Tag: Power Pole

  • ಲವ್‌ ಮಾಡಿ ಯುವತಿಯನ್ನು ಕರೆದೊಯ್ದನೆಂದು ಯುವಕನ ತಾಯಿಯನ್ನೇ ಕಂಬಕ್ಕೆ ಕಟ್ಟಿ ಥಳಿತ!

    ಲವ್‌ ಮಾಡಿ ಯುವತಿಯನ್ನು ಕರೆದೊಯ್ದನೆಂದು ಯುವಕನ ತಾಯಿಯನ್ನೇ ಕಂಬಕ್ಕೆ ಕಟ್ಟಿ ಥಳಿತ!

    ಹಾವೇರಿ: ಕೆಲವೊಮ್ಮೆ ಮಕ್ಕಳು ಮಾಡುವ ತಪ್ಪಿಗೆ ಹೆತ್ತವರು ಶಿಕ್ಷೆ ಅನುಭವಿಸುತ್ತಾರೆ. ಅಂತೆಯೇ ಹಾವೇರಿ (Haveri) ಜಿಲ್ಲೆಯಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ.

    ಪ್ರೀತಿಸಿ ಬಳಿಕ ಯುವತಿಯನ್ನು ಕರೆದುಕೊಂಡು ಹೋದನೆಂದು ಸಿಟ್ಟಿಗೆದ್ದ ಯುವತಿ ಕಡೆಯವರು ಯುವಕನ ತಾಯಿಯನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಥಳಿಸಿದ್ದಾರೆ. ಈ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಈ ಘಟನೆ 4 ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    50 ವರ್ಷದ ಹನುಮವ್ವ ಮೆಡ್ಲೇರಿ ಹಲ್ಲೆಗೊಳಗಾದ ಮಹಿಳೆ. ಆರೋಪಿಗಳನ್ನು ಚಂದ್ರಪ್ಪ , ಗಂಗಪ್ಪ ಹಾಗೂ ಗುತ್ತೆವ್ವ ಎಂದು ಗುರುತಿಸಲಾಗಿದೆ. ಹನುಮವ್ವಳ ಮಗ ಯುವತಿಯನ್ನ ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಮಗ ಮಾಡಿದ ತಪ್ಪಿಗೆ ತಾಯಿಯನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿ ಕ್ರೌರ್ಯ ಮೆರೆದಿದ್ದಾರೆ.

    ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ವಿದ್ಯುತ್ ದುರಸ್ಥಿ ವೇಳೆ ಲೈನ್‍ಮನ್ ಸಾವು – ಅಧಿಕಾರಿಗಳ ವಿರುದ್ಧ ರೊಚಿಗೆದ್ದ ಸಂಬಂಧಿಕರು

    ವಿದ್ಯುತ್ ದುರಸ್ಥಿ ವೇಳೆ ಲೈನ್‍ಮನ್ ಸಾವು – ಅಧಿಕಾರಿಗಳ ವಿರುದ್ಧ ರೊಚಿಗೆದ್ದ ಸಂಬಂಧಿಕರು

    ಹಾಸನ: ವಿದ್ಯುತ್ ಪರಿವರ್ತಕ ರಿಪೇರಿ ವೇಳೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕಿನ ಸಬ್ಬನಹಳ್ಳಿಯಲ್ಲಿ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.

    ಹೆಗ್ಗಡಿಹಳ್ಳಿ ಗ್ರಾಮದ ಮಂಜುನಾಥ್(35) ಮೃತ ಸೆಸ್ಕ್ ನೌಕರ. ಮಂಜುನಾಥ್ ವಿದ್ಯುತ್ ಕಂಬದ ಮೇಲೇರಿ ಟ್ರಾನ್ಸ್‍ಫರಂ ದುರಸ್ತಿ ಮಾಡುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ಹರಿದು ಕಂಬದ ಮೇಲೆಯೇ ಹಸುನೀಗಿದ್ದಾನೆ. ನಂತರ ಸೆಸ್ಕ್ ಸಿಬ್ಬಂದಿ ಮಂಜುನಾಥ್ ಮೃತದೇಹವನ್ನು ಕಂಬದಿಂದ ಕೆಳಗಿಳಿಸಿದರು. ಇದನ್ನೂ ಓದಿ: ನೀಟ್ ಪರೀಕ್ಷಾ ಹಾಲ್‌ಗೆ ಪ್ರವೇಶಿಸುವ ಮೊದಲು ಬ್ರಾಗಳನ್ನು ತೆಗೆದುಹಾಕಲು ಒತ್ತಾಯ – ತನಿಖೆಗೆ ಆದೇಶ 

    crime

    ಅಧಿಕಾರಿಗಳ ನಿರ್ಲಕ್ಷ್ಯವೇ ಲೈನ್‍ಮನ್ ಸಾವಿಗೆ ಕಾರಣ ಎಂದು ಮೃತನ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಕೆಲಕಾಲ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.

    ಮಂಜುನಾಥ್ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಕಾಂಗ್ರೆಸ್ ಸತ್ಯ ಹೇಳಿದ ದಿನ ಅವರಿಗೆ ಸಾವು ಬರುತ್ತೆ: ಕಾರಜೋಳ ಕಿಡಿ

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್ ಕಂಬಕ್ಕೆ ಟಾಟಾ ಸುಮೋ ಡಿಕ್ಕಿ – ಮಹಿಳೆ ಸಾವು, ಮೂವರ ಸ್ಥಿತಿ ಗಂಭೀರ

    ವಿದ್ಯುತ್ ಕಂಬಕ್ಕೆ ಟಾಟಾ ಸುಮೋ ಡಿಕ್ಕಿ – ಮಹಿಳೆ ಸಾವು, ಮೂವರ ಸ್ಥಿತಿ ಗಂಭೀರ

    ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಟಾಟಾ ಸುಮೋ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಹಿಳೆ ಮೃತಪಟ್ಟು, ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ವರನಹೊಂಡ ಎಂಬಲ್ಲಿ ನಡೆದಿದೆ.

    ಮೃತಪಟ್ಟ ಮಹಿಳೆಯನ್ನು ನೀಲಮ್ಮ (60) ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡ ಮೂವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ತೀರ್ಥಹಳ್ಳಿ ರಸ್ತೆಯ ಜಂಬಳ್ಳಿ ಕಡೆಯಿಂದ ರಿಪ್ಪನ್ ಪೇಟೆಗೆ ಆಗಮಿಸುತ್ತಿದ್ದ ಟಾಟಾ ಸುಮೋದಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಘಟನೆ ಕುರಿತು ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮನೆಗುರುಳಿದ ಮರ- ಪಾರಾದ ಉಡುಪಿ ವೆಂಕಟರಮಣ ಐತಾಳ್ ಅನುಭವ ಭಯಾನಕ

  • ವಿದ್ಯುತ್ ಕಂಬಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

    ವಿದ್ಯುತ್ ಕಂಬಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

    ವಿಜಯಪುರ: ಹೈ ವೋಲ್ಟೇಜ್ ವಿದ್ಯುತ್ ಕಂಬಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

    ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹೊರವಲಯದಲ್ಲಿರುವ ಹೈ ವೋಲ್ಟೇಜ್ ವಿದ್ಯುತ್ ಕಂಬದಲ್ಲಿ ಶವ ಪತ್ತೆಯಾಗಿದೆ. ಮುದ್ದೇಬಿಹಾಳ ತಾಲೂಕು ಹಂಡರಗಲ್ ಗ್ರಾಮದ ರಮೇಶ್ ಸಿದ್ದರಾಮಪ್ಪ ಕಣಕಾಲ(26) ಶವ ಪತ್ತೆಯಾಗಿದ್ದು, ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮೃತ ರಮೇಶ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

    ಮುದ್ದೇಬಿಹಾಳ ಪಟ್ಟಣದಲ್ಲೇ ರೂಮ್ ಮಾಡಿಕೊಂಡು ರಮೇಶ್ ವಾಸವಿದ್ದ. ಕಾಲುವೆಯಲ್ಲಿ ಈಜಲು ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿದ್ದನಂತೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಇಂಜಿನಿಯರ್ ಎಡವಟ್ಟು- ವಿದ್ಯುತ್ ಕಂಬ ಸ್ಥಳಾಂತರಿಸದೇ ಚರಂಡಿ ನಿರ್ಮಾಣ

    ಇಂಜಿನಿಯರ್ ಎಡವಟ್ಟು- ವಿದ್ಯುತ್ ಕಂಬ ಸ್ಥಳಾಂತರಿಸದೇ ಚರಂಡಿ ನಿರ್ಮಾಣ

    ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಗರದಾದ್ಯಂತ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಗರ ಸ್ಮಾರ್ಟ್ ಆಗುತ್ತಿದೆ. ಆದರೆ ಇದೇ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮಾಡುತ್ತಿರುವ ಕಾಮಗಾರಿ ಸಾರ್ವಜನಿಕರ ನಗೆಪಾಟಲಿಗೆ ಕಾರಣವಾಗಿದೆ.

    ನಗರದ ಸೈನಿಕ ಪಾರ್ಕ್ ಬಳಿ ಚರಂಡಿಯೊಳಗೆ ವಿದ್ಯುತ್ ಕಂಬ ಇದ್ದರೂ ಅವುಗಳನ್ನು ಸ್ಥಳಾಂತರ ಮಾಡದೇ ಚರಂಡಿ ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಇಂತಹ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿ ನಕ್ಕು ಸುಮ್ಮನಾಗಿರುತ್ತೇವೆ. ಆದರೆ ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಅದರಲ್ಲೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳ ವಸತಿ ಗೃಹಗಳು ಇರುವ ಸಮೀಪವೇ ಇಂತಹ ಅವೈಜ್ಞಾನಿಕ ಕಾಮಗಾರಿ ನಡೆದಿದೆ.

    ಚರಂಡಿ ನಿರ್ಮಾಣ ಮಾಡುವ ಮೊದಲು ಈ ಕಂಬಗಳನ್ನು ಸ್ಥಳಾಂತರಿಸಬೇಕಿತ್ತು. ಆದರೆ ಅವುಗಳನ್ನು ಸ್ಥಳಾಂತರ ಮಾಡದೇ ಅವು ಇರುವ ಜಾಗದಲ್ಲೇ ಬಿಟ್ಟು ಚರಂಡಿ ನಿರ್ಮಾಣ ಮಾಡುವ ಮೂಲಕ ಇಂಜಿನಿಯರ್ ಗಳು ಕಾಮಗಾರಿ ಮಾಡಿ, ಎಡವಟ್ಟು ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ನಿವಾಸದ ಬಳಿಯೇ ಈ ಕಾಮಗಾರಿ ನಡೆದಿರುವುದು ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತಿದೆ.

  • ಮಳೆ ಗಾಳಿಗೆ ಧರೆಗುರುಳಿದ 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು- ಪ್ರವಾಹದಲ್ಲಿ ಸಿಲುಕಿ ಓರ್ವ ಸಾವು

    ಮಳೆ ಗಾಳಿಗೆ ಧರೆಗುರುಳಿದ 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು- ಪ್ರವಾಹದಲ್ಲಿ ಸಿಲುಕಿ ಓರ್ವ ಸಾವು

    ಹಾಸನ: ಗಾಳಿ ಮಳೆಗೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.

    ತಾಲೂಕಿನಲ್ಲಿ ಮಳೆ ಹೆಚ್ಚಾದ ಪರಿಣಾಮ ತುರ್ತು ಅಧಿಕಾರಿಗಳ ಸಭೆ ನಡೆಸಿದ ಸಕಲೇಶಪುರ ಕ್ಷೇತ್ರದ ಶಾಸಕ ಹೆಚ್.ಕೆ ಕುಮಾರಸ್ವಾಮಿ, ಪ್ರವಾಹ ಭೀತಿ ಉಂಟಾಗಿರುವ ಆಜಾದ್ ರಸ್ತೆಗೆ ಅಧಿಕಾರಿಗಳೊಂದಿಗೆ ತೆರಳಿ ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜನರಿಗೆ ಮನವಿ ಮಾಡಿದ್ದಾರೆ.

    ನಂತರ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಶಾಸಕ ಹೆಚ್‍ಕೆ.ಕುಮಾರಸ್ವಾಮಿ, ಕಳೆದ ವರ್ಷವೂ ಸಕಲೇಶಪುರದಲ್ಲಿ ಪ್ರವಾಹ ಉಂಟಾಗಿದ್ದ ಪರಿಣಾಮ ಸರ್ಕಾರಕ್ಕೆ 549 ಕೋಟಿ ಪರಿಹಾರ ಕೇಳಿದ್ದೆವು. ಆದರೆ ಸರ್ಕಾರ ಕೇವಲ 25 ಕೋಟಿ ಪರಿಹಾರ ನೀಡಿದೆ. ಈಗ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ಅಧಿಕಾರಿಗಳ ಜೊತೆ ತುರ್ತು ಸಭೆ ಕರೆದು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಚರ್ಚಿಸಿದ್ದೇನೆ.

    ತಾಲೂಕಿನಲ್ಲಿ 200ಕ್ಕೂ ಹೆಚ್ಚಿನ ವಿದ್ಯುತ್ ಕಂಬಗಳು ಉರುಳಿದ್ದು ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ತಕ್ಷಣ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಾಳೆ ಹಾಸನ ಉಸ್ತುವಾರಿ ಸಚಿವರು ಇಲ್ಲಿಗೆ ಭೇಟಿ ನೀಡಲಿದ್ದು, ಅವರಿಗೂ ಪರಿಸ್ಥಿತಿಯ ಮನವರಿಕೆ ಮಾಡಿಕೊಡಲಾಗುವುದು ಎಂದು ಶಾಸಕ ಹೆಚ್.ಕೆ.ಕುಮಾರಸ್ವಾಮಿ ತಿಳಿಸಿದ್ದಾರೆ.

  • ನೆಲಕ್ಕೆ ಬಿದ್ದ ವಿದ್ಯುತ್ ಕಂಬ, ವೈರ್ ಜೊತೆಗೆ ಬಾಲಕಿ ಆಟ

    ನೆಲಕ್ಕೆ ಬಿದ್ದ ವಿದ್ಯುತ್ ಕಂಬ, ವೈರ್ ಜೊತೆಗೆ ಬಾಲಕಿ ಆಟ

    – ಹೈ ವೋಲ್ಟೇಜ್ ವಿದ್ಯುತ್ ತಂತಿಯೇ ಇವಳ ಜೋಕಾಲಿ

    ಯಾದಗಿರಿ: ಕೊರೊನಾದಿಂದ ಶಾಲೆಗೆ ರಜೆ ಇರುವ ಹಿನ್ನೆಲೆ ಪೋಷಕರು ತಮ್ಮ ಮಕ್ಕಳನ್ನು ಬೇಕಾ ಬಿಟ್ಟಿಯಾಗಿ ಆಟವಾಡಲು ಬಿಟ್ಟಿದ್ದಾರಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಇಲ್ಲೊಬ್ಬ ಬಾಲಕಿ ಮಳೆ ಗಾಳಿಗೆ ನೆಲಕ್ಕುರುಳಿದ ವಿದ್ಯುತ್ ಕಂಬ ಹಾಗೂ ತಂತಿಯ ಜೊತೆ ಆಟವಾಡಿದ್ದು, ಹೈ ವೋಲ್ಟೇಜ್ ವಿದ್ಯುತ್ ತಂತಿಯನ್ನೇ ಬಾಲಕಿ ಜೋಕಾಲಿ ಮಾಡಿಕೊಂಡಿದ್ದಾಳೆ.

    ಜಿಲ್ಲೆಯ ಶಹಾಪೂರ ತಾಲೂಕಿನ ಗೋಗಿ ಗ್ರಾಮದ ಹೊರ ವಲಯದಲ್ಲಿ ಘಟನೆ ನಡೆದಿದೆ. ಬಾಲಕಿ ಕೆಲ ಹೊತ್ತು ಅಲ್ಲಿಯೇ ಆಟವಾಡಿದ್ದಾಳೆ. ಅದೃಷ್ಟವಶಾತ್ ವಿದ್ಯುತ್ ತಂತಿಯಲ್ಲಿ ಕರೆಂಟ್ ಇರದ ಕಾರಣ ಬಾಲಕಿ ಅನಾಹುತದಿಂದ ಪಾರಾಗಿದ್ದಾಳೆ. ಒಂದು ಸಣ್ಣ ನಿಷ್ಕಾಳಜಿ ಮಕ್ಕಳ ಪ್ರಾಣಕ್ಕೆ ಕುತ್ತು ತರಬಹುದು. ಹೀಗಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನಹರಿಸಬೇಕು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಈ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಮಳೆ, ಗಾಳಿಗೆ ವಿದ್ಯತ್ ಕಂಬಗಳು ಧರೆಗುರುಳಿದ್ದವು. ಬಿದ್ದು ಎರಡು ದಿನವಾಗಿದ್ದರೂ ಜೆಸ್ಕಾಂ ಸಿಬ್ಬಂದಿ ಮಾತ್ರ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಸ್ಥಳೀಯರು ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಡೋಂಟ್‍ಕೇರ್ ನೀತಿ ಅನುಸರಿಸುತ್ತಿದ್ದಾರೆ. ಮಕ್ಕಳು ಪಾಲಕರ ಕಣ್ಣು ತಪ್ಪಿಸಿ ಗ್ರಾಮದ ಹೊರ ವಲಯಕ್ಕೆ ಬಂದು ಕಂಬದಲ್ಲಿ ಆಟವಾಡುತ್ತಿದ್ದಾರೆ.

    ಮಕ್ಕಳು ಆಟವಾಡುತ್ತಿರುವುದನ್ನು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದು, ವಿಷಯ ತಿಳಿಸಿದ ಗ್ರಾಮಸ್ಥರಿಗೆ ಕಂಬದಲ್ಲಿ ವಿದ್ಯುತ್ ಹರಿಯುವದಿಲ್ಲ ಎಂಬ ಬೇಜವಾಬ್ದಾರಿ ಉತ್ತರವನ್ನು ಅಧಿಕಾರಿಗಳು ನೀಡುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.

  • ಧ್ವಜಕಂಬಕ್ಕೆ ವಿದ್ಯುತ್ ಶಾಕ್ – ಬೆಳ್ಳಂಬೆಳಗ್ಗೆ ಐವರು ವಿದ್ಯಾರ್ಥಿಗಳ ದುರ್ಮರಣ

    ಧ್ವಜಕಂಬಕ್ಕೆ ವಿದ್ಯುತ್ ಶಾಕ್ – ಬೆಳ್ಳಂಬೆಳಗ್ಗೆ ಐವರು ವಿದ್ಯಾರ್ಥಿಗಳ ದುರ್ಮರಣ

    ಕೊಪ್ಪಳ: ಬೆಳ್ಳಂಬೆಳಗ್ಗೆ ಧ್ವಜಕಂಬಕ್ಕೆ ವಿದ್ಯುತ್ ತಗುಲಿ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ದಾರುಣ ಘಟನೆ ಕೊಪ್ಪಳ ನಗರದ ಬನ್ನಿಕಟ್ಟಿ ಏರಿಯಾದಲ್ಲಿ ನಡೆದಿದೆ.

