Tag: power shock

  • ಹಲ್ಲೆಯ ತೀವ್ರತೆಗೆ ಪ್ರಜ್ಞೆ ತಪ್ಪಿದ್ದ ರೇಣುಕಾಸ್ವಾಮಿ ಕೈ, ಕಿವಿ, ಹೊಟ್ಟೆಗೆ ಕರೆಂಟ್ ಶಾಕ್

    ಹಲ್ಲೆಯ ತೀವ್ರತೆಗೆ ಪ್ರಜ್ಞೆ ತಪ್ಪಿದ್ದ ರೇಣುಕಾಸ್ವಾಮಿ ಕೈ, ಕಿವಿ, ಹೊಟ್ಟೆಗೆ ಕರೆಂಟ್ ಶಾಕ್

    – ಈ ಹಿಂದೆಯೂ ಶೆಡ್‍ನಲ್ಲಿ ಹಲವರಿಗೆ ಟಾರ್ಚರ್

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಮರ್ಡರ್ ಕೇಸಲ್ಲಿ ದರ್ಶನ್ ಗ್ಯಾಂಗ್‍ನ ಮತ್ತಷ್ಟು ಕರಾಳಮುಖ ಬಯಲಾಗ್ತಿದೆ. ಆರೋಪಿಗಳ ವಿಚಾರಣೆ ವೇಳೆ ಆ ಗ್ಯಾಂಗ್‍ನ ಮತ್ತಷ್ಟು ಕ್ರೌರ್ಯ ಅನಾವರಣಗೊಳ್ತಿದೆ.

    ಹೌದು. ಯಾವ ಸಿನಿಮಾಗೂ ಕಮ್ಮಿ ಇಲ್ಲ ಎಂಬಂತೆ ಟಾರ್ಚರ್ ಮೇಲೆ ಟಾರ್ಚರ್ ಕೊಟ್ಟು ರೇಣುಕಾಸ್ವಾಮಿಯನ್ನು ದುರುಳರು ಕೊಂದಿದ್ದಾರೆ. ಆರಂಭದಲ್ಲಿ ರೇಣುಕಾಸ್ವಾಮಿ ಮೇಲೆ ಕಬ್ಬಿಣದ ರಾಡ್, ರಿಪೀಸ್, ಲಾಠಿಯಿಂದ ಹಲ್ಲೆ ಮಾಡಿದ್ದ ದರ್ಶನ್ ಗ್ಯಾಂಗ್, ಅವರ ತಲೆಯನ್ನು ಲಾರಿಗೆ ಜಜ್ಜಿತ್ತು. ಇದರಿಂದ ರೇಣುಕಾಸ್ವಾಮಿ ಪ್ರಜ್ಞೆ ತಪ್ಪಿ ಬಿದ್ದಿದ್ರು.

    ರೇಣುಕಾಸ್ವಾಮಿ ಪ್ರಜ್ಞೆ ತಪ್ಪಿದ ಸಂದರ್ಭದಲ್ಲಿ ಕರೆಂಟ್ ಶಾಕ್ ನೀಡಿದ್ದಾರೆ. ಸ್ವಾಮಿಯ ಕೈ-ಕಿವಿ-ಹೊಟ್ಟೆ ಭಾಗಕ್ಕೆ ಕರೆಂಟ್ ಶಾಕ್ ನೀಡಿ ಟಾರ್ಚರ್ ಕೊಟ್ಟಿದ್ದಾರೆ. ಈ ಸಂಬಂಧ 9ನೇ ಆರೋಪಿ ಧನರಾಜ್‍ನನ್ನು ಕಳೆದ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಕರೆಂಟ್ ಶಾಕ್ ಕೊಡಲು ಬಳಸುವ ಮೆಗ್ಗಾರ್ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕಸ್ಟಡಿಯಲ್ಲಿರುವ ʼಗಜ’ನಿಗೆ ಕರಗಿದ ಗತ್ತು- ನನ್ನಿಂದ ತಪ್ಪಾಗಿದೆ, ಬಿಟ್ಟು ಬಿಡಿ ಎಂದ ದರ್ಶನ್!

    ಇನ್ನು ಪಟ್ಟಣಗೆರೆಯ ಜಯಣ್ಣ ಶೆಡ್‍ನಲ್ಲಿ ಹಿಂದೆ ಹಲವರಿಗೆ ಟಾರ್ಚರ್ ನೀಡಲಾಗಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಫೈನಾನ್ಸ್ ಸರಿಯಾಗಿ ಕಟ್ಟದವರನ್ನು ಇಲ್ಲಿ ಕೂಡಿ ಹಾಕಿ ಟಾರ್ಚರ್ ಕೊಡಲಾಗ್ತಿತ್ತು. ವಿನಯ್ ಕೃತ್ಯಗಳಿಗೆ ಮೆಗ್ಗಾರ್ ಎಕ್ಸ್‍ಪರ್ಟ್ ಧನರಾಜ್ ಸಾಥ್ ಕೊಡ್ತಿದ್ದ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ. ಇದೆಲ್ಲಾ ನಿಮಗೆ ಹೇಗೆಲ್ಲಾ ಗೊತ್ತಾಯ್ತು ಎಂದು ಮಾಧ್ಯಮಗಳನ್ನು ಗೃಹ ಸಚಿವ ಪರಮೇಶ್ವರ್ ಪ್ರಶ್ನಿಸಿದ್ದಾರೆ.

  • ದರ್ಶನ್ ಸಮ್ಮುಖದಲ್ಲೇ ಸ್ವಾಮಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟ ದುರುಳರು!

    ದರ್ಶನ್ ಸಮ್ಮುಖದಲ್ಲೇ ಸ್ವಾಮಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟ ದುರುಳರು!

    ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (Renukaswamy) ಸಾಯುವ ಮುನ್ನ ‘ಡಿ’ ಗ್ಯಾಂಗ್ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಕೊಲೆಯ ಬಳಿಕ ಹೆಂಗಾದ್ರೂ ಕೇಸ್ ಮುಚ್ಚಿ ಹೋಗುತ್ತೆ ಅನ್ನೋ ಗುಂಗಲ್ಲಿದ್ದ ಗ್ಯಾಂಗ್‍ನ ಒಂದೊಂದೇ ಕರಾಳ ಮುಖಗಳು ಈಗ ಅನಾವರಣ ಆಗುತ್ತಿದೆ.

    ಒಂದು ಮೆಸೇಜ್ ಮಾಡಿದ್ದಕ್ಕೆ ಇಷ್ಟೊಂದು ಚಿತ್ರಹಿಂಸೆನಾ ಎಂಬ ಪ್ರಶ್ನೆಯೂ ಎದ್ದಿದೆ. ರೇಣುಕಾಸ್ವಾಮಿ ಕೊಲೆ ಹಿಂದಿನ ಕರಾಳ ಕೃತ್ಯ ಬಯಲಾಗಿದ್ದು, ಮತ್ತೊಂದು ‘ಡೆವಿಲ್’ ಎಕ್ಸ್ ಕ್ಲೂಸಿವ್ ಸುದ್ದಿ ಪಬ್ಲಿಕ್ ಟಿವಿಗೆ ದೊರೆತಿದೆ.

    ಸಿನಿಶೈಲಿಯಲ್ಲೇ ರೇಣುಕಾಸ್ವಾಮಿಯನ್ನು ಡಿ ಗ್ಯಾಂಗ್ ಮರ್ಡರ್ ಮಾಡಿದೆ. ನಟ ದರ್ಶನ್ (Challenging Star Darshan) ಸಮ್ಮುಖದಲ್ಲೇ ರೇಣುಕಾಸ್ವಾಮಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟಿದ್ದಾರೆ ಎಂಬ ಸತ್ಯ ಇದೀಗ ಹೊರಬಿದ್ದಿದೆ. ಚಿತ್ರಹಿಂಸೆ ಸಾಕ್ಷಿಯೇ ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆಯಲು ಕಾರಣ ಎನ್ನಲಾಗಿದೆ.

    A5 ಆರೋಪಿ ನಂದೀಶ್ ಹಾಗೂ A13 ಆರೋಪಿ ದೀಪಕ್, ಸ್ವಾಮಿಗೆ ಮನ ಬಂದಂತೆ ಹಿಂಸೆ ಕೊಟ್ಟಿದ್ದಾರೆ. ರೇಣುಕಾಸ್ವಾಮಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟಿದ್ದಾರೆ. ಇವರಿಬ್ಬರು ವಿದ್ಯುತ್ ಶಾಕ್ ನೀಡಿ ಹಿಂಸೆ ನೀಡಿರುವುದು ತನಿಖೆಯಲ್ಲಿ ಮಾತ್ರವಲ್ಲದೇ ಇದೀಗ ಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿಯೂ ದೃಢಪಟ್ಟಿದೆ.

    ಮರಣೋತ್ತರ ಪರೀಕ್ಷೆ ವರದಿಯಲ್ಲೇನಿದೆ..?: ರೇಣುಕಾಸ್ವಾಮಿ ಎರಡೂ ಭುಜದಲ್ಲಿ 5 ಕಡೆ ಸುಟ್ಟಿರೋ ಗುರುತುಗಳು ಇರೋದು ಪತ್ತೆಯಾಗಿದೆ. ಮನಬಂದಂತೆ ಥಳಿಸಿ, ಮಮಾರ್ಂಗಕ್ಕೆ ಕಾಲಿಂದ ಒದ್ದಿರುವುದು ಮಾತ್ರವಲ್ಲದೇ ಕರೆಂಟ್ ಶಾಕ್ ಕೊಟ್ಟಿರೋದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖವಾಗಿದೆ. ಆಘಾತ ಮತ್ತು ರಕ್ತಸ್ರಾವದಿಂದ ರೇಣುಕಾಸ್ವಾಮಿ ಡೆತ್ ಆಗಿರೋದು ಬಯಲಾಗಿದೆ. ಇದನ್ನೂ ಓದಿ: ಚಿತ್ರಹಿಂಸೆ ನೀಡಿ ಕೊಲೆಗೈದು ಸ್ವಾಮಿ ಮೈಮೇಲಿದ್ದ ಚಿನ್ನಾಭರಣವನ್ನೂ ದೋಚಿದ್ದ ‘Devil’ ಗ್ಯಾಂಗ್!

    ಕರೆಂಟ್ ಶಾಕ್ ಕೊಟ್ಟಿರೋದು ದೃಢ ಆಗಿರೋದ್ರಿಂದ ಕರೆಂಟ್ ಶಾಕ್ ಕೊಟ್ಟಿರೋ ಸಲಕರಣೆಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಕರೆಂಟ್ ಶಾಕ್‍ಗೆ ಬಳಸಿದ್ದ ಎಲೆಕ್ಟ್ರಾನಿಕ್ ಮೆಗ್ಗಾರ್‍ಗಾಗಿ ಶೋಧ ನಡೆಸುತ್ತಿದ್ದಾರೆ. ಈ ಬಗ್ಗೆ ಆರೋಪಿ ದೀಪಕ್ ಮತ್ತು ನಂದೀಶ್ ತೀವ್ರ ವಿಚಾರಣೆ ನಡೆಸುತ್ತಿರುವ ಪೊಲೀಸರು ಕೃತ್ಯ ನಡೆಸಿದ ನಂತರ ಎಲ್ಲಿ ಬಿಸಾಡಿದ್ದಾರೆ ಅನ್ನೋ ಬಗ್ಗೆ ತನಿಖೆಗಿಳಿದಿದ್ದಾರೆ. ಕೊಲೆಯ ಬಳಿಕ ಆರೋಪಿಗಳು ಮೈಸೂರಿಗೆ ಹೋಗುವ ವೇಳೆ ಎಲೆಕ್ಟ್ರಾನಿಕ್ ಮೆಗ್ಗಾರ್ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.

