Tag: Power Crisis

  • ದಿವಾಳಿ ಪಾಕಿಸ್ತಾನ ರೂಪಾಯಿ ಮೌಲ್ಯ ಪಾತಾಳಕ್ಕೆ- ಆಹಾರ ಪದಾರ್ಥಗಳ ಬೆಲೆ ಮತ್ತಷ್ಟೂ ದುಬಾರಿ.!

    ದಿವಾಳಿ ಪಾಕಿಸ್ತಾನ ರೂಪಾಯಿ ಮೌಲ್ಯ ಪಾತಾಳಕ್ಕೆ- ಆಹಾರ ಪದಾರ್ಥಗಳ ಬೆಲೆ ಮತ್ತಷ್ಟೂ ದುಬಾರಿ.!

    ಇಸ್ಲಾಮಾಬಾದ್: ದಿವಾಳಿ ಪಾಕಿಸ್ತಾನದ (Pakistan) ರೂಪಾಯಿ ಮೌಲ್ಯ ಈಗ ಡಾಲರ್ (US Dollar) ಎದುರು ಸಾರ್ವಕಾಲಿಕ 255 ರೂ.ಗೆ ಕುಸಿತ ಕಂಡಿದೆ.

    ಗುರುವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಒಂದೇ ದಿನ ಡಾಲರ್ ಎದುರು 24 ರೂ. ಕುಸಿತ ಕಂಡಿದ್ದು 255 ರೂ.ಗೆ ತಲುಪಿದೆ. ಕಳೆದ ಜನವರಿಯಲ್ಲಿ ಡಾಲರ್ ಎದುರು 175 ರೂ.ನಷ್ಟಿತ್ತು. ಇದೀಗ 255 ರೂ.ಗೆ ತಲುಪಿದೆ. ಈ ನಡುವೆ ಮಾರುಕಟ್ಟೆ ಶಕ್ತಿಗಳಿಗೆ ತಮ್ಮ ಕರೆನ್ಸಿ ದರವನ್ನು ನಿರ್ಧರಿಸಲು ಅವಕಾಶ ನೀಡುವಂತೆ ಪಾಕ್ ಸರ್ಕಾರಕ್ಕೆ ಷರತ್ತು ವಿಧಿಸಿದೆ. ಈ ಷರತ್ತನ್ನು ಪಾಕ್ ಸರ್ಕಾರ ಸಹ ಒಪ್ಪಿಕೊಂಡಿದೆ.

    PublicTV Explainer: ಆಹಾರಕ್ಕಾಗಿ ಹೊಡೆದಾಟ.. ಟ್ರಕ್‌ ಹಿಂದೆ ಓಟ - ಪಾಕ್‌ನಲ್ಲಿ ತುತ್ತು ಕೂಳಿಗೂ ತತ್ವಾರ

    ಏಕೆಂದರೆ ಪಾಕಿಸ್ತಾನ (Pakistan) ತನ್ನ ಸ್ಥಿರತೆ ಕಾಯ್ದುಕೊಳ್ಳಲು 6.5 ಬಿಲಿಯನ್ ಡಾಲರ್ ನೆರವು ಪಡೆಯಲು ಹವಣಿಸುತ್ತಿದೆ. ಅದಕ್ಕಾಗಿ ಜಾಗತಿಕ ಸಂಸ್ಥೆಯ ಅನುಮೋದನೆ ಪಡೆಯಲು ಎದುರು ನೋಡುತ್ತಿದೆ. ಇದನ್ನೂ ಓದಿ: PublicTV Explainer: ಆಹಾರಕ್ಕಾಗಿ ಹೊಡೆದಾಟ.. ಟ್ರಕ್‌ ಹಿಂದೆ ಓಟ – ಪಾಕ್‌ನಲ್ಲಿ ತುತ್ತು ಕೂಳಿಗೂ ತತ್ವಾರ

    PublicTV Explainer: ಆಹಾರಕ್ಕಾಗಿ ಹೊಡೆದಾಟ.. ಟ್ರಕ್‌ ಹಿಂದೆ ಓಟ - ಪಾಕ್‌ನಲ್ಲಿ ತುತ್ತು ಕೂಳಿಗೂ ತತ್ವಾರ

    ಈಗಾಗಲೇ ಪಾಕಿಸ್ತಾನದಲ್ಲಿ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದ್ದು, ಒಂದು ಪ್ಯಾಕೆಟ್ ಗೋಧಿ ಹಿಟ್ಟಿನ ಬೆಲೆ 3 ಸಾವಿರಕ್ಕೆ ಮಾರಾಟವಾಗುತ್ತಿದೆ. ವಿದ್ಯುತ್ ನಿರಂತರವಾಗಿ ಕೈಕೊಡುತ್ತಿರುವುದರಿಂದ ಇಡೀ ಪಾಕ್ ಕಗ್ಗತ್ತಲಲ್ಲಿ ಮುಳುಗಿದೆ. ಇದನ್ನೂ ಓದಿ: ಕಾರು ಗ್ಯಾರೇಜ್‍ನಲ್ಲಿ ನೋಡನೋಡ್ತಿದ್ದಂತೆ 3ಕ್ಕೂ ಹೆಚ್ಚು ವಾಹನಗಳು ಧಗಧಗ

    PublicTV Explainer: ಆಹಾರಕ್ಕಾಗಿ ಹೊಡೆದಾಟ.. ಟ್ರಕ್‌ ಹಿಂದೆ ಓಟ - ಪಾಕ್‌ನಲ್ಲಿ ತುತ್ತು ಕೂಳಿಗೂ ತತ್ವಾರ

    ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು (Pakistan Economic Crisis), ಹಣದುಬ್ಬರ ಉಂಟಾಗಿದೆ. ಪರಿಣಾಮವಾಗಿ ಆಹಾರ ಪದಾರ್ಥಗಳ ಬೆಲೆಯೂ ಗಗನಕ್ಕೇರಿದೆ. ಶ್ರೀಲಂಕಾ ಅನುಭವಿಸಿದ ಸಂಕಷ್ಟದ ಪರಿಸ್ಥಿತಿಯೇ ಪಾಕಿಸ್ತಾನಕ್ಕೂ ಎದುರಾಗಿದೆ. ವಿದೇಶಗಳಿಂದ ವಸ್ತು, ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ಡಾಲರ್ ಕೊರತೆಯೂ ದೇಶದಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡಿದೆ. ಆಹಾರ ಬಿಕ್ಕಟ್ಟು ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸರ್ಕಾರದ ವಿರುದ್ಧ ಜನ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾಕ್‌ನಲ್ಲಿ ಮೊಬೈಲ್, ಇಂಟರ್‌ನೆಟ್ ಸೇವೆ ಶೀಘ್ರವೇ ಸ್ಥಗಿತ!

    ಪಾಕ್‌ನಲ್ಲಿ ಮೊಬೈಲ್, ಇಂಟರ್‌ನೆಟ್ ಸೇವೆ ಶೀಘ್ರವೇ ಸ್ಥಗಿತ!

    ಇಸ್ಲಾಮಾಬಾದ್: ಶ್ರೀಲಂಕಾ ಹಾದಿಯಲ್ಲೇ ಸಾಗುತ್ತಿರುವ ಪಾಕಿಸ್ತಾನ ಇದೀಗ ತನ್ನ ದೇಶದ ಜನತೆಗೆ ಮತ್ತೊಂದು ಶಾಕ್ ನೀಡಿದೆ. ಲೋಡ್ ಶೆಡ್ಡಿಂಗ್ ಕೊರತೆಯಿಂದಾಗಿ ವಿದ್ಯುತ್ ಬಿಕ್ಕಟ್ಟು ಎದುರಿಸುತ್ತಿದ್ದು, ಈ ಬೆನ್ನಲ್ಲೇ ಮೊಬೈಲ್ ಬಳಕೆ ಹಾಗೂ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡಿದೆ.

    ಪಾಕಿಸ್ತಾನದ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಮಂಡಳಿ (NITB) ದೇಶದಲ್ಲಿ ವಿದ್ಯುತ್ ಕಡಿತದ ನಡುವೆ ಮೊಬೈಲ್ ಮತ್ತು ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಹೊಟ್ಟೆ ನೋವು ಅಂತ ಟಾಯ್ಲೆಟ್‍ಗೆ ಹೋದವಳು, ಮಗುವಿಗೆ ಜನ್ಮ ನೀಡಿದ್ಳು

    ಪಾಕಿಸ್ತಾನದ ಟೆಲಿಕಾಂ ಆಪರೇಟರ್‌ಗಳು ದೀರ್ಘಾವಧಿಯ ವಿದ್ಯುತ್ ನಿಲುಗಡೆಯಿಂದಾಗಿ ಮೊಬೈಲ್ ಮತ್ತು ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಏಕೆಂದರೆ ಅತಿಯಾದ ಮೊಬೈಲ್ ಬಳಕೆ ಹಾಗೂ ಇಂಟರ್‌ನೆಟ್ ಬಳಕೆಯಿಂದಾಗಿ ಟೆಲಿಕಾಂ ಕಾರ್ಯಾಚರಣೆಯಲ್ಲೂ ಸಮಸ್ಯೆಗಳಾಗುತ್ತಿವೆ ಎಂದು ಮಂಡಳಿ ಎಚ್ಚರಿಸಿದೆ.