    ಬಿಸಿಎಂ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಈ ದುರಂತ ಸಂಭವಿಸಿದೆ. 10ನೇ ತರಗತಿಯ ಮಲ್ಲಿಕಾರ್ಜುನ್ ಮೆತಗಲ್, ಬಸವರಾಜ ಲಿಂಗದಳ್ಳಿ, 9ನೇ ತರಗತಿ ದೇವರಾಜ್ ಹಲಗೇರಿ, ಹೈದರನಗರದ ಕುಮಾರ್ ಮತ್ತು 8ನೇ ತಗರತಿಯ ಗಣೇಶ್ ಲಾಚನಕೇರಿ ಮೃತ ದುರ್ದೈವಿಗಳು.

    ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ವೇಳೆ ಒಂದು ಕಬ್ಬಿಣದ ಪೈಪ್‍ಯನ್ನು ನೆಟ್ಟು  ಧ್ವಜಾರೋಹಣ ಮಾಡಿದ್ದರು. ಬಳಿಕ ಧ್ವಜವನ್ನು ಕೆಳಗೆ ಇಳಿಸಿದ್ದರು. ಆದರೆ ಇಂದು ಬೆಳಗ್ಗೆ ಪೈಪನ್ನು ತೆರವುಗೊಳಿಸಲು ಮೊದಲು ಒಬ್ಬ ವಿದ್ಯಾರ್ಥಿ ಹೋಗಿದ್ದಾನೆ. ಆಗ ಆತನಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಆಘಾತವಾಗಿ ಕುಸಿದುಬಿದ್ದಿದ್ದಾನೆ. ಅವನನ್ನು ಕಾಪಾಡಲು ಹೋಗಿ ಉಳಿದ ನಾಲ್ಕು ವಿದ್ಯಾರ್ಥಿಗಳಿಗೂ ವಿದ್ಯುತ್ ಸ್ಪರ್ಶವಾಗಿ ಆಘಾತವಾಗಿ ಕೂಡಲೇ ಮೃತಪಟ್ಟಿದ್ದಾರೆ.

    ಸ್ವಾತಂತ್ರ್ಯ ದಿನಾಚರಣೆಯ ದಿನದಂದೇ ಧ್ವಜ ಕಂಬವನ್ನು ಕೆಳಗಿಳಿಸಬೇಕಿತ್ತು. ಆದರೆ ಇಂದು ವಿದ್ಯಾರ್ಥಿಗಳು ಪೈಪ್ ಇಳಿಸಲು ಹೋದಾಗ ಈ ದುರ್ಘಟನೆ ನಡೆದಿದೆ. ಇದು ಹಾಸ್ಟೆಲ್ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಘಟನೆ ನಡೆದ ಸ್ಥಳಕ್ಕೆ ಹಾಸ್ಟೆಲ್ ಅಧಿಕಾರಿ ಮತ್ತು ವಾರ್ಡನ್ ಬಸವರಾಜು ಬಂದಿಲ್ಲ. ವಾರ್ಡನ್ ಹಾಸ್ಟೆಲ್‍ನಲ್ಲಿ ಇರದೆ ಮನೆಗೆ ಹೋಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಯಾರು ಕಂಬ ಇಳಿಸಲು ಹೇಳಿದ್ದರು ಎಂಬ ಪ್ರಶ್ನೆ ಮೂಡಿದೆ.

