Tag: power shortage

  • ರಾಜ್ಯದಲ್ಲಿ ವಿದ್ಯುತ್ ಕೊರತೆಯಾಗಿಲ್ಲ, ಅವಶ್ಯಕತೆ ಇಲ್ಲದ್ದಕ್ಕೆ ಥರ್ಮಲ್ ಪ್ಲಾಂಟ್ ಬಂದ್: ಸಚಿವ ದರ್ಶನಾಪುರ

    ರಾಜ್ಯದಲ್ಲಿ ವಿದ್ಯುತ್ ಕೊರತೆಯಾಗಿಲ್ಲ, ಅವಶ್ಯಕತೆ ಇಲ್ಲದ್ದಕ್ಕೆ ಥರ್ಮಲ್ ಪ್ಲಾಂಟ್ ಬಂದ್: ಸಚಿವ ದರ್ಶನಾಪುರ

    ಯಾದಗಿರಿ: ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಕೊರತೆಯಾಗಿಲ್ಲ. ಜಲ ವಿದ್ಯುತ್ ಮತ್ತು ಥರ್ಮಲ್ ಪ್ಲಾಂಟ್‍ನಲ್ಲಿ ನಮಗೆ ಅವಶ್ಯಕತೆ ಇದ್ದಾಗ ಮಾತ್ರ ಉತ್ಪಾದನೆ ಮಾಡುತ್ತೇವೆ. ಅವಶ್ಯಕತೆ ಇಲ್ಲದ ಕಾರಣ ರಾಯಚೂರು ಥರ್ಮಲ್ ಪ್ಲಾಂಟ್ ಬಂದ್ ಮಾಡಿದ್ದೇವೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ (Sharanabasappa Darshanapur) ಹೇಳಿದ್ದಾರೆ.

    ಲೋಡ್ ಶೆಡ್ಡಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಯಾದಗಿರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಈಗ ಮೂರು ಯೂನಿಟ್ ಚಾಲ್ತಿಯಲ್ಲಿದೆ. ಅಗತ್ಯವಿರುವಾಗ ಮಾತ್ರ ಉಳಿದ ಪ್ಲಾಂಟ್‍ಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ (Power Shortage) ಎದುರಾಗಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‍ನಲ್ಲಿರುವ ಬಾಗಲಕೋಟೆ ಯುವತಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಸಿಎಂ

    ಹೆಚ್.ಡಿ ಕುಮಾರಸ್ವಾಮಿಯವರು (HD Kumaraswamy) ಕಾಂಗ್ರೆಸ್ (Congress) ಸರ್ಕಾರ ಪತನವಾಗುತ್ತದೆ ಎಂದ ವಿಚಾರವಾಗಿ, ನೋಡೋಣ ಡಿಸೆಂಬರ್ ಇನ್ನೂ ಎರಡು ತಿಂಗಳು ಬಾಕಿ ಇದೆ. ಯಾವಾಗ ಕುಮಾರಸ್ವಾಮಿಯವರು ಸತ್ಯ ಹೇಳಿದ್ದಾರೆ. ಮೊದಲು ಸಿದ್ದರಾಮಯ್ಯ ಅವರಿಂದ ಮೈತ್ರಿ ಸರ್ಕಾರ ಪತನವಾಗಿದೆ ಎಂದು ಹೇಳಿದ್ದರು. ಈಗ ಸರ್ಕಾರ ಪತನವಾಗಲು ಡಿ.ಕೆ ಶಿವಕುಮಾರ್ ಕಾರಣ ಎನ್ನುತ್ತಿದ್ದಾರೆ. ಮೈತ್ರಿ ಆದಾಗ ಡಿಕೆಶಿ ಜೊತೆ ಓಡಾಡಿ ಜೋಡೆತ್ತು ಎಂದು ಕರೆದಿದ್ದರು. ಹೆಚ್‍ಡಿಕೆ ಹೇಳುವುದು ಒಂದು ಮಾಡುವುದೇ ಒಂದು. ಭ್ರಷ್ಟಚಾರದ ಬಗ್ಗೆ ಪೆನ್ ಡ್ರೈವ್ ತೋರಿಸಿ ವೀಡಿಯೋ ಬಿಡುಗಡೆ ಮಾಡುತ್ತೇನೆ ಎಂದಿದ್ದರು. ಆದರೆ ಈಗ ಪೆನ್ ಡ್ರೈವ್ ಎಲ್ಲಿದೆ? ಕುಮಾರಸ್ವಾಮಿ ಅವರು ಹತಾಶರಾಗಿ ಇಂತಹ ಹೇಳಿಕೆ ಕೊಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಹೆಚ್‍ಡಿಕೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅವರಿಗೆ ಸಿಎಂ ಅಧಿಕಾರ ಕೊಟ್ಟಾಗ, ಅಧಿಕಾರ ಬಿಟ್ಟು ಕುಳಿತಿದ್ದಾರೆ. ಅವರ ಅಧಿಕಾರ ಅವಧಿಯಲ್ಲಿ ಸ್ಟಾರ್ ಹೊಟೇಲ್‍ನಲ್ಲಿ ಆಡಳಿತ ಮಾಡಿದ್ದರು. ಜನಪ್ರತಿನಿಧಿಗಳಿಗೆ ಅವಾಗ ಸಿಕ್ಕಿಲ್ಲ. ತಮ್ಮ ಅಧಿಕಾರಾವಧಿಯಲ್ಲಿ ಸಾಲ ಮನ್ನಾ ಮಾಡಿರುವ ಹಣ ಸಹಕಾರಿ ಸಂಘದ ಬ್ಯಾಂಕ್‍ಗಳಿಗೆ ರೀಫಂಡ್ ಮಾಡಿಲ್ಲ ಎಂದಿದ್ದಾರೆ. ಅಲ್ಲದೇ ಕಾಂಗ್ರೆಸ್‍ನ ಸಿದ್ಧಾಂತ ಮೆಚ್ಚಿ ಜೆಡಿಎಸ್ ಹಾಗೂ ಬಿಜೆಪಿಯಿಂದ ಕಾಂಗ್ರೆಸ್‍ಗೆ ಬರುವರಿಗೆ ಸ್ವಾಗತವಿದೆ ಎಂದು ಬಹಿರಂಗ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅನಧಿಕೃತ ಲೋಡ್‌ಶೆಡ್ಡಿಂಗ್ – ಗ್ರಾಮೀಣ, ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 9 ದಿನಕ್ಕೆ ಆಗುವಷ್ಟು ಮಾತ್ರ ಕಲ್ಲಿದ್ದಲು – ವಿದ್ಯುತ್ ಬಿಕ್ಕಟ್ಟು ಎದುರಾಗುತ್ತಾ?