  • ರೈತರಿಗೆ ಪವರ್ ಶಾಕ್- ಲಕ್ಷ ಲಕ್ಷ ಬಿಲ್ ನೀಡಿರುವ ವಿದ್ಯುತ್ ಇಲಾಖೆ

    ರೈತರಿಗೆ ಪವರ್ ಶಾಕ್- ಲಕ್ಷ ಲಕ್ಷ ಬಿಲ್ ನೀಡಿರುವ ವಿದ್ಯುತ್ ಇಲಾಖೆ

    ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆದಿದೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ ಯೋಜನೆಗಳನ್ನು ಜಾರಿ ಮಾಡಿದೆ. ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೆ ಇವೆ. ಒಂದೆಡೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ ಎನ್ನುತ್ತಿರುವ ಸರ್ಕಾರ ಮತ್ತೊಂದೆಡೆ ರೈತರಿಂದ ದುಪ್ಪಟ್ಟು ವಿದ್ಯುತ್ ಬಿಲ್ ವಸೂಲಿಗೆ ಇಳಿದಿದೆ.

    ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗೃಹಜ್ಯೋತಿ ಯೋಜನೆ ಜಾರಿಗೊಳಿಸಿ 200 ಯೂನಿಟ್‍ವರೆಗೆ ಉಚಿತ ಕರೆಂಟ್ ನೀಡುವ ಕೊಟ್ಟ ಭರವಸೆ ಈಡೇರಿಸಿದೆ. ಆದ್ರೆ ಗ್ರಾಮೀಣ ಭಾಗಗಳಲ್ಲಿ ಬೇರೆ ರೀತಿಯ ಚಿತ್ರಣವಿದೆ. ತೀವ್ರ ಬರಗಾಲದಿಂದ ಬೆಳೆಗಳೆಲ್ಲಾ ನಾಶವಾಗಿ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆ ಉಳಿದಿರೋ ಅಲ್ಪಸ್ವಲ್ಪ ಬೆಳೆಗಳನ್ನು ಉಳಿಸಿಕೊಳ್ಳಲು ಪಂಪ್‍ಸೆಟ್ ಹೊಂದಿರುವ ರೈತರು, ವಿದ್ಯುತ್ ಇಲಾಖೆ ನೀಡ್ತಿರೋ ಒಂದೆರಡು ಗಂಟೆ ಕರೆಂಟ್‍ನಲ್ಲೇ ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ. ಪಂಪ್‍ಸೆಟ್‍ಗಳನ್ನು ಹೊಂದಿರುವ ರೈತರಿಗೆ ವಿದ್ಯುತ್ ಇಲಾಖೆ ಶಾಕ್ ನೀಡಿದೆ. ಲಕ್ಷ ಲಕ್ಷ ಮೊತ್ತದ ಕರೆಂಟ್ ಬಿಲ್ ನೀಡಿದ್ದು, ಇನ್ನು 15 ದಿನಗಳಲ್ಲಿ ಬಿಲ್ ಪಾವತಿ ಮಾಡಬೇಕು ಎಂದು ವಾರ್ನಿಂಗ್ ನೀಡಿದೆ.

    ಹಾಸನ (Hassan) ಜಿಲ್ಲೆಯಲ್ಲಿ ರೈತರು ಬಳಸುವ ಒಂದೂವರೆ ಲಕ್ಷಕ್ಕೂ ಅಧಿಕ ಪಂಪ್‍ಸೆಟ್‍ಗಳಿಗೆ ಸರ್ಕಾರ ಕರೆಂಟ್ ನೀಡುತ್ತಿದೆ. ಇದುವರೆಗೂ ಬಹುತೇಕ ಸರ್ಕಾರಗಳು ರೈತರ ಬೆಳೆಗಳಿಗೆ ಬಳಸುವ ವಿದ್ಯುತ್‍ಗೆ ಬಿಲ್ ನೀಡಿರಲಿಲ್ಲ. ಅದರಲ್ಲೂ ಕೃಷಿ ಬಳಕೆ ಪಂಪ್‍ಸೆಟ್‍ಗಳಿಗೆ ರೈತರು ಉಚಿತವಾಗಿಯೇ ಕರೆಂಟ್ ಬಳಕೆ ಮಾಡಿಕೊಳ್ಳುತ್ತಿದ್ದರು. ಕೆಲವು ರೈತರು ಇನ್ನೂ ಮೀಟರ್ ಅಳವಡಿಕೆ ಮಾಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಗೃಹಜ್ಯೋತಿ ಜಾರಿ ಮಾಡಿರುವ ಸರ್ಕಾರ ಸಣ್ಣ, ಅತಿಸಣ್ಣ ರೈತರು ತಮ್ಮ ಕೃಷಿ ಚಟುವಟಿಕೆಗೆ ಅಗತ್ಯಕ್ಕೆ ತಕ್ಕಂತೆ ಬಳಸುತ್ತಿರುವ ನೀರಾವರಿ ಪಂಪ್‍ಸೆಟ್‍ಗಳಿಗೆ ಲಕ್ಷ ಲಕ್ಷ ಬಿಲ್ ನೀಡಲು ಆರಂಭಿರುವುದು ರೈತರಿಗೆ ದೊಡ್ಡ ಆಘಾತ ಉಂಟು ಮಾಡಿದೆ.

    ಸಕಲೇಶಪುರ, ಬೇಲೂರು ಸೇರಿದಂತೆ ಎಲ್ಲಾ ತಾಲೂಕುಗಳ ರೈತರಿಗೆ ದುಬಾರಿ ಬಿಲ್ ಮೂಲಕ ಬರೆ ಎಳೆಯುತ್ತಿದೆ. ಹತ್ತಾರು ವರ್ಷಗಳಿಂದ ಕೆಲ ರೈತರು ಬಿಲ್ ಪಾವತಿ ಮಾಡಿಲ್ಲ. ಅಂತಹವರನ್ನು ಸೇರಿಸಿ ಎಲ್ಲಾ ರೈತರ ಪಂಪ್‍ಸೆಟ್‍ಗಳಿಗೆ ಎರಡೂವರೆ ಲಕ್ಷ, ಒಂದು ಲಕ್ಷ, ಐವತ್ತು ಸಾವಿರ ಹೀಗೆ ಮನಬಂದಂತೆ ಬಿಲ್ ನೀಡಿದ್ದಾರೆ. ಈ ವರ್ಷ ಬರಗಾಲದಿಂದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದೀವಿ. ಈ ವೇಳೆ ಹೇಗೆ ಬಿಲ್ ಕಟ್ಟೋದು ಎನ್ನುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಡವಟ್ಟು- ಕೆಇಎಯಿಂದ ನೂರಾರು ಅಭ್ಯರ್ಥಿಗಳಿಗೆ ಸಂಕಷ್ಟ

    ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿ ಈಡೇರಿಸಲು ಗೃಹಜ್ಯೋತಿ ಜಾರಿಗೊಳಿಸಿ ಮನೆಮನೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. 200 ಯೂನಿಟ್ ವಿದ್ಯುತ್ ಉಚಿತ ಸಿಗುತ್ತಿದೆ ಎಂದು ಜನರು ಖಷಿಯಲ್ಲಿರುವಾಗ ಪಂಪ್‍ಸೆಟ್‍ಗಳಿಗೆ ದುಬಾರಿ ಬಿಲ್ ನೀಡುವ ಮೂಲಕ ರೈತರಿಂದ ಹಣ ವಸೂಲಿ ಮಾಡಲು ಮುಂದಾಗಿರೋದು ರೈತರ ಕಣ್ಣು ಕೆಂಪಾಗಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಮನಿಸಿ, ರಾತ್ರಿ ಮಲಗುವಾಗ ಇಯರ್ ಫೋನ್ ಹಾಕಿಕೊಳ್ಳುವ ಮೊದಲು ಈ ಸ್ಟೋರಿ ಓದಿ!

    ಗಮನಿಸಿ, ರಾತ್ರಿ ಮಲಗುವಾಗ ಇಯರ್ ಫೋನ್ ಹಾಕಿಕೊಳ್ಳುವ ಮೊದಲು ಈ ಸ್ಟೋರಿ ಓದಿ!

    ಚೆನ್ನೈ: 46 ವರ್ಷದ ಮಹಿಳೆಯೊಬ್ಬರು ರಾತ್ರಿ ಮಲಗುವ ವೇಳೆ ಕಿವಿಯಲ್ಲಿ ಇಯರ್ ಫೋನ್ ಇಟ್ಟುಕೊಂಡು ನಿದ್ದೆಗೆ ಜಾರಿದ್ದು, ಪರಿಣಾಮ ಮಹಿಳೆ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕಾತನೂರ್ ನಲ್ಲಿ ನಡೆದಿದೆ.

    ಫಾತಿಮಾ(49) ಮೃತ ದುರ್ದೈವಿ. ಈಕೆಯ ಪತಿ ಅಬ್ದುಲ್ ಕಲಾಂ ಭಾನುವಾರ ಬೆಳಗ್ಗೆ ಪತ್ನಿಯನ್ನ ಎಬ್ಬಿಸಲು ಹೋಗಿದ್ದಾರೆ. ಆದರೆ ಫಾತಿಮಾ ಅವರನ್ನು ಎಬ್ಬಿಸಲು ಪ್ರಯತ್ನಿಸಿದರೂ ಅವರು ಮಿಸುಕಾಡಲಿಲ್ಲ. ಬಳಿಕ ಗಾಬರಿಗೊಂಡ ಪತಿ ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ಫಾತಿಮಾ ವಿದ್ಯುತ್ ಶಾಕ್‍ನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಆಸ್ಪತ್ರೆಯ ಅಧಿಕಾರಿಗಳು ಈ ಬಗ್ಗೆ ಕಾತನೂರ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಆಸ್ಪತ್ರೆಗೆ ಬಂದು ಪೊಲೀಸರು ಫಾತಿಮಾ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ರಾಯಪೆಟ್ಟಾ ಆಸ್ಪತ್ರೆಗೆ ರವಾನಿಸಿದ್ದರು.

    ವೈದ್ಯರು ಫಾತಿಮಾ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಬಳಿಕ ನಾವು ಈ ಘಟನೆ ಬಗ್ಗೆ ಐಪಿಸಿ ಸೆಕ್ಷನ್ 174 (ಅಸ್ವಾಭಿಕ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಫಾತಿಮಾ ಅವರು ಪ್ರತಿದಿನ ಮಲಗುವ ವೇಳೆ ಕಿವಿಗೆ ಇಯರ್‍ಫೋನ್ ಹಾಕಿಕೊಂಡು ಸಂಗೀತ ಕೇಳುತ್ತಾ ಮಲಗುವ ರೂಢಿ ಮಾಡಿಕೊಂಡಿದ್ದರು. ಅದೇ ರೀತಿ ಶನಿವಾರ ರಾತ್ರಿ ಕೂಡ ಇಯರ್ ಫೋನ್ ಹಾಕಿಕೊಂಡು ಮಲಗಿದ್ದಾರೆ. ಆಗ ಶಾರ್ಟ್ ಸರ್ಕ್ಯೂಟ್‍ನಿಂದ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ ಅಂತ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.