    ಮಾಹಿತಿ ತಿಳಿದು ಕೊಪ್ಪಳ ನಗರದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಮುಂಜಾನೆ 7 ಗಂಟೆ ನಮಗೆ ಮಾಹಿತಿ ತಿಳಿಯಿತು. ಈಗ ಜಿಲ್ಲಾಸ್ಪತ್ರೆಗೆ ಹೋಗುತ್ತಿದ್ದೇನೆ. ಈ ಕುರಿತು ತನಿಖೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕೊಪ್ಪಳ ಡಿಸಿ ಸುನಿಲ್ ಕುಮಾರ್ ಹೇಳಿದರು.

  • ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ – ಇಬ್ಬರು ಸಾವು

    ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ – ಇಬ್ಬರು ಸಾವು

    ನವದೆಹಲಿ: ವೇಗವಾಗಿ ಬಂದ ಕಾರು ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಬಡಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಪೂರ್ವ ದೆಹಲಿಯ ವಿವೇಕ್ ವಿಹಾರದಲ್ಲಿ ನಡೆದಿದೆ.

    ಈ ಘಟನೆಯಲ್ಲಿ ಮಲ್ಕಾಗಂಜ್ ಮೂಲದ 18 ವರ್ಷದ ಪ್ರಬ್ಬೋತ್ ಸಿಂಗ್ ಮತ್ತು ಹರ್ಯಾಣ ಸಿರ್ಸಾ ಮೂಲದ 20 ವರ್ಷದ ರುಬಲ್ ಸಾವನ್ನಪ್ಪಿದ್ದು, ಕಮಲಾ ನಗರ್ ನಿವಾಸಿ ಕೇಶವ್ (21) ಮತ್ತು ಅರ್ಷ್‍ಪ್ರೀತ್‍ಗೆ ಗಂಭೀರವಾಗಿ ಗಾಯವಾಗಿದೆ.

    ತುಂಬಾ ವೇಗದಲ್ಲಿ ಬಂದ ಹೋಂಡಾ ಸಿಟಿ ಕಾರು ವಿದ್ಯುತ್ ಕಂಬಕ್ಕೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಕಾರು ಬಡಿದ ರಭಸಕ್ಕೆ ಕಂಬ ಕೂಡ ಬಾಗಿದ್ದು, ಇಬ್ಬರು ಮೃತ ಪಟ್ಟಿದ್ದಾರೆ. ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ ಮೇಘನಾ ಯಾದವ್, ತೀವ್ರವಾಗಿ ಗಾಯಗೊಂಡವರನ್ನು ಹತ್ತಿರದ ಜಿಟಿಬಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತುಂಬಾ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಚಾಲಕ ತುಂಬಾ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ನಿಯಂತ್ರಣ ತಪ್ಪಿ ಕಂಬಕ್ಕೆ ಬಡಿದಿದ್ದಾನೆ ಅದ್ದರಿಂದ ಈ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಿದ್ದಾರೆ.

  • ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹೊತ್ತಿ ಉರಿದ ಬೈಕ್

    ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹೊತ್ತಿ ಉರಿದ ಬೈಕ್

    ಹಾಸನ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್ ಹೊತ್ತಿ ಉರಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಸುಂಡಹಳ್ಳಿ ಬಳಿ ನಡೆದಿದೆ.

    ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಪೆಟ್ರೋಲ್ ಟ್ಯಾಂಕ್ ಗೆ ಹಾನಿಯಾಗಿದೆ. ಪರಿಣಾಮ ಪೆಟ್ರೋಲ್ ಸೋರಿಕೆಯಿಂದ ಬೈಕ್ ಬೆಂಕಿಗಾಹುತಿಯಾಗಿದೆ. ಅಪಘಾತದ ರಭಸಕ್ಕೆ ಬೈಕ್ ಹೊತ್ತಿ ಉರಿದಿದ್ದು, ಈ ಘಟನೆ ಕಂಡು ಸ್ಥಳೀಯರು ಬೆಚ್ಚಿ ಬಿದಿದ್ದಾರೆ.

    ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಶ್ರವಣಬೆಳಗೊಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv