Tag: power star

  • ಮತ್ತೆ ಪವರ್ ಫಿಟ್ನೆಸ್ ಮೂಲಕ ಮೋಡಿ ಮಾಡಿದ ಅಪ್ಪು

    ಮತ್ತೆ ಪವರ್ ಫಿಟ್ನೆಸ್ ಮೂಲಕ ಮೋಡಿ ಮಾಡಿದ ಅಪ್ಪು

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಫಿಟ್ನೆಸ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅಪ್ಪು ಫಿಟ್ನೆಸ್ ನೋಡಿದ ಅವರು ಅಭಿಮಾನಿಗಳು ಮತ್ತೆ ಫಿದಾ ಆಗಿದ್ದಾರೆ.

    ಲಾಕ್‍ಡೌನ್‍ನಿಂದ ಮನೆಯಲ್ಲಿ ಉಳಿದಿರುವ ಅಪ್ಪು, ಸಖತ್ ಆಗಿಯೇ ತಮ್ಮ ದೇಹವನ್ನು ದಂಡಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಪುನೀತ್ ಅವರ ಫಿಟ್ನೆಸ್ ವಿಡಿಯೋವೊಂದು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಜೊತೆಗೆ ಟ್ವಿಟ್ಟರ್ ನಲ್ಲಿ ಟ್ರೆಂಡ್ ಸೆಟ್ ಮಾಡಿತ್ತು. ಈಗ ಮತ್ತೆ ಅಪ್ಪು ಅವರು ಎರಡನೇ ಫಿಟ್ನೆಸ್ ವಿಡಿಯೋ ರಿಲೀಸ್ ಆಗಿದ್ದು, ಅವರ ಅಭಿಮಾನಿಗಳು ಅಪ್ಪು ಬಾಡಿ ನೋಡಿ ಫಿದಾ ಆಗಿದ್ದಾರೆ.

    https://www.instagram.com/p/CAHUT8vJZo_/

    ಈ ವಿಡಿಯೋವನ್ನು ಸ್ವತಃ ಪುನೀತ್ ಅವರೇ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಕೇವಲ 22 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಅಪ್ಪು ಅವರು ಫ್ರೀ ಹ್ಯಾಂಡ್ ಪುಶ್‍ಅಪ್ಸ್ ಮಾಡಿ ಎರಡು ಕಾಲುಗಳ ಸಮೇತ ಮೇಲೆ ಜಿಗಿದು ತಮ್ಮ 45ನೇ ವರ್ಷದಲ್ಲಿ ಎಷ್ಟು ಫಿಟ್ ಆಗಿ ಇದ್ದಾರೆ ಎಂಬುದನ್ನು ತೋರಿಸಿದ್ದಾರೆ. ಈ ಮೂಲಕ ತಮ್ಮ ಯುವ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ.

    ಈ ವಿಡಿಯೋ ನೋಡಿ ಪಿಧಾ ಅಗಿರುವ ಅವರ ಅಭಿಮಾನಿಗಳು ಈ ವಯಸ್ಸಿನಲ್ಲೂ ನಿಮ್ಮ ಫಿಟ್ನೆಸ್ ವಿಡಿಯೋ ನಮಗೆ ಸ್ಫೂರ್ತಿಯಾಗಿದೆ ಸರ್ ಎಂದು ಕಮೆಂಟ್ ಮಾಡಿದ್ದಾರೆ. ಜೊತೆಗೆ ಈ ವಿಡಿಯೋಗೆ ಕನ್ನಡ ರ‍್ಯಾಂಪ್ ಸಿಂಗರ್ ಅಲ್ ಓಕೆ ಕೂಡ ಕಮೆಂಟ್ ಮಾಡಿದ್ದು, ಅದಕ್ಕೆ ಅವರನ್ನು ಪವರ್ ಸ್ಟಾರ್ ಎಂದು ನಾವು ಕರೆಯುವುದು ಎಂದು ಬರೆದುಕೊಂಡಿದ್ದಾರೆ. ಅಪ್ಪು ಅವರ ಈ ವಿಡಿಯೋವನ್ನು ಹಾಕಿದ 2 ಗಂಟೆಯೊಳಗೆ 13 ಸಾವಿರ ಜನ ನೋಡಿದ್ದಾರೆ.

    https://www.instagram.com/p/B_v-k6Ipc4I/

    ಇ ಹಿಂದೆಯೂ ಕೂಡ ಅಪ್ಪು ಅವರ ಫಿಟ್ನೆಸ್ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಅಪ್ಪು ಜಿಗಿದು ಬಂದು ಲೆಗ್ ಪಂಚ್ ಜೊತೆಗೆ ಬ್ಯಾಕ್‍ಫ್ಲಿಪ್ ಹೊಡೆದಿದ್ದಾರೆ. ಈ ವಿಡಿಯೋವನ್ನು ಅಪ್ಪು ಕೂಡ ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದು, ಸ್ಟೇ ಹೋಂ, ಸ್ಟೇ ಸೇಫ್, ಸ್ಟೇ ಫಿಟ್ ಎಂದು ಬರೆದುಕೊಂಡಿದ್ದರು. ವಿಡಿಯೋದಲ್ಲಿ ಪವರ್ ಸ್ಟಾರ್ ಫಿಟ್ನೆಸ್ ನೋಡಿದ ಅವರ ಅಭಿಮಾನಿಗಳು ಪವರ್ ಸ್ಟಾರ್ ಎಂಬ ಬಿರುದು ಇವರಿಗೆ ಮಾತ್ರ ಸೂಟ್ ಆಗುತ್ತದೆ ಎಂದು ಕಮೆಂಟ್ ಮಾಡಿದ್ದರು.

    https://www.instagram.com/p/B_SJuXJpbFd/

    ಪುನೀತ್ ರಾಜ್‍ಕುಮಾರ್ ಸದ್ಯ ಯುವರತ್ನ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಸಂತೋಷ್ ಅನಂದ್‍ರಾಮ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪುನೀತ್, ಅಪ್ಪು ಸಿನಿಮಾದ ಬಳಿಕ ಕಾಲೇಜು ಯುವಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ಆಗಲೇ ಮುಗಿದಿದ್ದು, ಇನ್ನುಳಿದ ಚಿತ್ರೀಕರಣ ಕೊರೊನಾ ವೈರಸ್ ನಿಂದ ಮುಂದಕ್ಕೆ ಹೋಗಿದೆ.

