸರಣ ಕೇಂದ್ರದಲ್ಲಿ ಮಾಡಿದ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ. ವಿದ್ಯುತ್ ಪ್ರಸರಣ ಕೇಂದ್ರದ ಶಾಖಾಧಿಕಾರಿ ಭೋಗಾಪುರೇಶ್ ದೇಸಾಯಿ ಅವರು ಹೋಮ ಮಾಡಿಸಿದ್ದಾರೆ. ಪ್ರಸರಣ ಕೇಂದ್ರದಲ್ಲಿ ಪದೇ ಪದೇ ಹಾವು ಕಾಣಿಸಿಕೊಳ್ಳುತ್ತಿದ್ದವು. ಬಳಿಕ ಈ ಬಗ್ಗೆ ಜ್ಯೋತಿಷಿಗಳ ಮೊರೆ ಹೋಗಿದ್ದಾರೆ. ಆಗ ಜ್ಯೋತಿಷಿಗಳು ಇಲ್ಲಿ ನಾಗದೋಷ, ವಾಸ್ತುದೋಷವಿದೆ. ಆದ್ದರಿಂದ ಹೋಮ-ಹವನ ಮಾಡಿಸಿದರೆ ಸರಿ ಹೋಗುತ್ತದೆ ಎಂದು ಸಲಹೆ ನೀಡಿದ್ದಾರೆ.

    ಜ್ಯೋತಿಷಿಗಳ ಮಾತನ್ನು ಕೇಳಿ ನಾಗದೋಷ ವಾಸ್ತುದೋಷದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೋಮ ಹವನದ ಮೊರೆ ಹೋಗಿದ್ದಾರೆ. ಅದರಂತೆಯೇ ಜ್ಯೋತಿಷಿಗಳ ಸಲಹೆ ಮೇರೆಗೆ ಎರಡು ದಿನಗಳ ಹಿಂದೆ ಶಾಖಾಧಿಕಾರಿ ಹೋಮ ಹವನ ಮಾಡಿಸಿದ್ದಾರೆ.

    ಅಷ್ಟೇ ಅಲ್ಲದೇ ನಾಗದೋಷದ ಹಿನ್ನೆಲೆಯಲ್ಲಿ ವಿದ್ಯುತ್ ಪ್ರಸರಣ ಉಪ ಕೇಂದ್ರದಲ್ಲಿ ನಾಗಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಪೂಜೆ ಮಾಡಿಸಲಾಗಿದೆ. ಈಗ ಹೋಮ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು ಪರ, ವಿರೋಧ ಮಾತುಗಳು ಕೇಳಿಬಂದಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv