Tag: power star
-

ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ: ಕನ್ನಡದಲ್ಲಿಯೇ ಕೇಜ್ರಿವಾಲ್ ಟ್ವೀಟ್
ನವದೆಹಲಿ: ಸ್ಯಾಂಡಲ್‌ವುಡ್ (Sandalwood) ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ (PowerStar Puneeth Raj Kumar) ಅವರು ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷವಾಯಿತು. ಈ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು, ಗಣ್ಯರು ಹಾಗೂ ಅಭಿಮಾನಿಗಳು ಸೇರಿದಂತೆ ಎಲ್ಲರೂ ಅಪ್ಪುವನ್ನು ಪ್ರತನಿತ್ಯದಂತೆ ಇಂದು ಕೂಡ ಸ್ಮರಿಸಿಕೊಂಡಿದ್ದಾರೆ. ಈ ಮಧ್ಯೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಕೂಡ ಅಪ್ಪುವನ್ನು ನೆನಪು ಮಾಡಿಕೊಂಡಿದ್ದು, ಗಮನಸೆಳೆದಿದೆ.

ಹೌದು. ಕನ್ನಡದಲ್ಲಿಯೇ ಟ್ವೀಟ್ ಮಾಡಿರುವ ಕೇಜ್ರಿವಾಲ್, ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನಗಳು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಡಾ ಪುನೀತ್ ರಾಜ್‍ಕುಮಾರ್ ಅವರ ಪುಣ್ಯತಿಥಿಯಾಗಿರುವ ಇಂದು ಅವರನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅವರು ನಟಿಸಿರುವ ಸಿನಿಮಾ, ಹಾಡುಗಳು ಮತ್ತು ಸಾಮಾಜಿಕ ಕಾರ್ಯಗಳು ಅವರು ನಮ್ಮನ್ನು ಎಂದಿಗೂ ಬಿಟ್ಟು ಹೋಗಿಲ್ಲ ಎಂದು ಅನಿಸುತ್ತದೆ. ಅವರು ಯಾವತ್ತೂ ಪವರ್ ಸ್ಟಾರ್ ಆಗಿಯೇ ಇರುತ್ತಾರೆ ಎಂದು ತಿಳಿಸಿದ್ದಾರೆ.
ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ.
I profoundly remember the Icon – Dr Puneeth Rajkumar on his death anniversary.
His movies, songs, kindness & social works make us feel he never left us. He will always be a power star of #Karunadu #AppuLivesOn #DrPunithRajkumar
— Arvind Kejriwal (@ArvindKejriwal) October 29, 2022
ಕಳೆದ ವರ್ಷ ಅಕ್ಟೋಬರ್ 29ರಂದು ಹೃದಯ ಸ್ತಂಭನಕ್ಕೆ ಒಳಗಾಗಿ ಅಪ್ಪು ಅವರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅಪ್ಪು ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಅಪ್ಪು ಸಮಾಧಿಯತ್ತ ಅಭಿಮಾನಿಗಳ ದಂಡೇ ಹರಿದುಬರುತ್ತಿದೆ. ಇಂದು ರಾಜ್ ಕುಮಾರ್ ಕುಟುಂಬಸ್ಥರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ ಬೆಳಗ್ಗಿಂದ ಸಂಜೆಯವರೆಗೂ ಅಭಿಮಾನಿಗಳಿಗೆ ಅನ್ನಸಂತರ್ಪನೆ ಕೂಡ ನಡೆಯುತ್ತಿದೆ.
Live Tv
[brid partner=56869869 player=32851 video=960834 autoplay=true] -

ಯಾರ ಹೊಟ್ಟೆಯಲ್ಲಾದ್ರೂ ಮತ್ತೊಮ್ಮೆ ಹುಟ್ಟಿ ಬಾರಪ್ಪ- ವೃದ್ಧೆ ಕಣ್ಣೀರು
ನಟ ಪುನೀತ್ ರಾಜ್ ಕುಮಾರ್ (Puneeth Raj Kumar) ಅರು ನಮ್ಮನ್ನಗಲಿ ಇಂದಿಗೆ ಭರ್ತಿ ಒಂದು ವರ್ಷವಾಗಿದೆ. ಅಂದಿನಿಂದಲೂ ಇಂದಿನವರೆಗೂ ಅಭಿಮಾನಿಗಳು ಮಾತ್ರ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಅಪ್ಪುವನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಇಂದು ಕೂಡ ಅಭಿಮಾನಿಗಳ ದಂಡು ಸಮಾಧಿಯತ್ತ ಹರಿದುಬರುತ್ತಿದ್ದು, ಕಣ್ಣೀರಾಕುತ್ತಿದ್ದಾರೆ.

ಕಂಠೀರವ ಸ್ಟುಡಿಯೋ (Kanteerava Studio) ಮುಂಭಾಗದಲ್ಲಿ ಅಭಿಮಾನಿಗಳು ನೆರೆದಿದ್ದು, ಅಪ್ಪು ಫೋಟೋ ನೋಡಿಕೊಂಡು ಮಹಿಳಾ ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದಾರೆ. ಅಂತೆಯೇ ಶಿವಮೊಗ್ಗದಿಂದ ಬಂದಿರುವ ವೃದ್ಧೆಯೊಬ್ಬರು ಮತ್ತೊಮ್ಮೆ ಹುಟ್ಟಿ ಬನ್ನಿ. ಯಾರ ಹೊಟ್ಟೆಯಲ್ಲಾದರೂ ಸರಿ ಮತ್ತೊಮ್ಮೆ ಹುಟ್ಟಿ ಬಾರಪ್ಪ ಅಂತ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು `ಗಂಧದಗುಡಿ’ ತೊರೆದು 1 ವರ್ಷ- ನೋವು, ಕಣ್ಣೀರಿನ ಮಧ್ಯೆ ಪುಣ್ಯಸ್ಮರಣೆ

ಇತ್ತ ಗುಬ್ಬಿಯಿಂದ ಬಂದಿರುವ ವೃದ್ಧೆ ಸುಮಿತ್ರಾ ಬಾಯಿ ಕಡ್ಲೆಪುರಿ ಹಾಗೂ ಬತ್ತಾಸು ಹಾರ ತಂದಿದ್ದಾರೆ. 20 ದಿನಗಳ ಕಾಲ ಸೂಕ್ಷ್ಮವಾಗಿ ಕಡ್ಲೆಪುರಿಗಳನ್ನು ಪೋಣಿಸಿ ಇದರ ಮಧ್ಯೆ ಬತ್ತಾಸು ಸೇರಿಸಿ ಅಜ್ಜಿ ಹಾರ ತಯಾರಿಸಿದ್ದಾರೆ. ಇದೀಗ ಈ ಹಾರದೊಂದಿಗೆ ಅಪ್ಪು ಸಮಾಧಿಗೆ ಭೇಟಿ ನೀಡಿದ್ದು, ಅಶ್ವಿನ್ ಪುನೀತ್ ರಾಜ್ ಕುಮಾರ್ ಅವರಿಂದ ಸಮಾಧಿಗೆ ಹಾಕಲು ನಿರ್ಧರಿಸಿದ್ದಾರೆ. ಹೀಗಾಗಿ ಅಸೌಇನಿ ಅವರ ಬರುವಿಕೆಗಾಗಿ ಅಜ್ಜಿ ಕಾಯುತ್ತಾ ಕುಳಿತಿದ್ದಾರೆ.

ಇನ್ನೊಂದೆಡೆ ಬೆಣ್ಣೆಯಲ್ಲಿ ಅಪ್ಪು ಪುತ್ಥಳಿ ಕೆತ್ತನೆ ಮಾಡಿ ಕಲಾವಿದರು ಸಮಾಧಿ ಬಳಿ ತಂದಿದ್ದಾರೆ. ಬೆಂಗಳೂರಿನ ಚೆನ್ನೈಸ್ ಅಮೃತಾ ಕಲಾ ಸಂಸ್ಥೆಯ ಕಲಾವಿದರ ಕೈ ಚಳಕದಿಂದ 46 ಕೆಜಿ ಬೆಣ್ಣೆಯಲ್ಲಿ ಪುನೀತ್ ಫೋಟೋ ಅರಳಿದೆ. ಬೆಣ್ಣೆಯ ಪುತ್ಥಳಿಗೆ ಅಪ್ಪು ಅಭಿಮಾನಿಗಳು ಫಿದಾ ಆಗಿದ್ದಾರೆ. ಹೀಗೆ ಅಭಿಮಾನಿಗಳು ವಿವಿಧ ರೀತಿಯಲ್ಲಿ ಇಂದು ಕರ್ನಾಟಕ ರತ್ನಿಗೆ ಗೌರವ ಸಲ್ಲಿಸುತ್ತಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 29ರಂದು ಹೃದಯ ಸ್ತಂಭನಕ್ಕೆ ಒಳಗಾಗಿ ಅಪ್ಪು ಅವರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
Live Tv
[brid partner=56869869 player=32851 video=960834 autoplay=true] -

ದಾಖಲೆ ಬರೆದ ಜೇಮ್ಸ್ – ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಪುನೀತ್ ಚಿತ್ರ
ಬೆಂಗಳೂರು: ಕರ್ನಾಟಕ ರತ್ನ ಡಾ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ದಾಖಲೆ ಬರೆದಿದೆ. ಜೇಮ್ಸ್ ನಾ ಆರ್ಭಟಕ್ಕೆ ದಾಖಲೆಗಳು ಉಡೀಸ್ ಆಗಿವೆ. ಒಂದೇ ದಿನದಲ್ಲಿ ಸಿನಿಮಾದ ಕಲೆಕ್ಷನ್ ಹಿಸ್ಟರಿ ಕ್ರಿಯೇಟ್ ಮಾಡಿದೆ. ಹೀಗಾಗಿ ಚಿತ್ರತಂಡ ಸಕ್ಸಸ್ ಮೀಟ್‍ಗೆ ಪ್ಲ್ಯಾನ್ ಕೂಡ ಮಾಡ್ತಿದೆ.

ಹೌದು. ಪ್ರೀತಿಯ ಅಪ್ಪು ಕರ್ನಾಟಕ ರತ್ನ, ಡಾ. ಪುನೀತ್ ರಾಜ್‍ಕುಮಾರ್ ಅಗಲಿಕೆ ನೋವಿನಿಂದ ನಾಡಿನ ಜನ ಇನ್ನೂ ಹೊರಬಂದಿಲ್ಲ. ಈ ಮಧ್ಯೆ ಅಪ್ಪು ಕೊನೆಯ ಸಿನಿಮಾ ಜೇಮ್ಸ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೀತಿದೆ. ಇದನ್ನೂ ಓದಿ: ಪುನೀತ್ ಗೆ ಮರಣೋತ್ತರ ‘ ಸಹಕಾರ ರತ್ನ’ ಪ್ರಶಸ್ತಿ: ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆ

ಜೇಮ್ಸ್ ಸಿನಿಮಾ ವಿಶ್ವದಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ನಿನ್ನೆ ಒಂದೇ ದಿನ 30 ಕೋಟಿ ಕಲೆಕ್ಷನ್ ಆಗಿದೆ. ಡಿಜಿಟಲ್ ರೈಟ್ಸ್, ಸ್ಯಾಟಲೈಟ್ ರೈಟ್ಸ್, ಮೊದಲ ದಿನ ಕಲೆಕ್ಷನ್ ಸೇರಿ ಜೇಮ್ಸ್ ಈಗ 100 ಕೋಟಿ ಕ್ಲಬ್ ಸೇರಿದೆಯಂತೆ. ಇನ್ನೂ ಜೇಮ್ಸ್ ಸಿನಿಮಾ ಸಕ್ಸಸ್ ಅನ್ನು ವಿಜಯಾತ್ರೆ ಮಾಡ್ತೆವೆ. ಸಕ್ಸಸ್ ಮೀಟ್ ಮಾಡೋ ಪ್ಲಾನ್‍ನಲ್ಲಿ ಚಿತ್ರತಂಡ ಇದೆ. ಈ ಬಗ್ಗೆ ಶಿವಣ್ಣನ ಜೊತೆ ಮಾತನಾಡಿ ನಿರ್ಧಾರ ಮಾಡಲಿದೆ.

ಅಪ್ಪು ಅಭಿಮಾನಿಗಳು, ದೊಡ್ಮನೆ ಕುಟುಂಬಸ್ಥರಿಗೆ ನಿರ್ದೇಶಕ ಚೇತನ್ ಕೃತಜ್ಞತೆ ಸಲ್ಲಿಸಿದ್ದಾರೆ. ಒಟ್ಟಾರೆ ಜೇಮ್ಸ್ ಸಿನಿಮಾ ರಿಲೀಸ್ ಆದ ಮೊದಲನೇ ದಿನವೇ ದಾಖಲೆಗಳನ್ನ ಉಡೀಸ್ ಮಾಡಿದೆ. ಸಕ್ಸಸ್ ಮೀಟ್ ಮಾಡುವ ಪ್ಲ್ಯಾನ್ ನಲ್ಲಿ ಚಿತ್ರತಂಡ ಮಾಡ್ತಿದ್ದು. ಸಕ್ಸಸ್ ಮೀಟ್ ಎಲ್ಲಿ ಯಾವ ರೀತಿ ಇರುತ್ತೋ ಕಾದು ನೋಡಬೇಕಿದೆ. ಇದನ್ನೂ ಓದಿ: ಜೇಮ್ಸ್ ರಿಲೀಸ್ ಬಳಿಕ ಅಪ್ಪು ನೆನೆದು ಕಣ್ಣೀರಿಟ್ಟ ಶಿವಣ್ಣ
-

ಟಿವಿಯಲ್ಲಿ ಬಂದಾಗ ಜೇಮ್ಸ್ ಚಿತ್ರ ನೋಡ್ತೀನಿ: ಸಿದ್ದರಾಮಯ್ಯ
ಬೆಂಗಳೂರು: ಟಿವಿಯಲ್ಲಿ ಬಂದಾಗ ಜೇಮ್ಸ್ ಚಿತ್ರ ನೋಡ್ತೀನಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ಆತ್ಮಕ್ಕೆ ಚಿರ ಶಾಂತಿ ಸಿಗಲಿ. ಎಲ್ಲಾರು ಜೇಮ್ಸ್ ಚಿತ್ರ ನೋಡಿ. ನಾನು ಸಾಮಾನ್ಯವಾಗಿ ಚಲಚಿತ್ರ ನೋಡಲು ಥಿಯೇಟರ್ ಗೆ ಹೋಗಲ್ಲ. ಯಾರಾದರೂ ಒತ್ತಾಯ ಮಾಡಿ ಕರೆದಾಗ ಹೋಗಿದ್ದೇನೆ. ಸ್ವಲ್ಪ ನೋಡಿ ಎದ್ದು ಬಂದಿದ್ದು ಇದೆ. ಜೇಮ್ಸ್ ಚಿತ್ರ ನೋಡ್ತೀನಿ ಟಿವಿಯಲ್ಲಿ ಬಂದಾಗ ಎಂದರು. ಇದನ್ನೂ ಓದಿ: ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂ

ಜೇಮ್ಸ್ ಸಿನಿಮಾಗೆ ಟ್ಯಾಕ್ಸ್ ವಿನಾಯಿತಿ ಕೊಡಬೇಕು ಎಂದು ಒತ್ತಾಯಿಸುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ಬೊಮ್ಮಾಯಿಗೆ ಅವರ ಮೇಲೆ ಪ್ರೀತಿ ಇದೆ. ಪುನೀತ್ ಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕು. ಇದರ ಬಗ್ಗೆ ಒತ್ತಾಯ ಮಾಡಿದ್ದೇನೆ. ಪುನೀತ್ ಜನಪ್ರಿಯ ನಾಯಕ. ರಾಜ್ ಕುಮಾರ್ ಇದ್ದಾಗ ನನ್ನನ್ನು ನಮ್ಮ ಕಾಡಿನವರು ಅಂತ ಹೇಳುತ್ತಿದ್ರು ಎಂದು ಹಳೆಯ ನೆನಪನ್ನು ಮೆಲುಕು ಹಾಕಿಕೊಂಡರು.
-

ಅಪ್ಪುಗೆ ಯಾವುದೇ ರೀತಿಯ Attitude ಇರಲಿಲ್ಲ: ಹಿರಿಯ ನಟ ಸುಮನ್
ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ಯಾವುದೇ ರೀತಿಯ ಆಟಿಟ್ಯೂಡ್ ಇರಲಿಲ್ಲ. ಅವರ ಜೀವನ ಶೈಲಿ ಹಲವರಿಗೆ ಮಾರ್ಗದರ್ಶನ ಎಂದು ತೆಲುಗು ಹಿರಿಯ ನಟ ಸುಮನ್ ಹೇಳಿದರು.
ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಇಂದು ಅವರ ಸಮಾಧಿಗೆ ಬೇಟಿ ಕೊಟ್ಟ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಅಪ್ಪು ಅಗಲಿಕೆ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಲಾಸ್ ಆಗಿದೆ. ಇಂದು ಪುನೀತ್ ರಾಜ್ ಕುಮಾರ್ ಅವರ ಜನ್ಮದಿನ. ಅವರ ಸಮಾಜಸೇವೆ ಅವರ ಚಿಂತನೆ ತುಂಬಾ ಮೆಚುರ್ಡ್ ಆಗಿದೆ. ನಟನೆ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಭಾವುಕರಾದರು. ಇದನ್ನೂ ಓದಿ: ಅಪ್ಪು ಸಮಾಧಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್

ಚಿಕ್ಕ ವಯಸ್ಸಿನಲ್ಲೆ ತುಂಬಾ ಮೆಚುರ್ಡ್ ಥಿಂಕಿಂಗ್ ಅವರಲ್ಲಿತ್ತು. ತುಂಬಾ ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಗಿರೋದು ನೋವು ತಂದಿದೆ. ಅಪ್ಪುಗೆ ಯಾವುದೇ ರೀತಿಯ ಆಟ್ಯಿಡ್ಯೂಡ್ ಇರಲಿಲ್ಲ. ಅವರ ಜೀವನ ಶೈಲಿ ಹಲವರಿಗೆ ಮಾರ್ಗದರ್ಶನ ಆಗಿದೆ ಎಂದು ಹೇಳುತ್ತಾ ಇಂದು ಜೇಮ್ಸ್ ರಿಲೀಸ್ ಆಗಿದೆ ಶುಭ ಹಾರೈಸುತ್ತೇವೆ ಅಂದ್ರು. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಹುಟ್ಟಹುಬ್ಬ- ಬಿಎಸ್‍ವೈ, ಬೊಮ್ಮಾಯಿ ಹೇಳಿದ್ದೇನು..?

ಇಂದು ಪುನೀತ್‍ಗೆ 47 ವರ್ಷದ ಹುಟ್ಟುಹಬ್ಬವಾಗಿದ್ದು, ಇಂದೇ ಅಪ್ಪು ನಟನೆಯ ಕೊನೆಯ ಸಿನಿಮಾ ಜೇಮ್ಸ್ ಕೂಡ ರಿಲೀಸ್ ಆಗಿದೆ. ಈ ಮೂಲಕ ಅಭಿಮಾನಿಗಳ ಸಂಭ್ರಮ ಇಮ್ಮಡಿಯಾಗಿದೆ. ಆದರೆ ಈ ನಡುವೆ ಅಪ್ಪು ಇಲ್ಲ ಅನ್ನೋ ನೋವು ಕೂಡ ಅಭಿಮಾನಿಗಳಲ್ಲಿದೆ. ರಾಜ್ಯದ ಥಿಯೇಟರ್ ಗಳ್ಲಿ ಜೇಮ್ಸ್ ಜಾತ್ರೆ ಈಗಾಗಲೇ ಆರಂಭವಾಗಿದ್ದು, ಅಪ್ಪು ಚಿತ್ರ ನೋಡಿ ಕರುನಾಡು ಕಣ್ಣಿರಾಗಿದೆ. ಇದನ್ನೂ ಓದಿ: ಡಾ.ಪುನೀತ್ ರಾಜ್‍ಕುಮಾರ್ 47ನೇ ಜನ್ಮದಿನ – ಸಮಾಧಿ ಬಳಿ ಕೇಕ್ ಕತ್ತರಿಸಿದ ದೊಡ್ಮನೆ ಕುಟುಂಬ
-

ಹೊಸ ಮೆಟ್ರೋ ನಿಲ್ದಾಣಕ್ಕೆ ಅಪ್ಪು ಹೆಸರಿಡುವಂತೆ ಒತ್ತಾಯ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ 3 ತಿಂಗಳು ಕಳೆದ್ರೂ ಇಂದಿಗೂ ಕೋಟ್ಯಂತರ ಮನಗಳು ಪುನೀತ್‍ಗಾಗಿ ಮಿಡಿಯುತ್ತಿವೆ.

ಪುನೀತ್ ಅಗಲಿದ ಬಳಿಕ ಪ್ರತಿಮೆ ಸ್ಥಾಪನೆ ಮಾಡಿದ್ದು ಆಯ್ತು, ನೂರಾರು ಸಮಾಜ ಸೇವೆ ಮಾಡಿದ್ದೂ ಆಯ್ತು. ಇದೀಗ ಬೆಂಗಳೂರಿನ ಪುಲಕೇಶಿ ನಗರದ ಪಾಟರಿ ರಸ್ತೆಯಲ್ಲಿರೋ ಫೆದರ್ ಲೈಟ್ ಶಾಲೆ ಬಳಿ ಹೊಸ ಮೆಟ್ರೋ ನಿಲ್ದಾಣ ನಿರ್ಮಾಣವಾಗ್ತಿದ್ದು, ಇದಕ್ಕೆ ಅಪ್ಪು ಹೆಸರಿಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಹೀಗಾಗಿ ಕರ್ನಾಟಕ ಬಹುಜನ ಫೆಡರೇಷನ್ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜೊತೆಗೆ ಬಿಎಂಆರ್ ಸಿಎಲ್ ಗೂ ಪತ್ರ ಬರೆದಿದೆ. ಇದನ್ನೂ ಓದಿ: ಇತಿಹಾಸದ ಪುಟಕ್ಕೆ ಮೊದಲ ಮಹಿಳಾ ಕನ್ನಡ ಶಾಲೆ – ವಿವೇಕನಾಂದರ ಸ್ಮಾರಕ ನಿರ್ಮಾಣಕ್ಕೆ ನೆಲಸಮ

ಮನವಿ ಪುರಸ್ಕರಿಸಿ ವಿಚಾರ ಮಾಡೋದಾಗಿ ಪ್ರಧಾನಿ ಕಚೇರಿ ಉತ್ತರ ಕೊಟ್ರೆ, ಇತ್ತ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಛೋಪ್ರಾ ಕೂಡ ಅಪ್ಪು ಹೆಸರಿಡೋದಾಗಿ ಭರವಸೆ ನೀಡಿದ್ದಾರೆ. ಆದರೆ ಬಿಬಿಎಂಪಿ, ಬಿಡಿಎಜೊತೆ ಚರ್ಚಿಸಿ ಬಿಎಂಆರ್ ಸಿಎಲ್ ಒಪ್ಪಿಗೆ ಪಡೆಯಬೇಕಿದೆ. ಇದಾದ ಬಳಿಕ ಕಮಿಟಿ ಓಕೆ ಅಂದ್ರೆ ಮೆಟ್ರೋ ನಿಲ್ದಾಣಕ್ಕೆ ಪುನೀತ್ ಹೆಸರು ನಾಮಕರಣ ಮಾಡಲಾಗುತ್ತೆ.

-

ಪುನೀತ್ ಫೋಟೋಗಳಿಗೆ ಫುಲ್ ಡಿಮಾಂಡ್ – ಅಂಗಡಿ, ದೇವರ ಮನೆಯಲ್ಲಿಟ್ಟು ಪೂಜೆ
– ಕೆನಡಾಗೂ ಸೇಲ್ ಆಗ್ತಿವೆ ಅಮರಶ್ರೀ ಫೋಟೋ
ಬೆಂಗಳೂರು: ಪವರ್ ಸ್ಟಾರ್, ಕನ್ನಡಿಗರ ಪ್ರೀತಿಯ ಅಪ್ಪು, ರಾಜಕುಮಾರ ನಮ್ಮನ್ನೆಲ್ಲ ಅಗಲಿ 3 ತಿಂಗಳು ಕಳೆದಿದೆ. ಆದರೆ ಅಪ್ಪು ನೆನಪಿಂದ ಸ್ನೇಹಿತರು, ಚಿತ್ರರಂಗ, ಕುಟುಂಬಸ್ಥರು ಹಾಗೂ ಅವರ ಅಭಿಮಾನಿಗಳು ಇನ್ನೂ ಹೊರ ಬಂದಿಲ್ಲ. ಕರುನಾಡಿಗಂತೂ ಅಪ್ಪು ಅಗಲಿಕೆ ತಮ್ಮ ಕುಟುಂಬದ ಮನೆ ಸದಸ್ಯರನ್ನೇ ಕಳೆದುಕೊಂಡಂತೆ ಆಗಿದೆ.

ದೊಡ್ಮನೆ ತಮ್ಮ ಅಭಿಮಾನಿಗಳನ್ನ ದೇವರು ಅಂತ ಕರೆಯುತ್ತೆ. ಆದರೆ ದೊಡ್ಮನೆ ಮಗನೇ ನಮ್ ದೇವರು ಅಂತ ಅಭಿಮಾನಿಗಳು ಪೂಜಿಸ್ತಿದ್ದಾರೆ. ಅಂಗಡಿ, ಹೋಟೆಲ್, ಮಾಲ್ ಅಷ್ಟೇ ಏಕೆ ತಮ್ಮ ಮನೆಯ ದೇವರ ಕೋಣೆಯಲ್ಲೂ ಅಪ್ಪು ಫೋಟೋ ಇಟ್ಟು ನಿತ್ಯ ಪೂಜೆ ಸಲ್ಲಿಸ್ತಿದ್ದಾರೆ.

ಜಮ್ಮು ಕಾಶ್ಮೀರ, ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ, ಕೆನಡಾ ಸೇರಿದಂತೆ ಹಲವು ಭಾಗಗಳಿಗೆ ಪುನೀತ್ ಫೋಟೋ ಅತೀ ಹೆಚ್ಚು ಮಾರಾಟವಾಗ್ತಿದೆ. ವಿಶೇಷ ಅಂದ್ರೆ ಜಮ್ಮು ಕಾಶ್ಮೀರದ ಇಂಡಿಯನ್ ಆರ್ಮಿ ಸೇನಾನಿಗಳಿಗೂ ಪುನೀತ್ ಫೋಟೋ ಬೆಂಗಳೂರಿನಿಂದ ಪಾರ್ಸೆಲ್ ಆಗಿದೆಯಂತೆ.

ಇತ್ತ ಅಪ್ಪು ಸಮಾಧಿಗೆ ಬಂದವರೆಲ್ಲರೂ ಪುನೀತ್ ಫೋಟೋ ಖರೀದಿಸಲು ಮಿಗಿಬೀಳ್ತಿದ್ದಾರೆ. ಲೋಕೇಶ್ ಎಂಬವರು ಪುನೀತ್ ಸಮಾಧಿ ಬಳಿ ಅಪ್ಪು ಫೋಟೋಗಳನ್ನು ಸೇಲ್ ಮಾಡ್ತಿದ್ದು ನಿತ್ಯ 300ಕ್ಕೂ ಹೆಚ್ಚು ಫೋಟೋಗಳು ಸೇಲ್ ಆಗ್ತಿವೆ. ಅಪ್ಪು ಫೋಟೋ ಖರೀದಿ ಮಾಡ್ತಿರೋ ಅಭಿಮಾನಿಗಳು ಅಪ್ಪು ನೆನೆದು ಕಣ್ಣೀರು ಹಾಕ್ತಿದ್ದಾರೆ.

ಒಟ್ಟಿನಲ್ಲಿ ಅಪ್ಪು ಇಲ್ಲದ ಕೊರಗು ಇನ್ನಿಲ್ಲದಂತೆ ಕಾಡುತ್ತಿದೆ. ಅಪ್ಪು ನೆನಪಲ್ಲೇ ಅವ್ರ ಅಭಿಮಾನಿಗಳು ದಿನದೂಡುತ್ತಿದ್ದಾರೆ. ಇದನ್ನೂ ಓದಿ: ಬೆಳಗಾವಿ ಮಾತ್ರವಲ್ಲ, ಬೆಂಗ್ಳೂರಲ್ಲೂ ಅನ್ಯಭಾಷಿಕರ ದರ್ಬಾರ್ – ಪಬ್‍ನಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ಹಲ್ಲೆ ಯತ್ನ
-

ಒಳ್ಳೆತನದಲ್ಲಿ ಎಂದಿಗೂ ಜೀವಂತ – ಸೋಶಿಯಲ್ ಮೀಡಿಯಾಕ್ಕೆ ಮರಳಿದ ಅನುಶ್ರೀ
ಬೆಂಗಳೂರು: ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ ಭರ್ತಿ ಒಂದು ತಿಂಗಳಾಗಿದೆ. ತನ್ನ ನೆಚ್ಚಿನ ನಟನ ನಿಧನದ ದುಃಖದಲ್ಲಿದ್ದ ಅನುಶ್ರೀ ಕೆಲಕಾಲ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದರು. ಇಂದು ಮತ್ತೆ ಪೋಸ್ಟ್ ಹಾಕಿಕೊಳ್ಳುವ ಮೂಲಕ ಮರಳಿದ್ದಾರೆ.