  • ಸಿಎಂ ಪರಿಹಾರ ನಿಧಿಗೆ 50 ಲಕ್ಷ ದೇಣಿಗೆ ನೀಡಿದ ಪವರ್ ಸ್ಟಾರ್

    ಸಿಎಂ ಪರಿಹಾರ ನಿಧಿಗೆ 50 ಲಕ್ಷ ದೇಣಿಗೆ ನೀಡಿದ ಪವರ್ ಸ್ಟಾರ್

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಭೀತಿ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಡೀ ರಾಜ್ಯ ಮಾತ್ರವಲ್ಲದೇ ದೇಶವೇ ಲಾಕ್ ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ದೇಣಿಗೆ ನೀಡಿದ್ದಾರೆ.

    ಇಂದು ಬೆಳಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಪುನೀತ್, ಮುಖ್ಯಮಂತ್ರಿಗಳಿಗೆ 50 ಲಕ್ಷ ಚೆಕ್ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಎಸ್‍ವೈ, ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರು ಕೋವಿಡ್_19 ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಬಲಪಡಿಸುವ ಕೋರಿಕೆಗೆ ಸ್ಪಂದಿಸಿ, 50 ಲಕ್ಷ ರೂಪಾಯಿಗಳ ದೇಣಿಗೆಯ ಚೆಕ್ ಹಸ್ತಾಂತರಿಸಿದರು ಎಂದು ಫೋಟೋ ಸಮೇತ ಬರೆದುಕೊಂಡಿದ್ದಾರೆ.

    ಈ ಹಿಂದೆ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ 50 ಲಕ್ಷ ದೇಣಿಗೆ ನೀಡಿದ್ದರು. ಅವರು ಈ ಬಗ್ಗೆ ಟ್ವೀಟ್ ಮಾಡಿದ್ದ ಸಂಸದೆ, ಕೋವಿಡ್ -19 ಮಹಾಮಾರಿ ದೇಶದಲ್ಲಿ ಹರಡುತ್ತಿದ್ದು, ಅದರ ವಿರುದ್ಧದ ಹೋರಾಟದ ಸಂದರ್ಭದಲ್ಲಿ ನನ್ನ ಕಳಕಳಿಯ ಕೊಡುಗೆಯಾಗಿದೆ. ಮೊದಲಿಗೆ ಮಂಡ್ಯದ ಮಿಮ್ಸ್ ಗೆ ಕೊರೊನ ವಿರುದ್ಧ ಹೊರಾಡುವ ಸಲುವಾಗಿ ವೆಂಟಿಲೇಟರ್ ಮತ್ತು ಅಗತ್ಯ ಸಲಕರಣೆಗಳನ್ನು ಖರೀದಿಸಲು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 50 ಲಕ್ಷ ರೂ. ಗಳನ್ನು ನೀಡಿದ್ದೇನೆ ಎಂದು ಲೆಟರ್ ಪೋಸ್ಟ್ ಮಾಡಿದ್ದರು.

    ಇನ್ನೊಂದು ಟ್ವೀಟ್ ಮಾಡಿ, ಪ್ರಧಾನ ಮಂತ್ರಿಗಳ ತುರ್ತು ಪರಿಹಾರ ನಿಧಿಗೆ ನನ್ನ ಎರಡು ತಿಂಗಳ ವೇತನ 2 ಲಕ್ಷ ರೂ. ಗಳನ್ನು ದೇಣಿಗೆಯಾಗಿ ನೀಡಿದ್ದೇನೆ. ಅಲ್ಲದೆ ಎರಡು ತಿಂಗಳ ವೇತನ 2 ಲಕ್ಷ ರೂ. ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್-19ಕ್ಕೆ ನೀಡಿದ್ದೇನೆ ಎಂದು ಬರೆದುಕೊಂಡು ನರೇಂದ್ರ ಮೋದಿ, ಬಿಎಸ್ ಯಡಿಯೂರಪ್ಪ, ಶ್ರೀರಾಮುಲುಗೆ ಟ್ಯಾಗ್ ಮಾಡಿದ್ದರು.

  • ನೇತ್ರದಾನ ಮಾಡಿ: ಪವರ್ ಸ್ಟಾರ್ ಮನವಿ

    ನೇತ್ರದಾನ ಮಾಡಿ: ಪವರ್ ಸ್ಟಾರ್ ಮನವಿ

    ಬೆಂಗಳೂರು: ನೇತ್ರದಾನ ಮಾಡಿ ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    ವರನಟ ಡಾ.ರಾಜ್‍ಕುಮಾರ್ ಅವರು ನೇತ್ರದಾನ ಮಾಡುವ ಮೂಲಕ ಲಕ್ಷಾಂತರ ಅಭಿಮಾನಿಗಳಿಗೆ ಸ್ಫೂರ್ತಿ ಆಗಿದ್ದರು. ಅವರ ಹೆಸರಿನಲ್ಲಿ ಆರಂಭವಾದ ಡಾ.ರಾಜ್‍ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರವು ವಿವಿಧ ಕಡೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ನೇತ್ರದಾನದ ಬಗ್ಗೆ ಜಾಗೃತಿ ಹಾಗೂ ಉಚಿತ ಕಣ್ಣಿನ ತಪಾಸಣೆ ನಡೆಸುತ್ತಾ ಸಾಗುತ್ತಿದೆ.

    ಡಾ.ರಾಜ್‍ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರವು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಮಂಗಳವಾರ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮ ತಮ್ಮಿಕೊಂಡಿತ್ತು. ಈ ವಿಚಾರವನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮ ಟ್ವಿಟ್ಟರ್, ಫೇಸ್‍ಬುಕ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ.

    ನೇತ್ರ ದಾನ ಮಹಾ ದಾನ. ಡಾ.ರಾಜ್‍ಕುಮಾರ್ ಟ್ರಸ್ಟ್, ಬೆಂಗಳೂರು ಮತ್ತು ಡಾ.ರಾಜ್‍ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರ ಬಿಡದಿ ಸಂಸ್ಥೆಗಳು ಮಂಗಳವಾರ ಸಿದ್ಧಗಂಗಾ ಮಠದ ಸುಮಾರು 10,000 ಶಾಲಾ ಮಕ್ಕಳಿಗೆ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕಗಳ ವಿತರಣೆ ಕಾರ್ಯಕ್ರಮ ನೆರವೇರಿತು. ಶಾಲೆಯ 10,000 ಮಕ್ಕಳು ಒಟ್ಟಾಗಿ ನೇತ್ರಗಳ ರಕ್ಷಣೆ ನಮ್ಮ ಗುರಿ, ಪ್ರಾಕೃತಿಕ ಜೀವನ ನಮ್ಮ ದಾರಿ ಎಂಬ ಫಲಕವನ್ನು ಪ್ರದರ್ಶಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಿಸಲಾಯಿತು ಎಂದು ಪುನೀತ್ ರಾಜ್‍ಕುಮಾರ್ ತಿಳಿಸಿದ್ದಾರೆ.

    https://www.instagram.com/p/B5XWmuPJmIV/

    ಪುನೀತ್ ರಾಜ್‍ಕುಮಾರ್ ಅವರ ಟ್ವೀಟ್‍ಗೆ ಅನೇಕ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿರಾಜ್ ಬೆಳಗಾವಿ ರಿಟ್ವೀಟ್ ಮಾಡಿ, ಅಪ್ಪಾಜಿ ಹಾದಿಯಲ್ಲಿ ನಿಮ್ಮ ಪಯಣ ಹೀಗೆ ಸಾಗಲಿ. ಆ ಭಗವಂತನ ಕೃಪೆ ನಿಮ್ಮ ಮೇಲೆ ಸದಾಕಾಲವೂ ಇರುತ್ತ. ಹೀಗೆ ಅಪ್ಪು ಅಣ್ಣಾ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದ್ದಾರೆ.

  • ಕಿಸ್: ಸೂಪರ್ ಹಿಟ್ ಹಾಡುಗಳ ಮೆರವಣಿಗೆ!

    ಕಿಸ್: ಸೂಪರ್ ಹಿಟ್ ಹಾಡುಗಳ ಮೆರವಣಿಗೆ!

    ಬೆಂಗಳೂರು:  ವಿರಾಟ್ ಮತ್ತು ಶ್ರೀಲೀಲಾ ನಾಯಕ ನಾಯಕಿಯರಾಗಿ ಅಭಿನಯಿಸಿರುವ ಕಿಸ್ ಚಿತ್ರದ ಹಾಡುಗಳ ಹಂಗಾಮಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಈ ಮುದ್ದಾದ ಜೋಡಿ, ಅದಕ್ಕೆ ತಕ್ಕುದಾದ ಹಾಡುಗಳ ಮೂಲಕವೇ ಕಿಸ್ ಬಗ್ಗೆ ಪ್ರೇಕ್ಷಕರೆಲ್ಲರಿಗೂ ಮೋಹ ಮೂಡಿಕೊಂಡಿದೆ. ಈ ದಿಸೆಯಲ್ಲಿ ನಿರ್ದೇಶಕ ಎ.ಪಿ ಅರ್ಜುನ್ ಕಿಸ್ ಮೂಲಕವೂ ಹಾಡುಗಳೊಂದಿಗೆ ಸಿನಿಮಾ ಪ್ರೇಮಿಗಳನ್ನು ತಾಕುವ ತಮ್ಮತನವನ್ನು ಮುಂದುವರೆಸಿದ್ದಾರೆ.

     

    ಎ.ಪಿ ಅರ್ಜುನ್ ಚಿತ್ರಗಳೆಂದ ಮೇಲೆ ಪ್ರೇಕ್ಷಕರಿಗೆಲ್ಲ ಹಾಡುಗಳ ಬಗ್ಗೆ ಅಗಾಧವಾದ ನಿರೀಕ್ಷೆಗಳಿರುತ್ತವೆ. ಅಂಬಾರಿ ಚಿತ್ರದಿಂದ ಆರಂಭವಾಗಿ ಇಲ್ಲಿಯವರೆಗೂ ಅರ್ಜುನ್ ಅದನ್ನು ಸುಳ್ಳು ಮಾಡಿಯೇ ಇಲ್ಲ. ಆದರೆ ಕಿಸ್ ಹಾಡುಗಳು ಮಾತ್ರ ಅವರ ಈವರೆಗಿನ ದಾಖಲೆಗಳನ್ನೆಲ್ಲ ಬ್ರೇಕ್ ಮಾಡಿ ಮುನ್ನುಗ್ಗುತ್ತಿವೆ. ವಿ. ಹರಿಕೃಷ್ಣ ಮತ್ತು ಎ.ಪಿ ಅರ್ಜುನ್ ಜೋಡಿಯ ಮೆಲೋಡಿ ಕಾಂಬಿನೇಷನ್ ಕಿಸ್ ಮೂಲಕವೂ ಯಶಸ್ವಿಯಾಗಿ ಮುಂದುವರೆದಿದೆ.

