ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ವಿಚಾರ ಜೋರಾಗಿದೆ. ಇದರ ಮಧ್ಯೆ ಗೃಹ ಸಚಿವ ಪರಮೇಶ್ವರ್ (G.Parameshwara) ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.
ನಾವು ಸಿಎಲ್‌ಪಿ ಸಭೆಯಲ್ಲಿ ಎಲ್ಲಾ ಶಾಸಕರು ಸೇರಿಕೊಂಡು ಸಿದ್ದರಾಮಯ್ಯ ಅವರನ್ನ 5 ವರ್ಷದ ಅವಧಿಗೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದೇವೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಆಯ್ಕೆ ಮಾಡುವಾಗ ನಾವು ಯಾವುದೇ ಅವಧಿ ನಿಗದಿ ಮಾಡಿ ಆಯ್ಕೆ ಮಾಡಿಲ್ಲ. ನಮ್ಮ ದೃಷ್ಟಿಯಲ್ಲಿ ಸಿದ್ದರಾಮಯ್ಯ ಐದು ವರ್ಷ ಸಿಎಂ ಅಂತ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಹೇಳಿದ್ಮೇಲೆ ಇನ್ನೇನಿದೆ? ಅವ್ರು ಹೇಗೆ ಹೇಳುತ್ತಾರೋ ಹಾಗೆ ನಡೆಯುತ್ತೇವೆ: ಡಿಕೆಶಿ
ಹಾಗೇನಾದ್ರೂ ಅಧಿಕಾರ ಹಂಚಿಕೆ ಆಗಿದ್ರೆ ಈ ಬಗ್ಗೆ ಹೈಕಮಾಂಡ್ ಸೇರಿ ಬೇರ‍್ಯಾರು ಹೇಳಿಲ್ಲ. ಆಯ್ಕೆ ಮಾಡುವಾಗಲೂ ಎರಡೂವರೆ ವರ್ಷಕ್ಕೆ ಸಿಎಂ ಅಂತ ಹೇಳಿಲ್ಲ ಎಂದು ಬೆಂಗಳೂರಿನಲ್ಲಿ ಸಚಿವ ಪರಮೇಶ್ವರ್ ಹೇಳಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ತೆರೆ ಎಳೆಯಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸುತ್ತೇನೆ ಎಂದಿದ್ದಾರೆ.
– ಸಂಪುಟ ವಿಸ್ತರಣೆ ಬಗ್ಗೆ ಸಿಎಂ, ಡಿಸಿಎಂ, ಹೈಕಮಾಂಡ್ ತೀರ್ಮಾನ ಮಾಡುತ್ತೆ
ಬೆಂಗಳೂರು: ಪವರ್ ಶೇರಿಂಗ್ ವಿಚಾರ ಮತ್ತು ಸಂಪುಟ ಪುನರಾಚನೆ ವಿಚಾರ ಯಾವುದೇ ಶಾಸಕರು, ಸಚಿವರು ಬಹಿರಂಗವಾಗಿ ಮಾತಾಡೋದು ಸರಿಯಲ್ಲ ಎಂದು ಸಚಿವ ಸಂತೋಷ ಲಾಡ್ (Santosh Lad) ಪಕ್ಷದ ಶಾಸಕ, ಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.
ಕಾಂಗ್ರೆಸ್ (Congress) ಒಳಗೆ ಪವರ್ ಶೇರಿಂಗ್ (Power Sharing) ಮತ್ತು ಸಚಿವ ಸಂಪುಟ ಪುನರಾಚನೆ ಬಗ್ಗೆ ಚರ್ಚೆ ಆಗ್ತಿರೋ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಯಾವುದೇ ಶಾಸಕರು ಇದರ ಬಗ್ಗೆ ಮಾತಾಡಬಾರದು. ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಾವು ಯಾರು ಇದರ ಬಗ್ಗೆ ಮಾತಾಡಬಾರದು ಎಂದು ತಿಳಿಸಿದ್ದಾರೆ.
ಸಿಎಂ ಡಿನ್ನರ್ ಮೀಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಪ್ರತಿ ವರ್ಷ ಊಟಕ್ಕೆ ಕರೆಯುತ್ತಾರೆ. ಬೇರೆ ವಿಷಯ ಇಲ್ಲ. ಸಂಪುಟ ವಿಸ್ತರಣೆ ಬಗ್ಗೆ ಸಿಎಂ, ಡಿಸಿಎಂ, ಹೈಕಮಾಂಡ್ ತೀರ್ಮಾನ ಮಾಡುತ್ತದೆ ಅಂತ ಸ್ಪಷ್ಟಪಡಿಸಿದ್ದಾರೆ.
ಡಿಸೆಂಬರ್ ಒಳಗೆ ಕೇಂದ್ರದಲ್ಲಿ ಕ್ರಾಂತಿ ಆಗುತ್ತೆ
ನವೆಂಬರ್‌ನಲ್ಲಿ ಕಾಂಗ್ರೆಸ್‌ನಲ್ಲಿ ಕ್ರಾಂತಿ ಆಗುತ್ತೆ. ಸಿಎಂ ಬದಲಾವಣೆ ಆಗುತ್ತೆ ಎಂಬ ಬಿಜೆಪಿ ಭವಿಷ್ಯಕ್ಕೆ ತಿರುಗೇಟು ನೀಡಿದ ಅವರು, ನಾನು ಹೇಳ್ತೀನಿ ಡಿಸೆಂಬರ್ ಒಳಗೆ ಕೇಂದ್ರದಲ್ಲಿ ಕ್ರಾಂತಿ ಆಗುತ್ತೆ. ನಿತಿನ್ ಗಡ್ಕರಿ ಪ್ರಧಾನಿ ಆಗ್ತಾರೆ. ಮೋದಿ ಬಗ್ಗೆ ಮಾತಾಡೋಕೆ ಮಾಧ್ಯಮಗಳಿಗೂ ಆಗ್ತಿಲ್ಲ. ಮೋದಿ ವಿರುದ್ಧ ಯಾರಿಗೂ ಮಾತಾಡೋ ಧೈರ್ಯ ಇಲ್ಲ. ಬಿಜೆಪಿ ಅವರು ಹುಲಿ ಸವಾರಿಯಲ್ಲಿ ಇದ್ದಾರೆ. ಮೋದಿ ಕೆಲಸವನ್ನು ಒತ್ತಾಯಪೂರ್ವಕವಾಗಿ ಒಪ್ಪುತ್ತಿದ್ದಾರೆ. ಮೋದಿ ಬಿಹಾರದಲ್ಲಿ 10,000 ರೂ. ಹಣ ಕೊಟ್ಟರು. ಇದನ್ನ ಬಿಜೆಪಿಯ ಯುವ ನಾಯಕರು ಒಪ್ಪುತ್ತಾರಾ ಎಂದು ಪ್ರಶ್ನಿಸಿದ್ದಾರೆ.
10 ವರ್ಷದ ಹಿಂದೆ ಮೋದಿ ಅವರು ಟೆಂಡರ್ ಕೂಗಿದ್ರು. ಈಗ ಬಿಹಾರದಲ್ಲಿ 10,000 ಕೊಡ್ತೀನಿ ಅಂತ ಕೂಗುತ್ತಿದ್ದಾರೆ. ಇವರಿಗೆ ನಾಚಿಕೆ, ಮಾನ ಮರ್ಯಾದೆ ಇದ್ಯಾ? ಇವರು ಅಭಿವೃದ್ಧಿ ಮಾಡಿದ್ರೆ ಯಾಕೆ ಹಣ ಕೊಡಬೇಕಿತ್ತು. ಇದನ್ನ ಬಿಜೆಪಿ ನಾಯಕರಿಗೆ ಕೇಳ್ತಾರಾ? ಮಾಧ್ಯಮಗಳು ಕೇಳ್ತಾರಾ? ಕೇರಳ, ಬಿಹಾರಕ್ಕೆ ಹೋದ್ರೆ ಒಂದೊAದು ಸ್ಲೋಗನ್ ಕೊಡ್ತಾರೆ. ಇಂತಹ ಪ್ರಧಾನಿ ಯಾವತ್ತು ನಾವು ನೋಡಿಲ್ಲ ಎಂದು ಕಿಡಿಕಾರಿದರು.
ಬೆಂಗಳೂರು: ಜಂಬೂ ಸವಾರಿಗೂ ಮುನ್ನ ವಿರೋಧಿಗಳಿಗೆ ಸಿಎಂ ಗುನ್ನಾ ಹೊಡೆದಿದ್ದಾರೆ. ಆಪ್ತ ವಲಯಕ್ಕೆ ಏನೂ ಆಗಲ್ಲ, ಸುಮ್ಮನಿರಿ ಎಂಬ ಸಂದೇಶ, ಕುರ್ಚಿ ಕೈ ಹಾಕಬಾರದು ಎಂದು ವಿರೋಧಿಗಳಿಗೆ ಟಕ್ಕರ್ ಕೊಡುವುದು ಸಿಎಂ ಗೇಮ್ ಪ್ಲ್ಯಾನ್. ಇನ್ನೊಂದು ಸೈಡ್‌ನಿಂದ ಡಿಕೆಶಿ (DK Shivakumar) ಸಂಘರ್ಷದ ರಾಜಕಾರಣ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದು, ಮೂರು ಜನಕ್ಕಷ್ಟೇ ಗೊತ್ತು, ಉಳಿದವರಿಗೆ ಏಕೆ ಬೇಕು ಎಂಬ ಆಟ ಶುರು ಮಾಡಿದ್ದಾರೆ.
ನೀವು ಮಾತಾಡಿದ್ರೆ, ನಾನು ಮಾತಾಡ್ತೀನಿ. ನೀವು ಸುಮ್ಮನಿದ್ರೆ, ನಾನು ಸುಮ್ಮನಿರುತ್ತೀನಿ. ಆದ್ರೆ ಕೆಣಕಿದ್ರೆ ಹುಷಾರ್.. ಇದು ಸಿಎಂ ಸಿದ್ದರಾಮಯ್ಯ (Siddaramaiah) ಅಸಲಿ ಆಟ. ಹೌದು, ಜಂಬೂ ಸವಾರಿ ಮುನ್ನ ದಿನ ಅಂದ್ರೆ ಬುಧವಾರ ಸಿಎಂ ಸಿದ್ದರಾಮಯ್ಯ ನನ್ನ ಕುರ್ಚಿ ಗಟ್ಟಿ ಎಂಬ ಸಂದೇಶ ನಾನಾ ಲೆಕ್ಕಾಚಾರ ಹುಟ್ಟುಹಾಕಿದೆ. ತವರಿನಲ್ಲೇ ಪಕ್ಷದೊಳಗಿನ ವಿರೋಧಿಗಳಿಗೆ, ಹೊರಗಿನ ವಿರೋಧಿಗಳಿಗೆ ಸಿಎಂ ಸಿದ್ದರಾಮಯ್ಯ ಬಿಸಿ ಮುಟ್ಟಿಸಿದ್ದಾರೆ. ಇದನ್ನೂ ಓದಿ: ಪವರ್ ಶೇರಿಂಗ್ ವಿಚಾರ; ಸಿಎಂ ಏನು ಹೇಳಿದ್ದಾರೆ ಅಷ್ಟೇ: ಡಿಕೆಶಿ
ಮುಖ್ಯಮಂತ್ರಿಯಾಗಿ ಇನ್ನೂ ಎರಡೂವರೆ ವರ್ಷ ಇರುತ್ತೇನೆ. ಐ ಹೋಪ್ ಸೋ ಅಂತಾ ಸಿದ್ದರಾಮಯ್ಯ ಎಚ್ಚರಿಕೆಯ ಆಟಕ್ಕಿಳಿದಿದ್ದಾರೆ. ಹೈಕಮಾಂಡ್ ಹೇಳಿದಂತೆ ಕೇಳಬೇಕು ಅಂದಿದ್ದೇಕೆ? ಕೊಡುವ ಸಂದೇಶವನ್ನೆಲ್ಲ ಕೊಟ್ಟು ಜಾಣ ನಡೆ ಅನುಸರಿಸಿರುವ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ನಿಷ್ಠೆ ಕಾರ್ಡ್ ಪ್ಲೇ ಮಾಡಿ ಚೆಕ್‌ಮೇಟ್ ಇಟ್ಟಿದ್ದಾರೆ.
ಈ ನಡುವೆ ಸಿಎಂ ಸಿದ್ದರಾಮಯ್ಯ ಮಾತಿಗೆ ಡಿಕೆಶಿ ಕೂಡ ಸಾಫ್ಟ್ ಲಾಂಚ್ ರಿಯಾಕ್ಷನ್ ಕೊಡುವ ಮೂಲಕ ಚದುರಂಗದಾಟಕ್ಕೆ ಇಳಿದಿದ್ದಾರೆ. ಸಿದ್ದರಾಮಯ್ಯ ಅವರು ಏನು ಹೇಳಿದ್ದಾರೆ. ಆದ್ರೆ ಹೈಕಮಾಂಡ್ ಅಂತಿಮ ಅಂತ ಅಷ್ಟೇ. ಅವರ ಪರವಾಗಿ ಮಾತನಾಡಿದರು ಡ್ಯಾಮೇಜ್. ನನ್ನ ಪರವಾಗಿ ಮಾತನಾಡಿದರು ಡ್ಯಾಮೇಜ್ ಅಂತಾ ಬೆಂಗಲಿಗರಿಗೂ ಎಚ್ಚರಿಸಿದ್ದಾರೆ. ಸರ್ಕಾರದಲ್ಲಿ ಪವರ್ ಶೇರಿಂಗ್ ಬರಲ್ಲ. ನಾನು ಮಾತಾಡಿದ್ದು ಬೋರ್ಡ್ ಡೈರೆಕ್ಟರ್ ಶೇರಿಂಗ್ ಬಗ್ಗೆ ಮಾತ್ರ. ಸರ್ಕಾರದ ಪವರ್ ಶೇರಿಂಗ್ ಬಗ್ಗೆ ಮಾತಾಡೋಕೆ ನಾನು, ಸಿದ್ದರಾಮಯ್ಯ, ಹೈಕಮಾಂಡ್ ಇದೆ ಎಂದು ಹೇಳಿದ್ದಾರೆ.
ಇನ್ನು ಡಿಕೆಶಿಗೆ ಆಪ್ತರೇ ದೊಡ್ಡ ತಲೆನೋವಾಗಿದ್ದಾರೆ. ಆಕ್ಷನ್, ರಿಯಾಕ್ಷನ್‌ನಿಂದ ಡ್ಯಾಮೇಜ್ ತಪ್ಪಿದ್ದಲ್ಲ ಅನ್ನೋದು ಚೆನ್ನಾಗಿ ಗೊತ್ತಿದೆ. ಹಾಗಾಗಿ ಆಪ್ತರಿಗೂ ಬಹಿರಂಗವಾಗಿಯೇ ಡಿಕೆಶಿ ವಾರ್ನ್ ಮಾಡಿದ್ದಾರೆ. ಮಾಜಿ ಸಂಸದ ಶಿವರಾಮೇಗೌಡಗೂ ನೋಟಿಸ್ ಕೊಡಿ, ಶಾಸಕ ರಂಗನಾಥ್‌ಗೂ ನೋಟಿಸ್ ಕೊಡಿ ಅಂತ ಹೇಳಿದ್ದೇನೆ ಹೀಗಾಗಿ ಯಾರೇ ಮಾತಾಡಿದ್ರೂ ನೋಟಿಸ್ ಕೊಡಲು ಹೇಳಿದ್ದೇನೆ ಅಂತಾ ಡಿಕೆಶಿ ಕಾರ್ಡ್ ಪ್ಲೇ ಮಾಡಿದ್ದಾರೆ.
ಅತ್ತ ಬುಧವಾರ ಸಿಎಂ ಸಿದ್ದರಾಮಯ್ಯ ಬಳಿಕ ಆಪ್ತ ಹೆಚ್.ಸಿ.ಮಹದೇವಪ್ಪ ಕೂಡ ಅಲ್ಲೇ ರಿಯಾಕ್ಟ್ ಮಾಡಿ, ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಯರ‍್ಯಾರದ್ದೋ ಹೇಳಿಕೆಗಳಿಗೆ ಹೆಚ್ಚು ಮಹತ್ವ ಕೊಡಬೇಡಿ ಅಂತಾ ಟಕ್ಕರ್ ಕೊಟ್ಟಿದ್ರೆ, ಇಂದು ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಮುಂದುವರೆಯಲಿದ್ದಾರೆ, ಡಿಕೆಶಿ ಹೇಳಿದ್ಮೇಲೆ ಮುಗೀತು ಅಂತ ಹೇಳಿದ್ದಾರೆ.
ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನವೆಂಬರ್, ಡಿಸೆಂಬರ್‌ನಲ್ಲಿ ಆಟ ಇಲ್ಲ ಎಂಬ ಸಂದೇಶ ರವಾನಿಸಿದ್ರೆ, ಡಿಕೆಶಿ ಹೈಕಮಾಂಡ್ ಮುಂದೆ ಅಷ್ಟೇ ನಮ್ಮಿಬ್ಬರ ಆಟ ಅಂತಾ ಸೈಲೈಂಟ್ ಗೇಮ್ ಚಾಲೂ ಮಾಡಿದ್ದು, ಅಸಲಿ ಆಟ ಸಂಕ್ರಾಂತಿಗೋ? ಶಿವರಾತ್ರಿಗೋ ಕಾದುನೋಡಬೇಕಿದೆ.
ಬೆಂಗಳೂರು: ಪವರ್ ಶೇರಿಂಗ್ (Power Sharing) ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಏನು ಹೇಳಿದ್ದಾರೆ ಅಷ್ಟೇ. ಯಾರೂ ಕೂಡ ಅದರ ಬಗ್ಗೆ ಮಾತನಾಡಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಏನು ಹೇಳಿದ್ದಾರೆ ಹೈಕಮಾಂಡ್ ಅಂತಿಮ ಅಂತ ಅಷ್ಟೇ. ಅವರ ಪರವಾಗಿ ಮಾತನಾಡಿದರೂ ಡ್ಯಾಮೇಜ್, ನನ್ನ ಪರವಾಗಿ ಮಾತನಾಡಿದರೂ ಡ್ಯಾಮೇಜ್ ಆಗುತ್ತೆ. ಯಾರಿಗೂ ಪವರ್ ಶೇರಿಂಗ್ ಬಗ್ಗೆ ಮಾತನಾಡಲು ಹಕ್ಕಿಲ್ಲ. ರಂಗನಾಥ್ ಸೇರಿದಂತೆ ಯಾರೂ ಸಹ ಮಾತನಾಡಬಾರದು ಎಂದರು. ಇದನ್ನೂ ಓದಿ: ಕಾಫಿನಾಡಿಗೆ ಹರಿದು ಬಂದ ಪ್ರವಾಸಿಗರ ದಂಡು – ಮುಳ್ಳಯ್ಯನಗಿರಿ ಬಳಿ 5 ಕಿ.ಮೀ ಸಾಲುಗಟ್ಟಿ ನಿಂತ ವಾಹನಗಳು
ಪವರ್ ಶೇರಿಂಗ್ ಬಗ್ಗೆ ಎಲ್ಲಿ ಚರ್ಚೆ ಇದೆ. ಮಾಧ್ಯಮದವರು ಬೇರೆ ರೀತಿಯಲ್ಲಿ ಬರೆಯುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿದ್ದಾರೆ. ಯಾರೂ ಚರ್ಚೆ ಮಾಡಬಾರದು. ಇದರ ಬಗ್ಗೆ ಮತಾಡೋರು ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಿದ್ರೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದಂತೆ. ಕುಣಿಗಲ್ ಶಾಸಕ ರಂಗನಾಥ್, ಮಾಜಿ ಸಂಸದ ಶಿವರಾಮೇಗೌಡರಿಗೂ ನೋಟಿಸ್ ಕೊಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೈಸೂರು ದಸರಾ | ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ
ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ನಮ್ಮ ನಡುವೆ ಯಾವುದೇ ಒಪ್ಪಂದ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಪವರ್ ಶೇರಿಂಗ್ ವಿಚಾರವಾಗಿ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಡಿಕೆಶಿ ನೀಡಿದ್ದ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ ನೀಡಿದರು. ನಮ್ಮಿಬ್ಬರ ನಡುವೆ ಯಾವುದೇ ಒಪ್ಪಂದ ಆಗಿಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಅದರಂತೆ ನಡೆದುಕೊಳ್ಳೋದು ಎಂದು ತಿಳಿಸಿದರು.
ಸಚಿವ ಸಂಪುಟ ಪುನಾರಚನೆ ಕುರಿತು ಮಾತನಾಡಿ, ಸದ್ಯಕ್ಕೆ ಸಚಿವ ಸಂಪುಟ ಪುರ್ನರಚನೆ ಆಗಲ್ಲ. ನಾನು ಇದುವರೆಗೆ ಹೇಳಿಲ್ಲ. ಯಾರು ಹೇಳ್ತಾರೆ ಅನ್ನೋದು ಮುಖ್ಯವಲ್ಲ. ಹೈಕಮಾಂಡ್ ಸೂಚನೆ ನೀಡಬೇಕು. ಆ ಬಳಿಕ ನಾನು ನಿರ್ಧಾರ ಮಾಡಬೇಕು. ಹೈಕಮಾಂಡ್ ಹೇಳಿಯೂ ಇಲ್ಲ, ನಾನು ತೀರ್ಮಾನವನ್ನು ತೆಗೆದುಕೊಂಡಿಲ್ಲ ಎಂದರು.
ಬೆಂಗಳೂರು: ಪವರ್ ಶೇರಿಂಗ್ (Power Sharing) ವಿಚಾರದ ಬಗ್ಗೆ ಏನೇ ಇದ್ದರೂ ಅದು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಸಚಿವ ಕೃಷ್ಣಭೈರೇಗೌಡ (Krishna Byre Gowda) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸಮಯ ಬಂದಾಗ ಪಕ್ಷದಲ್ಲಿ ಇದರ ಬಗ್ಗೆ ತೀರ್ಮಾನ ಮಾಡುತ್ತೇವೆ. ನಮ್ಮ ಹಾಗೂ ನಿಮ್ಮ ಗಮನ ಜನರ ಕಲ್ಯಾಣದ ಕಡೆ, ಅಭಿವೃದ್ಧಿ ಕಡೆ ಇರಬೇಕು. ಜನರಿಗೆ ಒಳ್ಳೆದು ಆಗೋದನ್ನು ನೋಡಬೇಕು. ಅಧಿಕಾರ ಬರುತ್ತೆ, ಹೋಗುತ್ತೆ. ಜನರಿಗೆ ಒಳ್ಳೆದು ಆಗೋದನ್ನ ನೋಡಿಕೊಳ್ಳಬೇಕು. ನೀವು ನಾವು ಸೇರಿ ಒಳ್ಳೆದನ್ನು ಮಾಡೋಣ. ಜನರಿಗೆ ಸರ್ಕಾರ ಯಾವ ರೀತಿ ಕೆಲಸ ಮಾಡುತ್ತಿದೆ ಅನ್ನೋದು ಮುಖ್ಯ ಎಂದರು. ಇದನ್ನೂ ಓದಿ: ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ
ಶಾಸಕರ ಹೇಳಿಕೆಗಳು ಒಬ್ಬೊಬ್ಬರದ್ದು ಒಂದೊಂದು ರೀತಿ ಇದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶವಿದೆ. ಪಕ್ಷ ಎಲ್ಲಾ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ. ಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಎಲ್ಲಾ ರೀತಿಯ ಆಗು ಹೋಗುಗಳನ್ನ ಗಮನಿಸಿಸುತ್ತಾರೆ. ಯಾವುದು ಒಳ್ಳೆಯದೋ ಅದನ್ನು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯವರಿಗೆ ಬೇರೆಯವರ ಕೆರೆಯಲ್ಲಿ ಮೀನು ಹಿಡಿಯುವುದೇ ಕೆಲಸ: ವೀರಪ್ಪ ಮೊಯ್ಲಿ
ಆಪರೇಷನ್ ಕಮಲ (Operation Kamala) ಅನ್ನೋದು ಬಿಜೆಪಿಯವರ (BJP) ಡಿಎನ್‌ಎಯಲ್ಲೇ ಇದೆ. ಬಿಜೆಪಿ ಒಂದು ಬಾರಿ ಅಲ್ಲ, ಅನೇಕ ಬಾರಿ ಬೇರೆ ಶಾಸಕರನ್ನು ದುಡ್ಡು ಕೊಟ್ಟು ಖರೀದಿ ಮಾಡಿದೆ. 2008ರಲ್ಲಿ, 2018ರಲ್ಲಿ ಮಾಡಿತ್ತು. ಅವರ ಜಾಯಮಾನದಲ್ಲೇ ಇದು ನಡೆದಿದೆ. ಮಹಾರಾಷ್ಟ್ರ, ಗೋವಾ, ರಾಜಸ್ಥಾನ ಎಲ್ಲಾ ಕಡೆ ಆಪರೇಷನ್ ಆಗಿದೆ. ಎಲ್ಲಿ ಅಧಿಕಾರದಲ್ಲಿದ್ದಾರೆ ಅಲ್ಲಿ ಆಪರೇಷನ್ ಆಗಿದೆ ಎಂದು ಅವರ ಮುಖ್ಯಸ್ಥರೇ ಹೇಳಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡೋದು ಅವರ ಚಾಳಿ. ಬಿಜೆಪಿ ಅವರು ಸಂವಿಧಾನಕ್ಕೂ ಗೌರವ ಕೊಡಲ್ಲ. ವಾಮಮಾರ್ಗ ಅವರ ರಾಜಮಾರ್ಗ. ಅವರು ಅಸಾಧ್ಯವಾದದ್ದನ್ನು ಮಾಡುತ್ತಾರೆ. ಆಪರೇಷನ್ ಮಾಡುವುದು ಅವರ ಡಿಎನ್‌ಎಯಲ್ಲೇ ಇದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಶಾಸಕರನ್ನು ಖರೀದಿಸಿ ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಬರೋದು ಬಿಜೆಪಿ ಕೆಲಸ: ಆರ್‌ಬಿ ತಿಮ್ಮಾಪುರ