    ಈ ಕುರಿತು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸಹ ಜುಲೈ ತಿಂಗಳಲ್ಲೇ ಲೋಡ್‌ಶೆಡ್ಡಿಂಗ್ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಇದನ್ನೂ ಓದಿ: Exclusive- ರಮ್ಯಾ ಯಾರು? ನಾನು ಯಾಕೆ ಅವರ ಆರೋಪಕ್ಕೆ ಉತ್ತರಿಸಲಿ? : ನಟಿ ಪವಿತ್ರಾ ಲೋಕೇಶ್

    ಪಾಕಿಸ್ತಾನಕ್ಕೆ ಅಗತ್ಯವಾದ ದ್ರವೀಕೃತ ನೈಸರ್ಗಿಕ ಅನಿಲ (LNG) ಪೂರೈಕೆಯನ್ನು ಪಡೆಯಲು ಸಾಧ್ಯವಾಗಲಿಲ್ಲ. ರಾಷ್ಟ್ರೀಯ ಅನಿಲ ಪೂರೈಕೆಯ ಒಪ್ಪಂದವನ್ನು ಒಪ್ಪಿಕೊಳ್ಳಲು ವಿಫಲವಾದಾಗಿನಿಂದ ವಿದ್ಯುತ್ ಬಿಕ್ಕಟ್ಟು ಎದುರಿಸಬೇಕಾಗಿದೆ. ವಿದ್ಯುತ್ ಉತ್ಪಾದನೆಗಾಗಿ ಎಲ್‌ಎನ್‌ಜಿ ಖರೀದಿಸಲು ದೇಶವು ಹೆಣಗಾಡುತ್ತಿದೆ ಎಂದು ಹೇಳಿದ್ದಾರೆ.

    ಇಂಧನ ಸಂರಕ್ಷಣೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಪಾಕಿಸ್ತಾನ ಸರ್ಕಾರವು ಸಾರ್ವಜನಿಕ ಸೇವಕರಿಗೆ ಈಗಾಗಲೇ ಕೆಲಸದ ಸಮಯವನ್ನು ಕಡಿತಗೊಳಿಸಿದೆ. ಕರಾಚಿ ಸೇರಿದಂತೆ ವಿವಿಧ ನಗರಗಳಲ್ಲಿ ಕಾರ್ಖಾನೆಗಳಿಗೆ ಶಾಪಿಂಗ್ ಮಾಲ್‌ಗಳನ್ನು ಬೇಗನೆ ಮುಚ್ಚಲು ಆದೇಶಿಸಿದೆ. 3 ತಿಂಗಳ ಸರಕುಗಳ ಪೂರೈಕೆಗಾಗಿ ಕತಾರ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸುತ್ತಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಹೇಳಿದ್ದಾರೆ.

    Live Tv

  • ಜುಲೈ – ಆಗಸ್ಟ್‌ನಲ್ಲೇ ಭಾರತಕ್ಕೆ ಎದುರಾಗಲಿದೆ ವಿದ್ಯುತ್ ಕೊರತೆ – CREA ವರದಿ ಹೇಳಿದ್ದೇನು?

    ಜುಲೈ – ಆಗಸ್ಟ್‌ನಲ್ಲೇ ಭಾರತಕ್ಕೆ ಎದುರಾಗಲಿದೆ ವಿದ್ಯುತ್ ಕೊರತೆ – CREA ವರದಿ ಹೇಳಿದ್ದೇನು?

    ನವದೆಹಲಿ: ದೇಶದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಅಗತ್ಯ ಪ್ರಮಾಣದ ಕಲ್ಲಿದ್ದಲಿನ ದಾಸ್ತಾನು ಕಡಿಮೆಯಾಗುತ್ತಿದೆ. ಇದರಿಂದ ಭಾರತ ವಿದ್ಯುತ್ ಬಿಕ್ಕಟ್ಟು ಎದುರಿಸುವ ಹಂತದಲ್ಲಿದೆ. ಬರುವ ಜುಲೈ-ಆಗಸ್ಟ್‌ನಲ್ಲಿ ಮತ್ತೊಮ್ಮೆ ವಿದ್ಯುತ್ ಸಮಸ್ಯೆಗೆ ಕಾರಣವಾಗಬಹುದು ಎಂದು ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಅಂಡ್ ಕ್ಲೀನ್‌ಏರ್ಸ್ (CREA) ಸಂಸ್ಥೆ ವರದಿ ಮಾಡಿದೆ.

    ಪ್ರಸ್ತುತ ದೇಶದ ಪಿಟ್‌ಹೆಡ್ ಪವರ್ ಸ್ಟೇಷನ್‌ಗಳಲ್ಲಿ 13.5 ದಶಲಕ್ಷ ಟನ್‌ಗಳು ಹಾಗೂ ದೇಶಾದ್ಯಂತ ಇರುವ ವಿದ್ಯುತ್ ಸ್ಥಾವರಗಳಲ್ಲಿ ಒಟ್ಟು 20.7 ದಶಲಕ್ಷ ಟನ್ ಕಲ್ಲಿದ್ದಲು ಸಂಗ್ರಹವಾಗಿದೆ. ಮುಂದಿನ ಜುಲೈ ಆಗಸ್ಟ್ ತಿಂಗಳಲ್ಲಿ ಕಲ್ಲಿದ್ದಲು ಸಂಗ್ರಹಣೆ ಸ್ಥಗಿತಗೊಳ್ಳಲಿದ್ದು, ವಿದ್ಯುತ್ ಬಿಕ್ಕಟ್ಟು ಎದುರಾಗಬಹುದು ಎಂದು ಸಿಆರ್‌ಇಎ ಅಂದಾಜಿಸಿದೆ. ಇದನ್ನೂ ಓದಿ: ಏಪ್ರಿಲ್‌ನಲ್ಲಿ ಕಲ್ಲಿದ್ದಲು ಕೊರತೆ ಆಗಿಲ್ಲ ಅಂತ ಸಚಿವ ಸುನಿಲ್ ಕುಮಾರ್ ಸುಳ್ಳು ಹೇಳಿದ್ರಾ?

    ಇಂಧನ ಕ್ಷೇತ್ರ ಹಾಗೂ ಸಂಬಂಧಿಸಿದ ವಿಷಯಗಳ ಬಗ್ಗೆ ಸಂಶೋಧನೆ ನಡೆಸುವ ಸ್ವತಂತ್ರ ಸಂಸ್ಥೆಯಾದ ಸಿಆರ್‌ಇಎ, ಇತ್ತೀಚಿನ ತನ್ನ ವರದಿಯಲ್ಲಿ ಈ ಮಾಹಿತಿ ನೀಡಿದೆ. ಅಧಿಕೃತವಾಗಿ ಲಭ್ಯವಿರುವ ಮಾಹಿತಿಯನ್ನು ಕ್ರೋಢೀಕರಿಸಿ ಈ ಅಭಿಪ್ರಾಯಕ್ಕೆ ಬರಲಾಗಿದೆ. ಬರುವ ದಿನಗಳಲ್ಲಿ ವಿದ್ಯುತ್ ಬೇಡಿಕೆಯಲ್ಲಿ ಸ್ವಲ್ಪವೇ ಹೆಚ್ಚಳ ಕಂಡುಬಂದರೂ, ಅದಕ್ಕೆ ಸ್ಪಂದಿಸುವ ಸ್ಥಿತಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಇಲ್ಲ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ಕಾಲೇಜ್ ಕ್ಯಾಂಪಸ್‍ನಲ್ಲಿ ನಮಾಜ್ ಮಾಡಿದ ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳಿ: ಯುವ ಬಿಜೆಪಿ

    ಸಂಭಾವ್ಯ ಸಮಸ್ಯೆಯನ್ನು ಎದುರಿಸುವ ಸಲುವಾಗಿ, ಉಷ್ಣ ವಿದ್ಯುತ್ ಸ್ಥಾವರಗಳಿಗೆ ಅಗತ್ಯಪ್ರಮಾಣದ ಕಲ್ಲಿದ್ದಲನ್ನು ಪೂರೈಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ. ನೈರುತ್ಯ ಮುಂಗಾರಿನ ಆರಂಭವು ಕಲ್ಲಿದ್ದಲಿನ ಗಣಿಗಾರಿಕೆ ಹಾಗೂ ಸಾಗಣೆ ಮೇಲೆ ಪರಿಣಾಮವನ್ನುಂಟು ಮಾಡಲಿದೆ. ದೇಶದ ಸ್ಥಾವರಗಳಲ್ಲಿನ ದಾಸ್ತಾನು ಖಾಲಿಯಾಗುತ್ತಿರುವಂತೆಯೇ, ಕಲ್ಲಿದ್ದಲನ್ನು ಮರುಭರ್ತಿ ಮಾಡದೇ ಇದ್ದರೆ ವಿದ್ಯುತ್ ಸಮಸ್ಯೆ ಕಾಡಲಿದೆ ಎಂದೂ ವರದಿ ಪ್ರತಿಪಾದಿಸಿದೆ.

    ಇತ್ತೀಚೆಗೆ ದೇಶದಲ್ಲಿ ಕಂಡುಬಂದಿದ್ದ ವಿದ್ಯುತ್ ಸಮಸ್ಯೆಗೆ ಕಲ್ಲಿದ್ದಲ್ಲಿನ ಉತ್ಪಾದನೆಯೇ ಕಾರಣವಾಗಿರಲಿಲ್ಲ. ಅದರ ವಿತರಣೆ ಹಾಗೂ ಆಡಳಿತ ವ್ಯವಸ್ಥೆಯ ಉದಾಸೀನತೆಯೇ ಕಾರಣವಾಗಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.

  • ವಿದ್ಯುತ್ ಸಮಸ್ಯೆ – 1,100 ರೈಲುಗಳು ರದ್ದು

    ವಿದ್ಯುತ್ ಸಮಸ್ಯೆ – 1,100 ರೈಲುಗಳು ರದ್ದು

    ನವದೆಹಲಿ: ವಿವಿಧ ರಾಜ್ಯಗಳಲ್ಲಿ ಸಂಭವಿಸುತ್ತಿರುವ ವಿದ್ಯುತ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಲ್ಲಿದ್ದಲು ಸಾಗಾಟಕ್ಕೆ ಅನುಕೂಲವಾಗುವಂತೆ ಭಾರತೀಯ ರೈಲ್ವೆ ಇನ್ನೂ ಹೆಚ್ಚಿನ ರೈಲುಗಳನ್ನು ರದ್ದುಗೊಳಿಸಿದೆ.

    ಭಾರತದ ವಿವಿಧ ರಾಜ್ಯಗಳಲ್ಲಿ ಕಲ್ಲಿದ್ದಲಿನ ಕೊರತೆ ಉಂಟಾಗಿದ್ದು, ಕಲ್ಲಿದ್ದಲು ಸಾಗಾಟಕ್ಕೆ ಅನುಕೂಲವಾಗುವಂತೆ ಮೇ 24ರ ವರೆಗೆ ಸುಮಾರು 1,100 ರೈಲುಗಳು ರದ್ದಾಗಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ಕೊರೊನಾ ಆರ್ಭಟ – GRPA ಆ್ಯಕ್ಷನ್ ಪ್ಲಾನ್‌ನಂತೆ ರೆಡ್‌ಅಲರ್ಟ್ ಘೋಷಣೆ

    ಏಪ್ರಿಲ್ 19ರಂದು ದೇಶಾದ್ಯಂತ ಕಲ್ಲಿದ್ದಲು ಸಾಗಾಟಕ್ಕೆ ಅನುಕೂಲವಾಗುವಂತೆ ಸುಮಾರು 240 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸುವುದಾಗಿ ರೈಲ್ವೆ ಇಲಾಖೆ ಘೋಷಿಸಿತ್ತು. ಇಲ್ಲಿ ವರೆಗೆ ಎಕ್ಸ್‌ಪ್ರೆಸ್ ರೈಲುಗಳ ಸುಮಾರು 500 ಟ್ರಿಪ್‌ಗಳನ್ನು ಹಾಗೂ ಪ್ಯಾಸೆಂಜರ್ ರೈಲುಗಳ 580 ಟ್ರಿಪ್‌ಗಳನ್ನು ರದ್ದುಗೊಳಿಸಿಲಾಗಿದೆ.

    ಈ ತಿಂಗಳು ದೇಶಾದ್ಯಂತ ವಿದ್ಯುತ್ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದ್ದರಿಂದ ವಿವಿಧ ರಾಜ್ಯಗಳ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸಾಧ್ಯವಾದಷ್ಟು ಕಲ್ಲಿದ್ದಲು ಸಾಗಿಸಲು ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ಮತ್ತಷ್ಟು ಕಡಿಮೆ ಬೆಲೆಯಲ್ಲಿ ತೈಲ ನೀಡಿ – ರಷ್ಯಾ ಜೊತೆ ಭಾರತ ಚೌಕಾಶಿ

    ದೇಶದ ಕೆಲವು ಭಾಗಗಳಲ್ಲಿ ಕಲ್ಲಿದ್ದಲು ಗಣಿ ಕಾರ್ಮಿಕರು ಮುಷ್ಕರವನ್ನೂ ನಡೆಸುತ್ತಿದ್ದು, ಇದರಿಂದ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ದೇಶದಲ್ಲಿರುವ 173 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಪೈಕಿ 108 ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ತೀವ್ರವಾಗಿ ಕಡಿಮೆಯಾಗಿದೆ. ಇದರಿಂದ ಕೆಲವೇ ದಿನಗಳ ವರೆಗೆ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.

  • ವಿದ್ಯುತ್‌ ಸಮಸ್ಯೆ – ಕಲ್ಲಿದ್ದಲು ಸಾಗಾಟಕ್ಕೆ  650ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳ ಸಂಚಾರ ರದ್ದು

    ವಿದ್ಯುತ್‌ ಸಮಸ್ಯೆ – ಕಲ್ಲಿದ್ದಲು ಸಾಗಾಟಕ್ಕೆ 650ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳ ಸಂಚಾರ ರದ್ದು

    ನವದೆಹಲಿ: ವಿದ್ಯುತ್‌ ಬಿಕ್ಕಟ್ಟನ್ನು ಪರಿಹರಿಸಲು ಭಾರತೀಯ ರೈಲ್ವೇ ದೇಶಾದ್ಯಂತ 650 ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.

    ವಿದ್ಯುತ್‌ ಸಮಸ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಲ್ಲಿದ್ದಲು ಹೊತ್ತ ರೈಲುಗಳ ಸಾಗಾಟ ಸುಗಮವಾಗಲು ತಾತ್ಕಾಲಿಕವಾಗಿ ಕೆಲ ಪ್ರಯಾಣಿಕರ ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೇ ರದ್ದುಗೊಳಿಸಿದೆ. ರದ್ದುಗೊಳಿಸದೇ ಇರುವ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

    ದೇಶಾದ್ಯಂತ ವಿದ್ಯುತ್‌ ಬೇಡಿಕೆ ತೀವ್ರಗೊಂಡಿದ್ದು ಕಲ್ಲಿದ್ದಲು ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರೈಲ್ವೇಯು ಕಲ್ಲಿದ್ದಲು ಸಾಗಿಸುವ ರೇಕ್‌ಗಳು ವಿದ್ಯುತ್ ಸ್ಥಾವರಗಳನ್ನು ವೇಗವಾಗಿ ತಲುಪಲು ಕಳೆದ ಎರಡು ವಾರಗಳಲ್ಲಿ ಪ್ರತಿದಿನ ಸುಮಾರು 16 ಮೇಲ್/ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳನ್ನು ರದ್ದು ಮಾಡಿದೆ. ಇದನ್ನೂ ಓದಿ: ಮೀಸಲಾತಿ ಅಭ್ಯರ್ಥಿಗಳು ಅಧಿಕ ಅಂಕ ಗಳಿಸಿದ್ರೆ ಸಾಮಾನ್ಯ ವರ್ಗದಡಿ ಪರಿಗಣನೆ: ಸುಪ್ರೀಂ

    ರೈಲ್ವೇ ಸಚಿವಾಲಯವು ಮೇ 24 ರವರೆಗೆ ಸುಮಾರು 657 ಟ್ರಿಪ್‌ಗಳ ಮೇಲ್ ಮತ್ತು ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸುವಂತೆ ಸೂಚಿಸಿದೆ. ಪ್ರತಿದಿನ ಕಲ್ಲಿದ್ದಲು ರೇಕ್‌ಗಳ ಸರಾಸರಿ ಲೋಡಿಂಗ್ 400ಗಿಂತಲೂ ಹೆಚ್ಚಾಗಿದೆ. ಕಳೆದ ಐದು ವರ್ಷಗಳಲ್ಲೇ ಅತ್ಯಧಿಕ ಎಂದು ವರದಿಯಾಗಿದೆ.

    ರೈಲ್ವೆ ಸಚಿವಾಲಯ ಮತ್ತು ವಿದ್ಯುತ್ ಸಚಿವಾಲಯದ ಜಂಟಿ ಸಭೆಯಲ್ಲಿ, ಕಲ್ಲಿದ್ದಲು ಸಚಿವಾಲಯವು ಪ್ರಸ್ತುತ ವಿದ್ಯುತ್‌ ಬೇಡಿಕೆಯನ್ನು ಪೂರೈಸಲು ಪ್ರತಿದಿನ 422 ಕಲ್ಲಿದ್ದಲು ರೇಕ್‌ಗಳನ್ನು ಓಡಿಸುವಂತೆ ರೈಲ್ವೆಗೆ ಮನವಿ ಮಾಡಿದೆ. ಆದರೆ ರೈಲ್ವೇ ಪ್ರತಿದಿನ 415 ಕಲ್ಲಿದ್ದಲು ರೇಕ್‌ಗಳನ್ನು ನೀಡುವುದಾಗಿ ಒಪ್ಪಿಕೊಂಡಿತ್ತು. ಆದರೆ ಈಗ ಪ್ರತಿದಿನ 410 ರೇಕ್‌ಗಳು ಮಾತ್ರ ಸಂಚರಿಸುತ್ತಿದೆ.

    ಪ್ರತಿ ರೇಕ್ ಸುಮಾರು 3,500 ಟನ್ ಕಲ್ಲಿದ್ದಲನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ದೇಶದಲ್ಲಿನ ವಿದ್ಯುತ್ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಸುಧಾರಿಸಲು ಮುಂದಿನ ಎರಡು ತಿಂಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂದು ಮೂಲವನ್ನು ಉದ್ದೇಶಿಸಿ ಮಾಧ್ಯಮ ವರದಿ ಮಾಡಿದೆ.

    ಭಾರತದ ವಿದ್ಯುತ್ ಬೇಡಿಕೆಯ 70 ಪ್ರತಿಶತವನ್ನು ಕಲ್ಲಿದ್ದಲಿನ ಮೂಲಕ ಪೂರೈಸಲಾಗುತ್ತದೆ.

  • ವಿದ್ಯುತ್ ಬಿಕ್ಕಟ್ಟಿನಿಂದ ರೊಚ್ಚಿಗೆದ್ದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಾಕ್ಷಿ ಧೋನಿ

    ವಿದ್ಯುತ್ ಬಿಕ್ಕಟ್ಟಿನಿಂದ ರೊಚ್ಚಿಗೆದ್ದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಾಕ್ಷಿ ಧೋನಿ

    ಮುಂಬೈ: ಜಾರ್ಖಂಡ್‌ನಲ್ಲಿ ಆಗಾಗ ಎದುರಾಗುತ್ತಿರುವ ವಿದ್ಯುತ್ ಬಿಕ್ಕಟ್ಟಿನಿಂದ ಬೇಸತ್ತ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಪತ್ನಿ ಸಾಕ್ಷಿ ಧೋನಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಾಕ್ಷಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ತೆರಿಗೆ ಪಾವತಿದಾರಳಾಗಿ ಜಾರ್ಖಂಡ್‌ನಲ್ಲಿ ಇಷ್ಟು ವರ್ಷಗಳಿಂದ ವಿದ್ಯುತ್ ಬಿಕ್ಕಟ್ಟು ಏಕೆ ಇದೆ ಎಂದು ತಿಳಿಯಲು ಬಯಸುತ್ತೇನೆ. ನಾವು ವಿದ್ಯುತ್ ಉಳಿತಾಯ ಮಾಡುವಲ್ಲಿ ಪ್ರಜ್ಞಾಪೂರ್ವಕವಾಗಿ ನಮ್ಮ ಪಾಲಿನ ಕೆಲಸವನ್ನು ಮಾಡುತ್ತಿದ್ದೇವೆ ಎಂಬುದು ನಮಗೆ ತಿಳಿದಿದೆ ಎಂದು ಅವರು ಗರಂ ಆಗಿದ್ದಾರೆ. ಇದನ್ನೂ ಓದಿ: ಮೊದಲ ಪತ್ನಿಯಿಂದ ಒಪ್ಪಿಗೆ ಪಡೆದು 38 ವರ್ಷದ ಟೀಚರ್ ಜೊತೆ 66ರ ಅರುಣ್ ಲಾಲ್ ಮದುವೆ

    ರಾಜ್ಯದ ಬಹುತೇಕ ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚಿನ ತಾಪಮಾನ ಇರುವುದರಿಂದ ರಾಜ್ಯದ ಜನತೆ ಪದೇ ಪದೇ ಲೋಡ್ ಶೆಡ್ಡಿಂಗ್‍ನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಪಶ್ಚಿಮ ಸಿಂಗ್ಭುಮ್, ಕೊಡೆರ್ಮಾ ಮತ್ತು ಗಿರಿದಿಹ್ ಜಿಲ್ಲೆಗಳನ್ನು ಬಿಸಿಗಾಳಿ ಆವರಿಸಿದ್ದು, ಏಪ್ರಿಲ್ 28 ರ ವೇಳೆಗೆ ರಾಂಚಿ, ಬೊಕಾರೊ, ಪೂರ್ವ ಸಿಂಗ್ಭುಮ್, ಗರ್ವಾ, ಪಲಾಮು ಮತ್ತು ಛತ್ರಕ್ಕೆ ಹರಡುವ ಸಾಧ್ಯತೆಯಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಬಾತ್‌ರೂಮ್‌ ಗೋಡೆಯಲ್ಲಿ ಸಿಕ್ತು 60 ವರ್ಷದ ಮೆಕ್‍ಡೊನಾಲ್ಡ್ಸ್ ಊಟ!

    ಇಂದು ಮುಂಜಾನೆ, ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯ ಕೊರತೆಯಿಂದಾಗಿ ಹೆಚ್ಚುತ್ತಿರುವ ಇಂಧನ ಬಿಕ್ಕಟ್ಟಿನ ನಡುವೆ, ವಿದ್ಯುತ್ ಸಚಿವ ಆರ್ ಕೆ ಸಿಂಗ್ ಮತ್ತು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ವಿದ್ಯುತ್ ಬೇಡಿಕೆಯನ್ನು ನಿಭಾಯಿಸಲು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕಾರ್ಯತಂತ್ರಗಳನ್ನು ರೂಪಿಸಲು ಚರ್ಚೆ ನಡೆಸಿದರು.

  • ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಸುನಿಲ್ ಕುಮಾರ್

    ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಸುನಿಲ್ ಕುಮಾರ್

    ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಮಾಡುವ ಪರಿಸ್ಥಿತಿ ಇಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ವಿಧಾನ ಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ಕಾಂಗ್ರೆಸ್‍ನ ಹರೀಶ್ ಕುಮಾರ್ ವಿಷಯ ಪ್ರಸ್ತಾಪ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಸದ್ಯಕ್ಕೆ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕತ್ತಿಗೆ ಮಚ್ಚು ಹಿಡಿದು ಮನೆಯ ಸದಸ್ಯರ ಕೂಡಿ ಹಾಕಿ ಫಿಲ್ಮಿ ಸ್ಟೈಲ್‌ ದರೋಡೆ

    ಬೇಸಿಗೆ ಕಾಲ ಶುರುವಾಗಿದೆ. ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇದೆ. ಹೀಗಾಗಿ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆಗುತ್ತಿದೆ. ಸರ್ಕಾರ ಕೂಡಲೇ ಕಲ್ಲಿದ್ದಲಿನ ಕೊರತೆ ನೀಗಿಸಿಕೊಳ್ಳಬೇಕು ಅಂತ ಹರೀಶ್ ಕುಮಾರ್ ಒತ್ತಾಯ ಮಾಡಿದರು. ಇದಕ್ಕೆ ಉತ್ತರ ನೀಡಿದ ಸುನೀಲ್ ಕುಮಾರ್, ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧದ ಬ್ಯಾನರ್ ಹಾಕಿದವರು ಹೇಡಿಗಳು: ಖಾದರ್

    ರಾಜ್ಯದಲ್ಲಿ ಕಲ್ಲಿದ್ದಲ ಸಮಸ್ಯೆ ಇಲ್ಲ. ಪ್ರಾರಂಭದಲ್ಲಿ ಸ್ವಲ್ಪ ಕಲ್ಲಿದ್ದಲಿನ ಸಮಸ್ಯೆ ಆಗಿತ್ತು. ಆದರೆ ಕೂಡಲೇ ಕೇಂದ್ರ ಸಚಿವರ ಭೇಟಿಯಾಗಿ ರಾಜ್ಯದ ಪಾಲಿನ ಕಲ್ಲಿದ್ದಲು ಪಡೆಯಲು ಕ್ರಮವಹಿಸುವ ಕೆಲಸ ಆಗಿದೆ. ಸಿಎಂ ಕೂಡಾ ಉತ್ತಮವಾಗಿ ಈ ವಿಚಾರವಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಹೀಗಾಗಿ ನಮಗೆ ಸದ್ಯ ಕಲ್ಲಿದ್ದಲಿನ ಕೊರತೆ ಇಲ್ಲ. ಹೀಗಾಗಿ ಸದ್ಯಕ್ಕೆ ರಾಜ್ಯದಲ್ಲಿ ಕೋಡ್ ಶೆಡ್ಡಿಂಗ್ ಮಾಡುವ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ರೈತರಿಗೆ 7 ಗಂಟೆ ವಿದ್ಯುತ್ ಕೊಡಲಾಗುತ್ತಿದೆ. ಎಲ್ಲಾದರೂ ಸಮಸ್ಯೆ ಆಗಿದೆ ಎಂದು ತಿಳಿಸಿದರೆ ಅಲ್ಲಿ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಭರವಸೆ ನೀಡಿದರು.