    ಆರಂಭದಲ್ಲಿ ಬಿಡುಗಡೆಯಾಗಿದ್ದ ಶೀಲ ಸುಶೀಲ ಯೂ ಡೋಂಟುವರಿ ಹಾಡಿನ ಮೂಲಕವೇ ಕಿಸ್ ಏಕಾಏಕಿ ಸಂಚಲನ ಸೃಷ್ಟಿಸಿತ್ತು. ಅದಕ್ಕೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಿಕ್ಕ ವೀವ್ಸ್ ಬೆರಗಾಗುವಂತಿತ್ತು. ಇದೀಗ ಮಿಲಿಯಗಟ್ಟಲೆ ವೀವ್ಸ್‍ನೊಂದಿಗೆ ಅದು ಮುನ್ನುಗ್ಗುತ್ತಲೇ ಇದೆ. ಅದಾದ ನಂತರ ಬಂದ ಮೆಲೋಡಿ ಹಾಡಿಗೂ ಜನ ಫಿದಾ ಆಗಿದ್ದಾರೆ. ಇದೇ ಬಿಸಿಯಲ್ಲೀಗ ಬೆಟ್ಟೇಗೌಡ ವರ್ಸಸ್ ಚಿಕ್ಕಬೋರಮ್ಮ ಎಂಬ ಹಾಡು ಬಿಡುಗಡೆಯಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿ ಬಿಡುಗಡೆಗೊಳಿಸಿರೋ ಈ ಹಾಡು ಕೂಡಾ ಹಿಟ್ ಆಗಿದೆ.

    ಇನ್ನೇನು ಬಿಡುಗಡೆಗೆ ಅಣಿಗೊಂಡಿರೋ ಕಿಸ್ ಹಾಡುಗಳಷ್ಟೂ ಮೋಹಕವಾದ ಕಥೆಯನ್ನೂ ಒಳಗೊಂಡಿದೆ. ಕಿಸ್ ಎಂಬ ಪದವೇ ಅನೇಕರಲ್ಲಿ ಅವರದ್ದೇ ಆದ ನವಿರು ಭಾವಗಳು ಮೂಡಿಕೊಳ್ಳುತ್ತವೆ. ಅಂಥಾದ್ದೇ ನವಿರುತನ ಹೊಂದಿರೋ ಕಥೆಯಿರುವ ಈ ಸಿನಿಮಾದಲ್ಲಿ ಅಶ್ಲೀಲತೆಯ ಲವಲೇಷವೂ ಇಲ್ಲ. ಇದೊಂದು ಮುದ್ದಾದ ಲವ್ ಸ್ಟೋರಿ. ಆದದ್ದು ಬರೀ ಪ್ರೀತಿಗೆ ಮಾತ್ರವೇ ಸೀಮಿತವಾಗಿಲ್ಲ ಅನ್ನೋದು ಚಿತ್ರತಂಡದ ಮಾತು.

  • ಕಿಸ್: ನಾಳೆ ಬಿಡುಗಡೆಯಾಗಲಿದೆ ಪವರ್ ಸ್ಟಾರ್ ಹಾಡಿರೋ ಸ್ಪೆಷಲ್ ಸಾಂಗ್!

    ಕಿಸ್: ನಾಳೆ ಬಿಡುಗಡೆಯಾಗಲಿದೆ ಪವರ್ ಸ್ಟಾರ್ ಹಾಡಿರೋ ಸ್ಪೆಷಲ್ ಸಾಂಗ್!

    ಬೆಂಗಳೂರು: ವಿರಾಟ್ ಮತ್ತು ಶ್ರೀಲೀಲಾ ಜೋಡಿಯಾಗಿ ನಟಿಸಿರೋ ಕಿಸ್ ಬಿಡುಗಡೆಯ ಹಂತದಲ್ಲಿದೆ. ಈ ಹಿಂದೆಯೇ ಬಿಡುಗಡೆಯಾಗಿದ್ದ ಎರಡು ಹಾಡುಗಳು ಸೃಷ್ಟಿ ಮಾಡಿದ್ದ ಕ್ರೇಜ್ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಆಕರ್ಷಕ ಹಾಡನ್ನು ರೂಪಿಸಲಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿರೋ ಈ ಸ್ಪೆಷಲ್ ಸಾಂಗ್ ಅನ್ನು ನಾಳೆ ಸಂಜೆ ಬಿಡುಗಡೆಗೊಳಿಸಲು ಚಿತ್ರತಂಡ ತಯಾರಾಗಿದೆ.

    ಬೆಟ್ಟೇಗೌಡ ವರ್ಸಸ್ ಚಿಕ್ಕಬೋರಮ್ಮ ಎಂಬ ಈ ವಿಶೇಷವಾದ ಹಾಡನ್ನು ನಿರ್ದೇಶಕ ಎ ಪಿ ಅರ್ಜುನ್ ಅವರೇ ಬರೆದಿದ್ದಾರೆ. ಇದಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಿಂದೆ ಯಜಮಾನ ಚಿತ್ರದ ಬಸಣ್ಣಿ ಹಾಡಿಗೆ ಸಂಗೀತ ನೀಡಿ ಹಾಡುವ ಮೂಲಕ ಹರಿಕೃಷ್ಣ ಎಲ್ಲರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದರು. ಇದೀಗ ಕಿಸ್ ಮೂಲಕವೂ ಅಂಥಾದ್ದೇ ಟ್ರೆಂಡ್ ಸೆಟ್ ಮಾಡೋ ಮಹತ್ವಾಕಾಂಕ್ಷೆಯೊಂದಿಗೆ ಅವರು ಈ ಹಾಡನ್ನು ರೂಪಿಸಿದ್ದಾರೆ. ಇದು ನಾಳೆ ಸಂಜೆ 5 ಗಂಟೆ 1 ನಿಮಿಷಕ್ಕೆ ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಲಿದೆ.

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅತ್ತ ಯುವರತ್ನ ಚಿತ್ರದ ಚಿತ್ರೀಕರಣದ ನಡುವೆಯೂ ಬಲು ಪ್ರೀತಿಯಿಂದಲೇ ಈ ಹಾಡನ್ನು ಹಾಡಿದ್ದಾರೆ. ಇದರ ಸಾಹಿತ್ಯ ಮತ್ತು ಸಂಗೀತಕ್ಕೆ ಮನಸೋತಿದ್ದಾರೆ. ಈ ವರೆಗೂ ಹಲವಾರು ಚಿತ್ರಗಳಿಗೆ ಪುನೀತ್ ಹಾಡಿದ್ದಾರೆ. ಅವೆಲ್ಲವೂ ಹಿಟ್ ಕೂಡಾ ಆಗಿವೆ. ಕಿಸ್ ಚಿತ್ರದ ಬೆಟ್ಟೇಗೌಡನ ಹಾಡೂ ಕೂಡಾ ಆ ಹಿಟ್ ಲಿಸ್ಟಿಗೆ ದಾಖಲಾಗೋ ಭರವಸೆ ಚಿತ್ರತಂಡದಲ್ಲಿದೆ.

    ಎಪಿ ಅರ್ಜುನ್ ಹೊಸತನ ಹೊಂದಿರೋ ಪ್ರೇಮ ಕಥೆಯೊಂದನ್ನು ಕಿಸ್ ಮೂಲಕ ಹೇಳ ಹೊರಟಿದ್ದಾರೆ. ಆರಂಭದಲ್ಲಿಯೇ ಶೀಲ ಸುಶೀಲ ಯೂ ಡೋಂಟುವರಿ ಎಂಬ ರ್ಯಾಪ್ ಶೈಲಿಯ ಹಾಡನ್ನು ಬಿಡುಗಡೆಗೊಳಿಸಲಾಗಿತ್ತು. ಈ ಹಾಡಂತೂ ಯೂಟ್ಯೂಬ್‍ನಲ್ಲಿ ಹುಟ್ಟು ಹಾಕಿರೋ ಟ್ರೆಂಡ್ ಸಾಮಾನ್ಯವಾದುದೇನಲ್ಲ. ಅದರ ಬೆನ್ನಿಗೇ ಬಿಡುಗಡೆಯಾದ ಮೆಲೋಡಿ ಹಾಡೂ ಕೂಡಾ ಹಿಟ್ ಆಗಿದೆ. ಇದೀಗ ಆ ಸಾಲು ಸೇರಿಕೊಳ್ಳಲು ಬೆಟೇಗೌಡ ವರ್ಸಸ್ ಚಿಕ್ಕಬೋರಮ್ಮ ಎಂಬ ವಿಶೇಷ ಗೀತೆಯೂ ತಯಾರಾಗಿದೆ.

  • ಹುಬ್ಬಳ್ಳಿಗೆ ಬಂದಿಳಿದ ಪವರ್ ಸ್ಟಾರ್- ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ

    ಹುಬ್ಬಳ್ಳಿಗೆ ಬಂದಿಳಿದ ಪವರ್ ಸ್ಟಾರ್- ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ

    ಹುಬ್ಬಳ್ಳಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

    ಧಾರವಾಡದಲ್ಲಿ ಯುವರತ್ನ ಚಿತ್ರ ಶೂಟಿಂಗ್ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ನಂತರ ಅಲ್ಲಿಂದ ಕಾರಿನಲ್ಲಿ ಧಾರವಾಡಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪುನೀತ್ ಅವರು ವಿಮಾನ ನಿಲ್ಧಾನಕ್ಕೆ ಬಂದಿಳೀಯುತ್ತಿದ್ದಂತೆಯೇ ಅಭಿಮಾನಿಗಳು ಪುನೀತ್ ಅವರಿಗೆ ಶಾಲ್ ಹೊದಿಸಿ, ಮೈಸೂರು ಟೋಪಿ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದ್ರು.

    ಧಾರವಾಡದಲ್ಲಿ ಸುಮಾರು ಆರು ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಯಲಿದೆ. ಧಾರವಾಡ ನಗರದ ಯೂನಿವರ್ಸಿಟಿ, ಕರ್ನಾಟಕ ಕಾಲೇಜು ಸೇರಿದಂತೆ ಹಲವು ಕಡೆ ಚಿತ್ರದ ಶೂಟಿಂಗ್ ನಡೆಯಲಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ದರ್ಶನ್ ನಂತ್ರ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಲ್ಲಿ ಮನವಿ

    ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. ‘ರಾಜಕುಮಾರ’ ಚಿತ್ರದ ನಿರ್ಮಾಪಕ, ನಿರ್ದೇಶಕ ಹಾಗೂ ನಟನ ಕಾಂಬಿನೇಷನ್ ಯುವರತ್ನ ಚಿತ್ರದಲ್ಲಿ ಒಟ್ಟಾಗಿದ್ದು, ಫೆಬ್ರವರಿ 14 ರಂದು ಚಿತ್ರೀಕರಣ ಆರಂಭವಾಗಿದೆ. ಈ ಚಿತ್ರದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ 16 ವರ್ಷಗಳ ಹಿಂದೆ ತೆರೆಕಂಡಿದ್ದ ‘ಅಭಿ’ ಚಿತ್ರದ ಬಳಿಕ ಪುನೀತ್ ಮತ್ತೆ ಕಾಲೇಜ್ ಸ್ಟೂಡೆಂಟ್ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಟಾಶ್: ಪುನೀತ್ ಹಾಡಿದ ಉತ್ತರ ಕರ್ನಾಟಕದ ಪವರ್ ಫುಲ್ ಹಾಡು!

    ಮಟಾಶ್: ಪುನೀತ್ ಹಾಡಿದ ಉತ್ತರ ಕರ್ನಾಟಕದ ಪವರ್ ಫುಲ್ ಹಾಡು!

    ಬೆಂಗಳೂರು: ಎಸ್.ಡಿ ಅರವಿಂದ್ ನಿರ್ದೇಶನದ ಮಟಾಶ್ ಚಿತ್ರದ ಜವಾರಿ ಹಾಡೊಂದು ಈಗ ಟ್ರೆಂಡ್ ಸೆಟ್ ಮಾಡಿದೆ. ಗಾಯಕರಾಗಿ ಪುನೀತ್ ರಾಜ್ ಕುಮಾರ್ ಈ ಹಾಡಿನ ಮೂಲಕ ವಿಶಿಷ್ಟವಾಗಿಯೇ ಜನರನ್ನು ತಲುಪಿದ್ದಾರೆ. ಉತ್ತರ ಕರ್ನಾಟಕ ಭಾಗದ ಜಾನಪದ ಟಚ್ಚಿನ ಸಾಹಿತ್ಯ, ಅದಕ್ಕೊಪ್ಪುವ ಸಂಗೀತ ಮತ್ತು ಪವರ್ ಸ್ಟಾರ್ ಧ್ವನಿಯಲ್ಲಿ ಅನಾವರಣಗೊಂಡಿರೋ ಪವರ್ ಫುಲ್ ಹಾಡು… ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಟ್ರೆಂಡ್ ಸೆಟ್ ಮಾಡಲು ಮತ್ತೇನು ಬೇಕು?

    ‘ಚಜ್ಜಿರೊಟ್ಟಿ ಚವಳಿಕಾಯ್ ದುಡ್ಡಿಗೆ ಸೇರ್ ಬದನಿಕಾಯ್’ ಎಂಬ ಈ ಹಾಡಿಗೆ ನಿರ್ದೇಶಕ ಅರವಿಂದ್ ಅವರೇ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಜಾನಪದ ಸೊಗಡು ಮೆತ್ತಿದಂಥಾ ಈ ಹಾಡನ್ನು ಸುನೀಲ ಸುಧಾಕರ ಅವರು ಬರೆದಿದ್ದಾರೆ. ಈ ಹಾಡು ಬಿಡುಗಡೆಯಾಗಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಎಲ್ಲರಿಗೂ ಮತ್ತೇರಿಸಿದೆ!  ಇದನ್ನೂ ಓದಿಮಟಾಶ್ ಅಂದ್ರೆ ಅಂತ್ಯವಷ್ಟೇ ಮುಕ್ತಾಯವಲ್ಲ!

    ಈಗ ಎಲ್ಲೆಡೆ ‘ಚಜ್ಜಿರೊಟ್ಟಿ ಚವಳಿಕಾಯ್ ದುಡ್ಡಿಗೆ ಸೇರ್ ಬದನಿಕಾಯ್’ ಘಮ ಹರಡಿಕೊಂಡಿದೆ. ಒಂದು ವಿಶಿಷ್ಟವಾದ ಕಥಾನಕವನ್ನು ಮಟಾಶ್ ಚಿತ್ರದ ಮೂಲಕ ಹೇಳ ಹೊರಟಿರುವ ಅರವಿಂದ್ ಅವರು ಈ ಹಾಡಿನ ಮೂಲಕ ಮೋಡಿ ಮಾಡಿದ್ದಾರೆ. ಇದು ಪುನೀತ್ ಅವರ ಗಾಯನ ಯಾನದಲ್ಲಿಯೂ ಮಹತ್ವದ ಹಾಡಾಗಿ ದಾಖಲಾಗಿದೆ. ಯಾಕೆಂದರೆ, ಈವರೆಗೆ ಸಾಕಷ್ಟು ಹಾಡುಗಳನ್ನು ಹಾಡಿರೋ ಪುನೀತ್ ಈವರೆಗೂ ಉತ್ತರ ಕರ್ನಾಟಕ ಭಾಷೆಯ ಹಾಡು ಹಾಡಿರಲಿಲ್ಲ. ಇದು ಆ ಶೈಲಿಯಲ್ಲಿ ಪುನೀತ್ ಹಾಡಿರೋ ಮೊದಲ ಹಾಡಾಗಿಯೂ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏರ್‌ಪೋರ್ಟಲ್ಲಿ ಪವರ್ ಸ್ಟಾರ್ ಅಪ್ಪುಗೆ ಎದುರಾದ ಗೂಗ್ಲಿ!

    ಏರ್‌ಪೋರ್ಟಲ್ಲಿ ಪವರ್ ಸ್ಟಾರ್ ಅಪ್ಪುಗೆ ಎದುರಾದ ಗೂಗ್ಲಿ!

    ಬೆಂಗಳೂರು: ಕೆಲ ಸಂದರ್ಭಗಳಲ್ಲಿ ಸೆಲೆಬ್ರಿಟಿಗಳ ನಡುವೆ ಅನಿರೀಕ್ಷಿತ ಭೇಟಿ ಸಂಭವಿಸುತ್ತೆ. ಹಾಗೆ ಸಿಕ್ಕಾಗ ಯಾವ ಕ್ಷೇತ್ರದವರೇ ಆಗಿದ್ದರೂ ಪರಸ್ಪರ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೂ ಕೂಡಾ ಚೆನ್ನೈ ಏರ್‌ಪೋರ್ಟನಲ್ಲಿ ಅಂಥಾದ್ದೇ ಒಂದು ವಿಶೇಷ ವ್ಯಕ್ತಿತ್ವ ಹಠಾತ್ತನೆ ಎದುರಾಗಿದೆ!

    ಕೆಲಸದ ನಿಮಿತ್ತವಾಗಿ ಚೆನ್ನೈಗೆ ತೆರಳಿದ್ದ ಪುನೀತ್ ವಾಪಾಸಾಗುವಾಗ ಏರ್ ಪೋರ್ಟಿನಲ್ಲಿ ಅನಿಲ್ ಕುಂಬ್ಳೆ ಕಾಣಿಸಿಕೊಂಡಿದ್ದಾರೆ. ಸ್ವತಃ ಪುನೀತ್ ಅವರೇ ಬಳಿ ಸಾಗಿ ಮಾತಾಡಿಸಿದಾಗ ಹೌಹಾರಿದ ಕುಂಬ್ಳೆ ಆಲಿಂಗಿಸಿಕೊಂಡು ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ನಂತರ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

    ನಂತರ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ ಪುನೀತ್ ಅನಿಲ್ ಕುಂಬ್ಳೆಯವರನ್ನು ಭೇಟಿ ಮಾಡಿದ ಬಗ್ಗೆ ಖುಷಿಯಿಂದ ಹೇಳಿಕೊಂಡರೆ, ಅತ್ತ ಕುಂಬ್ಳೆ ಸಹ ಈ ಫೋಟೋ ಜಾಹೀರು ಮಾಡಿ ಪವರ್ ಸ್ಟಾರ್ ಭೇಟಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

    ವಿಶೇಷವೆಂದರೆ ಈ ಭೇಟಿ ಅನಿರೀಕ್ಷಿತವಾಗಿದ್ದರೂ ಅನಿಲ್ ಕುಂಬ್ಳೆ ಮತ್ತು ಪುನೀತ್ ರಾಜ್ ಕುಮಾರ್ ಕಪ್ಪು ಬಣ್ಣದ ಡ್ರೆಸ್ ಮೂಲಕ ಕಾಕತಾಳೀಯವೆಂಬಂತೆ ಕಂಗೊಳಿಸಿದ್ದಾರೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/Bma_EytAeZO/?hl=en&taken-by=puneethrajkumar.official

  • ನಟಸಾರ್ವಭೌಮನ ಸ್ಪೆಷಲ್ ಸಾಂಗ್ ಗೆ ‘ಪವರ್’ಫುಲ್ ಸ್ಟೆಪ್ಸ್!

    ನಟಸಾರ್ವಭೌಮನ ಸ್ಪೆಷಲ್ ಸಾಂಗ್ ಗೆ ‘ಪವರ್’ಫುಲ್ ಸ್ಟೆಪ್ಸ್!

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟಸಾರ್ವಭೌಮ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ನಿರ್ದೇಶಕ ಪವನ್ ಒಡೆಯರ್ ಅದ್ಧೂರಿಯಾದೊಂದು ಸೆಟ್ ರೆಡಿ ಮಾಡಿ ಅದರಲ್ಲಿ ವಿಶೇಷವಾದ ಪಾರ್ಟಿ ಸಾಂಗ್ ಒಂದನ್ನು ಚಿತ್ರೀಕರಿಸಿಕೊಂಡಿದ್ದಾರೆ. ಜೊತೆಗೆ ಈ ಹಾಡು ಪುನೀತ್ ಅಭಿಮಾನಿಗಳ ಪಾಲಿಗೆ ಹಬ್ಬವಾಗಲಿದೆ ಎಂಬ ಭರವಸೆಯ ಮಾತುಗಳನ್ನೂ ಆಡಿದ್ದಾರೆ.

    ಯೋಗರಾಜ ಭಟ್ ಬರೆದಿರುವ ಈ ಹಾಡಿಗೆ ಡಿ ಇಮ್ಮಾನ್ ಸಂಗೀತ ನೀಡಿದ್ದಾರೆ. ಇದಕ್ಕೆ ಸೂಪರ್ ಆಗಿರೋ ನೃತ್ಯ ಸಂಯೋಜನೆ ಮಾಡಿರುವವರು ಟಾಲಿವುಡ್‍ನ ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್. ಈ ಹಿಂದೆ ರಾಜಕುಮಾರ ಚಿತ್ರದಲ್ಲಿ ಅಪ್ಪು ಡ್ಯಾನ್ಸ್ ಹಾಡಿಗೆ ನೃತ್ಯ ಸಂಯೋಜನೆ ಮಾಡೋ ಮೂಲಕ ಪುನೀತ್ ಅಭಿಮಾನಿಗಳನ್ನು ಖುಷಿಪಡಿಸಿದ್ದ ಜಾನಿ ಮಾಸ್ಟರ್ ಈ ಚಿತ್ರದಲ್ಲಿಯೂ ಅಂಥಾದ್ದೇ ಕಮಾಲ್ ಸೃಷ್ಟಿಸೋ ಇರಾದೆಯೊಂದಿಗೇ ನೃತ್ಯ ಸಂಯೋಜನೆ ಮಾಡಿದ್ದಾರಂತೆ.

    ಪವನ್ ಒಡೆಯರ್ ಈ ಹಾಡಿಗೆಂದೇ ಭಾರೀ ರಿಸ್ಕು ತೆಗೆದುಕೊಂಡಿದ್ದಾರೆ. ಹಲವಾರು ಸಲ ಬದಲಾವಣೆ ಮಾಡುತ್ತಲೇ ಬೆಂಗಳೂರಿನಲ್ಲಿ ಅದ್ಧೂರಿ ಸೆಟ್ ಹಾಕಿಸಿ ಅದರಲ್ಲಿಯೇ ಇಡೀ ಹಾಡಿನ ಚಿತ್ರೀಕರಣವನ್ನು ಮಾಡಿ ಮುಗಿಸಿದ್ದಾರೆ. ಪುನೀತ್ ಚಿತ್ರವೆಂದ ಮೇಲೆ ಪ್ರೇಕ್ಷಕರು ಹೊಸಾ ಥರದ ನೃತ್ಯವನ್ನೂ ಅಪೇಕ್ಷಿಸುತ್ತಾರೆ. ಅಭಿಮಾನಿಗಳೂ ಕೂಡಾ ಅದಕ್ಕಾಗಿ ಕಾತರರಾಗಿರುತ್ತಾರೆ. ಅದನ್ನು ಗಮನದಲ್ಲಿಟ್ಟುಕೊಂಡೇ ಈ ಹಾಡನ್ನು ರೂಪಿಸಲಾಗಿದೆಯಂತೆ.