ಹೌದು. ಭಾವುಕರಾಗಿಯೇ ಪೋಸ್ಟ್ ಹಾಕಿರುವ ಅನುಶ್ರೀ ನೋವು …ದುಃಖ …ಈಗ ಜೀವನದ ಬಲವಾಗಿ ಬದುಕಬೇಕು ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ನಟನನ್ನು ಇಂದು ನೆನಪಿಸಿಕೊಂಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ..?
ಕಾಲ ನೀನು ಮಾಯ.. ಇಲ್ಲ ನಿನಗೆ ನ್ಯಾಯ.. ತಿಂಗಳು ಕಳೆದರು.. ವರ್ಷಗಳು ಉರುಳಿದರೂ.. ಮಾಸುವುದಿಲ್ಲ.. ಮರೆಯುವುದಿಲ್ಲ.. ಅಳಿಯುವುದಿಲ್ಲ.. ಒಳ್ಳೆಯತನದಲ್ಲಿ ಎಂದಿಗೂ ಜೀವಂತ ಎಂದು ಅಪ್ಪು ಹೆಸರು ಹಾಕದೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಸರ್ ಎಂದರೆ ನನಗೆ ಹುಚ್ಚು ಅಭಿಮಾನ: ಅನುಶ್ರೀView this post on Instagramಅನುಶ್ರೀ ಈ ರೀತಿ ಪೋಸ್ಟ್ ಹಾಕುತ್ತಿದ್ದಂತೆಯೇ ಅಭಿಮಾನಿಗಳು ಕೂಡ ಕಾಮೆಂಟ್ ಗಳನ್ನು ಮಾಡಿದ್ದಾರೆ. ಹಲವು ಮಂದಿ ಮಿಸ್ ಯೂ ಅಪ್ಪು ಸರ್ ಎಂದು ಹೇಳಿದ್ದಾರೆ. ಅನುಶ್ರೀಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೆ ತುಂಬಾ ಅಭಿಮಾನ, ಗೌರವ. ಅಪ್ಪು ನಮ್ಮನೆಲ್ಲ ಅಗಲಿ ಇಂದಿಗೆ ಒಂದು ತಿಂಗಳಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಂತೆಯೇ ಅನುಶ್ರೀ ಕೂಡ ಅಪ್ಪು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಅಕ್ಟೋಬರ್ 29ರಂದು ನಟ ಪುನೀತ್ ರಾಜ್ ಕುಮಾರ್ ಅವರು ಹೃದಯಸ್ತಂಭನದಿಂದಾಗಿ ನಗರದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ಅವರ ಕುಟುಂಬ, ಅಭಿಮಾನಿ ವರ್ಗ ಹಾಗೂ ಇಡೀ ಚಿತ್ರರಂಗಕ್ಕೆ ಬರಸಿಡಿಲು ಬಡಿಂತಾಗಿದ್ದು, ಇಂದಿಗೂ ಜನ ಅಪ್ಪು ಸಮಾಧಿಗೆ ಭೇಟಿ ನೀಡುತ್ತಲೇ ಇದ್ದಾರೆ. ಅಪ್ಪು ನಿಧನದ ಬಳಿಕ ಸನುಶ್ರೀ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಸೋಶಿಯಲ್ ಮೀಡಿಯಾದಿಂದಲೂ ಕೊಂಚ ದೂರ ಉಳಿದಿದ್ದು, ಇಂದು ಮತ್ತೆ ಮರಳಿದ್ದಾರೆ.
-

ಅಪ್ಪು ಆತ್ಮದ ಜೊತೆ ಮಾತಾಡಿದ್ದಾಗಿ ವೀಡಿಯೋ ಅಪ್ಲೋಡ್- ಚಾರ್ಲಿಗೆ ಅಭಿಮಾನಿಗಳು ಕ್ಲಾಸ್
ಬೆಂಗಳೂರು: ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದ ದುಃಖದಿಂದ ಅವರ ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಗಣ್ಯರು ಕೂಡ ಹೊರಬಂದಿಲ್ಲ. ಈ ಮಧ್ಯೆ ಅಪ್ಪು ನಿಧನರಾದ ಮರುದಿನವೇ ವಿದೇಶಿಗನೊಬ್ಬ ತನ್ನ ಯೂಟ್ಯೂಬ್ ನಲ್ಲಿ ವೀಡಿಯೋವೊಂದನ್ನು ಅಪ್ಲೋಡ್ ಮಾಡಿಕೊಂಡಿದ್ದು, ಇದೀಗ ನಟನ ಅಭಿಮಾನಿಗಳ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ಹೌದು. ಚಾರ್ಲಿ ಚಿಟ್ವೆಂಡೆನ್ ಪ್ಯಾರಾನಾರ್ಮಲ್ ಎಂಬಾತ ಪುನೀತ್ ಆತ್ಮದ ಜೊತೆ ಮಾತನಾಡಿದ್ದಾಗಿ ವೀಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾನೆ. ಈ ವೀಡಿಯೋದಲ್ಲಿ ಚಾರ್ಲಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಕ್ಕೆ ಅಪ್ಪು ಉತ್ತರ ನೀಡಿದ್ದಾರೆ ಎಂದು ತಿಳಿಸಿದ್ದಾನೆ. ಅಲ್ಲದೆ ತಮ್ಮ ಹೆಣ್ಣು ಮಕ್ಕಳ ಬಗ್ಗೆ ಕೇಳಿದಾಗ ಐ ಲವ್ ದೆಮ್ ಎಂದು ಆತ್ಮ ಹೇಳಿರುವುದಾಗಿ ಚಾರ್ಲಿ ವೀಡಿಯೋದಲ್ಲಿ ಬರೆದುಕೊಂಡಿದ್ದಾನೆ. ಹಾರ್ಟ್ ಫೇಲ್, ಡಾಕ್ಟರ್.. ಡಾಕ್ಟರ್ ಎಂದೆಲ್ಲ ಅಪ್ಪು ಹೇಳಿರುವುದಾಗಿ ಬಿಂಬಿಸಿದ್ದಾನೆ. ಈ ವೀಡಿಯೋ ನೀಡುತ್ತಿದ್ದಂತೆಯೇ ಅಪ್ಪು ಅಭಿಮಾನಿಗಳು ಚಾರ್ಲಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಇದನ್ನೂ ಓದಿ: ಅಪ್ಪು ಸಾವಿನಿಂದ ಲೋಕ ಕಾಣುವ ಕನಸು ಮರೆತ ಅಂಧ ಸಹೋದರಿಯರು

ಜನರ ಭಾವನೆಗಳ ಜೊತೆ ಆಟವಾಡಬೇಡ. ಅಪ್ಪು ಸರ್ ಅವರನ್ನು ಗೌರವಿಸಿ. ಅವರೊಬ್ಬ ಲೆಜೆಂಡ್ ಎಂದು ಒಬ್ಬರು ಕಾಮೆಂಟ್ ಮಾಡಿದ್ರೆ ಇನ್ನೊಬ್ಬರು, ಇಂತಹ ವೀಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ವೀಕ್ಷಕರನ್ನು ಮೂರ್ಖರನ್ನಾಗಿ ಮಾಡಬೇಡಿ ಎಂದಿದ್ದಾರೆ. ಮತ್ತೊಬ್ಬರು ನೀನು ಚೆನ್ನಾಗಿ ನಟನೆ ಮಾಡುತ್ತಿ. ಹೀಗೆ ಹಲವಾರು ಕಾಮೆಂಟ್ ಗಳನ್ನು ಮಾಡುವ ಮೂಲಕ ಚಾರ್ಲಿಯನ್ನು ಪುನೀತ್ ಅಭಿಮಾನಿಗಳು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಇದನ್ನೂ ಓದಿ: ವನ್ಯಜೀವಿ ಸಾಕ್ಷ್ಯಚಿತ್ರಕ್ಕಾಗಿ ಅಂಜನಾದ್ರಿ ಸುತ್ತ ಓಡಾಡಿದ್ದ ಅಪ್ಪು

ಅಕ್ಟೋಬರ್ 29ರಂದು ಶುಕ್ರವಾರ ಬೆಳಗ್ಗೆ ಮನೆಯಲ್ಲಿ ವರ್ಕೌಟ್ ಮಾಡಿದ ಸಂದರ್ಭದಲ್ಲಿ ಅಪ್ಪುಗೆ ಆಯಾಸ ಕಾಣಿಸಿಕೊಂಡಿತು. ಹಾಗೆಯೇ ಸ್ಟೀಮ್ ಬಾತ್ ಮಾಡಿಕೊಂಡು ಪತ್ನಿ ಜೊತೆ ಸ್ಥಳೀಯ ರಮಣಶ್ರೀ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಹೊರಡುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಾದರೂ, ಅದು ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು. ಇದನ್ನೂ ಓದಿ: ನಿನ್ನಂತೆ ಸಮಾಜ ಸೇವೆ ಮಾಡೋ ಶಕ್ತಿ ನನಗೆ ನೀಡು ಮಗನೇ: ರಾಘಣ್ಣ

ಅಪ್ಪು ಅಂತ್ಯಕ್ರಿಯೆಯ ಬಳಿಕ ಅವರ ಸಮಾಧಿ ವೀಕ್ಷಿಸಲು ಜನಸಾಗರವೇ ಹರಿಬರುತ್ತಿದೆ. ಪ್ರತಿನಿತ್ಯ ಬೇರೆ ಬೇರೆ ಜಿಲ್ಲೆ, ರಾಜ್ಯ ಹಾಗೂ ಗಣ್ಯರು ಕೂಡ ಸಮಾಧಿ ಸ್ಥಳಕ್ಕೆ ಆಗಮಿಸಿ ಕಣ್ಣೀರಿಡುತ್ತಾ ತೆರಳುತ್ತಿದ್ದಾರೆ. ಅಪ್ಪು ನಮ್ಮನ್ನಗಲಿ ನಿನ್ನೆಗೆ 11 ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. ಅಂತೆಯೇ 12ನೇ ದಿನವಾದ ಇಂದು ಅಭಿಮಾನಿಗಳಿಗೆ ಹಾಗೂ ಗಣ್ಯರು ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಅಪ್ಪು ಕುಟುಂಬಸ್ಥರು ಇಟ್ಟುಕೊಂಡಿದ್ದಾರೆ. ಇಂದು ಬೆಳಗ್ಗೆ 11.30ರಿಂದ ನಗರದ ಅರಮನೆ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.