    9 ದಿನಕ್ಕೆ ಆಗುವಷ್ಟು ಮಾತ್ರ ಕಲ್ಲಿದ್ದಲು – ವಿದ್ಯುತ್ ಬಿಕ್ಕಟ್ಟು ಎದುರಾಗುತ್ತಾ?

    ನವದೆಹಲಿ: ದೇಶಾದ್ಯಂತ ಉಷ್ಣ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿವೆ. ಇದು ದೇಶದಲ್ಲಿ ವಿದ್ಯುತ್ ಬಿಕ್ಕಟ್ಟ ಎದುರಾಗುವ ಸೂಚನೆ ನೀಡುತ್ತಿದೆ ಎಂಬುದಾಗಿ ವರದಿಯಾಗಿದೆ.

    ಆಲ್ ಇಂಡಿಯಾ ಪವರ್ ಇಂಜಿನಿಯರ್ಸ್ ಫೆಡರೇಶನ್ (ಎಐಪಿಇಎಫ್) ಅಧ್ಯಕ್ಷ ಶೈಲೇಂದ್ರ ದುಬೆ ಮಾತನಾಡಿ, ಭಾರತೀಯ ವಿದ್ಯುತ್ ಸ್ಥಾವರಗಳು ಹೊಂದಿರುವ ಕಲ್ಲಿದ್ದಲು ದಾಸ್ತಾನು ಸುಮಾರು ಒಂಬತ್ತು ದಿನಗಳಿಗೆ ಆಗುವಷ್ಟಿದೆ. ನಿಯಮಗಳ ಪ್ರಕಾರ, ಪಿಟ್‌ಹೆಡ್‌ಗಳ ಬಳಿ ಇರುವ ಸ್ಥಾವರಗಳು 17 ದಿನಗಳ ದಾಸ್ತಾನು ಹೊಂದಿರಬೇಕು ಮತ್ತು ಕಲ್ಲಿದ್ದಲು ಪಿಟ್‌ಹೆಡ್‌ಗಳಿಂದ ದೂರವಿರುವ ಸ್ಥಾವರಗಳು 26 ದಿನಗಳವರೆಗೆ ಸಂಗ್ರಹ ಹೊಂದಿರಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 12 ರಾಜ್ಯಗಳಲ್ಲಿ ವಿದ್ಯುತ್ ಸಮಸ್ಯೆ: ಮಹಾರಾಷ್ಟ್ರ ಸಚಿವ

    ರಾಜ್ಯಗಳಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾದಂತೆ ದೇಶಾದ್ಯಂತ ಉಷ್ಣ ಸ್ಥಾವರಗಳು ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿವೆ. ಥರ್ಮಲ್ ಸ್ಥಾವರಗಳಲ್ಲಿ ಸಾಕಷ್ಟು ಕಲ್ಲಿದ್ದಲು ದಾಸ್ತಾನು ಇಲ್ಲದ ಕಾರಣ ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

    ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದೆ. ಆಮದು ಮಾಡಿಕೊಂಡ ಕಲ್ಲಿದ್ದಲು ಬೆಲೆಯೂ ಹೆಚ್ಚಿದೆ. ಜೊತೆಗೆ ಕಲ್ಲಿದ್ದಲು ಸಾಗಣೆಗೆ ರೈಲ್ವೆ ರೇಕ್‌ಗಳ ಕೊರತೆಯು ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ದಾಸ್ತಾನುಗಳ ಮೇಲೆ ಪರಿಣಾಮ ಬೀರಿದೆ. ದಿನನಿತ್ಯದ 453 ರೇಕ್‌ಗಳ ಬದಲಿಗೆ ಪ್ರಸ್ತುತ 412 ರೇಕ್‌ಗಳು ಮಾತ್ರ ಲಭ್ಯವಿವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಬುಲ್ಡೋಜರ್‌ ಕಾರ್ಯಾಚರಣೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ: ಸುಪ್ರೀಂ ಕೋರ್ಟ್

    ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್, ಹರಿಯಾಣ ರಾಜ್ಯಗಳು ಬಿಕ್ಕಟ್ಟು ಎದುರಿಸುತ್ತಿವೆ. ಉತ್ತರ ಪ್ರದೇಶದಲ್ಲಿ ಕಲ್ಲಿದ್ದಲು ದಾಸ್ತಾನು ಏಳು ದಿನಗಳವರೆಗೆ ಉಳಿದಿದೆ. ಹರಿಯಾಣದಲ್ಲಿ ಕಲ್ಲಿದ್ದಲು ದಾಸ್ತಾನು 8 ಹಾಗೂ ರಾಜಸ್ಥಾನದಲ್ಲಿ 26 ದಿನಗಳವರೆಗೆ ಇರಬೇಕಿದ್ದ ಕಲ್ಲಿದ್ದಲು ದಾಸ್ತಾನು ಪ್ರಮಾಣಿತ ಮಾನದಂಡಕ್ಕೆ ವಿರುದ್ಧವಾಗಿ 17 ದಿನಗಳವರೆಗೆ ಇದೆ. ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಜಾರ್ಖಂಡ್ ಮತ್ತು ಛತ್ತೀಸ್‌ಗಢ ಸೇರಿ ಇತರ ರಾಜ್ಯಗಳು ಸಹ ಕಲ್ಲಿದ್ದಲು ಬಿಕ್ಕಟ್ಟು ಎದುರಿಸುತ್ತಿವೆ.

    ಕೇಂದ್ರ ಇಂಧನ ಸಚಿವಾಲಯವು ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಶಿಫಾರಸು ಮಾಡಿದ್ದರೂ ಮುಂದಿನ ಕೆಲವು ತಿಂಗಳುಗಳಲ್ಲಿ ವಿದ್ಯುತ್ ಬೇಡಿಕೆ ಗರಿಷ್ಠ ಮಟ್ಟದಲ್ಲಿದ್ದಾಗ ಸಾಕಷ್ಟು ದಾಸ್ತಾನು ಖಚಿತಪಡಿಸಿಕೊಳ್ಳಲು ಶೇ.30 ರಿಂದ 40 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಿಂದಾಗಿ, ಆಮದು ಮಾಡಿಕೊಂಡ ಕಲ್ಲಿದ್ದಲಿನ ಬೆಲೆ ಪ್ರತಿ ಟನ್‌ಗೆ 7,613 ರೂ. ನಿಂದ 22,841 ರೂ.ಗೆ ಹೆಚ್ಚಾಗಿದೆ. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ ಬ್ರಿಟನ್ ಪ್ರಧಾನಿ

    ಕೇಂದ್ರೀಯ ವಿದ್ಯುಚ್ಛಕ್ತಿ ಪ್ರಾಧಿಕಾರದ ಅಂಕಿ ಅಂಶಗಳ ಪ್ರಕಾರ, 173 ವಿದ್ಯುತ್ ಸ್ಥಾವರಗಳು (ಆಮದು ಮಾಡಿಕೊಂಡ ಕಲ್ಲಿದ್ದಲು ಬಳಸುವ ಘಟಕಗಳನ್ನೂ ಒಳಗೊಂಡಂತೆ) ಅಗತ್ಯವಿರುವ 66.32 ಮಿಲಿಯನ್ ಟನ್‌ಗಳ ಬದಲಾಗಿ ಕೇವಲ 22.26 ಮಿಲಿಯನ್ ಟನ್‌ಗಳಷ್ಟು ಮಾತ್ರ ದಾಸ್ತಾನು ಹೊಂದಿವೆ.