    ಭಟ್ಟರು ಬರೆದಿರೋ ಈ ವಿಶೇಷವಾದ ಈ ಹಾಡು ಟ್ರೆಂಡ್ ಸೆಟ್ ಮಾಡೋದರ ಜೊತೆಗೆ ಜಾನಿ ಮಾಸ್ಟರ್ ಸಾರಥ್ಯದಲ್ಲಿ ಪುನೀತ್ ಹಾಕಿರೋ ಸ್ಟೆಪ್ಸಿಗೆ ಅಭಿಮಾನಿ ವಲಯವೂ ಫಿದಾ ಆಗಲಿದೆ ಎಂಬ ಭರವಸೆ ಚಿತ್ರ ತಂಡದಲ್ಲಿದೆ!

  • ಅಭಿಮಾನಿ ಮನೆಗೆ ತೆರಳಿ ಸರಳತೆ ಮೆರೆದ ಸ್ಯಾಂಡಲ್ ವುಡ್ ಪವರ್ ಸ್ಟಾರ್

    ಅಭಿಮಾನಿ ಮನೆಗೆ ತೆರಳಿ ಸರಳತೆ ಮೆರೆದ ಸ್ಯಾಂಡಲ್ ವುಡ್ ಪವರ್ ಸ್ಟಾರ್

    ಬಳ್ಳಾರಿ: ಸ್ಯಾಂಡಲ್ ವುಡ್ ನಟ ಪುನಿತ್ ರಾಜ್‍ಕುಮಾರ್ ಗೆ ಅಭಿಮಾನಿಗಳು ಅಂದ್ರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿಯೇ ಪವರ್ ಸ್ಟಾರ್ ಪುನೀತ್ ಅವರನ್ನು ಅಭಿಮಾನಿಗಳು ಅತಿ ಹೆಚ್ಚಾಗಿ ಪ್ರೀತಿ ಮಾಡ್ತಾರೆ. ಹೀಗೆ ತಮ್ಮನ್ನು ಪ್ರೀತಿ ಮಾಡೋ ಅಭಿಮಾನಿಯೊಬ್ಬರ ಮನೆಗೆ ಪುನೀತ್ ರಾಜ್‍ಕುಮಾರ್ ಹೋಗಿ ಬಂದಿದ್ದಾರೆ.

    ರವಿವಾರ ಬಳ್ಳಾರಿಯಲ್ಲಿ ನಿರ್ದೇಶಕ ಸಂತೋಷ ಆನಂದರಾಮ್ ನಿಶ್ಚಿತಾರ್ಥ ಸಮಾರಂಭಕ್ಕೆ ಪುನೀತ್ ಆಗಮಿಸಿದ್ದರು. ಇದೇ ವೇಳೆ ಅವರು ಹೊಸಪೇಟೆಯ ಅಭಿಮಾನಿಯೊಬ್ಬರ ಮನೆಗೆ ಭೇಟಿ ನೀಡಿದ್ದರು. ಕಟ್ಟಾ ಅಭಿಮಾನಿಯಾಗಿರುವ ಕಿಚಡಿ ವಿಶ್ವ ಎಂಬವರ ಮನೆಗೆ ತೆರಳಿದ ಪುನೀತ್ ರಾಜ್‍ಕುಮಾರ್ ಅವರನ್ನು ಅಭಿಮಾನಿ ಕುಟುಂಬದವರೆಲ್ಲಾ ಆರತಿ ಬೆಳಗಿ ಸ್ವಾಗತಿಸಿ, ಸನ್ಮಾನಿಸಿ, ಗೌರವಿಸಿದ್ದಾರೆ.

    ಸಹೋದರಿ ರೇಣುಕಾರ ಮದುವೆ ಸಮಾರಂಭಕ್ಕೆ ಆಗಮಿಸುವಂತೆ ಈ ಹಿಂದೆ ವಿಶ್ವ ಕುಟುಂಬ ಆಹ್ವಾನವನ್ನು ನೀಡಿತ್ತು. ಅದರೆ ಅಂದು ಪಾರ್ವತಮ್ಮ ರಾಜಕುಮಾರ್ ಅವರಿಗೆ ಅನಾರೋಗ್ಯ ಇದ್ದ ಹಿನ್ನಲೆಯಲ್ಲಿ ಪುನೀತ್ ರಾಜ್‍ಕುಮಾರ್ ಮದುವೆ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿಯೇ ಪುನೀತ್ ರಾಜ್ ಕುಮಾರ್ ಇತ್ತೀಚೆಗೆ ಹೊಸಪೇಟೆಗೆ ಬಂದಾಗ ವಿಶ್ವ ಅವರು ಅಂದು ನೀಡಿದ್ದ ಆಹ್ವಾನವನ್ನು ಮರೆಯದೇ ಅವರ ನಿವಾಸಕ್ಕೆ ಭೇಟಿ ನೀಡಿ ಸರಳತೆ ಮೆರೆದಿದ್ದಾರೆ.

    ಇದನ್ನೂ ಓದಿ: `ರಾಜಕುಮಾರ’, `Mr & Mrs ರಾಮಾಚಾರಿ’ ಚಿತ್ರದ ನಿರ್ದೇಶಕರಿಗೆ ನಿಶ್ಚಿತಾರ್ಥ