Tag: Power Connection

  • ದಂಡ ಹಾಕಿದ್ದಕ್ಕೆ ಟ್ರಾಫಿಕ್ ಸಿಗ್ನಲ್, ಠಾಣೆಯ ವಿದ್ಯುತ್ ಸಂಪರ್ಕ ಕಟ್ ಮಾಡ್ದ

    ದಂಡ ಹಾಕಿದ್ದಕ್ಕೆ ಟ್ರಾಫಿಕ್ ಸಿಗ್ನಲ್, ಠಾಣೆಯ ವಿದ್ಯುತ್ ಸಂಪರ್ಕ ಕಟ್ ಮಾಡ್ದ

    ಹೈದರಾಬಾದ್: ದಂಡ ಹಾಕಿದ್ದಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ಟ್ರಾಫಿಕ್ ಸಿಗ್ನಲ್ ಮತ್ತು ಪೊಲೀಸ್ ಠಾಣೆಯ ವಿದ್ಯುತ್ ಕಡಿತಗೊಳಿಸಿದ್ದಾನೆ. ಆರೋಪಿ ವಿದ್ಯುತ್ ಇಲಾಖೆಯ ನೌಕರನಾಗಿದ್ದು, ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಎ.ರಮೇಶ್ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ವ್ಯಕ್ತಿ. ಮಲಕಾಜಗಿರಿಯ ಇಲಾಖೆಯಲ್ಲಿ ಈ ಘಟನೆ ನಡೆದಿದ್ದು, ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದರಿಂದ ಪೊಲೀಸರು ದಂಡ ಹಾಕಿದ್ದರು. ಕೆಲ ದಿನಗಳ ಹಿಂದೆ ರಮೇಶ್ ಬೈಕ್ ನ್ನು ಓರ್ವ ಅಪ್ರಾಪ್ತ ಓಡಿಸುತ್ತಿದ್ದನು. ಹಾಗಾಗಿ ಬೈಕ್ ಹಿಡಿದ ಪೊಲೀಸರು ರಮೇಶ್ ಮನವಿ ಮಾಡಿಕೊಂಡರು ನಿಯಮದ ಪ್ರಕಾರ ದಂಡ ವಿಧಿಸಿದ್ದರು.

    ದಂಡ ಹಾಕಿದ್ದಕ್ಕೆ ಕೋಪಗೊಂಡ ರಮೇಶ್ ಮೊದಲಿಗೆ ಟ್ರಾಫಿಕ್ ಸಿಗ್ನಲ್ ಸಂಪರ್ಕ, ಜಿಡಿಮೆಟಲಾ ಸ್ಟೇಶನ್ ಮತ್ತು ಎಲ್ ಆ್ಯಂಡ್ ಓ ಪೊಲೀಸ್ ಸ್ಟೇಶನ್ ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾನೆ. ಇದರಿಂದ ಎರಡು ಗಂಟೆ ಮೂರು ಸ್ಥಳಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯವಾಗಿತ್ತು. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

  • ಮುಂಬೈ ನಗರದಲ್ಲಿ ವಿದ್ಯುತ್ ವ್ಯತ್ಯಯ- ಅರ್ಧದಲ್ಲೇ ನಿಂತ ಲೋಕಲ್ ಟ್ರೈನ್‍ಗಳು

    ಮುಂಬೈ ನಗರದಲ್ಲಿ ವಿದ್ಯುತ್ ವ್ಯತ್ಯಯ- ಅರ್ಧದಲ್ಲೇ ನಿಂತ ಲೋಕಲ್ ಟ್ರೈನ್‍ಗಳು

    ಮುಂಬೈ: ಮಹಾರಾಷ್ಟ್ರ ರಾಜಧಾನಿ, ವಾಣಿಜ್ಯ ನಗರಿ ಮುಂಬೈನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಲೋಕಲ್ ಟ್ರೈನ್ ಗಳು ಸ್ಥಗಿತಗೊಂಡಿವೆ. ಜನರು ರೈಲಿನಿಂದ ಹೊರ ಬಂದು ಟ್ರ್ಯಾಕ್ ನಲ್ಲಿ ನಡೆದುಕೊಂಡು ಹೋಗಿ ಮುಂದಿನ ನಿಲ್ದಾಣ ತಲುಪಿದ್ದಾರೆ.

    ನಗರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗ್ರಿಡ್ ಫೇಲ್ ಆಗಿದ್ದರಿಂದ ಈ ಸಮಸ್ಯೆಯುಂಟಾಗಿದೆ. ದಕ್ಷಿಣ, ಕೇಂದ್ರ ಮತ್ತು ಉತ್ತರ ಮುಂಬೈನಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಂಡಿರುವ ಬಗ್ಗೆ ಜನರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಬಿಎಂಸಿ(ಬೃಹನ್ ಮುಂಬೈ ಕಾರ್ಪೋರೇಷನ್) ಮತ್ತು ಬೆಸ್ಟ್ (ಬೃಹನ್ ಮುಂಬೈ ಎಲೆಕ್ಟ್ರಾನಿಕ್ ಸಪ್ಲೈ ಆ್ಯಂಡ್ ಟ್ರಾನ್ಸಪೋರ್ಟ್)ಗೆ ಟ್ಯಾಗ್ ಮಾಡುವ ಮೂಲಕ ದೂರು ಸಲ್ಲಿಸುತ್ತಿದ್ದಾರೆ. ಮುಂಬೈ ಹೊರವಲಯ ಥಾಣೆಯವರೆಗೂ ವಿದ್ಯುತ್ ಸಮಸ್ಯೆಯುಂಟಾಗಿರುವ ಬಗ್ಗೆ ವರದಿಯಾಗಿದೆ.

    ವಿದ್ಯುತ್ ಸಂಪರ್ಕ ಕಡಿತ ಹಿನ್ನೆಲೆ ಪ್ರತಿಕ್ರಿಯಿಸಿರುವ ಬೆಸ್ಟ್, ಟಾಟಾ ಇನ್‍ಕಮ್ಮಿಂಗ್ ಎಲೆಕ್ಟ್ರಿಕ್ ಸರಬರಾಜಿನಲ್ಲಿ ಅಡಚಣೆಯುಂಟಾಗಿದೆ. ಈ ಹಿನ್ನೆಲೆ ನಗರದ ಬಹುತೇಕ ಭಾಗದಲ್ಲಿ ವಿದ್ಯುತ್ ಕಡಿತಗೊಂಡಿದೆ. ಸೇವೆಯಲ್ಲಿ ಉಂಟಾದ ತೊಂದರೆಗೆ ವಿಷಾದಿಸುತ್ತೇವೆ ಎಂದು ಟ್ವೀಟ್ ಮಾಡಿದೆ. ಆದ್ರೆ ಕಡಿತಗೊಂಡಿರುವ ವಿದ್ಯುತ್ ಸಂಪರ್ಕ ಯಾವಾಗ ಸರಿಯಾಗುತ್ತೆ ಎಂಬುದರ ಬಗ್ಗೆ ಬೆಸ್ಟ್ ಸ್ಪಷ್ಟನೆ ನೀಡಿಲ್ಲ.

    ಪವರ್ ಗ್ರಿಡ್ ಫೇಲ್ ಹಿನ್ನೆಲೆ ಪಶ್ಚಿಮ ಭಾಗದ ಲೋಕಲ್ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಚರ್ಚ್ ಗೇಟ್ ನಿಂದ ವಸೈವರೆಗೂ ರೈಲು ಸೇವೆ ಸ್ಥಗಿತವಾಗಿದೆ. ಇತ್ತ ವಸೈನಿಂದ ಬೋರಿವಲಿ ನಡುವೆ ರೈಲು ಸಂಚಾರವಿದೆ.